Tag: ಜೆಡಿಎಸ್ ಸಮಾವೇಶ

  • ಹೆಲಿಕಾಪ್ಟರ್‌ನಲ್ಲಿ ಹೂಮಳೆಗರೆದರೂ ನಮಗೆ ವೋಟ್‌ ಮಾತ್ರ ಹಾಕುತ್ತಿಲ್ಲ: ಎಚ್‌ಡಿಕೆ ಬೇಸರ

    ಹೆಲಿಕಾಪ್ಟರ್‌ನಲ್ಲಿ ಹೂಮಳೆಗರೆದರೂ ನಮಗೆ ವೋಟ್‌ ಮಾತ್ರ ಹಾಕುತ್ತಿಲ್ಲ: ಎಚ್‌ಡಿಕೆ ಬೇಸರ

    ಬೆಂಗಳೂರು: ನಾನು ಕೆಲಸ ಮಾಡಿದರೂ ನಮ್ಮ ಪಕ್ಷಕ್ಕೆ ಜನ ವೋಟು ಹಾಕುತ್ತಿಲ್ಲ. ಆದರೆ ಏನು ಕೆಲಸ ಮಾಡದವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಎಚ್‌ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ದಾಸರಹಳ್ಳಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಕೆರೆಯನ್ನು ನುಂಗಿ ಅಧಿಕಾರಿಗಳು, ರಾಜಕಾರಣಿಗಳು ಹೈಫೈ ಕಾಲೋನಿ ಮಾಡಿಕೊಂಡಿದ್ದರು. ಆದರೆ ಮಳೆಗಾಲ ಬಂದಾಗ ಅಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ನನ್ನ ಅವಧಿಯಲ್ಲಿ ಇವುಗಳನ್ನು ಸರಿಪಡಿಸಿದ‌ ಕಾರಣ ಹೆಲಿಕಾಪ್ಟರ್‌ನಲ್ಲಿ ಹೂಮಳೆಗರೆದರು. ವಿಪರ್ಯಾಸ ಅಂದರೆ ಚುನಾವಣೆಯಲ್ಲಿ ಜನರು ಮಾತ್ರ ನಮ್ಮ ಪಕ್ಷಕ್ಕೆ ಮತ ಹಾಕಲೇ ಇಲ್ಲ ಎಂದು ಹೇಳಿದರು.

    ನನ್ನ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದೆ. ರೈತರ ಸಾಲಮನ್ನಾ ಮಾಡಿದೆ. ಹಲವಾರು ಯೋಜನೆಗಳನ್ನು ನೀಡಿದೆ. ಆದರೆ ಜನರು ಮಾತ್ರ ನನ್ನ ಕೈಹಿಡಿಯುತ್ತಿಲ್ಲ ಎಂದು ಕುಮಾರಸ್ವಾಮಿ ನೋವು ತೋಡಿಕೊಂಡರು. ಇದನ್ನೂ ಓದಿ: ಮಂಡ್ಯ ಜನರು ಮುಗ್ಧರು ಎಲ್ಲರನ್ನೂ ನಂಬ್ತಾರೆ – ಮಗನ ಸೋಲನ್ನು ಮರೆಯದ ಹೆಚ್‍ಡಿಕೆ

    ಕೆಲಸ ಮಾಡಿದವರಿಗೆ ವೋಟು ಹಾಕುವುದಿಲ್ಲ. ಏನೂ ಕೆಲಸ ಮಾಡದವರಿಗೆ ಮಾತ್ರ ಓಟು ಹಾಕಿ ಗೆಲ್ಲಿಸುತ್ತಾರೆ. ಇದು ಇಂದಿನ ಪರಿಸ್ಥಿತಿ ಎದು ಹೇಳಿ ಜನರು ನಮ್ಮ ಕೈಹಿಡಿಯುತ್ತಿಲ್ಲವೆಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

  • ತುಮಕೂರಲ್ಲಿ ಸೋತಿದ್ದು ವರದಾನ, ಸೋಲಿಸಿದ ಮಹಾನುಭಾವರಿಗೆ ನಮಸ್ಕಾರ: ಹೆಚ್‍ಡಿಡಿ

    ತುಮಕೂರಲ್ಲಿ ಸೋತಿದ್ದು ವರದಾನ, ಸೋಲಿಸಿದ ಮಹಾನುಭಾವರಿಗೆ ನಮಸ್ಕಾರ: ಹೆಚ್‍ಡಿಡಿ

    ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರಲ್ಲಿ ಸೋತಿದ್ದು ವರದಾನ ಅಂದುಕೊಳ್ತೀನಿ. ಸೋಲಿಸಿದ ಮಹಾನುಭಾವರಿಗೆ ನಮಸ್ಕಾರ. ಅವರಿಗೆ ಕೆಟ್ಟದ್ದು ಬಯಸೋಕೆ ಹೋಗಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

    ಇಂದು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಸೋತಿದ್ದೆ ನನಗೆ ವರದಾನವಾಗಿದೆ. ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ. ಈ ಸೋಲು ನನ್ನಲ್ಲಿ ಹೋರಾಟದ ಕೆಚ್ಚನ್ನು ಇನ್ನೂ ಹೆಚ್ಚು ಮಾಡಿದೆ. ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ. ನೀವೆಲ್ಲ ನನ್ನ ಜೊತೆ ಇರಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕರೆ ಕೊಟ್ಟರು.

    14 ತಿಂಗಳು ಸರ್ಕಾರ ಮಾಡಿ ಸರ್ಕಾರ ಪತನವಾಯಿತು. ಸರ್ಕಾರ ಹೋಗಲು ಯಾರು ಹೊಣೆ ಎಂದು ಗೊತ್ತಿಲ್ಲ. ಅದಕ್ಕೆ ನಾವು ಕಾರಣ ಇರಬಹುದು. ಅನೇಕರು ಯಾಕೆ ಸಮ್ಮಿಶ್ರ ಸರ್ಕಾರಕ್ಕೆ ಒಪ್ಪಿಕೊಂಡ್ರಿ ಎಂದು ಕೇಳಿದರು. ಇದಕ್ಕೆ ನಾನೇ ಕಾರಣ ಇದರಿಂದ ನನ್ನ ಹಾದಿಯಾಗಿ ಅನೇಕರು ಸೋತರು. ಈ ಪಕ್ಷ ಉಳಿಸೋದು ನಿಮ್ಮ ಕೈಯಲ್ಲಿ ಇದೆ. ಯಾರು 3 ಜನ ಹೊರಗೆ ಹೋದರು ಅವರ ವಿರುದ್ಧ ಕ್ಷೇತ್ರದ ಜನರ ಜೊತೆ ಮಾತನಾಡಿ ಅಭ್ಯರ್ಥಿ ಹಾಕ್ತೀವಿ. ಯಾರ ಬಗ್ಗೆ ನಾನು ದೋಷ ಮಾಡಲ್ಲ. ಎಲ್ಲದ್ದಕ್ಕೂ ನಾನೇ ಕಾರಣ ಎಂದು ಹೇಳಿದರು.

    ನಾನು ದೇವರನ್ನು ನಂಬುತ್ತೇನೆ. ಆದರೆ ನನ್ನನ್ನೂ ಸೇರಿಸಿ ಎಲ್ಲಾ ಸೋತ ಮೇಲೆ ಯಾರನ್ನೂ ದೂಷಣೆ ಮಾಡಲ್ಲ. ಯಾರು ಹೋದರು, ಯಾರು ಇದ್ದಾರೆ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಉಳಿದಿರುವವರಲ್ಲೇ ಸೂಕ್ತ ಅಭ್ಯರ್ಥಿಗಳನ್ನು ಹುಡುಕುತ್ತೇವೆ. ರಾಜ್ಯದಲ್ಲಿ ಮಳೆ ಆದರೂ ನೀವೆಲ್ಲ ಬಂದಿದ್ದೀರಿ ಅಂದರೆ ಪಕ್ಷ ಉಳಿಸುವ ಛಲ ನಿಮ್ಮಲ್ಲಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

    ಚುನಾವಣೆ ಯಾವಾಗ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಮೂರು ವರ್ಷ ಹತ್ತು ತಿಂಗಳು ಸರ್ಕಾರ ಮಾಡೋದಿದ್ದರೆ ಮಾಡಲಿ. ಮೋದಿ, ಅಮಿತ್ ಶಾ ಇಬ್ಬರೇ ಎಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಯಾವಾಗ ಯಾವ ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಜನೆ ಮುಂದುವರಿಸಿಕೊಂಡು ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದರು. ಈ ರೀತಿಯ ಯೋಜನೆ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ರೈತರ ಸಮಾವೇಶ ಮಾಡ್ತೀನಿ. ಯಾವಾಗಲೇ ಚುನಾವಣೆ ಬರಲಿ ಕಾರ್ಯಕರ್ತರು ಸದಾ ಸಿದ್ಧವಾಗಿ ಇರಬೇಕು. ಹೀಗಾಗಿ ಸಮಾವೇಶ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು ಎಂದು ಸೂಚನೆ ಕೊಟ್ಟ ದೇವೇಗೌಡರು ಸೆಪ್ಟೆಂಬರ್‍ನಲ್ಲಿ ರೈತರ ಸಮಾವೇಶ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ-ಪಂಗಡಗಳ ಮೂರು ಸಮಾವೇಶ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

  • ದೇವೇಗೌಡ ಏನು ಅನ್ನೊದನ್ನ ಮೋದಿಗೆ ತೋರಿಸ್ತೀನಿ, ನೋಡ್ತಾ ಇರಿ: ಎಚ್‍ಡಿಡಿ ಸವಾಲು

    ದೇವೇಗೌಡ ಏನು ಅನ್ನೊದನ್ನ ಮೋದಿಗೆ ತೋರಿಸ್ತೀನಿ, ನೋಡ್ತಾ ಇರಿ: ಎಚ್‍ಡಿಡಿ ಸವಾಲು

    ತುಮಕೂರು: ದೇವೇಗೌಡ ಏನು ಅನ್ನೊದನ್ನ ಮೋದಿಗೆ ತೋರಿಸ್ತೀನಿ, ನೋಡ್ತಾ ಇರಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇಂದು ಜಿಲ್ಲೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಸವಾಲು ಹಾಕಿದ್ದಾರೆ.

    ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ವ್ಯವಸ್ಥೆ ನಾಶವಾಗಲು ಮೋದಿಯೇ ಕಾರಣ. ಕಳೆದ ಲೋಕಸಭೆಯಲ್ಲಿ ನಾನು, ಚುನಾವಣೆಗೆ ನಿಲ್ಲಲ್ಲ ಅಂತ ಹೇಳಿದ್ದೆ. ಆದ್ರೆ ಆ ವಿಧಿ ಚುನಾವಣೆಗೆ ನಿಲ್ಲುವಂತೆ ಮಾಡಿತು. ದೇವೇಗೌಡರು ಏನು ಅನ್ನೋದನ್ನ ಮೋದಿಗೆ ತೋರಿಸ್ತಿನಿ. ನೋಡ್ತಾ ಇರಿ ಎಂದು ವಾಗ್ದಾಳಿ ನಡೆಸಿದರು.

    ನಾನು ಯಾವಾಗಲು ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡ್ತೇನೆ. ನಾನು ನೀರಾವರಿ ಮಂತ್ರಿಯಾದಗಿನಿಂದಲೂ ಕುಡಿಯುವ ನೀರಿಗೆ ಆದ್ಯತೆ ಕೊಟ್ಟಿದ್ದೇನೆ. ನಿಮ್ಮೆಲ್ಲರ ಮುಂದೆ ಕೈ ಮುಗಿಯುತ್ತೇನೆ. ನನಗೆ ಇದೊಂದು ಪರೀಕ್ಷೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದರೆ ನಿಮ್ಮ ಆಶಿರ್ವಾದ ಬೇಕಿದೆ. ನನ್ನನ್ನು ಆ ವಿಧಿಯೇ ಚುನಾವಣೆ ತನಕ ಎಳೆಕೊಂಡು ಬಂದಿದೆ. ದಯವಿಟ್ಟು ಚುನಾವಣೆಯಲ್ಲಿ ಬೆಂಬಲ ನೀಡಿ ಎಂದು ಹೆಚ್‍ಡಿಡಿ ಮನವಿ ಮಾಡಿಕೊಂಡರು.

  • ದೇವೇಗೌಡರರು ತಮ್ಮ ಸ್ಥಾನವನ್ನು ನನಗೆ ಧಾರೆ ಎರೆದಿದ್ದಾರೆ: ಪ್ರಜ್ವಲ್ ರೇವಣ್ಣ

    ದೇವೇಗೌಡರರು ತಮ್ಮ ಸ್ಥಾನವನ್ನು ನನಗೆ ಧಾರೆ ಎರೆದಿದ್ದಾರೆ: ಪ್ರಜ್ವಲ್ ರೇವಣ್ಣ

    – ಈ ಬಾರಿ ಮಾತ್ರವಲ್ಲ ಮುಂದಿನ ಚುನಾವಣೆಗೂ ನಾವು ಸಜ್ಜಾಗಿದ್ದೇವೆ

    ಹಾಸನ: ದೇವೇಗೌಡರು ತಮ್ಮ ಸ್ಥಾನವನ್ನು ನನಗೆ ಧಾರೆ ಎರೆದಿದ್ದಾರೆ. ಟೀಕೆ ಬೇಡ ನಾವು ಅಭಿವೃದ್ಧಿ ಕಡೆ ದೃಷ್ಟಿ ಹರಿಸೋಣ. ಹಾಸನದಲ್ಲಿ ಬಿಜೆಪಿ ಬಾವುಟ ಕಿತ್ತು ಹಾಕಿ ಜೆಡಿಎಸ್ ಬಾವುಟ ಹಾರಿಸಬೇಕಿದೆ ಎಂದು ಪ್ರಜ್ವಲ್ ರೇವಣ್ಣ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಾಸನವನ್ನ ಜೆಡಿಎಸ್ ಭದ್ರಕೋಟೆಯನ್ನಾಗಿ ಮಾಡಬೇಕು. ಕೇವಲ ಲೋಕಸಭಾ ಚುನಾವಣೆ ಮಾತ್ರವಲ್ಲ, ಮುಂದಿನ ವಿಧಾನಸಭೆ ಚುನಾವಣೆಗೆ ಈಗಲೇ ನಾವು ಸಜ್ಜಾಗುತ್ತಿದ್ದೇವೆ. ಯಾವುದೇ ಕಾರ್ಯಕರ್ತರಿಗೆ ಕಷ್ಟ ಬಂದರೆ ಸ್ಪಂದಿಸುವ ಶಕ್ತಿಯನ್ನ ನನ್ನ ತಂದೆ ತಾಯಿ ನೀಡಿದ್ದಾರೆ. ಬಹಳಷ್ಟು ಮನೆಗೆ ದೇವೇಗೌಡರು ದೀಪ ಬೆಳಗಿಸಿದ್ದಾರೆ. ದೇವೇಗೌಡರು ನಮಗೆ ಅವರ ಸ್ಥಾನವನ್ನು ನನಗೆ ಧಾರೆ ಎರೆದಿದ್ದಾರೆ. ಹಿರಿಯ ಕಾರ್ಯಕರ್ತರು ಮತ್ತು ಹಿರಿಯರ ಸಲಹೆ ಪಡೆದು ಜನಪರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಟೀಕೆ ಬೇಡ ನಾವು ಅಭಿವೃದ್ಧಿ ಕಡೆ ದೃಷ್ಟಿ ಹರಿಸೋಣ. ಟೀಕೆ ಎಂಬ ಪದವನ್ನ ನಾನು ಉಪಯೋಗಿಸಲ್ಲ. ಹಾಗೆಯೇ ಅತೀ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇನೆ ಎಂದು ಪ್ರಜ್ವಲ್ ವಿಶ್ವಾಸ ವ್ಯಕ್ತಪಡಿಸಿದ್ದು, ಮಾರ್ಚ್ 22ರಂದು ನಾಮಪತ್ರ ಸಲ್ಲಿಸಲು ನಮ್ಮ ಹಿರಿಯರು ನಿಗದಿ ಮಾಡಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಪ್ರಜ್ವಲ್ ಅವರನ್ನು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು. ಪ್ರಜ್ವಲ್‍ರನ್ನ ಗೆಲ್ಲಿಸಿಕೊಡಿ ಎಂದು ಭವಾನಿ ರೇವಣ್ಣ ಜನರಲ್ಲಿ ಮನವಿ ಮಾಡಿದರು. ಅಲ್ಲದೆ ಕೆಲ ಬಿಜೆಪಿ ಕಾರ್ಯಕರ್ತರು ಜೆಡಿಎಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ಹೇಳಿದರು.

  • ಅಡ್ಜಸ್ಟ್ ಮೆಂಟ್ ರಾಜಕೀಯ ವದಂತಿಗೆ ಹೆಚ್‍ಡಿಡಿ ಸ್ಪಷ್ಟನೆ

    ಅಡ್ಜಸ್ಟ್ ಮೆಂಟ್ ರಾಜಕೀಯ ವದಂತಿಗೆ ಹೆಚ್‍ಡಿಡಿ ಸ್ಪಷ್ಟನೆ

    ಕೋಲಾರ: ಕಾಂಗ್ರೆಸ್ ಜೊತೆ ಜೆಡಿಎಸ್ ಹೊಂದಾಣಿಕೆ ನಡೆಸುತ್ತಿದೆ ಅಂತ ಕೆಲವರಿಗೆ ಅನುಮಾನ ಕಾಡ್ತಿದೆ. ಆದ್ರೆ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಅಂತಾ ಮಾಜಿ ಪ್ರಧಾನಿ ಹೆಚ್‍ಡಿಡಿ ಸ್ಪಷ್ಟಪಡಿಸಿದ್ದಾರೆ.

    ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದ ನೂತನ ಕಚೇರಿ ಹಾಗು ಸಮಾವೇಶದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟನೆ ಮತ್ತು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪ್ರಜ್ವಲ್ ರೇವಣ್ಣಗೆ ನೀಡಿದ್ದೇವೆ. ಚನ್ನಪಟ್ಟಣದಿಂದ ಸ್ಪರ್ಧಿಸುವಂತೆ ಅನಿತಾ ಕುಮಾರಸ್ವಾಮಿಗೆ ಎಲ್ಲರೂ ಒತ್ತಡ ಹೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ತೀವಿ ಅಂದ್ರು.

    ಅನಿತಾ ಕುಮಾರಸ್ವಾಮಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದರಿಂದ ಬೇರೆ ಬೇರೆ ಆಪಾದನೆಗಳು ಕೇಳಿಬಂದಿವೆ. ಜೊತೆಗೆ ಬೆಂಗಳೂರಿನ ಕೆಂಪೇಗೌಡ ಜಯಂತಿಯಲ್ಲಿ ಶಿವಕುಮಾರ್ ನನ್ನ ಕಾಲಿಗೆರಗಿದ್ದಕ್ಕೂ ಕೂಡ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದು ಸಾಕಷ್ಟು ಅನುಮಾನ ಕೆಲವರಿಗೆ ಕಾಡ್ತಿದೆ. ಆದ್ರೆ ಜೆಡಿಎಸ್ ಕಾಂಗ್ರೆಸ್ ನೊಂದಿಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅದು ರಾಜ್ಯದ 224 ಕ್ಷೇತ್ರ, ಅದರಲ್ಲೂ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರ ಕ್ಷೇತ್ರ ಒಳಗೊಂಡಂತೆ ಯಾವುದೇ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಅಂತ ಸ್ಪಷ್ಟಪಡಿಸಿದ್ರು.

    ಕೋಲಾರ ಹಾಗೂ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ 9 ಜನ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದ್ರು.

    ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ನನ್ನನ್ನು ಅಣ್ಣ ಅಂತ ತಿಳಿದುಕೊಂಡಿದ್ದಾರೆ- ಅಡ್ಜಸ್ಟ್ ಮೆಂಟ್ ರಾಜಕಾರಣ ಸುದ್ದಿಗೆ ಡಿಕೆಶಿ ಸ್ಪಷ್ಟನೆ

    ಇದನ್ನೂ ಓದಿ: ಚುನಾವಣೆ ಬರುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್?

    ಇದನ್ನೂ ಓದಿ: ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರಾ: ಎಚ್‍ಡಿಕೆ ಹೇಳಿದ್ದು ಹೀಗೆ