Tag: ಜೀರ್ಣೋದ್ಧಾರ

  • ಕೊಡಗಿನ ಗ್ರಾಮವೊಂದರಲ್ಲಿ ಪುರಾತನ ಈಶ್ವರ ಕೆತ್ತನೆ ಕಲ್ಲುಗಳು ಪತ್ತೆ

    ಕೊಡಗಿನ ಗ್ರಾಮವೊಂದರಲ್ಲಿ ಪುರಾತನ ಈಶ್ವರ ಕೆತ್ತನೆ ಕಲ್ಲುಗಳು ಪತ್ತೆ

    ಮಡಿಕೇರಿ: ದೇವಾಲಯ ಜಾಗವನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಪುರಾತನ ಕಾಲದ ಈಶ್ವರ ಕೆತ್ತನೆಯ ಕಲ್ಲುಗಳು ಪತ್ತೆಯಾಗಿ ಗ್ರಾಮಸ್ಥರ ಅಚ್ಚರಿಗೆ ಕಾರಣವಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಲ್ಲಮಾವಟಿ ಸಮೀಪದ ಪೇರೂರಿನ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿನ ದೇವಾಲಯದ ಈಶ್ವರ ಇಗ್ಗುತಪ್ಪ ಸನ್ನಿಧಿಯ ಜೀರ್ಣೋದ್ಧಾರದ ಸಂದರ್ಭ ಪುರಾತನ ಈಶ್ವರನ ಕೆತ್ತನೆಯ ಕಲ್ಲುಗಳು ಪತ್ತೆಯಾಗಿದೆ. ಮಡಿಕೇರಿ ತಾಲೂಕಿನ ಬಲ್ಲಮಾವಟಿಯ(ಬಲ್ಲತ್‍ನಾಡಿನ) ಪುರಾತನ ಇತಿಹಾಸ ಹೊಂದಿರುವ ಪೇರೂರಿನ ಈಶ್ವರ ಇಗ್ಗುತಪ್ಪ ನೆಲೆಯಲ್ಲಿ ದೇವಾಲಯ ಜೀರ್ಣೋದ್ಧಾರ ಕಾರ್ಯವು ಬ್ರಹ್ಮಶ್ರೀನಿಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಂತೆ ಕಳೆದ ಮೂರು ತಿಂಗಳಿಂದ ನಡೆಯುತ್ತಿದೆ. ಇದನ್ನೂ ಓದಿ: ಹುಮ್ನಾಬಾದ್‍ನಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಬೇಕಾದ್ರೆ ಎರಡು ಡೋಸ್ ಲಸಿಕೆ ಕಡ್ಡಾಯ

    ಗರ್ಭಗುಡಿಯ ಜೀರ್ಣೋದ್ಧಾರದ ಸಂದರ್ಭ ಭೂಮಿಯೊಳಗೆ ಮೂರು ನಾಲ್ಕು ಶಿವನ ಕೆತ್ತನೆಯ ಪುರಾತನ ಕಲ್ಲುಗಳು ಪತ್ತೆಯಾಗಿದೆ ಎಂದು ಜೀರ್ಣೋದ್ಧಾರ ಸಮಿತಿಯ ಸಹಕಾರ್ಯದರ್ಶಿ ಅಪ್ಪಚ್ಚಿರನಂದಾಮುದ್ದಪ್ಪ ಹೇಳುತ್ತಾರೆ. ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅಧಿಕಾರಿಗಳು ದೇವಾಲಯದಲ್ಲಿ ದೊರೆತ ಪುರಾತನಕಲ್ಲುಗಳನ್ನು ಪರಿಶೀಲಿದ್ದಾರೆ. ಇದನ್ನೂ ಓದಿ: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!

    ದೇವಾಲಯದ ದೇವತಕ್ಕರು ಹಾಗೂ ಜೀರ್ಣೋದ್ಧಾರದ ಸಮಿತಿಯ ಅಧ್ಯಕ್ಷರಾದ ಬಿ.ತಮ್ಮಯ್ಯ ಅವರ ನೇತ್ರತ್ವದಲ್ಲಿ ನಡೆಯುವ ಸಮಿತಿ ಸಭೆಯ ಒಪ್ಪಿಗೆ ಪಡೆದು ದೇವಾಲಯದಲ್ಲಿ ದೊರೆತ ಪುರಾತನ ಕಲ್ಲುಗಳನ್ನು ಪುರಾತತ್ವ ಇಲಾಖೆಗೆ ನೀಡುವಂತೆ ತೀರ್ಮಾನಿಸಲಾಗುವುದೆಂದು ತಿಳಿಸಿದ್ದಾರೆ.

  • ಜೀರ್ಣೋದ್ಧಾರ, ಮಹಾ ಕುಂಭಾಭಿಶೇಕಕ್ಕೆ ತಯಾರಾದ ಚೋಳರ ಕಾಲದ ದೇವಾಲಯ

    ಜೀರ್ಣೋದ್ಧಾರ, ಮಹಾ ಕುಂಭಾಭಿಶೇಕಕ್ಕೆ ತಯಾರಾದ ಚೋಳರ ಕಾಲದ ದೇವಾಲಯ

    ಕೋಲಾರ: ಚೋಳರ ಕಾಲದ ಸುಮಾರು 900 ವರ್ಷಗಳ ಪುರಾತನ ಶ್ರೀಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ಮಹಾಕುಂಭಾಭಿಷೇಕ ಕಾರ್ಯಕ್ರಮ ನಡೆಯುತ್ತಿದ್ದು, ಗಣ್ಯಾತಿಗಣ್ಯರು ಭಾಗವಹಿಸುತ್ತಿದ್ದಾರೆ.

    ಇಂದಿನಿಂದ ಮೂರು ದಿನಗಳ ಕಾಲ ಕೋಲಾರ ತಾಲೂಕು ಕೋರಗೊಂಡಹಳ್ಳಿ ಕೋನೆಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪುರಾತನ ದೇವಾಲಯದ ಉದ್ಘಾಟನೆ ನಡೆಯಲಿದ್ದು, ಗಣ್ಯರು ಭಾಗವಹಿಸುತ್ತಿದ್ದಾರೆ. ಚೋಳರ ಕಾಲದ ಸುಮಾರು 900 ವರ್ಷಗಳಷ್ಟು ಪುರಾತನ ಶ್ರೀಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ಮಹಾಕುಂಭಾಭಿಷೇಕವನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ.

    ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಚೋಳರ ಕಾಲದ ಅತ್ಯಂತ ಪುರಾತನ ದೇವಾಲಯ ಇದಾಗಿದ್ದು, 2013 ರಲ್ಲಿ ಕೆಡವಿ ಸುಮಾರು 8 ವರ್ಷಗಳ ಕಾಲ ಅನೇಕ ದಾನಿಗಳ ಸಹಾಯದಿಂದ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಇದಕ್ಕೆ ಹಲವು ಸ್ನೇಹಿತರು ಹಾಗೂ ಗ್ರಾಮದ ಎಲ್ಲರೂ ಸಹಾಯ ಮಾಡಿದ್ದಾರೆ. ಹೀಗಾಗಿ ಕಾರ್ಯಕ್ರಮಕ್ಕೆ ಸಿನಿಮಾ ನಟರು ಹಾಗೂ ರಾಜಕಾರಣಿಗಳ ದಂಡು ಆಗಮಿಸುತ್ತಿದೆ. ಮೂರು ದಿನಗಳ ಕಾಲ ನಡೆಯುವ ಅದ್ಧೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಭಾನುವಾರ ಹಾಗೂ ಸೋಮವಾರ ಕೋಲಾರಕ್ಕೆ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಖ್ಯಾತ ಸಿನಿಮಾ ನಟರು ಹಾಗೂ ರಾಜಕಾರಣಿಗಳು ಆಗಮಿಸಲಿದ್ದಾರೆ. ಭಾನುವಾರ ಸಂಜೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹ ಆಗಮಿಸಲಿದ್ದಾರೆ.

    ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಗಾಯಕ ವಿಜಯ್ ಪ್ರಕಾಶ್ ಸಾರಥ್ಯದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಮಾ-8 ರಂದು ಬೆಳಗ್ಗೆ ನಡೆಯುವ ಮಹಾಕುಂಭಾಭಿಷೇಕ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ನಟ ಕಿಚ್ಚ ಸುದೀಪ್, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸೇರಿದಂತೆ ಅನೇಕ ಸಚಿವರು, ಶಾಸಕರು, ಗಣ್ಯರು ಆಗಮಿಸಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಬೆಂಗಳೂರು ದಕ್ಷಿಣ ಡಿಸಿಪಿ ದೇವರಾಜ್ ಅವರು ಹುಟ್ಟೂರು ಇದಾಗಿದ್ದು, ಅವರ ನೇತೃತ್ವದಲ್ಲೇ ದೇವಸ್ಥಾನ ಜೀರ್ಣೋದ್ಧಾರವಾಗಿದೆ.

  • ಯುವಕರಿಂದ ಗಂಗರ ಕಾಲದ ಪುರಾತನ ದೇವಾಲಯ ಜೀರ್ಣೋದ್ಧಾರ

    ಯುವಕರಿಂದ ಗಂಗರ ಕಾಲದ ಪುರಾತನ ದೇವಾಲಯ ಜೀರ್ಣೋದ್ಧಾರ

    – ಲಾಕ್‍ಡೌನ್ ವೇಳೆ ಊರಿಗೆ ಬಂದಾಗ ದೇವಾಲಯದ ಕೆಲಸ

    ನೆಲಮಂಗಲ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಲಾಕ್‍ಡೌನ್ ಹಿನ್ನೆಲೆ ಊರಿಗೆ ಬಂದಿದ್ದು, ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಶಿಥಿಲಗೊಂಡಿದ್ದ ಗ್ರಾಮದಲ್ಲಿನ ಪುರಾತನ ಗಂಗರ ಕಾಲದ ಆಂಜನೇಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮದ್ದೇನಹಳ್ಳಿ ಗ್ರಾಮದ ಪುರಾತನ ಗಂಗರ ಕಾಲದ ಆಂಜನೇಯ ದೇವಾಲಯ ಶಿಥಿಲವಾಗಿತ್ತು. ಲಾಕ್‍ಡೌನ್ ಹಿನ್ನೆಲೆ ಗ್ರಾಮದಲ್ಲಿ ಕಾಲ ಕಳೆಯುತ್ತಿದ್ದ ಯುವಕರು ಈ ದೇವಸ್ಥಾನದ ಅವಸ್ಥೆ ನೋಡಿ ಜೀರ್ಣೋದ್ಧಾರ ಮಾಡಲು ಪಣ ತೊಟ್ಟರು. ಅದರಂತೆ ಯುವಕರು ಒಟ್ಟಾಗಿ, ಗ್ರಾಮಸ್ಥರ ಮನವೊಲಿಸಿ ಹಣ ಹೊಂದಿಸಿ, ಕಾಮಗಾರಿ ನಡೆಸಲು ಅನುಮತಿ ಪಡೆದು ಇದೀಗ ದೇವಸ್ಥಾನವನ್ನು ಪುಶ್ಚೇತನಗೊಳಿಸಿದ್ದಾರೆ.

    ಸರ್ಕಾರದಿಂದ ಅನುಮತಿ ಪಡೆದು, ಸಾಮಾಜಿಕ ಅಂತರ ಹಾಗೂ ಸರ್ಕಾರದ ಇತರೆ ಕಟ್ಟುನಿಟ್ಟಿನ ನಿಯಮ ಪಾಲಿಸಿ ಕಾಮಗಾರಿ ನಡೆಸಲಾಗಿದೆ. ಗ್ರಾಮದಲ್ಲಿರುವ ಏಕೈಕ ಆಂಜನೇಯ ದೇವಾಲಯವನ್ನು ಸುಸ್ಥಿಯಲ್ಲಿಡಬೇಕೆಂಬ ಗ್ರಾಮಸ್ಥರ ಕನಸು ಇದರಿಂದ ನನಸಾಗಿದೆ. ಜೀರ್ಣೋದ್ಧಾರವಾದ ಖುಷಿಯಲ್ಲಿ ದೇಶ ಬೇಗ ಕರೊನಾ ಮುಕ್ತವಾಗಲಿ ಎಂಬ ಸಂಕಲ್ಪದಿಂದ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಪುರಾತನ ದೇವಾಲಯಗಳನ್ನು ಉಳಿಸುವಲ್ಲಿ ಯುವಕರ ಕೊಡುಗೆ ದೊಡ್ಡದು ಎಂದು ಊರಿನ ಹಿರಿಯ ಮುಖಂಡ ಭಾನುಪ್ರಕಾಶ್ ಹೇಳಿದರು.

  • ಬಹ್ರೇನ್‍ನ 200 ವರ್ಷ ಪುರಾತನ ಶ್ರೀ ಕೃಷ್ಣ ದೇವಾಲಯ ಜೀರ್ಣೋದ್ಧಾರಕ್ಕೆ ಮೋದಿ ಅಸ್ತು

    ಬಹ್ರೇನ್‍ನ 200 ವರ್ಷ ಪುರಾತನ ಶ್ರೀ ಕೃಷ್ಣ ದೇವಾಲಯ ಜೀರ್ಣೋದ್ಧಾರಕ್ಕೆ ಮೋದಿ ಅಸ್ತು

    ಮನಮಾ: ಪ್ರಧಾನಿ ನರೇಂದ್ರ ಮೋದಿ ಅವರು ಬಹ್ರೇನ್ ಪ್ರವಾಸದಲ್ಲಿದ್ದು, ಈ ವೇಳೆ ಅಲ್ಲಿನ ರಾಜಧಾನಿ ಮನಮಾದಲ್ಲಿರುವ 200 ವರ್ಷಕ್ಕೂ ಹಳೆಯದಾದ ಶ್ರೀ ಕೃಷ್ಣ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಯೋಜನೆಗೆ 4.2 ಮಿಲಿಯನ್ ಯುಎಸ್ ಡಾಲರ್(30.03 ಕೋಟಿ ರೂ.) ನೀಡುವುದಾಗಿ ಘೋಷಿಸಿದ್ದಾರೆ.

    ಇಂದು ಬಹ್ರೇನ್ ಪ್ರವಾಸದಲ್ಲಿರುವ ನರೇಂದ್ರ ಮೋದಿ 200 ವರ್ಷಕ್ಕೂ ಹಳೆಯದಾದ ಶ್ರೀನಾಥ್ ಜೀ(ಶ್ರೀ ಕೃಷ್ಣ) ದೇವಸ್ಥಾನದಲ್ಲಿ ಬಹ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿ ಮಾಡಿದರು. ಇದೇ ವೇಳೆ ಶ್ರೀನಾಥ್ ಜೀ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 4.2 ಮಿಲಿಯನ್ ಯುಎಸ್ ಡಾಲರ್ ಘೋಷಿಸಿದ್ದಾರೆ.

    ಗಲ್ಫ್‍ನ ಪ್ರಮುಖ ರಾಷ್ಟ್ರ ಬಹ್ರೇನ್‍ಗೆ ಭಾರತದ ಪ್ರಧಾನಿಯ ಮೊದಲ ಭೇಟಿ ಇದಾಗಿದೆ. ಮನಮಾದಲ್ಲಿರುವ ಶ್ರೀನಾಥ್ ಜೀ ದೇವಸ್ಥಾನಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದ್ದು, ಪೂಜೆ ನಂತರ ಯುಎಇಯಲ್ಲಿ ಶನಿವಾರ ಬಿಡುಗಡೆ ಮಾಡಿದ ರೂಪೇ ಕಾರ್ಡ್ ಮೂಲಕವೇ ಪ್ರಸಾದವನ್ನು ಖರೀದಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನದ ಫಲಕವನ್ನು ಇಂದು ಅನಾವರಣಗೊಳಿಸಿದ್ದು, ಸಾಂಪ್ರದಾಯಿಕ ದೇವಸ್ಥಾನದ ಜೀರ್ಣೋದ್ಧಾರದ ಯೋಜನೆಯನ್ನು ಇದೇ ವೇಳೆ ಘೋಷಿಸಿದರು.

    ಪ್ರೀತಿ ಹಾಗೂ ವಾತ್ಸಲ್ಯವನ್ನು ತೋರಿದ ಬಹ್ರೇನ್‍ಗೆ ಧನ್ಯವಾದ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಪ್ರದೇಶದ ಅತ್ಯಂತ ಹಳೆಯ ದೇವಸ್ಥಾನ, 200 ವರ್ಷದ ಇತಿಹಾಸವಿರುವ ಶ್ರೀನಾಥ್ ಜೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಈ ದೇವಾಲಯವು ಬಹ್ರೇನ್ ಸಮಾಜದ ಬಹುತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಈಗಾಗಲೇ ಸ್ಥಳದ ಅಳತೆ ಮಾಡಲಾಗಿದ್ದು, 16,500 ಚದರ ಅಡಿ ಭೂಮಿಯಲ್ಲಿ ನವೀಕರಣವಾಗಲಿದೆ. 45 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ. 30 ಮೀ. ಎತ್ತರದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ದೇವಸ್ಥಾನದ 200 ವರ್ಷದ ಪರಂಪರೆಯನ್ನು ಜೀರ್ಣೋದ್ಧಾರ ಮಾಡಲಾಗುವ ಕಟ್ಟಡದಲ್ಲಿ ಪ್ರತಿಬಿಂಬಿಸುವಂತೆ ಮಾಡಲಾಗುವುದು. ಗರ್ಭಗುಡಿ, ಪ್ರಾರ್ಥನಾ ಮಂದಿರ, ಸಾಂಪ್ರದಾಯಿಕ ಹಿಂದೂ ವಿವಾಹ ಹಾಗೂ ಇತರೆ ಸಮಾರಂಭಗಳನ್ನು ಮಾಡಲು ಸಭಾಂಗಣದ ವ್ಯವಸ್ಥೆಯನ್ನೂ ಈ ದೇವಸ್ಥಾನದಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಬಹ್ರೇನ್‍ನ್ನು ವಿವಾಹದ ತಾಣವಾಗಿ ಉತ್ತೇಜಿಸುವುದು, ಪ್ರವಾಸೋದ್ಯಮವನ್ನು ಹೆಚ್ಚಿಸಲಾಗುತ್ತಿದೆ.

  • ಇನ್ಫಿ ಫೌಂಡೇಶನ್‍ನಿಂದ ಜೀರ್ಣೋದ್ಧಾರಗೊಂಡ ವಸಂತಪುರ ಕಲ್ಯಾಣಿ ಉದ್ಘಾಟನೆ

    ಇನ್ಫಿ ಫೌಂಡೇಶನ್‍ನಿಂದ ಜೀರ್ಣೋದ್ಧಾರಗೊಂಡ ವಸಂತಪುರ ಕಲ್ಯಾಣಿ ಉದ್ಘಾಟನೆ

    ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಸಂಸ್ಥೆಯು ಜೀರ್ಣೋದ್ಧಾರ ಮಾಡಿದ್ದ ಐತಿಹಾಸಿಕ ವಸಂತಪುರ ಕಲ್ಯಾಣಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟನೆ ಮಾಡಿದ್ದಾರೆ.

    ಉತ್ತರಹಳ್ಳಿಯ ವಸಂತಪುರದಲ್ಲಿರುವ ಐತಿಹಾಸಿಕ ಕಲ್ಯಾಣಿಯನ್ನು ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀಮತಿ ಸುಧಾಮೂರ್ತಿಯವರ ಸಹಾಯ ಹಸ್ತದಿಂದ ಅಭಿವೃದ್ಧಿ ಪಡಿಸಲಾಗಿತ್ತು. ಈ ಐತಿಹಾಸಿಕ ಕಲ್ಯಾಣಿಗೆ ಮರುಜೀವ ನೀಡಲು ಇನ್ಫೋಸಿಸ್ ಫೌಂಡೇಷನ್ ಸುಮಾರು 8.5 ಕೋಟಿ ರೂಪಾಯಿ ವೆಚ್ಚ ಮಾಡಿತ್ತು.

    ಸಂಸ್ಥೆಯು ಜೀರ್ಣೋದ್ಧಾರ ಮಾಡಿದ ಕಲ್ಯಾಣಿಯನ್ನು ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಉದ್ಘಾಟನೆ ಮಾಡಿದ್ದಾರೆ. ಈ ಸಮಾರಂಭದಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಎಂ.ಕೃಷ್ಣಪ್ಪ, ಡಿಸಿ ಶೈಲಜಾ ಸೇರಿದಂತೆ ಸುಧಾಮೂರ್ತಿಯವರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv