Tag: ಜೀವಾ

  • ಝಾನ್ಸಿ ರಾಣಿ ಲುಕ್‍ನಲ್ಲಿ ಧೋನಿ ಮಗಳು ಮಿಂಚಿಂಗ್- ವಿಡಿಯೋ ನೋಡಿ

    ಝಾನ್ಸಿ ರಾಣಿ ಲುಕ್‍ನಲ್ಲಿ ಧೋನಿ ಮಗಳು ಮಿಂಚಿಂಗ್- ವಿಡಿಯೋ ನೋಡಿ

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮಗಳು ಜೀವಾಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿವೆ. ತಂದೆ-ಮಗಳು ಮೋಜು ಮಸ್ತಿಯ ವಿಡಿಯೋಗಳಂತೂ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಒಂದೆಡೆ ತಂದೆ ಯೋಧರಾಗಿ ಮಿಂಚುತ್ತಿದ್ದರೆ, ಮಗಳು ಝಾನ್ಸಿ ರಾಣಿ ವೇಷ ಧರಿಸಿ ಗಮನ ಸೆಳೆದಿದ್ದಾಳೆ.

    ಸಾಮಾಜಿಕ ಜಾಲತಾಣದಲ್ಲಿ ಸದಾ ಜೀವಾ ಸುದ್ದಿಯಲ್ಲಿಯೇ ಇರುತ್ತಾಳೆ. ಆಕೆಯ ಮುಗ್ದತನ, ತುಂಟಾಟದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಜೀವಾ ಝಾನ್ಸಿ ರಾಣಿಯಾಗಿ ಅಭಿಮಾನಿಗಳ ಹೃದಯ ಕದ್ದಿದ್ದಾಳೆ.

    https://twitter.com/DHONIism/status/1161645548564180992

    ಸ್ವಾತಂತ್ರ್ಯ ದಿನದ ಅಂಗವಾಗಿ ಜೀವಾ ತನ್ನ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ನಾಯಕ/ ನಾಯಕಿಯರ ವೇಷ-ಭೂಷಣ ಧರಿಸಿ ಮಕ್ಕಳು ಮಿಂಚುತ್ತಿದ್ದರು. ಈ ಮಧ್ಯೆ ಜೀವಾ ಝಾನ್ಸಿ ರಾಣಿ ಅವತಾರದಲ್ಲಿ ಕಾಣಿಸಿಕೊಂಡಿದ್ದಳು. ಎಲ್ಲಾ ಮಕ್ಕಳು ವೇದಿಕೆ ಮೇಲೆ ಒಂದಾಗಿ ‘ದೇಶ್ ಕಾ ಸಿಪಾಯಿ ಹೂ’ ಹಾಡನ್ನು ಹಾಡಿ, ಜೊತೆಗೆ ಡ್ಯಾನ್ಸ್ ಕೂಡ ಮಾಡಿ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಈ ಕ್ಯೂಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುದ್ದಾದ ಜೀವಾಳ ಹೊಸ ಲುಕ್ ಎಲ್ಲರಿಗೂ ಇಷ್ಟವಾಗಿದೆ.

    ಇತ್ತ ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ಕರ್ನಲ್ ಹುದ್ದೆ ಪಡೆದಿರುವ ಧೋನಿ ಬುಧವಾರವೇ ಲಡಾಖ್‍ಗೆ ತಲುಪಿದ್ದರು. ಈ ವರ್ಷದ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಲಡಾಖ್‍ನಲ್ಲಿ ಸೈನಿಕರೊಂದಿಗೆ ಧೋನಿ ಆಚರಿಸಿದರು. ಸ್ವಾತಂತ್ರ್ಯ ಸಂಭ್ರಮದ ದಿನ ಧೋನಿ ಸೈನಿಕರೊಂದಿಗೆ ಸಮಯ ಕಳೆಯುತ್ತಿದ್ದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಸಂಗೀತ್ ಕಾರ್ಯಕ್ರಮದಲ್ಲಿ ಧೋನಿ ಪುತ್ರಿಯ ಕ್ಯೂಟ್ ಡ್ಯಾನ್ಸ್ : ವಿಡಿಯೋ ವೈರಲ್

    ಸಂಗೀತ್ ಕಾರ್ಯಕ್ರಮದಲ್ಲಿ ಧೋನಿ ಪುತ್ರಿಯ ಕ್ಯೂಟ್ ಡ್ಯಾನ್ಸ್ : ವಿಡಿಯೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಂಗ್ಲೆಂಡ್‍ನಲ್ಲಿ ಪಂದ್ಯ ಮುಗಿಸಿ ಪತ್ನಿ, ಮಗಳ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಧೋನಿ ಪುತ್ರಿ ಜೀವಾ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಮಾಜಿ ಕೇಂದ್ರ ಮಂತ್ರಿ ಹಾಗೂ ಎನ್‍ಸಿಪಿಯ ಕದ್ವಾರ್ ಮಂತ್ರಿ ಪ್ರಫುಲ್ ಪಟೇಲ್ ಮಗಳು ಪೂರ್ಣ ಪಟೇಲ್ ಜೊತೆ ನಮಿತ್ ಸೋನಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಧೋನಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು.

    ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮದ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಧೋನಿ ಪುತ್ರಿ ಜೀವಾ ಡ್ಯಾನ್ಸ್ ವಿಡಿಯೋ ಸಹ ವೈರಲ್ ಅಗಿದೆ. ಇಂಗ್ಲಿಷ್ ಹಾಡಿಗೆ ಜೀವಾ ತನಗೆ ತೋಚಿದಂತೆ ನೃತ್ಯ ಮಾಡುತ್ತಿರುವ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಮದುವೆಯಲ್ಲಿ ಧೋನಿ ಕುಟುಂಬ ಹೊರತುಪಡಿಸಿ ಜಹೀರ್ ಖಾನ್ ಮತ್ತು ಪತ್ನಿ ಸಾಗರಿಕಾ, ಯುವರಾಜ್ ಸಿಂಗ್ ಕೂಡ ಭಾಗಿಯಾಗಿದ್ದರು.

  • ಚೆನ್ನೈ ಟೈಟಲ್ ವಿಕ್ಟರಿ ಬಳಿಕ ಪುತ್ರಿಯ ಆಸೆ ಈಡೇರಿಸಿದ ಧೋನಿ- ವಿಡಿಯೋ ನೋಡಿ

    ಚೆನ್ನೈ ಟೈಟಲ್ ವಿಕ್ಟರಿ ಬಳಿಕ ಪುತ್ರಿಯ ಆಸೆ ಈಡೇರಿಸಿದ ಧೋನಿ- ವಿಡಿಯೋ ನೋಡಿ

    ಮುಂಬೈ: ಐಪಿಎಲ್ ಗೆ ಎರಡು ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಕಪ್ ಗೆಲ್ಲುವ ಮೂಲಕ ತನ್ನ ಅಭಿಮಾನಿಗಳಿಗೆ ಅದ್ಧೂರಿ ಗಿಫ್ಟ್ ನೀಡಿದೆ. ಇದೇ ವೇಳೆ ಧೋನಿ ತಮ್ಮ ಪುತ್ರಿ ಕೇಳಿದ್ದ ಆಸೆಯನ್ನು ಈಡೇರಿಸಿದ್ದಾರೆ.

    ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಧೋನಿ, ಮೊದಲಿಗೆ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ವ್ಯಾಟ್ಸನ್ ಶಾಕಿಂಗ್ ಆಟ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಆದರೆ ಜೀವಾ ಇವುಗಳನ್ನು ಬದಿಗೊತ್ತಿ ತನ್ನ ಪಾಡಿಗೆ ತಾನು ಮೈದಾನದಲ್ಲಿ ಆಟವಾಡಲು ಬಯಸಿದ್ದಳು. ಪಂದ್ಯ ಮುಗಿದ ನಂತರ ಆಕೆ ಮೈದಾನದಲ್ಲಿ ಆಡಿ ತನ್ನ ಆಸೆ ಪೂರ್ಣಗೊಳಿಸಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

    https://instagram.com/p/BjSyjBfnmma/?utm_source=ig_embed

    ಸಿಎಸ್‍ಕೆ ಆಟಗಾರರು ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದಾರೆ. ಜೀವಾ ಕ್ರೀಡಾಂಗಣದ ಹುಲ್ಲು ಹಾಸಿನ ಮೇಲೆ ಇತರರೊಂದಿಗೆ ಆಟವಾಡುತ್ತ ಕಾಲ ಕಳೆದಿದ್ದಳು. ಸದ್ಯ ಧೋನಿ ಪುತ್ರಿಯ ತುಂಟಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.

    ಪಂದ್ಯದ ಬಳಿಕ ಮಾತನಾಡಿ ತಂಡದ ಧೋನಿ, ಪ್ರತಿ ಆಟಗಾರರ ಶ್ರಮ ಕಪ್ ಗೆಲುವಿನ ಹಿಂದಿನ ಗುಟ್ಟು ಎಂದು ತಿಳಿಸಿದರು. ಹಲವರು ಇಂದು ದಿನಾಂಕ 27, ತನ್ನ ಜರ್ಸಿ ನಂ.7, ಚೆನ್ನೈ ತಂಡ 7ನೇ ಬಾರಿಗೆ ಪ್ರವೇಶ ಎಂದು ಎಲ್ಲವುಗಳ ಕುರಿತು ಮಾತನಾಡುತ್ತಾರೆ. ಆದರೆ ಇವು ಯಾವುದು ಕಾರಣವಲ್ಲ, ನಾವು ಕಪ್ ಗೆದ್ದಿದ್ದೇವೆ ಎಂಬುವುದು ಅಂತ್ಯ ಎಂದು ಹೇಳಿದರು.

    ವಾಟ್ಸನ್ ದಾಖಲೆ: ಈ ಪಂದ್ಯದಲ್ಲಿ ಬೀರುಸಿನ ಆಟ ಪ್ರದರ್ಶಿಸಿ ತಂಡದ ಗೆಲುವುವಿಗೆ ಕಾರಣರಾದ ವ್ಯಾಟ್ಸನ್ ಅಜೇಯ 117 ರನ್ (57 ಎಸೆತ, 11 ಬೌಂಡರಿ, 8 ಸಿಕ್ಸರ್) ಸಿಡಿಸಿ ಸಂಭ್ರಮಿಸಿದರು. ಪಂದ್ಯದ ಆರಂಭದಲ್ಲಿ ಮೊದಲ 1 ರನ್ ಗಳಿಸಲು 10 ಎಸೆತ ಎದುರಿಸಿದ 36 ವರ್ಷದ ವಾಟ್ಸನ್ ಬಳಿಕ 51 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್ ಫೈನಲ್ ನಲ್ಲಿ ಶತಕ ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

    https://www.instagram.com/p/BjTmn8cjSyj/?utm_source=ig_embed

    https://twitter.com/VIDtweetshere/status/1000805748467646464?

    https://twitter.com/welldone1venkat/status/1000832358772236288?

    https://twitter.com/azazdr/status/1000815973144788992?