Tag: ಜೆಡಿಎಸ್ ಕಾರ್ಯಕರ್ತರು

  • ಚನ್ನಪಟ್ಟಣ ಟಿಕೆಟ್ ಜೆಡಿಎಸ್‌ಗೆ ಪಡೆಯುವಂತೆ ಕಾರ್ಯಕರ್ತರಿಂದ ಒತ್ತಡ – ಹೆಚ್‌ಡಿಕೆ ರಿಯಾಕ್ಷನ್‌ ಏನು?

    ಚನ್ನಪಟ್ಟಣ ಟಿಕೆಟ್ ಜೆಡಿಎಸ್‌ಗೆ ಪಡೆಯುವಂತೆ ಕಾರ್ಯಕರ್ತರಿಂದ ಒತ್ತಡ – ಹೆಚ್‌ಡಿಕೆ ರಿಯಾಕ್ಷನ್‌ ಏನು?

    ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು 3 ಕ್ಷೇತ್ರಗಳ ಉಪ ಚುನಾವಣೆ(Channapatna By Election) ಕುರಿತು ಭಾನುವಾರ (ಇಂದು) ಜೆಡಿಎಸ್ ಸಿದ್ಧತೆ ಸಭೆ ನಡೆಸಿತು. ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ಜಿಲ್ಲಾ ಅಧ್ಯಕ್ಷರು, ಹಾಲಿ, ಮಾಜಿ ಶಾಸಕರು ಸಭೆ ನಡೆಸಿದ್ರು.

    ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಗೆ ನಾಯಕರು ಜಿಲ್ಲಾ ಪ್ರವಾಸ ಮಾಡುವಂತೆ ನಿರ್ಣಯ ಅಂಗೀಕಾರ ಮಾಡಲಾಯ್ತು. ಇತ್ತ ಚನ್ನಪಟ್ಟಣ ಟಿಕೆಟ್ ಫೈನಲ್ ಮಾಡೋ ಬಗ್ಗೆ ಬಿಜೆಪಿ ಹೈಕಮಾಂಡ್ (BJP High Command) ನಾಯಕರ ಜೊತೆ ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿಯನ್ನ ಕಣಕ್ಕಿಳಿಸುವ ನಿರ್ಧಾರ ಮಾಡಲಾಯ್ತು. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಕ್ಷೇತ್ರವಾಗಿದ್ದು, ಜೆಡಿಎಸ್‌ಗೆ ಟಿಕೆಟ್ ಪಡೆಯುವಂತೆ ಸಭೆಯಲ್ಲಿ ಚನ್ನಪಟ್ಟಣ ನಾಯಕರು ಕುಮಾರಸ್ವಾಮಿಗೆ ಒತ್ತಡ ಹಾಕಿದ್ರು. ಇದನ್ನೂ ಓದಿ: 3,000ಕ್ಕೂ ಅಧಿಕ ಅಡಿಕೆ ಮರ, 200ಕ್ಕೂ ಅಧಿಕ ತೆಂಗಿನ ಮರಗಳು ನೆಲಸಮ

    \

    ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿ ನಿಲ್ಲಿಸಲಾಗುತ್ತದೆ ಅಂತ ಕುಮಾರಸ್ವಾಮಿ ನಾಯಕರಿಗೆ ಮನವರಿಕೆ ಮಾಡಿದರು. ಇದರ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಬಗ್ಗೆ ಸ್ವತಃ ಅಡ್ಡಗೋಡೆ ಮೇಲೆ ದೀಪ ಇಟ್ಡಂತೆ ಮಾತಾಡಿದ್ರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ & ಹತ್ಯೆ ಕೇಸ್‌; ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ

    ಸೋಮವಾರ (ಆ.19) ಬಿಜೆಪಿ ನಡೆಸುವ ಹೋರಾಟಕ್ಕೆ ಜೆಡಿಎಸ್ ಸಹ ಬೆಂಬಲ ಕೊಟ್ಟು ಹೋರಾಟ ಮಾಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆ ಬಳಿಕ ಮಾತನಾಡಿದ ನಿಖಿಲ್, ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ಒತ್ತಾಯ ಮಾಡಿದ್ರು. ಇದನ್ನೂ ಓದಿ: Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

  • ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರೋ ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ಕೊಡ್ತಾರೆ: ನಿಖಿಲ್‌ ಪ್ರಶ್ನೆ

    ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರೋ ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ಕೊಡ್ತಾರೆ: ನಿಖಿಲ್‌ ಪ್ರಶ್ನೆ

    ರಾಮನಗರ: ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರುವ ಸಿ.ಪಿ.ಯೋಗೇಶ್ವರ್‌ (CP Yogeshwar) ಅವರಿಗೆ 50 ಕೋಟಿ ಅನುದಾನ ಹೇಗೆ ಕೊಡುತ್ತಾರೆ ಎಂದು ಜೆಡಿಎಸ್‌ ಯುವಮೋರ್ಚಾ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಪ್ರಶ್ನಿಸಿದ್ದಾರೆ.

    ಚನ್ನಪಟ್ಟಣ (Channapatna) ಘಟನೆ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್‌, ನಮ್ಮ ಕಾರ್ಯಕರ್ತರ ವಿರುದ್ಧ FIR ಹಾಕಿದ್ದಾರೆ, ಇದು ಸರಿಯಲ್ಲ. ಯೋಗೇಶ್ವರ್ ಅವರ ಕಾರ್ಯಕರ್ತರ ವಿರುದ್ಧವೂ FIR ಹಾಕಲಿ. ನಮ್ಮ ಕಾರ್ಯಕರ್ತರು ಕಲ್ಲು ಹೊಡೆದಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷಿ ಇದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

    ಘಟನೆಗೆ ಮುಖ್ಯವಾಗಿ ರಾಮನಗರ ಎಸ್ಪಿ ಕಾರಣ. ನಿನ್ನೆಯ ಕಾರ್ಯಕ್ರಮಕ್ಕೆ ಜಿಲ್ಲಾ ಮಂತ್ರಿ ಅಶ್ವಥ್ ನಾರಾಯಣ ಅವರು ಬಂದಿಲ್ಲ. ಹಾಗಾಗಿ ಅವರು ಗೌರವ ಉಳಿಸಿಕೊಂಡಿದ್ದಾರೆ. ಸ್ಥಳೀಯ ಶಾಸಕರನ್ನ ಕಡೆಗಣಿಸಿ ಗುದ್ದಲಿಪೂಜೆ ಮಾಡೋದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.

    ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿ 14 ಜನರ ಮೇಲೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ನಾನು ಬ್ಲ್ಯಾಕ್‌ ಇದ್ದೇನೆ, ಆದ್ರೆ ಬ್ಲ್ಯಾಕ್‌ ಮೇಲರ್ ಅಲ್ಲ: ಹೆಚ್‌ಡಿಕೆ ಪಂಚ್

    ಘಟನೆಯೇನು?: ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿಗೆ ಸಿಎಂ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಭಯ ನಾಯಕರು ವಿಶೇಷ ಅನುದಾನಕ್ಕಾಗಿ ಸಿಎಂಗೆ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ ನಡೆದಿದೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಸಿ.ಪಿ. ಯೋಗೇಶ್ವರ್ ಕೋರಿಕೆ ಮೇರೆಗೆ ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣವಾಗಿತ್ತು.

    ಈ ಹಿನ್ನೆಲೆಯಲ್ಲಿ ಸಿಪಿ.ಯೋಗೇಶ್ವರ್ ನಡೆಗೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜೆಡಿಎಸ್ (JDS) ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಾರಿಗೆ ಜೆಡಿಎಸ್ (JDS) ಕಾರ್ಯಕರ್ತರಿಂದು ಮೊಟ್ಟೆ, ಕಲ್ಲು ಎಸೆದು ಆಕ್ರೋಶ ಹೊರಹಾಕಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಣೆಯಾಗಿದ್ದಾರೆ’ – 10 ದಿನಗಳಲ್ಲಿ ಹುಡುಕಿಕೊಡಿ ಎಂದ ಜೆಡಿಎಸ್ ಕಾರ್ಯಕರ್ತರು

    ‘ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಣೆಯಾಗಿದ್ದಾರೆ’ – 10 ದಿನಗಳಲ್ಲಿ ಹುಡುಕಿಕೊಡಿ ಎಂದ ಜೆಡಿಎಸ್ ಕಾರ್ಯಕರ್ತರು

    – ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ

    ಮಡಿಕೇರಿ: ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಬಾರದಿರುವ ಉಸ್ತುವಾರಿ ಸಚಿವರು ಮತ್ತು ಕೊಡಗು ಸಂಸದರನ್ನು ಹುಡುಕಿಕೊಡುವಂತೆ ಕೊಡಗು ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಎಸ್‍ಪಿಗೆ ದೂರು ನೀಡಿದ್ದಾರೆ.

    ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಆಗಮಿಸಿಲ್ಲ. ರಾಜ್ಯದಲ್ಲಿ ಕೊರೊನಾ ಆತಂಕ ತೀವ್ರವಾಗಿದ್ದು, ಜಿಲ್ಲೆಯಲ್ಲಿಯೂ ಈಗಾಗಲೇ ನಾಲ್ಕು ಸೋಂಕಿತ ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ ನೆರೆಯ ಕೇರಳದಲ್ಲಿ ಮತ್ತು ಪಕ್ಕದ ಜಿಲ್ಲೆ ಮೈಸೂರಿನಲ್ಲಿ ಹಕ್ಕಿ ಜ್ವರ ಕೂಡ ತೀವ್ರಗೊಂಡಿದೆ. ಇಷ್ಟೆಲ್ಲಾ ಆದರೂ ಉಸ್ತುವಾರಿ ಸಚಿವರು ಮತ್ತು ಸಂಸದರು ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕು ಎದುರಿಸುವುದಕ್ಕೆ ಅಗತ್ಯ ಔಷಧಿಗಳಿವೆಯಾ? ಅಥವಾ ಸೌಲಭ್ಯಗಳಿವೆಯಾ ಎಂದು ಪರಿಶೀಲನೆಯನ್ನೂ ಮಾಡಿಲ್ಲ. ಈ ಇಬ್ಬರನ್ನು ಯಾರಾದರೂ ಅಪಹರಣ ಮಾಡಿದ್ದಾರಾ? ಇಲ್ಲಾ ಕೊರೊನಾ ರೋಗವೇನಾದರೂ ಬಂದಿದೆಯಾ? ಇವೆಲ್ಲವನ್ನೂ ಪರಿಶೀಲಿಸಿ ಹುಡುಕಿಕೊಡಬೇಕು ಎಂದು ಎಸ್‍ಪಿಗೆ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ. 10 ದಿನಗಳಲ್ಲಿ ಉಸ್ತವಾರಿ ಸಚಿವ ಹಾಗೂ ಸಂಸದರನ್ನು ಹುಡುಕಿಕೊಡಬೇಕು ಇಲ್ಲದಿದ್ದರೆ ರಾಜ್ಯ ಉಚ್ಛನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಸ್‍ಪಿ ಸುಮನ್ ಡಿ.ಪಿ ಅವರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ಕೊರೊನಾ ನಿಯಂತ್ರಣಕ್ಕೆ ದೇವರ ಮೊರೆ ಹೋದ ಮಡಿಕೇರಿಯ ಜೆಡಿಎಸ್ ಕಾರ್ಯಕರ್ತರು

    ಕೊರೊನಾ ನಿಯಂತ್ರಣಕ್ಕೆ ದೇವರ ಮೊರೆ ಹೋದ ಮಡಿಕೇರಿಯ ಜೆಡಿಎಸ್ ಕಾರ್ಯಕರ್ತರು

    ಮಡಿಕೇರಿ: ರಾಜ್ಯಾದ್ಯಂತ ಕೊರೊನಾ ವೈರಸ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವಂತೆ ಕೊಡಗು ಜೆಡಿಎಸ್ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

    ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ನೇತೃತ್ವದಲ್ಲಿ ಮಡಿಕೇರಿಯ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಅರ್ಚನೆ ಮಾಡಿಸಿ ಕೊರೊನಾದಿಂದ ಜನರನ್ನು ರಕ್ಷಿಸುವಂತೆ ಪ್ರಾರ್ಥಿಸಿದರು. ಬಳಿಕ ನಗರದ ಜಾಮೀಯ ಮಸೀದಿಗೆ ತೆರಳಿದ ಜೆಡಿಎಸ್ ಮುಖಂಡರು ಮಸೀದಿಯ ಮೌಲ್ವಿ ಜೊತೆ ಸೇರಿ ಪ್ರಾರ್ಥನೆ ಸಲ್ಲಿಸಿದರು.

    ಈ ಮಹಾಮಾರಿಯಿಂದ ಜನರನ್ನು ರಕ್ಷಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಕೊಡಗಿನಲ್ಲಿ ಈಗಾಗಲೇ ಕೊರೋನಾ ವೈರಸ್ ಸೋಂಕು ಶಂಕಿತರ ಸಂಖ್ಯೆ ಮೂರರಕ್ಕೆ ಏರಿದ್ದು, ಇದು ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೆ ನೂಕಿದೆ. ಹೀಗಾಗಿ ಜನರು ಕೊರೊನಾದಿಂದ ರಕ್ಷಿಸುವಂತೆ ದೇವರ ಮೊರೆ ಹೋಗಿದ್ದಾರೆ.

    ವಿಶ್ವದಲ್ಲೇ ತಲ್ಲಣ ಉಂಟು ಮಾಡುತ್ತಿರುವ ಈ ಕೊರೊನಾ ವೈರಸ್ ಜನರನ್ನು ತೀವ್ರವಾಗಿ ಕಾಡುತ್ತಿದೆ. ಇದರಿಂದ ರಕ್ಷಣೆ ಪಡೆಯಲು ಮುಖ್ಯವಾಗಿ ಜನರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಿದರು.

  • 42 ನಿಮಿಷದಲ್ಲಿ 80 ಕಿ.ಮೀ ಸಂಚರಿಸಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಲುಪಿದ ಅಂಬುಲೆನ್ಸ್

    42 ನಿಮಿಷದಲ್ಲಿ 80 ಕಿ.ಮೀ ಸಂಚರಿಸಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಲುಪಿದ ಅಂಬುಲೆನ್ಸ್

    – ಜೆಡಿಎಸ್ ಕಾರ್ಯಕರ್ತರಿಂದ ಅಂಬುಲೆನ್ಸ್ ಸಿಬ್ಬಂದಿಗೆ ಸನ್ಮಾನ

    ಹಾವೇರಿ: ಪೊಲೀಸರ ನೆರವಿನಿಂದ ಅವಳಿ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಅಂಬುಲೆನ್ಸ್ ಸಿಬ್ಬಂದಿ ಹಾಗೂ ವೈದ್ಯರಿಗೆ ಇಂದು ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಸನ್ಮಾನ ಮಾಡಿ ಗೌರವಿಸಿದರು.

    ಜನವರಿ 27ರಂದು ಹಾವೇರಿ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದ ಅಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಲಕ್ಷ್ಮಿ ಎಂಬವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ಮಕ್ಕಳ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿತ್ತು.

    ತುರ್ತಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಅವಳಿ ಮಕ್ಕಳನ್ನು ರವಾನೆ ಮಾಡಬೇಕಾಗಿತ್ತು. ಅಂಬುಲೆನ್ಸ್ ಚಾಲಕ ತೌಫಿಕ್ ಪಠಾಣ್ ಮತ್ತು ಕುಮಾರ್ ಇಬ್ಬರು 42 ನಿಮಿಷಗಳಲ್ಲಿ 80 ಕಿ.ಮೀ ತಲುಪಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

    ಇಂದು ತೌಫಿಕ್ ಪಠಾಣ್ ಮತ್ತು ಕುಮಾರ್ ಅಂಬುಲೆನ್ಸ್ ಸಿಬ್ಬಂದಿ, ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ್ ನಾಯಕ ಹಾಗೂ ಸಿಬ್ಬಂದಿಗೆ ಜೆಡಿಎಸ್ ಮುಖಂಡರು ಸನ್ಮಾನ ಮಾಡಿ ಗೌರವಿಸಿದರು. ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

  • ಸೋತ ಸಿಟ್ಟಿಗೆ ಅವಾಚ್ಯ ಪದಗಳಿಂದ ಕೆ.ಆರ್ ಪೇಟೆ ಮತದಾರರಿಗೆ ನಿಂದನೆ

    ಸೋತ ಸಿಟ್ಟಿಗೆ ಅವಾಚ್ಯ ಪದಗಳಿಂದ ಕೆ.ಆರ್ ಪೇಟೆ ಮತದಾರರಿಗೆ ನಿಂದನೆ

    – ಜೆಡಿಎಸ್ ಕಾರ್ಯಕರ್ತರಿಗೆ, ಪೇಜ್ ಅಡ್ಮಿನ್‍ಗೆ ನೆಟ್ಟಿಗರಿಂದ ಕ್ಲಾಸ್
    – ಕೆ.ಆರ್.ಪೇಟೆ ಬಗ್ಗೆ ಮಾತನಾಡಲು ನೀವು ಯಾರು?

    ಮಂಡ್ಯ: ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು ಪಡೆದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಫೇಸ್‍ಬುಕ್ ಖಾತೆಯಲ್ಲಿ ಕ್ಷೇತ್ರದ ಮತದಾರರನ್ನು ನಿಂದಿಸಿ ಪೋಸ್ಟ್ ಮಾಡಲಾಗಿದೆ.

    ‘ನಿಖಿಲ್ ಕುಮಾರಸ್ವಾಮಿ ಸಪೋರ್ಟರ್ಸ್’ ಎಂಬ ಹೆಸರಿನ ಫೇಸ್‍ಬುಕ್ ಪೇಜ್‍ನಲ್ಲಿ ಡಿ.ಕೆ ಸಿನಿಮಾದ ವಿಡಿಯೋ ತುಣುಕನ್ನು ಹಾಕಿ ಅವಾಚ್ಯ ಶಬ್ದಗಳಿಂದ ಮತದಾರರನ್ನು ನಿಂದಿಸಲಾಗಿದೆ. ಕೆ.ಆರ್ ಪೇಟೆ ಮತದಾರರ ತಾಯಿ ಕುರಿತು ಅವಹೇಳನವಾಗಿ ಪೋಸ್ಟ್ ಹಾಕಲಾಗಿದೆ. ಮತದಾರರು ದುಡ್ಡಿಗಾಗಿ ತಾಯಿಯನ್ನೇ ಮಾರಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದು, ಈ ಬಗ್ಗೆ ಫೇಸ್‍ಬುಕ್ಕಿಗರು ಕಮೆಂಟ್ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಹಾಗೂ ಅಡ್ಮಿನ್‍ನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕೆ.ಆರ್ ಪೇಟೆಯ ಬಗ್ಗೆ ಮಾತನಾಡಲು ನೀವು ಯಾರು? ನೀವೇನ್ ಸಾಚಾನಾ? ಮೊದಲು ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಕಟ್ಟಿ, ಕೈಗೆ ಎಟುಕದ ದ್ರಾಕ್ಷಿಯನ್ನು ಹುಳಿ ಅಂತೀರಾ. ನೀವು ಎಂಪಿ ಚುನಾವಣೆಯಲ್ಲಿ ದುಡ್ಡು ಹಂಚಲಿಲ್ವಾ? ಬೇರೆ ಅವರಿಗೆ ಹೇಳೋ ಮುಂಚೆ ನೀವು ನೆಟ್ಟಗೆ ಇರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಹಲವಾರು ರೀತಿ ಕಮೆಂಟ್ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರಿಗೆ ಫೇಸ್‍ಬುಕ್ಕಿಗರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇದಲ್ಲದೇ ದೇವೇಗೌಡರ ಕೈ ಮುಗಿಯುವ ಫೋಟೋ ಒಂದನ್ನು ಹಾಕಿ ದಯವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಮರ್ಯಾದೆ ಕಳೆಯ ಬೇಡಿ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್‌ನ ಕುರಿತು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

  • ಮಸಾಲೆ ಜಯರಾಮ್ ಮೇಲೆ ಮುಗಿಬಿದ್ದ ಜೆಡಿಎಸ್ ಕಾರ್ಯಕರ್ತರು

    ಮಸಾಲೆ ಜಯರಾಮ್ ಮೇಲೆ ಮುಗಿಬಿದ್ದ ಜೆಡಿಎಸ್ ಕಾರ್ಯಕರ್ತರು

    ತುಮಕೂರು: ರಸ್ತೆ ಮತ್ತು ಚರಂಡಿ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಫೈಟ್ ನಡೆದಿದೆ. ಬಿಜೆಪಿ ಶಾಸಕರ ಮೇಲೆ ಜೆಡಿಎಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

    ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಸಂಪಿಗೆ ಹೊಸಳ್ಳಿಯ ಕುರುಬರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಶಾಸಕ ಮಸಾಲೆ ಜಯರಾಮ್ ಮೇಲೆ ಜೆಡಿಎಸ್ ಕಾರ್ಯಕರ್ತರು ಮುಗಿಬಿದ್ದು ತಳ್ಳಾಟ ನೂಕಾಟ ನಡೆಸಿದ್ದಾರೆ. ಶಾಸಕರ ಮೇಲೆ ಕೈ ಕೈ ಮಿಲಾಯಿಸಲೂ ಮುಂದಾಗಿದ್ದಾರೆ.

    ಈ ವೇಳೆ ಶಾಸಕರ ರಕ್ಷಣೆ ನೀಡಿ ಬಿಜೆಪಿ ಮುಖಂಡರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕುರುಬರಹಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮೊದಲು ಚರಂಡಿಮಾಡಿ ಎಂದು ಜೆಡಿಎಸ್ ಕಾರ್ಯಕರ್ತರ ಬೇಡಿಕೆ ಇಟ್ಟಿದ್ದಾರೆ. ಚರಂಡಿ ಮಾಡುತ್ತೇವೆ ಎಂದು ಶಾಸಕರು ಭರವಸೆ ಕೊಟ್ಟರೂ ಸುಮ್ಮನಾಗದ ಜೆಡಿಎಸ್ ಕಾರ್ಯಕರ್ತರು ಶಾಸಕರೊಂದಿಗೆ ವಾಗ್ವಾದ ಮಾಡಿದ್ದಾರೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಈ ಗಲಾಟೆಯಲ್ಲಿ ಮೊದಲು ಜೆಡಿಎಸ್ ಕಾರ್ಯಕರ್ತರು ರಾಜಕಾರಣ ಮಾಡಬೇಡಿ. ಮೊದಲು ಊರು ಸರಿ ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಜಯರಮ್ ನನಗೆ ರಾಜಕಾರಣ ಮಾಡೋದು ಗೊತ್ತು. ಊರು ಅಭಿವೃದ್ಧಿ ಮಾಡೋದು ಗೊತ್ತು ಎಂದು ಹೇಳಿದ್ದಾರೆ. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಏನ್ ಮಾಡಿದ್ದೀರಾ ನೀವು ಎಂದು ಜಗಳ ತೆಗೆದಿದ್ದಾರೆ. ಇದಕ್ಕೆ ಕೋಪಗೊಂಡ ಜಯರಾಮ್ ಏನ್ ನೀವು ಮೈಮೇಲೆ ಬಂದರೆ ನಾನು ಓಡಿಹೋಗ್ತಿನಾ ಎಂದು ಕೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಕಾರ್ಯಕರ್ತರು ನಾವು 12 ಜನ ಶಾಸಕರನ್ನು ನೋಡಿದ್ದೇವೆ ನೀವ್ ಅದರಲ್ಲಿ ಒಬ್ಬರು ಎಂದು ಅವಾಜ್ ಹಾಕಿದ್ದಾರೆ.

  • ಸುಮಲತಾ ಗೆಲುವಿನ ಬೆನ್ನಲ್ಲೇ ಮಂಡ್ಯದಲ್ಲಿ ಕಾರ್ಯಕರ್ತರ ವಾರ್- ಇಬ್ಬರು ಆಸ್ಪತ್ರೆಗೆ ದಾಖಲು

    ಸುಮಲತಾ ಗೆಲುವಿನ ಬೆನ್ನಲ್ಲೇ ಮಂಡ್ಯದಲ್ಲಿ ಕಾರ್ಯಕರ್ತರ ವಾರ್- ಇಬ್ಬರು ಆಸ್ಪತ್ರೆಗೆ ದಾಖಲು

    ಮಂಡ್ಯ: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಗೆಲುವಿನ ಬೆನ್ನಲ್ಲೇ ಮಂಡ್ಯದಲ್ಲಿ ಕಾರ್ಯಕರ್ತರ ನಡುವೆ ವಾರ್ ಶುರುವಾಗಿದೆ.

    ಮದ್ದೂರು ತಾಲೂಕಿನ ಕೂಳಗೆರೆ ಗೇಟ್ ಬಳಿ ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಶುರುವಾಗಿದೆ. ಸುಮಲತಾ ಗೆಲುವಿನ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

    ಕಾರ್ಯಕರ್ತರು ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಬಡಿದಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ಸುಮಲತಾ ಬೆಂಬಲಿಗರಾದ ಶಶಿಧರ್ ಮತ್ತು ಕುಮಾರ್‍ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.