ಚಿಕ್ಕಮಗಳೂರು: ಮಲೆನಾಡಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಪಿಕಪ್ ಬಿದ್ದ ಪರಿಣಾಮ ಯುವಕ ಸಾವನ್ನಪ್ಪಿದ ಘಟನೆ ಕಳಸ (Kalasa) ತಾಲೂಕಿನ ಕೊಳಮಾಗೆ ಗ್ರಾಮದ ಬಳಿ ನಡೆದಿದೆ.
ಗಣಪತಿಕಟ್ಟೆ ನಿವಾಸಿ ಶಮಂತ್ (23) ಮೃತ ದುರ್ದೈವಿ. ಭದ್ರಾ ನದಿಯ (Bhadra River) ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಿಕಪ್ ಸಮೇತ ನದಿಗೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ಚಾಲಕ ಶಮಂತ್ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದ. ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಎಂದು ನಂಬಿದ್ದೇನೆ: ರಮ್ಯಾ
ಮೈಸೂರು: ಕೆಎಸ್‌ಆರ್‌ಟಿಸಿ (KSRTC) ಹಾಗೂ ಜೀಪ್ (Jeep) ನಡುವೆ ಭೀಕರ ಅಪಘಾತ (Accident) ನಡೆದ ಪರಿಣಾಮ ಚಾಲಕ ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು (Hunsur) ನಗರದಲ್ಲಿ ನಡೆದಿದೆ.
ಹುಣಸೂರು ನಗರದ ಅಯ್ಯಪ್ಪ ಸ್ವಾಮಿ ಬೆಟ್ಟದ ಬಳಿ ಘಟನೆ ಸಂಭವಿಸಿದ್ದು, ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೀಪ್ ಹೆಚ್‌ಡಿ ಕೋಟೆಯಿಂದ ಬರುತ್ತಿದ್ದ ಸಂದರ್ಭ ಅಪಘಾತ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದವರು ಕೂಲಿ ಕಾರ್ಮಿಕರು ಎಂಬ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಯಾಣಮಂಟಪದಲ್ಲೇ ಹೈಡ್ರಾಮಾ – ಹಸೆಮಣೆ ಏರಬೇಕಿದ್ದ ಸರ್ಕಾರಿ ನೌಕರ ಜೈಲುಪಾಲು
ಅದೇ ರೀತಿ ಮೈಸೂರಿನಲ್ಲಿ ಮತ್ತೊಂದು ಅಪಘಾತ ನಡೆದಿದೆ. ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಅಪಘಾತ ನಡೆದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಮೈಸೂರಿನ ಜಲದರ್ಶಿನಿ ಪ್ರವಾಸ ಮಂದಿರದ ಬಳಿ ಘಟನೆ ನಡೆದಿದೆ. ಹುಣಸೂರಿನಿಂದ ಮೈಸೂರಿಗೆ ಬರುತಿದ್ದ ಸಂದರ್ಭ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ತಪ್ಪಿಸುವ ಸಲುವಾಗಿ ಒಂದು ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದು, ಹಿಂಬದಿಯಿಂದ ಬಂದ ಮತ್ತೊಂದು ಬಸ್ ಈ ಬಸ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡೂ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಮುಖ, ಕೈಕಾಲುಗಳಿಗೆ ಗಾಯವಾಗಿದೆ. ಘಟನೆಯಿಂದ ಹುಣಸೂರು-ಮೈಸೂರು ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ಅಪಘತ – 50 ಮೀಟರ್ ಹಾರಿ ಬಿದ್ದ ಯುವತಿ ಗಂಭೀರ
ಕಲಬುರಗಿ: ಅಫಜಲಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಲಾರಿ ಹಾಗೂ ಜೀಪ್ (Lorry- Jeep Accident Kalaburagi) ನಡುವೆ ನಡೆದ ಅಪಘಾತದಲ್ಲಿ ಸಂತೋಷ್ (40), ಶಂಕರ್ (55), ಸಿದ್ದಮ್ಮ (50), ಹುಚ್ಚಪ್ಪ (05) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಪೂಜಾ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಮೃತರೆಲ್ಲರೂ ಅಫಜಲಪುರ ಮಾಡ್ಯಾಳ ಗ್ರಾಮದ ನಿವಾಸಿಗಳಾಗಿದ್ದಾರೆ. ಇವರು ಅಫಜಲಪುರ ಕಡೆಯಿಂದ ಮಲ್ಲಾಬಾದ್ ಕಡೆ ಜೀಪ್‍ನಲ್ಲಿ ಹೊರಟಿದ್ದರು. ಇತ್ತ ಕಲಬುರಗಿ ಕಡೆಯಿದ ಹೊರಟಿದ್ದ ಲಾರಿಗೆ ಈ ಜೀಪ್ ಡಿಕ್ಕಿ ಹೊಡೆದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 24 ಲಕ್ಷದ ಬೈಕಿನ ಸ್ಪೀಡ್ ತೋರಿಸಲು ಬಂದವನು ದುರ್ಮರಣ
ಗಾಂಧೀನಗರ: ಗುಜರಾತ್‌ನ (Gujarat) ಪಟಾನ್ ಜಿಲ್ಲೆಯ ವರಾಹಿ ಬಳಿ ನಿಂತಿದ್ದ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆ ಬೆನ್ನಲ್ಲೇ ಜೀಪ್ ಚಾಲಕ ಎಸ್ಕೇಪ್ ಆಗಿದ್ದಾನೆ.
ಜೀಪ್ ತುಂಬಾ ಹಳೆಯದಾಗಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹೊತ್ತೊಯ್ಯುತ್ತಿತ್ತು ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಹಣದ ದುರಾಸೆಯಿಂದ ಜನರನ್ನು ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಹೊರನಾಡಿಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಜೀಪ್(Jeep) ಹಳ್ಳಕ್ಕೆ ಬಿದ್ದ ಪರಿಣಾಮ ಚಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಳಸ(Kalasa) ತಾಲೂಕಿನಲ್ಲಿ ನಡೆದಿದೆ.
ಹೊಸಗದ್ದೆಯಿಂದ ಹೊರನಾಡಿಗೆ(Horanadu) ಹೋಗುವಾಗ ಮಂಗಳವಾರ ಸಂಜೆ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಜೀಪ್ ಪಲ್ಟಿಯಾದ ಬಳಿಕ ಹಳ್ಳದ ನೀರಿಗೆ ಬಿದ್ದಿದೆ.
ಜೀಪಿನಲ್ಲಿ ಧರ್ಮೇಂದ್ರ ಅವರ ಪತ್ನಿ ಅಕ್ಷತಾ(35) ಒಬ್ಬರೇ ಇದ್ದು, ಅವರೇ ಚಲಾಯಿಸುತ್ತಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೋಗಿ ಅಕ್ಷತಾ ಅವರನ್ನು ಮೇಲಕ್ಕೆ ಎತ್ತಿದರೂ ಕೂಡ ಅಷ್ಟರಲ್ಲಿ ಪ್ರಾಣ ಹೋಗಿತ್ತು. ಮೃತ ಅಕ್ಷತಾಗೆ 12 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೀದರ್‌ನಲ್ಲೊಬ್ಬ ಮಾದರಿ ರೈತ- 2 ಎಕರೆಯಲ್ಲಿ ಹೀರೇಕಾಯಿ ಬೆಳೆದು ಕಮಾಲ್
ಕಂದಕಕ್ಕೆ ಉರುಳಿದ ಕಾರು:
ಕೋಲಾರದಿಂದ(Kolara) ಧರ್ಮಸ್ಥಳಕ್ಕೆ(Dharmasthala) ಹೊರಟದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳದ ಕಂದಕಕ್ಕೆ ಬಿದ್ದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಮಲಯಮಾರುತ ಬಳಿ ನಡೆದಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪುತ್ತಿದ್ದಂತೆ ಕಾರು ಸುಮಾರು 20 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಕಾರಿನಲ್ಲಿ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.
ಎಲ್ಲರಿಗೂ ಸಣ್ಣ-ಪುಟ್ಟ ಗಾಯವಾಗಿದ್ದು ಎಲ್ಲರಿಗೂ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಕ್ರೇನ್ ಮೂಲಕ ಬಾವಿಯಲ್ಲಿ ಮುಳುಗಿದ್ದ ಜೀಪನ್ನು ಹೊರ ತೆಗೆಯಲಾಗಿದೆ. ಆಟೋದಲ್ಲಿದ್ದ 6 ಮಂದಿಗೆ ಗಾಯವಾದ ಹಿನ್ನೆಲೆ ಬಳ್ಳಾರಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ತೋರಣಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– 9 ಮಂದಿಗೆ ಗಾಯ, 8 ಜನರ ಸ್ಥಿತಿ ಗಂಭೀರ
– ಅದೃಷ್ಟವಶಾತ್ 8 ವರ್ಷದ ಬಾಲಕ ಪಾರು
ಚಿಕ್ಕಬಳ್ಳಾಪುರ: ಬರೋಬ್ಬರಿ 17 ಮಂದಿ ಪ್ರಯಾಣಿಸುತ್ತಿದ್ದ ಜೀಪ್ ಗೆ ಯಮಸ್ವರೂಪಿ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ 8 ಮಂದಿ ಬಲಿಯಾಗಿದ್ದಾರೆ. 8 ಮಂದಿ ಆಸ್ಪತ್ರೆ ಪಾಲಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಓರ್ವ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯನಕನಹಳ್ಳಿ ಗೇಟ್ ಬಳಿ ಅಪಘಾತ ನಡೆದಿದ್ದು, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮರಿನಾಯಕನಹಳ್ಳಿ ಗೇಟ್ ಬಳಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ವಿನಿಂದ ಚಿಂತಾಮಣಿ ನಗರಕ್ಕೆ ಕೆಎ-07 ಎಂ-2017 ನಂಬರಿನ ಜೀಪ್ ನಲ್ಲಿ ಚಾಲಕ ರಮೇಶ್ ಸೇರಿ 17 ಮಂದಿ ಪ್ರಯಾಣಿಸುತ್ತಿದ್ದರು. ಮರಿನಾಯಕನಹಳ್ಳಿ ಗೇಟ್ ಬಳಿ ಮತ್ತೊಂದು ವಾಹನ ಹಿಂದಿಕ್ಕುವ ಭರದಲ್ಲಿ ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗುತ್ತಿದ್ದ ಎನ್ ಎಲ್-01 ಎಡಿ-2376 ನಂಬರಿನ ಸಿಮೆಂಟ್ ಲಾರಿ ಜೀಪ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದು, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮತ್ತಿಬ್ಬರು ಮೃತರಾಗಿದ್ದಾರೆ. ಘಟನೆಯಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. 9 ರಲ್ಲಿ 8 ಜನರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಾಶತ್ ಓರ್ವ 8 ವರ್ಷದ ಬಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ- 6 ಮಂದಿ ಸಾವು, 11 ಜನರಿಗೆ ಗಂಭೀರ ಗಾಯ
ಮೃತರ ವಿವರ
ಮೃತರನ್ನು ಚಿಂತಾಮಣಿ ನಗರದ ಸೊಣ್ಣಶೆಟ್ಟಿಗಳ್ಳಿಯ ನಾರಾಯಣಸ್ವಾಮಿ(55), ಚಿಂತಾಮಣಿ ತಾಲೂಕಿನ ಗೋಪಲ್ಲಿಯ ಮುನಿರತ್ನಮ್ಮ(49), ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡುವಿನ ಜೀಪ್ ಚಾಲಕ ರಮೇಶ್(45), ಆಂಧ್ರ ಮೂಲದ ನಾರನ್ನಗಾರಪಲ್ಲಿಯ ವೆಂಕಟಲಕ್ಷ್ಮಮ್ಮ(59), ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ(49), ರಾಜಪ್ಪ(66), ಶ್ರೀನಿವಾಸಪುರ ಮೂಲದ ನಿಖಿಲ್(20) ಹಾಗೂ ಮೋನಿಕಾ(28) ಎಂದು ಗುರುತಿಸಲಾಗಿದೆ.
ಅಪಘಾತವಾದ ರಸ್ತೆಯಲ್ಲೇ ಹಾದು ಹೋದ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಹಾಗೂ ಮಾಲೂರು ಶಾಸಕ ನಂಜೇಗೌಡ ಸೇರಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಘಟನೆಗೆ ಆರ್‍ಟಿಒ ಹಾಗೂ ಪೊಲೀಸರ ನಿರ್ಲಕ್ಷವೇ ಕಾರಣ. ಅವರೇ ಹೊಣೆ ಹೊರಬೇಕಾಗುತ್ತೆ ಎಂದು ಆರೋಪಿಸಿದರು. ಇದನ್ನೂ ಓದಿ:ನಿಧಿ ಆಸೆಗೆ ಕಿಡಿಗೇಡಿಗಳಿಂದ ಪ್ರಾಚೀನ ಶಿವನ ದೇವಾಲಯ ಧ್ವಂಸ
ಆಪಘಾತದ ನಡುವೆ ಹಲವು ಪ್ರಶ್ನೆಗಳು
ವೈಟ್ ಬೋರ್ಡ್ ನಂಬರಿನ ವಾಹನದಲ್ಲಿ ಪ್ಯಾಸೆಂಜರ್ ಸಾಗಿಸಲು ಅನುಮತಿ ಕೊಟ್ಟವರ್ಯಾರು? 7-8 ಮಂದಿ ಪ್ರಯಾಣಿಸಬೇಕಾದ ಜೀಪಿನಲ್ಲಿ 17 ಮಂದಿ ಹೇಗೆ ಪ್ರಯಾಣಿಸುತ್ತಿದ್ದರು? ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ಸಾರಿಗೆ ಇಲಾಖೆ ಹಾಗೂ ಪೊಲೀಸರು ಏನ್ ಮಾಡುತ್ತಿದ್ದರು ಎಂಬುದು ಎಲ್ಲರ ಪಶ್ನೆಯಾಗಿದೆ. ಮತ್ತೊಂದೆಡೆ ಸಮರ್ಪಕ ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ. ಇದು ಕೂಡ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಘಾತಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಿದೆ. ಅಪಘಾತ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಎಸ್‍ಪಿ ಮಿಥುನ್ ಕುಮಾರ್ ಹಾಗೂ ಐಜಿಎಂ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ: ಲಾರಿ ಹಾಗೂ ಪ್ಯಾಸೆಂಜರ್ ಜೀಪ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. 11 ಜನರಿಗೆ ಗಂಭೀರ ಗಾಯಗಳಾಗಿವೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಪ್ಯಾಸೆಂಜರ್ ಜೀಪ್ ಗೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಎನ್‍ಎಲ್ 01, 2376 ನಂಬರ್ ನ ಲಾರಿ ಹಾಗೂ ಜೀಪ್ ಡಿಕ್ಕಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ, 11 ಜನರಿಗೆ ಗಂಭೀರ ಗಾಯಗಳಾಗಿವೆ. 11 ಮಂದಿಯಲ್ಲಿ 8 ಜನರನ್ನು ಹೆಚ್ಚಿನ ಚಿಕಿತ್ಸಗೆ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮೂವರಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಗೋಪಲ್ಲಿಯ ಮುನಿರತ್ಮಮ್ಮ(49), ರಾಯಲ್ಪಾಡುವಿನ ರಮೇಶ್ (ಡ್ರೈವರ್ 49), ಕೂಸಂದ್ರದ ನಿಖಿಲ್(22), ಸೊಣ್ಣಶೆಟ್ಟಿಹಳ್ಳಿಯ ನಾರಾಯಣ್ವಾಮಿ(55), ವೆಂಕಟಲಕ್ಷಮ್ಮ(45) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸೋಮಯಾಜಲಪಲ್ಲಿಯ ವೆಂಕಟಲಕ್ಷ್ಮಿ, ದಿಬ್ಬೂರಳ್ಳಿಯ ಯಶೋಧಮ್ಮ, ನಂಬೂರ್ಲಹಳ್ಳಿಯ ಸತ್ಯಪ್ಪ, ನಾಗದೇನಹಳ್ಳಿಯ ಮುನಿಸ್ವಾಮಿ, ರಾಯಲ್ಪಾಡುವಿನ ಮಂಜುನಾಥ್, ಕಿತ್ತಗನೂರಿನ ಅಂಬರೀಶ್ ಎಂದು ಗುರುತಿಸಲಾಗಿದೆ. ಇನ್ನೂ ಕೆಲವರ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು
ಜೀಪ್‍ನಲ್ಲಿ ಚಾಲಕ ಸೇರಿ ಒಟ್ಟು 17 ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಇಬ್ಬರು ಮಕ್ಕಳು, 6 ಜನ ಮಹಿಳೆಯರು, 9 ಜನ ಪುರುಷರಿದ್ದರು. ಜೀಪ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರಾಯಪಲ್‍ಪಾಡುನಿಂದ ಚಿಂತಾಮಣಿಗೆ ಬರುತ್ತಿತ್ತು. ಲಾರಿ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ. ಇದು ಪ್ಯಾಸೆಂಜರ್ ಜೀಪ್ ಆಗಿದ್ದು, ದಿನ ನಿತ್ಯ ಈ ಭಾಗದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿತ್ತು. ಘಟನಾ ಸ್ಥಳಕ್ಕೆ ಡಿವೈಎಸ್ಪಿ ವಾಸುದೇವ್ ಭೇಟಿ ನೀಡಿ, ಪರಶೀಲನೆ ನಡೆಸಿದ್ದಾರೆ.
ಮೃತರೆಲ್ಲರೂ ಶ್ರೀನಿವಾಸಪುರ ತಾಲೂಕಿನವರು ಎನ್ನಲಾಗಿದೆ. ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಮಾಲೂರು ಶಾಸಕ ನಂಜೇಗೌಡ ಘಟನಾ ಸ್ಥಳದಲ್ಲೇ ಇದ್ದು ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಅಸ್ಪತ್ರೆಗೆ ಕಳುಹಿಸಿದ್ದಾರೆ. ಮಾರ್ಗಮಧ್ಯೆ ತೆರಳುತ್ತಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಅಪಘಾತ ಕಂಡು ಸಹಾಯಕ್ಕೆ ನಿಂತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದಾರೆ.
ಬಳಿಕ ನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್ ಸಹ ಆಗಮಿಸಿದ್ದು, ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಹ ಸ್ಥಳದಲ್ಲೇ ಇದ್ದರು. ಇಬ್ಬರೂ ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಘಟನೆಗೆ ಆರ್‍ಟಿಓ ಅಧಿಕಾರಿಗಳು ಹಾಗೂ ಪೊಲೀಸರು ಹೊಣೆ. ಜೀಪ್‍ನಲ್ಲಿ 17 ಮಂದಿ ಪ್ರಯಾಣಿಸಲು ಅವಕಾಶ ಕೊಟ್ಟವರ್ಯಾರು? ಜೀಪ್ ವೈಟ್ ಬೋರ್ಡ್ ಆಗಿದ್ದು, ಪ್ಯಾಸೆಂಜರ್ ಸಾಗಿಸಲು ಅವಕಾಶ ಇದೆಯೇ? ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ಮೃತರ ಕುಟುಂಬ ಹಾಗೂ ಗಾಯಾಳುಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಹುಬ್ಬಳ್ಳಿ: ಪೊಲೀಸ್ ಜೀಪಿಗೇ ಇನ್‍ಸ್ಪೆಕ್ಟರ್ ದಂಡ ವಿಧಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಈ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಚೆನ್ನಮ್ಮ ಸರ್ಕಲ್ ಬಳಿ ಘಟನೆ ನಡೆದಿದ್ದು, ಬೆಳಗಾವಿಯ ಕೆಎಸ್‍ಆರ್ ಪಿ ವಾಹನದಲ್ಲಿ ಸಾಮಾಜಿಕ ಅಂತರ ಇಲ್ಲದೇ ಸಿಬ್ಬಂದಿ ಪ್ರಯಾಣ ಮಾಡುತ್ತಿದ್ದರು. ಈ ಹಿನ್ನಲೆ ಪೊಲೀಸ್ ಜೀಪ್ ತಡೆದು ಇನ್‍ಸ್ಪೆಕ್ಟರ್ ರವಿಚಂದ್ರ ಅವರು ದಂಡ ವಿಧಿಸಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪೊಲೀಸರು ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮಾಡುತ್ತಿದ್ದು, ಕೊರೊನಾ ನಿಯಮ ಪಾಲಿಸದ ಯಾವುದೇ ವಾಹನವನ್ನು ಬಿಡುತ್ತಿಲ್ಲ.
ಇದೀಗ ಪೊಲೀಸರು ಸಾಮಾಜಿಕ ಅಂತರ ಕಾಪಾಡದೆ ಪೊಲೀಸ್ ಜೀಪ್‍ನಲ್ಲಿ ಪ್ರಯಾಣಿಸುತ್ತಿದ್ದಾಗ 250 ರೂ. ದಂಡ ವಿಧಿಸುವ ಮೂಲಕ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಬಿಸಿ ಮುಟ್ಟಿಸಿದ್ದಾರೆ. ಈ ಕುರಿತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 2,100 ಪೊಲೀಸರಿಗೆ 2ನೇ ಅಲೆಯಲ್ಲಿ ಸೋಂಕು ತಗುಲಿದೆ. ಈ ಪೈಕಿ 23 ಪೊಲೀಸ್ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಷ್ಟಾದರೂ ಪೊಲೀಸ್ ಸಿಬ್ಬಂದಿ ಸಹ ನಿರ್ಲಕ್ಷ್ಯ ವಹಿಸಿದ್ದು, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಅಲ್ಲದೆ ಸರಿಯಾಗಿ ಮಾಸ್ಕ್ ಧರಿಸುತ್ತಿಲ್ಲ.
ಮಡಿಕೇರಿ: ಮಡಿಕೇರಿ-ವಿರಾಜಪೇಟೆ ರಸ್ತೆಯ ಬೇತ್ರಿ ಬಳಿ ಖಾಸಗಿ ಬಸ್ ಹಾಗೂ ಜೀಪ್ ನಡುವೆ ಅಪಘಾತ ನಡೆದಿದ್ದು, ವೃದ್ಧೆಯೊಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.
ದಿವಂಗತ ಮುಕ್ಕಾಟಿ ಪೂವಯ್ಯ ಅವರ ಪತ್ನಿ ಲಕ್ಷ್ಮಿ (70) ಮೃತಪಟ್ಟವರು. ಅವರ ಪುತ್ರ, ನಿವೃತ್ತ ಯೋಧ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿರಾಜಪೇಟೆ ಕಡೆಯಿಂದ ಖಾಸಗಿ ಬಸ್ ಮಡಿಕೇರಿಯತ್ತ ಬರುತ್ತಿತ್ತು. ಮಡಿಕೇರಿ ಕಡೆಯಿಂದ, ಜೀಪು ವಿರಾಜಪೇಟೆ ಕಡೆ ತೆರಳುತ್ತಿತ್ತು. ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ರಸ್ತೆ ಬದಿಯ ವಿದ್ಯುತ್ ಕಂಬವೂ ಮುರಿದು ಬಿದ್ದಿದೆ.
ಘಟನೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.