Tag: ಜೀವಾ ಧೋನಿ

  • ಬಹುದಿನಗಳ ಬಳಿಕ ಧೋನಿ ಅಭಿಮಾನಿ ಬಳಗಕ್ಕೆ ಗುಡ್ ನ್ಯೂಸ್

    ಬಹುದಿನಗಳ ಬಳಿಕ ಧೋನಿ ಅಭಿಮಾನಿ ಬಳಗಕ್ಕೆ ಗುಡ್ ನ್ಯೂಸ್

    ಮುಂಬೈ: ಕ್ರಿಕೆಟ್ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯದ ತುಣುಕು ಕಂಡು ಫ್ಯಾನ್ಸ್ ವಾವ್ ಅಂತಿದ್ದು, ಫುಲ್ ವೀಡಿಯೋ ನೋಡಲು ಕಾತುರರಾಗಿದ್ದಾರೆ.

    ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ನಿರಾಶದಾಯಕ ಪ್ರದರ್ಶನದ ಬಳಿಕ ಪತ್ನಿ ಸಾಕ್ಷಿ ರಾವತ್, ಪುತ್ರಿ ಜೀವಾ ಜೊತೆ ರಜಾ ಸಮಯವನ್ನ ಕಳೆಯುತ್ತಿದ್ದಾರೆ. ಈಗಾಗಲೇ ಹಲವು ಜಾಹೀರಾತುಗಳಲ್ಲಿ ನಟಿಸಿರುವ ಕೂಲ್ ಧೋನಿ ನಟನೆಗೂ ಸೈ ಅನ್ನಿಸಿಕೊಂಡಿದ್ದರು. ಇದೀಗ ಪುತ್ರಿ ಜೀವಾ ಸಹ ಜಾಹೀರಾತು ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾಳೆ. ಈ ವಿಷ್ಯ ಕೇಳಿದ ಅಭಿಮಾನಿಗಳು ಧೋನಿ ಸಿಕ್ಸ್ ಹೊಡೆದಷ್ಟೇ ಸಂಭ್ರಮಿಸುತ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಸೆಲೆಬ್ರಿಟಿ ಫೋಟೋಗ್ರಾಫರ್ ವಿರಲ್ ಭಯಾನಿ ಈ ವಿಷಯವನ್ನ ರಿವೀಲ್ ಮಾಡಿದ್ದಾರೆ. ಬಿಸ್ಕಟ್ ಜಾಹೀರಾತಿಯನ್ನ ಅಪ್ಪ-ಮಗಳು ಜೊತೆಯಾಗುತ್ತಿದ್ದಾರೆ. ಇತ್ತ ಬಿಸ್ಕಟ್ ಕಂಪನಿ ಸಹ ತಮ್ಮ ತಂಡಕ್ಕೆ ಹೊಸ ಪ್ರತಿಭೆ ಎಂಟ್ರಿ ನೀಡುತ್ತಿರುವ ಸುಳಿವು ನೀಡಿದೆ. ಆದ್ರೆ ಈ ಬಗ್ಗೆ ಧೋನಿ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

     

    View this post on Instagram

     

    A post shared by Oreo (@oreo.india)

  • ಬೇಬಿ ಜೀವಾಳ ಜೊತೆ ರಿಷಬ್ ಪಂತ್- ಕ್ಯೂಟ್ ವಿಡಿಯೋ ನೋಡಿ

    ಬೇಬಿ ಜೀವಾಳ ಜೊತೆ ರಿಷಬ್ ಪಂತ್- ಕ್ಯೂಟ್ ವಿಡಿಯೋ ನೋಡಿ

    ನವದೆಹಲಿ: ಭಾನುವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಭಾತರ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಪುತ್ರಿ ಜೀವಾ ಮತ್ತು ಭಾತರದ ಆಟಗಾರ ರಿಷಬ್ ಪಂತ್ ಅವರ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ.

    ಪಂದ್ಯದ ಆರಂಭಕ್ಕೂ ಮುನ್ನಾ ಜೀವಾ ಧೋನಿ ಹಾಗೂ ರಿಷಬ್ ಪಂತ್ ಸೇರಿಕೊಂಡು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ರಿಷಬ್ ಪಂತ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದು, ಅಭಿಮಾನಿಗಳು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ರಿಷಬ್ ಮತ್ತು ಜೀವಾ ಕಿರುಚುತ್ತಿರುವ ವಿಡಿಯೋ ಹಾಕಿರುವ ಪಂತ್ ಕ್ರೈಮ್ ಪಾಟ್ನನರ್ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/Byx_NZDnu9A/?utm_source=ig_embed&utm_campaign=embed_video_watch_again

    ಭಾರತ ತಂಡದ ಆರಂಭಿಕ ಶಿಖರ್ ಧವನ್ ಅವರು ಗಾಯದ ಸಮಸ್ಯೆಗೆ ತುತ್ತಾದ ಕಾರಣ ರಿಷಬ್ ಪಂತ್ ಅವರನ್ನು ಬದಲಿ ಆಟಗಾರನಾಗಿ ಜೂನ್ 14 ಕ್ಕೆ ಇಂಗ್ಲೆಂಡ್‍ಗೆ ಕರಸಿಕೊಳ್ಳಲಾಗಿದೆ. ಇನ್ನೂ ಅವರು ಭಾರತ ತಂಡದಲ್ಲಿ ಅಧಿಕೃತವಾಗಿ ಸ್ಥಾನ ಪಡೆದಿಲ್ಲ. ಆದರೆ ಭಾನುವಾರದ ಪಂದ್ಯದಲ್ಲಿ ತಮ್ಮ ತಂಡದ ಆಟಗಾರರಿಗೆ ಡ್ರಿಂಕ್ಸ್ ಸಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ.

    ಪಂತ್ ಮಕ್ಕಳ ಜೊತೆ ಆಟವಾಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಪಂತ್ ಬೇಬಿ ಸಿಟ್ಟರ್ ಆಗಿದ್ದರು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಭರ್ಜರಿ ಆಟವಾಡಿದ್ದ ರಿಷಬ್ ಪಂತ್, ಬೇಬಿ ಸಿಟ್ಟರ್ ಎಂಬ ಹೆಸರು ಪಡೆದಿದ್ದರು.

    ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಕ್ಯಾಪ್ಟನ್ ಟಿಮ್ ಪೈನ್, ಪಂತ್ ರನ್ನು ಬೇಬಿ ಸಿಟ್ಟರ್ ಎಂದು ಕರೆದಿದ್ದರು. ಮನೆಗೆ ಬಂದು ಮಕ್ಕಳನ್ನು ನೋಡಿಕೋ, ನಾನು ನನ್ನ ಪತ್ನಿ ಸಿನಿಮಾಕ್ಕೆ ಹೋಗ್ತೇವೆ ಎಂದಿದ್ದರು. ಮೆಲ್ಬೋರ್ನ್ ಪಂದ್ಯ ಮುಗಿದ ಬಳಿಕ ಟಿಮ್ ಪೈನ್ ಮನೆಗೆ ಹೋಗಿ ಅವರ ಮಕ್ಕಳನ್ನು ಎತ್ತಿಕೊಂಡು ಫೋಟೋಕ್ಕೆ ಫೋಸ್ ನೀಡಿದ್ದರು. ಅಲ್ಲಿಂದ ಅವರಿಗೆ ಬೇಬಿ ಸಿಟ್ಟರ್ ಎಂಬ ಹೆಸರು ಬಂದಿದೆ.

  • ಮಗಳ ಜೊತೆಯಿರುವ ಧೋನಿಯ ಮುದ್ದಾದ ವಿಡಿಯೋ ವೈರಲ್

    ಮಗಳ ಜೊತೆಯಿರುವ ಧೋನಿಯ ಮುದ್ದಾದ ವಿಡಿಯೋ ವೈರಲ್

    ಮುಂಬೈ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ತಮ್ಮ ಮಗಳು ಜೀವಾ ಧೋನಿ ಜೊತೆಯಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಧೋನಿ ಶುಕ್ರವಾರ ತಮ್ಮ ಮಗಳ ಜೊತೆಯಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜೀವಾ ತನ್ನ ತಂದೆಗೆ ಕ್ಯಾರೆಟ್ ತಿನ್ನಿಸುತ್ತಿದ್ದಾಳೆ. ಸದ್ಯ ಧೋನಿ ಈ ವಿಡಿಯೋಗೆ ‘ಜೀವಾಳ ಬಗ್ಸ್ ಬನ್ನಿ’ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    Ziva’s bugs bunny @zivasinghdhoni006

    A post shared by M S Dhoni (@mahi7781) on

    ಧೋನಿ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ಯಾವುದೇ ಆಡಿಯೋವಿಲ್ಲ. ಆದರೆ ಮುಖದ ಭಾವನೆಯ ಮೂಲಕವೇ ಜೀವಾ ಎಲ್ಲರ ಗಮನ ಸೆಳೆದಿದ್ದಾಳೆ. ಸದ್ಯ ಧೋನಿ ಹಾಗೂ ಜೀವಾಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಏಕದಿನ ಪಂದ್ಯದ ನಂತರ ಧೋನಿ ಅವರನ್ನು ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯುವ ಟಿ20 ಅಂತರಾಷ್ಟ್ರೀಯ ಪಂದ್ಯದಿಂದ ಕೈಬಿಡಲಾಯಿತು. ಸದ್ಯ ಈಗ ವಿಶ್ರಾಂತಿಯಲ್ಲಿರುವ ಧೋನಿ ಅವರು ತಮ್ಮ ಮಗು ಜೀವಾ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಕೂಲಿನಲ್ಲಿ ತನ್ನ ಪ್ರತಿಭೆ ಹೊರಹಾಕಿದ ಜೀವಾ: ಫೋಟೋ ವೈರಲ್

    ಸ್ಕೂಲಿನಲ್ಲಿ ತನ್ನ ಪ್ರತಿಭೆ ಹೊರಹಾಕಿದ ಜೀವಾ: ಫೋಟೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ. ಎಸ್ ಧೋನಿ ಅವರ ಪುತ್ರಿ ಜೀವಾ ರಂಗೋಲಿ ಬಿಡಿಸುತ್ತಿರುವ ಫೋಟೋವೊಂದು ವೈರಲ್ ಆಗುತ್ತಿದೆ.

    ಜೀವಾ ಸ್ಕೂಲ್‍ನಲ್ಲಿ ತನ್ನ ಸ್ನೇಹಿತರ ಜೊತೆ ರಂಗೋಲಿ ಬಿಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ದೀಪಾವಳಿಯಲ್ಲಿ ಸೆರೆ ಹಿಡಿದಿದ್ದಾ ಅಥವಾ ಮೊದಲೇ ಕ್ಲಿಕ್ಕಿಸಲಾಗಿತ್ತಾ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಈ ಫೋಟೋ ದೀಪಾವಳಿಯಂದು ವೈರಲ್ ಆಗಿದೆ.

     

    View this post on Instagram

     

    Ziva making rangoli at her school ????❤️ . #talent #talented #babyboo #rangoli #diwali

    A post shared by ZIVA SINGH DHONI (@zivaasinghdhoni006) on

    ಜೀವಾ ತನ್ನ ಸ್ನೇಹಿತರ ಜೊತೆ ರಂಗೋಲಿ ಬಿಡಿಸುತ್ತಿರುವ ಫೋಟೋ ನೋಡಿ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಜೀವಾಳ ಗಣಿತದ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಈ ಫೋಟೋ ನೋಡಿ ಅಭಿಮಾನಿಗಳು ಜೀವಾ ತನ್ನ ತಂದೆ ಧೋನಿಯ ತರಹ ಎಲ್ಲ ಕೆಲಸದಲ್ಲೂ ಪರ್ಫೆಕ್ಟ್ ಎಂದು ಕಮೆಂಟ್ ಮಾಡಿದ್ದಾರೆ.

    ಈ ಮೊದಲು ಜೀವಾ ಸ್ಕೂಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಳು. ಆ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    View this post on Instagram

     

    ❤️❤️❤️❤️❤️❤️❤️❤️❤️

    A post shared by Sakshi Singh Dhoni FC ???? (@_sakshisingh_r) on

     

    View this post on Instagram

     

    A post shared by Sakshi Singh Dhoni FC ???? (@_sakshisingh_r) on

  • ‘ನೋ ಫೋಟೋ’ ಎಂದು ಫೋಟೋಗ್ರಾಫರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಜೀವಾ: ವಿಡಿಯೋ

    ‘ನೋ ಫೋಟೋ’ ಎಂದು ಫೋಟೋಗ್ರಾಫರ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಜೀವಾ: ವಿಡಿಯೋ

    ನವದೆಹಲಿ: ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಮಗಳು ಜೀವಾ ಫೋಟೋಗ್ರಾಫರ್ ಒಬ್ಬರಿಗೆ “ನೋ ಫೋಟೋ” ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾಳೆ.

    ಜೀವಾಳ ಅಜ್ಜಿ ಆಕೆಯನ್ನು ಊಟ ಮಾಡಿಸುತ್ತಿದ್ದಾಗ ಫೋಟೋಗ್ರಾಫರ್ ಒಬ್ಬರು ಆಕೆಯ ಫೋಟೋ ತೆಗೆಯಲು ಮುಂದಾಗಿದ್ದಾರೆ. ಆಗ ಜೀವಾ ನೋ ಫೋಟೋ ಎಂದು ಖಡಕ್ ಆಗಿ ಹೇಳಿದ್ದಾಳೆ. ಧೋನಿ ಪತ್ನಿ ಸಾಕ್ಷಿ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ. ಇದನ್ನೂ ಓದಿ: ಐಪಿಎಲ್ ನಿಂದ ನಿವೃತ್ತಿ ಸುಳಿವು ನೀಡಿದ್ರಾ ಧೋನಿ?

    ಸದ್ಯ ಧೋನಿ ನೇತೃತ್ವದ ತಂಡ ಚೆನ್ನೈ ಸೂಪರ್ ಕಿಂಗ್ಸ್, ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಫೈನಲ್ ತಲುಪಿದೆ. ಐಪಿಎಲ್‍ನಲ್ಲಿ ಸಿಎಸ್‍ಕೆ ಏಳು ಬಾರಿ ಫೈನಲ್‍ಗೆ ಎಂಟ್ರಿ ಕೊಟ್ಟಿರುವುದು ವಿಶೇಷ. ಇದನ್ನೂ ಓದಿ: ಧೋನಿ ಸುತ್ತಲೂ ಹೊಟ್ಟೆ ಕಿಚ್ಚು ಪಡೋ ಜನರಿದ್ದಾರೆ: ರವಿ ಶಾಸ್ತ್ರಿ