Tag: ಜೀರಿಗೆ ರಸಂ

  • ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ

    ಆರೋಗ್ಯಕರವಾದ ಜೀರಿಗೆ ರಸಂ ಸುಲಭ ವಿಧಾನದಲ್ಲಿ ಮಾಡಿ ಸವಿಯಿರಿ

    ಕ್ಷಿಣ ಭಾರತದ ಕಡೆ ಅದರಲ್ಲೂ ಕರ್ನಾಟಕದಲ್ಲಿ ರಸಂ ಅಥವಾ ಸಾರು ಇಲ್ಲದಿದ್ದರೆ ಊಟ ಪೂರ್ತಿಯಾಗುವುದಿಲ್ಲ. ಅದರಲ್ಲಿಯೂ ಜೀರಿಗೆ ಸಾರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ಬಹಳ ಇಷ್ಟ. ನೀವೂ ಕೂಡ ಒಮ್ಮೆ ಮಾಡಿ ರುಚಿ ನೋಡಿದರೆ ಮತ್ತೆ ಮತ್ತೆ ಈ ರೆಸಿಪಿನ ಮಾಡುತ್ತೀರಿ. ಇದನ್ನು ಮಾಡುವುದು ತುಂಬಾನೇ ಸುಲಭ. ಬಿಸಿ ಬಿಸಿ ಅನ್ನದ ಜೊತೆ ಬಡಿಸಿ ತಿನ್ನಲು ಜೀರಿಗೆ ರಸಂ ತುಂಬಾ ರುಚಿ. ಅಷ್ಟೇ ಅಲ್ಲ ಇದನ್ನು ಸೂಪ್ ತರಹ ಕುಡಿಯಲೂ ಬಹುದು. ಒಮ್ಮೆ ಮಾಡಿ ನೋಡಿ.

    ಬೇಕಾಗಿರುವ ಪದಾರ್ಥಗಳು:
    * ಒಣ ಮೆಣಸಿನಕಾಯಿ – 4 ರಿಂದ 5
    * ಎಣ್ಣೆ – 2 ದೊಡ್ಡ ಚಮಚ
    * ಜೀರಿಗೆ – 2 ಚಮಚ
    * ಬೇಯಿಸಿದ ತೊಗರಿ ಬೇಳೆ – 2 ಕಪ್
    * ಟೊಮೆಟೊ – 1 ಕಪ್
    * ಅರಶಿನ ಪುಡಿ – ಅರ್ಧ ಚಮಚ
    * ಉಪ್ಪು – ಅರ್ಧ ಚಮಚ
    * ನೀರು – ಬೇಕಾದಷ್ಟು(4 ರಿಂದ 5 ಕಪ್)

    * ತುಪ್ಪ – 1 ಚಮಚ
    * ಸಾಸಿವೆ – 1 ಚಮಚ
    * ಕರಿಬೇವು – 1 ದಂಟು
    * ಇಂಗು – ಒಂದು ಚಿಟಿಕೆ
    * ಕೊತ್ತಂಬರಿ ಸೊಪ್ಪು – 1 ಕಪ್

    ಮಾಡುವ ವಿಧಾನ:
    * ಹುರಿದ ಒಣ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಒಂದು ಪಾತ್ರೆಯಲ್ಲಿ ಗರಿ-ಗರಿಯಾಗುವವರೆಗೆ ಹುರಿಯಿರಿ.
    * ಹುರಿದ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಬೇಯಿಸಿದ ತೊಗರಿ ಬೇಳೆಯ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
    * ಎಣ್ಣೆಯನ್ನು ಬಿಸಿ ಮಾಡಿ ಟೊಮೆಟೊ ಹಾಕಿ ಸಣ್ಣ ಉರಿಯಲ್ಲಿ ಅರಶಿನ ಪುಡಿ ಹಾಗೂ ಉಪ್ಪನ್ನು ಹಾಕಿ ಬೇಯಿಸಿ.
    * ಅದಕ್ಕೆ ತಯಾರಿಸಿದ ಮೆಣಸಿನಕಾಯಿ-ಜೀರಿಗೆ-ಬೇಳೆ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.


    * ನೀರನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಕಿ. ಈ ಸಾರನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲದವರೆಗೆ ಕುದಿಸಿ.
    * ಒಗ್ಗರಣೆಗೆ ಸ್ವಲ್ಪ ತುಪ್ಪದಲ್ಲಿ ಸಾಸಿವೆ ಹಾಕಿ ಕರಿಬೇವಿನ ಎಲೆ ಮತ್ತು ಇಂಗು ಹಾಕಿ ಹುರಿಯಿರಿ. ಹುರಿದದ್ದನ್ನು ಸಾರಿಗೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿ.

    – ಈ ಸಾರನ್ನು ಬಿಸಿ-ಬಿಸಿ ಅನ್ನದ ಮತ್ತು ಹಪ್ಪಳದ ಜೊತೆ ಬಡಿಸಿ.

  • ಫಟಾ ಫಟ್ ಅಂತ ಮಾಡಿ ಘಮ್ ಎನ್ನುವ ಜೀರಿಗೆ ರಸಂ

    ಫಟಾ ಫಟ್ ಅಂತ ಮಾಡಿ ಘಮ್ ಎನ್ನುವ ಜೀರಿಗೆ ರಸಂ

    ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ?  ನೀವು ಆಫೀಸ್‍ಗೆ ಹೋಗುತ್ತಿದ್ದರೆ ಬೆಳಗ್ಗೆ ಅಡುಗೆ ಮಾಡುವುದರ ಜೊತೆಗೆ ಮಧ್ಯಾಹ್ನದ ಊಟವನ್ನು ಸಿದ್ಧ ಮಾಡಿಕೊಂಡು ಹೋಗಲು ಸಮಯ ಇರುವುದಿಲ್ಲ. ಹೀಗಾಗಿ ನೀವು 10 ನಿಮಿಷದಲ್ಲಿ ಮಾಡಬಹುದಾದ ರುಚಿಯಾದ ಜೀರಿಗೆ ರಸಂ  ರೆಸಿಪಿ ಇಲ್ಲಿದೆ. ನಾಲಿಗೆಗೆ ರುಚಿ ನೀಡುವುದರ ಜೊತೆಗೆ ನಿಮ್ಮ ಸಮಯವನ್ನು ಉಳಿಸುವ ರೆಸಿಪಿ ಇದಾಗಿದೆ.

    ಬೇಕಾಗುವ ಪದಾರ್ಥಗಳು:
    * ಹುಣಸೆ ಹಣ್ಣು- ಸ್ವಲ್ಪ
    * ಬೆಳ್ಳುಳ್ಳಿ -1
    * ಟೊಮ್ಯಾಟೊ -1
    * ಅರಿಶಿಣ ಪುಡಿ- ಸ್ವಲ್ಪ
    * ಜೀರಿಗೆ- 2 ಚಮಚ
    * ಸಾಸಿವೆ – ಸ್ವಲ್ಪ
    * ಇಂಗು – ಸ್ವಲ್ಪ
    * ಅಡುಗೆ ಎಣ್ಣೆ – ಅರ್ಧ ಕಪ್
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಕಾಳು ಮೆಣಸು- ಸ್ವಲ್ಪ
    * ಕರಿಬೇವು- ಸ್ವಲ್ಪ
    * ಒಣ ಮೆಣಸಿನಕಾಯಿ- 2
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಣ ಮೆಣಸಿನಕಾಯಿ, ಕರಿಮೆಣಸು, ಕಾಳು ಮೆಣಸಿನ ಪುಡಿ, ಸ್ವಲ್ಪ ಜಾಸ್ತಿ ಜೀರಿಗೆ, ಬೆಳ್ಳುಳ್ಳಿ ಕರಿಬೇವಿನ ಎಲೆಗಳನ್ನು ಬಾಣಲೆಯಲ್ಲಿ ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ.  ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
    * ನಂತರ ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ, ಟೊಮ್ಯಾಟೊ, ಕರಿಬೇವು, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ.

    * ರುಬ್ಬಿದ ಮಸಾಲಾ, ಹುಣಸೆ ಹಣ್ಣಿನ ತಿರುಳು, ನೀರು ಸೇರಿಸಿ ಕುದಿಯಲು ಬಿಡಬೇಕು.
    * ಇನ್ನೊಂದು ಬಾಣಲೆಯಲ್ಲಿ ಅಡುಗೆ ಎಣ್ಣೆ, ಸಾಸಿವೆ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗನ್ನು ರಸಂಗೆ ಒಗ್ಗರಣೆ ಕೊಟ್ಟರೆ ರುಚಿಯಾದ ರಸಂ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್