Tag: ಜೀಪ್

  • ಚಲಿಸುತ್ತಿದ್ದ ಜೀಪ್‍ನಿಂದ ಬಿದ್ದರೂ ಪವಾಡ ರೀತಿ ಬದಕುಳಿತು ಮಗು: ವಿಡಿಯೋ

    ಚಲಿಸುತ್ತಿದ್ದ ಜೀಪ್‍ನಿಂದ ಬಿದ್ದರೂ ಪವಾಡ ರೀತಿ ಬದಕುಳಿತು ಮಗು: ವಿಡಿಯೋ

    ತಿರುವನಂತಪುರಂ: ಚಲಿಸುತ್ತಿದ್ದ ಜೀಪ್‍ನಿಂದ ಕೆಳಗೆ ಬಿದ್ದ ಮಗುವೊಂದು ಪವಾಡ ರೀತಿ ಬದುಕುಳಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‍ನಲ್ಲಿ ನಡೆದಿದೆ.

    ಮುನ್ನಾರ್ ಅರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ರಸ್ತೆ ಮೇಲೆ ತೆರಳುತ್ತಿದ್ದ ಜೀಪ್‍ನಿಂದ ಏಕಾಏಕಿ ಒಂದು ವರ್ಷದ ಹೆಣ್ಣು ಮಗುವೊಂದು ಕೆಳಗೆ ಬಿದ್ದಿದೆ. ಆದರೆ ಪೋಷಕರು ಇದನ್ನು ಗಮನಿಸದೆ ಮುಂದೆ ಸಾಗಿದ್ದಾರೆ. ರಸ್ತೆಯ ಮೇಲೆ ಬಿದ್ದಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಬರಿಯಿಂದ ಅಂಬೆಗಾಲಿಡುತ್ತಾ ರಸ್ತೆ ಪಕ್ಕದಲ್ಲಿ ಬಂದು ಕುಳಿತಿತ್ತು.

    ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಸಹಾಯದಿಂದ ಮಗು ಮತ್ತೆ ಪೋಷಕರ ಮಡಿಲು ಸೇರಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಬ್ ಇನ್ಸ್‍ಸ್ಪೆಕ್ಟರ್ ಸಂತೋಷ್ ಕೆಎಂ ಅವರು, ಮಗು ಹಾಗೂ ಕುಟುಂಬಸ್ಥರು ತಮಿಳುನಾಡಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಕಲು ಹೋಗಿದ್ದರು. ಅಲ್ಲಿಂದ ಜೀಪ್‍ನಲ್ಲಿ ವಾಪಸ್ ಆಗುವಾಗ ಮಗು ಕಾಣಿಸಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಠಾಣೆಗೆ ಬಂದು ಮಗು ಕಾಣೆಯಾಗಿದೆ ಅಂತ ದೂರು ನೀಡಿದ್ದರು. ಅಷ್ಟೋತ್ತಿಗಾಗಲೇ ಮಗು ಬಿದ್ದಿದ್ದ ಮಾರ್ಗವಾಗಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಅಳುತ್ತಿದ್ದ ಮಗುವನ್ನು ಕಂಡು ಮಾಹಿತಿ ನೀಡಿದ್ದರು. ಈ ಮೂಲಕ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ ಎಂದು ತಿಳಿಸಿದ್ದಾರೆ.

    ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಮಗು ರಸ್ತೆಯ ಮೇಲೆ ಬಿದ್ದು, ಅಂಬೆಗಾಲಿಡುತ್ತಾ ರಸ್ತೆ ದಾಟಿರುವುದು ಕಂಡು ಬಂದಿದೆ. ಅದೃಷ್ಟವಶಾತ್ ಚಲಿಸುತ್ತಿದ್ದ ಜೀಪ್‍ನಿಂದ ಮಗು ಬಿದ್ದಿದ್ದರೂ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ತಲೆ ಹಾಗೂ ದೇಹದ ಮೇಲೆ ಸಣ್ಣಪುಟ್ಟು ಗಾಯಗಳಾಗಿವೆ ಎಂದು ಸಂತೋಷ್ ಎಂಕೆ ಹೇಳಿದ್ದಾರೆ.

  • ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

    ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

    ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಮಹೀಂದ್ರ ಜೀಪನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಶಾಲಾ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಕಾರು ಚಲಾಯಿಸಿದ ಯುವಕ ಸ್ಥಳೀಯ ನಿವಾಸಿಯಾಗಿದ್ದು, ತನ್ನ ಇತರೇ ಇಬ್ಬರು ಗೆಳೆಯರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ಮಹೀಂದ್ರ ಥಾರ್ ಜೀಪ್ ಚಲಾಯಿಸಿಕೊಂಡು ಬಂದಿದ್ದ. ಈ ವೇಳೆ ಜೀಪನ್ನು ನಿಯಂತ್ರಿಸಲು ವಿಫಲವಾಗಿದ್ದು, ರಸ್ತೆಬದಿ ನಿಲ್ಲಿಸಿದ್ದ ಬೈಕಿಗೆ ಡಿಕ್ಕಿ ಹೊಡೆದು ನಂತರ ಮಹಿಳೆಯೋರ್ವರಿಗೆ ಕಾರು ಡಿಕ್ಕಿಯಾಗಿದೆ. ಆ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜೀಪ್ ನಿಂತಿದೆ.

    ಪುಟ್ ಪಾತ್ ಮೇಲೆ ನಡೆದುಹೋಗುತ್ತಿದ್ದ ಮಹಿಳೆಗೆ ಜೀಪ್ ಡಿಕ್ಕಿ ಹೊಡೆದಿದ್ದು, ಕ್ಷಣ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಗಾಯಗೊಂಡ ಶಾಲಾ ವಿದ್ಯಾರ್ಥಿನಿ ತಂದೆಯೊಂದಿಗೆ ಶೂ ಖರೀದಿ ಮಾಡಲು ಆಗಮಿಸಿದ್ದರು. ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿನಿ ಸಿದ್ಧತೆ ನಡೆಸಿದ್ದರು ಎಂಬ ಮಾಹಿತಿ ಲಭಿಸಿದೆ.

    ಕಾರು ಡಿಕ್ಕಿಯಾದ ರಭಸಕ್ಕೆ ಕಾರಿನ ಅಡಿ ಸಿಕ್ಕ ಸ್ಕೂಟರ್ ನಜ್ಜುಗುಜ್ಜಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಹಾಗೂ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜೀಪನ್ನು ಸ್ಥಳದಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

  • ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ರಾಜ್‍ಕೋಟ್: ನಡುರಸ್ತೆಯಲ್ಲಿಯೇ ಜೀಪ್ ಸ್ಟಾರ್ಟಾಗದೆ ನಿಂತ ಪರಿಣಾಮ ಕೋಪಗೊಂಡ ವ್ಯಕ್ತಿ ತನ್ನ ಜೀಪಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಗುಜರಾತ್‍ನ ರಾಜಕೋಟ್‍ನಲ್ಲಿ ಘಟನೆ ನಡೆದಿದ್ದು, ಇಂದ್ರಜೀತ್ ಸಿಂಗ್ ತನ್ನ ಜೀಪಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ. ಈ ಎಲ್ಲಾ ದೃಶ್ಯಗಳನ್ನು ಆತನ ಸ್ನೇಹಿತ ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಟಿಕ್‍ಟಾಕ್‍ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ಇಂದ್ರಜೀತ್ ತನ್ನ ಇಷ್ಟದಂತೆ ಜೀಪ್‍ಗೆ ಹೊಸ ವಿನ್ಯಾಸಗಳನ್ನು ಮಾಡಿಸಿರುವುದು ಕಾಣಬಹುದಾಗಿದೆ. ಅಲ್ಲದೇ ಜೀಪ್‍ಗೆ ಬೆಂಕಿ ಹಚ್ಚಿ ವಿಡಿಯೋ ಮಾಡುತ್ತಿರುವ ಸ್ನೇಹಿತ ಕಡೆ ಇಂದ್ರಜೀತ್ ನಡೆದು ಬಂದಿದ್ದಾನೆ.

    https://twitter.com/dineshjoshi70/status/1168817621891870720

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇಂದ್ರಜೀತ್ ಸಿಂಗ್ ಸೇರಿದಂತೆ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರಿ ಆಸ್ತಿಗೆ ನಷ್ಟ ಉಂಟುಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಿದ್ದಾರೆ.

    ಈ ಘಟನೆ ಕುರಿತು ಮಾಹಿತಿ ನೀಡಿರುವ ರಾಜ್‍ಕೋಟ್ ಎಸ್‍ಪಿ ಎಎನ್ ರಾಥೋಡ್, ಜೀಪಿನ ಬ್ಯಾಟರಿ ಕೆಲಸ ಮಾಡದ ಕಾರಣ ಅದು ಸ್ಟಾರ್ಟ್ ಆಗಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಇಂದ್ರಜೀತ್ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಒಂದೇ ಜೀಪ್ ಎರಡು ಕಡೆ ಡಿಕ್ಕಿ- ಇಬ್ಬರು ಬೈಕ್ ಸವಾರರ ಸಾವು

    ಒಂದೇ ಜೀಪ್ ಎರಡು ಕಡೆ ಡಿಕ್ಕಿ- ಇಬ್ಬರು ಬೈಕ್ ಸವಾರರ ಸಾವು

    ದಾವಣಗೆರೆ: ಒಂದೇ ಜೀಪ್ ಪ್ರತ್ಯೇಕ ಎರಡು ಅಪಘಾತದಲ್ಲಿ ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದ ಘಟನೆ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿದೆ.

    ಮೊದಲನೇ ಅಪಘಾತದಲ್ಲಿ ಸಂತೋಷ್( 30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಎರಡನೇ ಅಪಘಾತದಲ್ಲಿ ಶಿವಮೊಗ್ಗ ಮೂಲಕ ಜ್ಞಾನೇಶ್ವರ (23) ಮೃತಪಟ್ಟಿದ್ದಾರೆ. ಜ್ಞಾನೇಶ್ವರ ಜೊತೆ ಇದ್ದ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಚನ್ನಗಿರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮೊದಲು ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಬಳಿ ರಭಸದಿಂದ ಬಂದ ಬುಲೇರೋ ಜೀಪ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಈ ಅಪಘಾತ ಮಾಡಿ ಗಾಬರಿಗೊಂಡ ಜೀಪ್ ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಮುಂದೆ ಹೋಗಿ ಚನ್ನಗಿರಿಯ ನವಚೇತನ ಶಾಲೆಯ ಮುಂಭಾಗ ಇನ್ನೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಇಬ್ಬರನ್ನು ಬಲಿ ಪಡೆದಿದ್ದಾನೆ.

    ಈ ಸಂಬಂಧ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜೀಪ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟೆಲಿಕಾಂ ಅಂಗಡಿಗೆ ನುಗ್ಗಿದ ಬೊಲೆರೋ- ಅಪಾಯದಿಂದ ಬಾಲಕ ಪಾರು

    ಟೆಲಿಕಾಂ ಅಂಗಡಿಗೆ ನುಗ್ಗಿದ ಬೊಲೆರೋ- ಅಪಾಯದಿಂದ ಬಾಲಕ ಪಾರು

    ಬೆಂಗಳೂರು: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೊಲೆರೋ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಟೆಲಿಕಾಂ ಅಂಗಡಿಗೆ ನುಗ್ಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸುಧಾನಗರದ ಸತ್ಯಂ ಹೋಟೆಲ್ ಬಳಿ ನಡೆದಿದೆ. ಜೀಪ್ ಚಾಲಕ ಪಾನಮತ್ತನಾಗಿ ಹಾಗೂ ಗಾಂಜಾ ನಶೆಯಲ್ಲಿದ್ದ ಎನ್ನಲಾಗಿದೆ.

    ಎಸ್.ಎಸ್ ಶೀಟ್‍ಗಳನ್ನು ತುಂಬಿಕೊಂಡು ಬಂದಿದ್ದ ಜೀಪ್, ರಸ್ತೆಯಿಂದ ಏಕಾಏಕಿ ಅಂಗಡಿಗೆ ನುಗ್ಗಿದೆ. ಪರಿಣಾಮ ಒಂದು ಬೈಕ್, ಸೈಕಲ್, ಕಾರು ಹಾಗೂ ಅಂಗಡಿ ಜಖಂ ಆಗಿದೆ. ಈ ಜೀಪ್ ಸುಮಾರು ಹೆದ್ದಾರಿ ರಸ್ತೆಯಿಂದ 150 ಮೀಟರ್ ಅಂಗಡಿಯ ಒಳಗೆ ನುಗ್ಗಿದೆ ಎನ್ನಲಾಗಿದೆ.

    ಅದೃಷ್ಟವಶಾತ್ ಅಲ್ಲಿಯೇ ಇದ್ದ ವೇಣುಗೋಪಾಲ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಮೈ ಮೇಲೆ ಜೀಪ್ ಹರಿದರು ಸಾವಿನಿಂದ ಪಾರಾದ ಅಮ್ಮ, ಮಗು

    ಮೈ ಮೇಲೆ ಜೀಪ್ ಹರಿದರು ಸಾವಿನಿಂದ ಪಾರಾದ ಅಮ್ಮ, ಮಗು

    ಮಂಗಳೂರು: ಯುವಕನೊಬ್ಬನ ಅಚಾತುರ್ಯದಿಂದ ಜೀಪ್ ಅಡ್ಡಾದಿಡ್ಡಿ ಚಲಿಸಿ, ಸರಣಿ ಅಪಘಾತಕ್ಕೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.

    ಜೀಪ್ ಚಾಲಕ ರಸ್ತೆ ಬದಿ ವಾಹನ ನಿಲ್ಲಿಸಿ, ಕೀ ಬಿಟ್ಟು ಹೋಗಿದ್ದೆ ಘಟನೆಗೆ ಪ್ರಮುಖ ಕಾರಣವಾಗಿದ್ದು, ಈ ವೇಳೆ ಸ್ಥಳದಲ್ಲಿ ಇದ್ದ ಯುವಕ ಕುತೂಹಲದಿಂದ ಜೀಪ್ ಸ್ಟಾರ್ಟ್ ಮಾಡಿದ್ದಾನೆ. ಆದರೆ ವಾಹನ ಗೇರ್ ನಲ್ಲೇ ಇದ್ದ ಪರಿಣಾಮ ಜೀಪು ಅಡ್ಡಾದಿಡ್ಡಿ ಚಲಿಸಿದೆ.

    ಎರಡು ಕಾರು, ನಾಲ್ಕು ಬೈಕಿಗೆ ಡಿಕ್ಕಿಯಾಗಿದ್ದ ಜೀಪು ಮಗು ಎತ್ತಿಕೊಂಡಿದ್ದ ಮಹಿಳೆಗೆ ಡಿಕ್ಕಿಯಾಗಿ ಬಳಿಕ ಮೈ ಮೇಲಿಂದ ಹರಿದು ಹೋಗಿದೆ. ಈ ವೇಳೆ ಸಮಯ ಪ್ರಜ್ಞೆ ತೋರಿದ ಮಹಿಳೆ ತನ್ನ ಕೈಲಿದ್ದ ಮಗುವನ್ನು ದೂರಕ್ಕೆ ತಳ್ಳಿದ್ದಾರೆ. ಪರಿಣಾಮ ಸಂಭವಿಸ ಬೇಕಾಗಿದ್ದ ದುರಂತ ತಪ್ಪಿದ್ದು, ಜೀಪು ಮಹಿಳೆಯ ಮೇಲೆ ಹರಿದು ಹೋಗಿದ್ದರು ಕೂಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಬಳಿಕ ಜೀಪು ನಿಂತಿದ್ದು, ಯುವಕನ ಈ ಕೃತ್ಯಕ್ಕೆ ಸ್ಥಳೀಯರು ಆಕ್ರೋಶಗೊಂಡು ಹೊಡೆತ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಮೈಸೂರು: ರೈತರ ಪ್ರತಿಭಟನೆಗೆ ಹೆದರಿ ಜೀಪ್ ಬಿಟ್ಟು ಅರಣ್ಯಾಧಿಕಾರಿ ಓಡಿ ಹೋಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಗುಪ್ಪೆ ವಲಯದಲ್ಲಿ ನಡೆದಿದೆ.

    ಮೇಟಿಗುಪ್ಪೆ ವ್ಯಾಪ್ತಿಯಲ್ಲಿ ಹುಲಿ ಕಾಟ ಹೆಚ್ಚಾಗಿದ್ದು, ಹುಲಿ ಹತ್ತಾರು ಹಸುಗಳ ತಿಂದು ಕೊಂದು ಹಾಕಿದೆ. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎ.ಸಿ.ಎಫ್ ಕೇಶವಗೌಡ ತಮ್ಮ ಸಿಬ್ಬಂದಿಯ ಜೊತೆ ಬಂದಿದ್ದಾರೆ.

    ಈ ವೇಳೆ ಸ್ಥಳದಲ್ಲೇ ಪರಿಹಾರ ಘೋಷಣೆ ಆಗಬೇಕು. ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅಧಿಕಾರಿ ನೀಡಿದ ಉತ್ತರದಿಂದ ಜನರು ಸಮಾಧಾನಗೊಂಡಿಲ್ಲ. ಬಳಿಕ ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಯ ಜೀಪಿಗೆ ಅಡ್ಡ ಕುಳಿತ್ತಿದ್ದಾರೆ. ಹೀಗಾಗಿ ಅಧಿಕಾರಿ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ಅರಣ್ಯಾಧಿಕಾರಿ ತಮ್ಮ ಜೀಪನ್ನು ಅಲ್ಲೆ ಬಿಟ್ಟು ಅಲ್ಲಿಂದ ಓಡಿಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯನ್ನ ಜೀಪ್ ಮೇಲೆ ಕಟ್ಟಿ, ನಗರ ಸುತ್ತಾಡಿಸಿ ಪೊಲೀಸರಿಂದ ಅಮಾನವೀಯ ಕೃತ್ಯ

    ಮಹಿಳೆಯನ್ನ ಜೀಪ್ ಮೇಲೆ ಕಟ್ಟಿ, ನಗರ ಸುತ್ತಾಡಿಸಿ ಪೊಲೀಸರಿಂದ ಅಮಾನವೀಯ ಕೃತ್ಯ

    ಚಂಡೀಗಡ: ಪೊಲೀಸರು 35 ವರ್ಷದ ಮಹಿಳೆಯನ್ನು ಆಕೆಯ ಗ್ರಾಮದಿಂದ ಬಲವಂತವಾಗಿ ಜೀಪ್ ಮೇಲೆ ಕಟ್ಟಿ ಹಾಕಿ ಇಡೀ ನಗರವನ್ನು ಸುತ್ತಾಡಿಸಿರುವ ಅಮಾನವೀಯ ಘಟನೆ ಪಂಜಾಬಿನ ಅಮೃತಸರ ಜಿಲ್ಲೆಯ ನಡೆದಿದೆ.

    ಪಂಜಾಬ್ ಪೊಲೀಸರ ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಹಿಳೆಯನ್ನು ಜೀಪ್ ಮೇಲೆ ಕಟ್ಟಿ ಹಾಕಿ ನಗರ ಸುತ್ತಾಡಿಸುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯ ಮಾವನನ್ನು ಬಂಧಿಸಲು ಹೋಗಿದ್ದಾಗ ಈ ರೀತಿಯಾಗಿ ಮಾಡಿದ್ದಾರೆ.

    ಪೊಲೀಸ್ ಜೀಪ್ ಮೇಲೆ ಮಹಿಳೆ ಮಲಗಿದ್ದು, ಆಕೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೇಳೆ ಮಹಿಳೆ ಜೀಪಿನಿಂದ ಕೆಳಗೆ ಬಿದ್ದಿದ್ದರಿಂದ ಆಕೆಯ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಮಹಿಳೆಯನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪೊಲೀಸರು ಮಹಿಳೆ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.

    ಅಮೃತಸರ ಜಿಲ್ಲೆಯ ಷಾಝಾಡಾ ಹಳ್ಳಿಯಲ್ಲಿ ಪೊಲೀಸ್ ಇಲಾಖೆಯ ತಂಡವು ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನಮ್ಮ ಮಾವ ಬಲ್ವಂತ್ ಸಿಂಗ್ ನನ್ನು ಬಂಧಿಸಲು ಮನೆಯ ಮೇಲೆ ದಾಳಿ ನಡೆಸಿದ್ದರು. ಆದರೆ ಮನೆಯಲ್ಲಿ ಮಾವ ಪತ್ತೆಯಾಗಿಲ್ಲ. ನಂತರ ಪೊಲೀಸರು ನನ್ನನ್ನು ವಾಹನದ ಮೇಲೆ ಕುಳಿತುಕೊಳ್ಳುವಂತೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಮಹಿಳೆ ಆರೋಪಿ ಏನು ಅಲ್ಲ. ಆಕೆಯ ಮಾವವನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕುಟುಂಬದವರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ವಾಹನದ ಮೇಲೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಆದ್ದರಿಂದ ಕುರಿತು ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ತೇಜಿಂದರ್ ಸಿಂಗ್ ಮೌರ್ ತಿಳಿಸಿದ್ದಾರೆ.

    ಈ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡುವವರೆಗೂ ನಾನು ಮಹಿಳೆಯ ಆರೋಪದ ಬಗ್ಗೆ ಮಾತನಾಡುವುದಿಲ್ಲ. ಪೋಲಿಸ್ ತಂಡ ಈಗ ನಮ್ಮನ್ನು ಸಂಪರ್ಕಿಸಿದೆ. ಪೋಲೀಸ್ ತಂಡದ ಮೇಲೆ ದಾಳಿ ಮಾಡಿ ಪೊಲೀಸ್ ವಾಹನವನ್ನು ಹಾನಿಗೊಳಿಸಿದ್ದಕ್ಕಾಗಿ ಆಕೆಯ ವಿರುದ್ಧ ದೂರು ದಾಖಲಾಗಿದೆ ಎಂದು ಸೂಪರಿಟೆಂಡೆಂಟ್ ಪೊಲೀಸ್ ಪರ್ಮಲ್ ಸಿಂಗ್ ಹೇಳಿದ್ದಾರೆ.

    ಇನ್ಸ್ ಪೆಕ್ಟರ್ ವಿಜಯ್ ಪ್ರತಾಪ್ ಸಿಂಗ್ ಈ ಆರೋಪಗಳನ್ನು ನಿರಾಕರಿಸಿ ಈ ಫಟನೆ ಕುರಿತು ತನಿಖೆ ನಡೆಸಲಾಗುವುದು ಮತ್ತು ಸತ್ಯಾಸತ್ಯತೆಯನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೀಪ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ!

    ಜೀಪ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ!

    ರಾಯಚೂರು: ಜೀಪ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ಮುದಗಲ್ ಬಳಿ ನಡೆದಿದೆ.

    22 ವರ್ಷದ ಲಿಂಗನಗೌಡ ಮೃತ ದುರ್ದೈವಿ. ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಸಹೋದರ ಆರ್‍ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿರುವ ಶರಣಗೌಡ ಬಯ್ಯಾಪುರ ಅವರ ಪುತ್ರನೇ ಮೃತ ಲಿಂಗನಗೌಡ. ಚಾಲಕನ ನಿಯಂತ್ರಣ ತಪ್ಪಿ ಲಿಂಗಸುಗೂರು ಮುದಗಲ್ ರಸ್ತೆಯಲ್ಲಿ ಜೀಪು ಪಲ್ಟಿಯಾಗಿದೆ.

    ಸದ್ಯ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬೊಲೆರೋ ಪಲ್ಟಿ – ಓರ್ವ ಸಾವು

    ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬೊಲೆರೋ ಪಲ್ಟಿ – ಓರ್ವ ಸಾವು

    ಬಾಗಲಕೋಟೆ: ರಸ್ತೆ ವಿಭಜಕಕ್ಕೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿ ನಿಂಗಪ್ಪ ಬೀರಗೊಂಡ (48) ಮೃತಪಟ್ಟ ವ್ಯಕ್ತಿ. ಇಳಕಲ್ ಪಟ್ಟಣದಿಂದ ವಿಜಯಪುರಕ್ಕೆ ಗ್ರಾನೈಟ್ ಸಾಗಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

    ಚಾಲಕನ ನಿಯಂತ್ರ ತಪ್ಪಿದ ಜೀಪ್, ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿಯೇ ನಿಂಗಪ್ಪ ಅವರು ಮೃತಪಟ್ಟಿದ್ದಾರೆ. ಚಾಲಕ ರವಿ ಹಾಗೂ ಸೇರಿದಂತೆ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಲೆರೋದಲ್ಲಿದ್ದ ಮೂವರು ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.