Tag: ಜೆಡಿಸ್

  • 40.94 ಕೋಟಿ ರೂ. ಆಸ್ತಿಗೆ ಒಡೆಯ ಹಾಸನದ ಮೈತ್ರಿ ಅಭ್ಯರ್ಥಿ

    40.94 ಕೋಟಿ ರೂ. ಆಸ್ತಿಗೆ ಒಡೆಯ ಹಾಸನದ ಮೈತ್ರಿ ಅಭ್ಯರ್ಥಿ

    ಹಾಸನ: ಲೋಕಸಭಾ ಚುನಾವಣೆಗೆ (Lok Sabha Election) ಅಖಾಡ ರಂಗೇರಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಆರಂಭಿಸಿದ್ದಾರೆ. ಅದೇ ರೀತಿ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದು, ಒಟ್ಟು 40.94 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿರುವುದಾಗಿ ನಾಮಪತ್ರದ ಅಫಿಡವಿಟ್‌ನಲ್ಲಿ (Affidavit) ಮಾಹಿತಿ ನೀಡಿದ್ದಾರೆ.

    5.44 ಕೋಟಿ ರೂ. ಮೌಲ್ಯದ ಚರ ಹಾಗೂ 40.94 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 40.94 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಪ್ರಜ್ವಲ್ ರೇವಣ್ಣ ಹೇಳಿಕೊಂಡಿದ್ದಾರೆ. ಸದ್ಯ 9.29 ಲಕ್ಷ ರೂ. ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 57 ಲಕ್ಷ ರೂ. ನಗದು ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 70 ಲಕ್ಷದ ಆಸ್ತಿ ಘೋಷಿಸಿದ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ

     

    ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರೂ. ಆದಾಯಗಳಿಸಿರುವುದಾಗಿ ಹೇಳಿಕೊಂಡಿರುವ ಪ್ರಜ್ವಲ್, ಕೃಷಿಯೇತರ ಮೂಲದಿಂದ 1.33 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದೇನೆ ಎಂದಿದ್ದಾರೆ. ಹಾಗೆಯೇ 31 ಹಸು, 4 ಎತ್ತು, ಒಂದು ಟ್ರ‍್ಯಾಕ್ಟರ್ ಹೊಂದಿರುವ ಪ್ರಜ್ವಲ್ ರೇವಣ್ಣ, ಬೆಂಗಳೂರು ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡ, ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವುದನ್ನು ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದು ಬಿಎಸ್‍ವೈ: ಎಂ.ಚಂದ್ರಪ್ಪ

    ಈ ನಡುವೆ ಅತ್ತೆ ಅನುಸೂಯ ಅವರಿಂದ 22 ಲಕ್ಷ ರೂ., ಮತ್ತೊಬ್ಬ ಅತ್ತೆ ಶೈಲಜಾ ಅವರಿಂದ 10 ಲಕ್ಷ ರೂ. ತಂದೆ ರೇವಣ್ಣ ಅವರಿಂದ 86 ಲಕ್ಷ ರೂ. ಹಾಗೂ ಸಹೋದರ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರಿಂದ 1 ಕೋಟಿ ರೂ. ಸಾಲ ಹಾಗೂ ಕುಪೇಂದ್ರ ರೆಡ್ಡಿ ಅವರಿಂದ ಸಾಲ ಪಡೆದು ಒಟ್ಟು 4.48 ಕೋಟಿ ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೇ ಜನ ಒಪ್ಪಲ್ಲ: ಡಿಕೆ ಸುರೇಶ್

    ಈ ನಡುವೆ ಸರ್ಕಾರಕ್ಕೆ 3.04 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. 67 ಲಕ್ಷ ರೂ. ಮೌಲ್ಯದ 1 ಕೆಜಿ 100 ಗ್ರಾಂ ಚಿನ್ನ ಮತ್ತು 17.48 ಲಕ್ಷ ರೂ. ಮೌಲ್ಯದ 23 ಕೆಜಿ ಬೆಳ್ಳಿ ಹಾಗೂ 1.90 ಲಕ್ಷ ರೂ. ಮೌಲ್ಯದ ವಜ್ರದ ಆಭರಣ ಹೊಂದಿರುವುದಾಗಿ ಪ್ರಜ್ವಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಿಕೆ ಸುರೇಶ್‌ ಬರೋಬ್ಬರಿ 593 ಕೋಟಿ ರೂ. ಆಸ್ತಿಗೆ ಒಡೆಯ!

  • ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ

    ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ – ಪ್ರತಾಪ್‌ಸಿಂಹ ವ್ಯಂಗ್ಯ

    – ಎಲ್ಲ ಭಾಗ್ಯಗಳನ್ನ ಕೊಟ್ಟ ಸಿದ್ದರಾಮಯ್ಯಗೆ ಕ್ಷೇತ್ರಭಾಗ್ಯವೇ ಇಲ್ಲವೆಂದು ಲೇವಡಿ

    ಮಡಿಕೇರಿ: ರೇವಣ್ಣಗೆ ಭವಾನಿಯವರ (Bhavani Revanna) ಚಿಂತೆ, ಕುಮಾರಣ್ಣ (HD Kumaraswamy) ಅವ್ರಿಗೆ ನಿಖಿಲ್‌ನ ಚಿಂತೆಯಾದ್ರೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಚಿಂತೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣಗೆ ಭವಾನಿಯವರ ಚಿಂತೆ, ಕುಮಾರಣ್ಣ ಅವ್ರಿಗೆ ನಿಖಿಲ್‌ನ ಚಿಂತೆಯಾದ್ರೆ ಸಿದ್ದರಾಮಯ್ಯಗೆ (Siddaramaiah) ಕ್ಷೇತ್ರದ ಚಿಂತೆ. ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆ ಆದ್ದರಿಂದ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬೇಡಿ ಎಂದು ಲೇವಡಿ ಮಾಡಿದ್ದಾರೆ.

    ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಕೊಟ್ಟೆ ಎನ್ನುವ ಸಿದ್ದರಾಮಯ್ಯನವರಿಗೆ ಕ್ಷೇತ್ರಭಾಗ್ಯವೇ ಇಲ್ಲ. ಇದನ್ನ ನೋಡಿದ್ರೆ ಬಹಳ ಆಶ್ಚರ್ಯವಾಗುತ್ತೆ, ಅಷ್ಟೇ ಸೋಜಿಗವೂ ಆಗುತ್ತೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಯುಗಾದಿಯಂದೇ ಕಳ್ಳತನ – ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

    ಕರ್ನಾಟಕದ ಜನ ಮಂಗಗಳಾಗಬೇಡಿ:
    ಸಿದ್ದರಾಮಯ್ಯ ಅವರಿಗೆ ಯುಗಾದಿ ದಿನ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಬೇಕಾಗಿತ್ತು. ಆದರೆ ಇವತ್ತಿನವರೆಗೆ ಟಿಕೆಟ್ ಘೋಷಣೆ ಆಗಿಲ್ಲ. ಒಂದು ಕ್ಷೇತ್ರ ಹುಡುಕಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಈ ಪರಿಸ್ಥಿತಿ ಬಂದಿದ್ರೆ ಅಂದ್ರೆ ಅವರ ಭಾಗ್ಯಗಳಿಗೆ ಜನ ಬೆಲೆ ಕೊಟ್ಟಿಲ್ಲ. ನಾನು ಈಗಲೂ ಹೇಳುತ್ತೇನೆ ಅವರು ಕಡೆಗೆ ಮೈಸೂರಿನ ವರುಣಾಕ್ಕೆ ಬರುತ್ತಾರೆ. ಹೀಗಾಗಿ ಕರ್ನಾಟಕದ ಜನ ಇವರ ಮಾತಿಗೆ ಮರುಳಾಗಿ ಮಂಗಗಳಾಗಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಲೆಗೆ ಪೆಟ್ಟುಬಿದ್ದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾವು – ಹಾಸನ ಡಿಸಿ

    ಈಗಾಗಲೇ ಕಾಂಗ್ರೆಸ್ ಅವರು ಕೊಡುವ 200 ಯೂನಿಟ್ ವಿದ್ಯುತ್ ಉಚಿತ, ಗೃಹಿಣಿಯರಿಗೆ 2,000 ರೂ. ಮಾಸಿಕ ಭತ್ಯೆ ಕೊಡುತ್ತೇನೆ ಅನ್ನೋದನ್ನೆಲ್ಲಾ ನಂಬಬೇಡಿ. ಪಂಜಾಬ್ ನಲ್ಲಿ ಎಎಪಿಯವರು ಇದನ್ನೇ ಹೇಳಿ ಟೋಪಿ ಹಾಕಿದ್ದಾರೆ. ಈಗ ಕಾಂಗ್ರೆಸ್ ಅವರು ರಾಜ್ಯದ ಜನರಿಗೆ ಟೋಪಿ ಹಾಕಲು ಹೋರಟಿದ್ದಾರೆ. ಯಾವುದೇ ಪಕ್ಷ ಸುಳ್ಳು ಹೇಳಿಕೊಂಡು ಮತ ಕೇಳಿದರೂ, ಜನರು ಅರಿತು ಮತ ನೀಡಿ ಬಿಜೆಪಿ ಅವರು ಸುಳ್ಳು ಹೇಳಿದ್ರೂ ಮತ ನೀಡಬೇಡಿ ನಾನು ಬಿಜೆಪಿ ಕಾರ್ಯಕರ್ತನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

  • JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK

    JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK

    -ಜನ ಪ್ರೀತಿ ತೋರಿಸಿ ನಿಖಿಲ್ ಸೋಲಿಸಿದ್ರು ಎಂದ ಕುಮಾರಸ್ವಾಮಿ

    ರಾಮನಗರ: ರಾಜ್ಯದಲ್ಲಿ ಚುನಾವಣಾ (Elections) ಕಾವು ದಿನೇ ದಿನೇ ರಂಗೇರುತ್ತಿದೆ. ಮೂರು ಪಕ್ಷಗಳೂ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಈ ನಡುವೆ ಸ್ವಕ್ಷೇತ್ರದಲ್ಲಿ ಮಗನ ಗೆಲುವಿಗಾಗಿ ಪಣ ತೊಟ್ಟಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭರ್ಜರಿ ಬಾಡೂಟ (Nonveg) ಹಾಕಿಸುವ ಮೂಲಕ ಮತದಾರರನ್ನ ಸೆಳೆಯುವುದಕ್ಕೆ ಮುಂದಾಗಿದ್ದಾರೆ.

    ಮಂಡ್ಯಕ್ಕೆ (Mandya) ಮೋದಿ ಆಗಮನದಿನದಂದೇ ರಾಮನಗರ (Ramanagara) ಕ್ಷೇತ್ರದಲ್ಲಿ ಹೆಚ್‌ಡಿಕೆ ಬಾಡೂಟ ಹಾಕಿಸುವ ಮೂಲಕ ಬಿಜೆಪಿಗೆ (BJP) ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್

    ಹೌದು, 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಳೇ ಮೈಸೂರು ಭಾಗದಲ್ಲಿ ಮೂರು ಪಕ್ಷಗಳು ಕೂಡಾ ಜಿದ್ದಾ-ಜಿದ್ದಿಯಲ್ಲಿ ರ‍್ಯಾಲಿ, ಸಮಾವೇಶ, ರೋಡ್ ಶೋಗಳನ್ನ ಆಯೋಜನೆ ಮಾಡುವ ಮೂಲಕ ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಒಂದೆಡೆ ಮಂಡ್ಯದಲ್ಲಿ ಪ್ರಧಾನಿ ಮೋದಿ (Narendra Modi) ರೋಡ್ ಶೋ ಮಾಡ್ತಿದ್ರೆ, ಮತ್ತೊಂದೆಡೆ ಪಕ್ಕದ ಜಿಲ್ಲೆ ರಾಮನಗರದಲ್ಲಿ ಹೆಚ್‌ಡಿಕೆ ಭರ್ಜರಿ ಬಾಡೂಟ ಆಯೋಜಿಸಿದ್ದಾರೆ. ಪುತ್ರನ ಗೆಲುವಿಗಾಗಿ ರಣತಂತ್ರ ರೂಪಿಸಿರೋ ಕುಮಾರಸ್ವಾಮಿ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ರಾಮನಗರ ಜಿಲ್ಲೆಯ 5ನೇ ತಾಲೂಕಾಗಿ ಹಾರೋಹಳ್ಳಿ ಉದ್ಘಾಟಿಸಿದ ಹಿನ್ನೆಲೆಯಲ್ಲಿ ಹೆಚ್‌ಡಿಕೆ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದನ್ನೇ ಸದುಪಯೋಗಪಡಿಸಿಕೊಂಡ ಕುಮಾರಸ್ವಾಮಿ ಕ್ಷೇತ್ರದ ಸುಮಾರು 25 ಸಾವಿರ ಕಾರ್ಯಕರ್ತರಿಗೆ ಬಾಡೂಟ ಏರ್ಪಡಿಸಿದ್ದರು. ಬಾಡೂಟದಲ್ಲಿ ಮಟನ್ ಸಾಂಬಾರ್, ಚಿಕನ್ ಫ್ರೈ, ಬೋಟಿ ಗೊಜ್ಜು, ತಲೆ ಮಾಂಸ, ಊಟ ಹಾಕಿಸಿದ್ದು ಬಂದಂತಹ ಕಾರ್ಯಕರ್ತರು ಬಾಡೂಟಕ್ಕೆ ಮುಗಿಬಿದ್ದರು. ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಬೇಗ ತಲುಪಿ!

    ಇದೇ ವೇಳೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಹೆಚ್‌ಡಿಕೆ, ನನ್ನ ತಾಲೂಕಿನ ಜನತೆ ಮೇಲೆ ವಿಶ್ವಾಸವಿದೆ. ಕಳೆದ ಬಾರಿ ಮಂಡ್ಯದಲ್ಲಿ ಜನ ನಿಖಿಲ್ ಮೇಲೆ ಪ್ರೀತಿ ತೋರಿಸಿದ್ದರು, ಆದ್ರೆ ಸೋಲಿಸಿದರು. ಬಿಜೆಪಿ, ಕಾಂಗ್ರೆಸ್ ಹಾಗೂ ರೈತಸಂಘದ ಕುತಂತ್ರದಿಂದ ನಿಖಿಲ್ ಸೋತರು. ಈಗ ನಿಖಿಲ್‌ಗೆ ಆ ಭಯ ಬೇಡ. ರಾಮನಗರದ ಜನ ನಿಖಿಲ್‌ರನ್ನ ಗೆಲ್ಲಿಸುತ್ತಾರೆ ಎಂದು ನಿಖಿಲ್‌ಗೆ ಅಭಯ ನೀಡಿದರು.

    ನಾನು ಜನ್ಮ ತಾಳಿದ್ದು ಹಾಸನ ಇರಬಹುದು, ಆದರೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ. ಕುಮಾರಸ್ವಾಮಿ ಯಾರೆಂದು ಗುರುತಿಸುವ ಶಕ್ತಿ ಕೊಟ್ಟಿದ್ದು ರಾಮನಗರದ ಜನ. ನಾನೂ ಕೂಡ ಇಲ್ಲೇ ಮಣ್ಣಾಗೋದು ಎಂದು ಭಾವುಕರಾದರು.

  • ಬಿಜೆಪಿ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್‌ಗೆ ಸರ್ಕಾರ ಪ್ಲ್ಯಾನ್‌

    ಬಿಜೆಪಿ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್‌ಗೆ ಸರ್ಕಾರ ಪ್ಲ್ಯಾನ್‌

    ಬೆಂಗಳೂರು: ಬಿಜೆಪಿ ಮತ್ತು ಹಿಂದೂ ಪರ ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ಸರ್ಕಾರ ಮುಂದಾಗಿದೆ.

    ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಸಣ್ಣ ಪುಟ್ಟ ಗಲಾಟೆ ಕೇಸ್‌ಗಳನ್ನು ವಾಪಸ್ ಪಡೆಯಲು ಸರ್ಕಾರ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಆಗಸ್ಟ್ 15ರ ನಂತ್ರ ಸರ್ಕಾರ, ಪಕ್ಷದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಬೊಮ್ಮಾಯಿ ಸುಳಿವು

    ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, 2019ರಿಂದ ದಾಖಲಾಗಿರುವ ಕೇಸ್‌ಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಸಂಪುಟ ಉಪಸಮಿತಿಯಿಂದ ಶಿಫಾರಸು ಮಾಡ್ತೇವೆ. ಆದರೆ ವೈಯಕ್ತಿಕ ವಿಚಾರಕ್ಕಾಗಿ ಮಾಡಿದ ಕೊಲೆ, ಹೆಚ್ಚು ಸಾರ್ವಜನಿಕ ಆಸ್ತಿ ಹಾನಿ ಮಾಡಿರುವ ಪ್ರಕರಣಗಳನ್ನು ಇದಕ್ಕೆ ಪರಿಗಣಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದೇ ವೇಳೆ ಆರ್‌ಎಸ್‌ಎಸ್ ಅಂಗಸಂಸ್ಥೆ ಜನಸೇವಾ ಟ್ರಸ್ಟ್‌ಗೆ ಆನೇಕಲ್ ಬಳಿಕ ಕುರುಬರಹಳ್ಳಿಯಲ್ಲಿ 35.33 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ

    ಇನ್ನು, ಕಮ್ಮಸಂದ್ರದಲ್ಲಿ ಉತ್ತರ ಕರ್ನಾಟಕ ಸಂಘಸಂಸ್ಥೆಗಳ ಮಹಾ ಸಂಸ್ಥೆಗೆ 3.24 ಎಕರೆ ಜಮೀನು ಮಂಜೂರು ಮಾಡಲು ಕೂಡ ಸಂಪುಟ ಒಪ್ಪಿಗೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ: ಆರ್.ಅಶೋಕ್

    ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ: ಆರ್.ಅಶೋಕ್

    -ಜೆಡಿಎಸ್‍ಗೆ ಕರ್ನಾಟಕದಿಂದ ಗೇಟ್ ಪಾಸ್

    ಉಡುಪಿ: ಉಪಚುನಾವಣೆ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರ ಪಡೆಯುತ್ತೇವೆ ಎಂಬ ಭ್ರಮೆಯಲ್ಲಿವೆ. ಮತ್ತೊಮ್ಮೆ ಕಾಂಗ್ರೆಸ್, ಜೆಡಿಎಸ್ ಒಂದಾಗೋದು ಕೇವಲ ಭ್ರಮೆ. ದೇವೇಗೌಡರು ಕೂಡಾ ಕಾಂಗ್ರೆಸ್ ಜೊತೆ ಹೋಗಲ್ಲ ಎಂದಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಉಡುಪಿಯ ಹೆಬ್ರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಮತ್ತು ಹೆಬ್ರಿ ಮಿನಿ ವಿಧಾನಸೌಧಕ್ಕೆ ಗುದ್ದಲಿ ಪೂಜೆ ಮಾಡಿ ಮಾತನಾಡಿದರು.

    ಬಿಜೆಪಿ 14-15 ಸ್ಥಾನಗಳಲ್ಲಿ ಗೆಲ್ಲುತ್ತದೆ. ಫಲಿತಾಂಶದ ನಂತರ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಎಂದಾಗುತ್ತದೆ. ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ನಾಳೆ ಬರುತ್ತೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ತ್ಯಾಗ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಮೈತ್ರಿ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತದಿಂದ ಜನರು ರೋಸಿದ್ದಾರೆ. ದೇಶದ ಜನರು ಉಪಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಹೊಸ ಹೆಜ್ಜೆ ಇಡುವ ಸುಭದ್ರ ಸರ್ಕಾರ ರಾಜ್ಯದ ಎಲ್ಲೆಡೆ ಬರುತ್ತೆ. ಸಮೀಕ್ಷೆಗಳಲ್ಲೂ ಬಿಜೆಪಿ ಗೆಲುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸರ್ಕಾರ ಮುಂದುವರಿಸಲು ಮತದಾರರು ತೀರ್ಮಾನಿಸಿದ್ದಾರೆ. ಫಲಿತಾಂಶದ ನಂತರ ಜೆಡಿಎಸ್ ಗೆ ಕರ್ನಾಟಕದಿಂದ ಗೇಟ್ ಪಾಸ್ ಕೊಡಲಾಗುವುದು ಎಂದರು.

    ಮಲ್ಲಿಕಾರ್ಜುನ ಖರ್ಗೆ ಸೋತಿದ್ದಾರೆ. ಕಾಂಗ್ರೆಸ್ ಎರಡು ಭಾಗವಾಗಿದೆ. ಇತ್ತ ಜೆಡಿಎಸ್ ಕೂಡಾ ಎರಡು ಭಾಗ ಆಗಿದೆ. ಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿ ಆಗಿರುವಾಗ ಈ ನಾಲ್ಕು ಪಾರ್ಟಿ ಒಂದಾಗೋದು ಯಾವಾಗ? ನಾಯಕನನ್ನು ಆಯ್ಕೆ ಮಾಡೋದು ಯಾವಾಗ? ಕಾಂಗ್ರೆಸ್ ಭ್ರಮಾಲೋಕದಲ್ಲಿದ್ದು, ಅವರು ಭ್ರಮಾಲೋಕದಲ್ಲೇ ಇರಲಿ ಎಂದು ಸಚಿವ ಆರ್. ಅಶೋಕ್ ಛೇಡಿಸಿದರು.

  • ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನು ಮಾರಿಕೊಂಡಿಲ್ಲ: ಸಾರಾ ಮಹೇಶ್

    ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನು ಮಾರಿಕೊಂಡಿಲ್ಲ: ಸಾರಾ ಮಹೇಶ್

    ಮೈಸೂರು: ಯಾರ ಮೇಲೆ ಆರೋಪ ಇತ್ತು ಅವರು ನಾನಲ್ಲ ಎಂದು ಹೇಳೋಕೆ ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅನರ್ಹ ಶಾಸಕ ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ವ್ಯವಸ್ಥೆಯಲ್ಲಿ ಜನರಿಗೆ ನನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತಿರುವುದು ಸತ್ಯ. ಆದರೆ ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ನಾನು ನನ್ನನ್ನ ಮಾರಿಕೊಂಡಿಲ್ಲ ಎಂದು ವಿಶ್ವನಾಥ್ ಮೇಲೆ ಕಿಡಿಕಾರಿದ್ದಾರೆ. ಇದನ್ನು ಓದಿ: ಹೆಚ್‍ಡಿಡಿ ಕುಟುಂಬದ ಕಣ್ಣೀರಿಗೆ ಸಾರಾ ಮಹೇಶ್ ಕಾರಣ: ಎಚ್. ವಿಶ್ವನಾಥ್

    ನೀವು ಮಾರಿಕೊಂಡು ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮನಸಾಕ್ಷಿ ಆತ್ಮಗೌರವ ಇದಿಯಾ ನಿಮಗೆ? ಇಷ್ಟು ಅನ್ಯಾಯ ಮಾಡಿ ಮಾತನಾಡುತ್ತಿದ್ದೀರಲ್ಲಾ ಏನು ಅನ್ನಿಸಲ್ವಾ. ನನ್ನನ್ನು ಕರೆದುಕೊಂಡು ಹೋಗಿ ಯಾರ ಹತ್ತಿರ ಮಾತನಾಡಿಸಿದ್ರಿ? ನೀವು ಬಾಂಬೆಯಿಂದ ಕರೆಸಿ ಯಾರನ್ನು ಮಾತನಾಡಿಸಿದ್ರಿ ಗೊತ್ತಿಲ್ವಾ. ನಿಮ್ಮ ಮನೆ ದೇವರ ಬಳಿಗೆ ಕರೆಯಿರಿ, ನೀವು ಏನ್ ಏನ್ ಮಾತನಾಡಿದ್ದೀರಿ ಎಂದು ಎಲ್ಲವನ್ನೂ ಹೇಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

  • ರಾಜ್ಯಾಧ್ಯಕ್ಷ ಹುದ್ದೆಗೆ ವಿಶ್ವನಾಥ್ ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ – ಹೊರಟ್ಟಿ

    ರಾಜ್ಯಾಧ್ಯಕ್ಷ ಹುದ್ದೆಗೆ ವಿಶ್ವನಾಥ್ ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ – ಹೊರಟ್ಟಿ

    ಹುಬ್ಬಳ್ಳಿ: ಜೆಡಿಸ್‍ನ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರನ್ನು ಸಮನ್ವಯ ಸಮಿತಿಗೆ ತೆಗೆದುಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇಷ್ಟವಿರಲಿಲ್ಲ. ಇದರ ಬಗ್ಗೆ ವಿಶ್ವನಾಥ್ ಅವರಿಗೆ ಬೇಸರವಿತ್ತು. ಅದಕ್ಕೆ ಅವರು ರಾಜೀನಾಮೆ ನೀಡಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಈ ವಿಚಾರದ ಬಗ್ಗೆ ಜೆಡಿಸ್ ವರಿಷ್ಠ ದೇವೇಗೌಡರ ಗಮನಕ್ಕೆ ತಂದಿದ್ದರು. ಆದರೆ ಅವರು ಸರಿಯಾಗಿ ಸ್ಪಂದಿಸಿಲ್ಲ ಎಂಬ ಬೇಸರ ವಿಶ್ವನಾಥ್ ಅವರಿಗಿತ್ತು. ಅದ್ದರಿಂದ ರಾಜೀನಾಮೆ ನೀಡಿರಬಹುದು. ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಹೇಳಿದರು.

    ವಿಶ್ವನಾಥ್ ನನ್ನ ಬಳಿಯೂ ಸಿದ್ದರಾಮಯ್ಯನ ಬಗ್ಗೆ ಇದ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರು ಇನ್ನು ಸ್ವಲ್ಪ ದಿನ ಜೆಡಿಎಸ್‍ನ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬೇಕಿತ್ತು. ನಿನ್ನೆ ವಿಶ್ವನಾಥ್‍ಗೆ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದೆ. ಆದರೆ ವಿಶ್ವನಾಥ್ ಸಂಪರ್ಕಕ್ಕೆ ಸಿಗಲಿಲ್ಲ. ಅವರು ರಾಜೀನಾಮೆ ನೀಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಸರ್ಕಾರದ ರಚನೆ ವೇಳೆ ಹೇಳಿದಂತೆ ಕಾಂಗ್ರೆಸ್ ನಡೆದುಕೊಂಡಿಲ್ಲ. ವಿಧಾನಪರಿಷತ್ ಸಭಾಪತಿ ಸ್ಥಾನ ಜೆಡಿಎಸ್‍ಗೆ ನೀಡುವುದಾಗಿ ಹೇಳಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸಭಾಪತಿ ಸ್ಥಾನ ತೆಗೆದುಕೊಂಡಿತು. ಅಷ್ಟೇ ಅಲ್ಲದೇ ಸಮನ್ವಯದ ಸಮಿತಿಯಲ್ಲಿ ಎರಡು ಪಕ್ಷದ ರಾಜ್ಯಾಧ್ಯಕ್ಷರು ಇರಬೇಕಿತ್ತು. ಎಲ್ಲ ಹಂತದಲ್ಲೂ ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಅದು ಮೈತ್ರಿ ಸರ್ಕಾರಕ್ಕೆ ಒಳ್ಳೆಯದಲ್ಲ ಎಂದರು.

    ನೀವು ರಾಜ್ಯಾಧ್ಯಕ್ಷರು ಆಗುತ್ತಿರಾ ಎಂದು ಕೇಳಿದಾಗ, ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಅಧ್ಯಕ್ಷ ಸ್ಥಾನ ನಿರ್ವಹಿಸುವ ಶಕ್ತಿಯು ನನಲಿಲ್ಲ. ಬಂಡೆಪ್ಪ ಕಾಶೆಂಪೂರ್ ಅಂತವರು ಆ ಸ್ಥಾನಕ್ಕೆ ಸೂಕ್ತ ಎಂದು ಅವರು ಆಶಯ ವ್ಯಕ್ತಪಡಿಸಿದರು.

  • ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವು ಬಯಸ್ತೇನೆ: ಎಚ್‍ಡಿಡಿ

    ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವು ಬಯಸ್ತೇನೆ: ಎಚ್‍ಡಿಡಿ

    ರಾಮನಗರ: ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವನ್ನು ಬಯಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

    ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಹಾಗೂ ಸೊಸೆ ಅನಿತಾ ಕುಮಾರಸ್ವಾಮಿ ಪರ ಹಳ್ಳಿಮಾಳ ಗ್ರಾಮದಲ್ಲಿ ದೇವೇಗೌಡರು ಬಹಿರಂಗ ಪ್ರಚಾರ ನಡೆಸಿದ್ದರು. ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ 38 ಸ್ಥಾನ ಮಾತ್ರ ಬಂದಿದ್ದರೂ ಸರ್ಕಾರ ಮಾಡಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್‍ನವರು ಕೇಳಿದ್ದರು. ಎಚ್‍ಡಿಕೆ ಸಿಎಂ ಆಗೋದು ಅನಿವಾರ್ಯ ಆಗಿರಲಿಲ್ಲ. ಆದರೆ ದೇಶದ ಹಲವು ಪಕ್ಷಗಳು ಒಗ್ಗಟು ಪ್ರದರ್ಶನಕ್ಕಾಗಿ ನಾನು ಅನುಮತಿ ಕೊಟ್ಟೆ ಎಂದರು.

    ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿದ್ದರೂ, ಕಾಂಗ್ರೆಸ್ ಗೆಲ್ಲಲ್ಲು ಅಭ್ಯರ್ಥಿ ಹಾಕದಂತೆ ಎಚ್‍ಡಿಕೆಗೆ ಈ ಹಿಂದೆಯೇ ತಿಳಿಸಿದ್ದೆ. ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವನ್ನು ಬಯಸುತ್ತೇನೆ. ಮಾಡಬೇಕಾದ ಕೆಲಸ ತುಂಬಾ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಆಗಿದೆ. ನಾವು ಅಧಿಕಾರಕ್ಕೆ ಬಂದಿದ್ದು ದೇವರ ಇಚ್ಛೆ. ನಮ್ಮ ನಡುವಿನ ವೈರತ್ವವನ್ನು ಮರೆಯೋದು ಹೇಗೆ ಎಂದು ಎಲ್ಲರೂ ಅಂದುಕೊಳ್ಳಬಹುದು, ಆದರೆ ನಾವು ಮರೆಯಬೇಕಿರುವುದು ನಮ್ಮ ಹಗೆತನವನ್ನು ಹಾಗೂ ಹೋರಾಟವನ್ನ, ಈ ಮೊದಲು ಹಳ್ಳಿಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದರು. ಆದರೆ ಈಗ ಎಲ್ಲವನ್ನೂ ಮರೆಯಬೇಕು. ಅದನ್ನು ಬಿಟ್ಟರೇ, ಬೇರೆ ದಾರಿಯಿಲ್ಲ. ನಾನು ಉದ್ವೇಗದ ಭಾಷಣ, ವ್ಯಕ್ತಿ ನಿಂದನೆ ಮಾಡಲು ಬಂದಿಲ್ಲ. ಕೇವಲ ದೋಸ್ತಿ ಸರ್ಕಾರದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿದ್ರು.

    ಅನಿತಾ ಕುಮಾರಸ್ವಾಮಿ ಮತ ಕೇಳಲು ಬಂದಾಗ ಕೆಲವು ಗ್ರಾಮಗಳಲ್ಲಿ ವಿರೋಧ ವ್ಯಕ್ತ ಆಗಿದ್ದನ್ನು, ನಾನು ಸಹ ಗಮನಿಸಿದ್ದೇನೆ. ಅದು ಸಹಜ, ಎರಡೂ ಕ್ಷೇತ್ರಗಳ ಬೆಳವಣಿಗೆಗೆ ಶ್ರಮಿಸೋಣ. ರಾಮನಗರ ಮತ್ತು ಚನ್ನಪಟ್ಟಣ ಎರಡೂ ಸಿಎಂ ಕುಮಾರಸ್ವಾಮಿ ಕಣ್ಣುಗಳಂತೆ. ಎರಡೂ ಕ್ಷೇತ್ರಗಳು ಬೆಳೆಯಬೇಕು. ಅಲ್ಲದೇ ಗ್ರಾಮಸ್ಥರು ಆರೋಪವನ್ನು ನಾನು ಸ್ವಾಗತಿಸುತ್ತೇನೆ. ರೇಷ್ಮೆ ಸೇರಿದಂತೆ ಕೆಲವು ಬೆಳೆಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಏರುಪೇರಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳುತ್ತದೆ. ಸಿಎಂ ಎಚ್‍ಡಿಕೆ ಯಾವುದೇ ಕಾರಣಕ್ಕೂ, ತಮ್ಮ ಕ್ಷೇತ್ರಗಳನ್ನು ಕೈ ಬಿಡುವುದಿಲ್ಲ. ಯಾರು ಏನೇ ಆರೋಪ ಮಾಡಿದರೂ, ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದ್ರು.

    ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿಯನ್ನು ಸಿಎಂ ಕುಮಾರಸ್ವಾಮಿಯವರ ಮೇಲಿದೆ. ಅವರೂ ಸಹ ತಮ್ಮ ಜವಾಬ್ದಾರಿಯನ್ನು ಎಲ್ಲಾ ನಾಯಕರ ಹೆಗಲಿಗೆ ಹಾಕಿದ್ದಾರೆ. ಕೋಮುವಾದಿ ಪಕ್ಷ ಅಧಿಕಾರದಲ್ಲಿ ಇರಬಾರದು. ಈ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ನೀವು ಬೆಂಬಲ ನೀಡಬೇಕು. ಬಿಜೆಪಿಯವರು ತಮ್ಮ 225 ಸ್ಥಾನಗಳಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ಕೊಟ್ಟಿಲ್ಲ. ಅವರ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದು. ಹಾಗಾದರೆ ಮುಸ್ಲಿಂ ಬಾಂಧವರು ಎಲ್ಲಿ ಹೋಗಬೇಕು. ಹಿಂದೂ-ಮುಸ್ಲಿಂ ಒಗ್ಗಟ್ಟಾಗಿ ಇರಬೇಕು. ಹೀಗಾಗಿ ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲಾ ಒಂದಾಗಿದ್ದೇವೆ.

    ಬಿಬಿಎಂಪಿ ಚುನಾವಣೆಯಲ್ಲಿ ನಾವು ಗೆದ್ದಿದ್ದು 14 ಸ್ಥಾನ ಮಾತ್ರ. ಆಗ ಮೇಯರ್ ಸ್ಥಾನವನ್ನು ನಿಮಗೆ ಕೊಡುತ್ತೀವಿ ಎಂದು ಬಿಜೆಪಿಯವರು ಬಂದಿದ್ದರು. ಬಿಜೆಪಿಯವರ ಪ್ರಸ್ತಾಪವನ್ನು ನಾನು ಒಪ್ಪಲಿಲ್ಲ. ನನಗೂ ಬದ್ಧತೆ ಇದೆ. ಇದೇ ತಿಂಗಳ 31 ಇಲ್ಲ, ನವೆಂಬರ್ 1 ರಂದು ದೊಡ್ಡ ಮಟ್ಟದ ಬಹಿರಂಗ ಸಭೆ ಮಾಡುವ ಆಸೆಯು ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಮಲಕ್ಕೆ ಆಪರೇಷನ್: ಜೆಡಿಎಸ್‍ಗೆ ಹಾರಲಿದ್ದಾರೆ 15 ಬಿಜೆಪಿ ಶಾಸಕರು!

    ಕಮಲಕ್ಕೆ ಆಪರೇಷನ್: ಜೆಡಿಎಸ್‍ಗೆ ಹಾರಲಿದ್ದಾರೆ 15 ಬಿಜೆಪಿ ಶಾಸಕರು!

    ಬೆಂಗಳೂರು: 2018 ರ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು 4 ತಿಂಗಳಷ್ಟೇ ಬಾಕಿ ಇದ್ದು ಉತ್ತರ ಕರ್ನಾಟಕ ಭಾಗದ ಬಿಜೆಪಿಯ 15 ನಾಯಕರು ಜೆಡಿಎಸ್ ಸೇರಲು ಮುಂದಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಮಾಜಿ ಸಚಿವರು ಹಾಗೂ ಹಾಲಿ ಶಾಸಕರ ಗುಂಪೊಂದು ಜೆಡಿಎಸ್ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಯಾಗಲು ಯತ್ನಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಮಾಜಿ ಸಚಿವರುಗಳಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಆನಂದ್ ಅಸ್ನೋಟಿಕರ್ ನೇತೃತ್ವದ 15 ಜನರ ತಂಡ ಈ ಪ್ರಯತ್ನ ಆರಂಭಿಸಿದೆ. ಉಮೇಶ್ ಕತ್ತಿ ಬಿಜೆಪಿ ಬಿಡಲು ಸಿದ್ಧತೆ ಮಾಡಿಕೊಂಡಿದ್ದು ಈಗಾಗಲೇ ತಮ್ಮ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೆ ಸಂಸದ ಪ್ರಕಾಶ್ ಹುಕ್ಕೇರಿ ಅಡ್ಡಿಯಾದ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಕಣ್ಣು ಜೆಡಿಎಸ್ ಮೇಲಿದೆ ಎನ್ನಲಾಗುತ್ತಿದೆ.

    2008 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂಡಾಯದ ಬಾವುಟ ಹಾರಿಸಿದವರು ಬಾಲಚಂದ್ರ ಜಾರಕಿಹೊಳಿ ಅಂಡ್ ಟೀಂ. ಬಂಡಾಯ ಏಳಲು ಕಾರಣವಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಾಂದ್ಲಜೆಗೆ ಇವರ ಮೇಲೆ ಸಿಟ್ಟಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈ ಬಾರಿ ಹೈಕಮಾಂಡೇ ಅಂತಿಮವಾಗಿ ಟಿಕೆಟ್ ನೀಡುವುದಾಗಿ ಹೇಳಿದ್ದರಿಂದ ಕಡೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಬಹುದು ಎನ್ನುವ ಅನುಮಾನ ಬಾಲಚಂದ್ರ ಜಾರಕಿ ಹೊಳಿ, ಆನಂದ್ ಆಸ್ನೋಟಿಕರ್ ಹಾಗೂ ಅಂದಿನ ಬಂಡಾಯ ಶಾಸಕರಾಗಿದ್ದ 13 ಜನರದ್ದು.

    ಈ ಕಾರಣದ ಜೊತೆ ಈ ಬಾರಿ ಯಾರಿಗೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆ ಇರುವುದರಿಂದ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

    ಒಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ 15 ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಒಟ್ಟಾಗಿ ಜೆಡಿಎಸ್ ನಾಯಕರುಗಳ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ. ಆದರೆ ಕೆಲ ನಾಯಕರಿಗೆ ಜಿಲ್ಲಾ ಮಟ್ಟದ ಪಾರಂಪರಿಕ ಶತ್ರುಗಳ ಅಡ್ಡಿಯಾದ ಹಿನ್ನೆಲೆಯಲ್ಲಿ ಯಾರನ್ನು ಸೇರ್ಪಡೆಗೊಳಿಸಬೇಕು? ಯಾರನ್ನು ಬಿಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಹೀಗಾಗಿ ಕೆಲವೇ ದಿನದಲ್ಲಿ ಯಾರು ಯಾವ ಪಕ್ಷಕ್ಕೆ ಹಾರಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ.

    https://youtu.be/fJkZXk_1G1A