Tag: ಜೀ ಕನ್ನಡ ವಾಹಿನಿ

  • ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive

    ಜೀ ಕನ್ನಡ ವಾಹಿನಿಗೆ ಜಿಗಿದ ರಚಿತಾ ರಾಮ್ – Exclusive

    ಲರ್ಸ್ ವಾಹಿನಿಯ ಮಜಾ ಭಾರತ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಹಲವು ಸೀಸನ್ ಗಳನ್ನು ನಡೆಸಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್, ಇದೀಗ ಜೀ ಕನ್ನಡ ವಾಹಿನಿಗೆ ಜಿಗಿದಿದ್ದಾರೆ. ಇನ್ನೇನು ಶುರುವಾಗಬೇಕಿರುವ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ರಲ್ಲಿ ರಚಿತಾ ಜಡ್ಜ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಸದ್ದಿಲ್ಲದೇ ರಚಿತಾ ರಾಮ್ ಅವರ ಪ್ರೋಮೋ ಶೂಟಿಂಗ್ ಕೂಡ ವಾಹಿನಿ ಮಾಡಿದೆ. ಇದನ್ನೂ ಓದಿ : ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಒಲವಿನ ಉಡುಗೊರೆಗೆ 35 ವರ್ಷ


    ಕಳೆದ ಮೂರು ಸೀಸನ್ ಗಳಲ್ಲಿ ಹಿರಿಯ ನಟಿ ಲಕ್ಷ್ಮೀ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ ರಾಘವೇಂದ್ರ ನಿರ್ಣಾಯಕರಾಗಿದ್ದರು. ಈ ಬಾರಿ ಮೂವರು ಜಡ್ಜ್ ಆಗಿ ಇರುವುದಿಲ್ಲ ಎನ್ನುವ ಸುದ್ದಿಯಿದೆ. ರವಿಚಂದ್ರನ್, ರಚಿತಾ ರಾಮ್ ಮತ್ತು ಇನ್ನೋರ್ವ ಖ್ಯಾತ ಕಲಾವಿದರು ಈ ಸ್ಥಾನವನ್ನು ತುಂಬಲಿದ್ದಾರೆ.
    ಈಗಾಗಲೇ ರವಿಚಂದ್ರನ್ ಅವರ ಪ್ರೋಮೋ ಶೂಟ್ ಕೂಡ ಆಗಿದೆ. ಮಕ್ಕಳು ರವಿಚಂದ್ರನ್ ಅವರನ್ನು ಕಿಡ್ನ್ಯಾಪ್ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ. ಕೆಲವೇ ದಿನಗಳಲ್ಲಿ ರಚಿತಾ ರಾಮ್ ಅವರ ಪ್ರೋಮೋ ಕೂಡ ಬರಲಿದೆಯಂತೆ. ಇದನ್ನೂ ಓದಿ : ಈ ಹುಡುಗಿಗೆ ಜಿಮ್ ನಲ್ಲಿ ಸಿಕ್ತಂತೆ ನಟಿಸೋಕೆ ಅವಕಾಶ


    ಹೈದರಾಬಾದ್ ವಿಮಾನ ನಿಲ್ದಾಣ, ರಾಮೋಜಿರಾವ್ ಫಿಲ್ಮಸಿಟಿಯಲ್ಲಿ ರಚಿತಾ ರಾಮ್ ಇರುವ ಪ್ರೋಮೋವನ್ನು ಚಿತ್ರೀಕರಿಸಿದ್ದಾರೆ ರೋಮೋ ಚಿತ್ರಖ್ಯಾತಿಯ ಶೇಖರ್. ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಈ ಭಾಗದ ಚಿತ್ರೀಕರಣ ನಡೆದಿದೆ. ಇದನ್ನೂ ಓದಿ : ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?


    ರಚಿತಾ ರಾಮ್ ಜೀ ಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಇದೇ ಮೊದಲೇನೂ ಅಲ್ಲ. ಹತ್ತು ವರ್ಷಗಳ ಹಿಂದೆ ಪ್ರಸಾರವಾದ ‘ಅರಸಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಅದು ಅವರ ಮೊದಲ ಸೀರಿಯಲ್ ಕೂಡ ಆಗಿತ್ತು. ಹತ್ತು ವರ್ಷಗಳ ನಂತರ ಅವರು ಮತ್ತೆ ಜೀ ಕನ್ನಡ ವಾಹಿನಿಯ ಬಳಗಕ್ಕೆ ಸೇರಿದ್ದಾರೆ.

  • ಹೆಮ್ಮೆಯ ಕನ್ನಡಿಗ 2019ರಲ್ಲಿ ರಚಿತಾ ರಾಮ್, ಹರಿಪ್ರಿಯಾ, ಭಾವನಾ ಡ್ಯಾನ್ಸ್ ಮೋಡಿ!

    ಹೆಮ್ಮೆಯ ಕನ್ನಡಿಗ 2019ರಲ್ಲಿ ರಚಿತಾ ರಾಮ್, ಹರಿಪ್ರಿಯಾ, ಭಾವನಾ ಡ್ಯಾನ್ಸ್ ಮೋಡಿ!

    ಬೆಂಗಳೂರು: ಕನ್ನಡ ನಾಡು ನುಡಿಗಾಗಿ, ಕನ್ನಡ ರಾಜ್ಯದ ಹಿರಿಮೆಯನ್ನು ಎಲ್ಲೆಡೆ ಪ್ರಚುರ ಪಡಿಸಲು ಪ್ರತಿ ದಿನ ಶ್ರಮಿಸುತ್ತಿರುವ ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಜೀ ವಾಹಿನಿ ‘ಹೆಮ್ಮೆಯ ಕನ್ನಡಿಗ-2019’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಮ್ಮ ಮಹಾನ್ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರಿಗೆ, ಬೆಳ್ಳಿ ಪರದೆ ಹಾಗೂ ಸಿನಿಮಾ ರಂಗದಲ್ಲಿ ಸಾಧನೆ ಮಾಡಿರುವ ಎಲ್ಲಾ ಸಾಧಕರಿಗೂ ಗೌರವ ಸಲ್ಲಿಸುವ ಕಾರ್ಯಕ್ರಮವೇ ಹೆಮ್ಮೆಯ ಕನ್ನಡಿಗ. ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಮಾರ್ಚ್ 30 ಹಾಗೂ 31ಕ್ಕೆ ರಾತ್ರಿ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    ರೆಡ್ ಕಾರ್ಪೆಟ್ ಫೋಟೋ ಬೂತ್ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದಾಗಿತ್ತು. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮನಸೆಳೆದ ನಟ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಮ್ಮೆಯ ಹೆಜ್ಜೆ ಹಾಕಿದರು. ವೀರೇಂದ್ರ ಹೆಗಡೆ, ಸುಧಾಮೂರ್ತಿ, ಪ್ರಕಾಶ್ ಬೆಳವಾಡಿ, ಐಂದ್ರಿತ ರೇ, ದಿಗಂತ್, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ತಾರಾ ಅನುರಾಧ, ವಿ. ಹರಿಕೃಷ್ಣ, ಅರ್ಜುನ್ ಜನ್ಯ, ಹಂಸಲೇಖ, ಗುರುಕಿರಣ್, ಪ್ರಿಯಾಂಕ ಉಪೇಂದ್ರ, ಗರುಡ ರಾಮ್, ಕೆ.ಜಿ.ಎಫ್ ಸಿನಿಮಾ ತಂಡ, ಅರುಂಧತಿ ನಾಗ್, ವಿನಯ ಪ್ರಸಾದ್, ಶ್ರೀ ಮುರಳಿ, ಮೋಕ್ಷಿತ ಪೈ, ಶರತ್ ಭಾರದ್ವಾಜ, ರೂಪಾ ಮೌದ್ಗಿಲ್, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ವಿ. ನಾಗೇಂದ್ರ ಪ್ರಸಾದ್, ಆಶಾ ರಾಣಿ, ರಾಕಿಂಗ್ ಸ್ಟಾರ್ ಯಶ್, ಜಯಂತ್ ಕಾಯ್ಕಿಣಿ, ಅರ್ಜುನ್ ಸರ್ಜಾ, ಮೈಮ್ ರಮೇಶ್, ರಚಿತಾ ರಾಮ್ ಹೀಗೇ ಸ್ಯಾಂಡಲ್ ವುಡ್ ಹಾಗೂ ಜೀ ವಾಹಿನಿಯ ಎಲ್ಲಾ ನಟ ನಟಿಯರ ಸಮಾಗಮ ಹೆಮ್ಮೆಯ ಕನ್ನಡಿಗ 2019 ಕಾರ್ಯಕ್ರಮದಲ್ಲಿ ನಡೆಯಿತು. ಇವರ ಜೊತೆಗೆ ಆಟೋ ಶಿವಕುಮಾರ್ ಸಹ ತಮ್ಮ ಹೆಮ್ಮೆಯ ಆಟೋವನ್ನು ಕಾರ್ಯಕ್ರಮದಲ್ಲಿ ತಂದಿದ್ದು ವಿಶೇಷವಾಗಿತ್ತು.

    ರಮೇಶ್ ಅರವಿಂದ್ ಹಾಗೂ ಅನುಶ್ರೀ ಕಾರ್ಯಕ್ರಮದ ನಿರೂಪಣೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ಮನರಂಜಿಸಿದವು. ನಟಿ ಹರಿಪ್ರಿಯ, ನಟಿ ಪ್ರಿಯಾಂಕ ಉಪೇಂದ್ರ, ರಚಿತಾ ರಾಮ್, ರಘು ದೀಕ್ಷಿತ್, ಭಾವನಾ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿದರು.

    ಇನ್ನು ಈ ವರ್ಷ ಇಡೀ ದೇಶವೇ ಕನ್ನಡ ಸಿನಿಮಾ ರಂಗದತ್ತ ಮುಖ ಮಾಡಿ ನೋಡುವಂತೆ ಮಾಡಿದ ಕೆ.ಜಿ.ಎಫ್ ಸಿನಿಮಾ ಹಾಡುಗಳಿಗೆ ಜೀ ಕುಟುಂಬದ ನಟರು ಹೆಜ್ಜೆ ಹಾಕಿದರು. ಜೊತೆಗೆ ಜೋಡಿಹಕ್ಕಿ ಧಾರಾವಾಹಿಯ ಚೈತ್ರ ರಾವ್, ಬ್ರಹ್ಮಗಂಟು ಗೀತಾ ಹಾಗೂ ಇನ್ನುಳಿದ ಜೀ ವಾಹಿನಿಯ ನಟಿಯರು ಜಾನಪದ ನೃತ್ಯ ಮಾಡಿ ಗಮನ ಸೆಳೆದರು.

  • ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಸರ್ಪ್ರೈಸ್ ಕೊಡಲಿದ್ದಾರಂತೆ ಯಶ್!

    ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಸರ್ಪ್ರೈಸ್ ಕೊಡಲಿದ್ದಾರಂತೆ ಯಶ್!

    ಬೆಂಗಳೂರು: ಪ್ರತಿ ಬಾರಿಯೂ ಹಬ್ಬಕ್ಕಾಗಿ ಜೀ ಕನ್ನಡ ವಾಹಿನಿಯ ವಿಶೇಷ ಏನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆಯೇ ವಾಹಿನಿ ಕೂಡ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬಂದಿದೆ. ಈ ಬಾರಿಯೂ ದೀಪಾವಳಿಗಾಗಿ ಕಲರ್ ಫುಲ್ ಕಾರ್ಯಕ್ರಮ ರೂಪಿಸಿದೆ. ಪ್ರೇಕ್ಷಕರೊಟ್ಟಿಗೇ ದೀಪಾವಳಿ ಆಚರಿಸಲು ಜೀ ಕನ್ನಡ ವಾಹಿನಿಯ ಕುಟುಂಬವೇ ನೋಡುಗರ ಮನೆಬಾಗಿಲಿಗೆ ಹೊರಟಿದೆ. ಅದು ‘ಜೀ ಕನ್ನಡ ವಾಹಿನಿಯ ಕುಟುಂಬ ಅವಾರ್ಡ್ಸ್ 2018’ರ ಮೂಲಕ. ಇದೇ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಚ್ಚರಿ ಕೊಡ್ತಾರಂತೆ!

    ಸರ್ಪ್ರೈಸ್ ಕೊಡಲು ಬರಲಿದ್ದಾರೆ ಯಶ್: ರಾಕಿಂಗ್ ಸ್ಟಾರ್ ಯಶ್ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್ 2018’ರ ವೇದಿಕೆಯಲ್ಲಿ ವಾಹಿನಿಯ ನೋಡುಗರಿಗೆ ಸರ್ಪ್ರೈಸ್ ನೀಡಲಿದ್ದಾರೆ. ಅದು ಯಾವ ರೀತಿಯ ಸರ್ಪ್ರೈಸ್ ಎನ್ನುವುದನ್ನು ಕಾದು ನೋಡಿ ಎಂದಿದ್ದಾರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು.

    ಪ್ರತಿ ವರ್ಷ ನಡೆಯುವ ಜೀ ಕುಟುಂಬದ ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ‘ಜೀ ಕುಟುಂಬ ಅವಾರ್ಡ್ಸ್ 2018’ರ ಕಾರ್ಯಕ್ರಮ ಕೂಡ ಸಿದ್ಧವಾಗಿದೆ. ವಾಹಿನಿಯ ಕುಟುಂಬದ ಸದಸ್ಯರಾದ ಧಾರಾವಾಹಿ, ರಿಯಾಲಿಟಿ ಶೋಗಳ ಕಲಾವಿದರು ಮತ್ತು ತಂತ್ರಜ್ಞರು, ರಿಯಾಲಿಟಿ ಶೋಗಳು ನಿರ್ಣಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ. ಮನರಂಜನೆಗಾಗಿ ಹತ್ತಾರು ಕಾರ್ಯಕ್ರಮಗಳು, ನೂರಾರು ಕಲಾವಿದರು, ಅವರ ಕುಟುಂಬದ ಸದಸ್ಯರು, ಕೇವಲ ಕಿರುತೆರೆಯ ಕಲಾವಿದರು ಮಾತ್ರವಲ್ಲ, ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಕೂಡ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಪ್ರಶಸ್ತಿ ವಿಜೇತರು ಮತ್ತು ಅವರಿಗೆ ಗೌರವಿಸಲು ಆಗಮಿಸಿದ್ದ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮಾತುಕತೆ, ಸಿನಿಮಾ ಮತ್ತು ಕಿರುತೆರೆ ಕಲಾವಿದರು ವಿವಿಧ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಲಿವೆ.

    ಧಾರಾವಾಹಿನೋ ಅಥವಾ ರಿಯಾಲಿಟಿ ಶೋಗಳ ಕಲಾವಿದರನ್ನು ಆಯಾ ಕಾರ್ಯಕ್ರಮಗಳಲ್ಲಿ ಮಾತ್ರ ನೋಡುವುದಕ್ಕೆ ಸಾಧ್ಯ. ಆದರೆ, ಈ ಎಲ್ಲರನ್ನೂ ಒಟ್ಟಾಗಿಸಿದ ಹೆಮ್ಮೆ ಜೀ ಕುಟುಂಬ ಅವಾರ್ಡ್ಸ್ ನದ್ದು. ಎಲ್ಲರೂ ಒಟ್ಟಾಗಿದ್ದರಿಂದ ಡಬಲ್ ಮನರಂಜನೆ ಕೂಡ ಇಲ್ಲಿದೆ.

    ವರ್ಷಪೂರ್ತಿ ಸಾಧನೆ ಮಾಡಿದ ಸಾಧಕರ ಶ್ರಮ, ಅವರನ್ನು ಸನ್ಮಾನಿಸಿದ ಸಂತೃಪ್ತಿ ಮತ್ತು ತಮ್ಮ ಶ್ರಮಕ್ಕೆ ಸಂದ ಗೌರವಕ್ಕಾಗಿ ಸಾಧಕರ ಭಾವುಕ ನುಡಿಗಳು ಖುಷಿ ಕಂಬನಿಯಾಗಿ ಇಳಿದಿವೆ. ಈ ಭಾವುಕ ಕ್ಷಣವೇ ಜೀ ಕುಟುಂಬ ಅವಾಡ್ರ್ಸ್ ಗೆ ಸಿಕ್ಕ ದೊಡ್ಡ ಜಯ.

    22 ಬೆಸ್ಟ್ ಅವಾರ್ಡ್ಸ್, 7 ಫೇವರೆಟ್ ಕ್ಯಾಟಗರಿ ಅವಾಡ್ರ್ಸ್ ಜತೆಗೆ ಸ್ಪೆಷಲ್ ಕ್ಯಾಟಗರಿಯಲ್ಲಿ ಜೀ ಕನ್ನಡ ಹಿರಿಯ ಸದಸ್ಯರಿಗೂ ಪ್ರಶಸ್ತಿ ನೀಡಲಾಗಿದೆ. ಇವುಗಳ ಜತೆಗೆ ಪ್ರಾಮಿಸಿಂಗ್ ನ್ಯೂ ಫೇಸ್ ಆಫ್ ಮೇಲ್ ಮತ್ತು ಫಿಮೇಲ್, ಸ್ಟೈಲ್ ಐಕಾನ್ (ಮೇಲ್ ಮತ್ತು ಫಿಮೇಲ್) ಪ್ರೈಡ್ ಆಫ್ ಜೀ ಕನ್ನಡ ಹೀಗೆ 40 ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

    ವರ್ಣರಂಜಿತ ಈ ವೇದಿಕೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರಾದ ರಾಗಿಣಿ ದ್ವಿವೇದಿ, ಸಾನ್ವಿ, ಅಜಯ್ ರಾವ್ ಮತ್ತು ಜೀ ಕನ್ನಡ ಧಾರಾವಾಹಿ ಮತ್ತು ರಿಯಾಲಿಟಿ ಶೋ ಪ್ರತಿಭೆಗಳು ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳು ನವೆಂಬರ್ 3 ಮತ್ತು 4 ರಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಶಕದ ನಂತರ ಮತ್ತೊಮ್ಮೆ ಜೀ ವಾಹಿನಿಯಲ್ಲಿ ‘ಯಾರಿಗುಂಟು ಯಾರಿಗಿಲ್ಲ’

    ದಶಕದ ನಂತರ ಮತ್ತೊಮ್ಮೆ ಜೀ ವಾಹಿನಿಯಲ್ಲಿ ‘ಯಾರಿಗುಂಟು ಯಾರಿಗಿಲ್ಲ’

    ಬೆಂಗಳೂರು: ಕನ್ನಡ ದೃಶ್ಯಮಾಧ್ಯಮದಲ್ಲಿ ತನ್ನದೇ ಆದಂಥ ಸ್ಥಾನವನ್ನು ಪಡೆದುಕೊಂಡಿರುವ ಜೀ ಕನ್ನಡ ವಾಹಿನಿ ಇಲ್ಲಿಯವರೆಗೂ ಪ್ರೇಕ್ಷಕರಿಗೆ ಇಷ್ಟವಾದ ಕಾರ್ಯಕ್ರಮಗಳನ್ನೇ ಕೊಡುತ್ತಿದೆ. ಮನೋರಂಜನೆಗೆ ಮತ್ತೊಂದು ಹೆಸರಾಗಿ ಈ ವಾಹಿನಿ ಮೂಡಿಬರುತ್ತಲಿದೆ.

    ತನ್ನ ವಿಭಿನ್ನ ಪ್ರಯತ್ನಗಳ ಮೂಲಕ ಹೊಸ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದೆ. ಈಗಾಗಲೇ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ಜೀ ಕನ್ನಡ ಈಗ ತನ್ನ ಜನಪ್ರಿಯ ಶೋಗಳಲ್ಲಿ ಒಂದಾದ ‘ಯಾರಿಗುಂಟು ಯಾರಿಗಿಲ್ಲ’ ಕಾರ್ಯಕ್ರಮವನ್ನು ಹೊಸ ರೂಪದೊಂದಿಗೆ ವೀಕ್ಷಕರ ಮುಂದೆ ಮತ್ತೆ ತರಲು ಸಿದ್ಧವಾಗಿದೆ.

    ಕಳೆದ 2007ರಲ್ಲಿ ತನ್ನ ಮೊದಲ ಸರಣಿಯನ್ನು ಶುರುಮಾಡಿದ್ದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮ ದಶಕದಾಚೆಗೂ ಕನ್ನಡಿಗರ ಮನೆ ಮನದಲ್ಲಿ ವಿಶೇಷ ಮನೋರಂಜನೆಯ ಕುರುಹಾಗಿ ನೆಲೆನಿಂತಿದೆ. ಅಂಥಾ ವಿನೂತನ ಕಾರ್ಯಕ್ರಮ ಇದೀಗ ಮತ್ತೊಮ್ಮೆ ಮೂಡಿಬರಲು ಸಿದ್ಧವಾಗಿದೆ. ಈಗ ಇನ್ನೊಂದಷ್ಟು ಹೊಸ ಯೋಜನೆ, ಯೋಚನೆಗಳೊಂದಿಗೆ ಮೂಡಿಬರಲು ಸಿದ್ಧವಾಗುತ್ತಿರುವ ಈ ಕಾರ್ಯಕ್ರಮ ಹೆಸರಾಂತ ತಾರೆಯರೊಂದಿಗೆ ತನ್ನ ಸರಣಿಯನ್ನು ಆರಂಭಿಸುತ್ತಿದೆ. ತನ್ನ ಪ್ರೇಕ್ಷಕರಿಗೆ ಹೊಸ ರೂಪದೊಂದಿಗೆ ಮನೋರಂಜನೆಯ ರಸದೌತಣವನ್ನು ನೀಡಲು ಇದೇ ಆಗಸ್ಟ್ 4ರಿಂದ ಯಾರಿಗುಂಟು ಯಾರಿಗಿಲ್ಲ ತನ್ನ ಪ್ರಸಾರವನ್ನು ಆರಂಭಿಸುತ್ತಿದೆ.

    ಜೀ ಕನ್ನಡ ಪರಿವಾರದ ನಾಗಿಣಿ, ಕಮಲಿ, ಬ್ರಹ್ಮಗಂಟು, ಯಾರೇ ನೀ ಮೋಹಿನಿ, ಗಂಗಾ, ಜೋಡಿ ಹಕ್ಕಿ, ಮಹಾದೇವಿ, ಕಾಮಿಡಿ ಕಿಲಾಡಿಗಳು, ಸರಿಗಮಪ ಶೋಗಳ ಕಲಾವಿದರು ಪ್ರತ್ಯೇಕ ತಂಡಗಳಾಗಿ ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮದ ಪ್ರತಿ ಸಂಚಿಕೆಯಲ್ಲಿ ಒಟ್ಟು 6 ಜನ ತಾರೆಯರಿರುತ್ತಾರೆ, 4 ಸುತ್ತುಗಳಿರುತ್ತವೆ. ಒಂದೊಂದು ಸುತ್ತಿನಲ್ಲೂ ಮನ ತುಂಬುವಂಥ ಮನೋರಂಜನೆಯೊಂದಿಗೆ ವಾರಂತ್ಯಕ್ಕೆ ಜೀ ವಾಹಿನಿಯ ಕೊಡುಗೆಯಾಗಿ ಯಾರಿಗುಂಟು ಯಾರಿಗಿಲ್ಲ ವೀಕ್ಷಕರ ಮುಂದೆ ಬರಲಿದೆ.

    ಹೊಸ ನೋಟ, ಹೊಸ ಆಟದ ಜೊತೆ ಕಾಮಿಡಿ ಕಿಲಾಡಿ ಸೀಸನ್ 2 ಖ್ಯಾತಿಯ ಅಪ್ಪಣ್ಣ ಹಾಗೂ ಸೂರಜ್ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ. ತಮ್ಮ ನೈಜವಾದ ನಿರೂಪಣೆ ಹಾಗೂ ಚುರುಕಾದ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಹೊಸ ಸ್ಪರ್ಶವನ್ನು ನೀಡಲಿದ್ದಾರೆ. ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮವು ಆಗಸ್ಟ್ 4ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

  • ಸರಿಗಮಪ ಲಿಟ್ಲ್ ಚಾಂಪ್ಸ್, ಕಾಮಿಡಿ ಕಿಲಾಡಿಗಳು ಆಡಿಷನ್ ಆರಂಭ: ಯಾವ ದಿನ ಎಲ್ಲಿ?

    ಸರಿಗಮಪ ಲಿಟ್ಲ್ ಚಾಂಪ್ಸ್, ಕಾಮಿಡಿ ಕಿಲಾಡಿಗಳು ಆಡಿಷನ್ ಆರಂಭ: ಯಾವ ದಿನ ಎಲ್ಲಿ?

    ಬೆಂಗಳೂರು: ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮಬಾರಿಗೆ ಜೀ ಕನ್ನಡ ವಾಹಿನಿಯು ಪ್ರತಿಭಾವಂತ ಪ್ರತಿಭೆಗಳ ಆಯ್ಕೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್ ನಡೆಸುತ್ತಿದೆ.

    ನವೆಂಬರ್ 4 ರಿಂದ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಜನ್ 14 ಹಾಗೂ ಕಾಮಿಡಿ ಕಿಲಾಡಿಗಳು ಸೀಜನ್ 2 ಆಡಿಷನ್ ಆರಂಭವಾಗಿದೆ. ಸರಿಗಮಪ ಲಿಟ್ಲ್ ಚಾಂಪ್ಸ್ ಆಡಿಷನ್‍ನಲ್ಲಿ ಭಾಗವಹಿಸುವವರು 5 ರಿಂದ 13 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಆದರೆ ಕಾಮಿಡಿ ಕಿಲಾಡಿಗಳು ಆಡಿಷನ್‍ಗೆ ಯಾವುದೇ ವಯೋಮಿಯ ಅವಶ್ಯಕತೆ ಇಲ್ಲ. ಯಾರು ಬೇಕಾದರೂ ಆಡಿಷನ್‍ನಲ್ಲಿ ಭಾಗವಹಿಸಬಹುದು. ಮೊದಲು ತುಮಕೂರು ಮತ್ತು ಹಾವೇರಿಯಲ್ಲಿ ಆಡಿಷನ್ ಮುಗಿಸಿದ್ದು, ಇಂದು ಕೋಟೆನಾಡು ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.

    ಕೋಟೆನಾಡಿನ ಡಾನ್ ಬಾಸ್ಕೋ ಶಾಲೆಯಲ್ಲಿ ಆಡಿಷನ್ ನಡೆಯುತ್ತಿದ್ದು, ಈ ಆಡಿಷನ್‍ಗೆ ಸುಮಾರು 500ಕ್ಕೂ ಹೆಚ್ಚು ಪ್ರತಿಭಾವಂತರ ವಿದ್ಯಾರ್ಥಿಗಳು, ಯುವಕರು ಮತ್ತು ಯುವತಿಯರು ಭಾಗವಹಿಸಿದ್ದರು. ಸ್ಪರ್ಧಿಗಳ ಆಯ್ಕೆಗಾಗಿ ವಿವಿಧ ಬಗೆಯ ಪ್ರಯೋಗಗಳನ್ನು ಮಾಡುವ ಮೂಲಕ ಅವರಲ್ಲಿ ಅಡಗಿರೋ ಕಲೆ, ಪ್ರತಿಭೆಯನ್ನು ಹೊರ ತರುವ ಪ್ರಯತ್ನವನ್ನು ಜೀ ಕನ್ನಡ ವಾಹಿನಿ ಮಾಡಿದೆ.

    ಸೋಮವಾರ ಶಿವಮೊಗ್ಗ ಮತ್ತು ಕಾರವಾರದಲ್ಲಿ ಆಡಿಷನ್ ನಡೆಯಲಿದ್ದು, ನವೆಂಬರ್ 22 ರಂದು ರಾಮನಗರ ಮತ್ತು ಕೋಲಾರದಲ್ಲಿ ಆಡಿಷನ್ ಕೊನೆಗೊಳ್ಳಲಿದೆ. ಈ ಬಾರಿಯ ಲಿಟ್ಲ್ ಚಾಂಪ್ಸ್ ಮತ್ತು ಕಾಮಿಡಿ ಕಿಲಾಡಿ ಸೀಜನ್ ಗೆ ಪಬ್ಲಿಕ್ ಟಿವಿಯ ಸಹಯೋಗವಿದೆ.