Tag: ಜೀವಿತಾ

  • ನಟ ರಾಜಶೇಖರ್ ಮತ್ತು ಪತ್ನಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟ: ಏನಿದು ಪ್ರಕರಣ?

    ನಟ ರಾಜಶೇಖರ್ ಮತ್ತು ಪತ್ನಿಗೆ 1 ವರ್ಷ ಜೈಲು ಶಿಕ್ಷೆ ಪ್ರಕಟ: ಏನಿದು ಪ್ರಕರಣ?

    ತೆಲುಗಿನ ಹೆಸರಾಂತ ನಟ ರಾಜಶೇಖರ್ (Rajasekhar) ಮತ್ತು ಅವರ ಪತ್ನಿ ಜೀವಿತಾಗೆ (Jeevita) ನಾಂಪಲ್ಲಿ ಕೋರ್ಟ್ ನ ಮುಖ್ಯ ಮ್ಯಾಜಿಸ್ಟ್ರೇಟ್ ಒಂದು ವರ್ಷ ಜೈಲು ಶಿಕ್ಷೆ (Jail sentence) ಮತ್ತು ಐದು ಲಕ್ಷ ರೂಪಾಯಿ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ರಾಜಶೇಖರ್ ಮತ್ತು ಪತ್ನಿ ಜೀವಿತಾ ಮಾಡಿರುವ ಆರೋಪ ಸುಳ್ಳು ಎಂದು ಸಾಬೀತಾಗಿದೆ.

    2011ರಲ್ಲಿ ನಟ ರಾಜಶೇಖರ್ ಮತ್ತು ಅವರ ಪತ್ನಿ ಒಟ್ಟಾಗಿ ಚಿರಂಜೀವಿ (Chiranjeevi) ಬ್ಲಡ್ ಬ್ಯಾಂಕ್ ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಇಲ್ಲಿಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ಕುರಿತು  ಚಿರಂಜೀವಿ ಅವರ ಭಾವ ಅಲ್ಲು ಅರವಿಂದ್ (Allu Arvind) ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನೂ ಓದಿ:ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

    ನಟ ಚಿರಂಜೀವಿ ಕಂಡರೆ ನಟ ರಾಜಶೇಖರ್ ಅವರಿಗೆ ಆಗುವುದಿಲ್ಲ. ಕಾರಣ ಸಿಕ್ಕಾಗೆಲ್ಲ ಚಿರಂಜೀವಿಯನ್ನು ಟೀಕಿಸುತ್ತಲೇ ಇರುತ್ತಾರೆ ರಾಜಶೇಖರ್. ಇದಕ್ಕೆ ವೃತ್ತಿ ವೈಷಮ್ಯ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರೋದ್ಯಮದ ಕಲಾವಿದರ ಸಂಘದಲ್ಲೂ ಈ ಇಬ್ಬರೂ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು.

     

    ಅದರ ಮುಂದುವರೆಕೆಗಾಗಿ ಚಿರಂಜೀವಿ ಹೆಸರಿನ ಬ್ಲಡ್ ಬ್ಯಾಂಕ್ ನಲ್ಲಿ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದಿದ್ದರು ರಾಜಶೇಖರ್. ಈ ಮಾತಿನ ವಿರುದ್ದ ಅಲ್ಲು ಅರವಿಂದ್ ದೂರು ನೀಡಿದ್ದರು. ನಿನ್ನೆ ತೀರ್ಪು ಹೊರಬಂದಿದೆ. ಕೂಡಲೇ ದಂಪತಿ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ 3 ಗೊಂಬೆಗಳು ಎಂಟ್ರಿ

    ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ 3 ಗೊಂಬೆಗಳು ಎಂಟ್ರಿ

    ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿಬಾರಿ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಹೊಸ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ. ಅದೇ ರೀತಿ ಈ ಬಾರಿಯೂ ಕೂಡ ವೈಲ್ಡ್ ಕಾರ್ಡ್ ಮೂಲಕ ಮೂವರು ನಟಿಯರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಬಿಗ್ ಬಾಸ್ ಸೀಸನ್ 6ರಲ್ಲಿ  ‘ವೈಲ್ಡ್ ಕಾರ್ಡ್’ ಮೂಲಕ ಮೂರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಬಿಗ್ ಮನೆಯಲ್ಲಿ ಮೂರು ಗೊಂಬೆಗಳನ್ನಿಟ್ಟು ಬಳಿಕ ಆ ಮೂರು ಗೊಂಬೆಗಳಿಗೆ ಜೀವ ತುಂಬುವಂತಹ ಟಾಸ್ಕ್ ಮಾಡಿದ್ದಾರೆ. ಆಗ ಬಿಗ್ ಬಾಸ್ ಮನೆಯಲ್ಲಿ ‘ದಿ ವಿಲನ್’ ಸಿನಿಮಾದ ರಾವಣ ಹಾಡು ಬಂದಿದ್ದು, ಬಳಿಕ ನಟಿ ಮೇಘನಾ, ಜೀವಿತಾ ಹಾಗೂ ನಿವೇದಿತಾ ಗೌಡ ಮೂವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ವೈಲ್ಡ್ ಕಾರ್ಡ್ ಮೂಲಕ ಬಂದಂತಹ ಮೂವರನ್ನು ಬಿಗ್ ಮನೆಯ ಸ್ಪರ್ಧಿಗಳು ಸ್ವಾಗತಿಸಿದ್ದಾರೆ. ನಿವೇದಿತಾ ಗೌಡ ಕಳೆದ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಿದ್ದು, ಜೀವಿತಾ ಅವರು ಒಬ್ಬ ಮಾಡೆಲ್ ಹಾಗೂ ನಟಿಯಾಗಿದ್ದಾರೆ. ಇದು ಬಿಟ್ಟು ಜೀವಿತಾ ಬಗ್ಗೆ ಅಷ್ಟೇನೂ ತಿಳಿದುಬಂದಿಲ್ಲ. ಇನ್ನೂ ಮೇಘನಾ ಅವರು ನಟಿಯಾಗಿದ್ದು, ಮೂಲತಃ ತೀರ್ಥಹಳ್ಳಿಯವರಾಗಿದ್ದಾರೆ.

    ನಟಿ ಮೇಘನಾ ಅವರು ಈಗಾಗಲೇ ಸಂಚಾರಿ ವಿಜಯ್ ಅವರ ಜೊತೆ ‘ಕೃಷ್ಣ ತುಳಸಿ’ ಸಿನಿಮಾದಲ್ಲಿ ಅಂಧೆಯ ಪಾತ್ರವನ್ನು ಮಾಡಿದ್ದಾರೆ. ಈಗ ನಟ ವಿಜಯ ಸೂರ್ಯ ಜೊತೆಗೆ ನಟಿಯಾಗಿ ಅಭಿನಯಿಸಿರುವ ‘ಕದ್ದುಮುಚ್ಚಿ’ ಹಾಗೂ ಚಿರಂಜೀವಿ ಸರ್ಜ ಜೊತೆಗಿನ ‘ಮಾರ್ತಾಂಡ’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲೂ ಅಭಿನಯಸಿದ್ದಾರೆ.

    ಬಿಗ್ ಬಾಸ್ ಸೀಸನ್ 5ರಲ್ಲಿ ನಿವೇದಿತಾ ಗೌಡ ಅವರು ಸ್ಪರ್ಧಿಯಾಗಿದ್ದು, ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿವೇದಿತಾ ಗೌಡ ಯಾಕೆ ಬಿಗ್ ಮನೆಗೆ ಮತ್ತೆ ಬಂದಿದ್ದಾರೆ ಎಂದು ಎಲ್ಲರಿಗೂ ಕುತೂಹಲ ತಂದಿದೆ. ಇತ್ತ ಮೇಘನಾ ಮತ್ತು ಜೀವಿತಾ ಇಬ್ಬರನ್ನು ಬಿಟ್ಟು ನಿವೇದಿತಾ ಗೌಡ ಬಿಗ್ ಮನೆಯಿಂದ ವಾಪಸ್ ಹೋಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv