Tag: ಜೆಇಎಂ

  • ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

    ಭಾರತದ ಪ್ರತಿಷ್ಠೆ ಹಾಳುಮಾಡಲು ದಿವಾಳಿ ಪಾಕಿಸ್ತಾನ ಸಂಚು- ಇಂಟಲಿಜೆನ್ಸ್ ರಿಪೋರ್ಟ್

    ಶ್ರೀನಗರ: ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ (Economic Crisis) ದಿವಾಳಿಯಾಗಿರುವ ಪಾಕಿಸ್ತಾನ (Pakistan) ಇದೀಗ ಭಾರತದ (India) ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಹಾಗೂ ಭಾರತೀಯ ಸಶಸ್ತ್ರ ಪಡೆಗಳನ್ನು ನಾಶ ಮಾಡಲು ಸಂಚು ರೂಪಿಸಿದೆ ಎಂದು ಭಾರತೀಯ ಗುಪ್ತಚರ ಏಜೆನ್ಸಿಗಳು (Intelligence Agencies) ವರದಿ ನೀಡಿವೆ.

    ಕಾಶ್ಮೀರದ (Jammu and Kashmir) ಕಣಿವೆಯಲ್ಲಿ ಭಾರತ ಸರ್ಕಾರದ ಪ್ರತಿಷ್ಠೆಯನ್ನು ಹಾಳುಮಾಡುವ ರೀತಿಯಲ್ಲಿ ಸಂಚು ರೂಪಿಸಲು ಪಾಕಿಸ್ತಾನವು ಪ್ರಪಂಚದಾದ್ಯಂತದ ತನ್ನ ರಾಯಭಾರ ಕಚೇರಿಗಳನ್ನು ಕೇಳಿದ್ದು, ಸಂಚು ರೂಪಿಸುವ ರಹಸ್ಯ ಟಿಪ್ಪಣಿಯನ್ನು ರಾಯಭಾರ ಕಚೇರಿಗಳಿಗೆ ಕಳುಹಿಸಿದೆ ಎನ್ನಲಾಗಿದೆ. ಇದನ್ನೂ ಓದಿ: US Fighter Jet Attack: ಚೀನಾ ಬೇಹುಗಾರಿಕಾ ಬಲೂನ್ ಹೊಡೆದುರುಳಿಸಿದ ಅಮೆರಿಕ

    `ಕಾಶ್ಮೀರ ಒಗ್ಗಟ್ಟಿನ ದಿನ’ದಂದು (ಫೆಬ್ರವರಿ 5 ರಂದು ಪಾಕಿಸ್ತಾನವು ಆಚರಿಸುವ ದಿನ), ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಹೈ ಕಮಿಷನ್ ತನ್ನ ಎಲ್ಲಾ ರಾಯಭಾರ ಕಚೇರಿಗಳಿಗೆ ಫ್ಯಾಕ್ಸ್ ಮತ್ತು ಇಮೇಲ್‌ಗಳನ್ನು ಕಳುಹಿಸಿದೆ. ಅದರಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ನಾಶ ಮಾಡುವ ಯೋಜನೆಗಳ ಬಗ್ಗೆ ವಿವರಿಸಿದೆ ಎಂದು ಗುಪ್ತಚರ ಏಜೆನ್ಸಿ ವಿವರಿಸಿದೆ. ಇದನ್ನೂ ಓದಿ: Shark Attackː ಸ್ವಿಮ್ಮಿಂಗ್‌ಗೆ ತೆರಳಿದ್ದ 16ರ ಬಾಲಕಿ ಶಾರ್ಕ್ ದಾಳಿಗೆ ಬಲಿ

    ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದಾಗ ಜಮ್ಮು ಮತ್ತು ಕಾಶ್ಮೀರದ ಕೆಲವು ಪೊಲೀಸರು ಭಯೋತ್ಪಾದಕರು ಹಾಗೂ ಜೈಶ್ ಎ ಮೊಹಮ್ಮದ್ (JEM) ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ಭಯೋತ್ಪಾದಕ ನಿರ್ವಾಹಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿದುಬಂದಿದೆ.

    ಈ ನಡುವೆ ಶುಕ್ರವಾರ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ನಿಷೇಧಿತ ಜೈಶ್ ಎ ಮೊಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 6 ಭಯೋತ್ಪಾದಕರನ್ನ ಬಂಧಿಸಿದೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ದಿವಾಳಿ ಪಾಕಿಸ್ತಾನ ರೂಪಾಯಿ ಮೌಲ್ಯ ಪಾತಾಳಕ್ಕೆ- ಆಹಾರ ಪದಾರ್ಥಗಳ ಬೆಲೆ ಮತ್ತಷ್ಟೂ ದುಬಾರಿ.!

    ಬಂಧಿತ ಆರೋಪಿಗಳು ಗ್ರೆನೇಡ್ ದಾಳಿ, ಅಮಾಯಕ ನಾಗರಿಕರನ್ನು ಬೆದರಿಸುವುದು, ಪಿಆರ್‌ಐ ಸದಸ್ಯರು, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಕುಲ್ಗಾಮ್ ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣವನ್ನು ಹಾಳುಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೂಪುರ್ ಶರ್ಮಾ ಹತ್ಯೆಗೆ ಪಾಕ್‌ ಸಂಘಟನೆಗ‌ಳಿಂದ ಸುಪಾರಿ ಪಡೆದಿದ್ದ ಉಗ್ರ ಅರೆಸ್ಟ್

    ನೂಪುರ್ ಶರ್ಮಾ ಹತ್ಯೆಗೆ ಪಾಕ್‌ ಸಂಘಟನೆಗ‌ಳಿಂದ ಸುಪಾರಿ ಪಡೆದಿದ್ದ ಉಗ್ರ ಅರೆಸ್ಟ್

    ಲಕ್ನೋ: ನೂಪುರ್ ಶರ್ಮಾರನ್ನ ಹತ್ಯೆ ಮಾಡಲು ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಹಾಗೂ ತಹ್ರಿಖ್-ಎ-ತಾಲಿಬಾನ್ ಸಂಘಟನೆಗಳಿಂದ ಸುಪಾರಿ ಪಡೆದಿದ್ದ ಭಯೋತ್ಪಾದಕ ಮೊಹಮ್ಮದ್ ನದೀಮ್‌ನನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳವು ಬಂಧಿಸಿದೆ.

    ಪಾಕಿಸ್ತಾನ ಮೂಲದ ಜೆಎಂಇ ಹಾಗೂ ಟಿಟಿಪಿ ಭಯೋತ್ಪಾದನಾ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ನದೀಮ್ ನೂಪರ್ ಶರ್ಮಾರನ್ನು ಕೊಲ್ಲುವ ಕೆಲಸ ವಹಿಸಿಕೊಂಡಿದ್ದ. ಅವನನ್ನು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ಹೇಳಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಏನ್ ಬಿಚ್ಚಿಡುತ್ತಾರೋ ಬಿಚ್ಚಿಡಲಿ: ಸುಧಾಕರ್ ತಿರುಗೇಟು

    ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ಮುಸ್ಲಿಂ ರಾಷ್ಟ್ರಗಳಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೆಲ ಪಾಕಿಸ್ತಾನಿ ಸಂಘಟನೆಗಳು ನೂಪುರ್ ಶರ್ಮಾರನ್ನ ಕೊಲ್ಲುವುದಕ್ಕೆ ಬಹಿರಂಗವಾಗಿ ಆಫರ್‌ಗಳನ್ನು ಘೋಷಣೆ ಮಾಡಿದ್ದವು. ದೇಶದ ವಿವಿಧ ರಾಜ್ಯಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಇದೀಗ ಸುಪ್ರೀಂ ಕೋರ್ಟ್ ಅವರ ವಿರುದ್ಧದ ಎಲ್ಲ ಕೇಸ್‌ಗಳನ್ನು ದೆಹಲಿಗೆ ವರ್ಗಾಯಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ನವದೆಹಲಿ: ಈ ಬಾರಿಯ 75ನೇ ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನವೇ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಹಾಗೂ ಇತರೇ ಉಗ್ರ ಸಂಘಟನೆಗಳಿಂದ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರೀಯ ಗುಪ್ತಚರ ಇಲಾಖೆ (ಐಬಿ) ಎಚ್ಚರಿಸಿದೆ.

    ಲಷ್ಷರ್, ಜೆಇಎಂ ಮತ್ತು ಇತರೆ ಕೆಲವು ಭಯೋತ್ಪಾದನಾ ಸಂಘಟನೆಗಳಿಂದ ದಾಳಿಯ ಅಪಾಯವಿರುವ ಬಗ್ಗೆ ಐಬಿ 10 ಪುಟಗಳ ವರದಿ ನೀಡಿದ್ದು, ರೋಹಿಂಗ್ಯಾ, ಅಫ್ಘಾನಿಸ್ತಾನ ಹಾಗೂ ಸುಡಾನ್ ದೇಶದ ಹೆಚ್ಚಿನ ಜನರು ವಾಸಿಸುವ ದೆಹಲಿಯಲ್ಲಿ ಹದ್ದಿನಕಣ್ಣು ಇಡುವಂತೆ ಹಾಗೂ ಟಿಫಿನ್ ಬಾಂಬ್, ಸ್ಟಿಕ್ಕಿ ಬಾಂಬ್ ಮತ್ತು ವಿವಿಐಡಿ ಬೆದರಿಕೆಯನ್ನು ಎದುರಿಸಲು ಜಾಗರೂಕರಾಗಿರುವಂತೆ ಹೇಳಿದೆ. ಇದನ್ನೂ ಓದಿ: CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

    ಆಗಸ್ಟ್ 15 ರಂದು ಸ್ವಾತಂತ್ರ‍್ಯ ದಿನಾಚರಣೆಗೂ ಮುನ್ನ ಕೆಂಪುಕೋಟೆಗೆ ಪ್ರವೇಶಿಸಲು ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆ ಅದು ದೆಹಲಿ ಪೊಲೀಸರಿಗೆ ಸೂಚಿಸಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಮೇಲಿನ ದಾಳಿ, ಉದಯಪುರ ಹತ್ಯೆ ಹಾಗೂ ಅಮರಾವತಿಗಳಲ್ಲಿ ನಡೆದ ಘಟನೆಗಳನ್ನೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಸ್ವಾತಂತ್ರ‍್ಯ ದಿನಾಚರಣೆ ಸಂಭ್ರಮವನ್ನು ಕೆಡಿಸುವ ಹಾಗೂ ಜೀವಹಾನಿ ಮಾಡುವ ಉದ್ದೇಶದಿಂದ ದಾಳಿಗಳನ್ನು ನಡೆಸಲು ಸಂಚು ರೂಪಿಸಲಾಗಿದೆ. ಹೀಗಾಗಿ ಎಲ್ಲ ಉಗ್ರ ಗುಂಪುಗಳ ಮೇಲೆ ನಿಗಾ ಇರಿಸಬೇಕು ಎಂದು ಎಲ್ಲ ರಾಜ್ಯಗಳಿಗೂ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಭಾರತದ ಕಮಾಲ್- ಸ್ಕ್ವಾಷ್‌ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

    ಸಾಂದರ್ಭಿಕ ಚಿತ್ರ

    ದೆಹಲಿ ಪೊಲೀಸರು ಬಹಳ ಜಾಗರೂಕತೆಯಿಂದ ಇರುವಂತೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಆಗಸ್ಟ್ 15ರಂದು ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪ್ರವೇಶ ನಿಯಮಗಳನ್ನು ಕಠಿಣಗೊಳಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಬೇಹುಗಾರಿಕಾ ಸಂಸ್ಥೆಗಳು, ಉಗ್ರ ಗುಂಪುಗಳು ಹಾಗೂ ಜನನಿಬಿಡ ಸ್ಥಳಗಳಲ್ಲಿ ಅವುಗಳ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇರಿಸುವಂತೆ ನಿರ್ದೇಶನ ನೀಡಲಾಗಿದೆ.

    ಜೈಶ್ ಮತ್ತು ಲಷ್ಕರ್ ಉಗ್ರರಿಗೆ ಸಾಮಗ್ರಿಗಳ ಪೂರೈಕೆ ನೆರವು ನೀಡುವ ಮೂಲಕ ಪಾಕಿಸ್ತಾನದ ಐಎಸ್‌ಐ, ಭಯೋತ್ಪಾದನಾ ದಾಳಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ದೊಡ್ಡ ನಾಯಕರು ಮತ್ತು ಪ್ರಮುಖ ಸ್ಥಳಗಳನ್ನು ಗುರಿ ಮಾಡುವಂತೆ ಜೆಇಎಂ ಹಾಗೂ ಎಲ್‌ಇಟಿ ಸಂಘಟನೆಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ನೀವು ಶಾಂತಿಪ್ರಿಯರಾಗಿದ್ದರೆ ಮಸೂದ್‍ನನ್ನು ಒಪ್ಪಿಸಿ: ಪಾಕ್ ಪಿಎಂಗೆ ಸುಷ್ಮಾ ಸ್ವರಾಜ್ ಸವಾಲು

    ನೀವು ಶಾಂತಿಪ್ರಿಯರಾಗಿದ್ದರೆ ಮಸೂದ್‍ನನ್ನು ಒಪ್ಪಿಸಿ: ಪಾಕ್ ಪಿಎಂಗೆ ಸುಷ್ಮಾ ಸ್ವರಾಜ್ ಸವಾಲು

    – ಭಾರತ ಬದಲಾಗಿದೆ, ಯೋಚಿಸಲಾಗದ ಉತ್ತರ ನೀಡುತ್ತೆ
    – ಭಯೋತ್ಪಾದನೆ, ಶಾಂತಿ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ

    ನವದೆಹಲಿ: ನೀವು ಶಾಂತಿ ಪ್ರಿಯರು ಆಗಿದ್ದರೆ ಮಸೂದ್ ಅಜರ್‍ನನ್ನು ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ಗೆ ಸವಾಲು ಎಸೆದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದೆ, ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ಸರ್ಕಾರದ ವಿರುದ್ಧ ಸುಷ್ಮಾ ಸ್ವರಾಜ್ ಹರಿಹಾಯ್ದಿದ್ದಾರೆ. ಕೆಲವರು ಪಾಕ್ ಪ್ರಧಾನಿ ಉದಾರಿ, ಗೌರವಾನ್ವಿತ ರಾಜಕಾರಣಿ ಎನ್ನುತ್ತಾರೆ. ಹಾಗಾದರೆ ಅವರಿಗೆ ಅಷ್ಟೊಂದು ಉದಾರತನವಿದ್ದರೆ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮಜೂರ್ ಅಜರ್‍ನನ್ನು ಭಾರತಕ್ಕೆ ಒಪ್ಪಿಸಲಿ ಎಂದು ಸವಾಲು ಹಾಕಿದ್ದಾರೆ. ಹಾಗೆಯೇ ಎಲ್ಲಿಯವರೆಗೆ ಪಾಕ್ ಸರ್ಕಾರ ಭಯೋತ್ಪಾದನೆ ಹಾಗೂ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲವೋ ಅಲ್ಲಿವರೆಗೆ ಪಾಕ್ ಜೊತೆ ಭಾರತದ ಶಾಂತಿ ಮಾತುಕತೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಸುಷ್ಮಾ ಸ್ವರಾಜ್ ಪಾಕ್‍ಗೆ ಖಡಕ್ ಸಂದೇಶ ನೀಡಿದ್ದಾರೆ.

    ಮೊದಲು ಭಯೋತ್ಪಾದನೆಗೆ ಪಾಕ್ ಸರ್ಕಾರ ಕಡಿವಾಣ ಹಾಕಲಿ. ನಂತರ ಪಾಕ್ ಜೊತೆ ಶಾಂತಿ ಮಾತುಕತೆ ನಡೆಯುತ್ತದೆ. ಭಯೋತ್ಪಾದನೆ ನಡುವೆ ಶಾಂತಿ ಮಾತುಕತೆ ಅಸಾಧ್ಯ. ಭಾರತೀಯ ವಾಯುಪಡೆ ಜೆಇಎಂ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿದೆ. ಆದ್ರೆ ಜೆಇಎಂ ಉಗ್ರರ ಪ್ರತಿದಾಳಿ ಬದಲು ಪಾಕ್ ಸೇನೆ ಯಾಕೆ ನಮ್ಮ ವಿರುದ್ಧ ದಾಳಿ ಮಾಡುತ್ತಿದೆ ಎಂದು ಸುಷ್ಮ ಸ್ವರಾಜ್ ಪ್ರಶ್ನಿಸಿದ್ದಾರೆ.

    ನೀವು ಕೇವಲ ಉಗ್ರರಿಗೆ ನಿಮ್ಮ ಮಣ್ಣಿನಲ್ಲಿ ಜಾಗ ಕೊಟ್ಟಿಲ್ಲ, ಅವರನ್ನೂ ನೀವು ಸಾಕುತ್ತಿದ್ದೀರಿ. ಅಲ್ಲದೆ ಉಗ್ರರ ವಿರುದ್ಧ ಸಂತ್ರಸ್ತ ರಾಷ್ಟ್ರಗಳು ಬಂದರೆ, ಉಗ್ರರ ಪರವಾಗಿ ನೀವು ದಾಳಿ ಮಾಡುತ್ತಿರಿ. ಪಾಕ್ ಸರ್ಕಾರ ಅಲ್ಲಿನ ಸೇನೆ ಹಾಗೂ ಉಗ್ರರನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲವಾದರೆ ದ್ವೀಪಕ್ಷೀಯ ಸಂಬಂಧಗಳು ನಾಶವಾಗುವ ಸಮಯ ಮತ್ತೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

    ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಯೋಧರು ಹುತಾತ್ಮರಾದ ಬಗ್ಗೆ ಮಾತನಾಡುತ್ತ, ಪುಲ್ವಾಮಾ ದಾಳಿ ನಡೆದಾಗ ಹಲವು ರಾಷ್ಟ್ರಗಳು ಭಾರತದ ಪರವಾಗಿ ನಿಂತಿದ್ದವು. ಹಾಗೆಯೇ ಯೋಧರ ಸಾವಿಗೆ ಸಂತಾಪ ಸೂಚಿಸಿ, ಭಾರತ ಈ ಪರಿಸ್ಥತಿಯನ್ನು ಹೇಗೆ ನಿಭಾಯಿಸುತ್ತೆ ಎಂದಿದ್ದವು. ಅವರಿಗೆ ನಾನು ಕೊಟ್ಟ ಉತ್ತರ ಒಂದೇ. ಅದು ಭಾರತ ಬದಲಾಗಿದೆ. ಮತ್ತೊಮ್ಮೆ ಈ ರೀತಿ ದಾಳಿ ಮಡಿದರೇ ಭಾರತ ಸುಮ್ಮನೆ ಕೂರುವುದಿಲ್ಲ. ಯೋಚಿಸಲಾಗದ ಉತ್ತರ ನೀಡುತ್ತದೆ ಎಂದು ಹೇಳಿ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv