Tag: ಜೆಟ್ ವಿಮಾನಯಾನ ಸಂಸ್ಥೆ

  • ಚಲಿಸುತ್ತಿದ್ದ ವಿಮಾನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ 4 ಪೈಲಟ್‍ಗಳು ಅಮಾನತು

    ಚಲಿಸುತ್ತಿದ್ದ ವಿಮಾನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ 4 ಪೈಲಟ್‍ಗಳು ಅಮಾನತು

    ನವದೆಹಲಿ: ಚಲಿಸುತ್ತಿದ್ದ ವಿಮಾನದಲ್ಲಿ ಸೆಲ್ಫಿ ತೆಗೆದುಕೊಂಡ ಕಾರಣ ಜೆಟ್ ವಿಮಾನಯಾನ ಸಂಸ್ಥೆಯೂ ತನ್ನ ನಾಲ್ವರು ತರಬೇತಿ ನಿರತ ಪೈಲಟ್‍ಗಳನ್ನು ಅಮಾನತುಗೊಳಿಸಿದೆ.

    ಜೆಟ್ ವಿಮಾನಯಾನ ಅಮಾನತು ಮಾಡಿದವರಲ್ಲಿ ಒಬ್ಬರು ಹಿರಿಯ ಅಧಿಕಾರಿಯೂ ಸೇರಿದ್ದು, ಇವರೊಂದಿಗಿದ್ದ ಮೂವರು ತರಬೇತಿ ಪೈಲಟ್‍ಗಳು ಸಹ ಅಮಾನತುಗೊಂಡಿದ್ದಾರೆ.

    ಏಪ್ರಿಲ್ 19 ರಂದು ಲೇಹ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ ಪ್ರಯಾಣಿಕ ರಹಿತ ವಿಮಾನದಲ್ಲಿ ಘಟನೆ ನಡೆದಿದ್ದು, ಸಂಸ್ಥೆ ಆಂತರಿಕ ತನಿಖೆಗೆ ಅದೇಶ ನೀಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಟ್ ಸಂಸ್ಥೆಯೂ ಗ್ರಾಹಕರ ರಕ್ಷಣೆ ನಮ್ಮ ಮೂಲ ಉದ್ದೇಶವಾಗಿದ್ದು, ನಮ್ಮ ಸಂಸ್ಥೆಯೂ ನಾಲ್ಕು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿತ್ತು. ಆದರೆ ಈ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.