Tag: ಜೆಕ್

  • ಪೋಲೆಂಡ್, ಬಲ್ಗೇರಿಯಾ, ಜೆಕ್ ವಿಮಾನ ಪ್ರಯಾಣ ನಿಷೇಧಿಸಿದ ರಷ್ಯಾ

    ಪೋಲೆಂಡ್, ಬಲ್ಗೇರಿಯಾ, ಜೆಕ್ ವಿಮಾನ ಪ್ರಯಾಣ ನಿಷೇಧಿಸಿದ ರಷ್ಯಾ

    ಮಾಸ್ಕೋ: ರಷ್ಯಾದಾಳಿಯ ಬೆನ್ನಲ್ಲೆ ಇಡೀ ಉಕ್ರೇನ್ ದೇಶ ಸ್ಮಶಾನ ದಂತೆ ಆವರಿಸಿದೆ. ರಷ್ಯಾದ ಪಡೆಗಳು ಉಕ್ರೇನ್ ಮೇಲಿನ ದಾಳಿಯನ್ನು ಮುಂದುವರಿಸಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ಧ ಸಂಘರ್ಷ ವಿಶ್ವದಲ್ಲೇ ಭಾರಿ ಆತಂಕವನ್ನುಂಟು ಮಾಡಿದೆ. ಇದೀಗ ಪೋಲೆಂಡ್, ಬಲ್ಗೇರಿಯಾ, ಜೆಕ್ ಗಣರಾಜ್ಯಗಳ ವಿಮಾನಯಾನ ಸಂಸ್ಥೆಗಳನ್ನು ರಷ್ಯಾ ನಿಷೇಧಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಜೆಕ್ ಗಣರಾಜ್ಯ, ಪೋಲೆಂಡ್ ಮತ್ತು ಬಲ್ಗೇರಿಯಾ ರಾಷ್ಟ್ರಗಳು ರಷ್ಯಾದ ವಿಮಾನಗಳಿಗೆ ತಮ್ಮ ವಾಯುಪ್ರದೇಶವನ್ನು ಮುಚ್ಚುವುದಾಗಿ ಹೇಳಿದ್ದವು. ಇದಕ್ಕೆ ಪ್ರತಿಕಾರವಾಗಿ ಈ ಮೂರು ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳನ್ನು ನಿಷೇಧಿಸಲಾಗಿದೆ ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ಈ ವಾರದ ಆರಂಭದಲ್ಲಿ ರಷ್ಯಾ ವಿಮಾನಗಳಿಗೆ ಬ್ರಿಟನ್ ಸಹ ನಿಷೇಧ ಹೇರುವ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ ಬ್ರಿಟನ್‍ಗೆ ತೆರಳುವ ಎಲ್ಲ ವಿಮಾನಗಳಿಗೆ ತಡೆಯೊಡ್ಡಿದೆ. ರಷ್ಯಾ ದಾಳಿ ಮಾಡಿದಾಗಿನಿಂದ ಈ ವರೆಗೆ 198 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಇದನ್ನೂ ಓದಿ: ಶತ್ರುಗಳನ್ನು ತಡೆಯಲು ಸೇತುವೆ ಜೊತೆ ತನ್ನನ್ನು ಸ್ಫೋಟಿಸಿಕೊಂಡ ಉಕ್ರೇನ್ ಯೋಧ

    ನಾವು ಶಸ್ತ್ರ ತ್ಯಾಗ ಮಾಡುವುದಿಲ್ಲ. ನಮ್ಮ ಸೈನ್ಯ ಮತ್ತು ನಮ್ಮ ದೇಶದ ಮೇಲೆ ನಾವು ವಿಶ್ವಾಸವಿಟ್ಟಿದ್ದೇವೆ. ನಾವು ಅದನ್ನು ರಕ್ಷಿಸುತ್ತೇವೆ. ಕೀವ್ ಅನ್ನು ಬಿಟ್ಟುಕೊಡುವ ಮಾತೇ ಇಲ್ಲ ಉಕ್ರೇನ್‍ನ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಮಕ್ಕಳು ಸೇರಿದಂತೆ 198 ಉಕ್ರೇನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಹೇಳಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದ್ದು, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‌ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಂಟರ್‍ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ.