Tag: ಜೂಜು

  • ಜೂಜುಕೋರರಿಂದ ಪೊಲೀಸರ ಮೇಲೆ ಹಲ್ಲೆ – ಇಬ್ಬರು ಪೇದೆಗಳು ಆಸ್ಪತ್ರೆಗೆ ದಾಖಲು

    ಜೂಜುಕೋರರಿಂದ ಪೊಲೀಸರ ಮೇಲೆ ಹಲ್ಲೆ – ಇಬ್ಬರು ಪೇದೆಗಳು ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಜೂಜುಕೋರರು ಕಲ್ಲು ತೂರಾಟ ನಡೆಸಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‍ಐ ಚೇತನ್ ಸಿಬ್ಬಂದಿಯೊಂದಿಗೆ ಮಫ್ತಿ ವೇಷದಲ್ಲಿ ಟಾಟಾ ಏಸ್ ವಾಹನದ ಮೂಲಕ ತೆರಳಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಜೂಜುಕೋರರ ಬಂಧನದ ವೇಳೆ ಏಕಾಏಕಿ ಜೂಜುಕೋರರು ಕಲ್ಲು ತೂರಾಟ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.

    ಘಟನೆಯಲ್ಲಿ ಪೇದೆಗಳಾದ ಸೋಮಶೇಖರ ಹಾಗೂ ಮುತ್ತಪ್ಪ ನಗರಿ ಅವರಯ ಕೈಗೆ ಗಾಯಗಳಾಗಿದ್ದು. ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ 7 ಮಂದಿ ಜೂಜುಕೋರರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಬಂಧಿತರಿಂದ 1,510 ರೂ. ನಗದು ಜಫ್ತಿ ಮಾಡಲಾಗಿದೆ.

    ಅಂಗರೇಖನಹಳ್ಳಿ ಗ್ರಾಮದ ಮಾಧವ, ವೇಣುಗೋಪಾಲ, ಅಂಬರೀಶ, ಶ್ರೀನಿವಾಸ, ಮಹೇಂದ್ರ, ಮುನೇಗೌಡ ಹಾಗೂ ಸೋಮಶೇಖರ್ ಬಂಧಿತರು. ಕಲ್ಲು ತೂರಾಟ ನಡೆಸಿದ ಆರೋಪಿಗಳಲ್ಲಿ ನಾಲ್ಕು ಮಂದಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಘಟನೆ ಸಂಬಂಧ ಕೊಲೆ ಯತ್ನ ಆರೋಪದಡಿ ಪ್ರಕರಣ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಅಧಿವೇಶನಕ್ಕೆಂದು ಹೋಗಿ ಮೋಜು-ಮಸ್ತಿ ಮಾಡಿದ್ರು..!

    ಅಧಿವೇಶನಕ್ಕೆಂದು ಹೋಗಿ ಮೋಜು-ಮಸ್ತಿ ಮಾಡಿದ್ರು..!

    ಬೆಳಗಾವಿ: ಜಿಲ್ಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಲ್ಲಿಗೆ ಬಂದ ಅಧಿಕಾರಿಗಳು ವೀಕೆಂಡ್ ನಲ್ಲಿ ಮೋಜು-ಮಸ್ತಿ ಮಾಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇರಿಸುಮುರುಸು ಉಂಟಾಗಿದೆ.

    ಚಳಿಗಾಲದ ಅಧಿವೇಶನ ಡಿಸೆಂಬರ್ 10 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದೆ. ಆದರೆ ಅಧಿವೇಶನಕ್ಕೆ ಬಂದ ಅಧಿಕಾರಿಗಳು ಬೆಳಗಾವಿಯಿಂದ ಸ್ವಲ್ಪ ದೂರದಲ್ಲಿರುವ ಗೋವಾದ ಜೂಜು-ಅಡ್ಡೆಗೆ ಹೋಗಿದ್ದಾರೆ. ಅಲ್ಲದೇ ಅಲ್ಲಿ ಅಧಿಕಾರಿಗಳು ಅರೆಬೆತ್ತಲಾಗಿ ಮೋಜು-ಮಸ್ತಿ ಮಾಡಿದ್ದಾರೆ. ವೀಕೆಂಡ್‍ನಲ್ಲಿ ಅನುಮತಿಯಿಲ್ಲದೆ ಅಧಿಕಾರಿಗಳ ಮೋಜು-ಮಸ್ತಿ ಮಾಡಿದ್ದು, ಜೂಜು ಅಡ್ಡೆಗೆ ಹೋಗುವಾಗ ಕೆಲವರು ಖಾಸಗಿ ವಾಹನದಲ್ಲಿ ಹೋಗಿದ್ದಾರೆ. ಉಳಿದವರು ಸರ್ಕಾರಿ ವಾಹನದಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಗೋವಾದ ಕ್ಯಾಸಿನೋ ಪ್ರೈಡ್ ಮುಂದೆ ಸಿಎಂ ಸಚಿವಾಲಯದ ಅಧಿಕಾರಿಗಳು ಮೋಜು-ಮಸ್ತಿ ಮಾಡಿದ್ದು, ಕ್ಯಾಸಿನೋ ಮುಂದೆ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅಧಿಕಾರಿಗಳ ಮೋಜು-ಮಸ್ತಿಯ ವಿಡಿಯೋ ವೈರಲ್ ಆಗುತ್ತಿದ್ದು, ಈ ದೃಶ್ಯ ಪಬ್ಲಿಕ್ ಟಿವಿಗೂ ಲಭಿಸಿದೆ.

    ಸಿಎಂ ಸಚಿವಾಲಯ ಅಧಿಕಾರಿಗಳು ಮತ್ತು ಭದ್ರತಾ ಪಡೆಯ ಇಬ್ಬರು ಪೊಲೀಸರು ಗೋವಾದ ಕ್ಯಾಸಿನೋ ಪ್ರೈಡ್ ಗೆ ಹೋಗಿದ್ದಾರೆ. ಅಧಿವೇಶನಕ್ಕೆ ಬಂದವರು ಅನುಮತಿ ಪಡೆಯದೇ ಹೊರಗಡೆ ಹೋಗುವಂತಿಲ್ಲ. ಆದರೂ ಅನುಮತಿ ಪಡೆಯದೇ ಗೋವಾದಲ್ಲಿ ಅಧಿಕಾರಿಗಳು ಜೂಜು ಅಡ್ಡೆಗೆ ಹೋಗಿ ಮೋಜು ಮಾಡಿದ್ದಾರೆ.

    ಅಧಿವೇಶನ ಮುಗಿಯಲು ನಾಲ್ಕು ದಿನಗಳಿದ್ದು ಉಳಿದ ಅಧಿಕಾರಿಗಳು ಅಧಿವೇಶನಕ್ಕೆ ಬೇಕಾದ ಮಾಹಿತಿ, ದಾಖಲೆಯನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಈ ರೀತಿಯಾಗಿ ಜೂಜು ಅಡ್ಡೆಗೆ ಹೋಗಿ ಮೋಜು-ಮಸ್ತಿ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ಈ ವರ್ತನೆಯ ಬಗ್ಗೆ ಸಿಎಂ ಕುಮಾರಸ್ವಾಮಿ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಟ್ಕಾ ಅಡ್ಡೆ ಮೇಲೆ ದಾಳಿ: 3 ಲಕ್ಷ ರೂ., 40 ಬೈಕ್ ವಶ!

    ಮಟ್ಕಾ ಅಡ್ಡೆ ಮೇಲೆ ದಾಳಿ: 3 ಲಕ್ಷ ರೂ., 40 ಬೈಕ್ ವಶ!

    ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯ ಕುದುರೆಮನೆ ಗ್ರಾಮದ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, 3 ಲಕ್ಷ ರೂಪಾಯಿ ನಗದು ಹಾಗು 40ಕ್ಕೂ ಹೆಚ್ಚಿನ ಬೈಕುಗಳ ಭರ್ಜರಿ ಬೇಟೆಯಾಡಿದ್ದಾರೆ.

    ಗುರುವಾರ ಬೆಳ್ಳಂಬೆಳಗ್ಗೆ ಡಿಸಿಪಿ ಸೀಮಾ ಲಾಟಕರ ಹಾಗೂ ಇಬ್ಬರು ಪಿಎಸ್‍ಐ ಸೇರಿದಂತೆ 15 ಮಂದಿಯಿಂದ ಕುದುರೆಮನೆ ಗ್ರಾಮದ ತೋಟದ ಮನೆಯ ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 40 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಜೂಜಿಗೆ ಬಳಸುತ್ತಿದ್ದ 3 ಲಕ್ಷ ರೂಪಾಯಿ ಹಾಗೂ 40ಕ್ಕೂ ಹೆಚ್ಚು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ದಾಳಿ ವೇಳೆ ದಂಧೆಕೋರರು ಕ್ರೈಂ ವಿಭಾಗದ ಪಿಎಸ್‍ಐ ರಮೇಶ್ ಹೂಗಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ಗಾಯಗೊಂಡಿದ್ದಾರೆ. ದಂಧೆಕೋರರು ತೋಟದ ಮನೆಯಲ್ಲಿ ತಾತ್ಕಾಲಿಕ ಶೆಡ್ಡಿನ ಮನೆಯನ್ನು ನಿರ್ಮಿಸಿಕೊಂಡು, ಹಲವು ದಿನಗಳಿಂದ ಜೂಜು ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಮಟ್ಕಾ ದಂಧೆಯ 40 ಮಂದಿಯನ್ನು ಬಂಧಿಸಿದ್ದು, ಸುಮಾರು 30ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡು ಹೋಗಿದ್ದಾರೆಂದು ಡಿಸಿಪಿ ಸೀಮಾ ಲಾಟಕರ್ ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv