Tag: ಜೂಡೋ

  • CWG 2022: ಚಿನ್ನದ ಪದಕ ಗೆಲ್ಲೋವರೆಗೆ ನನಗೆ ವಿಶ್ರಾಂತಿ ಇಲ್ಲ – ರಜತ ವಿಜೇತೆ ತುಲಿಕಾ ಮಾನ್

    CWG 2022: ಚಿನ್ನದ ಪದಕ ಗೆಲ್ಲೋವರೆಗೆ ನನಗೆ ವಿಶ್ರಾಂತಿ ಇಲ್ಲ – ರಜತ ವಿಜೇತೆ ತುಲಿಕಾ ಮಾನ್

    ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 78 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್  ಬೆಳ್ಳಿ ಪದಕ ಗೆದ್ದ ಬಳಿಕ ನನಗೆ ಈ ಪದಕಕ್ಕೆ ತೃಪ್ತಿ ಇಲ್ಲ. ಬಂಗಾರದ ಪದಕ ಗೆಲ್ಲುವ ವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಪಣತೊಟ್ಟಿದ್ದಾರೆ.

    ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ತುಲಿಕಾ ಮಾನ್ ಮಹಿಳೆಯರ 78 ಕೆಜಿ ವಿಭಾಗದ ಫೈನಲ್‍ನಲ್ಲಿ ಸ್ಕಾಟ್ಲೆಂಡ್‍ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಪರಾಭವಗೊಳ್ಳುವ ಮೂಲಕ ಚಿನ್ನ ಗೆಲ್ಲುವ ಅವಕಾಶದಿಂದ ವಂಚಿತರಾಗಿ ಬೆಳ್ಳಿಪದಕ ಗೆದ್ದಿದ್ದರು. ಆ ಬಳಿಕ ಅನುಭವ ಹಂಚಿಕೊಂಡ ಅವರು, ನಾನು ಇಲ್ಲಿಗೆ ಬರುವ ಮುಂಚೆ ಬೆಳ್ಳಿ ಪದಕ ಗೆಲ್ಲುವ ಯೋಚನೆ ಮಾಡಿರಲಿಲ್ಲ. ಈ ಪದಕ ನನಗೆ ತೃಪ್ತಿಯಾಗಿಲ್ಲ. ಮುಂದಿನ ಬಾರಿ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ನನ್ನ ಪದಕದ ಬಣ್ಣ ಬದಲಾಗಬೇಕು ಚಿನ್ನದ ಪದಕ ಗೆಲ್ಲಲೇ ಬೇಕು ಅಲ್ಲಿಯ ವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿ ಕಣ್ಣೀರಿಟ್ಟರು. ಇದನ್ನೂ ಓದಿ: Commonwealth Games: 44 ವರ್ಷಗಳ ಬಳಿಕ ಬೆಳ್ಳಿ ಗೆದ್ದು ಸಾಧನೆ ಮಾಡಿದ ಮುರಳಿ

    ತುಲಿಕಾ ಮಾನ್ ತುಂಬಾ ಕಷ್ಟಪಟ್ಟು ಜೀವನ ಸಾಗಿಸಿದವರು. ಸಣ್ಣ ವಯಸ್ಸಿನಿಂದಲೇ ಹಲವು ಏಳುಬೀಳುಗಳನ್ನು ಕಂಡವರು. ಜೂಡೋ ಕ್ರೀಡೆಗಾಗಿ ಶ್ರಮಪಟ್ಟವರು. ತಮ್ಮ ತಾಯಿ ನೀಡಿದ ಪ್ರೋತ್ಸಾಹದಿಂದ ಜೊಡೋದಲ್ಲಿ ತೊಡಗಿಕೊಂಡು ಇದೀಗ ಪದಕ ವಿಜೇತರಾಗಿದ್ದಾರೆ. ಕಾಮನ್‍ವೆಲ್ತ್ ಟ್ರಯಲ್‍ನಲ್ಲಿ 78 ಕೆಜಿ ವಿಭಾಗದಲ್ಲಿ ಸ್ಪರ್ಧೆಗೂ ಮುನ್ನ 110 ಕೆ.ಜಿ ತೂಕವಿದ್ದ ತುಲಿಕಾ ಮಾನ್‌ ಆ ಬಳಿಕ 30 ಕೆಜಿ ತೂಕ ಇಳಿಕೆ ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದರು. ಇದನ್ನೂ ಓದಿ: ಚಿನ್ನದ ಪದಕ ಗೆಲ್ಲಲು ಭಾರತದ ಮೀರಾಬಾಯಿ ಚಾನು ನನಗೆ ಸ್ಫೂರ್ತಿ ಎಂದ ಪಾಕ್ ವೇಟ್ ಲಿಫ್ಟರ್

    ಈ ಹಿಂದೆ 2018 ಮತ್ತು 2019ರಲ್ಲಿ ಜೈಪುರ ಮತ್ತು ಇಂಗ್ಲೆಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್‍ನಲ್ಲೂ ಪದಕ ವಿಜೇತೆಯಾಗಿದ್ದರು. ಇದೀಗ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ವಿಜೇತೆಯಾಗಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

    CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

    ಬರ್ಮಿಂಗ್‌ಹ್ಯಾಮ್: ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುರಿದಿದ್ದು, 6ನೇ ದಿನ ಮಹಿಳೆಯರ 78 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್ ಅವರು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ತುಲಿಕಾ ಮಾನ್ ಅವರು ಇಂದು ನಡೆದ ಮಹಿಳೆಯರ 78 ಕೆಜಿ ವಿಭಾಗದ ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಪರಾಭವಗೊಳ್ಳುವ ಮೂಲಕ ಬೆಳ್ಳಿಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜೂಡೋದಲ್ಲಿ ಭಾರತಕ್ಕೆ ಇದು 3ನೇ ಪದಕವಾಗಿದೆ. ಇದನ್ನೂ ಓದಿ: CWG 2022: ಲಾನ್ ಬಾಲ್ಸ್‌ನಲ್ಲಿ ಚಿನ್ನ – ವರ್ಕೌಟ್ ಆಯ್ತು ಧೋನಿ ಟಿಪ್ಸ್!

    ತುಲಿಕಾ ಮಾನ್ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 5 ಚಿನ್ನ, 6 ಬೆಳ್ಳಿ ಹಾಗೂ 7 ಕಂಚು ಸಹಿತ 18 ಪದಕಗಳನ್ನು ಪಡೆದುಕೊಂಡಿದ್ದು, ಟಾಪ್-10 ಪಟ್ಟಿಯಲ್ಲೇ ಸ್ಥಾನ ಉಳಿಸಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • CWG 2022 – ಜೂಡೋದಲ್ಲಿ ಬೆಳ್ಳಿಗೆದ್ದ ಸುಶೀಲಾ ದೇವಿ, ಕಂಚು ಗೆದ್ದ ವಿಜಯ್

    CWG 2022 – ಜೂಡೋದಲ್ಲಿ ಬೆಳ್ಳಿಗೆದ್ದ ಸುಶೀಲಾ ದೇವಿ, ಕಂಚು ಗೆದ್ದ ವಿಜಯ್

    ಲಂಡನ್: ಕಾಮನ್‍ವೆಲ್ತ್ ಗೇಮ್ಸ್‌ನ ಜೂಡೋ ಸ್ಫರ್ಧೆಯಲ್ಲಿ ಭಾರತಕ್ಕೆ ಎರಡು ಪದಕ ದಕ್ಕಿದೆ. ಸುಶೀಲಾ ದೇವಿ ಬೆಳ್ಳಿ ಪದಕ ಗೆದ್ದರೆ, ವಿಜಯ್ ಕುಮಾರ್ ಯಾದವ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

    15 ನಿಮಿಷಗಳ ಅಂತರದಲ್ಲಿ ಎರಡು ಪದಕ ಭಾರತ ಜೂಡೋದಲ್ಲಿ ಪಡೆದುಕೊಂಡಿದೆ. ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಸುಶೀಲಾ ದೇವಿ ಬೆಳ್ಳಿ ಪದಕ ಗೆದ್ದರೆ, ಪುರುಷರ 60 ಕೆ.ಜಿ ವಿಭಾಗದಲ್ಲಿ ವಿಜಯ್ ಕುಮಾರ್ ಯಾದವ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

    ಈ ಮೂಲಕ ಭಾರತ ವಿಜೇತ ಪದಕಗಳ ಸಂಖ್ಯೆ 8ಕ್ಕೆ ಏರಿಕೆ ಕಂಡಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಪದಕ ವಿಜೇತ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಸಹಿತ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]