Tag: ಜೀಪು

  • ರಸ್ತೆಗೆ ಬಂದ ಪ್ರವಾಹದ ನೀರಿನಲ್ಲಿ ಸಿಲುಕಿದ ಜೀಪ್- ಸ್ಥಳೀಯರಿಂದ ರಕ್ಷಣೆ

    ರಸ್ತೆಗೆ ಬಂದ ಪ್ರವಾಹದ ನೀರಿನಲ್ಲಿ ಸಿಲುಕಿದ ಜೀಪ್- ಸ್ಥಳೀಯರಿಂದ ರಕ್ಷಣೆ

    ಮಡಿಕೇರಿ: ಕಾವೇರಿ ನೀರಿನ ಪ್ರವಾಹದಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ಜೀಪೊಂದು ಸಿಲುಕಿಕೊಂಡ ಘಟನೆ ಮಡಿಕೇರಿ ತಾಲೂಕಿನ ನಾಪೋಕ್ಲು ಹೊದ್ದೂರು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ನಡೆದಿದೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಕಡೆಯಿಂದ ಅಯ್ಯಂಗೇರಿ ಗ್ರಾಮಕ್ಕೆ ನೀಲಿ ಬಣ್ಣದ ಜೀಪಿನಲ್ಲಿ ಮಹಿಳೆ ಸೇರಿದಂತೆ ಮೂವರು ಸಂಚರಿಸುತ್ತಿದ್ದರು. ರಸ್ತೆಯಲ್ಲಿ ನೀರಿನ ಮಟ್ಟ ಕಡಿಮೆ ಇರಬಹುದು ಎಂದು ಭಾವಿಸಿದ ಚಾಲಕ ರಸ್ತೆಯನ್ನು ದಾಟಲು ಪ್ರಯತ್ನಿಸಿದ್ದಾನೆ. ಆದರೆ ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿದ್ದಂತೆ ಜೀಪಿನ ಅರ್ಧದಷ್ಟು ಭಾಗಕ್ಕೆ ನೀರು ಆವೃತವಾಗಿ, ರಸ್ತೆ ಮಧ್ಯದಲ್ಲಿಯೇ ಜೀಪ್ ನಿಂತು ಹೋಗಿದೆ. ಇದರಿಂದ ಜೀಪಿನಲ್ಲಿ ಇದ್ದವರು ಭಯಭೀತರಾಗಿದ್ದಾರೆ. ಇದನ್ನೂ ಓದಿ: ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ – ಸಾವಿನ ದವಡೆಯಲ್ಲಿ ಮೋಜು-ಮಸ್ತಿ

    ಇದೇ ವೇಳೆ ಪ್ರವಾಹ ವೀಕ್ಷಣೆಗೆಂದು ಸ್ಥಳಕ್ಕೆ ಬಂದ ಕೊಟ್ಟಮುಡಿ ನಿವಾಸಿಗಳಾದ ಮೊಹಮ್ಮದ್ ಹಾಗೂ ಅಬ್ದುಲ್ಲಾ ಅವರಿಗೆ ರಸ್ತೆ ಮಧ್ಯೆ ಪ್ರವಾಹದ ನೀರಿನಲ್ಲಿ ಜೀಪು ನಿಂತಿರುವುದು ಗೋಚರಿಸಿದ್ದಾರೆ. ಕೂಡಲೇ ಸ್ವಗ್ರಾಮದ ಜನರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಸಹಾಯದಿಂದ ಜೀಪನ್ನು ನೀರಿನಿಂದ ಎಳೆದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ

    Live Tv
    [brid partner=56869869 player=32851 video=960834 autoplay=true]

  • ಅಡ್ಡಾದಿಡ್ಡಿ ನುಗ್ಗಿದ ಜೀಪ್ – ಬೈಕಿಗೆ ಡಿಕ್ಕಿ, ತಂತಿಯಲ್ಲಿ ನೇತಾಡಿದ ವಿದ್ಯುತ್ ಕಂಬ

    ಅಡ್ಡಾದಿಡ್ಡಿ ನುಗ್ಗಿದ ಜೀಪ್ – ಬೈಕಿಗೆ ಡಿಕ್ಕಿ, ತಂತಿಯಲ್ಲಿ ನೇತಾಡಿದ ವಿದ್ಯುತ್ ಕಂಬ

    ಮಡಿಕೇರಿ: ಜೀಪಿನ ಬ್ರೇಕ್ ಫೇಲ್ ಆದ ಪರಿಣಾಮ ಜೀಪು ಅಡ್ಡಾ ದಿಡ್ಡಿ ನುಗ್ಗಿ ಬೈಕ್ ಮತ್ತು ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ.

    ವಿರಾಜಪೇಟೆ ಪಟ್ಟಣದ ನಿವಾಸಿ ವಾಸು ಜೀಪ್ ಚಾಲನೆ ಮಾಡುತ್ತಿದ್ದಾಗ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಜೀಪು ಚಾಲಕನ ನಿಯಂತ್ರಣಕ್ಕೆ ಸಿಗದೆ, ಅಡ್ಡಾದಿಡ್ಡಿ ನುಗ್ಗಿದೆ. ಈ ವೇಳೆ ಪಕ್ಕದಲ್ಲಿ ಬರುತ್ತಿದ್ದ ಬೈಕಿಗೆ ಜೀಪು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ಹಸೈನರ್ ಉರುಳಿ ಬಿದ್ದಿದ್ದು, ಚಿಕ್ಕ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಗಾಯಗೊಂಡಿರುವ ಬೈಕ್ ಚಾಲಕನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕಿಗೆ ಡಿಕ್ಕಿ ಹೊಡೆದ ಜೀಪು ಅಷ್ಟಕ್ಕೆ ನಿಲ್ಲದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ತುಂಡಾಗಿ ತಂತಿಯಲ್ಲೇ ನೇತಾಡಿದೆ. ಅಲ್ಲಿಂದಲೂ ಮುಂದೆ ನುಗ್ಗಿದ ಜೀಪು ಮತ್ತೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿ ನಿಂತಿದೆ. ಆದರೆ ಜೀಪು ಚಾಲಕ ವಾಸು ಚಿಕ್ಕಪುಟ್ಟ ಗಾಯಗಳೊಂದಿಗೆ ಗ್ರೇಟ್ ಎಸ್ಕೇಪ್ ಆಗಿದ್ದಾರೆ.

    ಘಟನೆ ಸಂಬಂಧ ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀಪು ಅಡ್ಡಾ ದಿಡ್ಡಿ ನುಗ್ಗಿ ಬೈಕ್ ಗೆ ಡಿಕ್ಕಿ ಹೊಡೆದಿರುವ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.