Tag: ಜುಂಡ್

  • ಜುಂಡ್ ಚಿತ್ರ ವೀಕ್ಷಿಸಿ ಕಣ್ಣೀರಿಟ್ಟ ಅಮೀರ್ – ಓವರ್‌ ಎಕ್ಸೈಟ್‌ ಆಗ್ತಾರೆ ಎಂದ ಅಮಿತಾಬ್

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ‘ಜುಂಡ್'(Jhund) ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದ ಅಮೀರ್ ಖಾನ್ ಕಣ್ಣೀರು ಹಾಕಿ, ಇದು ಅಮಿತಾಬ್ ಬಚ್ಚನ್‌ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೊಗಳಿದ್ದರು. ಈ ಹೊಗಳಿಕೆಗೆ ಅಮಿತಾಭ್, ಅಮೀರ್ ಆಗಾಗ ಅತಿಯಾಗಿ ಎಕ್ಸೈಟ್‌ ಆಗ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಅಮೀರ್ ಖಾನ್ ಕಳೆದ ವಾರ ಜುಂಡ್ ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದ್ದರು. ಚಿತ್ರ ವೀಕ್ಷಿಸಿದ ಅಮೀರ್ ಖಾನ್ ಇದು ಅಮಿತಾಬ್ ಅವರ ಶ್ರೇಷ್ಠ ಸಿನಿಮಾಗಳಲ್ಲೊಂದು ಎಂದು ಹೇಳುವುದರೊಂದಿಗೆ ಕಣ್ಣೀರನ್ನೂ ಹಾಕಿದ್ದರು. ಇದನ್ನೂ ಓದಿ: ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತ್ರೂ ಮಳೆ ಹನಿ ನಿಲ್ಲದು!

    ಇತ್ತೀಚೆಗೆ ನಡೆದ ಸಂವಾದವೊಂದರಲ್ಲಿ ಅಮಿತಾಬ್ ಅಮೀರ್ ಖಾನ್‌ಗೆ ಧನ್ಯವಾದ ಹೇಳಿದ್ದರಲ್ಲದೇ ಕಣ್ಣೀರು ಹಾಕಿದ ಅಮೀರ್ ಕುರಿತು ಅದು ಅವರ ಓವರ್‌ ಎಕ್ಸೈಟ್‌ (ಅತಿಯಾದ ಭಾವುಕ) ಎಂದು ಹೊಗಳಿದ್ದರು. ಜುಂಡ್ ಚಿತ್ರ ಬಿಡುಗಡೆಗೂ ಮುನ್ನ ವಿಶೇಷ ಪ್ರದರ್ಶನಕ್ಕೆ ಅಮೀರ್ ಅವರನ್ನು ಆಹ್ವಾನಿಸಲಾಗಿತ್ತು. ಪ್ರೊಡಕ್ಷನ್ ಹೌಸ್ ಟಿ ಸೀರೀಸ್ ಯೂಟ್ಯೂಬ್ ಚ್ಯಾನೆಲ್‌ನಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿ ಅಮೀರ್ ಖಾನ್ ಕಣ್ಣೀರು ಹಾಕಿಕೊಂಡು ಚಿತ್ರವನ್ನು ಹೊಗಳಿರುವುದು ಕಂಡುಬಂದಿತ್ತು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ವಾಟ್ ಎ ಫಿಲ್ಮ್. ಮೈ ಗಾಡ್. ಬೋಹುತ್ ಹೀ ಬೆಹ್ತರೀನ್ ಫಿಲ್ಮ್ ಹೈ(ಇದೆಂಥಾ ಸಿನಿಮಾ. ಓ ದೇವರೇ! ಇದೊಂದು ಅದ್ಭುತ ಚಿತ್ರ) ಎಂದು ಹೇಳಿದ್ದರು. ಇದರೊಂದಿಗೆ ಚಪ್ಪಳೆ ತಟ್ಟಿ, ತಮ್ಮ ಟಿ-ಶರ್ಟ್ ತೋಳುಗಳಿಂದ ತಮ್ಮ ಕಣ್ಣೀರು ಒರೆಸಿಕೊಂಡಿದ್ದರು.