Tag: ಜೆಡಿಎಸ್ ಶಾಸಕರು

  • ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಿ – ಜೆಡಿಎಸ್ ಶಾಸಕರ ಆಗ್ರಹ

    ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಿ – ಜೆಡಿಎಸ್ ಶಾಸಕರ ಆಗ್ರಹ

    ಬೆಂಗಳೂರು: ಆನೆ, ಕಾಡು ಪ್ರಾಣಿಗಳಿಂದ ಮೃತರಾದವರಿಗೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಮೃತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ಹಾಸನದಲ್ಲಿ (Hassan) ಆನೆ ಕಾರಿಡಾರ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಹಾಸನ ಜೆಡಿಎಸ್ ಶಾಸಕರು (JDS) ಇಂದು ಪ್ರತಿಭಟನೆ ನಡೆಸಿದರು.

    ವಿಧಾನಸೌಧದ (Vidhan Soudha) ಗಾಂಧಿ ಪ್ರತಿಮೆ ಮುಂದೆ ಶಾಸಕರಾದ ಎ.ಟಿ. ರಾಮಸ್ವಾಮಿ (A.T.Ramaswamy), ಹೆಚ್.ಕೆ. ಕುಮಾರಸ್ವಾಮಿ (H.K.Kumaraswamy), ಲಿಂಗೇಶ್ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಟಿ ರಾಮಸ್ವಾಮಿ, ಆನೆ, ಕಾಡು ಪ್ರಾಣಿ ಹಾವಳಿಯಿಂದ ಬೆಳೆ ಹಾನಿಯಾಗಿದೆ. ಆನೆ ದಾಳಿಯಿಂದ ಜನರು ಸತ್ತಿದ್ದಾರೆ. ಸದನದಲ್ಲಿ ಸಿಎಂ ಅವರು ಕಾಡು ಪ್ರಾಣಿ ದಾಳಿಯಿಂದ ಬೆಳೆ ಹಾನಿಗೆ ಪರಿಹಾರ ಡಬಲ್ ಮಾಡೋದಾಗಿ ಹೇಳಿದ್ರು. ಆದರೆ ಪರಿಹಾರ ಡಬಲ್ ಮಾಡಿಲ್ಲ. ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಆನೆಗಳ ಹಾವಳಿ ತಡಗೆ ಕಾರಿಡಾರ್ ನಿರ್ಮಾಣ ಮಾಡಬೇಕು. ಆನೆಗಳ ಸಂಖ್ಯೆ ಕಡಿಮೆ ಮಾಡಲು ಕ್ರಮ ಆಗಬೇಕು. ಚಿರತೆಗಳು, ಕೋತಿಗಳು, ಕಾಡು ಹಂದಿಗಳಿಂದ ಬೆಳೆ ನಾಶ ಆಗ್ತಿದೆ. ಇದಕ್ಕೆ ‌ಪರಿಹಾರ ಕೊಡಬೇಕು. ಸರ್ಕಾರ ಕೊಟ್ಟ ಮಾತಿನಂತೆ ಪರಿಹಾರ ನೀಡಬೇಕು. ಸಿಎಂ ಕೂಡಲೇ ಕೊಟ್ಟ ಮಾತು ಈಡೇರಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶಾಸಕ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ- ಹಣ ಕೇಳಿದ ಕಿಡಿಗೇಡಿಗಳು

    ಶಾಸಕ ಹೆಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕಾಡು ಪ್ರಾಣಿಗಳಿಂದ ದೊಡ್ಡ ಸಮಸ್ಯೆ ಆಗ್ತಿದೆ. ಕೂಡಲೇ ವೈಜ್ಞಾನಿಕವಾಗಿ ಕಾಡು ಪ್ರಾಣಿ ಕಡಿಮೆ ಮಾಡುವ ಕೆಲಸ ಮಾಡಬೇಕು. ಜನರು ನಮ್ಮ ಮೇಲೆ ಕೋಪ ಮಾಡಿಕೊಳ್ತಿದ್ದಾರೆ. ಸಿಎಂ ಪರಿಹಾರ ಹೆಚ್ಚಳ ಮಾಡೋದಾಗಿ ಹೇಳಿದ್ದಾರೆ. ಇನ್ನು ಆದೇಶ ಆಗಬೇಕು. ಕೂಡಲೇ ಆದೇಶ ಆಗಬೇಕು. ಕೂಡಲೇ ಆನೆ ಕಾರಿಡಾರ್ ನಿರ್ಮಾಣ ಮಾಡಬೇಕು. ಕಾಡು ಪ್ರಾಣಿ ದಾಳಿಯಿಂದ ಮೃತರಾದವರಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು.

    ಶಾಸಕ ಲಿಂಗೇಶ್ ಮಾತನಾಡಿ, ಕಾಡು ಪ್ರಾಣಿಗಳಿಂದ ಮಕ್ಕಳನ್ನ ಕಳೆದುಕೊಂಡವರಿಗೆ ನೋವು ಗೊತ್ತಿರುತ್ತೆ. ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲವಾ ಅಂತ ಪ್ರಶ್ನೆ ಮಾಡಿದರು. ಕೋಮು ದಾಳಿಯಿಂದ ಸತ್ತವರಿಗೆ 25 ಲಕ್ಷ ರೂ. ಕೊಡ್ತೀರಾ. ಹಾಗೆಯೇ ಆನೆ ದಾಳಿಯಿಂದ ಮೃತರಾದರಿಗೆ 25 ಲಕ್ಷ ಕೊಡಬೇಕು. ಮೃತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ಸಚಿವ ಶ್ರೀರಾಮುಲು ಪ್ರತಿಭಟನೆ

    Live Tv
    [brid partner=56869869 player=32851 video=960834 autoplay=true]

  • ಕೆಆರ್‌ಎಸ್ ಡ್ಯಾಮ್‍ಗೆ ಜೆಡಿಎಸ್ ಶಾಸಕರಿಂದ ದೃಷ್ಟಿ ದೋಷ ಹೋಮ

    ಕೆಆರ್‌ಎಸ್ ಡ್ಯಾಮ್‍ಗೆ ಜೆಡಿಎಸ್ ಶಾಸಕರಿಂದ ದೃಷ್ಟಿ ದೋಷ ಹೋಮ

    ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಡ್ಯಾಂಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ದೃಷ್ಟಿ ದೋಷ ಪೂಜೆ ಹಾಗೂ ಹೋಮ-ಹವನವನ್ನು ಮಾಡಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಅಣೆಕಟ್ಟೆ ಕಳೆದ ಒಂದು ತಿಂಗಳಿನಿಂದ ವ್ಯಾಪಕ ಸುದ್ದಿಯಲ್ಲಿತ್ತು. ಸಂಸದೆ ಸುಮಲತಾ ಅಂಬರೀಶ್ ಗಣಿಗಾರಿಯಿಂದ ಕೆಆರ್‌ಎಸ್ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡುವ ಮೂಲಕ ಜೆಡಿಎಸ್ ನಾಯಕರು ಹಾಗೂ ಸುಮಲತಾ ಅವರ ನಡುವೆ ವಾಕ್ ಸಮರ ಏರ್ಪಟ್ಟಿತ್ತು. ಇದರ ಬೆನ್ನಲ್ಲೆ ಡ್ಯಾಂ ಪಕ್ಕದ ಮೆಟ್ಟಿಲಿನ ಗೋಡೆಯೂ ಸಹ ಕುಸಿದಿತ್ತು. ಈ ವೇಳೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸುಮಲತಾ ಅವರ ಕಣ್ಣು ಡ್ಯಾಂ ಮೇಲೆ ಬಿದ್ದಿದೆ. ಹೀಗಾಗಿ ದೃಷ್ಟಿ ದೋಷ ಪೂಜೆ ಮಾಡಿಸಬೇಕು ಎಂದಿದ್ದರು.

    ಈ ಹಿನ್ನೆಲೆ ಕೆಆರ್‌ಎಸ್ ಡ್ಯಾಂನ ಬಳಿ ಇರುವ ಕಾವೇರಿ ತಾಯಿ ಪ್ರತಿಮೆಯ ಮುಂಭಾಗ ಜ್ಯೋತಿಷಿ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ದೃಷ್ಟಿ ದೋಷ ಪೂಜೆ ಹಾಗೂ ಹೋಮ-ಹವನವನ್ನು ಮಾಡಿಸಿದರು. ಪೂಜೆಯಲ್ಲಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಪುಟ್ಟರಾಜು, ಅನ್ನದಾನಿ, ಎಂ.ಶ್ರೀನಿವಾಸ್, ಸುರೇಶ್‍ಗೌಡ ಭಾಗಹಿಸಿದರು.

    ಇದೇ ವೇಳೆ ದೃಷ್ಟಿ ದೋಷ ನಿವಾರಣೆ ಮಾಡಲು ಎಲ್ಲಾ ಶಾಸಕರು ಬೂದು ಕುಂಬಳಕಾಯಿಯಿಂದ ಡ್ಯಾಂ ದೃಷ್ಟಿ ತೆಗೆದು ಒಡೆದರು. ಬಳಿಕ ಡ್ಯಾಂನ ಮೂಲೆ ಮೂಲೆಗೂ ಬೂದು ಕುಂಬಳಕಾಯಿಯನ್ನು ಇಡಲಾಯಿತು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರುಗಳು, ಕೆಆರ್‍ಎಸ್ ಡ್ಯಾಂಗೆ ಒಳ್ಳೆಯದು ಆಗಬೇಕು ಎಂದು ಇಂದು ಪೂಜೆ ಹಾಗೂ ಹೋಮ-ಹವನವನ್ನು ಮಾಡಿಸಿದ್ದೇವೆ. ಕೆಲವರ ಕಣ್ಣು ಡ್ಯಾಂ ಮೇಲೆ ಬಿದ್ದಿದೆ. ಹೀಗಾಗಿ ದೃಷ್ಟಿಯನ್ನು ತೆಗೆಸಲಾಗಿದೆ. ಡ್ಯಾಂ ಆದಷ್ಟು ಬೇಗ ತುಂಬಲಿ ಎಂದು ಕಾವೇರಿ ತಾಯಿಯ ಬಳಿ ಪ್ರಾರ್ಥನೆ ಮಾಡಿದ್ದೇವೆ. ಹಾಗೂ ತಮಿಳುನಾಡಿನವರಿಗೆ ಒಳ್ಳೆಯ ಬುದ್ಧಿ ಕೊಟ್ಟು, ಮೇಕೆದಾಟು ಯೋಜನೆ ಆದಷ್ಟು ಬೇಗ ಪ್ರಾರಂಭವಾಗಲಿ ಎಂದು ತಾಯಿ ಬಳಿ ಪಾರ್ಥನೆ ಮಾಡಿದ್ದೇವೆ ಎಂದರು. ಇದನ್ನೂ ಓದಿ : ಇಂದು ಜೆಡಿಎಸ್ ಶಾಸಕರಿಂದ ಕೆಆರ್‌ಎಸ್‌ ಡ್ಯಾಂಗೆ ದೃಷ್ಟಿ ಪೂಜೆ

  • ಇಂದು ಜೆಡಿಎಸ್ ಶಾಸಕರಿಂದ ಕೆಆರ್‌ಎಸ್‌ ಡ್ಯಾಂಗೆ ದೃಷ್ಟಿ ಪೂಜೆ

    ಇಂದು ಜೆಡಿಎಸ್ ಶಾಸಕರಿಂದ ಕೆಆರ್‌ಎಸ್‌ ಡ್ಯಾಂಗೆ ದೃಷ್ಟಿ ಪೂಜೆ

    ಮಂಡ್ಯ: ಜೆಡಿಎಸ್ ಶಾಸಕರು ಇಂದು ಕೆಆರ್‌ಎಸ್‌ನಲ್ಲಿ ದೃಷ್ಟಿ ಪೂಜೆಯನ್ನು ಆಯೋಜಿಸಿದ್ದಾರೆ

    ಡ್ಯಾಂ ಬಿರುಕು ವಿಚಾರವಾಗಿ ನಡೆಯುತ್ತಿರುವ ಆರೋಪ, ಪ್ರತ್ಯಾರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಇಂದು ಕೆಆರ್‍ಎಸ್ ಡ್ಯಾಂನ ಕಾವೇರಿ ಪ್ರತಿಮೆ ಬಳಿ ದೃಷ್ಟಿ ನಿವಾರಣೆ ಪೂಜೆ ಹಮ್ಮಿಕೊಂಡಿದ್ದಾರೆ.

    ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಈ ಪೂಜೆ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಹೋಮ, ಹವನಗಳ ಮೂಲಕ ಡ್ಯಾಂಗೆ ತಾಗಿರುವ ದೃಷ್ಟಿ ನಿವಾರಣೆ ಮಾಡಲು ಜೆಡಿಎಸ್ ಶಾಸಕರು ಮುಂದಾಗಿದ್ದಾರೆ.

    ಈ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಡ್ಯಾಂಗೆ ದೃಷ್ಟಿ ತಾಗಿದೆ ಎಂದಿದ್ದರು. ಸಂಸದೆ ಸುಮಲತಾ ಅವರು ಇತ್ತೀಚೆಗೆ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಕೆಆರ್‌ಎಸ್‌ನಲ್ಲಿ ಮೆಟ್ಟಿಲುಗಳ ಗೋಡೆ ಕುಸಿತವಾಗಿತ್ತು. ಇದನ್ನೂ ಓದಿ : ಇಂದು ಕ್ಲೈಮ್ಯಾಕ್ಸ್ – ಸಿಎಂ ಬಿಎಸ್‍ವೈ ಕಾರ್ಯಕ್ರಮಗಳು ಏನು?

  • ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ: ಹೆಚ್‍ಡಿಡಿ ನೇತೃತ್ವದಲ್ಲಿ ಸಭೆ

    ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರ ಆಕ್ರೋಶ: ಹೆಚ್‍ಡಿಡಿ ನೇತೃತ್ವದಲ್ಲಿ ಸಭೆ

    ಹಾಸನ: ಕೊರೊನಾ ಸಂಕಷ್ಟದಲ್ಲೂ ಹಾಸನ ಜಿಲ್ಲೆಗೆ ರಾಜ್ಯ ಸರ್ಕಾರಿಂದ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಜೆಡಿಎಸ್ ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

    ಇಂದು ಮಾಜಿ ಪ್ರಧಾನಿ ದೇವೇಗೌಡರು ಹಾಸನಕ್ಕೆ ಭೇಟಿ ನೀಡಿ ಜನಸಾಮಾನ್ಯರಿಗೆ ಹಂಚಲು ಆಹಾರ ಧಾನ್ಯಗಳ ಕಿಟ್ ಅನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಕರ್ತರೊಂದಿಗೆ ಮಾಜಿ ಪ್ರಧಾನಿ ದೇವೇಗೌಡರು ಸಂಸದರ ನಿವಾಸದಲ್ಲಿ ಚರ್ಚೆ ನಡೆಸಿದರು.

    ಈ ವೇಳೆ ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಜೆಡಿಎಸ್ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದರು. ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ, ಕೊರೊನಾ ಎಂದುಕೊಂಡು ನಮಗೆ ಯಾವ ಅನುದಾನ ಕೊಟ್ಟಿಲ್ಲ ಎಂದರು. ಆಗ ಮಾತನಾಡಿದ ಹೆಚ್‍ಡಿ.ರೇವಣ್ಣ, ಸರ್ಕಾರದಿಂದ ಬಂದ ಹಣ ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂದರೆ ಉಸಿರಿಲ್ಲ. ಹೆಚ್ಚಿನ ಬೆಲೆಗೆ ದಿನಸಿ ಮಾರಾಟ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮವಿಲ್ಲ, ಜಿಲ್ಲಾಡಳಿತ ಸತ್ತು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಧ್ವನಿಗೂಡಿಸಿದ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ, ಕಾರ್ಡ್ ಇಲ್ಲದವರಿಗೂ ರೇಷನ್ ಕೊಡುತ್ತೇವೆ ಅಂದರು. ಇದುವರೆಗೂ ಯಾರಿಗೆ ಕೊಟ್ಟಿದ್ದಾರೆ. ನಮ್ಮ ನಮ್ಮ ತಾಲೂಕು ಉಳಿಸಿಕೊಳ್ಳೋಣ ನಡೀರಿ ಈ ಕಷ್ಟ ಕಾಲದಲ್ಲಿ ಇದರ ಬಗ್ಗೆ ಮಾತನಾಡುವುದು ಬೇಡ ಎಂದು ಚರ್ಚೆಗೆ ಫುಲ್ ಸ್ಟಾಪ್ ಇಟ್ಟರು.