ತುಮಕೂರು: ಕೆಲ ದಿನಗಳ ಹಿಂದೆ ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ಕೊಟ್ಟಿದ್ದ ಚಿಕ್ಕನಾಯನಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು ಇದೀಗ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆ ಗಿಫ್ಟ್ ನೀಡಿದ್ದಾರೆ.

ಶುಕ್ರವಾರ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಮಹಿಳೆಯರಿಗೆ ಮಡಿಲು ತುಂಬುವ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮಹಿಳಾ ಮತದಾರರಿಗೆ ಸೀರೆ ಗಿಫ್ಟ್ ನೀಡಲಾಗಿದೆ. ಶಾಸಕರು ತಮ್ಮ ಬೆಂಬಲಿಗರ ಮೂಲಕ ಚಿಕ್ಕನಾಯಕಯನಹಳ್ಳಿ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆ ಕೂಪನ್ ವಿತರಿಸಿದ್ದರು. ಹೀಗಾಗಿ ಸೀರೆ ಸಿಗುವ ಆಸೆಯಿಂದ ಸಾವಿರಾರು ಮಹಿಳೆಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ಸೀರೆ ಹಂಚಿಕೆ ಮಾಡಲಾಯ್ತು. ಸೀರೆ ಪಡೆಯಲು ಮಹಿಳೆಯರು ದೌಡಾಯಿಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ನೂಕುನುಗ್ಗಲು ಉಂಟಾಗಿತ್ತು. ಕೆಲವರು ಕೂಪನ್ ಕೊಟ್ಟು ಮಹಿಳೆಯರು ಸೀರೆ ಪಡೆದು ಮನೆಯತ್ತ ನಡೆದರೆ ಮತ್ತೆ ಕೆಲವರು ಸೀರೆ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.








