Tag: ಜೂಜು ಅಡ್ಡೆ

  • ಚಿಕ್ಕೋಡಿ | ಜೂಜು ಅಡ್ಡೆ ಮೇಲೆ ದಾಳಿ – 20 ಮಂದಿ ಅರೆಸ್ಟ್‌

    ಚಿಕ್ಕೋಡಿ | ಜೂಜು ಅಡ್ಡೆ ಮೇಲೆ ದಾಳಿ – 20 ಮಂದಿ ಅರೆಸ್ಟ್‌

    ಬೆಳಗಾವಿ: ಜೂಜು (Gambling) ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 20 ಮಂದಿಯನ್ನು ಬಂಧಿಸಿದ ಘಟನೆ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ 20 ಮಂದಿಯನ್ನು ಬಂಧಿಸಿ 13 ಸಾವಿರ ರೂ. ಹಣವನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

    ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜೂಜಾಡುತ್ತಿದ್ದ ಎಎಸ್‌ಐ, ಕಾನ್‌ಸ್ಟೇಬಲ್, ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿ ಅರೆಸ್ಟ್

    ಜೂಜಾಡುತ್ತಿದ್ದ ಎಎಸ್‌ಐ, ಕಾನ್‌ಸ್ಟೇಬಲ್, ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿ ಅರೆಸ್ಟ್

    ಚಾಮರಾಜನಗರ: ಅಕ್ರಮ ಜೂಜಾಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ, ಕ್ಲಬ್ ನಡೆಸುತ್ತಿದ್ದ ತಹಸೀಲ್ದಾರ್ ಚಾಲಕ ಸೇರಿದಂತೆ 20 ಮಂದಿಯನ್ನು ಬಂಧಿಸಿರುವ ಘಟನೆ ನಗರಸ ಕರಿನಂಜನಪುರ ಬಳಿ ನಡೆದಿದೆ.

    ಮೀಸಲು ಪಡೆಯ ಎಎಸ್‌ಐ ಪ್ರದೀಪ್, ಹೆಡ್ ಕಾನ್‌ಸ್ಟೇಬಲ್ ಮರಿಸ್ವಾಮಿ, ಚಾಮರಾಜನಗರ ತಹಸೀಲ್ದಾರ್ ಚಾಲಕ ಕಮಲೇಶ್ ಸೇರಿದಂತೆ 20 ಮಂದಿಯನ್ನು ಜಿಲ್ಲಾ ಪೊಲೀಸ್ ವಿಶೇಷ ತಂಡ ಬಂಧಿಸಿ, 29 ಸಾವಿರ ರೂ.ವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    MONEY

    7 ಮಂದಿ ಭಕ್ತರ ಬಂಧನ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಜೂಜಾಡುತ್ತಿದ್ದ 7 ಮಂದಿ ಭಕ್ತರನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ತಲಕಾಡು ಗ್ರಾಮದ ಶಿವಾನಂದಸ್ವಾಮಿ, ನಾಗೇಂದ್ರ ಕುಮಾರ್, ವಿಜಯ್, ಮಹದೇವಪ್ಪ, ಬಸವರಾಜು ಕೃಷ್ಣ, ಸಂತೋಷ್ ಕುಮಾರ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಪೊಲೀಸರು ಲಂಚ ಪಡೆದರೆ ಕೆಲ್ಸ ಆಗುತ್ತೆ, ಬೇರೆಯವರು ಹಣ ಪಡೆದ್ರೂ ಏನೂ ಮಾಡಲ್ಲ: ಪೊಲೀಸ್

    POLICE JEEP

    ಮಲೆ ಮಹದೇಶ್ವರ ಬೆಟ್ಟದ ಸಾಲೂರು ಸ್ಮಾರಕ ಭವನದ ಹಿಂಭಾಗ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಪೊಲೀಸರು ದಾಳಿ ನಡೆಸಿ ಜೂಜಾಡುತ್ತಿದ್ದ 7 ಜನರನ್ನು ಬಂಧಿಸಿ ಪಣಕ್ಕಿಟ್ಟಿದ್ದ 26,750 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್

  • ಬೆಂಗ್ಳೂರಿನ ಅತಿದೊಡ್ಡ ಜೂಜು ಅಡ್ಡೆಯ ಮೇಲೆ ಸಿಸಿಬಿ ರೇಡ್ – ಸ್ಯಾಂಡಲ್‍ವುಡ್ ಫೈನಾನ್ಶಿಯರ್  ಸಂಕಷ್ಟ

    ಬೆಂಗ್ಳೂರಿನ ಅತಿದೊಡ್ಡ ಜೂಜು ಅಡ್ಡೆಯ ಮೇಲೆ ಸಿಸಿಬಿ ರೇಡ್ – ಸ್ಯಾಂಡಲ್‍ವುಡ್ ಫೈನಾನ್ಶಿಯರ್ ಸಂಕಷ್ಟ

    ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರ ದಾಳಿ ಎರಡನೇ ದಿನವೂ ಮುಂದುವರಿದಿದ್ದು, ಜೂಜು ಅಡ್ಡೆಯ ಮೇಲೆ ಸಿಸಿಬಿ ದಾಳಿ ಮಾಡಿದ್ದಾರೆ.

    ಶುಕ್ರವಾರ ಅಕ್ರಮ ಹುಕ್ಕಾ ಬಾರ್ ಗಳ ಮೇಲೆ ನಡೆಸಿದ ಪೊಲೀಸ್ರು ಶನಿವಾರ ರಾತ್ರಿ ಯಶವಂತಪುರದಲ್ಲಿರುವ ಪತ್ರಿಷ್ಠಿತ ಆರ್ ಜೆ  ಹೋಟೆಲಿನಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 9 ಲಕ್ಷ ನಗದು ಮದ್ಯ ಬಾಟಲ್, ನಕಲಿ ಐಡಿಗಳು, 3.5 ಕೋಟಿ ಮೌಲ್ಯದ ಗ್ಯಾಮ್ ಬ್ಲಿಂಗ್ ಟೋಕನ್ ಗಳ ವಶಕ್ಕೆ ಪಡೆದುಕೊಂಡಿದ್ದಾರೆ.

    ದಾಳಿ ವೇಳೆ ಹೊರ ರಾಜ್ಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಜೂಜಾಟ ಆಡುವರನ್ನು ವಿಮಾನದ ಮೂಲಕ ಕರೆತರಲಾಗುತ್ತಿತ್ತು ಎನ್ನಲಾಗಿದೆ. ವಿಮಾನಯಾನಕ್ಕೆ ಶುಲ್ಕವನ್ನು ಆಯೋಜಕರೇ ಪಾವತಿ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿದೆ. ಆರ್ ಜೆ ಹೋಟೆಲಿನಲ್ಲಿ ಜೂಜಾಟ ಆಯೋಜನೆ ಮಾಡಿರುವುದು ಕನ್ನಡ ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದ ಫೈನಾನ್ಶಿಯರ್ ಕಪಾಲಿ ಮೋಹನ್ ಎಂದು ತಿಳಿದು ಬಂದಿದೆ.

    ದಾಳಿ ಬಳಿಕ ಕಪಾಲಿ ಮೋಹನ್ ನಾಪತ್ತೆಯಾಗಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 50 ಬಾರ್ ಗಳನ್ನ ಕಪಾಲಿ ಮೋಹನ್ ಹೊಂದಿದ್ದಾರೆ. ಸಿಸಿಬಿ ದಾಳಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಯೋಜಕರೇ ಜೂಜಾಟ ಆಡುವರನ್ನು ವಿಮಾನದ ಮೂಲಕ ನಗರಕ್ಕೆ ಕರೆತಂದು ಜೂಜಾಟ ಆಡಿಸುತ್ತೀರುವುದು ಪತ್ತೆ ಮಾಡಿದ್ದಾರೆ.

    ಸೂಸೈಟಿ ಆಕ್ಟ್ ಪ್ರಕಾರ ನೋಂದಣಿಯಾಗಿರಬೇಕು. ಆದರೆ ಲೈಸನ್ಸ್ ನ ಅವಧಿ ಮುಗಿದು ಎರಡು ವರ್ಷ ಆಗಿದೆ. ಆದರೂ ರಿನಿವಲ್ ಮಾಡಿಕೊಂಡಿಲ್ಲ. ಜೂಜಾಟ ಆಡಲು ಬಂದಿರುವರಿಗೆ ಸ್ಥಳದಲ್ಲೇ ಯಾವ ರೀತಿ ಐಡಿ ಕಾರ್ಡ್ ಗಳನ್ನು ತಯಾರು ಮಾಡಿಕೊಡುತ್ತಿರುವುದು ಪತ್ತೆಯಾಗಿದೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 47 ಜನರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಲೋಕ್ ಕುಮಾರ್ ಖದರ್‌ಗೆ ಬೆಂಗಳೂರು ಮಹಿಳೆಯರು ಫಿದಾ!

    ಅಲೋಕ್ ಕುಮಾರ್ ಖದರ್‌ಗೆ ಬೆಂಗಳೂರು ಮಹಿಳೆಯರು ಫಿದಾ!

    ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ಕಾರ್ಯಕ್ಕೆ ಬೆಂಗಳೂರಿನ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದು, ಅಲೋಕ್ ಕುಮಾರ್ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.

    ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜು ಅಡ್ಡೆ, ಇಸ್ಪೀಟ್ ದಂಧೆ, ಗ್ಯಾಬ್ಲಿಂಗ್ ಅಡ್ಡ ಹಾಗೂ ಕ್ಲಬ್ ಮೇಲೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಎಡಿಜಿಪಿ ಅಲೋಕ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ಮಹಿಳೆಯರು ತಿಳಿಸಿದ್ದಾರೆ. ಕುರುಬರಹಳ್ಳಿ ಮಹಿಳಾ ಸಂಘದಿಂದ ಸಂಭ್ರಮಾಚರಣೆ ನಡೆದಿದ್ದು, ಜೂಜು ಅಡ್ಡೆಯ ಮೇಲೆ ದಾಳಿ ನಡೆಯುತ್ತಿರುವುದರಿಂದ ಮಹಿಳೆಯರು ನೆಮ್ಮದಿಯಿಂದ ಇರಬಹುದು. ಅಲೋಕ್ ಕುಮಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದು, ಉತ್ತಮ ಕಾರ್ಯ ಮುಂದುವರಿಸಲಿ ಎಂದು ತಿಳಿಸಿದ್ದಾರೆ.

    ಅಲೋಕ್ ಕುಮಾರ್ ಅವರನ್ನು ನೇರ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಅದ್ದರಿಂದ ಈ ರೀತಿ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ಅವರನ್ನು ನೇರ ಭೇಟಿ ಮಾಡಲು ಅವಕಾಶ ಕೇಳಿದ್ದು ಭೇಟಿ ಮಾಡಿ ಶುಭ ಕೋರುತ್ತವೆ. ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಅಲೋಕ್ ಕುಮಾರ್ ಅವರು ಹೆಚ್ಚಿನ ಕ್ರಮಕೈಗೊಂಡಿದ್ದಾರೆ ಎಂದು ಮಹಿಳಾ ಸಂಘದ ಗೀತಾ ತಿಳಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಅಲೋಕ್ ಕುಮಾರ್ ಅವರ ಆದೇಶದ ಮೇರೆಗೆ ಸಿಸಿಬಿ ಪೊಲೀಸರು ಮೆಜೆಸ್ಟಿಕ್, ಚಿಕ್ಕಪೇಟೆ, ಬಳೇಪೇಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 38 ಲಕ್ಷ ರೂ. ನಗದು, ಹಣ ಲೆಕ್ಕ ಮಾಡುವ ಮಷಿನ್‍ಗಳು ಮತ್ತು 26 ಕ್ಲಬ್‍ನ ಮಾಲೀಕರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದರು. ಪ್ರಮುಖವಾಗಿ ಇಲ್ಲಿನ ಮಹಾಲಕ್ಷ್ಮೀ ಸ್ಪೋಟ್ರ್ಸ್ ಅಂಡ್ ಕ್ಲಬ್, ಕಲ್ಚರಲ್, ಬ್ಲೂಸ್ ಕ್ಲಬ್ ಗಳಲ್ಲಿ ಅಕ್ರಮವಾಗಿ ವಿವಿಧ ರೀತಿಯ ಜೂಜಾಟ ನಡೆಯುತ್ತಿತ್ತು.

    ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ನೇಮಕ ಮಾಡಿತ್ತು. ಇದರೊಂದಿಎ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದೆಯೂ ಬೆಂಗಳೂರಿನಲ್ಲಿ ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ಅಲೋಕ್ ಕುಮಾರ್ ಅವರು ಉತ್ತರ ವಲಯದ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿಗೆ ಅಲೋಕ್ ಕುಮಾರ್ ಸೂಚನೆ, 150 ಕ್ಕೂ ಅಧಿಕ ಮಂದಿ ವಶ

    ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿಗೆ ಅಲೋಕ್ ಕುಮಾರ್ ಸೂಚನೆ, 150 ಕ್ಕೂ ಅಧಿಕ ಮಂದಿ ವಶ

    – ಅಧಿಕಾರ ವಹಿಸಿಕೊಂಡ 3 ದಿನದಲ್ಲೇ ಸ್ಪಷ್ಟ ಸಂದೇಶ

    ಬೆಂಗಳೂರು: ಸಿಸಿಬಿ ಪೊಲೀಸರು ಮೆಜೆಸ್ಟಿಕ್, ಚಿಕ್ಕಪೇಟೆ, ಬಳೇಪೇಟೆಯಲ್ಲಿ ಅಕ್ರಮ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ.

    ಅಕ್ರಮ ಜೂಜು ಅಡ್ಡೆಗಳ ಮೇಲೆ ರೈಡ್ ಮಾಡಿದ ಪೊಲೀಸರು ದಾಳಿ ಮಾಡಿದ ಸ್ಥಳದಲ್ಲಿ 38 ಲಕ್ಷ ರೂ. ನಗದು, ಹಣ ಲೆಕ್ಕ ಮಾಡುವ ಮಷಿನ್‍ಗಳು ಮತ್ತು 26 ಕ್ಲಬ್‍ನ ಮಾಲೀಕರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಮಹಾಲಕ್ಷ್ಮೀ ಸ್ಪೋರ್ಟ್ಸ್ ಅಂಡ್ ಕ್ಲಬ್, ಕಲ್ಚರಲ್, ಬ್ಲೂಸ್ ಕ್ಲಬ್‍ ಗಳಲ್ಲಿ ಅಕ್ರಮವಾಗಿ ವಿವಿಧ ರೀತಿಯ ಜೂಜಾಟ ನಡೆಯುತ್ತಿತ್ತು.

    ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ಕುಮಾರ್ ಸೂಚನೆ ಮೇರೆಗೆ ಈ ದಾಳಿ ನಡೆಸಲಾಗಿದೆ. ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಭಾನುವಾರ ತಡರಾತ್ರಿವರೆಗೂ ಈ ದಾಳಿ ಮುಂದುವರೆದಿದ್ದು, ಈ ಮೂಲಕ ಸಿಸಿಬಿ ಪೊಲೀಸರು ಅಕ್ರಮ ಚಟುವಟಿಗೆ ಮಾಡುವರಿಗೆ ಇನ್ನು ಉಳಿಗಾಲವಿಲ್ಲ ಅನ್ನೋ ಸಂದೇಶವನ್ನು ರವಾನೆ ಮಾಡಿದ್ದಾರೆ.

    ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯಾಗಿದ್ದು, 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದೆ ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ಹಾಲಿ ಉತ್ತರ ವಲಯದ ಐಜಿಪಿಯಾಗಿರುವ ಅಲೋಕ್ ಕುಮಾರ್ ಸಿಸಿಬಿ ಎಡಿಜಿಪಿ ಹುದ್ದೆಗೆ ವರ್ಗವಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv