Tag: ಜೆನಿಲಿಯಾ

  • ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಜೆನಿಲಿಯಾ ದಂಪತಿ

    ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಜೆನಿಲಿಯಾ ದಂಪತಿ

    ಬಾಲಿವುಡ್ ನಟಿ ಜೆನಿಲಿಯಾ (Genelia) ಮತ್ತು ರಿತೇಶ್ (Riteish Deshmukh) ಸಿನಿಮಾ ಬದಲು ಸಮಾಜಮುಖಿ ಕಾರ್ಯದ ಮೂಲಕ ಸದ್ದು ಮಾಡ್ತಿದ್ದಾರೆ. ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಈ ದಂಪತಿ ಘೋಷಿಸಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಮದುವೆ ಬಗ್ಗೆ ಸೂಚನೆ ಕೊಟ್ಟ ದೊಡ್ಡಮ್ಮ

    ಜುಲೈಯಲ್ಲಿ ನಡೆಯುತ್ತಿರುವ ಅಂಗಾಂಗ ದಾನದ ತಿಂಗಳಲ್ಲಿ ತಮ್ಮ ಅಂಗಾಂಗ ದಾನ ಮಾಡಿದ ಬಾಲಿವುಡ್ ದಂಪತಿ ರಿತೇಶ್, ಜೆನಿಲಿಯಾಗೆ ಧನ್ಯವಾದಗಳು. ಇದು ಇತರರನ್ನು ಸಹ ಪ್ರೇರಣೆ ನೀಡುತ್ತದೆ ಎಂದು ಈ ಜೋಡಿಯ ವಿಡಿಯೋ ಶೇರ್ ಮಾಡಿ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

    ಇನ್ನೂ ರಿತೇಶ್ ನಟನೆಯ ‘ಕಾಕುಡ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಜೆನಿಲಿಯಾ ಇದೀಗ ಕನ್ನಡದ ‘ಜ್ಯೂನಿಯರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶ್ರೀಲೀಲಾ ನಟನೆಯ ಚಿತ್ರವಾಗಿದೆ.

  • ಮತ ಚಲಾಯಿಸಿದ ರಿತೇಶ್ ದೇಶ್‌ಮುಖ್, ಜೆನಿಲಿಯಾ ದಂಪತಿ

    ಮತ ಚಲಾಯಿಸಿದ ರಿತೇಶ್ ದೇಶ್‌ಮುಖ್, ಜೆನಿಲಿಯಾ ದಂಪತಿ

    ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ (Riteish Deshmukh) ಮತ್ತು ಜೆನಿಲಿಯಾ (Genelia) ದಂಪತಿ ಇಂದು (ಮೇ.7) ಒಟ್ಟಾಗಿ ವೋಟ್ ಮಾಡಿದ್ದಾರೆ. ವೋಟ್ ಮಾಡಿರುವ ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಬರುವ ಪ್ಲ್ಯಾನ್ ಇದೆ ಎಂದ ಸೋನು ಗೌಡ

    ಮಹಾರಾಷ್ಟ್ರದ ಲಾತೂರ್ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ನಗು ನಗುತ್ತಾ ರಿತೇಶ್ ಮತ್ತು ಜೆನಿಲಿಯಾ ವೋಟ್ ಮಾಡಿದ್ದಾರೆ. ಇವರ ರಿತೇಶ್ ತಾಯಿ ಕೂಡ ಮತದಾನ ಮಾಡಿದ್ದಾರೆ. ನಿಮಗಾಗಿ ವೋಟ್ ಮಾಡಿ, ಭವಿಷ್ಯಕ್ಕಾಗಿ ಮತ್ತು ದೇಶಕ್ಕಾಗಿ ಮತದಾನ ಮಾಡಿ ಎಂದು ರಿತೇಶ್ ದಂಪತಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ಅಂದಹಾಗೆ, ಕನ್ನಡದ ‘ಸತ್ಯ ಇಸ್ ಇನ್ ಲವ್’ ಚಿತ್ರದ ನಟಿ ಜೆನಿಲಿಯಾ ಸದ್ಯ ಜ್ಯೂನಿಯರ್, ‘ಸಿತಾರೇ ಜಮೀನ್‌ಪರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಹೌಸ್‌ಫುಲ್ 5’ ಸಿನಿಮಾದಲ್ಲಿ ರಿತೇಶ್ ಬ್ಯುಸಿಯಾಗಿದ್ದಾರೆ.

  • ಸಕ್ಸಸ್‌ಗಾಗಿ ಮತ್ತೆ ಮರಾಠಿ ಸಿನಿಮಾಗಳತ್ತ ರಿತೇಶ್ ದೇಶ್‌ಮುಖ್

    ಸಕ್ಸಸ್‌ಗಾಗಿ ಮತ್ತೆ ಮರಾಠಿ ಸಿನಿಮಾಗಳತ್ತ ರಿತೇಶ್ ದೇಶ್‌ಮುಖ್

    ಬಾಲಿವುಡ್ ನಟ ರಿತೇಶ್ ದೇಶ್‌ಮುಖ್‌ಗೆ (Riteish Deshmukh) ಮರಾಠಿ ಚಿತ್ರರಂಗ ಕೈಹಿಡಿದಿದೆ. ವೇದ್ ಚಿತ್ರದ ಮೂಲಕ ಸಕ್ಸಸ್ ರುಚಿ ಕಂಡಿರುವ ನಟ ಈಗ ಮತ್ತೊಮ್ಮೆ ಮರಾಠಿ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ತೆಲುಗಿನ ಸಿನಿಮಾವೊಂದನ್ನು ಮರಾಠಿಗೆ ರಿಮೇಕ್ ಮಾಡಲು ನಟ ಹೊರಟಿದ್ದಾರೆ.

    ಹೀರೋ ಮತ್ತು ವಿಲನ್ ಆಗಿ ರಿತೇಶ್ ಸೈ ಎನಿಸಿಕೊಂಡಿದ್ದಾರೆ. ಆದರೆ ಈಗೀಗ ಬಾಲಿವುಡ್‌ನಲ್ಲಿ ಬೇಡಿಕೆ ಕಮ್ಮಿಯಾಗಿದೆ. ಬಾಲಿವುಡ್ ಚಿತ್ರರಂಗಕ್ಕೆ ಸೌತ್ ಸಿನಿಮಾಗಳು ಠಕ್ಕರ್ ಕೊಟ್ಟು ನಿಲ್ಲುತ್ತಿವೆ. ಹಾಗಾಗಿಯೇ ರಿತೇಶ್ ಮರಾಠಿ ಸಿನಿಮಾರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ.

    2022ರಲ್ಲಿ ರಿತೇಶ್- ಜೆನಿಲಿಯಾ (Genelia) ನಟನೆಯ ‘ವೇದ್’ ಚಿತ್ರ ಮರಾಠಿಯಲ್ಲಿ ಸಕ್ಸಸ್ ಕಂಡಿತ್ತು. ತೆಲುಗಿನ ನಾಗಚೈತನ್ಯ-ಸಮಂತಾ ನಟನೆಯ ‘ಮಜಿಲಿ’ ಚಿತ್ರವನ್ನೇ ರಿತೇಶ್ ಮರಾಠಿಗೆ ರಿಮೇಕ್ ಮಾಡಿದ್ದರು. ಚಿತ್ರಕತೆ, ಸಂಭಾಷನೆ, ನಿರ್ದೇಶನ, ನಿರ್ಮಾಣ ಎಲ್ಲದರ ಹೊಣೆಯನ್ನು ರಿತೇಶ್ ನಿಭಾಯಿಸಿದ್ದರು. ರಿಯಲ್ ಕಪಲ್ ರೀಲ್‌ನಲ್ಲಿಯೂ ಕ್ಲಿಕ್ ಆಗಿದ್ದರು. ಈಗ ಮತ್ತೊಮ್ಮೆ ತೆಲುಗಿನ ಸಿನಿಮಾವೊಂದನ್ನು ಮರಾಠಿಗೆ ತರಲು ನಟ ಯೋಚಿಸಿದ್ದಾರೆ.

    ನಾನಿ ನಟಿಸಿದ್ದ ‘ಹಾಯ್ ನಾನ್ನ’ ಚಿತ್ರವನ್ನು ರಿಮೇಕ್ ಮಾಡಲು ರಿತೇಶ್ ಮಾಡಲು ಮುಂದಾಗಿದ್ದಾರಂತೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಚಿತ್ರದಲ್ಲಿ ಪತಿ ಜೊತೆ ಜೆನಿಲಿಯಾ ಇರುತ್ತಾರಾ?  ಸದ್ಯದಲ್ಲೇ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ. ಇದನ್ನೂ ಓದಿ:ಮತ್ತೆ ಒಂದಾಯಿತು ಧನುಷ್ ಮತ್ತು ಪ್ರಕಾಶ್ ರೈ ಜೋಡಿ

    ರಿತೇಶ್‌ ಅವರಂತೆಯೇ ಪತ್ನಿ ಜೆನಿಲಿಯಾ ಕೂಡ ಬೇರೇ ಭಾಷೆಗಳಲ್ಲಿ ನಟಿಸುತ್ತಾ ಇದ್ದಾರೆ. ಇದೀಗ ಕನ್ನಡದ ಸಿನಿಮಾ ‘ಜ್ಯೂನಿಯರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಮತ್ತು ಶ್ರೀಲೀಲಾ (Sreeleela) ನಟನೆಯ ಸಿನಿಮಾದಲ್ಲಿ ಜೆನಿಲಿಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಕೂಡ ‘ಸತ್ಯ ಇನ್‌ ಲವ್‌’ ಚಿತ್ರದಲ್ಲಿ ಶಿವಣ್ಣ ಜೊತೆ ಜೆನಿಲಿಯಾ ನಟಿಸಿದ್ದಾರೆ.

  • 3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಜೆನಿಲಿಯಾ? ವೈರಲ್‌‌ ಆಯ್ತು ಫೋಟೋ

    3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಜೆನಿಲಿಯಾ? ವೈರಲ್‌‌ ಆಯ್ತು ಫೋಟೋ

    ಕನ್ನಡದ ‘ಸತ್ಯ ಇನ್ ಲವ್’ (Sathya In Love) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಜನಪ್ರಿಯ ನಟಿ ಜೆನಿಲಿಯಾ (Genelia D’souza)   ಇದೀಗ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಡಲು ರೆಡಿಯಾಗಿದ್ದಾರಾ? 3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವದಂತಿ ಹರಿದಾಡುತ್ತಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ಮಾಹಿತಿ.

    ಇತ್ತೀಚಿಗೆ ಸಮಾರಂಭವೊಂದರಲ್ಲಿ ಪತಿ ರಿತೇಶ್ ಜೊತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಆಗ ಅವರು ತಮ್ಮ ಹೊಟ್ಟೆಯ ಭಾಗವನ್ನು ಹಿಡಿದಿದ್ದಾರೆ. ಇದರಲ್ಲಿ ಅವರು ಪ್ರೆಗ್ನೆಂಟ್ ಆಗಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:Gadar 2 ಸಕ್ಸಸ್, ರಾಜಕೀಯಕ್ಕೆ ವಿದಾಯ ಹೇಳ್ತಾರಾ ಸನ್ನಿ ಡಿಯೋಲ್?

     

    View this post on Instagram

     

    A post shared by Viral Bhayani (@viralbhayani)

    ಬೇಬಿ ಬಂಪ್ ನೋಡಿದ ಅಭಿಮಾನಿಗಳು, ಈ ಜೋಡಿ 3ನೇ ಮಗುವನ್ನು ಸ್ವಾಗತಿಸಲು ರೆಡಿಯಾದ್ರಾ ಎಂಬ ವಿಚಾರ ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಎಂಬುದರ ಬಗ್ಗೆ ಈ ದಂಪತಿ ಇನ್ನೂ ಸ್ಟಷ್ಟನೆ ನೀಡಿಲ್ಲ.

    ರಿತೇಶ್ (Rithesh Deshmukh) – ಜೆನಿಲಿಯಾ ಜೋಡಿ 2012ರಲ್ಲಿ ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟರು. ಈ ದಂಪತಿಗೆ ಇದೀಗ ಇಬ್ಬರು ಮಕ್ಕಳಿದ್ದಾರೆ. ಈ ಸ್ಟಾರ್ ಜೋಡಿ, ಬಾಲಿವುಡ್ ಸಿನಿಮಾಗಳ ಜೊತೆ ಉದ್ಯಮ ಕ್ಷೇತ್ರದಲ್ಲೂ ಆ್ಯಕ್ಟೀವ್ ಆಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ

    ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ

    ಬಾಲಿವುಡ್ ನಟಿ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾಗೆ ಕಂಬ್ಯಾಕ್ ಆಗಿದ್ದಾರೆ. ಬಹುಭಾಷೆಗಳಲ್ಲಿ ಜೆನಿಲಿಯಾ ಮಿಂಚುತ್ತಿದ್ದಾರೆ. ಸದ್ಯ ಬೆಂಗಳೂರಿಗೆ ಬಂದಿಳಿದಿರುವ ನಟಿ ಜೆನಿಲಿಯಾ, ನಟ ಶಿವಣ್ಣ ಮನೆಗೆ ಜೆನಿಲಿಯಾ ಮತ್ತು ರಿತೇಶ್ ಭೇಟಿ ನೀಡಿದ್ದಾರೆ.

    ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡ ನಟಿ ಜೆನಿಲಿಯಾ, 2018ರಲ್ಲಿ `ಸತ್ಯ ಇನ್ ಲವ್’ ಚಿತ್ರದ ಮೂಲಕ ಶಿವಣ್ಣನಿಗೆ ನಾಯಕಿಯಾಗಿ ನಟಿಸಿದ್ದರು. ಬಳಿಕ ಮದುವೆ, ಸಂಸಾರ ಅಂತಾ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಜೆನಿಲಿಯಾ ನಟಿಸುತ್ತಿದ್ದಾರೆ. ಇದೀಗ ಜೆನಿಲಿಯಾ ದಂಪತಿ ಶಿವಣ್ಣನ ಮನೆಗೆ ಭೇಟಿ ನೀಡಿದ್ದಾರೆ.

    `ಸತ್ಯ ಇನ್ ಲವ್’ ಚಿತ್ರದಲ್ಲಿ ಶಿವಣ್ಣನ ಜೋಡಿಯಾಗಿ ಜೆನಿಲಿಯಾ ಮಿಂಚಿದ್ದರು. ಇದೀಗ ಕಿರೀಟಿ ಮತ್ತು ಶ್ರೀಲೀಲಾ ಅಭಿನಯದ ಹೊಸ ಚಿತ್ರದಲ್ಲಿ ಜೆನಿಲಿಯಾ ನಟಿಸುತ್ತಿದ್ದಾರೆ. ಸದ್ಯ ಶಿವಣ್ಣ ಮತ್ತು ಗೀತಾ ಅವರನ್ನ ಜೆನಿಲಿಯಾ ಭೇಟಿ ಮಾಡಿದ್ದಾರೆ. ಈ ವೇಳೆ ನಟ ರಿತೇಶ್ ದೇಶ್‌ಮುಖ್ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೆ ಹಸೆಮಣೆ ಏರಿದ್ರಾ ʻಗ್ರಾಮಾಯಣʼ ಚಿತ್ರದ ನಾಯಕಿ ಅಮೃತಾ ಅಯ್ಯರ್

    ಈ ವೇಳೆ ಕಿರೀಟಿ ಮತ್ತು ಜೆನಿಲಿಯಾ ಹೊಸ ಸಿನಿಮಾಗೆ ಶಿವರಾಜ್‌ಕುಮಾರ್ ಶುಭಹಾರೈಸಿದ್ದಾರೆ. ಈ ಚಿತ್ರದ ಶೂಟಿಂಗ್‌ ಕೂಡ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಮಗನ ಸಿನಿಮಾದಲ್ಲಿ ಜೆನಿಲಿಯಾ ಅತ್ತಿಗೆ ಪಾತ್ರ ಮಾಡ್ತಿಲ್ಲವಂತೆ

    ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಮಗನ ಸಿನಿಮಾದಲ್ಲಿ ಜೆನಿಲಿಯಾ ಅತ್ತಿಗೆ ಪಾತ್ರ ಮಾಡ್ತಿಲ್ಲವಂತೆ

    ಮಾಜಿಮಂತ್ರಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಗ್ರ್ಯಾಂಡ್ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಕಿರೀಟಿ ನಟನೆಯ ಸಿನಿಮಾ ಎರಡು ಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈ ಸಿನಿಮಾಗಾಗಿ ಅವರು ಪಕ್ಕಾ ತಯಾರಿ ಮಾಡಿಕೊಂಡೆ ಎಂಟ್ರಿ ಕೊಟ್ಟಿದ್ದಾರೆ. ಪಾತ್ರಗಳ ಆಯ್ಕೆಯಲ್ಲೂ ಚಿತ್ರತಂಡ ಕಾಳಜಿವಹಿಸಿದೆ. ಕಿರೀಟಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಮತ್ತೊಂದು ಮಹತ್ವದ ಪಾತ್ರದಲ್ಲಿ ಬಹುಭಾಷಾ ನಟಿ ಜೆನಿಲಿಯಾ ಡಿಸೋಜಾ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರದ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆದಿತ್ತು.

    ಮದುವೆಯ ನಂತರ ಸಿನಿಮಾ ರಂಗದಿಂದ ದೂರವಿದ್ದ ಜೆನಿಲಿಯಾ, ಇದೀಗ ಹಲವು ವರ್ಷಗಳ ನಂತರ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅವರು ಯಾವ ರೀತಿಯ ಪಾತ್ರವನ್ನು ಒಪ್ಪಿಕೊಂಡಿರಬಹುದು ಎಂಬ ಕುತೂಹಲವಿತ್ತು. ಸಿನಿಮಾ ಮುಹೂರ್ತದ ದಿನ ಅವರು ನಾಯಕನ ಅತ್ತಿಗೆ ಪಾತ್ರ ಮಾಡಲಿದ್ದಾರೆ ಎನ್ನುವ ಗಾಸಿಪ್ ಹರಡಿತ್ತು. ಆದರೆ, ಜೆನಿಲಿಯಾ ಈ ಸಿನಿಮಾದಲ್ಲಿ ಅತ್ತಿಗೆಯ ಪಾತ್ರ ಮಾಡುತ್ತಿಲ್ಲವಂತೆ. ಇದನ್ನೂ ಓದಿ:ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಜೆನಿಲಿಯಾ ಕಂಪೆನಿಯೊಂದರ ಸಿಇಓ ಪಾತ್ರವನ್ನು ನಿಭಾಯಿಸಲಿದ್ದಾರಂತೆ. ಅದೊಂದು ಮಹತ್ವದ ಪಾತ್ರವೂ ಆಗಿದೆಯಂತೆ. ಹಾಗಾಗಿಯೇ ಅವರು ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರದ ನಿರ್ದೇಶಕರು. ಈ ಹಿಂದೆ ಇವರು ಪುನೀತ್ ರಾಜ್ ಕುಮಾರ್ ಬ್ಯಾನರ್ ನಲ್ಲಿ ಮಾಯಾಬಜಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಇವರ ಎರಡನೇ ಸಿನಿಮಾ.

    Live Tv

  • ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಮಾಜಿ ಸಚಿನ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಅಂಗಳಕ್ಕೆ ಬಂದಾಗಿದೆ. ಇನ್ನೇನು ಸದ್ಯದಲ್ಲೇ ಸಿನಿಮಾದ ಮುಹೂರ್ತ ಕೂಡ ನಡೆಯುತ್ತಿದೆ. ಈ ಮಧ್ಯ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟಿಸಲಿದ್ದಾರೆ ಎನ್ನುವ ಸುದ್ದಿ ಚಿತ್ರತಂಡದಿಂದಲೇ ಬಂದಿದೆ. ಇದನ್ನೂ ಓದಿ: ಮೈಕಲ್ ಅಂಡ್ ಮಾರ್ಕೊನಿ ಸಿನಿಮಾದಲ್ಲಿ ಪ್ರಶಾಂತ್ ಸಿದ್ದಿ ವಿಶೇಷ ಪಾತ್ರ

    ತಮಿಳು ಸಿನಿಮಾ ರಂಗದ ಫೇಮಸ್ ನಟಿ ಜೆನಿಲಿಯಾ ಮತ್ತು ಕನ್ನಡದ ಹುಡುಗಿ ಶ್ರೀಲೀಲಾ ಇಬ್ಬರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದರೆ, ಜೆನಿಲಿಯಾ ಪಾತ್ರ ಸದ್ಯಕ್ಕೆ ಸಸ್ಪೆನ್ಸ್. ಇದನ್ನೂ ಓದಿ: ಹಾಲಿವುಡ್ ಗೆ ಹಾರಿದ ಸುದೀಪ್ ನಟನೆಯ ವಿಕ್ರಾಂತ್ ರೋಣ

    ಶಿವರಾಜ್ ಕುಮಾರ್ ನಟನೆಯ ಸತ್ಯ ಇನ್ ಲವ್ ನಂತರ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾವನ್ನು ಮಾಡಿರಲಿಲ್ಲ. ನಟ ರಿತೇಶ್ ದೇಶಮುಖ ಅವರನ್ನು ಮದುವೆಯಾದ ನಂತರ ಅವರು ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಇದೀಗ ಕಿರೀಟಿ ನಟನೆಯ ಚೊಚ್ಚಲು ಸಿನಿಮಾದ ಮೂಲಕ ಮತ್ತೆ ಚಿತ್ರೋದ್ಯಮಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಇದನ್ನೂ ಓದಿ: ಸ್ಸಾರಿ… ಥಿಯೇಟರ್ ಗೆ ಬರ್ತಿಲ್ಲ ತಮಿಳಿನ ಧನುಷ್ ನಟನೆಯ ಮಾರನ್ ಸಿನಿಮಾ

    ಈ ಸಿನಿಮಾವನ್ನು ಟಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ.  ಇನ್ನೂ ಹೆಸರಿಡದ ಈ ಸಿನಿಮಾವನ್ನು ಭಾರೀ ಬಜೆಟ್ ನಲ್ಲಿ ತಯಾರಿಸುತ್ತಿದ್ದು, ಹೆಸರಾಂತರ ತಾರಾಬಳಗವ ಇರಲಿದೆ. ಇದನ್ನೂ ಓದಿ:  ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಸಾಯಿ ಕೊರಪಾಠಿ ನಿರ್ಮಿಸಲಿರುವ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದು, ಬಾಹುಬಲಿ ಸಿನಿಮಾದ ಕಣ್ಣು ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವನ್ನು ವಹಿಸಲಿದ್ದಾರೆ. ರವೀಂದರ್ ಆರ್ಟ್ ಡೈರೆಕ್ಟರ್ ಆಗಿ, ಭಾರತದ ಟಾಪ್ ಸ್ಟಂಟ್ ನಿರ್ದೇಶಕ ಪೀಟರ್ ಹೆನ್ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.

  • ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಪತ್ನಿ ಎದುರೆ ಫ್ಲರ್ಟ್ ಮಾಡಿದ ರಿತೇಶ್ – ಮುಂದೆ ಜೆನಿಲಿಯಾ ಮಾಡಿದ್ದೇನು ಗೊತ್ತಾ?

    ಮುಂಬೈ: ಬಾಲಿವುಡ್‍ನ ಮುದ್ದಾದ ಜೋಡಿಗಳಲ್ಲಿ ರಿತೇಶ್ ದೇಶ್‍ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಜೋಡಿ ಕೂಡ ಒಂದು. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಆಗಾಗ ಹಾಸ್ಯದ ವೀಡಿಯೋ ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹಲವು ದಿನಗಳು ಹಿಂದೆ ಸಮಾರಂಭವೊಂದಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ ರಿತೇಶ್, ನಟಿಯೊಬ್ಬರ ಜೊತೆ ಜೆನಿಲಿಯಾ ಮುಂದೆಯೇ ಅತೀ ಸಲುಗೆಯಿಂದ ನಡೆದುಕೊಂಡಿದ್ದರು. ಇದನ್ನು ಕಂಡು ಜೆನಿಲಿಯಾ ರಿತೇಶ್ ಮೇಲೆ ಆಕ್ರೋಶಗೊಂಡಿದ್ದರು. ಇದೀಗ ಈ ವೀಡಿಯೋವನ್ನು ಜೆನಿಲಿಯಾ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು, ಮುಂದೇನಾಯ್ತು ಎಂದು ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿದ್ದಾರೆ.

    ವೀಡಿಯೋದಲ್ಲಿ ರಿತೇಶ್ ದೇಶ್‍ಮುಖ್ ಪ್ರೀತಿ ಜಿಂಟಾ ಜೊತೆ ಮಾತನಾಡುತ್ತಿರುತ್ತಾರೆ. ಈ ವೇಳೆ ಜೆನಿಲಿಯಾ ಸಮಾಧಾನದಿಂದ ಕೇಳುತ್ತಿರುತ್ತಾರೆ. ನಂತರ ರಿತೇಶ್ ಪ್ರೀತಿ ಜಿಂಟಾರನ್ನು ತಬ್ಬಿಕೊಂಡು, ಕೈಗೆ ಕಿಸ್ ಮಾಡುತ್ತಾರೆ. ಇದನ್ನು ನೋಡಿ ಜೆನಿಲಿಯಾ ಗರಂ ಆಗುತ್ತಾರೆ. ಬಳಿಕ ಮನೆಗೆ ಬಂದ ಮೇಲೆ ರಿತೇಶ್‍ರನ್ನು ಜೆನಿಲಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ರಿತೇಶ್ ಸಾಕಪ್ಪಾ ಸಾಕು ಎಂದು ಕೈ ಮುಗಿದು ಕೇಳಿಕೊಳ್ಳುವಷ್ಟು ಪಂಚ್ ನೀಡಿದ್ದಾರೆ. ಈ ಘಟನೆಯು 2019ರ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ನಡೆದಿದೆ. ವೀಡಿಯೋದಲ್ಲಿ ಜೆನಿಲಿಯಾ ಮುಖಭಾವನೆ ಎಲ್ಲರ ಗಮನ ಸೆಳೆದಿದೆ.

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೇರಿ ಕಸಮ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. 2012ರ ಫೆಬ್ರವರಿ 3ರಂದು ಹಿಂದೂ ಸಂಪ್ರಾದಾಯ ಪ್ರಕಾರ ಸಪ್ತಪದಿ ತುಳಿದರು.

     

    View this post on Instagram

     

    A post shared by Genelia Deshmukh (@geneliad)

  • ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಮುಂಬೈ: ಸತ್ಯ ಇನ್ ಲವ್ ಚಿತ್ರದ ನಾಯಕಿ, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ರಿತೇಶ್ ದೇಶ್ ಮುಖ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋ ಹಂಚಿಕೊಂಡಿರುವ ರಿತೇಶ್ ಮ್ಯಾರೇಜ್ ಅನಿವರ್ಸರಿ ಸೆಲೆಬ್ರೆಷನ್‍ನ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸ್ವತಃ ಜೆನಿಲಿಯಾ ಖುದ್ದಾಗಿ ಮಾಡಿದ್ದಾರೆ. ನಮ್ಮ ಅನಿವರ್ಸರಿ ಸೆಲೆಬ್ರೆಷನ್‍ಗೆ ದೆಹಲಿಯಿಂದ ವಿಕ್ರಮ್‍ಜಿತ್ ರಾಯ್ ಬಾಣಸಿಗನಾಗಿ ಆಗಮಿಸಿದ್ದರು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Riteish Deshmukh (@riteishd)

    ಇದೇ ರೀತಿ ಜೆನಿಲಿಯಾ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ನನ್ನ ಜೀವನದ ಅದ್ಭುತ ಕ್ಷಣಗಳನ್ನು ರಿತೇಶ್ ಜೊತೆ ಆಚರಿಸುತ್ತಿದ್ದೇನೆ. ನಮ್ಮ ಈ ಸುಮಧುರವಾದ ದಿನದಂದು ದೆಹಲಿಯಿಂದ ಆಗಮಿಸಿ ನಾವು ಕೇಳಿದ ಎಲ್ಲಾ ವೆಜಿಟೇರಿಯನ್ ಮೆನು ಹಾಗೂ ಸ್ವೀಟ್‍ಗಳನ್ನು ಮಾಡಿಕೊಟ್ಟಿದಕ್ಕೆ ವಿಕ್ರಮ್‍ಜಿತ್ ರಾಯ್‍ರಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Genelia Deshmukh (@geneliad)

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೆರಿ ಕಸಮ್ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದರು. 2012 ರಂದು ಇಬ್ಬರು ವಿವಾಹವಾದರು. ಇದೀಗ ಈ ಜೋಡಿಗೆ ರಿಯಾನ್ ಹಾಗೂ ರಹೈಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.