Tag: ಜೀವಾವಧಿ ಶಿಕ್ಷೆ

  • ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

    ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

    – ಅಪರಾಧಿಗೆ ತೀರ್ಪಿನ ಪ್ರತಿಯನ್ನ ಉಚಿತವಾಗಿ ನೀಡಲು ಕೋರ್ಟ್‌ ಸೂಚನೆ

    ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣಗೆ (Prajwal Revanna) ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಗೆ 11 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.

    ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯವು, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣವನ್ನು ಶನಿವಾರ ಪ್ರಕಟಿಸಿದೆ. ನ್ಯಾ. ಗಜಾನನ ಭಟ್ ಅವರಿದ್ದ ಪೀಠವು, ಅಪರಾಧಿಗೆ ಜೀವನ ಪರ್ಯಂತ ಕಾರಾಗೃಹ ವಾಸ ಶಿಕ್ಷೆ ಪ್ರಕಟಿಸಿದೆ. ಇದನ್ನೂ ಓದಿ: ಮನೆಗೆಲಸದಾಕೆ ಮೇಲೆ ಅತ್ಯಾಚಾರ ಕೇಸ್ – ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

    ಅಪರಾಧಿ ಪ್ರಜ್ವಲ್ ರೇವಣ್ಣಗೆ ಗರಿಷ್ಠ ಶಿಕ್ಷೆ ಜೊತೆ 2 ಸೆಕ್ಷನ್‌ಗಳಡಿ ತಲಾ 5 ಲಕ್ಷದಂತೆ ಒಟ್ಟು 10 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ. ಜೊತೆಗೆ ಸಂತ್ರಸ್ತೆಗೆ 11.25 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ತೀರ್ಪಿನ ಪ್ರತಿಯನ್ನು ಅಪರಾಧಿಗೆ ಉಚಿತವಾಗಿ ನೀಡುವಂತೆ ಕೋರ್ಟ್‌ ತಿಳಿಸಿದೆ.

    ಐಪಿಸಿ ಸೆಕ್ಷನ್ 376 (ಎನ್) ಅಡಿ ಜೀವನ ಅಂತ್ಯವಾಗುವವರೆಗೆ ಸಜೆ ವಿಧಿಸಲು ಅವಕಾಶವಿದೆ. ಅದೇ ಮಹಿಳೆಯನ್ನ ಪದೇ ಪದೆ ಅತ್ಯಾಚಾರ ಎಸಗಿದ್ರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಇದನ್ನೂ ಓದಿ: ಕಾಲೇಜಲ್ಲಿ ನಾನು ಮೆರಿ‌ಟ್‌ ವಿದ್ಯಾರ್ಥಿ, ಶಿಕ್ಷೆ ಕೊಡುವಾಗ ನನ್ನ ಕುಟುಂಬವನ್ನ ಪರಿಗಣಿಸಿ: ಕೋರ್ಟಲ್ಲಿ ಪ್ರಜ್ವಲ್‌ ರೇವಣ್ಣ ಕಣ್ಣೀರು

    ಏನಿದು ಪ್ರಕರಣ?
    2024ರ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸಿದ್ದ. ಇದೇ ಹೊತ್ತಿನಲ್ಲಿ ಸಂಸದ ಪ್ರಜ್ವಲ್‌ದು ಎನ್ನಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಹಲವು ವೀಡಿಯೋಗಳು ಮತ್ತು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸಂಸದನ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ 48 ವರ್ಷದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವೀಡಿಯೋ ಕೂಡ ಹರಿದಾಡಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಕಣ್ಮರೆಯಾಗಿದ್ದರು. ಈ ಸಂಬಂಧ ಸಂತ್ರಸ್ತೆ ಪುತ್ರ 2024ರ ಮೇ 2 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನನ್ನ ತಾಯಿಯನ್ನು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಮತ್ತು ಅವರ ಸಂಬಂಧಿ ಕಿಡ್ನ್ಯಾಪ್ ಮಾಡಿದ್ದಾರೆಂದು ದೂರಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಎಸ್‌ಐಟಿ, ತೋಟದ ಮನೆಯೊಂದರಲ್ಲಿ ಸಂತ್ರಸ್ತೆ ಇರುವುದನ್ನು ಪತ್ತೆಹಚ್ಚಿತ್ತು. ವಿಚಾರಣೆ ವೇಳೆ, ತನ್ನ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿದ್ದರು.

  • ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ಪತ್ನಿಗೆ 17 ಬಾರಿ ಇರಿದು, ದೇಹದ ಮೇಲೆ ಗಾಡಿ ಓಡಿಸಿದ್ದ ಕೇರಳದ ವ್ಯಕ್ತಿಗೆ ಅಮೆರಿಕದಲ್ಲಿ ಜೀವಾವಧಿ ಶಿಕ್ಷೆ

    ವಾಷಿಂಗ್ಟನ್: 2020 ರಲ್ಲಿ ತನ್ನ ಪತ್ನಿಯನ್ನು ಬರ್ಬರವಾಗಿ ಕೊಂದಿದ್ದ (Murder) ಭಾರತೀಯ ವ್ಯಕ್ತಿಗೆ (Indian) ಫ್ಲೋರಿಡಾದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು (Life Sentence) ವಿಧಿಸಿದೆ.

    ವರದಿಗಳ ಪ್ರಕಾರ ದೋಷಿ ಫಿಲಿಪ್ ಮ್ಯಾಥ್ಯೂ ತನ್ನ ಪತ್ನಿ ಮೆರಿನ್ ಜಾಯ್‌ಗೆ 2020ರಲ್ಲಿ 17 ಬಾರಿ ಚಾಕುವಿನಿಂದ ಇರಿದು ಮಾತ್ರವಲ್ಲದೇ ಆಕೆಯ ಕಾರನ್ನು ತೆಗೆದುಕೊಂಡು ಆಕೆಯ ದೇಹದ ಮೇಲೆ ಹರಿಸಿ, ಸ್ಥಳದಿಂದ ಪರಿಯಾಗಿದ್ದ.

    ದಂಪತಿ ಮೂಲತಃ ಕೇರಳದವರು. ಕೇರಳದ (Kerala) ಕೊಟ್ಟಾಯಂ ಮೂಲದ ಮೆರಿನ್ ಜಾಯ್ ಅಮೆರಿಕದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಹೊರಗಡೆ ಆಕೆಯ ಪತಿ ಮ್ಯಾಥ್ಯೂ ಬರ್ಬರವಾಗಿ ಹತ್ಯೆ ಮಾಡಿದ್ದ. ಘಟನೆ ಬಳಿಕ ಜಾಯ್‌ನ ಸಹೋದ್ಯೋಗಿಯೊಬ್ಬರು ವ್ಯಕ್ತಿಯೊಬ್ಬ ಆಕೆಯ ದೇಹದ ಮೇಲೆ ಕಾರನ್ನು ಓಡಿಸಿದ್ದನ್ನು ನೋಡಿದ್ದಾಗಿ ತಿಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಪದೇ ಪದೇ ಅಳಲು ಮಾತ್ರವೇ ಸಾಧ್ಯವಾಗುತ್ತಿತ್ತು. ಈ ವೇಳೆ ಆಕೆ ತನಗೆ ಒಂದು ಮಗುವಿದೆ ಎಂದು ಹೇಳಿದ್ದಾಗಿ ತಿಳಿಸಿದ್ದರು. ಇದನ್ನೂ ಓದಿ: ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಸಮ ಬೆಸ ಯೋಜನೆ ಜಾರಿ

    ಜಾಯ್ ಸಾವನ್ನಪ್ಪುವುದಕ್ಕೂ ಮುನ್ನ ಪತಿಯ ಬಗ್ಗೆ ಹೇಳಿದ್ದಳು. ಇದರಿಂದ ಆರೋಪಿಯನ್ನು ಬಂಧಿಸಲು ಸಹಾಯವಾಗಿತ್ತು. ನವೆಂಬರ್ 3 ರಂದು ಫ್ಲೋರಿಡಾದ ನ್ಯಾಯಾಲಯ ಆತನಿಗೆ ಅಂತಿಮವಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ.

    ಮೆರಿನ್ ಜಾಯ್ ಫಿಲಿಪ್ ಮ್ಯಾಥ್ಯೂ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಳು. ಈ ಹಿನ್ನೆಲೆ ಪತಿಯೇ ಆಕೆಯನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೇರಳ ಬ್ಲಾಸ್ಟ್- ತೀವ್ರವಾಗಿ ಗಾಯಗೊಂಡಿದ್ದ 61 ವರ್ಷದ ಮಹಿಳೆ ಸಾವು

  • ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಶಿವಮೊಗ್ಗ: ಸ್ನೇಹಿತನ ಮೇಲಿನ ದ್ವೇಷಕ್ಕೆ ಆತನ ಮಗನನ್ನು ಅಪಹರಿಸಿ, ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗ (Shivamogga) ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ಮತ್ತು 3.25 ಲಕ್ಷ ರೂ. ದಂಡ (Penalty) ವಿಧಿಸಿದೆ.

    ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಚುರ್ಚಿಗುಂಡಿ ಗ್ರಾಮದ ಎನ್‌ಎಂ ಬಸವರಾಜಪ್ಪ (40) ಶಿಕ್ಷೆಗೆ ಒಳಗಾದ ಅಪರಾಧಿ. ಶಿವಮೊಗ್ಗದ ಆಲ್ಕೊಳ ನಿವಾಸಿ ನಿಂಗರಾಜು ಮತ್ತು ಬಸವರಾಜಪ್ಪ ಮೊದಲಿನಿಂದ ಪರಿಚಿತರು. ನಿಂಗರಾಜು ಮೇಲಿನ ಹಳೇ ದ್ವೇಷಕ್ಕೆ (Feud) ಆತನ ಮಗ ಪ್ರೇಮ್ ಕುಮಾರ್‌ನನ್ನು (8) ಬಸವರಾಜಪ್ಪ ಅಪಹರಣ (Kidnap) ಮಾಡಿದ್ದ. 2017ರ ಮಾರ್ಚ್ 2 ರಂದು ಆಳ್ಕೊಳ ಸರ್ಕಲ್‌ನಿಂದ ಅಪಹರಣ ಮಾಡಿ, ಚುರ್ಚಿಗುಂಡಿ ಹತ್ತಿರ ಕುಮದ್ವತಿ ನದಿ ಬಳಿ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ

    ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು. ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಕೆಟಿ ಗುರುರಾಜ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಲ್ಲದೇ ಆತನ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ವಿಪಕ್ಷಗಳ ಮೈತ್ರಿಯಲ್ಲಿರುವ INDIA ಹೆಸರನ್ನು ನಿರ್ಬಂಧಿಸಿ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

    ಸರ್ಕಾರದ ಪರವಾಗಿ ವಕೀಲೆ ಪುಷ್ಪಾ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶೆ ಬಿಆರ್ ಪಲ್ಲವಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಭಾಷಣದಲ್ಲಿ ಮತದಾರರಿಗೆ ಆಮಿಷ – ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ಜನ ದಲಿತರ ಹತ್ಯೆಗೈದಿದ್ದ ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್

    10 ಜನ ದಲಿತರ ಹತ್ಯೆಗೈದಿದ್ದ ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್

    ಲಕ್ನೋ: ಹತ್ತು ಜನ ದಲಿತರನ್ನು (Dalits) ಹತ್ಯೆ ಮಾಡಿದ್ದ ಉತ್ತರಪ್ರದೇಶದ (Uttar Pradesh) ವ್ಯಕ್ತಿಯೊಬ್ಬನಿಗೆ 90ನೇ ವಯಸ್ಸಿನಲ್ಲಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.

    ಅಪರಾಧಿ ಗಂಗಾ ದಯಾಳ್‍ಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿರುವ ಫಿರೋಜಾಬಾದ್ ಜಿಲ್ಲಾ ಕೋರ್ಟ್ (Firozabad Court), ಜೊತೆಗೆ 55,000 ರೂ. ದಂಡವನ್ನು ಸಹ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ 13 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಗುರುತಿನ ಪುರಾವೆಗಳಿಲ್ಲದೇ 2,000 ರೂ. ನೋಟುಗಳ ವಿನಿಮಯ – ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

    42 ವರ್ಷಗಳ ಹಿಂದೆ ನಡೆದಿದ್ದ ಈ ಹತ್ಯೆ ಪ್ರಕರಣ ದೇಶಾದ್ಯಂತ ಆಘಾತವನ್ನುಂಟು ಮಾಡಿತ್ತು. 1981ರಲ್ಲಿ ಸದುಪುರ (Sadupur) ಗ್ರಾಮದಲ್ಲಿ ಹಿಂಸಾಚಾರ ನಡೆದು 10 ಮಂದಿಯನ್ನು ನಿರ್ದಯವಾಗಿ ಕೊಲ್ಲಲಾಗಿತ್ತು. ಅಲ್ಲದೆ ಹಿಂಸಾಚಾರದಲ್ಲಿ ಇಬ್ಬರು ಗಾಯಗೊಂಡಿದ್ದರು. ತನಿಖೆಯಲ್ಲಿ 10 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ಮತ್ತು 307 ಅಡಿಯಲ್ಲಿ ಕೊಲೆ ಹಾಗೂ ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗಿತ್ತು.

    ಗುರುತಿಸಲಾಗಿದ್ದ 10 ಆರೋಪಿಗಳಲ್ಲಿ 9 ಜನ ಆರೋಪಿಗಳು ವಿಚಾರಣೆ ಎದುರಿಸುತ್ತಿರುವಾಗಲೇ ಸಾವನ್ನಪ್ಪಿದ್ದರು. ಉಳಿದ ಏಕೈಕ ಅಪರಾಧಿ ಗಂಗಾ ದಯಾಳ್ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್‍ಗಿರಿ – ಅನ್ಯಕೋಮಿನ ಯುವತಿ ಜೊತೆ ಬಂದಿದ್ದಕ್ಕೆ ಯುವಕರ ಮೇಲೆ ಹಲ್ಲೆ

  • ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು ಹತ್ಯೆ- ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

    ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು ಹತ್ಯೆ- ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್

    ನವದೆಹಲಿ: 30 ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು (Rape) ನಂತರ ಹತ್ಯೆಗೈದ ಅಪರಾಧಿಗೆ ದೆಹಲಿ (Delhi) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

    ರವೀಂದರ್ ಕುಮಾರ್ ಎಂಬಾತ ಆರು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಲೆಗೈದ ಬಳಿಕ ಮೇ 6ರಂದು ರೋಹಿಣಿ ನ್ಯಾಯಾಲಯವು ಆತ ಅಪರಾಧಿ ಎಂಬ ತೀರ್ಪನ್ನು ನೀಡಿತ್ತು. ಈ ಕುರಿತು ಕಳೆದ ವಾರ ತೀರ್ಪು ನಡೆಯಬೇಕಿತ್ತು. ಆದರೆ ಕುಮಾರ್ ಆದಾಯ ಮತ್ತು ಆಸ್ತಿಯ ಬಗ್ಗೆ ವಿವರ ತಿಳಿಯದ ಕಾರಣ ತೀರ್ಪನ್ನು ಮುಂದೂಡಲಾಯಿತು. ಇದನ್ನೂ ಓದಿ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕೊಲೆಗೈದು ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟ!

    ಮೂಲತಃ ಉತ್ತರಪ್ರದೇಶದ ಕಾಸ್‌ಗಂಜ್‌ನ ನಿವಾಸಿಯಾದ ರವೀಂದರ್ ಕುಮಾರ್ 2008ರಲ್ಲಿ ದೆಹಲಿಗೆ ಬಂದಿದ್ದ. ಆಗ ಆತನ ವಯಸ್ಸು 18 ಆಗಿತ್ತು. ತೀವ್ರ ಮದ್ಯವ್ಯಸನಿ ಮತ್ತು ಡ್ರಗ್ಸ್ (Drugs) ಚಟ ಹೊಂದಿದ್ದ ಈತ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ದಿನವಿಡೀ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 7ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಅಪ್ರಾಪ್ತರು ಅರೆಸ್ಟ್

    ಈತ ಡ್ರಗ್ಸ್ ಸೇವಿಸಿದ ಬಳಿಕ ಮಕ್ಕಳನ್ನು ಹುಡುಕಿಕೊಂಡು ಸುಮಾರು 40 ಕಿಲೋ ಮೀಟರ್‌ವರೆಗೂ ನಡೆದುಕೊಂಡೇ ಹೋಗುತ್ತಿದ್ದ. ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ಕೊಳಗೇರಿಗಳೇ ಈತನ ಟಾರ್ಗೆಟ್. ಅಲ್ಲಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದು, ಮಕ್ಕಳಿಗೆ 10 ರೂ. ಅಥವಾ ಸಿಹಿ ತಿನಿಸುಗಳ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ. ಬಳಿಕ ಮಗುವಿನ ಮೇಲೆ ಅತ್ಯಾಚಾರಗೈದು ಕೊಲೆಮಾಡುತ್ತಿದ್ದ. ಇದನ್ನೂ ಓದಿ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!

    ಹೀಗೇ 2008ರಿಂದ 2015ರ ಒಳಗಾಗಿ ಒಟ್ಟು 30 ಮಕ್ಕಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಈ ಕುರಿತು ಬೇಗಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು 2015ರಲ್ಲಿ ಈತನನ್ನು ದೆಹಲಿಯಲ್ಲಿ ಬಂಧಿಸಲಾಯಿತು. ಶಿಕ್ಷೆಯ ಕುರಿತು ವಾದ ಮಂಡಿಸುವ ಸಂದರ್ಭದಲ್ಲಿ ದೆಹಲಿ ಪೊಲೀಸರು ಈತನಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು ಎಂದು ಕೋರಿದ್ದರು. ಹೀಗಾಗಿ ಈತನಿಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ನೀಡಿದೆ. ಇದನ್ನೂ ಓದಿ: ಐಸಿಸ್ ಸೇರಲು ಕೇರಳ ತೊರೆದಿದ್ದ ವ್ಯಕ್ತಿ ಪಾಕ್ ಜೈಲಿನಲ್ಲಿ ಸಾವು

  • ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

    ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

    ತಿರುವನಂತಪುರಂ: ತನ್ನ ಅಪ್ರಾಪ್ತ ಮಗಳ (Minor Daughter) ಮೇಲೆ ಪದೇ ಪದೇ ಅತ್ಯಾಚಾರವೆಸಗಿ (Rape), ಆಕೆಯನ್ನು ಗರ್ಭಿಣಿ (Pregnant) ಮಾಡಿದ್ದ ವ್ಯಕ್ತಿಗೆ ಕೇರಳ ನ್ಯಾಯಾಲಯ (Kerala Court) 3 ಜೀವಾವಧಿ ಶಿಕ್ಷೆ ವಿಧಿಸಿದೆ.

    ಮಂಜೇರಿ ಫಾಸ್ಟ್ ಟ್ರ‍್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಕೆ ವ್ಯಕ್ತಿಯನ್ನು ದೋಷಿಯೆಂದು ಪ್ರಕಟಿಸಿದ್ದಾರೆ. ಐಪಿಸಿ ಸೆಕ್ಷನ್ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಈ ಎಲ್ಲಾ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ 3 ಜೀವಾವಾಧಿ ಶಿಕ್ಷೆಯ ಜೊತೆಗೆ 6.6 ಲಕ್ಷ ರೂ. ದಂಡವನ್ನು ವಿಧಿಸಿದೆ.

    ಪ್ರಕರಣದ ಬಗ್ಗೆ ವಿವರಣೆ ನೀಡಿದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಎ ಸೋಮಸುಂದರನ್, ಅಪರಾಧಿ ಮದರಸಾದಲ್ಲಿ ಶಿಕ್ಷಕನಾಗಿದ್ದು, ಮೊದಲ ಬಾರಿಗೆ 2021ರ ಮಾರ್ಚ್‌ನಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ 15 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ. ಆ ಸಂದರ್ಭ ಕೋವಿಡ್-19 ಇದ್ದಿದ್ದರಿಂದ ಬಾಲಕಿ ಆನ್‌ಲೈನ್ ತರಗತಿಯಲ್ಲಿ ಓದುತ್ತಿದ್ದಳು. ಈ ಸಂದರ್ಭ ಆತ ಮಗಳನ್ನು ತನ್ನ ಮಲಗುವ ಕೋಣೆಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದ ಎಂದು ವಾದಿಸಿದ್ದರು. ಇದನ್ನೂ ಓದಿ: ಸದಾ ಟಚ್‍ನಲ್ಲಿರುವಂತೆ 15ರ ಬಾಲಕನಿಗೆ 20 ಸಾವಿರ ರೂ. ಮೌಲ್ಯದ ಮೊಬೈಲ್ ಕೊಡಿಸಿದ್ಳು!

    ತಂದೆಯ ಕೃತ್ಯವನ್ನು ಸಂತ್ರಸ್ತೆ ವಿರೋಧಿಸಿದಾಗ ಆಕೆಯ ತಾಯಿಯನ್ನು ಕೊಲ್ಲುವುದಾಗಿ ಆತ ಬೆದರಿಕೆ ಹಾಕಿದ್ದ. ಆತ 2021ರ ಅಕ್ಟೋಬರ್‌ವರೆಗೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ತನ್ನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ.

    2021ರಲ್ಲಿ ಆನ್‌ಲೈನ್ ತರಗತಿಗಳು ಮುಕ್ತಾಯವಾಗಿ ಶಾಲೆಗಳು ಪುನರಾರಂಭವಾದಾಗ ಬಾಲಕಿ ಶಾಲೆಗೆ ಹೋಗಲು ಪ್ರಾರಂಭಿಸಿದ್ದಾಳೆ. ಈ ವೇಳೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆ ಸಂದರ್ಭ ಏನೂ ಪತ್ತೆಯಾಗಿರಲಿಲ್ಲ. 2022ರ ಜನವರಿಯಲ್ಲಿ ಆಕೆಗೆ ಮತ್ತೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವೈದ್ಯರಲ್ಲಿಗೆ ಕರೆದುಕೊಂಡು ಹೋದಾಗ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತ ಬಾಲಕಿಯ ತಂದೆಯನ್ನು ಬಂಧಿಸಿದ್ದರು. ಬಳಿಕ ಸಂತ್ರಸ್ತೆಯ ಗರ್ಭಪಾತ ಮಾಡಿಸಲಾಗಿದ್ದು, ಭ್ರೂಣದ ಡಿಎನ್‌ಎ ಸಂಗ್ರಹಿಸಿ ಆಕೆಯ ತಂದೆಯ ಡಿಎನ್‌ಎಯೊಂದಿಗೆ ವಿಶ್ಲೇಷಣೆ ಮಾಡಲಾಗಿತ್ತು. ಇದರಿಂದ ಬಾಲಕಿಯ ತಂದೆಯೇ ಅಪರಾಧಿ ಎಂಬುದು ಸಾಬೀತಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

    ಕೊಪ್ಪಳ: ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಾಯಿಸಿದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಒಂದನೇ ಹೆಚ್ಚುವರಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಎಂ.ಜಿ.ಶಿವಳ್ಳಿಯವರು ಕಲಂ 448 ಅನ್ವಯ ಒಂದು ವರ್ಷ ಜೈಲು ಶಿಕ್ಷೆ ಒಂದು ಸಾವಿರ ರೂ. ದಂಡ ಹಾಗೂ 302 ಕಲಂ ಅನ್ವಯ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

    ನಡೆದಿದ್ದೇನು?
    ಗಂಗಾವತಿ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ 2015ರ ಜುಲೈ 27 ರಂದು ವಿಧವೆಯೊರ್ವಳು ತನ್ನ ಚಿಕ್ಕ ಮಗನ ಜೊತೆ ವಾಸವಿದ್ದಳು. ಆ ಸಮಯದಲ್ಲಿ ಸಂಗಾಪೂರ ಗ್ರಾಮದ ಬಾಲಪ್ಪ ತಂದೆ ಗೋವಿಂದಪ್ಪ ವಿಧವೆಯ ಮನೆಗೆ ತೆರಳಿ ಲೈಂಗಿಕ ಕ್ರಿಯೆಗೆ ಕರೆದಿದ್ದಾನೆ. ಆಗ ಆಕೆ ನಿರಾಕರಿಸಿ ಕೂಗಾಡಿದ್ದರಿಂದ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದ್ದಾನೆ. ಇದನ್ನೂ ಓದಿ: ನಿದ್ದೆಯಿಂದ ಎಬ್ಬಿಸಿದಕ್ಕೆ ಪೊಲೀಸರನ್ನ ಅಸಭ್ಯವಾಗಿ ನಿಂದಿಸಿದ ವ್ಯಕ್ತಿಗೆ 1 ವರ್ಷ 7  ತಿಂಗಳು ಜೈಲು 

    ಇದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದು, ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, 2015 ಆ 01 ರಂದು ಮಹಿಳೆ ಮೃತಪಟ್ಟಿದ್ದಳು.

    ಗ್ರಾಮೀಣ ಪೊಲೀಸ್ ಠಾಣೆಯ ಅಂದಿನ ಸಿಪಿಐ ಆಗಿದ್ದ ಪ್ರಭಾಕರ್ ಧರ್ಮಟ್ಟಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಧಾರರ ಸಾಕ್ಷ್ಯ ಮತ್ತು ದಾಖಲೆಗಳನ್ನು ಪರಿಶೀಲಿಸಿ ಒಂದನೇಯ ಹೆಚ್ಚುವರಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಎಂ.ಜಿ.ಶಿವಳ್ಳಿ ಅವರು ಕಲಂ 448 ಅನ್ವಯ ಒಂದು ವರ್ಷ ಜೈಲು ಶಿಕ್ಷೆ, ಒಂದು ಸಾವಿರ ರೂ. ದಂಡ ಹಾಗೂ 302 ಕಲಂ ಅನ್ವಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

    ಜೊತೆಗೆ ಮಹಿಳೆಯ ಸಾವಿಗೆ ಪರಿಹಾರಕ್ಕಾಗಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಂತೆ ಮೃತಳ ಪುತ್ರನಿಗೆ ಸೂಚನೆ ನೀಡಿದ್ದಾರೆ. ಅಭಿಯೋಜನಾ ಪರವಾಗಿ ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ.ಎಸ್ ವಾದ ಮಂಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಗಳನ್ನು ಸಾಕಿ, ವಿದ್ಯಾಭ್ಯಾಸ ಮಾಡಿಸಲು ಸಾಧ್ಯವಿಲ್ಲವೆಂದು ಬರ್ಬರವಾಗಿ ಹತ್ಯೆ – ತಂದೆಗೆ ಜೀವಾವಧಿ ಶಿಕ್ಷೆ

    ಮಗಳನ್ನು ಸಾಕಿ, ವಿದ್ಯಾಭ್ಯಾಸ ಮಾಡಿಸಲು ಸಾಧ್ಯವಿಲ್ಲವೆಂದು ಬರ್ಬರವಾಗಿ ಹತ್ಯೆ – ತಂದೆಗೆ ಜೀವಾವಧಿ ಶಿಕ್ಷೆ

    ಚಿಕ್ಕೋಡಿ: ಹೆತ್ತ ಮಗಳನ್ನು ಸಾಕಲು ಆಗುದಿಲ್ಲ ಮತ್ತು ಅವಳ ವಿದ್ಯಾಭ್ಯಾಸ ಮಾಡಿಸಲು ಸಾಧ್ಯವಾಗುದಿಲ್ಲ ಎಂದುಕೊಂಡು ಬರ್ಬರವಾಗಿ ಹತ್ಯೆ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆ ಹದ್ದಿಯ ಮಂಗಸೂಳಿ ಮಲ್ಲಾರವಾಡಿ ಬಸವರಾಜ ಈರಪ್ಪ ಮಗದುಮ್ಮ(35) ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ. ಬಸವರಾಜ ಮಗದುಮ್ಮ ತನ್ನ ಮಗಳಾದ ಸಂಗೀತಾ ಬಸವರಾಜ ಮಗದುಮ್ಮ(7)ಳನ್ನು 2016ರ ಸೆಪ್ಟೆಂಬರ್ 6 ರಂದು ಅಪ್ಪಾಸಾಹೇಬ್ ಶಿಂಧೆ ಅವರ ಪತ್ರಾಸ ಶೆಡ್‍ನಲ್ಲಿ(ಛಾವಣಿ ಮನೆ) ಯಾರು ಇಲ್ಲದ ಸಮಯ ನೋಡಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದ. ಇದನ್ನೂ ಓದಿ: ಬಂಡಿ ಎಳೆಯುವವನಿಗೆ ಹೊಸ ಚಪ್ಪಲಿ ಗಿಫ್ಟ್ ಕೊಟ್ಟ ಪೊಲೀಸ್ – ವೀಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್ 

    CRIME 2

    ಈ ಕುರಿತು ಅಥಣಿ ಸಿಪಿಐ ಎಸ್.ಎಚ್.ಶೇಖರಪ್ಪ ದೋಷಾರೋಪನ ಪತ್ರ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಆರೋಪಿ ಬಸವರಾಜ ಮಗದುಮ್ಮಗೆ ಜೀವಾವಧಿ ಶಿಕ್ಷೆ ನೀಡಿ ಎಂದು ತೀರ್ಪು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‌ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ

    ಉಕ್ರೇನ್‌ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ

    ಕೀವ್: ಉಕ್ರೇನ್‌ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಉಕ್ರೇನ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಫೆ.24ರಿಂದ ರಷ್ಯಾದ ಆಕ್ರಮಣದಿಂದ ಉಂಟಾದ ಮೊದಲ ಯುದ್ಧಾಪರಾಧಗಳ ವಿಚಾರಣೆಯಲ್ಲಿ ನಿರಾಯುಧ ನಾಗರಿಕನನ್ನು ಕೊಂದ ರಷ್ಯಾದ ಸೈನಿಕನಿಗೆ ಉಕ್ರೇನಿಯನ್ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿತು. ಇದನ್ನೂ ಓದಿ: ಸ್ಫೋಟಕ ಆಡಿಯೋ ಲೀಕ್ – ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಯೋಜನೆ

    21 ವರ್ಷ ವಯಸ್ಸಿನ ಕಮಾಂಡರ್ ವಾಡಿಮ್ ಶಿಶಿಮರಿನ್, ಫೆ.28 ರಂದು ಈಶಾನ್ಯ ಉಕ್ರೇನಿಯನ್ ಗ್ರಾಮ ಚುಪಾಖಿವ್ಕಾದಲ್ಲಿ 62 ವರ್ಷದ ವ್ಯಕ್ತಿಗೆ ಗುಂಡು ಹಾರಿಸಿ ಕೊಂದ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    Ukraine Russia
    ಸಾಂದರ್ಭಿಕ ಚಿತ್ರ

    ಫೆ.24ರಂದು ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಿಸಿತು. ರಷ್ಯಾದ ಆಕ್ರಮಣ ಮುಂದುವರಿದಿದ್ದು, ಈಗಾಗಲೇ ಉಕ್ರೇನ್‌ನ ಮರಿಯುಪೋಲ್‌ನ್ನು ಸಂಪೂರ್ಣ ವಶಕ್ಕೆ ಪಡೆದಿದೆ. ಈ ಭಾಗದಲ್ಲಿ ಉಕ್ರೇನ್‌ ಸೈನಿಕರು ರಷ್ಯಾ ಸೈನಿಕರಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

  • ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

    ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

    ದಾವಣಗೆರೆ: ಆಸ್ತಿಯ ಸಲುವಾಗಿ ಜಗಳವಾಡಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಕೊನೆಗೆ ಅಳಿಯ ಅತ್ತೆಯನ್ನು ಕೊಲೆ ಮಾಡಿದ್ದ. ಈಗ ಅವನಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿದೆ.

    ದಾವಣಗೆರೆ ನಗರದ ಹೊಂಡದ ಸರ್ಕಲ್‍ನ ಅಭಿರಾಜ್ ಶಿಕ್ಷೆಗೆ ಒಳಗಾದ ಯುವಕ. ಅತ್ತೆ ಭಾಗ್ಯಮ್ಮ ಕೊಲೆಯಾಗಿದ್ದ ಮಹಿಳೆ. 2019 ರ ಜುಲೈ 18 ರಂದು ಭಾಗ್ಯಮ್ಮಳನ್ನು ಆಸ್ತಿ ಆಸೆಗೆ ಅಭಿರಾಜ್ ಕೊಲೆ ಮಾಡಿದ್ದನು. ಈ ಪ್ರಕರಣ ಇನ್ನೂ ನ್ಯಾಯಾಲಯದ ಮುಂದೆ ಇತ್ತು. ಅಭಿರಾಜ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಕೊಟ್ಟಿದ್ದು, ಈ ಕೇಸ್‍ಗೆ ಮುಕ್ತಿ ಸಿಕ್ಕಿದೆ. ಇದನ್ನೂ ಓದಿ: ಇಂದು ರಾಜ್ಯದ ಮೊದಲ ಕೋಕಾ ಕೇಸ್‍ನ ತೀರ್ಪು ಪ್ರಕಟ- ಪಾತಕಿ ಬನ್ನಂಜೆ ರಾಜಾ ಸೇರಿ 13 ಪಾತಕಿಗಳ ಭವಿಷ್ಯ ನಿರ್ಧಾರ

    ಪ್ರಕರಣದ ಹಿನ್ನೆಲೆ: ಈಗಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದದ ಹನುಮಂತಪ್ಪ ಅವರ ಪುತ್ರಿ ಭಾಗ್ಯಮ್ಮ ಅವರು 14 ವರ್ಷಗಳ ಹಿಂದೆ ದಾವಣಗೆರೆಯ ಶಿವಕುಮಾರ್ ಅವರನ್ನು ಮದುವೆಯಾಗಿದ್ದರು.

    ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಮದ್ಯವ್ಯಸನ ಚಟದಿಂದಾಗಿ ಶಿವಕುಮಾರ್ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದ. ಭಾಗ್ಯಮ್ಮ ಮಗಳನ್ನು ಅಕ್ಕನ ಮನೆಯಲ್ಲಿ ಬಿಟ್ಟು, ಗಂಡನ ಸ್ವಂತ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದಳು. ಶಿವಕುಮಾರ್ ಅಕ್ಕನ ಮಗನಾದ ಅಭಿರಾಜ್, ಭಾಗ್ಯಮ್ಮ ಅವರ ಹಿಂದಿನ ಮನೆಯಲ್ಲೇ ವಾಸವಾಗಿದ್ದ. ಭಾಗ್ಯಮ್ಮ ವಾಸವಿರುವ ಮನೆಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಅವರ ಮನೆಗೆ ಹೋಗಿ ಕಿರುಕುಳ ನೀಡುತ್ತಿದ್ದ.

    ಮಚ್ಚಿನಿಂದ ಕೊಚ್ಚಿದ
    ಭಾಗ್ಯಮ್ಮ ಮನೆಗೆ ಬೇರೆ-ಬೇರೆ ಗಂಡಸರು ಬಂದು ಹೋಗುತ್ತಿದ್ದಾರೆ ಎಂದು ಆಕೆಯ ತಾಯಿ ಹಾಗೂ ಅಣ್ಣನಿಗೆ ಚಾಡಿ ಹೇಳುತ್ತಿದ್ದ. 2019ರ ಜುಲೈ 18 ರಂದು ರಾತ್ರಿ ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಭಾಗ್ಯಮ್ಮ ಪ್ರಶ್ನಿಸಿದ್ದಾರೆ. ಈಕೆಯನ್ನು ಸುಮ್ಮನೆ ಬಿಟ್ಟರೆ ತನಗೆ ಆಸ್ತಿ ಸಿಗುವುದಿಲ್ಲ ಎಂದು ಅಭಿರಾಜ್ ಮಚ್ಚಿನಿಂದ ಭಾಗ್ಯಮ್ಮ ಅವರನ್ನು ಕೊಲೆ ಮಾಡಿದ್ದ. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ಈ ಪರಿಣಾಮ ಅಂದಿನ ಸಿಪಿಐ ಉಮೇಶ್ ಜಿ.ಬಿ.ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಅವರು ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.