Tag: ಜೆಡಿಎಸ್ ಮುಖಂಡರು

  • ಹೇಮಾವತಿ ನೀರಿಗಾಗಿ ಹಾಸನದಲ್ಲಿ ಬೀದಿಗಿಳಿದ ರೈತರು, ಜೆಡಿಎಸ್ ಮುಖಂಡರು

    ಹೇಮಾವತಿ ನೀರಿಗಾಗಿ ಹಾಸನದಲ್ಲಿ ಬೀದಿಗಿಳಿದ ರೈತರು, ಜೆಡಿಎಸ್ ಮುಖಂಡರು

    ಹಾಸನ: ಇಡೀ ದೇಶವೇ ಕೊರೊನಾದಿಂದ ತತ್ತರಿಸುತ್ತಿದ್ದರೆ ಇತ್ತ ಹಾಸನ ಜಿಲ್ಲೆಯ ರೈತರು ನಮಗೇ ಕುಡಿಯಲು ನೀರಿಲ್ಲದ ಸಮಯದಲ್ಲಿ ಹೇಮಾವತಿ ಅಣೆಕಟ್ಟೆಯಿಂದ ತುಮಕೂರಿಗೆ ನೀರು ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ನಮಗೂ ನೀರು ಕೊಡಿ ಎಂದು ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ.

    ಸರ್ಕಾರ ಕುಡಿಯುವ ನೀರಿನ ನೆಪದಲ್ಲಿ ಹೇಮಾವತಿ ಅಣೆಕಟ್ಟೆಯಿಂದ ತುಮಕೂರಿಗೆ ನೀರು ಬಿಡಲು ಹೊರಟಿದೆ. ಆದರೆ ಹಾಸನ ಜಿಲ್ಲೆಯಲ್ಲೂ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದು, ಈ ಬಗ್ಗೆ ಮಾತ್ರ ಯೋಚನೆ ಮಾಡುತ್ತಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ಆಗಿರುವ ಮಾಧುಸ್ವಾಮಿ ತುಮಕೂರಿಗೆ ನೀರು ಬಿಡಲು ಹೊರಟಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.

    ತುಮಕೂರಿಗೆ ನೀರು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಈ ವೇಳೆ ಹಾಸನ ಜಿಲ್ಲೆಯ ಜನರಿಗೂ ನೀರು ಕೊಡಬೇಕು ಎಂದು ಹಾಸನದ ಕಾರ್ಲೆ ಗ್ರಾಮದಲ್ಲಿ ಹೇಮಾವತಿ ಎಡದಂಡೆ ನಾಲೆ ಪಕ್ಕ ನಿಂತು ಆಕ್ರೋಶ ಹೊರಹಾಕಿದ್ದಾರೆ. ಈಗ ಕೊರೊನಾ ಸಮಯ ಮನೆಯಿಂದ ಅನಾವಶ್ಯಕವಾಗಿ ಹೊರ ಬರಬಾರದು. ಆದರೆ ನಮಗೆ ಕೊರೊನಾಗಿಂತ ನೀರೇ ಮುಖ್ಯವಾಗಿದ್ದು, ಹೀಗಾಗಿ ಅನಿವಾರ್ಯವಾಗಿ ಬೀದಿಗಿಳಿಯಬೇಕಾಗಿದೆ ಎಂದು ರೈತರು ಮತ್ತು ಜೆಡಿಎಸ್ ಮುಖಂಡರು ಕಿಡಿಕಾರಿದರು.

  • ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತೆ, ಸಿನಿಮಾ ತಿಂಗಳಿಗೊಂದು ಬರುತ್ತೆ ಆಗ ಬುದ್ಧಿ ಕಲಿಸ್ತೀವಿ: ಜೆಡಿಎಸ್ ಮುಖಂಡ

    ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತೆ, ಸಿನಿಮಾ ತಿಂಗಳಿಗೊಂದು ಬರುತ್ತೆ ಆಗ ಬುದ್ಧಿ ಕಲಿಸ್ತೀವಿ: ಜೆಡಿಎಸ್ ಮುಖಂಡ

    ಮಂಡ್ಯ: ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತೆ, ಆದ್ರೆ ಸಿನಿಮಾ ತಿಂಗಳಿಗೊಂದು ಬರುತ್ತೆ. ಅವರ ಸಿನೆಮಾವನ್ನೇ ನೋಡದೇ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅಭಿಮಾನಿಗಳು ಬುದ್ಧಿ ಕಲಿಸುತ್ತಾರೆ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಜೆಡಿಎಸ್ ಮುಖಂಡ ನಲ್ಲಿಗೆರೆ ಬಾಲು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿನ ಅವರು, ಯಶ್ ಹಾಗೂ ದರ್ಶನ್ ಬಗ್ಗೆ ಮಾತನಾಡಿದರೆ ಅವರ ಅಭಿಮಾನಿಗಳು ರಾಜ್ಯಾದ್ಯಂತ ಉತ್ತರ ಕೊಡುತ್ತಾರೆ ಎಂಬ ಸುಮಲತಾ ಅಂಬರೀಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ನಾಗಮಂಗಲದಲ್ಲಿ ಜೆಡಿಎಸ್ ಸಭೆ ಆರಂಭಕ್ಕೂ ಮುನ್ನ ಸುಮಲತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜ್ಯಾದ್ಯಂತ ದೇವೇಗೌಡರು, ಕುಮಾರಸ್ವಾಮಿ ಅಭಿಮಾನಿಗಳಿದ್ದಾರೆ. ನಾವು ದುಡ್ಡುಕೊಟ್ಟು ನಟರ ಸಿನಿಮಾ ನೋಡುತ್ತಿದ್ದೇವೆ. ಇನ್ಮುಂದೆ ಈ ಭಾಗದಲ್ಲಿ ನಾವು ದರ್ಶನ್, ಯಶ್ ಸಿನಿಮಾವನ್ನು ನೋಡಲ್ಲ. ನಾವು ನೋಡದೇ ಇದ್ದರೆ ಅವರ ಸಿನಿಮಾ ಹೇಗೆ ಓಡುತ್ತದೆ ನೋಡೋಣ. ನಾವು ದುಡ್ಡು ಕೊಟ್ಟು ಸಿನಿಮಾ ನೋಡಿದ್ದರಿಂದ ಅವರು ಈಗ ರೀತಿ ಮಾತನಾಡುತ್ತಿದ್ದಾರೆ ಅಂತ ಕಿಡಿಕಾರಿದರು.

    ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತದೆ. ಅವರ ಸಿನಿಮಾ ತಿಂಗಳಿಗೊಂದು ಬರುತ್ತದೆ. ಅವರ ಸಿನೆಮಾವನ್ನೇ ನೋಡದೇ ದೇವೇಗೌಡರು, ಕುಮಾರಸ್ವಾಮಿ ಅಭಿಮಾನಿಗಳು ಬುದ್ಧಿ ಕಲಿಸುತ್ತಾರೆ. ಸುಮಲತಾ ಅವರು ತನ್ನ ಇನ್ನೊಂದು ಮುಖ ನೋಡಿಲ್ಲ ಅಂದಿದ್ದರು. ಆದಷ್ಟು ಬೇಗ ಅವರ ಇನ್ನೊಂದು ಮುಖ ತೋರಿಸಲಿ. ಪಕ್ಷದ ವರಿಷ್ಠರು ಅವರ ವಿರುದ್ಧ ಮಾತನಾಡಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ ಸುಮ್ಮನಿದ್ದೇವೆ. ಸಮಯ ಬಂದಾಗ ನಾವೇ ಉತ್ತರ ಕೊಡುತ್ತೇವೆ ಎಂದು ಸುಮಲತಾ ವಿರುದ್ಧ ಹರಿಹಾಯ್ದರು.