Tag: ಜೀವಮಾನ ಸಾಧನೆ ಪ್ರಶಸ್ತಿ

  • ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ – ಪಬ್ಲಿಕ್‌ ಟಿವಿಗೆ 5 ಪ್ರಶಸ್ತಿಗಳ ಗರಿ

    ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ – ಪಬ್ಲಿಕ್‌ ಟಿವಿಗೆ 5 ಪ್ರಶಸ್ತಿಗಳ ಗರಿ

    ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy) ಪ್ರಶಸ್ತಿ ಪ್ರಕಟವಾಗಿದೆ. ಪಬ್ಲಿಕ್‌ ಟಿವಿಯ ಐವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಪಬ್ಲಿಕ್‌ ಟಿವಿ ಸಂಪಾದಕರಾದ ಸಿ.ದಿವಾಕರ್‌, ಕಾರ್ಯನಿರ್ವಾಹಕ ಸಂಪಾದಕರಾದ ವಿ.ಆನಂದ್‌, ಮೈಸೂರು ಜಿಲ್ಲಾ ವರದಿಗಾರ ಕೆ.ಪಿ.ನಾಗರಾಜ್‌, ಬೆಳಗಾವಿ ಜಿಲ್ಲಾ ವರದಿಗಾರ ದಿಲೀಪ್‌ ಕುರಂದವಾಡೆ ಅವರು ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಆದಿಯೋಗಿ ಪ್ರತಿಮೆ ವಿವಾದ – ಪಿಐಎಲ್‌ ವಜಾ, ಇಶಾ ಫೌಂಡೇಷನ್‌ಗೆ ಬಿಗ್‌ ರಿಲೀಫ್‌

    ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ʼಅರಗಿಣಿ ಪ್ರಶಸ್ತಿʼಗೆ ಪಬ್ಲಿಕ್‌ ಟಿವಿಯ ಡಿಜಿಟಲ್‌ ಸಿನಿಮಾ ವಿಭಾಗದ ಶರಣು ಹುಲ್ಲೂರು ಅವರು ಭಾಜನರಾಗಿದ್ದಾರೆ.

    ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಬೊಮ್ಮಾಯಿ

    ನಾಲ್ಕು ವರ್ಷಗಳ ಸಾಲಿನ (2019, 2020, 2021, 2022ನೇ ಸಾಲು) ನಾಡಿನ ವಿವಿಧ ಪತ್ರಕರ್ತರನ್ನು ʼಮಾಧ್ಯಮ ವಾರ್ಷಿಕ ಪ್ರಶಸ್ತಿʼ ಮತ್ತು ʼದತ್ತಿ ಪ್ರಶಸ್ತಿʼಗೆ ಆಯ್ಕೆ ಮಾಡಲಾಗಿದೆ.

    ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ 50,000 ರೂ. ನಗದು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25,000 ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ನಾಲ್ಕು ವರ್ಷಗಳು ಸೇರಿ 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಒಟ್ಟು 21 ಮಂದಿ ಪತ್ರಕರ್ತರು ʼದತ್ತಿ ಪ್ರಶಸ್ತಿʼಗೆ ಆಯ್ಕೆಯಾಗಿದ್ದಾರೆ.

    ನಾಲ್ಕು ವರ್ಷಗಳ ದತ್ತಿ ಪ್ರಶಸ್ತಿಗಳು: ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ʼಆಂದೋಲನ ಪ್ರಶಸ್ತಿʼ, ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ ʼಅಭಿಮಾನಿʼ ಮತ್ತು ʼಅರಗಿಣಿʼ ಪ್ರಶಸ್ತಿಗಳು, ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ ʼಮೈಸೂರು ದಿಗಂತʼ ಪ್ರಶಸ್ತಿ ಹಾಗೂ ಪತ್ರಕರ್ತ ಕೆ.ಶಿವಕುಮಾರ್‌ ಸ್ಥಾಪಿಸಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ʼಮೂಕನಾಯಕ ಪ್ರಶಸ್ತಿʼಗೂ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಮೊತ್ತ ತಲಾ 10,000 ರೂ. ನಗದು ಬಹುಮಾನ ಒಳಗೊಂಡಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರು ಪ್ರಶಸ್ತಿ ಪುರಸ್ಕೃತರಿಗೆ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರಣ್ ನಾಯರ್, ಪ್ರಶಾಂತ್ ಕುಮಾರ್ ರೈ, ಅಶ್ವಲ್ ರೈ ಸೇರಿ 15 ಮಂದಿಗೆ ಏಕಲವ್ಯ ಪ್ರಶಸ್ತಿ

    ಕರಣ್ ನಾಯರ್, ಪ್ರಶಾಂತ್ ಕುಮಾರ್ ರೈ, ಅಶ್ವಲ್ ರೈ ಸೇರಿ 15 ಮಂದಿಗೆ ಏಕಲವ್ಯ ಪ್ರಶಸ್ತಿ

    ಬೆಂಗಳೂರು: ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ  ಘೋಷಿಸಿದ್ದಾರೆ.

    ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ನಾರಾಯಣಗೌಡ, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡಲ್ಪಡುವ ಕ್ರೀಡಾ ಪಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಇದನ್ನೂ ಓದಿ: ಆರ್‌ಸಿಬಿ ತಂಡದಿಂದ ಹೊರ ನಡೆದ ಕನ್ನಡಿಗ ಲುವ್ನಿತ್ ಸಿಸೋಡಿಯಾ

    ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. 2020-21 ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ದಿನಾಂಕವನ್ನು ನಿಗದಿ ಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು. ಇದನ್ನೂ ಓದಿ: ವಿಶ್ವಕಪ್‍ನಲ್ಲಿ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್, ಅಲಿಸ್ಸಾ ಹೀಲಿ ದಂಪತಿ

    ಏಕಲವ್ಯ ಪ್ರಶಸ್ತಿ ಪುರಸ್ಕೃತರು
    ಜೀವನ್ ಕೆ.ಎಸ್ (ಅಥ್ಲೆಟಿಕ್ಸ್), ನಿತಿನ್(ನೆಟ್‌ಬಾಲ್), ಅಶ್ವಿನಿ ಭಟ್ (ಬ್ಯಾಡ್ಮಿಂಟನ್), ಜಿ. ತರಣ್ ಕಷ್ಣಪ್ರಸಾದ್ (ರೋಯಿಂಗ್), ಲೋಪಮುದ್ರಾತಿಮ್ಮಯ್ಯ (ಬಾಸ್ಕೆಟ್‍ಬಾಲ್), ಲಿಖಿತ್ ಎಸ್.ಪಿ (ಈಜು), ಕರಣ್ ನಾಯರ್ (ಕ್ರಿಕೆಟ್), ಅನಘ್ರ್ಯಮಂಜುನಾಥ್ (ಟೇಬಲ್ ಟೆನ್ನಿಸ್), ದಾನಮ್ಮಚಿಚಖಂಡಿ (ಸೈಕ್ಲಿಂಗ್), ಅಶ್ವಲ್ ರೈ (ವಾಲಿಬಾಲ್), ವಸುಂಧರಾಎಂ.ಎನ್. (ಜುಡೋ), ಪ್ರಧಾನ್ ಸೋಮಣ್ಣ (ಹಾಕಿ), ಪ್ರಶಾಂತ್ ಕುಮಾರ್ ರೈ (ಕಬಡ್ಡಿ), ರಾಧಾ .ವಿ (ಪ್ಯಾರಾ ಅಥ್ಲೆಟಿಕ್ಸ್), ಮುನೀರ್ ಬಾಷಾ (ಖೋ-ಖೋ).

    ಜೀವಮಾನ ಸಾಧನಾ ಪ್ರಶಸ್ತಿ
    ಗಾವಂಕರ್ ಜಿ.ವಿ (ಅಥ್ಲೆಟಿಕ್ಸ್), ಕ್ಯಾಪ್ಟನ್ ದಿಲೀಪ್ ಕುಮಾರ್ (ಕಯಾಕಿಂಗ್ & ಕನೋಯಿಂಗ್).

    ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ
    ಪೂಜಾಗಾಲಿ (ಆಟ್ಯಾ-ಪಾಟ್ಯಾ), ಬಿ.ಎನ್. ಕಿರಣ್ ಕುಮಾರ್ (ಬಾಲ್ ಬ್ಯಾಡ್ಮಿಂಟನ್), ಗೋಪಾಲನಾಯ್ಕ್ (ಕಂಬಳ)‌, ದೀಕ್ಷಾಕೆ (ಖೋ-ಖೋ), ಶಿವಯೋಗಿಬಸಪ್ಪಬಾಗೇವಾಡಿ (ಗುಂಡುಕಲ್ಲು ಎತ್ತುವುದು), ಲಕ್ಷ್ಮೀಬಿರೆಡೆಕರ್ (ಕುಸ್ತಿ), ಪಿ.ಗೋಪಾಲಕೃಷ್ಣ (ಯೋಗ ರಾಘವೇಂದ್ರ ಎಸ್ ಹೊಂಡದಕೇರಿ (ಪವರ್ ಲಿಫ್ಟಿಂಗ್), ಸಿದ್ದಪ್ಪ ಪಾಂಡಪ್ಪ ಹೊಸಮನಿ (ಸಂಗ್ರಾಣಿಕಲ್ಲು ಎತ್ತುವುದು), ಸೂರಜ್ ಎಸ್ ಅಣ್ಣಿಕೇರಿ (ಕುಸ್ತಿ), ಶಶಾಂಕ್ಬಿ.ಎಂ (ಪ್ಯಾರಾ ಈಜು), ಡಿ.ನಾಗಾರಾಜು (ಯೋಗ), ಶ್ರೀವರ್ಷಿಣಿ (ಜಿಮ್ನಾಸ್ಟಿಕ್), ಅವಿನಾಶ್ವಿನಾಯ್ಕ (ಜುಡೋ). ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್

    ಕ್ರೀಡಾ ಪೋಷಕ ಪ್ರಶಸ್ತಿ
    ಶ್ರೀಧರ್ಮಸ್ಥಳಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್, ಉಜಿರೆ-ದಕ್ಷಿಣಕನ್ನಡ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಬೆಂಗಳೂರು ನಗರ ಜಿಲ್ಲೆ, ಆರ್. ವಿ. ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರು ನಗರ ಜಿಲ್ಲೆ, ಹೂಡಿ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು ನಗರ ಜಿಲ್ಲೆ, ಶ್ರೀ ಬಾಲಮಾರುತಿ ಸಂಸ್ಥೆ ಧಾರವಾಡ, ಎಮಿನೆಂಟ್ ಶೂಟಿಂಗ್ ಹಬ್ ಬೆಂಗಳೂರು ನಗರ ಜಿಲ್ಲೆ, ಬಾಲಾಂಜನೇಯ ಜಿಮ್ನಾಸಿಯಂ (ರಿ.) ಮಂಗಳೂರು, ಬಸವನಗುಡಿ ಅಕ್ವಾಟಿಕ್ ಸೆಂಟರ್ ಬೆಂಗಳೂರು ನಗರ ಜಿಲ್ಲೆ, ದ್ರಾವಿಡ್ಪಡುಕೋಣೆಅಕಾಡೆಮಿ ಬೆಂಗಳೂರು ನಗರ ಜಿಲ್ಲೆ, ಪಿಪಲ್ ಎಜುಕೇಷನಲ್ ಟ್ರಷ್ಟ್ ಮಂಡ್ಯ.

    ಏಕಲವ್ಯ ಪ್ರಶಸ್ತಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ 1992ರಿಂದ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರಿಗೆ ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ, 2 ಲಕ್ಷ ನಗದು ಬಹುಮಾನ.

    ಜೀವಮಾನ ಸಾಧನೆ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ನಗದು ಬಹುಮಾನ.

    ಗ್ರಾಮೀಣ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ 2014ರಿಂದ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ, ಸಮವಸ್ತ್ರ, ಸ್ಕ್ರೋಲ್, 1 ಲಕ್ಷ ರೂ.ನಗದು ಪುರಸ್ಕಾರ.

    ಕ್ರೀಡಾ ಪೋಷಕ ಪ್ರಶಸ್ತಿ ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಪ್ರವರ್ತಕರನ್ನು ಗುರುತಿಸಿ 2017-18ರಿಂದ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು 5 ಲಕ್ಷ ನಗದು ಪುರಸ್ಕಾರ.

  • ನಟ ರಾಘವೇಂದ್ರ ರಾಜ್‍ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

    ನಟ ರಾಘವೇಂದ್ರ ರಾಜ್‍ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ.

    ragavendra rajkumar

    ಈ ಕುರಿತಂತೆ ರಾಘವೇಂದ್ರ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಚಂದನವನದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರ ಜರ್ನಿಯನ್ನು ವಿವರಿಸಲಾಗಿದೆ. ಇದನ್ನೂ ಓದಿ: ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ragavendra rajkumar

    ವೀಡಿಯೋ ಜೊತೆಗೆ, ನಿನ್ನೆ ಬೆಂಗಳೂರಿನಲ್ಲಿ ನಡೆದ ಇನ್ನೋವೆಟಿವ್‌  ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ‘ದಾದಾ ಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್’ ವತಿಯಿಂದ ‘ಜೀವಮಾನ ಸಾಧನೆ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಅಪ್ಪಾಜಿ, ಅಮ್ಮ, ಕುಟುಂಬ ವರ್ಗ ಹಾಗೂ ನನ್ನೆಲ್ಲಾ ಅಭಿಮಾನಿ ದೇವರುಗಳಿಗೆ ಅರ್ಪಿಸುತ್ತಿದ್ದೇನೆ. ತುಂಬು ಹೃದಯದ ಧನ್ಯವಾದಗಳು ಎಂದು ಕಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ, ಮತಭಿಕ್ಷೆ ನೀಡಿ: ಹೆಚ್‍ಡಿಡಿ

    Raghavendra Rajkumar

    ವರನಟ ಡಾ. ರಾಜ್‍ಕುಮಾರ್‌ರವರ ಪ್ರೀತಿಯ ಸುಪುತ್ರರಲ್ಲಿ ರಾಘವೇಂದ್ರ ರಾಜ್‍ಕುಮಾರ್ ಅವರು ದ್ವಿತೀಯ ಪುತ್ರರಾಗಿದ್ದಾರೆ. ರಾಘವೇಂದ್ರರಾಜ್‍ಕುಮಾರ್ ಕನ್ನಡ ಚಿತ್ರರಂಗದಲ್ಲಿ ಗಾಯಕ ಹಾಗೂ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. 1974ರಲ್ಲಿ ಡಾ. ರಾಜ್‍ಕುಮಾರ್ ಅಭಿನಯಿಸಿದ್ದ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಾಲನಟರಾಗಿ ನಟಿಸಿದ್ದರು. ನಂತರ ಚಿರಂಜೀವಿ ಸುಧಾಕರ ಸಿನಿಮಾದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ನಂತರ 1989ರಲ್ಲಿ ಬಿಡುಗಡೆಗೊಂಡ ನಂಜುಂಡಿ ಕಲ್ಯಾಣ ಸಿನಿಮಾ ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಬಹುದೊಡ್ಡ ಹಿಟ್ ಜೊತೆಗೆ ನೇಮ್ ಹಾಗೂ ಫ್ರೇಮ್ ತಂದುಕೊಟ್ಟಿತ್ತು.

    ಇಲ್ಲಿಯವರೆಗೂ ರಾಘವೇಂದ್ರ ರಾಜ್‍ಕುಮಾರ್ ಅವರು 23 ಸಿನಿಮಾಗಳಲ್ಲಿ ಅಭಿನಯಿಸಿದ್ದು, ಸಾಕಷ್ಟು ಗೀತೆಗಳನ್ನು ಹಾಡಿದ್ದಾರೆ ಮತ್ತು 5 ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2019ರಲ್ಲಿ ತೆರೆ ಕಂಡ ಅಮ್ಮನ ಮನೆ ಸಿನಿಮಾಕ್ಕಾಗಿ ರಾಘವೇಂದ್ರ ರಾಜ್‍ಕುಮಾರ್ ಅವರು ಉತ್ತಮ ನಟರಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ಇದನ್ನೂ ಓದಿ: ಅ.21ರಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ – ಶಿಕ್ಷಣ ಇಲಾಖೆಯಿಂದ ಎಸ್‍ಒಪಿ ಜಾರಿ

    ragavendra rajkumar

    ಇದೀಗ ರಾಘವೇಂದ್ರ ರಾಜ್‍ಕುಮಾರ್ ಅವರ ಸಾಧನೆ ಮೆಚ್ಚಿ ‘ದಾದಾ ಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್’ ವತಿ ಜೀವಮಾನ ಸಾಧನೆ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.