Tag: ಜೀಪ್

  • ಬೆಕ್ಕು ತಪ್ಪಿಸಲು ಹೋಗಿ ಪೊಲೀಸ್ ಬೊಲೆರೊ ಪಲ್ಟಿ!

    ಬೆಕ್ಕು ತಪ್ಪಿಸಲು ಹೋಗಿ ಪೊಲೀಸ್ ಬೊಲೆರೊ ಪಲ್ಟಿ!

    ಚಿಕ್ಕಮಗಳೂರು: ಕಾಡುಬೆಕ್ಕು ತಪ್ಪಿಸಲು ಹೋಗಿ ಪೊಲೀಸ್ ಬೊಲೆರೊ ವಾಹನ ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಹೊರನಾಡು ರಸ್ತೆಯಲ್ಲಿ ನಡೆದಿದೆ.

    ಜಿಲ್ಲೆಯ ಕಳಸ ಎಎಸ್‍ಐ ಹಾಗೂ ಮೂವರು ಪೇದೆಗಳು ಗುರುವಾರ ರಾತ್ರಿ ಆರೋಪಿಯೊಬ್ಬನನ್ನು ಬಂಧಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

    ಆಗಿದ್ದು ಏನು?
    ಕಳಸದಿಂದ ತೆರಳುವ ವೇಳೆ ಮಳೆ ಮಾರ್ಗ ಮಧ್ಯೆ ಪ್ರಯಾಣ ನಡೆಸುವ ವೇಳೆ ಕಾಡುಬೆಕ್ಕು ಅಡ್ಡ ಬಂದಿದ್ದು, ಪ್ರಾಣಿಯ ಜೀವ ರಕ್ಷಿಸಲು ಯತ್ನಿಸಿದ ವೇಳೆ ಡ್ರೈವರ್ ಬೊಲೆರೊ ವಾಹನವನ್ನು ಒಂದು ಬದಿಗೆ ಸರಿಸಿದ್ದಾರೆ. ಆದರೆ ಈ ವೇಳೆ ಮಳೆಯಿಂದ ನೀರು ತುಂಬಿಕೊಂಡು ನೆಲ ಹಸಿಯಾಗಿದ್ದ ಕಾರಣ ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ವೇಳೆ ವಾಹನದಲ್ಲಿದ್ದ ಯಾವುದೇ ಪೊಲೀಸರಿಗಗೆ ಅಪಾಯ ಸಂಭವಿಸಿಲ್ಲ. ಪೊಲೀಸ್ ವಾಹನ ಪಲ್ಟಿಯಾದ ಪರಿಣಾಮ ಡ್ಯಾಮೇಜ್ ಆಗಿದೆ.

  • ಜೀಪು ಹರಿದು ಮನೆ ಅಂಗಳದಲ್ಲಿ ಆಡುತ್ತಿದ್ದ ಕಂದಮ್ಮ ಸಾವು!

    ಜೀಪು ಹರಿದು ಮನೆ ಅಂಗಳದಲ್ಲಿ ಆಡುತ್ತಿದ್ದ ಕಂದಮ್ಮ ಸಾವು!

    ವಿಜಯಪುರ: ಜೀಪ್ ಹತ್ತಿ ಇಳಿದ ಪರಿಣಾಮ ಮನೆಯ ಮುಂದೆ ಆಟವಾಡುತ್ತಿದ್ದ ಮಗುವೊಂದು ಮೃತಪಟ್ಟ ಘಟನೆ ವಿಜುಯಪುರ ನಗರ ಹೊರ ವಲಯದ ಬಾರಾಕುಟ್ರೆ ತಾಂಡಾದಲ್ಲಿ ನಡೆದಿದೆ.

    ಅಮನ್ ಕಾಂತು ರಾಠೋಡ (3) ಮೃತ ಕಂದಮ್ಮ. ತಕ್ಷಣವೇ ಚಾಲಕ ಜೀಪ್ ಸಮೇತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

    ಬಾರಾಕುಟ್ರೆ ತಾಂಡದ ಅಮನ್ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ. ಅಮನ್ ಆಟವಾಡುತ್ತಿರುವುದನ್ನು ಗಮನಿಸದ ಚಾಲಕ ಜೀಪ್ ಅಮನ್ ಮೇಲೆ ಹಾಯಿಸಿದ್ದಾನೆ. ಕೆಳಗೆ ಬಿದ್ದಿದ್ದ ಅಮನ್ ತಲೆ ಮೇಲೆ ಜೀಪ್ ಹತ್ತಿಹೋಗಿದ್ದು, ಸ್ಥಳದಲ್ಲಿ ಬಾಲಕ ಅಮನ್ ಮೃತಪಟ್ಟಿದ್ದಾನೆ. ತನ್ನ ತಪ್ಪು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಜೀಪನ್ನು ವೇಗವಾಗಿ ಚಾಲನೆ ಮಾಡಿ ಪರಾರಿಯಾಗಿದ್ದಾನೆ.

    ಘಟನೆಯು 15 ನಿಮಿಷ ತಡವಾಗಿ ಪೋಷಕರು ಗಮನಕ್ಕೆ ಬಂದಿದ್ದು, ಈ ಹೊತ್ತಿನಲ್ಲಿ ಚಾಲಕ ಪರಾರಿಯಾಗಿದ್ದ. ಈ ಕುರಿತು ಮೃತ ಅಮನ್ ಪೋಷಕರು ಜೀಪ್ ಚಾಲಕನ ವಿರುದ್ಧ ವಿಜಯಪುರ ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಪ್ರವಾಸಿಗರ ಜೀಪ್ ಮೇಲೆ ಒಂಟಿಸಲಗ ದಾಳಿ!

    ಪ್ರವಾಸಿಗರ ಜೀಪ್ ಮೇಲೆ ಒಂಟಿಸಲಗ ದಾಳಿ!

    ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದ ಪ್ರವಾಸಿಗರ ಜೀಪ್ ಮೇಲೆ ಏಕಾಏಕಿ ಒಂಟಿಸಲಗ ದಾಳಿ ನಡೆಸಿದ ಘಟನೆ ತಮಿಳುನಾಡಿದ ಪ್ರಸಿದ್ಧ ಪ್ರವಾಸಿ ತಾಣ ಊಟಿ ಬಳಿಯ ಕುನ್ನೂರುನಲ್ಲಿ ನಡೆದಿದೆ.

    ಕುನ್ನೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಪ್ರವಾಸಿ ವಾಹನಕ್ಕೆ ಏಕಾಏಕಿ ಒಂಟಿಸಲಗ ಅಡ್ಡ ಬಂದಿದೆ. ಆನೆ ಬರುತ್ತಿರುವುದನ್ನು ಕಂಡ ಪ್ರಯಾಣೀಕರು ಕೂಡಲೇ ಜೀಪ್‍ನಿಂದ ಇಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

    ರೊಚ್ಚಿಗೆದ್ದ ಒಂಟಿಸಲಗವು ಜೀಪ್ ಮೇಲೆಯೇ ದಾಳಿ ನಡೆಸಿದೆ. ಈ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕೂಡಲೇ ಸ್ಥಳೀಯರು ಜೆಸಿಬಿ ಸಹಾಯದಿಂದ ಒಂಟಿ ಸಲಗವನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಒಂಟಿಸಲಗದ ದಾಳಿಯನ್ನು ಸೆರೆಹಿಡಿದ ಸಹ ಪ್ರಯಾಣಿಕರು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಂಟಿ ಸಲಗದ ವಿಡಿಯೋ ಸದ್ಯ ವೈರಲ್ ಆಗಿದ್ದು, ಪ್ರಯಾಣಿಕರು ಇಂತಹ ಮಾರ್ಗ ಮಧ್ಯೆ ಎಚ್ಚರಿಕೆ ವಹಿಸುವುದು ಕೂಡ ಅಗತ್ಯವಾಗಿದೆ.

    https://www.youtube.com/watch?v=J_MikaoW8xw

  • ಚಾಲಕನಿಲ್ಲದೇ ಚಲಿಸಿದ ಜೀಪ್-ಬಾಲಕನಿಗೆ ಡಿಕ್ಕಿ

    ಚಾಲಕನಿಲ್ಲದೇ ಚಲಿಸಿದ ಜೀಪ್-ಬಾಲಕನಿಗೆ ಡಿಕ್ಕಿ

    ಮಂಗಳೂರು: ಚಾಲಕನಿಲ್ಲದ ಸಂದರ್ಭದಲ್ಲಿ ಚಲಿಸಿದ ಜೀಪೊಂದು 5 ವರ್ಷದ ಬಾಲಕನಿಕೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.

    ಪುತ್ತೂರಿನ ಮಂಜಲ್ಪಡು ರಸ್ತೆಯೊಂದರಲ್ಲಿ ಜೂನ್ 3ರಂದು ಕಾರಿನ ಹಿಂಬದಿಯ ಡಿಕ್ಕಿಯಿಂದ ತಾಯಿ ಮತ್ತು ಮಗು ಏನನ್ನೋ ತೆಗೆಯುತ್ತ ನಿಂತಿದ್ದರು. ಈ ಕಾರಿನ ಹಿಂಬದಿಯಲ್ಲಿ ಜೀಪೊಂದನ್ನು ನಿಲ್ಲಿಸಲಾಗಿತ್ತು. ಏಕಾಏಕಿಯಾಗಿ ಜೀಪು ಚಲಿಸಿ ತಾಯಿ ಹಾಗೂ ಮಗುವಿನ ಮೇಲೆ ಎರಗಿದೆ. ಕೂಡಲೇ ಎಚ್ಚೆತ್ತ ತಾಯಿ ಅಲ್ಲಿಂದ ಸರಿದಿದ್ದಾಳೆ. ಆದರೆ ಆ 5 ವರ್ಷದ ಮಗು ಎರಡೂ ವಾಹನಗಳ ನಡುವೆಯೇ ಸಿಕ್ಕಿಹಾಕಿಕೊಂಡಿದೆ.

    ಕೂಡಲೇ ತಾಯಿ ಅಕ್ಕಪಕ್ಕದಲ್ಲಿದ್ದ ಜನರನ್ನು ಸಹಾಯಕ್ಕಾಗಿ ಕೂಗಿ ಕರೆಸಿದ್ದಾಳೆ. ತಕ್ಷಣವೇ ಜನರು ಸೇರಿ ಜೀಪನ್ನು ಹಿಂದಕ್ಕೆ ನೂಕಿ ಮಗುವನ್ನು ಆಪತ್ತಿನಿಂದ ರಕ್ಷಿಸುತ್ತಿರುವ ದೃಶ್ಯ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

    ಯಾರೂ ಇಲ್ಲದಿದ್ದರೂ ಜೀಪು ತಾನಾಗಿಯೇ ಚಲಿಸಿ ತಾಯಿ-ಮಗುವಿನ ಮೇಲೆರಗಿದೆ. ಅಲ್ಲದೇ ಜೀಪನ್ನು ಚಾಲಕ ಏರು ಪ್ರದೇಶಕ್ಕೆ ಮುಖ ಮಾಡಿಯೇ ನಿಲ್ಲಿಸಿ ಹೋಗಿದ್ದ. ಆದರೂ ಜೀಪು ಮುಂಬದಿಗೆ ಚಲಿಸಿದ್ದು ಮಾತ್ರ ಅಲ್ಲಿದ್ದವರ ಆಶ್ಚರ್ಯಕ್ಕೆ ಕಾರಣವಾಗಿದೆ.

  • ಪ್ರವಾಸಿಗನ ಜೀಪ್ ಏರಿ ಕುಳಿತ ಚಿರತೆ- ಮುಂದೇನಾಯ್ತು ವಿಡಿಯೋ ನೋಡಿ

    ಪ್ರವಾಸಿಗನ ಜೀಪ್ ಏರಿ ಕುಳಿತ ಚಿರತೆ- ಮುಂದೇನಾಯ್ತು ವಿಡಿಯೋ ನೋಡಿ

    ಕೇಪ್‍ಟೌನ್: ಚಿರತೆಯೊಂದು ಸಫಾರಿಗೆ ಬಂದಿದ್ದ ಪ್ರವಾಸಿಗನ ಜೀಪ್ ಒಳಗಡೆ ನುಗ್ಗಿ ಕುಳಿತಿದ್ದು, ಪ್ರವಾಸಿಗ ಬೆಚ್ಚಿಬಿದ್ದ ಘಟನೆ ಆಫ್ರಿಕಾದಲ್ಲಿ ನಡೆದಿದೆ.

    ಅಫ್ರಿಕಾದ ಸಿರೆನ್ಗಟಿಯಲ್ಲಿ ಈ ಘಟನೆ ನಡೆದಿದ್ದು, ಮೂರ್ನಾಲ್ಕು ಪ್ರವಾಸಿಗರಿದ್ದ ವಾಹನವೊಂದು ಸಫಾರಿಗೆ ತೆರಳಿತ್ತು. ಈ ವೇಳೆ ಮಾರ್ಗ ಮಧ್ಯೆ ಆನೇಕ ವನ್ಯಜೀವಿಗಳನ್ನು ಕಂಡು ರೋಮಾಂಚನಗೊಂಡಿದ್ದ ಪ್ರವಾಸಿಗರಿಗೆ ಚಿರತೆಯೊಂದು ಎದುರಾಗಿದೆ.

    ಅಮೇರಿಕದ ಪ್ರವಾಸಿ ಬ್ರಿಟನ್ ಹಯೆಸ್ ತಂಡ ಸಫಾರಿಗೆಂದು ಕಾಡಿಗೆ ಹೋಗಿದ್ದ ವೇಳೆ ಮೂರು ಚಿರತೆಗಳು ಮುಂದೆ ಬಂದವು. ಅದರಲ್ಲಿ ಚಿರತೆಯೊಂದು ಜೀಪ್ ಹತ್ತಿರ ಬಂದಿದೆ. ಚಿರತೆ ಕಂಡಾಕ್ಷಣ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಕೂಡಲೇ ಚಿರತೆ ವಾಹನದೊಳಗೆ ನುಗ್ಗಿಯೇ ಬಿಟ್ಟಿದೆ.

    ಇದರಿಂದಾಗಿ ಪ್ರವಾಸಿಗರು ಮತ್ತಷ್ಟು ಗಾಬರಿಗೊಳಗಾಗಿದ್ದಾರೆ. ವಾಹನ ಏರಿದ್ದ ಚಿರತೆ ಖಾಲಿ ಇದ್ದ ಸೀಟನ್ನು ನೆಕ್ಕಿದ್ದಲ್ಲದೇ, ಟಾಪ್ ಗ್ಲಾಸಿಗೂ ಮೂತಿ ಉಜ್ಜಿದೆ. ಕೆಲ ಹೊತ್ತಿನ ಬಳಿಕ ವಾಹನದಿಂದ ಇಳಿದು ಹೋಗಿದೆ. ಬದುಕಿದೆಯಾ ಬಡಜೀವವೇ ಅಂತ ಇತ್ತ ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಪ್ರವಾಸಿಗರು ವಿಡಿಯೋ ಮಾಡಿದ್ದಾರೆ.

    ಇದೀಗ ಈ ವಿಡಿಯೋವನ್ನು ಪ್ರವಾಸಿಗ ತಮ್ಮ ಫೇಸ್‍ ಬುಕ್ ನಲ್ಲಿ ಫೋಸ್ಟ್ ಮಾಡಿದ್ದು, ಆ ಕ್ಷಣದಲ್ಲಿ ಆದ ಅನುಭವನ್ನು ಹಂಚಿಕೊಂಡಿದ್ದಾರೆ.

    https://www.facebook.com/EJKOMO/videos/1721927467866774/

  • ಮಹಾರಾಷ್ಟ್ರದ ಬಾಂದ್ರಾ ಕಣಿವೆ ಬಳಿ ಮೈಸೂರು ಅಶ್ವಾರೋಹಿ ಪಡೆಯ ಪೊಲೀಸರ ಜೀಪು ಪಲ್ಟಿ

    ಮಹಾರಾಷ್ಟ್ರದ ಬಾಂದ್ರಾ ಕಣಿವೆ ಬಳಿ ಮೈಸೂರು ಅಶ್ವಾರೋಹಿ ಪಡೆಯ ಪೊಲೀಸರ ಜೀಪು ಪಲ್ಟಿ

    ಮೈಸೂರು: ಅಶ್ವಾರೋಹಿ ಪಡೆಯ ಪೊಲೀಸರ ಜೀಪು ಪಲ್ಟಿಯಾದ ಘಟನೆ ಮಹಾರಾಷ್ಟ್ರದ ಬಾಂದ್ರಾ ಕಣಿವೆ ಬಳಿ ನಡೆದಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಾಷ್ಟ್ರೀಯ ಅಶ್ವಾರೋಹಿ ಕ್ರೀಡಾ ಕೂಟದಲ್ಲಿ ಮೈಸೂರಿನ ಅಶ್ವಾರೋಹಿ ಅಧಿಕಾರಿಗಳು ಭಾಗಿಯಾಗಿದ್ದರು. ಬಿಹಾರದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಮುಗಿಸಿ ಮೈಸೂರಿಗೆ ಬರುವ ವೇಳೆ ಈ ಅಪಘಾತ ನಡೆದಿದೆ. ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೆ ಜೀಪು ಪಲ್ಟಿಯಾಗಿದೆ.

    ಜೀಪಿನಲ್ಲಿದ್ದ ಮೌಟೆಂಡ್ ಎಸಿಪಿ ಸೇರಿದಂತೆ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಜೀಪಿನಿಂದ ಹೊರಬರಲಾಗದೆ ನರಳಾಡಿದ್ದು, ಕಾರಿನ ಗಾಜು ಒಡೆದು ಮೌಟೆಂಡ್ ಪೊಲೀಸರು ಹೊರಬಂದಿದ್ದಾರೆ. ಘಟನೆಯಲ್ಲಿ ನಾಲ್ವರಿಗೂ ಸಣ್ಣಪುಟ್ಟ ಪ್ರಮಾಣದ ಗಾಯಗಳಾಗಿವೆ.

     

    ಸ್ಥಳೀಯ ಪೊಲೀಸರ ಸಹಾಯದಿಂದ ಜೀಪು ಮೇಲಕ್ಕೆತ್ತಲಾಗಿದೆ.

     

  • ಅಂದು ರೈತರ ಮೇಲೆ ಜೀಪ್ ಹತ್ತಿಸಿದ್ರು, ಇಂದು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು!

    ಅಂದು ರೈತರ ಮೇಲೆ ಜೀಪ್ ಹತ್ತಿಸಿದ್ರು, ಇಂದು ಬಂಧಿಸಿ ಹಿಗ್ಗಾಮುಗ್ಗಾ ಥಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು!

    ಚಿಕ್ಕಮಗಳೂರು: ಅಂದು ರೈತರ ಮೇಲೆ ಜೀಪ್ ಹತ್ತಿಸೋಕೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಮತ್ತೆ ತಮ್ಮ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ.

    ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಎಂಸಿ.ಹಳ್ಳಿಯ ಸರ್ವೆ ನಂಬರ್ 4ರಲ್ಲಿ 438 ಎಕರೆ ಜಾಗಕ್ಕೆ ನಾಲ್ಕು ದಶಕಗಳಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಇದನ್ನೂ ಓದಿ: ಹೊಲಕ್ಕೆ ನುಗ್ಗಿ ಅರಣ್ಯಾಧಿಕಾರಿಗಳ ಆಟಾಟೋಪ – ರೈತ ಮಹಿಳೆಯರ ಮೇಲೆ ಜೀಪ್ ಹತ್ತಿಸಲು ಯತ್ನ

    ಈಗ ಮತ್ತೆ ಈ ಅರಣ್ಯಾಧಿಕಾರಿಗಳು ರಾತ್ರೋರಾತ್ರಿ ರೈತರ ತೆಂಗಿನ ಮರಗಳನ್ನು ಕಡಿದು ಹಾಕಿ, ಅವರನ್ನ ಬಂಧಿಸಿ ಮನಸ್ಸೋ ಇಚ್ಛೆ ಮೈಮೇಲೆ ಬಾಸುಂಡೆ ಬರೋ ರೀತಿ ಥಳಿಸಿದ್ದಾರೆ. ಅರಣ್ಯ ಇಲಾಖೆ ಕಂದಾಯ ಭೂಮಿಗೆ ಬೇಲಿ ಹಾಕೋಕೆ ರೈತರ ಮೇಲೆ ದರ್ಪ ತೋರ್ತಿದ್ದಾರೆ. ಇದ್ರಿಂದ ರೋಸಿ ಹೋಗಿರೋ ರೈತರು, ಕೂಡಲೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮಧ್ಯ ಪ್ರವೇಶಸಿ ಈ ಜಾಗ ಯಾರದ್ದೆಂದು ಸ್ಪಷ್ಟಪಡಿಸಲಿ, ಇಲ್ಲವಾದ್ರೆ ನಮಗೆ ಇಚ್ಛಾಮರಣಕ್ಕೆ ಅನುಮತಿ ನೀಡಿಲಿ ಎಂದು ಆಗ್ರಹಿಸಿದ್ದಾರೆ.

    ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.

  • ಕಾರು, ಜೀಪ್ ಕದಿಯುತ್ತಿದ್ದ ಕಳ್ಳನನ್ನು ಮರಕ್ಕೆ ಕಟ್ಟಿ ಬಿತ್ತು ಸಖತ್ ಗೂಸಾ

    ಕಾರು, ಜೀಪ್ ಕದಿಯುತ್ತಿದ್ದ ಕಳ್ಳನನ್ನು ಮರಕ್ಕೆ ಕಟ್ಟಿ ಬಿತ್ತು ಸಖತ್ ಗೂಸಾ

    ವಿಜಯಪುರ: ಹಲವಾರು ದಿನಗಳಿಂದ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಕಳ್ಳತನ ಮಾಡುತ್ತಿದ್ದ ಯುವಕನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

    ಮುದ್ದೇಬಿಹಾಳ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಸಿಕಂದರ್ ನಾಯ್ಕೋಡಿ ಎಂಬ ಯುವಕ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಕಾರು, ಜೀಪ್ ಸೇರಿದಂತೆ ಇತರೆ ವಾಹನಗಳಲ್ಲಿನ ಸಾಮಗ್ರಿಗಳನ್ನು ಕದಿಯುತ್ತಿದ್ದ.

    ಹೀಗಾಗಿ ರವಿವಾರ ಅದೇ ರೀತಿ ಕದಿಯಲು ಬಂದಾಗ ರೆಡ್ ಹ್ಯಾಂಡ್ ಆಗಿ ಸಿಕಂದರ್ ಸ್ಥಳೀಯರಿಗೆ ಸಿಕ್ಕಿದ್ದಾನೆ. ಆಗ ಸ್ಥಳೀಯರು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಮುದ್ದೇಬಿಹಾಳ ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಟ್ರಕ್, ಜೀಪ್ ಡಿಕ್ಕಿ- ಒಂದೇ ಕುಟುಂಬದ 10 ಮಂದಿ ಸಾವು

    ಟ್ರಕ್, ಜೀಪ್ ಡಿಕ್ಕಿ- ಒಂದೇ ಕುಟುಂಬದ 10 ಮಂದಿ ಸಾವು

    ಅಹಮದಾಬಾದ್: ಟ್ರಕ್ ಹಾಗೂ ಜೀಪ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ 10 ಮಂದಿ ಸಾವನ್ನಪ್ಪಿರುವ ಘಟನೆ ಅಹಮದಾಬಾದ್‍ನಲ್ಲಿ ನಡೆದಿದೆ.

    ಇಂದು ಬೆಳಗ್ಗೆ 6 ಗಂಟೆ ವೇಳೆಯಲ್ಲಿ ಅಹಮದಾಬಾದ್‍ನ ಧಂಡುಕಾ- ಬರ್ವಾಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಜೀಪ್ ಟ್ರಕ್‍ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಡ್ರೈವರ್ ಕೂಡ ಸಾವನ್ನಪ್ಪಿದ್ದು, ಆತ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಗಂಟೆಗೆ 70 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಜೀಪ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‍ಗೆ ಡಿಕ್ಕಿಯಾಗಿದೆ. ಜೀಪ್ ಚಾಲಕ ಬ್ರೇಕ್ ಹಾಕಿದನಾದ್ರೂ ಎರಡೂ ವಾಹನಗಳು ವೇಗವಾಗಿ ಬರುತ್ತಿದ್ದರಿಂದ ಅಪಘಾತ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‍ವಿ ಅಸರಿ ಹೇಳಿದ್ದಾರೆ.

    ಮೃತರನ್ನು ಕಿರಣ್ ಕಮಲೇಶ್ ಶಾ(45), ಅವರ ಪುತ್ರಿ ಜಿನಾಲಿ(20), ಮಗ ನೆಮಿಲ್(17), ಶಶಿಕಾಂತ್(56) ರೀಟಾ(52), ಧಾರಾ(25) ಹಿತೇಶ್ ಶಾ(52) ವಿಭಾ(48), ನಂದೀಪ್(22) ಹಾಗೂ ವಡೋದರಾದ ಮತ್ತೋರ್ವ ಸಂಬಂಧಿಕರು ಎಂದು ಗುರುತಿಸಲಾಗಿದೆ.

    ಆಸ್ಪತ್ರೆ ವೈದ್ಯರು ಮೃತರ ಸಂಬಂಧಿಕರೊಬ್ಬರನ್ನು ಸಂಪರ್ಕಿಸಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

  • ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಶಿವಮೊಗ್ಗ: ಪುರಾಣ ಪ್ರಸಿದ್ಧ ಯಾತ್ರ ಸ್ಥಳ ಕೊಡಚಾದ್ರಿಗೆ ಹೋಗುವಾಗ ಜೀಪ್ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಮೃತ ಮಹಿಳೆಯನ್ನು ಕೇರಳ ತ್ರಿಶ್ಯೂರ್ ಮೂಲದ 38 ವರ್ಷದ ಸರಿತಾ ಎಂದು ಗುರುತಿಸಲಾಗಿದೆ. ಜೀಪಿನಲ್ಲಿ ಇದ್ದ ಇನ್ನಿತರರಿಗೆ ಗಾಯಗಳಾಗಿದ್ದು, ಅವರನ್ನು ಕುಂದಾಪುರ ಆಸ್ಪತ್ರೆಗೆ ಸೇರಿಸಲಾಗಿದೆ

    ಕೇರಳದಿಂದ ಬಂದಿದ್ದ ಎಂಟು ಜನ ಯಾತ್ರಿಕರು ಇದ್ದ ಈ ಜೀಪ್ ಕೊಡಚಾದ್ರಿಯ ದುರ್ಗಮ ಮಾರ್ಗದಲ್ಲಿ ಹತ್ತುವಾಗ ಆಕ್ಸಲ್ ಕಟ್ಟಾಗಿದೆ. ಇದರಿಂದಾಗಿ ಜೀಪ್ ನಿಯಂತ್ರಣ ತಪ್ಪಿದಾಗ ಮುಂದಿನ ಸೀಟಿನಲ್ಲಿ ಕೂತಿದ್ದ ಮಹಿಳೆ ಕೆಳಗೆ ಉರುಳಿ, ಅವರ ಮೇಲೆ ಜೀಪು ಪಲ್ಟಿಯಾಗಿ ಬಿದ್ದಿದೆ.

    ಕೊಲ್ಲೂರಿಗೆ ಬಂದು ಮೂಕಾಂಬಿಕೆ ದರ್ಶನ ಪಡೆದು ಅಲ್ಲಿಂದ ಹೊಸನಗರ ತಾಲೂಕಿನಲ್ಲಿರುವ ಕೊಡಚಾದ್ರಿಯ ತುದಿಯಲ್ಲಿ ಇರುವ ಸರ್ವಜ್ಞ ಪೀಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವುದು ವಾಡಿಕೆ.

    ಈ ಮಾರ್ಗ ಅತ್ಯಂತ ದುರ್ಗಮವಾಗಿದ್ದು, ಜೀಪು ಸೇರಿ ಯಾವುದೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೆ, ಅರಣ್ಯ ಇಲಾಖೆ ಜೀಪ್ ಮಾಲೀಕರಿಂದ ಹಣ ಕಟ್ಟಿಸಿಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಹಲವು ಬಾರಿ ಈ ರೀತಿಯ ಅವಘಡಗಳು ನಡೆದಿದ್ದರೂ, ಪ್ರಾಣಾಪಾಯ ಸಂಭವಿಸಿರಲಿಲ್ಲ. ಈಗ ಜೀಪ್ ಚಾಲಕರ ಹಣದಾಸೆ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಯಾತ್ರೆಗೆ ಬಂದಿದ್ದ ಮಹಿಳೆ ಜೀವ ಬಲಿ ಪಡೆದಿದೆ.

    ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಘಟನೆ ನಡೆದಿದೆ.