Tag: ಜೂಜು

  • ಇಸ್ಪಿಟ್ ಆಡುತ್ತಿದ್ದ ನಗರಸಭೆ ಸದಸ್ಯ ಸಹಿತ 14 ಜನರ ಬಂಧನ

    ಇಸ್ಪಿಟ್ ಆಡುತ್ತಿದ್ದ ನಗರಸಭೆ ಸದಸ್ಯ ಸಹಿತ 14 ಜನರ ಬಂಧನ

    ಚಿತ್ರದುರ್ಗ: ಸರ್ಕಾರಿ ಐಬಿಯಲ್ಲಿ ಇಸ್ಪಿಟ್ (Ispit) ಆಡುತ್ತಿದ್ದ ನಗರಸಭೆ ಸದಸ್ಯ ಸೇರಿದಂತೆ 14 ಜನರನ್ನು ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಚಿತ್ರದುರ್ಗ (Chitaradurga) ಜಿಲ್ಲೆ ಹಿರಿಯೂರು (Hiriyuru) ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ಬಳಿಯ ಐಬಿಯನ್ನೇ ಜೂಜು ಅಡ್ಡೆಯಾಗಿಸಿಕೊಂಡಿದ್ದ ಚಿತ್ರದುರ್ಗ ಉಸ್ತುವಾರಿ ಸಚಿವ ಡಿ ಸುಧಾಕರ್ ಬೆಂಬಲಿಗರು ಹಾಗೂ ನಗರಸಭೆ ಸದಸ್ಯರಾದ ಜಗದೀಶ್, ಅಜಯ್ ಕುಮಾರ್ ಮತ್ತು ಅನಿಲ್ ಕುಮಾರ್ ನೇತೃತ್ವದಲ್ಲಿ ಇಸ್ಪಿಟ್ ಆಡುತ್ತಿದ್ದರು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಎಸ್‌ಪಿ ಧರ್ಮೇಂದರ್ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದರು.

    ಈ ವೇಳೆ ಬಂಧಿತರಿಂದ 4 ಲಕ್ಷದ 37 ಸಾವಿರ ರೂ. ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಹಿರಿಯೂರು ನಗರಸಭೆ ಸದಸ್ಯ ಜಗದೀಶ್ ಸೇರಿದಂತೆ 14 ಜನರನ್ನು ಬಂಧಿಸಿದ್ದು, ಮತ್ತಿಬ್ಬರು ನಗರಸಭೆ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಅಜ್ಜಪ್ಪ ಪರಾರಿಯಾಗಿದ್ದಾರೆ. ಹೀಗಾಗಿ ಮೂವರು ನಗರಸಭೆ ಸದಸ್ಯರು ಹಾಗೂ ಐಬಿ ಮೇಟಿ ನಾಸಿರ್ ಸೇರಿದಂತೆ ಹಲವರ ವಿರುದ್ಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು, ಕೇರಳ ಮೇಲ್ಮೈ ಸುಳಿಗಾಳಿ ಎಫೆಕ್ಟ್- ಬೆಂಗಳೂರು ಇನ್ನೂ 2 ದಿನ ಕೂಲ್ ಕೂಲ್

    ಇನ್ನು ಪ್ರವಾಸಕ್ಕೆ ಬರುವ ಪ್ರವಾಸಿಗರು ತಂಗಲು ಒಂದು ರೂಂ ಕೊಡಲು ಮೀನಾಮೇಷ ಎಣಿಸುವ ಪಿಡಬ್ಲುಡಿ ಇಲಾಖೆ ಅಧಿಕಾರಿಗಳು, ಉಸ್ತುವಾರಿ ಸಚಿವ ಸುಧಾಕರ್ ಅವರ ಬೆಂಬಲಿಗರಿಗೆ ಇಸ್ಪಿಟ್ ಆಡಲು ಐಬಿ ನೀಡಿರೋದು ವಿಪರ್ಯಾಸ ಎನಿಸಿದ್ದು, ರೆಡ್ ಹ್ಯಾಂಡಾಗಿ ಜೂಜುಕೋರರನ್ನು ಬಂಧಿಸಿರುವ ಹಿರಿಯೂರು ಠಾಣೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ದಂಧೆಯಲ್ಲಿ ಸಿಲುಕಿರುವ ನಗರಸಭೆ ಸದಸ್ಯರ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ನಗರದ ಅಭಿವೃದ್ಧಿಯತ್ತ ಯೋಚಿಸದ ಜೂಜುಕೋರರನ್ನು ನಗರಸಭೆ ಸದಸ್ಯನನ್ನಾಗಿಸಿ ತಪ್ಪು ಮಾಡಿದೆವು ಅಂತ ಪಶ್ಚಾತಾಪ ಪಟ್ಟಿರುವ ಜನಸಾಮಾನ್ಯರು ಇವರ ಮಹತ್ಕಾರ್ಯಕ್ಕೆ ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟ ರವಿಕಿರಣ್‍ಗೆ ಲಕ್ಷ ಲಕ್ಷ ದೋಖಾ

  • ಆನ್‌ಲೈನ್‌ ಜೂಜಾಟದಿಂದ ಬಂತು 11 ಕೋಟಿ – ಆ ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್‌ಗೈದವರು ಅರೆಸ್ಟ್‌

    ಆನ್‌ಲೈನ್‌ ಜೂಜಾಟದಿಂದ ಬಂತು 11 ಕೋಟಿ – ಆ ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್‌ಗೈದವರು ಅರೆಸ್ಟ್‌

    ಹುಬ್ಬಳ್ಳಿ: ಆನ್‌ಲೈನ್‌ ಜೂಜಾಟದಿಂದ 11 ಕೋಟಿ ಗೆದ್ದ ಸ್ನೇಹಿತನನ್ನೇ ಅಪಹರಣಗೈದ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಆನ್‌ಲೈನ್ ಜೂಜಾಟದ ಅಪ್ಲಿಕೇಶನ್‌ಗಳು ಹೆಚ್ಚಾಗಿದ್ದು, ಈ ಆಪ್‌ಗಳಲ್ಲಿ ದಿನಕ್ಕೆ ನೂರು ರೂಪಾಯಿಯಿಂದ ಕೋಟಿ ರೂಪಾಯಿ ಗೆಲ್ಲುವವರು ಇದ್ದಾರೆ. ಅದೇ ತರಹ ಸೋಲುವವರು ಇದ್ದಾರೆ. ಆದರೆ ಹುಬ್ಬಳ್ಳಿಯ ಗಿಲಾವರ್‌ಗೆ ಮಾತ್ರ ಅದೃಷ್ಟ ಫುಲ್ ಕುಲಾಯಿಸಿದೆ. ಆನ್ ಲೈನ್ ಕ್ಯಾಸಿನೋ ಆಪ್ ನಲ್ಲಿ ಬೇರೊಬ್ಬರಿ 11 ಕೋಟಿ ಗೆದ್ದಿದ್ದಾನೆ. ಈಗ ಇದೇ ಗಿಲಾವರ್ ಪ್ರಾಣ ಸ್ನೇಹಿತ ಗರೀಬ್‌ನ ಪ್ರಾಣಕ್ಕೆ ಕುತ್ತು ತಂದಿದೆ. ಹಣಕ್ಕಾಗಿ ಗರೀಬ್ ಸ್ನೇಹಿತರೇ ಆತನನ್ನು ಕಿಡ್ನಾಪ್ ಮಾಡಿದ್ದಾರೆ.

    ಗಿಲಾವರ್ ಮತ್ತು ಗರೀಬ್ ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಗಿವಾವರ್ ಗೆ ಆನ್ ಲೈನ್ ಜೂಜಾಟವಾಡುವ ಅಭ್ಯಾಸವಿದ್ದು, ಹಲವಾರು ದಿನಗಳಿಂದ ಆನ್ ಲೈನ್ ಕ್ಯಾಸಿನೋ ಜೂಜು ಆಡುತ್ತಿದ್ದ. ಕಳೆದ ತಿಂಗಳು ಗಿಲಾವರ್ ಅದೃಷ್ಟ ಕುಲಾಯಿಸಿ ಬರೊಬ್ಬರಿ 11 ಕೋಟಿ ಗೆದ್ದಿದ್ದ.

    ಹಣವನ್ನು ಬಿಡಿಸಿಕೊಳ್ಳಲು ಗಿಲಾವರ್‌ಗೆ ಬ್ಯಾಂಕ್ ಖಾತೆ ಇರಲಿಲ್ಲ. ಹೀಗಾಗಿ ಆತನ ಸ್ನೇಹಿತ ಗರೀಬ್ ಬಳಿ ಹಣ ತೆಗೆಯಲು ಸಹಾಯ ಕೇಳಿದ್ದು, ಗರೀಬ್ ತನ್ನ ಇನ್ನೊಬ್ಬ ಸ್ನೇಹಿತ ಮಹಮ್ಮದ್ ಎಂಬಾತನಗೆ ವಿಷಯ ತಿಳಿಸಿ, ಆತನ ಖಾತೆಗೆ 2 ಕೋಟಿ ಹಣ ವರ್ಗಾವಣೆ ಮಾಡಿಸಿದ್ದಾನೆ. ಹಣ ವರ್ಗಾವಣಾಗುತ್ತಿದ್ದಂತೆ, ಗರೀಬ್, ಗಿಲಾವರ್ ಮತ್ತು ಮಹಮ್ಮದ್ ಫುಲ್ ಮಜಾ ಮಾಡಿದ್ದಾರೆ. ಇದನ್ನೂ ಓದಿ: ಬಿಕಿನಿ ಧರಿಸಿದ ಫೋಟೋ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡ ಪ್ರಾಧ್ಯಾಪಕಿ

    ಸ್ವಲ್ಪ ದಿನವಾದ ಮೇಲೆ ಮಹಮ್ಮದ್‌ಗೆ ದುರಾಸೆ ಹುಟ್ಟಿಕೊಂಡಿದೆ. ಇವರ ಬಳಿ ಇನ್ನೂ ಹಣವಿದೆ ಹೇಗಾದರೂ ಮಾಡಿ ವಶಪಡಿಸಿಕೊಳ್ಳಬೇಕು ಎಂದು ಆಲೋಚಿಸಿ ಗಿಲಾವರ್‌ನನ್ನು ಕಿಡ್ನ್ಯಾಪ್‌ ಮಾಡುವ ಪ್ಲಾನ್ ಮಾಡಿದ್ದಾನೆ. ಈ ವಿಚಾರವನ್ನು ಸ್ನೇಹಿತರಿಗೆ ತಿಳಿಸಿದ್ದಾನೆ. ಸ್ನೇಹಿತರು ಈ ಕೆಲಸಕ್ಕೆ ಸಾಥ್‌ ನೀಡುತ್ತೇವೆ ಎಂದು ಹೇಳಿದ್ದಾರೆ.

    ಗಿಲಾವರ್‌ಗೆ ಕರೆ ಮಾಡಿದಾಗ ಆತ ಊರಿಗೆ ಹೋಗಿರುವ ವಿಚಾರ ತಿಳಿಯುತ್ತದೆ. ಗಿಲಾವರ್‌ ಇಲ್ಲದ ಹಿನ್ನೆಲೆಯಲ್ಲಿ ಗರೀಬ್‌ನನ್ನು ಅಪಹರಣ ಮಾಡಲು ಗ್ಯಾಂಗ್‌ ಮುಂದಾಗುತ್ತದೆ. ಆ.6 ರಂದು ಸ್ನೇಹಿತರ ಮೂಲಕ ಗರೀಬ್‌ಗೆ ಬಿವಿಬಿ ಕಾಲೇಜಿಗೆ ಬರುವಂತೆ ಕರೆ ಮಾಡಿದ್ದಾರೆ. ಗರೀಬ್‌ ಕಾಲೇಜಿಗೆ ಬರುತ್ತಿದ್ದಂತೆ ಗ್ಯಾಂಗ್‌ ಕಿಡ್ನ್ಯಾಪ್‌ ಮಾಡಿ, ಗಿಲಾವರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಗಾಬರಿಗೊಂಡ ಗಿಲಾವರ್, ಗರೀಬ್ ಮನೆಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಮನೆಯವರು ವಿವಿಧ ಕಡೆ ಗರೀಬ್‌ಗಾಗಿ ಹುಡುಕಿದ್ದಾರೆ. ಬಳಿಕ ಬೆಂಡಿಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಒಟ್ಟು ‌ಐದು ತಂಡಗಳನ್ನು ರಚಿಸಿಕೊಂಡು, ಶೀಘ್ರವಾಗಿ ಕಾರ್ಯೋನ್ಮುಖರಾಗಿದ್ದಾರೆ. ಮೊಬೈಲ್ ನೆಟ್‌ವರ್ಕ್‌ ಆಧರಿಸಿ ಕಿಡ್ನ್ಯಾಪ್‌ ಮಾಡಿ ಗರೀಬ್ ಬಚ್ಚಿಟ್ಟಿದ್ದ ಸ್ಥಳವನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಕಿಡ್ನ್ಯಾಪ್‌ ಮಾಡಿದ್ದ ಮಹಮ್ಮದ್ ಮತ್ತು ಆತನ 7 ಮಂದಿ ಸ್ನೇಹಿತರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

    ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

    ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ಗೋವಾ/ ಶ್ರೀಲಂಕಾ ಕ್ಯಾಸಿನೋ ಜೂಜು ಅಡ್ಡೆ ಬಿಸಿನೆಸ್ ಪಾಯಿಂಟ್ ಆಗಿ ಸ್ಯಾಂಡಲ್‍ವುಡ್ ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಬೆಂಗಳೂರಿನ ಅಕ್ರಮ ಕ್ಯಾಸಿನೋ ಅಡ್ಡೆ ಬಾರಿ ಕೋಲಾಹಾಲ ಸೃಷ್ಟಿಸುವ ಸಂಕೇತಗಳು ಕಾಣುತ್ತಿದೆ.

    ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಕ್ಯಾಸಿನೋ ಅಡ್ಡ ತಲೆಯೆತ್ತಿದೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೀಸ್ ರಸ್ತೆ ಹೆಚ್ ಆರ್ ಬಿ ಆರ್ ಬಡಾವಣೆ ಹಾಗೂ ಕಮ್ಮನಹಳ್ಳಿ ಮುಖ್ಯ ರಸ್ತೆಗಳಲ್ಲಿ ಕ್ಯಾಸಿನೋ ಜೂಜು ಅಡ್ಡೆ ಈಗ ಆರಂಭವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ 

     

    ಕೋವಿಡ್ ಆರ್ಥಿಕ ದುಸ್ಥಿತಿಯಲ್ಲಿ ಬಡವರು ಜೂಜು ಆಟವಾಡಿ ಮತ್ತಷ್ಟು ಗಂಭೀರ ಸನ್ನಿವೇಶಕ್ಕೆ ಕಾರಣವಾಗಬಹುದು ಎಂದು ಖುದ್ದು ಶಾಸಕ ಜಾರ್ಜ್ ಪೊಲೀಸ್ ಮಹಾ ನಿರ್ದೇಶಕರು, ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅಕ್ರಮ ಕ್ಯಾಸಿನೋ ನಿಲ್ಲಿಸಲು ಪತ್ರ ಮೂಲಕ ಮಾಹಿತಿ ಕೊಡಲಾಗಿದೆ.

    ಅಕ್ರಮ ಜೂಜು ಅಡ್ಡೆಗಳಿಂದ ಕಾನೂನು ಅಪರಾಧಗಳು ಹೆಚ್ಚಾಗಿವೆ. ಹೀಗಾಗಿ ತುರ್ತಾಗೆ ಈ ಜೂಜು ಅಡ್ಡೆಗಳನ್ನು ನಿಲ್ಲಿಸಬೇಕೆಂದು ಜಾರ್ಜ್ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನೀನು ಹುಟ್ಟಿದ್ಮೇಲೆ ಸೌಂದರ್ಯ ಹಾಳಾಯ್ತು – ಚಪ್ಪಲಿಯಿಂದ ಮಗುವಿನ ಮೇಲೆ ತಾಯಿ ಹಲ್ಲೆ

  • ಜೂಜು ಅಡ್ಡದ ಮೇಲೆ ಪೊಲೀಸರ ದಾಳಿ- 11 ಜನರ ಬಂಧನ

    ಜೂಜು ಅಡ್ಡದ ಮೇಲೆ ಪೊಲೀಸರ ದಾಳಿ- 11 ಜನರ ಬಂಧನ

    – ಲಕ್ಷಾಂತರ ರೂಪಾಯಿ ಹಣ, ಬೈಕಗಳ ಜಪ್ತಿ

    ಯಾದಗಿರಿ: ಹುಣಸಗಿ ಪಟ್ಟಣದ ಆಶ್ರಯ ಕಾಲೋನಿಯ ಹಿಂಭಾಗದ ಸಾರ್ವಜನಿಕ ಹಳ್ಳದ ಹತ್ತಿರ ಅಕ್ರಮವಾಗಿ ಜೂಜಾಡುತ್ತಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು, 11 ಜನ ಜೂಜುಕೋರರನ್ನು ವಶಕ್ಕೆ ಪಡೆದು, ಒಂದು ಲಕ್ಷ ಹದಿನೈದು ಸಾವಿರ ರೂಪಾಯಿ, 6 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.

    ಹುಣಸಗಿ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಿವಿಧ ಕಡೆ ಅಕ್ರಮವಾಗಿ ಜೂಜು ಅಡ್ಡೆಗಳು ನಿರ್ಮಾಣಗೊಂಡು, ಯುವಕರನ್ನು ದಾರಿ ತಪ್ಪಿಸುವ ದಂಧೆ ನಡೆದಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳು ಕೇಳಿಬಂದವು.

    ಇಂದು ಜೂಜಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಡಿವೈಎಸ್ಪಿ ವೆಂಕಟೇಶ್ ಹೊಗಿಬಂಡಿ ನೇತೃತ್ವದಲ್ಲಿ ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಸಿಪಿಐ ದೌಲತ್ ಕುರಿ, ಪಿಎಸ್‍ಐ ಬಾಪುಗೌಡ ಸಹ ಭಾಗಿಯಾಗಿದ್ದರು. ಇದನ್ನೂ ಓದಿ: ವೇಶ್ಯಾವಾಟಿಕೆ ದಂಧೆ – ಲಾಡ್ಜ್ ಮೇಲೆ ಪೊಲೀಸರ ದಾಳಿ

  • ಗೂಗಲ್ ಪ್ಲೇ ಸ್ಟೋರ್‌ನಿಂದ ಔಟ್- ಗ್ರಾಹಕರಿಗೆ ಪೇಟಿಎಂ ಸ್ಪಷ್ಟನೆ

    ಗೂಗಲ್ ಪ್ಲೇ ಸ್ಟೋರ್‌ನಿಂದ ಔಟ್- ಗ್ರಾಹಕರಿಗೆ ಪೇಟಿಎಂ ಸ್ಪಷ್ಟನೆ

    ನವದೆಹಲಿ: ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಗಳಿಂದ ಗೂಗಲ್ ಪ್ಲೇ ಸ್ಟೋರ್ ನಿಂದ ಪೇಟಿಎಂ ಆ್ಯಪ್ ಹಾಗೂ ಪೇಟಿಎಂ ಗೇಮ್ಸ್ ಅಪ್ಲಿಕೇಶನ್‍ಗಳನ್ನು ತೆಗೆದುಹಾಕಲಾಗಿದೆ. ಗ್ಯಾಂಬ್ಲಿಂಗನ್ನು ಪ್ರೇರೆಪಿಸುವ ಆ್ಯಪ್‍ಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಗೂಗಲ್ ತನ್ನ ಕ್ರಮದ ಕುರಿತು ಸ್ಪಷ್ಟನೆ ನೀಡಿದೆ.

    ಗೂಗಲ್ ತನ್ನ ಬ್ಲಾಗ್‍ನಲ್ಲಿ ‘ಭಾರತದಲ್ಲಿ ಪ್ಲೇ ಸೋರ್ ನ ಜೂಜಾಟದ ನೀತಿಗಳ ಅರ್ಥ ಮಾಡಿಕೊಳ್ಳುವಿಕೆ’ ಎಂಬ ಶೀರ್ಷಿಕೆ ಅಡಿಯಲ್ಲಿ ಶುಕ್ರವಾರ ಬರಹವನ್ನು ಪ್ರಕಟಿಸಿದೆ. ಈ ಬರಹದಲ್ಲಿ ಹೊಸ ಮಾರ್ಗದರ್ಶಿ ನಿಯಮಗಳ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೇ ಗ್ರಾಹಕರಿಗೆ ಸುರಕ್ಷಿತ ಅನುಭವ ಹಾಗೂ ಡೆವಲಪರ್ ಮತ್ತು ಗ್ರಾಹಕರಿಗೆಲ್ಲರಿಗೂ ಒಳಿತಾಗುವ ಜಾಗತಿಕ ನೀತಿಯನ್ನು ನಾವು ಅನುಸರಿಸುತ್ತೇವೆ ಎಂದು ಗೂಗಲ್ ಹೇಳಿದೆ.

    ಗ್ರಾಹಕರಿಗೆ ಸುರಕ್ಷಿತೆಯ ದೃಷ್ಟಿಯಿಂದ ಗೂಗಲ್ ಪ್ಲೇಯನ್ನು ರೂಪಿಸಲಾಗಿದೆ. ಇದೇ ವೇಳೆ ಡೆವಲಪರ್ ಗಳಿಗೆ ಸ್ಥಿರ ವ್ಯವಹಾರವನ್ನು ನಿರ್ಮಿಸಲು ಅಗತ್ಯವಾದ ವೇದಿಕೆಯನ್ನು ನೀಡುತ್ತಿದ್ದೇವೆ. ನಮ್ಮ ಜಾಗತಿಕ ಗೂಗಲ್ ನಿಯಮಗಳು ಯಾವಾಗಲೂ ಈ ಅಂಶಗಳೊಂದಿಗೆ ನಿರೂಪಿಸಲಾಗುತ್ತದೆ. ನಮ್ಮ ಎಲ್ಲಾ ಷೇರುದಾರರ ಒಳ್ಳೆಯದನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಗೂಗಲ್ ಹೇಳಿದೆ.

    ನಮ್ಮ ಜೂಜು ನೀತಿಗೂ ಒಂದೇ ಗುರಿಯನ್ನು ಹೊಂದಿದ್ದು, ನಾವು ಆನ್‍ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ. ಕ್ರೀಡಾ ಬೆಟ್ಟಿಂಗ್‍ಗಳಿಗೆ ಅನುಕೂಲವಾಗುವ ಯಾವುದೇ ಅಪ್ಲಿಕೇಶನ್‍ಗಳನ್ನು ಬೆಂಬಲಿಸುವುದಿಲ್ಲ. ಯಾವುದೇ ಅಪ್ಲಿಕೇಶನ್ ಗ್ರಾಹಕರನ್ನು ಹಣ ಪಾವತಿಸುವ ಟೂರ್ನಿಗಳಿಗೆ ಕರೆದೊಯ್ಯುತ್ತಿದ್ದರೆ ಇದು ನಮ್ಮ ನಿಯಮಗಳ ಉಲ್ಲಂಘಟನೆಯಾಗಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ.

    ಪೇಟಿಎಂ ಸ್ಪಷ್ಟನೆ: ಪೇಟಿಎಂ ಆಂಡ್ರಾಯ್ಡ್ ಆ್ಯಪ್ ತಾತ್ಕಾಲಿಕವಾಗಿ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿಲ್ಲ. ಹೊಸದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಹಾಗೂ ಅಪ್‍ಡೇಟ್ ಮಾಡಲು ಇದರಿಂದ ಸಾಧ್ಯವಿಲ್ಲ. ಶೀಘ್ರವೇ ಮತ್ತೆ ಆ್ಯಪ್ ಲಭ್ಯವಾಗಲಿದೆ. ನಿಮ್ಮ ಹಣ ಸುರಕ್ಷಿತವಾಗಿದ್ದು, ಎಂದಿನಂತೆ ವ್ಯವಹಾರವನ್ನು ನಡೆಸಬಹುದು ಎಂದು ಹೇಳಿದೆ.

  • ಕೋಲಾರದಲ್ಲಿ ಎಗ್ಗಿಲ್ಲದೆ ನಡೀತಿದೆ ಅಂತರ್ ರಾಜ್ಯ ಗ್ಯಾಂಬ್ಲಿಂಗ್

    ಕೋಲಾರದಲ್ಲಿ ಎಗ್ಗಿಲ್ಲದೆ ನಡೀತಿದೆ ಅಂತರ್ ರಾಜ್ಯ ಗ್ಯಾಂಬ್ಲಿಂಗ್

    – ಲಕ್ಷಾಂತರ ರೂ. ಅಂದರ್ ಬಾಹರ್ ಆಡ್ತಾರೆ ಶ್ರೀಮಂತರು

    ಕೋಲಾರ: ಜಿಲ್ಲೆಯಲ್ಲಿ ಅಂತರ್ ರಾಜ್ಯ ಹೈಟೆಕ್ ಜೂಜು ಅಡ್ಡೆಯೊಂದು ತಲೆ ಎತ್ತಿದ್ದು, ಪ್ರತಿದಿನ ಲಕ್ಷಾಂತರ ರೂಪಾಯಿ ಜೂಜಾಟ ನಡೆಯುವ ಈ ಅಡ್ಡೆಗೆ ಪೊಲೀಸರ ಕುಮ್ಮಕ್ಕು ಸಹ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

    ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಂದರ್ ಬಾಹರ್ ಜೂಜು ನಿರಾಂತಕವಾಗಿ ನಡೆಯುತ್ತಿದೆ. ಪ್ರತಿ ನಿತ್ಯ ನೂರಾರು ಮಂದಿ ಒಂದೆಡೆ ಸೇರಿ ಎರಡು ಪಾಳಿಗಳಲ್ಲಿ ಜೂಜು ಕೇಂದ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ನಿತ್ಯವೂ ಲಕ್ಷಾಂತರ ರೂಪಾಯಿ ವರೆಗೆ ವಹಿವಾಟು ನಡೆಯುತ್ತಿದೆ. ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಮತ್ತು ಪುಂಗನೂರು ಕ್ರಾಸ್ ಬಳಿಯಿರುವ ಅವಲಕೊಪ್ಪ ಗ್ರಾಮದಲ್ಲಿ ಜೂಜು ಕೇಂದ್ರವನ್ನು ಅನಧೀಕೃತವಾಗಿ ನಡೆಸಲಾಗುತ್ತಿದೆ.

    ಐದಾರು ತಿಂಗಳುಗಳಿಂದ ಲಾಕ್‍ಡೌನ್ ಸಂದರ್ಭದಲ್ಲೂ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ನಡೆಯುತ್ತಿದೆ. ಕೋಲಾರ, ಬೆಂಗಳೂರು, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ಮದನಪಲ್ಲಿ ಸೇರಿದಂತೆ ಇತರೆರೆಡೆಗಳಿಂದ ನೂರಾರು ಮಂದಿ ಪ್ರತಿ ದಿನ ಅಡ್ಡೆಗೆ ಆಗಮಿಸಿ ಲಕ್ಷಾಂತರ ರೂ. ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ತಾತ್ಕಾಲಿಕ ಡೇರಾ ಹಾಕಿ ಜೂಜು ಕೇಂದ್ರ ನಡೆಸುತ್ತಿದ್ದು, ಆಡುವವರಿಂದ ತಲಾ 1 ಸಾವಿರ ಪ್ರವೇಶ ದರ ವಸೂಲು ಮಾಡಲಾಗುತ್ತಿದೆ. ಹೀಗೆ ಜೂಜಾಟವಾಡಿಸುವವರು ನಿತ್ಯವೂ ಎರಡು ಲಕ್ಷ ರೂ.ಗಳ ವರೆಗೆ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಜೂಜು ಕೇಂದ್ರಗಳಲ್ಲಿ ಆಟವಾಡಲು ಶೇ.10ಕ್ಕಿಂತ ಹೆಚ್ಚು ಬಡ್ಡಿ ದರದಲ್ಲಿ ಸಾಲ ನೀಡುವ ಸೌಲಭ್ಯವೂ ಇಲ್ಲಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ

    ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ

    ದಾವಣಗೆರೆ: ಜೂಜಿನ ಪಾರಿವಾಳ ವಿಚಾರಕ್ಕೆ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಇಂದು ನಡೆದಿದೆ.

    ಶ್ರೀನಿವಾಸ್ ನಗರದ ನಿವಾಸಿ ನಟರಾಜ್ (30) ಹಲ್ಲೆಗೊಳಗಾದ ಯುವಕ. ಭಾರತ್ ಕಾಲೋನಿಯ ಸಂತೋಷ್ ಹಾಗೂ ಅವನ ಗೆಳೆಯರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಟರಾಜ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ನಟರಾಜ್ ಪಾರಿವಾಳಗಳನ್ನು ಸಾಕಿ ಅವುಗಳಿಗೆ ತರಬೇತಿ ನೀಡಿ ಜೂಜಿಗೆ ಬಿಡುತ್ತಿದ್ದ. ಹೀಗಾಗಿ ಸಂತೋಷ್ ಹಾಗೂ ಆತನ ಗೆಳೆಯರು ಮದ್ಯ ಮತ್ತಿನಲ್ಲಿ ಪಾರಿವಾಳವನ್ನು ಖರೀದಿಸಲು ಇಂದು ನಟರಾಜ್ ಮನೆಗೆ ಬಂದಿದ್ದರು. ಆದರೆ ನಟರಾಜ್ ಪಾರಿವಾಳ ಮಾರಲು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಸಂತೋಷ್ ಗಲಾಟೆ ಆರಂಭಿಸಿದ್ದ. ಬಳಿಕ ನಟರಾಜ್‍ನನ್ನು ಚರಂಡಿಯಲ್ಲಿ ಕೂರಿಸಿ ಮನಬಂದಂತೆ ಥಳಿಸಿದ್ದಾರೆ.

    ಸ್ಥಳೀಯರು ಹಾಗೂ ನಟರಾಜ್ ಕುಟುಂಬಸ್ಥರು ಬಿಡಿಸಲು ಬಂದರೂ ಸಂತೋಷ್ ಹಾಗೂ ಆತನ ಸ್ನೇಹಿತರು ನಟರಾಜ್‍ಗೆ ಚಾಕು ಇರಿದು ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಯುವಕರು ತಮ್ಮ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಕೆಟಿಜೆ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

  • ದೇಶವೇ ಲಾಕ್‍ಡೌನ್- ಇಸ್ಪೀಟ್ ಆಡ್ತಿದ್ದ ಯುವಕರು ಪೊಲೀಸ್ ವಶಕ್ಕೆ

    ದೇಶವೇ ಲಾಕ್‍ಡೌನ್- ಇಸ್ಪೀಟ್ ಆಡ್ತಿದ್ದ ಯುವಕರು ಪೊಲೀಸ್ ವಶಕ್ಕೆ

    ಹಾಸನ: ಜನ ಗುಂಪಾಗಿ ಸೇರಿದವರ ಕುರಿತು ಪೊಲೀಸರು ಎಷ್ಟೇ ಲಾಠಿ ಚಾರ್ಜ್ ಮಾಡಿದರೂ, ಪುಂಡರು ಮಾತ್ರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೆ ಪುಂಡ ಯುವಕರು ಗುಂಪಾಗಿ ಸೇರಿಕೊಂಡು ಇಸ್ಪೀಟ್ ಆಡುವುದರಲ್ಲಿ ನಿರತರಾಗಿದ್ದಾರೆ.

    ಹಾಸನ ನಗರದ ಸಂತೆಪೇಟೆಯ ಗೊರೂರು ರಸ್ತೆಯಲ್ಲಿ ಘಟನೆ ನಡೆದಿದ್ದು, ಕೊರೊನಾ ಭೀತಿಯಿಂದ ಮನೆಯಲ್ಲಿರಿ ಎಂದು ಲಾಕ್‍ಡೌನ್ ಮಾಡಿದರೆ, ಯುವಕರು ಜೂಜಾಡುತ್ತಿದ್ದಾರೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಐವರು ಯುವಕರು, ನಾಲ್ಕು ಬೈಕ್ ಹಾಗೂ ಎರಡು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ.

    ಶೆಡ್ ನಲ್ಲಿ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹಾಸನ ನಗರ ಪೊಲೀಸರ ದಾಳಿ ನಡೆಸಿದ್ದಾರೆ. ದಾಳಿ ನಡೆಸುತ್ತಿದ್ದಂತೆ ಹತ್ತು ಜನರು ಸ್ಥಳದಿಂದ ಓಡಿ ಹೋಗಿದ್ದಾರೆ. ಕೊರೊನಾ ಹರಡುವುದನ್ನ ತಡೆಯಲೆಂದು ದೇಶನ್ನೇ ಲಾಕ್‍ಡೌನ್ ಮಾಡಿದೆ. ಆದರೆ ಪುಂಡ ಯುವಕರು ಮಾತ್ರ 15, 20 ಜನ ಗುಂಪು ಸೇರಿಕೊಂಡು ಇಸ್ಪೀಟ್ ಆಡುತ್ತಿದ್ದಾರೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಸಂಘವೇ ಇಸ್ಪೀಟ್ ಅಡ್ಡ- ಅಧಿಕಾರಿಗಳು, ನೌಕರರೇ ಜೂಜುಕೋರರು

    ಸರ್ಕಾರಿ ಸಂಘವೇ ಇಸ್ಪೀಟ್ ಅಡ್ಡ- ಅಧಿಕಾರಿಗಳು, ನೌಕರರೇ ಜೂಜುಕೋರರು

    ಹಾಸನ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ದೇವರು-ಕೆಲಸ ಎಲ್ಲಾ ಪಕ್ಕಕಿರಲಿ. ಸರ್ಕಾರಿ ಕಟ್ಟಡದ ಗೌರವ ಉಳಿಸಿಕೊಂಡರೆ ಸಾಕಾಗಿದೆ. ಯಾಕೆಂದರೆ ಹಾಸನದ ಸರ್ಕಾರಿ ಸಂಘವೇ ಅಲ್ಲಿನ ಅಧಿಕಾರಿಗಳು, ನೌಕರರಿಗೆ ಇಸ್ಪೀಟ್ ಅಡ್ಡೆಯಾಗಿದೆ.

    ಆಯಕಟ್ಟಾದ ಸ್ಥಳ, ಹತ್ತಾರು ಟೇಬಲ್‍ಗಳು, ಒಂದು ಟೇಬಲ್‍ಗೆ ಇಷ್ಟು ಜನ ಎಂದು ಜೂಜುಕೋರರು ಕುಳಿತು, ಎಲ್ಲರು ಕೈಯಲ್ಲಿ ಇಸ್ಪೀಟ್ ಕಾರ್ಡ್ ಹಿಡಿದುಕೊಂಡಿರೋದನ್ನ ನೋಡಿದರೆ ಇದು ಯಾವುದೋ ಲೈಸೆನ್ಸ್ ಹೊಂದಿದ ಇಸ್ಪೀಟ್ ಕ್ಲಬ್ ಎಂದು ನೋಡುಗರಿಗೆ ಅನಿಸುತ್ತೆ. ಅಷ್ಟರ ಮಟ್ಟೆಗೆ ಹಾಸನದ ಜಿಲ್ಲಾ ನೌಕರರ ಸಂಘದ ಕಟ್ಟಡದ ಚಿತ್ರಣವನ್ನೇ ಸಿಬ್ಬಂದಿ ಬದಲಿಸಿದ್ದಾರೆ.


    ಇವರ ಜೂಜಾಟ ಯಾರಿಗೂ ಗೊತ್ತಿಲ್ಲದ ವಿಚಾರ ಏನಲ್ಲ. ಜಿಲ್ಲೆಯಾದ್ಯಂತ ವೈರಲ್ ಕೂಡ ಆಗಿವೆ. ಆದರೆ ಈ ಸರ್ಕಾರಿ ನೌಕರರು ಮಾತ್ರ ಯಾವುದಕ್ಕೂ ಕ್ಯಾರೆ ಮಾಡಲ್ಲ ಎನ್ನುವ ಹಾಗೆ ಇದ್ದಾರೆ. ಇಲ್ಲಿ ಪ್ರತಿನಿತ್ಯ 150 ರಿಂದ 200 ಮಂದಿ ಜೂಜು ಆಟದಲ್ಲಿ ತೊಡಗಿರುತ್ತಾರೆ. ಸಾವಿರ ಅಲ್ಲ ಲಕ್ಷಗಳ ಲೆಕ್ಕದಲ್ಲಿ ಇಲ್ಲಿ ಜೂಜು ನಡೆಯುತ್ತೆ. ಇಷ್ಟೆಲ್ಲಾ ಆಗುತ್ತಿದ್ದರು, ಒಬ್ಬ ಅಧಿಕಾರಿಯೂ ಕೂಡ ಈ ಬಗ್ಗೆ ತುಟಕ್ ಪಿಟಕ್ ಅನ್ನಲ್ಲ. ಯಾಕೆಂದರೆ ಇಲ್ಲಿ ಎಲ್ಲರಿಗೂ ಮಾಮೂಲಿ ಹೋಗುತ್ತೆ. ಆದ್ದರಿಂದ ಅವರೆಲ್ಲಾ ಸುಮ್ಮನೆ ನಮಗೆ ಬರೋ ಹಣ ಬರುತ್ತಲ್ಲ ಎಂದು ಕಣ್ಮುಚ್ಚಿ ಕುಳಿತಿದ್ದಾರೆ.

    ಈ ರೀತಿಯ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. 2018ರಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳೇ ಈ ರೀತಿ ಜೂಜು ಅಡ್ಡೆಯ ಮೇಲೆ ರೇಡ್ ಮಾಡಿ ಹಲವರನ್ನು ಬಂಧಿಸಿ ಬೀಗ ಕೂಡ ಜಡಿದಿದ್ದರು. ಆದರೆ ಇದೀಗ ಮತ್ತೆ ಅದೇ ಹಳೇ ವರಸೆ ಶುರುವಾಗಿದೆ. ಮತ್ತೊಮ್ಮೆ ಇಸ್ಪೀಟ್ ಆಟ ಎಗ್ಗಿಲ್ಲದೆ ಸಾಗಿದ್ದು, ಇದೆಕ್ಕೆ ತಡೆಹಾಕಬೇಕಿದೆ. ಈಗಿನ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ತಮ್ಮ ಇಚ್ಛಾಶಕ್ತಿ ಕೊರತೆಯನ್ನ ನೀಗಿಸಿಕೊಂಡು ಕ್ರಮ ತೆಗೆದುಕೊಂಡರೆ, ಸರ್ಕಾರಿ ಕಟ್ಟಡದ ಮರ್ಯಾದೆ ಆದರೂ ಉಳಿಯುತ್ತೆ.

  • ಜೂಜು ಅಡ್ಡೆ ಮೇಲೆ ಎಎಸ್‍ಪಿ ದಾಳಿ- 13 ಲಕ್ಷ ಮೌಲ್ಯದ ಸೊತ್ತು ವಶ

    ಜೂಜು ಅಡ್ಡೆ ಮೇಲೆ ಎಎಸ್‍ಪಿ ದಾಳಿ- 13 ಲಕ್ಷ ಮೌಲ್ಯದ ಸೊತ್ತು ವಶ

    ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟು, ಜೂಜು ಅಡ್ಡೆ ಮೇಲೆ ಕಾರ್ಕಳ ಎಎಸ್ ಪಿ ಪಿ. ಕೃಷ್ಣಕಾಂತ್ ದಾಳಿ ಮಾಡಿ 14 ಜೂಜುಕೋರರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ಸುಮಾರು 13 ಲಕ್ಷ ಮೌಲ್ಯದ ಸೊತ್ತು ವಶವಾಗಿದೆ.

    ಬಂಧಿತರನ್ನು ಕೃಷ್ಣ ಮಲ್ಪೆ ರಾಜೇಶ್, ಮನೋಜ್, ಜಗದೀಶ್ ಕುಂದರ್, ಅಕ್ಷಯ್ ಈರಪ್ಪ ಕಟ್ಟಗಿ, ನಿಟ್ಟೂರು, ಶ್ರೀನಿವಾಸ್ ನಿಟ್ಟೂರು, ನವೀನ್ ಕುಮಾರ್, ನಿಂಗಪ್ಪ ಚಲವಾದಿ, ಮುಕ್ತುಂ ಹುಸೇನ್ ತಹಶೀಲ್ದಾರ್, ಸುಜಿತ್, ಮಲ್ಪೆ, ಕೃಷ್ಣ, ಶಂಕರ್ ಕೋಟ್ಯಾನ್, ಮಂಜುನಾಥ್ ಕೆ., ಮಂಜುನಾಥ್ ಕಾರ್ನಾಡು ಎಂದು ಗುರುತಿಸಲಾಗಿದೆ.

    ಮೇ 31 ರಂದು ರಾತ್ರಿ ಪುತ್ತೂರು ಗ್ರಾಮದ ನಿಟ್ಟೂರು ಪೂಜಾ ಮಾರ್ಬಲ್ಸ್ ಸಮೀಪ ಶ್ರೀನಿವಾಸ್ ಪೂಜಾರಿಯವರ ಮನೆಯ ಬದಿಯಲ್ಲಿರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆಂಬುದಾಗಿ ಖಚಿತ ಮಾಹಿತಿ ಬಂದಿದೆ. ಎಸ್ ಪಿ ಆದೇಶದಂತೆ ಎಎಸ್ ಪಿ ಕೃಷ್ಣಕಾಂತ್ ಸ್ಥಳಕ್ಕೆ ದಾಳಿ ನಡೆಸಿ, ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

    ಅಂದರ್- ಬಾಹರ್ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ನಗದು ಆರೋಪಿಗಳ ವಶದಲ್ಲಿದ್ದ ಒಟ್ಟು ರೂ. 80,680 ನಗದು ಹಾಗೂ ವಿವಿಧ ಕಂಪನಿಯ ಸುಮಾರು ರೂ.20,500 ಮೌಲ್ಯದ ಒಟ್ಟು 16 ಮೊಬೈಲ್ ಗಳು, ಸುಮಾರು ರೂ. 11,00,000 ಮೌಲ್ಯದ 2 ಕಾರುಗಳು, ಅಂದಾಜು ರೂ. 1,40,000 ಮೌಲ್ಯದ 5 ಮೋಟಾರ್ ಸೈಕಲ್‍ಗಳು, ಹೀಗೆ ಒಟ್ಟು ಅಂದಾಜು 13,41,430 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

    ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.