Tag: ಜೀರೋ ಟ್ರಾಫಿಕ್

  • ಬದುಕೋ ಸಾಧ್ಯತೆ ಮೊದಲೇ ತೀರಾ ಕಡಿಮೆಯಿತ್ತು – ಹಾಸನ ಮಗು ಸಾವಿನ ಪ್ರಕರಣಕ್ಕೆ ನಿಮ್ಹಾನ್ಸ್ ಸ್ಪಷ್ಟನೆ

    ಬದುಕೋ ಸಾಧ್ಯತೆ ಮೊದಲೇ ತೀರಾ ಕಡಿಮೆಯಿತ್ತು – ಹಾಸನ ಮಗು ಸಾವಿನ ಪ್ರಕರಣಕ್ಕೆ ನಿಮ್ಹಾನ್ಸ್ ಸ್ಪಷ್ಟನೆ

    ಬೆಂಗಳೂರು: ಬುಧವಾರ ಹಾಸನದಿಂದ (Hassan) ಬೆಂಗಳೂರಿಗೆ (Bengaluru) ಜೀರೋ ಟ್ರಾಫಿಕ್‌ನಲ್ಲಿ (Zero Traffic) ಬಂದರೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ (NIMHANS Hospital) ಬೆಡ್ ನೀಡದೇ ಹೋಗಿದ್ದಕ್ಕೆ 1 ವರ್ಷದ ಮಗು (Child) ಸಾವನ್ನಪ್ಪಿರುವ ಪ್ರಕರಣಕ್ಕೆ ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ನಿಮ್ಹಾನ್ಸ್ ಸ್ಥಾನಿಕ ಅಧಿಕಾರಿ ಡಾ. ಶಶಿಧರ್, ನಮಗೆ ಹಾಸನದ ಸರ್ಕಾರಿ ಆಸ್ಪತ್ರೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಮಗು ಆಸ್ಪತ್ರೆಗೆ ತಲುಪುವ 1 ಗಂಟೆ ಮೊದಲು ಮಾಹಿತಿ ಬಂದಿತ್ತು. ಅಂಬುಲೆನ್ಸ್ ಚಾಲಕರೊಬ್ಬರು ಹಾಸನ ಮೆಡಿಕಲ್ ಕಾಲೇಜಿನ ರಿಪೋರ್ಟ್ ತೋರಿಸಿದ್ದರು. ಅದನ್ನು ನೋಡಿದಾಗಲೇ ನಮ್ಮ ವೈದ್ಯರು ಮಗು ಬದುಕುವ ಸಾಧ್ಯತೆ ತೀರಾ ಕಡಿಮೆಯಾಗಿತ್ತು, ಇಲ್ಲಿಗೆ ಕರೆತರುವ ಅಗತ್ಯವಿಲ್ಲ ಅಂತಾ ಹೇಳಿದ್ದೆವು ಎಂದು ತಿಳಿಸಿದರು.

    ನಾವು ಮಗುವನ್ನು ಆಸ್ಪತ್ರೆಗೆ ತಂದ ಬಳಿಕ ಅಂಬುಲೆನ್ಸ್‌ನಲ್ಲೇ ಪರೀಕ್ಷೆ ಮಾಡಿದ್ದೇವೆ. ಅಂಬುಲೆನ್ಸ್ನಲ್ಲಿಯೇ ಮಗು ವೆಂಟೀಲೇಟರ್‌ನಲ್ಲಿ ಇತ್ತು. ಆದರೆ 10 ನಿಮಿಷದ ಬಳಿಕ ಮಗುವನ್ನು ಒಳಗಡೆ ಚಿಕಿತ್ಸೆಗೆ ಕಳುಹಿಸಿದ್ದೇವೆ. ಆದರೆ 2 ಗಂಟೆ ಚಿಕಿತ್ಸೆ ಕೊಟ್ಟರೂ ಮಗು ಬದುಕಲಿಲ್ಲ. ಸತತ 2 ಗಂಟೆಯ ಕಾಲ ಮಗುವನ್ನು ಬದುಕಿಸಲು ಪ್ರಯತ್ನ ಪಟ್ಟಿದ್ದೇವೆ. ನಮ್ಮ ಕಡೆಯಿಂದ ಏನೇನು ಮಾಡಲು ಸಾಧ್ಯವಿತ್ತೋ ಎಲ್ಲಾ ಎಫರ್ಟ್ ಹಾಕಿದ್ದೇವೆ. ಆದರೆ ಮಗುವನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: 262 ಅಂಬುಲೆನ್ಸ್‌ ಸೇರ್ಪಡೆ – ವ್ಯವಸ್ಥೆ ಬಲಪಡಿಸುವತ್ತ ಇದು ನಮ್ಮ ಮೊದಲ ಹೆಜ್ಜೆ : ದಿನೇಶ್ ಗುಂಡೂರಾವ್

    ಮಗು ಮೃತದೇಹ ಹಸ್ತಾಂತರ ತಡವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರಕ್ಕೆ ಪೊಲೀಸರು ಉತ್ತರಿಸಬೇಕು. ಪೊಲೀಸರು ಅವರ ರಿಪೋರ್ಟ್ ಮಾಡಿ ಮೃತದೇಹವನ್ನು ಪಡೆಯಬೇಕು. ಇಲ್ಲಿಯವರೆಗೆ ಪೊಲೀಸರು ಆ ಕೆಲಸವನ್ನು ಮಾಡಿಲ್ಲ ಎಂದು ಆರ್‌ಎಂಒ ಡಾ. ಶಶಿಧರ್ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ಮೇಲೆ ವಿಪರೀತ ಸಂಶಯ – ಚಾಕುವಿನಿಂದ 5 ಬಾರಿ ಇರಿದು, ನೇಣಿಗೆ ಶರಣಾದ ಪತಿ

  • ನನಗೆ ಜೀರೋ ಟ್ರಾಫಿಕ್‌ ಸೌಲಭ್ಯ ಬೇಡ; ಸಾರ್ವಜನಿಕರಿಗೆ ತೊಂದರೆಯಾಗುತ್ತೆ ಅಂತ ಈ ನಿರ್ಧಾರ: ಸಿಎಂ

    ನನಗೆ ಜೀರೋ ಟ್ರಾಫಿಕ್‌ ಸೌಲಭ್ಯ ಬೇಡ; ಸಾರ್ವಜನಿಕರಿಗೆ ತೊಂದರೆಯಾಗುತ್ತೆ ಅಂತ ಈ ನಿರ್ಧಾರ: ಸಿಎಂ

    ಬೆಂಗಳೂರು: ತಮ್ಮ ವಾಹನ ಸಂಚಾರಕ್ಕೆ ನೀಡಿರುವ ಜೀರೋ ಟ್ರಾಫಿಕ್‌ ಸೌಲಭ್ಯವನ್ನು ಹಿಂದಕ್ಕೆ ಪಡೆಯಿರಿ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಅವರು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲೆಲ್ಲ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮನೆ, ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಮುಚ್ಚಿಕೊಳ್ಳುವಷ್ಟು ಮಟ್ಟಕ್ಕೆ ಮಳೆ ನೀರು ಹರಿಯುತ್ತಿದೆ.

    ಮಳೆಯಿಂದ ಅವಾಂತರ ಸೃಷ್ಟಿಯಾಗಿರುವ ಸ್ಥಳಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಳೆಯಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ. ಈ ನಡುವೆಯೇ ಮಳೆ ಅನಾಹುತ ಪರಿಶೀಲನೆಗಾಗಿ ಸಿಟಿ ರೌಂಡ್ಸ್‌ ಹಾಕಲು ಸಿಎಂ ಮುಂದಾಗಿದ್ದರು. ಸಿಎಂ ಸಂಚಾರದಿಂದ ಮತ್ತಷ್ಟು ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದ್ದರಿಂದ ಸಿಟಿ ರೌಂಡ್ಸ್‌ ಮೊಟಕುಗೊಳಿಸಲಾಗಿದೆ.

  • ನವಜಾತ ಶಿಶುವಿಗೆ ಹೃದಯ ಕಾಯಿಲೆ – ಝೀರೋ ಟ್ರಾಫಿಕ್‍ನಲ್ಲಿ ಬೆಂಗಳೂರಿಗೆ ರವಾನೆ

    ನವಜಾತ ಶಿಶುವಿಗೆ ಹೃದಯ ಕಾಯಿಲೆ – ಝೀರೋ ಟ್ರಾಫಿಕ್‍ನಲ್ಲಿ ಬೆಂಗಳೂರಿಗೆ ರವಾನೆ

    ಹುಬ್ಬಳ್ಳಿ: ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ತಿಂಗಳ ಹಸುಗೂಸನ್ನು ನಗರದ ಸ್ಪರ್ಶ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಅಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್‍ನಲ್ಲಿ ಕೊಂಡೊಯ್ಯಲಾಗಿದೆ.

    ಬುಧವಾರ ರಾತ್ರಿ 11.45ರ ವೇಳೆ ಹುಬ್ಬಳ್ಳಿಯಿಂದ ವಾಹನ ಹೊರಟಿದೆ. ಅದರ ಉಸ್ತುವಾರಿಯನ್ನು ಉತ್ತರ ಸಂಚಾರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರತನಕುಮಾರ ಜೀರಗ್ಯಾಳ ಹಾಗೂ ಸಿಬ್ಬಂದಿ ವಹಿಸಿಕೊಂಡಿದ್ದಾರೆ.

    ಮಗು ಹುಟ್ಟುವಾಗಲೇ ಹೃದಯದಲ್ಲಿ ಚಿಕ್ಕ ರಂಧ್ರವಿತ್ತು. ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ ಕಾರಣ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

    ಸದ್ಯ ಪೊಲೀಸರ ಸಹಕಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

  • ಮೈಸೂರಿನಿಂದ ಜೀವಂತ ಹೃದಯ ಸೇರಿ ವಿವಿಧ ಅಂಗಾಂಗಗಳು ರವಾನೆ

    ಮೈಸೂರಿನಿಂದ ಜೀವಂತ ಹೃದಯ ಸೇರಿ ವಿವಿಧ ಅಂಗಾಂಗಗಳು ರವಾನೆ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ಮತ್ತೊಂದು ಹೃದಯ ಸೇರಿ ವಿವಿಧ ಅಂಗಾಂಗಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ.

    ಧರ್ಮ ಎಸ್.ಎ (28) ಪಿರಿಯಾಪಟ್ಟಣ ತಾಲೂಕು ಸೂಳೇಕೋಟೆ ಗ್ರಾಮದ ನಿವಾಸಿಯಾಗಿದ್ದು, ರಸ್ತೆ ಅಪಘಾತದಿಂದ ಗಾಯಗೊಂಡು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತದಲ್ಲಿ ಧರ್ಮ ತಲೆಗೆ ಪೆಟ್ಟು ಬಿದ್ದು ಕೋಮಾಗೆ ಹೋಗಿದ್ದರು. ಹೀಗಾಗಿ ಬದುಕುಳಿಯುವ ಸಾಧ್ಯತೆ ಕಡಿಮೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ.

    ಮೈಸೂರಿನ ನಾರಾಯಣ ಹೃದಯಾಲಯದ ವೈದ್ಯರು ಅಪೋಲೋ ಆಸ್ಪತ್ರೆಯಲ್ಲಿ ಧರ್ಮ ಅವರ ಅಪರೇಷನ್ ಮಾಡಿದ್ದಾರೆ. ಸದ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಧರ್ಮ ಅಂಗಾಂಗವನ್ನು ರವಾನಿಸಲಾಗಿದೆ.

    ಮೈಸೂರಿನಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಮೂರು ಹಂತದಲ್ಲಿ ಅಂಗಾಂಗ ರವಾನೆ ಆಗಿದೆ. ಧರ್ಮ ಅವರ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ, ಶ್ವಾಸಕೋಶವನ್ನು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ, ಕಿಡ್ನಿಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ನೀಡಲಾಗಿದೆ.

    ಮೈಸೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ಅಂಗಾಂಗಳು ರವಾನಿಸಲಾಗಿದೆ.