Tag: ಜುವೆಲ್ಲರಿ

  • ಚಿನ್ನ, ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ – ದರ ಹೆಚ್ಚಿದ್ದರೂ ಖರೀದಿ ಜೋರು

    ಚಿನ್ನ, ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ – ದರ ಹೆಚ್ಚಿದ್ದರೂ ಖರೀದಿ ಜೋರು

    ನವದೆಹಲಿ: ಆರ್‌ಬಿಐ (RBI) 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯುವ ಆದೇಶ ಪ್ರಕಟಿಸಿದ ಬೆನ್ನಲ್ಲೇ ಜನ ಚಿನ್ನ, ಬೆಳ್ಳಿ (Gold, Silver) ಖರೀದಿಸಲು ಮುಗಿಬಿದ್ದಿದ್ದಾರೆ.

    ಹೌದು. ಶನಿವಾರ ದೇಶಾದ್ಯಂತ ಜುವೆಲ್ಲರಿ ಅಂಗಡಿಗಳಲ್ಲಿ (Jewellery Shop) ಭರ್ಜರಿ ವ್ಯಾಪಾರ ನಡೆದಿದೆ. ಜನರು ಚಿನ್ನವನ್ನು ದುಬಾರಿ ಬೆಲೆ ನೀಡಿ ಖರೀದಿಸುತ್ತಿರುವುದು ವಿಶೇಷ.

    ಶನಿವಾರ ಜೈಪುರದಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 63 ಸಾವಿ ರೂ. ಇದ್ದರೂ ಗ್ರಾಹಕರು 66 ಸಾವಿರ ರೂ. ನೀಡಿ ಖರೀದಿಸಿದ್ದಾರೆ. ದೇಶಾದ್ಯಂತ 10% ರಿಂದ 20% ರಷ್ಟು ಆಭರಣ ವ್ಯಾಪಾರ ಹೆಚ್ಚಾಗಿದೆ. ಸಾಧಾರಣವಾಗಿ ಅಕ್ಷಯ ತೃತೀಯಾ ಅಥವಾ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಚಿನ್ನ ಖರೀದಿ ನಡೆಯುತ್ತಿರುತ್ತದೆ. ಆದರೆ ಈಗ ಯಾವುದೇ ಹಬ್ಬ ಇಲ್ಲದೇ ಇದ್ದರೂ ಆರ್‌ಬಿಐ ನಿರ್ಧಾರದಿಂದ ಆಭರಣ ಖರೀದಿ ಹೆಚ್ಚಾಗುತ್ತಿದೆ.  ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

    ಪೆಟ್ರೋಲ್‌ ಪಂಪ್‌ನಲ್ಲಿ 2 ಸಾವಿರ ರೂ. ಚಲಾವಣೆ ಬಹಳ ವಿರಳ. ಆದರೆ ಈಗ ಹಲವು ಮಂದಿ 2000 ರೂ. ನೀಡಿ ಪೆಟ್ರೋಲ್‌ ಹಾಕಿಸುತ್ತಿದ್ದಾರೆ ಎಂದು ಕೋಲ್ಕತ್ತಾ ಮೂಲದ ಪೆಟ್ರೋಲ್‌ ಪಂಪ್‌ ಉದ್ಯೋಗಿ ತಿಳಿಸಿದ್ದಾರೆ.

    2016ರ ನವೆಂಬರ್‌ 8 ರಂದು 500, 1000 ರೂ. ಮುಖಬೆಲೆಯ ನೋಟು ನಿಷೇಧ ನಿರ್ಧಾರ ಕೈಗೊಂಡ ಬೆನ್ನಲ್ಲೇ ಭಾರೀ ಸಂಖ್ಯೆಯ ಗ್ರಾಹಕರು ಚಿನ್ನವನ್ನು ಖರೀದಿ ಮಾಡಿದ್ದರು. ಈ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಹಲವು ಜ್ಯುವೆಲ್ಲರಿ ಅಂಗಡಿಗಳಿಗೆ ನೋಟಿಸ್‌ ಜಾರಿ ಮಾಡಿ ಗ್ರಾಹಕರ ವಿವರ ಕೇಳಿತ್ತು. ಈ ಕಾರಣಕ್ಕೆ ಈ ಬಾರಿ ಜ್ಯುವೆಲ್ಲರಿಗಳು 2000 ರೂ. ಮುಖಬೆಲೆಯ ನೋಟುಗಳನ್ನು ನೀಡಿ ಆಭರಣ ಖರೀದಿಸುವ ಗ್ರಾಹಕರ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದೆ.

     

    2000 ರೂ. ನೋಟು ಬಳಕೆಗೆ ಆರ್‌ಬಿಐ ಸಂಪೂರ್ಣ ನಿಷೇಧ ಹೇರಿಲ್ಲ. ಈಗಲೂ ವ್ಯವಹಾರಗಳಿಗೆ ಬಳಸಬಹುದು. ಪಾವತಿ ಮಾಡಲು, ಹಣವನ್ನು ಸ್ವೀಕರಿಸಲು ಬಳಕೆ ಮಾಡಬಹುದು. ಸೆಪ್ಟೆಂಬರ್‌ 30ರವರೆಗೂ ಈ ನೋಟುಗಳು ಕಾನೂನು ಮಾನ್ಯತೆ ಹೊಂದಿರಲಿವೆ.

  • ಚಿನ್ನದಂಗಡಿಗೆ ನುಗ್ಗಿದ ಹೆಬ್ಬಾವು – ಗ್ರಾಹಕರು, ಸಿಬ್ಬಂದಿ ಕಕ್ಕಾಬಿಕ್ಕಿ

    ಚಿನ್ನದಂಗಡಿಗೆ ನುಗ್ಗಿದ ಹೆಬ್ಬಾವು – ಗ್ರಾಹಕರು, ಸಿಬ್ಬಂದಿ ಕಕ್ಕಾಬಿಕ್ಕಿ

    ಉಡುಪಿ: ಚಿನ್ನದಂಗಡಿಗೆ ಭಾರೀ ಗಾತ್ರದ ಹೆಬ್ಬಾವು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಗರದ ನೋವೆಲ್ಟಿ ಜ್ಯುವೆಲ್ಲರಿಯಲ್ಲಿ ನಡೆದಿದೆ.

    ಚಿನ್ನದಂಗಡಿಯ ಮೇಲ್ಛಾವಣಿಯಲ್ಲಿ ಅವಿತಿದ್ದ ಎಂಟು ಅಡಿಯಷ್ಟು ಉದ್ದದ ಹೆಬ್ಬಾವು ಸಿಬ್ಬಂದಿಗೆ ಕಾಣಿಸಿಕೊಂಡಿದೆ. ಹೆಬ್ಬಾವನ್ನು ನೋಡುತ್ತಿದ್ದಂತೆ ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೂಡಲೇ ಅಂಗಡಿ ಮಾಲೀಕರು ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆಮಾಡಿ ಕರೆಸಿದ್ದಾರೆ. ತಕ್ಷಣ ಆಗಮಿಸಿದ ಗುರುರಾಜ್ ಹೆಬ್ಬಾವನ್ನು ರಕ್ಷಣೆ ಮಾಡಿದರು. ಇದನ್ನೂ ಓದಿ: 299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ

    ಇಲಿಯನ್ನು ಹುಡುಕುತ್ತಾ ಹೆಬ್ಬಾವು ಮಳಿಗೆಯೊಳಗೆ ಬಂದಿದೆ. ಹಾವು ಹಿಡಿಯುವ ವೇಳೆ ಕೈಗೆ ಸುತ್ತಿಕೊಂಡಿದೆ. ನಂತರ ಹಾವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್ ಸನಿಲ್, ಹೆಬ್ಬಾವು ಕಚ್ಚುವ ಹಾವಲ್ಲ. ಜನ ಭಯಗೊಳ್ಳಬಾರದು. ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

  • ಹಬ್ಬದ ಸಂಭ್ರಮಕ್ಕೆ ರಿಲಯನ್ಸ್ ಜ್ಯುವೆಲ್ಸ್‌ನ ‘ಉತ್ಕಲಾ’ ಅನಾವರಣ

    ಹಬ್ಬದ ಸಂಭ್ರಮಕ್ಕೆ ರಿಲಯನ್ಸ್ ಜ್ಯುವೆಲ್ಸ್‌ನ ‘ಉತ್ಕಲಾ’ ಅನಾವರಣ

    – ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ

    ಮುಂಬೈ: ಭಾರತದ ಅತ್ಯಂತ ವಿಶ್ವಸನೀಯ ಆಭರಣಗಳ ಬ್ರ್ಯಾಂಡ್ ರಿಲಯನ್ಸ್ ಜ್ಯುವೆಲ್ಸ್ ಈ ಹಬ್ಬದ ಋತುವಿನ ಆರಂಭವನ್ನು ಇನ್ನಷ್ಟು ಚೆಂದವಾಗಿಸಲು ‘ಉತ್ಕಲಾ’ ಹೆಸರಿನಲ್ಲಿ ಉತ್ಕೃಷ್ಟ ಆಭರಣಗಳ ಶ್ರೇಣಿಯನ್ನು ಪರಿಚಯಿಸುತ್ತಿದೆ. ಈ ಸಂಗ್ರಹವು ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದಿದ್ದು, ಈ ರಾಜ್ಯದ ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅದ್ಭುತವಾಗಿ ಮೇಳೈಸಿದ ಅನನ್ಯವಾದ ಚಿತ್ರಕಲೆ, ಕಲಾಕೃತಿಗಳು ಮತ್ತು ವಿನ್ಯಾಸಗಳ ನೈಜ ಸಂಗಮವಾಗಿದೆ.

    ಈ ಉತ್ಕೃಷ್ಟವಾದ ಸಂಗ್ರಹವು ಅದ್ಭುತವಾದ ವಿನ್ಯಾಸಗಳನ್ನು ಹೊಂದಿದ್ದು, ಗ್ರಾಹಕರು ವೈವಿಧ್ಯಮಯವಾದ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ರಚಿಸಲಾದ ಆಭರಣಗಳನ್ನು ಕಾಣಬಹುದು. ಈ ಸುಗಮವಾದ ಕಲೆಗೆ ಕೋನಾರ್ಕ್ ಸೂರ್ಯ ದೇವಾಲಯ, ಮುಕ್ತೇಶ್ವರ ದೇವಾಲಯ, ಪುರಿ ಜಗನ್ನಾಥ ದೇವಾಲಯದ, ಸೀಂತಿ ನಾಟ್ಯದ, ವಿನೂತನವಾದ ಪಟ್ಟಚಿತ್ರ ಕಲಾಕೃತಿಗಳು ಮತ್ತು ಬಾಯ್ತಾ ಬಂಧನ ಕಡಲ ಪರಂಪರೆಗಳು ಸ್ಫೂರ್ತಿ ನೀಡಿವೆ.

    ಚೋಕರ್ ಸೆಟ್ ನಿಂದ ಚಿಕ್ಕ ನೆಕ್ಲೇಸ್ ಮತ್ತು ಉದ್ದನೆಯ ಸೂಕ್ಷ್ಮವಾದ ಮತ್ತು ಉತ್ಕೃಷ್ಟವಾದ ನೆಕ್ಲೇಸ್ ಸೆಟ್ ವರೆಗೆ, ಇಲ್ಲಿ ಎಲ್ಲಾ ಸಂದರ್ಭಗಳಿಗೂ ಒದಗುವ ಮತ್ತು ಎಲ್ಲರಿಗೂ ಎಟಕುವ ದರಗಳಲ್ಲಿ ಆಭರಣಗಳಿವೆ. ಚಿನ್ನದ ಸಂಗ್ರಹದ ವಿನ್ಯಾಸಗಳನ್ನು 22 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದ್ದು, ಪ್ರಾಚೀನ ಮತ್ತು ಹಳದಿ ಚಿನ್ನದ ಫಿನಿಶ್‍ಗಳ ಅದ್ಭುತವಾದ ಸಾಂಪ್ರದಾಯಿಕ ಶೈಲಿಯ ಆಭರಣಗಳನ್ನು ಹೊಂದಿದ್ದು, ಹಳದಿ ಚಿನ್ನ ಮತ್ತು ಪ್ರಾಚೀನ ಫಿನಿಶ್ ನಲ್ಲಿ ಸೂಕ್ಷ್ಮವಾದ ಫಿಲಿಗ್ರಿ ಮಾದರಿಯ ಆಭರಣಗಳೂ ಇವೆ. 18 ಕೆಟಿ ಚಿನ್ನದಲ್ಲಿ ಡೈಮಂಡ್ ಅನ್ನು ಪೋಣಿಸಲಾಗಿದ್ದು ಹಬ್ಬದ ಸಂದರ್ಭದಲ್ಲಿ ಮತ್ತು ಸಮಕಾಲೀನ ನೋಟಕ್ಕೆ ಇದು ಹೆಚ್ಚು ಸೂಕ್ತವಾಗಿದೆ.

    ಈ ಕುರಿತು ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್ ವಕ್ತಾರರು, ಭಾರತದಲ್ಲಿ ಸಂಭ್ರಮಿಸಲಾಗುವ ಅತ್ಯಂತ ಮುಖ್ಯವಾದ ಹಬ್ಬಗಳಲ್ಲಿ ದೀಪಾವಳಿ ಒಂದು. ಧನ್‌ತೇರಾಸ್‌ಗೆ ಚಿನ್ನದ ಆಭರಣಗಳನ್ನು ಕೊಳ್ಳುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಉತ್ಕಲಾವನ್ನು ಪರಿಚಯಿಸಲು ನಮಗೆ ಖುಷಿಯಾಗುತ್ತಿದೆ. ನಮ್ಮ ದೇವಾಲಯಗಳ ಆಭರಣದ ವಿನ್ಯಾಸದ ಪರಂಪರೆಯನ್ನು ಮುಂದುವರೆಸುವ ಅದ್ಭುತವಾದ ವಿನ್ಯಾಸದ ಸಂಗ್ರಹವಿದು. ಪ್ರತಿ ಚಿನ್ನದ ಮತ್ತು ವಜ್ರದ ನೆಕ್ಲೇಸ್, ಓಲೆಗಳು ಮತ್ತು ಸೆಟ್‌ಗಳು ಅನನ್ಯವಾಗಿದ್ದು, ಒಡಿಶಾದ ವಿಭಿನ್ನವಾದ ಕಲೆ ಮತ್ತು ಇತಿಹಾಸವನ್ನು ಪ್ರತಿನಿಧಿಸುತ್ತದೆ. ಧನ್‌ತೇರಾಸ್‌ ಹಬ್ಬದ ಶುಭ ಸಮಯದಲ್ಲಿ ಈ ಸಂಗ್ರಹವನ್ನು ನೀಡುವುದರಿಂದ ಇದು ಮತ್ತೂ ವಿಶೇಷವಾಗಿದೆ, ಮತ್ತು ನಮ್ಮ ಅಭಿಮಾನಿಗಳು ಇದನ್ನು ಧರಿಸಿ, ಎಲ್ಲರಿಗೂ ಸ್ಮರಣೀಯರಾಗಿತ್ತಾರೆಂದು ಆಶಿಸುತ್ತೇವೆ ಎಂದರು.

    ಉತ್ಕಲಾ ಸಂಗ್ರಹದಲ್ಲಿ ಪ್ರತಿ ಆಭರಣವೂ ಒಂದು ನಿಪುಣ ಕಲಾಚಾತುರ್ಯದ ಗುರುತಾಗಿದ್ದು, ರಿಲಯನ್ಸ್ ಜ್ಯುವೆಲ್ಸ್ ಬ್ರ್ಯಾಂಡ್ ನ ನಿರಂತರ ಗುಣಮಟ್ಟ ಮತ್ತು ವಿಶ್ವಾಸದ ಪ್ರತೀಕವಾಗಿದೆ. ಉತ್ಕಲಾ ಸಂಗ್ರಹವು ಭಾರತದಾದ್ಯಂತ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ 17 ಅಕ್ಟೋಬರ್ ನಿಂದ ಲಭ್ಯವಿರುತ್ತದೆ. ಇದಲ್ಲದೆ, 16 ನವೆಂಬರ್ 2020ವರೆಗೆ, ಚಿನ್ನಾಭರಣಗಳು ಮತ್ತು ಚಿನ್ನದ ನಾಣ್ಯಗಳ ತಯಾರಿಕೆ ವೆಚ್ಚಗಳ ಮೇಲೆ 30% ರಷ್ಟು ರಿಯಾಯಿತಿಯನ್ನು ಮತ್ತು ವಜ್ರಾಭರಣಗಳ ಬಿಲ್‌ ಮೌಲ್ಯದ ಮೇಲೆ 30%ವರೆಗೆ ರಿಯಾಯಿತಿಯನ್ನು, ಎಲ್ಲಾ ಗ್ರಾಹಕರಿಗೂ ನೀಡಲಾಗುತ್ತಿದೆ. ಇದಕ್ಕೆ ಷರತ್ತುಗಳು, ನಿಯಮ ಅನ್ವಯಿಸುತ್ತವೆ.

  • ಜಿಎಸ್‍ಟಿ ಎಫೆಕ್ಟ್, ಚಿನ್ನದ ಅಂಗಡಿಗಳಿಗೆ ಮುಗಿಬಿದ್ದ ಮಹಿಳಾ ಮಣಿಗಳು

    ಜಿಎಸ್‍ಟಿ ಎಫೆಕ್ಟ್, ಚಿನ್ನದ ಅಂಗಡಿಗಳಿಗೆ ಮುಗಿಬಿದ್ದ ಮಹಿಳಾ ಮಣಿಗಳು

    ಬೆಂಗಳೂರು: ಜುಲೈ 1ರಿಂದ ಸರಕು ಮತ್ತು ಸೇವ ತೆರಿಗೆ ಜಾರಿಯಾಗುವ ಹಿನ್ನೆಲೆಯಲ್ಲಿ ಮಹಿಳಾ ಮಣಿಗಳು ಚಿನ್ನದ ಅಂಗಡಿಗಳಿಗೆ ಲಗ್ಗೆ ಇಟ್ಟಿದ್ದಾರೆ.

    ಜಿಎಸ್‍ಟಿ ಜಾರಿಯಾದರೆ ಈಗಿರುವ ದರದಲ್ಲಿ ಒಂದು ಗ್ರಾಂಗೆ 60 ರೂಪಾಯಿ ಏರಿಕೆಯಾಗುವುದರಿಂದ ಚಿನ್ನದ ಅಂಗಡಿ ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದೆ.

    ಚಿನ್ನದ ಅಂಗಡಿಗಳು ಸಾಮಾನ್ಯವಾಗಿ 8.30ಕ್ಕೆ ಮುಚ್ಚುತ್ತವೆ. ಆದರೆ ಜಿಎಸ್‍ಟಿ ಎಫೆಕ್ಟ್ ನಿಂದಾಗಿ ಮಾಲೀಕರು ಒಂದು ಗಂಟೆ ವಿಸ್ತರಣೆ ಮಾಡಿದ್ದಾರೆ. ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ತೆರೆಯಲು ಮುಂದಾಗಿದ್ದೇವೆ ಎಂದು ಆರ್ ಆರ್ ಗೋಲ್ಡ್ ಪ್ಯಾಲೇಸ್ ಮಾಲೀಕ ರಮೇಶ್ ಹೇಳಿದ್ದಾರೆ.

    ಚಿನ್ನದ ದರ ಏರಿಕೆಯಾಗಲಿರುವ ಹಿನ್ನೆಲೆಯಲ್ಲಿ ಖರೀದಿಗೆ ಬಂದಿದ್ದೇವೆ. ಆಷಾಢದಲ್ಲಿ ಖರೀದಿ ಮಾಡಬಾರದು ಎಂಬ ನಂಬಿಕೆ ಇದ್ದರೂ ಖರೀದಿ ಅನಿವಾರ್ಯವಾಗಿದೆ. ಜುಲೈ ನಿಂದ ಎಷ್ಟು ಏರಿಕೆಯಾಗುತ್ತದೋ ಗೊತ್ತಾಗಲ್ಲ. ಅದಕ್ಕೆ ಇವತ್ತೆ ಬಂದಿದ್ದೇವೆ ಎಂದು ಮಹಿಳೆಯರು ಹೇಳುತ್ತಿದ್ದಾರೆ.

    ಎಷ್ಟು ಏರಿಕೆಯಾಗುತ್ತೆ?
    ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಂಡಳಿಯು ಚಿನ್ನ ಮತ್ತು ಬೆಳ್ಳಿಗೆ ಶೇ.3, ಬಿಸ್ಕತ್‍ಗೆ ಶೇ.18ರಷ್ಟು ತೆರಿಗೆ ದರಗಳನ್ನು ನಿಗದಿ ಮಾಡಿದೆ. ಸದ್ಯ ಇರುವ ತೆರಿಗೆ ವ್ಯವಸ್ಥೆಯಲ್ಲಿ, ಚಿನ್ನಕ್ಕೆ ಶೇ.10 ರಷ್ಟು ಆಮದು ಸುಂಕ ಇದ್ದು ಒಟ್ಟು ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಜಿಎಸ್‍ಟಿಯಲ್ಲಿ ಚಿನ್ನಕ್ಕೆ ಶೇ.3 ರಷ್ಟು ತೆರಿಗೆ ನಿಗದಿಮಾಡಲಾಗಿದ್ದು, ಇದಕ್ಕೆ ಶೇ.10 ರಷ್ಟು ಆಮದು ಸುಂಕ ಸೇರಿಸಿದರೆ ಒಟ್ಟು ತೆರಿಗೆ ಶೇ.13 ಆಗುತ್ತದೆ. ಅಂದರೆ ಶೇ.1 ರಷ್ಟು ಹೆಚ್ಚಾಗಲಿದೆ.