Tag: ಜೀನ್ಸ್

  • ನಾರಿಮಣಿಯರ ಮನಗೆದ್ದ ಕಲರ್ ಜೀನ್ಸ್ ಪ್ಯಾಂಟ್- ಹೆಚ್ಚಾಯ್ತು ಬೇಡಿಕೆ

    ನಾರಿಮಣಿಯರ ಮನಗೆದ್ದ ಕಲರ್ ಜೀನ್ಸ್ ಪ್ಯಾಂಟ್- ಹೆಚ್ಚಾಯ್ತು ಬೇಡಿಕೆ

    ಬ್ಲ್ಯಾಕ್, ಬ್ಲ್ಯೂ ಸೇರಿದಂತೆ ನಾಲ್ಕೈದು ಕಲರ್‌ಗಳಿಗೆ ಮಾತ್ರ ಸೀಮಿತವಾಗಿದ್ದ, ಕಲರ್ ಜೀನ್ಸ್ ಪ್ಯಾಂಟ್‌ಗಳು ಇದೀಗ ಕಾಲೇಜು ಹುಡುಗಿಯರನ್ನು ಆಕರ್ಷಿಸುತ್ತಿವೆ. ಕೆಪ್ರಿಸ್, ಲೋ -ವೇಸ್ಟ್, ಸ್ಕಿನ್ನಿ, ಸ್ಲಿಮ್‌ಫಿಟ್, ಕಾರ್ಗೋಸ್‌ನ ಕಲರ್ ಜೀನ್ಸ್ ಪ್ಯಾಂಟ್‌ಗಳು (Jeans Pant) ನಾನಾ ಬಣ್ಣಗಳಲ್ಲಿ ಬಿಡುಗಡೆಗೊಂಡಿವೆ. ಇನ್ನು, ಇವುಗಳಲ್ಲಿ ಬೂಟ್ ಕಟ್, ನ್ಯಾರೋ ಕಟ್, ಸ್ಟೈಟ್ ಕಟ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಇದನ್ನೂ ಓದಿ:ತಿಮ್ಮಪ್ಪನ ದೇವಸ್ಥಾನದಲ್ಲಿ ಮದುವೆ ಸುದ್ದಿ ಖಚಿತಪಡಿಸಿದ ಕೀರ್ತಿ ಸುರೇಶ್

    ಕ್ಯಾಶುವಲ್ ಲುಕ್‌ಗಾಗಿ ಜೀನ್ಸ್ ಪ್ಯಾಂಟ್ ಧರಿಸುವವರು ಹೆಚ್ಚು. ಕಾರಣ, ಈ ಪ್ಯಾಂಟ್‌ಗಳಿಗೆ ಶಾರ್ಟ್ ಕ್ರಾಪ್ ಟಾಪ್‌ನಿಂದಿಡಿದು, ಪುಲ್ ಓವರ್, ಜಾಕೆಟ್ಸ್, ಸ್ವೆಟರ್ಸ್, ಸ್ಕಾರ್ಫ್, ಸ್ಟೊಲ್ಸ್, ಮಫ್ಲರ್ಸ್, ಕೋಟ್, ಕುರ್ತಾ ಹೀಗೆ ಎಲ್ಲವನ್ನು ಮಿಕ್ಸ್ ಮ್ಯಾಚ್ ಮಾಡಲು ಸಾಧ್ಯವಾಗುವುದು. ಇನ್ನು, ಇದೀಗ ಟ್ರೆಂಡಿಯಾಗಿರುವ ಕಲರ್ ಜೀನ್ಸ್ ಪ್ಯಾಂಟ್‌ಗಳಿಗಂತೂ ನಾನಾ ಬಗೆಯಲ್ಲಿ ಮ್ಯಾಚ್ ಮಾಡಿ ಧರಿಸಬಹುದು. ಇದು ನಯಾ ಲುಕ್ ನೀಡುತ್ತದೆ.

    ಇಂದು ಕಲರ್ ಜೀನ್ಸ್ ಪ್ಯಾಂಟ್‌ಗಳು ಯಾವ ಮಟ್ಟಿಗೆ ಜಾದೂ ಮಾಡಿವೆ ಎಂದರೆ, ಬೆಂಗಳೂರು ಹುಡುಗಿಯರು ಮಾತ್ರವಲ್ಲ, ಚಿಕ್ಕ-ಪುಟ್ಟ ಪಟ್ಟಣಗಳ ಟೀನೇಜ್ ಹುಡುಗಿಯರು, ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಕೂಡ ಧರಿಸಲಾರಂಭಿಸಿದ್ದಾರೆ.

    ಪಾಸ್ಟೆಲ್ ಶೆಡ್ಸ್‌ನವು ಹಳದಿ, ಮಿಂಟ್ ಗ್ರೀನ್, ಬೂದು, ತಿಳಿ ಗುಲಾಬಿ, ಕೆಂಪು, ನಿಯಾನ್ ವರ್ಣದ ಜೀನ್ಸ್ ಪ್ಯಾಂಟ್‌ಗಳು ಇಂದು ಬೇಡಿಕೆ ಪಡೆದುಕೊಂಡಿವೆ. ಮೊದಲೆಲ್ಲಾ ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳಲ್ಲಿ ಮಾತ್ರ ಲಭ್ಯವಿದ್ದ ಇವು ಇದೀಗ ಲೋಕಲ್ ಬ್ರಾಂಡ್‌ಗಳಲ್ಲೂ ದೊರೆಯುತ್ತಿವೆ.

    ಫ್ಯಾಷನ್ ಟಿಪ್ಸ್:

    • ಬ್ರಾಂಡೆಡ್ ಕಲರ್ ಜೀನ್ಸ್ ಪ್ಯಾಂಟ್‌ಗೆ ಆದ್ಯತೆ ನೀಡಿ. ಯಾಕೆಂದರೆ, ಇವುಗಳ ಬಣ್ಣ ಮಾಸದು.
    • ಕಳಪೆ ಗುಣಮಟ್ಟದ ಕಲರ್ ಜೀನ್ಸ್ ಪ್ಯಾಂಟ್ ಧರಿಸುವುದರಿಂದ ಚರ್ಮ ಅಲರ್ಜಿಗೆ ಒಳಗಾಗಬಹುದು.
    • ಬ್ಲಾಕ್, ಡಾರ್ಕ್ ನೇವಿ ಬಣ್ಣದ ಪ್ಯಾಂಟ್‌ಗಳು ಕುಳ್ಳಗಿರುವ ಕಾಲುಗಳನ್ನು ಉದ್ದನಾಗಿರುವಂತೆ ಬಿಂಬಿಸುತ್ತವೆ.
    • ರೆಗ್ಯುಲರ್ ರೈಸ್ ಕಲರ್ ಜೀನ್ಸ್ ಪ್ಯಾಂಟ್ ಬೆಸ್ಟ್ ಆಯ್ಕೆ.
    • ಕಚೇರಿಗೆ ಬಿಗಿಯಾದ ಕಲರ್ ಕಲರ್ ಜೀನ್ಸ್ ಆಯ್ಕೆ ಬೇಡ. ಕಾಲು ಸೆಳೆತ ಉಂಟಾಗಬಹುದು.

  • ಸೀರೆ ಉಟ್ಟರೆ ಬರುತ್ತಂತೆ ಕ್ಯಾನ್ಸರ್! – ವೃಷಣ ಕ್ಯಾನ್ಸರ್‌ ಹೇಗೆ ಬರುತ್ತೆ? ಸಮಸ್ಯೆಗಳಿಂದ ಪಾರಾಗುವುದು ಹೇಗೆ?

    ಸೀರೆ ಉಟ್ಟರೆ ಬರುತ್ತಂತೆ ಕ್ಯಾನ್ಸರ್! – ವೃಷಣ ಕ್ಯಾನ್ಸರ್‌ ಹೇಗೆ ಬರುತ್ತೆ? ಸಮಸ್ಯೆಗಳಿಂದ ಪಾರಾಗುವುದು ಹೇಗೆ?

    ಭಾರತದಲ್ಲಿ ಮಹಿಳೆಯರಲ್ಲಿ ಅತ್ಯಂತ ಜನಪ್ರಿಯ ಉಡುಪುಗಳಲ್ಲಿ ಸೀರೆಯನ್ನೂ ಸೇರಿಸಬಹುದು. ಫ್ಯಾಶನ್ ಓಟದಲ್ಲಿ ಪ್ರತಿದಿನ ಹೊಸ ಹೊಸ ಟ್ರೆಂಡ್‌ಗಳು ಜನಪ್ರಿಯವಾಗುತ್ತಿವೆ. ಆದರೆ ಸೀರೆಗಳು ಇನ್ನೂ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿವೆ. ಈ ನಡುವೆ ಸೀರೆ ಉಟ್ಟರೆ ಕ್ಯಾನ್ಸರ್ ಬರಬಹುದು ಎಂದು ಯಾರಾದರೂ ಹೇಳಿದರೆ ನೀವು ನಂಬಲ್ಲ. ಆದರೆ ಇತ್ತೀಚಿನ ಸಂಶೋಧನೆಯೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.

    ಸೀರೆ ಉಟ್ಟರೆ ಕ್ಯಾನ್ಸರ್!
    ಕ್ಯಾನ್ಸರ್ ಎಷ್ಟು ಅಪಾಯಕಾರಿ ಕಾಯಿಲೆ ಎಂದರೆ ಅದರ ಹೆಸರನ್ನು ಕೇಳಿದಾಗಲೇ ಒಂದು ರೀತಿಯ ಭಯ ಅಥವಾ ಗಾಬರಿ ನಮ್ಮಲ್ಲಿ ಹುಟ್ಟುತ್ತದೆ. ಆದರೆ ಈ ರೋಗವು ಯಾವುದೇ ಉಡುಗೆ ಅಥವಾ ಉಡುಪಿನಿಂದ ಬರುತ್ತೆ ಅಂದರೆ ನಂಬಲು ಅಸಾಧ್ಯ. ಇದು ಸ್ವಲ್ಪ ವಿಚಿತ್ರವೆನಿಸುತ್ತದೆ. ಆದರೆ ಮುಂಬೈನ ಆರ್‌ಎನ್ ಕೂಪರ್ ಆಸ್ಪತ್ರೆಯಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ಇದೇ ವಿಷಯ ಬೆಳಕಿಗೆ ಬಂದಿದೆ. ಈ ಆಸ್ಪತ್ರೆಯಲ್ಲಿ 68 ವರ್ಷದ ಮಹಿಳೆಯೊಬ್ಬರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಮಹಿಳೆ ಕಳೆದ 13 ವರ್ಷಗಳಿಂದ ಸೀರೆ ಉಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಕ್ಯಾನ್ಸರ್ ಗೆ ʼSaree Cancerʼ ಎಂದು ಹೆಸರಿಡಲಾಗಿದೆ. ಈ ವಿಚಾರ ಓದಿದಾಗ ನಿಮ್ಮಲ್ಲಿ ಸೀರೆ ಉಡುವುದಕ್ಕೂ ಕ್ಯಾನ್ಸರ್‌ಗೂ ಏನು ಸಂಬಂಧ ಎಂಬ ಕುತೂಹಲದ ಪ್ರಶ್ನೆ ಹುಟ್ಟಿಕೊಂಡಿರಬಹುದು. ಹಾಗಿದ್ರೆ ಈ ಕ್ಯಾನ್ಸರ್‌ ಹೇಗೆ ಬರುತ್ತದೆ ಎಂಬುದನ್ನು ನೋಡೋಣ.

    ಈ ಕ್ಯಾನ್ಸರ್‌ ಹೇಗೆ ಬರುತ್ತದೆ..?:
    ವಾಸ್ತವವಾಗಿ ಯಾವುದೇ ಬಟ್ಟೆಯನ್ನು ಒಂದೇ ಸ್ಥಳದಲ್ಲಿ ಬಿಗಿಯಾಗಿ ಧರಿಸುವುದರಿಂದ ಅಲ್ಲಿ ಒತ್ತಡ ಉಂಟಾಗುತ್ತದೆ. ಕೆಲವೊಮ್ಮೆ ಈ ಬಟ್ಟೆಯು ಚರ್ಮವನ್ನು ಸಹ ಸುಲಿಯುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಚರ್ಮದ ಮೇಲೆ ಗುರುತುಗಳು ಕಾಣಿಸಿಕೊಳ್ಳುತ್ತವೆ. ಅತಿಯಾದ ಶಾಖ, ತೇವಾಂಶ ಮತ್ತು ಶುಚಿತ್ವದ ಕೊರತೆಯಿಂದಾಗಿ ಸಮಸ್ಯೆಗಳು ಹೆಚ್ಚಾಗಬಹುದು. ಈ ಸಂದರ್ಭಗಳು ಕ್ಯಾನ್ಸರ್ ಗೆ ಕಾರಣವಾಗಬಹುದು. ವೈದ್ಯಕೀಯ ಭಾಷೆಯಲ್ಲಿ, ಈ ಚರ್ಮದ ಕೋಶಗಳನ್ನು ಕಾರ್ಸಿನೋಮ ಎಂದು ಕರೆಯಲಾಗುತ್ತದೆ. ಅದಾಗ್ಯೂ ಈ ರೋಗದ ಬಗ್ಗೆ ಚಿಂತಿಸಬೇಕಾಗಿಲ್ಲ. ಸರಿಯಾದ ಶುಚಿತ್ವವನ್ನು ಗಮನಿಸಿದರೆ ಇದನ್ನು ತಪ್ಪಿಸಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಈ ಕಾಯಿಲೆಯಿಂದ ಪಾರಾಗಬಹುದು. ಈ ರೋಗವನ್ನು ತಪ್ಪಿಸಲು ನೀವು ಸೀರೆ ಉಡುವುದನ್ನು ಬಿಡುವ ಅಗತ್ಯವಿಲ್ಲ. ಬದಲಾಗಿ ಅದನ್ನು ಧರಿಸುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಅದನ್ನು ತುಂಬಾ ಬಿಗಿಯಾಗಿ ಕಟ್ಟದಿರುವುದರಿಂದ ಪಾರಾಗಬಹುದು.

    ಬಿಹಾರ, ಜಾರ್ಖಂಡ್‌ನಲ್ಲಿ ವೇಗವಾಗಿ ಹರಡುತ್ತಿದೆ:
    ಹೆಚ್ಚು ಬಿಸಿಲು ಇರುವ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಲ್ಲಿ ಇದರ ಅಪಾಯ ಹೆಚ್ಚು. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಈ ರೋಗವು ಮಹಿಳೆಯರಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರು ವರ್ಷವಿಡೀ ಸೀರೆ ಉಡುತ್ತಾರೆ. ಸೊಂಟದ ಮೇಲೆ ಸೀರೆ ಕಟ್ಟಿಕೊಂಡ ಗುರುತುಗಳಿವೆ. ಪೆಟ್ಟಿಕೋಟಿನೊಂದಿಗೆ ಸೊಂಟದ ಮೇಲೆ ಧರಿಸಿರುವ ಹತ್ತಿ ನಾದದಿಂದ ಈ ಗುರುತು ಉಂಟಾಗುತ್ತದೆ. ಇದು ಸೊಂಟವನ್ನು ಉಜ್ಜುತ್ತದೆ. ಈ ಕಾರಣದಿಂದಾಗಿ ಸೊಂಟದ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳು ಅಂತಿಮವಾಗಿ ಚರ್ಮದ ಕ್ಯಾನ್ಸರ್ ಆಗಿ ಬದಲಾಗುತ್ತದೆ ಎಂದು ತಜ್ಞ ವೈದ್ಯರೊಬ್ಬರು ವಿವರಿಸಿದ್ದಾರೆ.

    ಕಾಂಗ್ರಿ ಕ್ಯಾನ್ಸರ್:
    ಅದೇ ರೀತಿ ಕಾಶ್ಮೀರದಲ್ಲಿ ಕಾಂಗ್ರಿ ಕ್ಯಾನ್ಸರ್ ಎಂಬ ಚರ್ಮದ ಕ್ಯಾನ್ಸರ್ ಇದೆ. ಇಲ್ಲಿ ಚಳಿಗಾಲದಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮ ಬಟ್ಟೆಯೊಳಗೆ ಅಗ್ಗಿಸ್ಟಿಕೆ ರೀತಿಯ ಮಣ್ಣಿನ ಪಾತ್ರೆಯಲ್ಲಿ ಬೆಂಕಿಯೊಂದಿಗೆ ಇಲ್ಲಿ ಕುಳಿತುಕೊಳ್ಳುತ್ತಾರೆ. ಈ ಮೂಲಕ ಅವರು ಮೈಯನ್ನು ಬಿಸಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತಾರೆ. ಆದರೆ ಹೊಟ್ಟೆ ಮತ್ತು ತೊಡೆಗಳಿಂದ ಪಡೆದ ನಿರಂತರ ಶಾಖವು ಕ್ರಮೇಣ ಕ್ಯಾನ್ಸರ್ ಆಗಿ ಬದಲಾಗುತ್ತದೆ. ಇದನ್ನು ಕಾಂಗ್ರಿ ಕ್ಯಾನ್ಸರ್‌ ಎಂದು ಕರೆಯುತ್ತಾರೆ.

    ವೃಷಣ ಕ್ಯಾನ್ಸರ್:
    ಅಷ್ಟೇ ಅಲ್ಲ ವೃಷಣ ಕ್ಯಾನ್ಸರ್ ಕೂಡ ಬೆಳಕಿಗೆ ಬಂದಿದೆ. ತುಂಬಾ ಬಿಗಿಯಾದ ಜೀನ್ಸ್ ಧರಿಸುವುದರಿಂದ ಈ ಕ್ಯಾನ್ಸರ್ ಬರುತ್ತಿದೆ. ಸಂಶೋಧನೆಯ ಪ್ರಕಾರ, ಗಂಟೆಗಟ್ಟಲೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಪುರುಷರ ಹೊಟ್ಟೆಯ ಕೆಳಭಾಗದಲ್ಲಿ ತಾಪಮಾನವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ವೀರ್ಯಾಣುಗಳ ಸಂಖ್ಯೆಯು ಸಹ ಕಡಿಮೆಯಾಗುತ್ತದೆ. ವೃಷಣ ಕ್ಯಾನ್ಸರ್ (ಅಂಡಾಶಯದ ಕ್ಯಾನ್ಸರ್) ಗೆ ಕಾರಣವಾಗಬಹುದು. ಪ್ರಸ್ತುತ ಈ ಸಂಶೋಧನೆಯಿಂದ ಯಾವುದೇ ನಿರ್ದಿಷ್ಟ ಫಲಿತಾಂಶಗಳು ಇನ್ನೂ ಬಂದಿಲ್ಲ.

    ಇಂತಹ ಬಟ್ಟೆ ಧರಿಸಲೇಬೇಡಿ:
    ಬಟ್ಟೆ ಧರಿಸಿದ ಬಳಿಕ ನಿಮ್ಮ ಚರ್ಮದ ಮೇಲೆ ಗುರುತುಗಳು ಕಾಣಿಸಿಕೊಂಡರೆ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಹಾಗೂ ಚರ್ಮವು ಉಜ್ಜಲು ಪ್ರಾರಂಭಿಸಿದರೆ ನೀವು ಧರಿಸಿದ ಬಟ್ಟೆ ತುಂಬಾ ಬಿಗಿಯಾಗಿದೆ ಎಂದು ಅರ್ಥ. ಈ ರೀತಿ ಕಂಡುಬಂದರೆ ಅಂತಹ ಬಟ್ಟೆಗಳನ್ನು ಧರಿಸಲೇಬೇಡಿ. ಇನ್ನು ಒಳ ಉಡುಪುಗಳು ತುಂಬಾ ಬಿಗಿಯಾಗಿದ್ದರೆ ಧರಿಸಬೇಡಿ. ಜೊತೆಗೆ ಜಿಮ್‌ಗಾಗಿ ಧರಿಸಿರುವ ಬಿಗಿಯಾದ ಬಟ್ಟೆಗಳು ಸಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೂ ಅಂತಹ ಬಟ್ಟೆಗಳನ್ನು ಸೀಮಿತ ಸಮಯದವರೆಗೆ ಧರಿಸಲಾಗುತ್ತದೆ ಮತ್ತು ಆದ್ದರಿಂದ ಕಡಿಮೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.

    ಮುನ್ನೆಚ್ಚರಿಕೆ:
    ಯಾರಾದರೂ ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಿದ್ದರೆ ಅವರು ಸ್ವಲ್ಪ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಿಗಿಯಾದ ಒಳಉಡುಪುಗಳನ್ನು ಧರಿಸುವುದನ್ನು ತಪ್ಪಿಸಿದಂತೆ. ಇದನ್ನು ಹೊರತುಪಡಿಸಿ, ಬಿಗಿಯಾದ ಬಟ್ಟೆಗಳನ್ನು ಧರಿಸಿ ಜಿಮ್‌ಗೆ ಹೋಗಬೇಡಿ.

  • ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬಂತು ಬ್ಯಾಗ್‌ ತುಂಬಾ ಈರುಳ್ಳಿ!

    ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬಂತು ಬ್ಯಾಗ್‌ ತುಂಬಾ ಈರುಳ್ಳಿ!

    ನ್ಯೂಯಾರ್ಕ್: ಆನ್‌ಲೈನ್‌ನಲ್ಲಿ ಸೆಕೆಂಡ್‌ ಹ್ಯಾಂಡ್‌ ಜೀನ್ಸ್‌ ಆರ್ಡರ್‌ ಮಾಡಿದ ಮಹಿಳೆಗೆ ಬ್ಯಾಗ್‌ ತುಂಬಾ ಈರುಳ್ಳಿ ಬಂದಿದೆ. ಇದನ್ನು ನೋಡಿ ಮಹಿಳೆ ಶಾಕ್‌ ಆಗಿದ್ದಾರೆ.

    ಬ್ರಿಟಿಷ್ ಸೆಕೆಂಡ್ ಹ್ಯಾಂಡ್ ಫ್ಯಾಶನ್ ಸೈಟ್ ಡೆಪಾಪ್‌ನಲ್ಲಿ ಮಹಿಳೆ ಜೀನ್ಸ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಬ್ಯಾಗ್‌ ತುಂಬಾ ಈರುಳ್ಳಿ ಪಾರ್ಸೆಲ್‌ ಬಂದಿದೆ. ಇದನ್ನು ಕಂಡು ಅಚ್ಚರಿಗೊಂಡ ಮಹಿಳೆ, ಮಾರಾಟಗಾರರನ್ನು ಸಂಪರ್ಕಿಸಿ ಪ್ರಶ್ನಿಸಿದ್ದಾರೆ. ಅವರು ಕೂಡ ಗೊಂದಲಕಾರಿ ಉತ್ತರವನ್ನು ನೀಡಿದ್ದಾರೆ. ಈರುಳ್ಳಿ ಹೇಗೆ ಬಂತು ಎಂಬುದು ನಮಗೂ ಗೊತ್ತಿಲ್ಲ ಎಂದು ಮಹಿಳೆಗೆ ತಿಳಿಸಿದ್ದಾರೆ. ಇದನ್ನೂ ಓದಿ: ಇಂದೋರ್‌ಗೆ ಬಂದ ತಕ್ಷಣ ರಾಹುಲ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ

    ಘಟನೆ ಕುರಿತು ಮಹಿಳೆ ಮಾರಾಟಗಾರರೊಂದಿಗೆ ತನ್ನ ಚಾಟ್‌ನ ತುಣುಕನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ನಾನು ಆರ್ಡರ್ ಮಾಡಿದ ಜೀನ್ಸ್‌ ಬದಲಿಗೆ ಈರುಳ್ಳಿ ಇರುವ ಪಾರ್ಸೆಲ್ ಏಕೆ ಬಂದಿದೆ?” ಎಂದು ಮಾರಾಟಗಾರರನ್ನು ಮಹಿಳೆ ಪ್ರಶ್ನಿಸಿದ್ದಾರೆ. “ಈ ಬಗ್ಗೆ ನಮಗೂ ಗೊಂದಲವಿದೆ. ತಪ್ಪಾದ ಆರ್ಡರ್‌ ಬಂದಿರುವುದಕ್ಕೆ ಕ್ಷಮೆಯಾಚಿಸುತ್ತೇವೆ” ಎಂದು ಮಾರಾಟಗಾರ ಪ್ರತಿಕ್ರಿಯಿಸಿದ್ದಾರೆ.

    ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿರುವ ಈ ಪೋಸ್ಟ್‌ಗೆ ಕೆಲವರು ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಇದು ತುಂಬಾ ತಮಾಷೆಯಾಗಿದೆ” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. “ಉಚಿತ ಈರುಳ್ಳಿ? ಈ ಆರ್ಥಿಕತೆಯಲ್ಲಿ? ವ್ಹಾವ್‌” ಎಂದು ಮತ್ತೊಬ್ಬರು ಕಾಮೆಂಟ್‌ ಹಾಕಿದ್ದಾರೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಕರಿಗೆ ಜೀನ್ಸ್, ಟೀ ಶರ್ಟ್ ನಿಷೇಧಿಸಿದ ಪಾಕಿಸ್ತಾನ – ಬಿಗಿಯುಡುಪು ತೊಡುವಂತಿಲ್ಲ ಶಿಕ್ಷಕಿಯರು

    ಶಿಕ್ಷಕರಿಗೆ ಜೀನ್ಸ್, ಟೀ ಶರ್ಟ್ ನಿಷೇಧಿಸಿದ ಪಾಕಿಸ್ತಾನ – ಬಿಗಿಯುಡುಪು ತೊಡುವಂತಿಲ್ಲ ಶಿಕ್ಷಕಿಯರು

    ಇಸ್ಲಾಮಾಬಾದ್: ಪಾಕಿಸ್ತಾನದ ಫೆಡರಲ್ ಆಪ್ ಎಜುಕೇಶನ್(ಎಫ್‍ಡಿಇ) ಮಹಿಳಾ ಅಧ್ಯಾಪಕರು ಜೀನ್ಸ್ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸದಂತೆ ಆದೇಶ ಹೊರಡಿಸಿದೆ. ಅಲ್ಲದೇ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವ  ಅಧ್ಯಾಪಕರನ್ನು ನಿಷೇಧಿಸಲಾಗಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಶೈಕ್ಷಣಿಕ ನಿರ್ದೇಶಕರು ಸೋಮವಾರ ಪತ್ರವನ್ನು ಕಳುಹಿಸಿದ್ದು, ಪ್ರತಿ ಸಿಬ್ಬಂದಿಯ ದೈಹಿಕ ನೋಟ, ವೈಯಕ್ತಿಕ ಸ್ವಚ್ಛತೆಯನ್ನು ಸರಿಯಾದ ರೀತಿಯಲ್ಲಿ ಪಾಲಿಸುವಂತೆ ತಿಳಿಸಲಾಗಿದ್ದು, ಅಲ್ಲದೇ ಕ್ಷೌರ, ಗಡ್ಡವನ್ನು ಕತ್ತರಿಸುವುದು, ಉಗುರು ಕತ್ತರಿಸಿರುವುದು, ಸ್ನಾನ ಮತ್ತು  ಸುಗಂಧ ದ್ರವ್ಯದ ಬಳಕೆ ಮುಂತಾದವುಗಳ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    jeans

    ಈ ಎಲ್ಲಾ ನಿಯಮಗಳನ್ನು ಪಾಕಿಸ್ತಾನದ ಶಿಕ್ಷಕರು ಕಚೇರಿ ಸಮಯದಲ್ಲಿ, ಕ್ಯಾಂಪಸ್, ಗ್ರೌಂಡ್ ಮತ್ತು ಮೀಟಿಂಗ್‍ಗಳಲ್ಲಿ ಅನುಸರಿಸಬೇಕು. ಜೊತೆಗೆ ಎಲ್ಲಾ ಅಧ್ಯಾಪಕರು ತರಗತಿಯಲ್ಲಿ ಪಾಠ ಮಾಡುವ ವೇಳೆ ಗೌವ್ನ್ ಮತ್ತು ಪ್ರಯೋಗಾಲದಲ್ಲಿ ಲ್ಯಾಬ್ ಕೋಟ್‍ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಇದಲ್ಲದೇ ಗೇಟ್ ಕಿಪರ್ ಹಾಗೂ ಸಹಾಯಕ ಸಿಬ್ಬಂದಿ ಸಮವಸ್ತ್ರಗಳನ್ನು ಧರಿಸುವಂತೆ ತಿಳಿಸಲಾಗಿದೆ. ಇದನ್ನೂ ಓದಿ:  ಹಬ್ಬಕ್ಕೆ ವಂಡರ್ ಲಾದಿಂದ ಬಂಪರ್ ಆಫರ್- ಗಣೇಶ ಹೆಸರಿರೋ 100 ಮಂದಿಗೆ ಉಚಿತ ಪಾಸ್

  • ಮಹಿಳೆಯರು ಹರಿದ ಜೀನ್ಸ್ ಧರಿಸೋದು ಯಾವ ಸಂಸ್ಕೃತಿ?- ಉತ್ತಾರಖಂಡ ಸಿಎಂ

    ಮಹಿಳೆಯರು ಹರಿದ ಜೀನ್ಸ್ ಧರಿಸೋದು ಯಾವ ಸಂಸ್ಕೃತಿ?- ಉತ್ತಾರಖಂಡ ಸಿಎಂ

    ಡೆಹರಾಡೂನ್: ಉತ್ತರಾಖಂಡ ನೂತನ ಮುಖ್ಯಮಂತ್ರಿ ತೀರ್ಥ್ ಸಿಂಗ್ ರಾವತ್ ಕಳೆದ ಕೆಲ ದಿನಗಳಿಂದ ಸುದ್ದಿಯ ಮುನ್ನಲೆಯಲ್ಲಿದ್ದಾರೆ. ರಾಜಕೀಯದಲ್ಲಾದ ಬದಲಾವಣೆಗಳಿಂದ ಸಿಎಂ ಪಟ್ಟ ಅಲಂಕರಿಸಿದರು. ಇದೀಗ ಮಹಿಳೆಯರು ಧರಿಸುವ ಬಟ್ಟೆ ಬಗ್ಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ.

    ಮಕ್ಕಳ ಹಕ್ಕು ಮತ್ತು ಸಂರಕ್ಷಣಾ ಆಯೋಗದ ಕಚೇರಿ ಉದ್ಘಾಟಿಸಿ ಮಾತನಾಡಿದ ಸಿಎಂ, ಹರಿದ ಜೀನ್ಸ್ ಧರಿಸುವ ಮಹಿಳೆಯರು ಸಮಾಜಕ್ಕೆ ಏನು ಸಂದೇಶ ನೀಡುತ್ತಾರೆ? ಹರಿದ ಜೀನ್ಸ್ ಧರಿಸುವಿಕೆ ಇದ್ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ. ಈ ಜೀವನಶೈಲಿ ಪೋಷಕರ ಮೇಲೆ ನಿರ್ಧರಿತವಾಗಿರುತ್ತೆ ಎಂದಿದ್ದಾರೆ.

    ಒಂದು ದಿನ ವಿಮಾನಯಾನ ಮಾಡುವಾಗ ಮಹಿಳೆ ಇಬ್ಬರು ಮಕ್ಕಳ ಜೊತೆ ಬಂದು ಪಕ್ಕದಲ್ಲಿ ಕುಳಿತರು. ಮಹಿಳೆ ಹರಿದ ಜೀನ್ಸ್ ಧರಿಸಿದ್ದರು. ಸೋದರಿ ಎಲ್ಲಿಗೆ ಹೋಗ್ತೀದ್ದೀರಾ ಅಂತ ಕೇಳಿದಾಗ ಮಹಿಳೆ ತಮ್ಮ ಕಿರು ಪರಿಚಯ ಮಾಡಿಕೊಂಡರು. ಪತಿ ಜೆಎನ್‍ಯುನಲ್ಲಿ ಉಪನ್ಯಾಸಕರಾಗಿದ್ದು, ತಾನು ಎನ್‍ಜಿಓ ನಡೆಸುತ್ತಿರೋದಾಗಿ ತಿಳಿಸಿದರು. ಹರಿದ ಜೀನ್ಸ್ ಧರಿಸಿದ ಮಹಿಳೆ ಎನ್‍ಜಿಓ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ. ನಮ್ಮ ಶಾಲಾ ದಿನಗಳಲ್ಲಿ ಈ ರೀತಿಯ ಜೀವನ ಶೈಲಿ ಇರಲಿಲ್ಲ ಎಂದು ಹೇಳಿದರು.

    ಇಂದಿನ ಯುವ ಪೀಳಿಗೆ ವಿದೇಶಿ ಸಂಸ್ಕೃತಿಗೆ ಮೋಹಿತರಾಗುತ್ತಿರೋದು ಆತಂಕದ ವಿಷಯ. ಡ್ರಗ್ಸ್, ನಶೆ ಸೇರಿದಂತಹ ವ್ಯಾಮೋಹಕ್ಕೆ ಒಳಗಾಗಿ ಸುಸಂಕೃತ ಜೀವನ ನಡೆಸಲು ಯುವ ಜನಾಂಗಕ್ಕೆ ಸಾಧ್ಯವಾಗುತ್ತಿಲ್ಲ ಎಂದರು. ಇದನ್ನೂ ಓದಿ: ತೀರ್ಥ್ ಸಿಂಗ್ ರಾವತ್ ಉತ್ತಾರಖಂಡ ಹೊಸ ಸಿಎಂ

  • ಜೀನ್ಸ್ ತೊಡಬೇಡ ಅಂದ ಪತಿ ವಿರುದ್ಧ ದೂರು

    ಜೀನ್ಸ್ ತೊಡಬೇಡ ಅಂದ ಪತಿ ವಿರುದ್ಧ ದೂರು

    – ಜೀನ್ಸ್ ಹಾಕಿದ್ರೆ ಡಿವೋರ್ಸ್ ಅಂದ ಗಂಡ

    ಗಾಂಧೀನಗರ: ಜೀನ್ಸ್ ತೊಡಬೇಡ ಎಂದ ಪತಿ ವಿರುದ್ಧ ಮಹಿಳೆ ದೂರು ದಾಖಲಿಸಿರುವ ಘಟನೆ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ವೆಜಲ್‍ಪುರ ನಲ್ಲಿ ನಡೆದಿದೆ. ಪತಿ ಹಾಗೂ ಆತನ ಕುಟುಂಬಸ್ಥರು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ದೂರು ದಾಖಲಿಸಿರುವ 37 ವರ್ಷದ ಮಹಿಳೆ ಮದುವೆ ಎರಡು ವರ್ಷಗಳ ಹಿಂದೆ ನಡೆದಿತ್ತು. ಮದುವೆ ಬಳಿಕ ಜೀನ್ಸ್ ಧರಿಸಿ ಕೆಲಸಕ್ಕೆ ಹೊರಟರೆ ಕುಟುಂಬಸ್ಥರು ವಿಚ್ಛೇಧನ ನೀಡುವ ಕುರಿತು ಮಾತನಾಡುತ್ತಾರೆ. ಜೀನ್ಸ್ ಧರಿಸುವ ಮಹಿಳೆಯರನ್ನ ನಿಂದಿಸುತ್ತಾರೆ ಎಂದು ಮಹಿಳೆ ಹೇಳಿದ್ದಾರೆ.

    ಮಹಿಳೆಗೆ ಇದು ಎರಡನೇ ಮದುವೆಯಾಗಿದ್ದು, ಪತಿಗೆ ಮೂರನೇ ಮದುವೆ. ವಿವಾಹಕ್ಕೂ ಮೊದಲೇ ಕುಟುಂಬದಿಂದ ದೂರ ಇಬ್ಬರೇ ವಾಸಿಸುವ ಬಗ್ಗೆ ಷರತ್ತು ವಿಧಿಸಿದ್ದರು. ಆರಂಭದ ಎರಡು ವರ್ಷ ಇಬ್ಬರು ಚೆನ್ನಾಗಿದ್ದರು. ನಂತರ ಪತಿ ಕುಟುಂಬದ ಜೊತೆ ವಾಸಿಸುವುದು ಮತ್ತು ತಾನು ಹೇಳಿದ ಬಟ್ಟೆ ಧರಿಸುವಂತೆ ಒತ್ತಡ ಹಾಕಲರಂಭಿಸಿದ್ದಾನೆ.

    ಮಹಿಳೆ ಒಪ್ಪದಿದ್ದಾಗ ವಿಚ್ಛೇಧನ ನೀಡುವ ಬಗ್ಗೆ ಧಮ್ಕಿ ಸಹ ಹಾಕಿದ್ದಾನೆ. ಇದರಿಂದ ನೊಂದ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ದೇವಸ್ಥಾನಕ್ಕೆ ಇನ್ಮುಂದೆ ಜೀನ್ಸ್, ಶರ್ಟ್ ಹಾಕ್ಕೊಂಡು ಹೋಗಂಗಿಲ್ಲ!

    ದೇವಸ್ಥಾನಕ್ಕೆ ಇನ್ಮುಂದೆ ಜೀನ್ಸ್, ಶರ್ಟ್ ಹಾಕ್ಕೊಂಡು ಹೋಗಂಗಿಲ್ಲ!

    ಬೆಂಗಳೂರು: ರಾಜ್ಯದ ಪ್ರಮುಖ ಮುಜರಾಯಿ ದೇಗುಲದಲ್ಲಿ ಇನ್ನೂ ಮುಂದೆ ವಸ್ತ್ರ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ.

    ಜೀನ್ಸ್, ಟೀ ಶರ್ಟ್ ಧರಿಸಿದರೆ ದೇವರ ದರ್ಶನ ಸಿಗುವುದು ಅನುಮಾನವಾಗಿದೆ. ಮುಜರಾಯಿ ಇಲಾಖೆ ಸಚಿವರು ಈ ಸಂಬಂಧ ಸಭೆ ಕರೆಯಲ್ಲಿದ್ದು, ಶೀಘ್ರದಲ್ಲಿಯೇ ವಸ್ತ್ರ ಸಂಹಿತೆ ಯಾವ ರೀತಿ ಇರಬೇಕು ಎನ್ನುವ ನಿಯಮವನ್ನು ರೂಪಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ

    ಈಗಾಗಲೇ ಕುಕ್ಕೆಯಿಂದ ಮನವಿ ಕೂಡ ಮಾಡಲಾಗಿದ್ದು, ಭಕ್ತಾದಿಗಳು ದೇವರ ದರ್ಶನಕ್ಕೆ ಬರುವಾಗ ತುಂಡು ಬಟ್ಟೆ ಜೀನ್ಸ್, ಟೀ ಶರ್ಟ್ ಧರಿಸಿ ಬರುತ್ತಿದ್ದಾರೆ. ವಸ್ತ್ರ ಸಂಹಿತೆ ಜಾರಿ ಮಾಡಿ ಎಂದು ಇಲಾಖೆಗೆ ಮನವಿ ಕೂಡ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೆ ಮುಜರಾಯಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿದೆ.

    ಮಹಿಳೆಯರಿಗೆ ಕುರ್ತಾ, ಸೀರೆ ಅಥವಾ ಸಲ್ವಾರ್ ಹಾಗೂ ಪುರುಷರಿಗೆ ಪಂಚೆ, ಶರ್ಟ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಮಂಗಳವಾರ ಬಹುತೇಕ ವಿಧಾನಸೌಧದಲ್ಲಿ ಸಚಿವರ ಸಭೆ ನಡೆಯಲಿದ್ದು, ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

  • ಒಂದರ ಮೇಲೊಂದ್ರಂತೆ 8 ಪ್ಯಾಂಟ್- ಜೀನ್ಸ್ ಕದ್ದು ಸಿಕ್ಕಿಬಿದ್ದ ಯುವತಿಯ ವಿಡಿಯೋ ವೈರಲ್

    ಒಂದರ ಮೇಲೊಂದ್ರಂತೆ 8 ಪ್ಯಾಂಟ್- ಜೀನ್ಸ್ ಕದ್ದು ಸಿಕ್ಕಿಬಿದ್ದ ಯುವತಿಯ ವಿಡಿಯೋ ವೈರಲ್

    ಕ್ಯಾರಕಾಸ್: ಟೈಟ್ ಜೀನ್ಸ್ ಒಂದನ್ನು ಹಾಕೋದೇ ಕಷ್ಟದ ಕೆಲಸ. ಆದರೆ ಇಲ್ಲೊಬ್ಬಳು ಯುವತಿ ಒಂದರಮೇಲೊಂದರಂತೆ ಬರೋಬ್ಬರಿ 8 ಜೀನ್ಸ್ ಗಳನ್ನು ಧರಿಸಿ ಸಿಕ್ಕಿಬಿದ್ದ ಘಟನೆ ವೆನೆಜುವೆಲಾ ದೇಶದಲ್ಲಿ ನಡೆದಿದೆ.

    ಹೌದು. ಅಪರಿಚಿತ ಯುವತಿಯೊಬ್ಬಳು ಬಾತ್ ರೂಮಿನಲ್ಲಿ ತಾನು ಧರಿಸಿದ್ದ ಎಲ್ಲಾ ಜೀನ್ಸ್ ಗಳನ್ನು ತೆಗೆದಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಯುವತಿ ಮಾಲ್ ನಲ್ಲಿ ಕದ್ದು ಒಂದರ ಮೇಲೊಂದರಂತೆ 8 ಜೀನ್ಸ್ ಗಳನ್ನು ಧರಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ಈ ವೇಳೆ ಮಾಲ್ ಸಿಬ್ಬಂದಿ ಆಕೆಯನ್ನು ಗಮನಿಸಿ ಅನುಮಾನಗೊಂಡು ಬಾತ್ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ಆಗ ಯುವತಿಯ ಕಳ್ಳತನದ ಗುಟ್ಟು ರಟ್ಟಾಗಿದೆ. ಹೀಗಾಗಿ ಜೀನ್ಸ್ ಬಿಚ್ಚಲು ಹೇಳಿದ್ದು, ಯುವತಿ ಧರಿಸಿದ್ದ ಪ್ಯಾಂಟ್ ಗಳ ಲೆಕ್ಕ ನೋಡಿ ಸಿಬ್ಬಂದಿಯೇ ದಂಗಾಗಿ ಹೋಗಿದ್ದಾರೆ.

    ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ತಾಗಿ ವೈರಲ್ ಆಗುತ್ತಿದೆ. ಅಲ್ಲದೆ ಸಾಕಷ್ಟು ಕಮೆಂಟ್ ಗಳು ಬರುತ್ತಿವೆ. ಕೆಲವರು ಯುವತಿಯ ಪ್ರತಿಭೆಗೆ ಬೆರಾಗಿದ್ದಾರೆ. ನಾನು ಆಕೆಯ ಪ್ರತಿಭೆಯಿಂದ ಪ್ರಭಾವಿತಳಾಗಿದ್ದೇನೆ. ಒಂದಲ್ಲ ಹಲವು ಜೀನ್ಸ್ ಗಳನ್ನು ಆಕೆ ಧರಿಸಿರುವುದನ್ನು ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತಿದೆ ಒಬ್ಬರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಅಷ್ಟು ಜೀನ್ಸ್ ಧರಿಸಿದ ಅವಳಿಗೆ ಏನೂ ಅನಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಇನ್ನೂ ಕೆಲವರು ಆಕೆ ಜಾದುಗಾರ್ತಿಯಾಗಿರಬೇಕು. ಒಂದು ಪ್ಯಾಂಟ್ ಹಾಕೋಕೆ ಕಷ್ಟ ಆಗುತ್ತದೆ. ಅಂಥದ್ರಲ್ಲಿ ಇವಳು ಹೇಗೆ 8 ಪ್ಯಾಟ್ ಧರಿಸಿದ್ದಾಳೆ ಎಂದು ಶಾಕ್ ಆಗಿದ್ದಾರೆ.

     

  • ಜೀನ್ಸ್ ಧರಿಸಿದ್ದರಿಂದ ಮಹಿಳಾ ಟೆಕ್ಕಿಯ ಡ್ರೈವಿಂಗ್  ಟೆಸ್ಟ್‌ಗೆ ನಿರ್ಬಂಧ

    ಜೀನ್ಸ್ ಧರಿಸಿದ್ದರಿಂದ ಮಹಿಳಾ ಟೆಕ್ಕಿಯ ಡ್ರೈವಿಂಗ್ ಟೆಸ್ಟ್‌ಗೆ ನಿರ್ಬಂಧ

    ಚೆನ್ನೈ: ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರೆಂದು ಅವರ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡದಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.

    ಮಹಿಳಾ ಟೆಕ್ಕಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆಗೆ ಕೆಕೆ ನಗರ್ ಆರ್‌ಟಿಓ ಡ್ರೈವಿಂಗ್ ಟೆಸ್ಟ್ ಗೆ ನಿರಾಕರಣೆ ಮಾಡಿದೆ. ಪವಿತ್ರಾ ಧರಿಸಿರುವ ಬಟ್ಟೆಯಿಂದಾಗಿಯೇ ಆಕೆಗೆ ನಿರ್ಬಂಧ ಹೇರಲಾಗಿತ್ತು.

    ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿದ್ದೆ. ನನಗೆ ಅರ್ಜೆಂಟಾಗಿ ಲೈಸೆನ್ಸ್ ಬೇಕಿತ್ತು. ಹೀಗಾಗಿ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡಲ್ಲ ಎಂದಾಗ ಕೂಡಲೇ ಮನೆಗೆ ತೆರಳಿ ಚೂಡಿದಾರ ಧರಿಸಿಕೊಂಡು ಬಂದೆ ಎಂದು ಪವಿತ್ರಾ ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಕಾಲೇಜು ವಿದ್ಯಾರ್ಥಿನಿ ಸುಮತಿ ಮನೆಗೆ ವಾಪಸ್ಸಾಗಿ ಬೇರೆ ಬಟ್ಟೆ ಧರಿಸಿ ಆರ್‌ಟಿಓ ಕಚೇರಿಗೆ ಬಂದಿದ್ದರು. ಅಂದು ಸುಮತಿ ಬರ್ಮುಡಾ ಹಾಗೂ ಶರ್ಟ್ ಧರಿಸಿದ್ದರು. ಹೀಗಾಗಿ ಮತ್ತೆ ಮನೆಗೆ ತೆರಳಿ ನಿಯತ್ತಾದ ಡ್ರೆಸ್ ಧರಿಸಿ ಬಂದಿದ್ದರು. ಇದಕ್ಕೂ ಮೊದಲು ಡ್ರೆಸ್ ಕುರಿತಂತೆ ಸುಮತಿ ಹಾಗೂ ಇನ್ಸ್ ಪೆಕ್ಟರ್ ಮಧ್ಯೆ ವಾಗ್ವಾದ ನಡೆದಿತ್ತು. ಇವರಿಬ್ಬರ ಜಗಳ ತಾರಕಕ್ಕೇರುತ್ತಿದ್ದಂತೆಯೇ ಇನ್ಸ್ ಸ್ಪೆಕ್ಟರ್ ಸಹೋದ್ಯೋಗಿಗಳು ಸ್ಥಳದಲ್ಲಿ ಜಮಾಯಿಸಿ ಸಮಜಾಯಿಷಿ ನೀಡಿದ್ದಾರೆ.

    ಲೈಸೆನ್ಸ್ ಸಿಗುವ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು ಮತ್ತೆ ಮನೆಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡು ಬಂದೆ ಎಂದು ಸುಮತಿ ತಿಳಿಸಿದ್ದಾರೆ.

    ಈ ಬಗ್ಗೆ ವಕೀಲ ವಿ. ಎಸ್ ಸುರೇಶ್ ಮಾತನಾಡಿ, ಡ್ರೈವಿಂಗ್ ಟೆಸ್ಟ್ ಗೆ ಇಂತದ್ದೇ ಡ್ರೆಸ್ ಹಾಕಿಕೊಂಡು ಬರಬೇಕೆಂಬ ನಿಯಮ ಕಾನೂನಿನಲ್ಲಿ ಇಲ್ಲ. ಆದರೆ ಲೈಸೆನ್ಸ್ ಸಿಗಬೇಕಾದರೆ ವ್ಯಕ್ತಿಗೆ 18 ವರ್ಷ ಆಗಿರಬೇಕು ಅಷ್ಟೇ ಎಂದು ತಿಳಿಸಿದ್ದಾರೆ.

  • ಹರಿದ ಜೀನ್ಸ್ ಧರಿಸಿ ಟ್ರೋಲ್ ಆದ ಐಶ್ವರ್ಯ ರೈ ಬಚ್ಚನ್!

    ಹರಿದ ಜೀನ್ಸ್ ಧರಿಸಿ ಟ್ರೋಲ್ ಆದ ಐಶ್ವರ್ಯ ರೈ ಬಚ್ಚನ್!

    ಮುಂಬೈ: ಬಾಲಿವುಡ್ ಸುಂದರಿ ಐಶ್ವರ್ಯ ರೈ ಬಚ್ಚನ್ ಶಾಲಾ ಕಾರ್ಯಕ್ರಮದಲ್ಲಿ ಹರಿದ ಜೀನ್ಸ್ ಧರಿಸಿ ಟ್ರೋಲ್ ಆಗಿದ್ದಾರೆ.

    ಮಂಗಳವಾರ ಮುಂಬೈನ ಜಮ್‍ನಬಿ ನರ್ಸಿ ಸ್ಕೂಲ್ ಆಯೋಜಿಸಿದ್ದ ವಿಶೇಷ ಚೇತನರ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

    ಐಶ್ವರ್ಯ ಈ ಕಾರ್ಯಕ್ರಮದಲ್ಲಿ ಟೋರ್ನ್ ಡೆನಿಮ್(ಜೀನ್ಸ್) ಧರಿಸಿ ಅದಕ್ಕೆ ಪಿಂಕ್ ಬಣ್ಣದ ಬ್ಲೇಜರ್ ಧರಿಸಿದ್ದರು. ಈಗ ಐಶ್ವರ್ಯ ಧರಿಸಿದ ಉಡುಪು ಬಗ್ಗೆ ಜನರು ಟ್ರೋಲ್ ಮಾಡ ತೊಡಗಿದ್ದಾರೆ. ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯ ಈ ರೀತಿ ಹರಿದ ಜೀನ್ಸ್ ಹಾಕಿ ಧರಿಸಿದ್ದು ಸರಿಯಲ್ಲ ಎಂದು ಬರೆದು ಪ್ರಶ್ನೆ ಮಾಡುತ್ತಿದ್ದಾರೆ.

    ಐಶ್ವರ್ಯ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಶೇಷ ಚೇತನ ಮಕ್ಕಳನ್ನು ಪ್ರೋತ್ಸಾಹಿಸಿದರು. ಅಲ್ಲದೇ ಐಶ್ವರ್ಯ ವಿಶೇಷ ಚೇತನ ಮಕ್ಕಳ ಸಾಧನೆ ಹಾಗೂ ಶ್ರಮ ನೋಡಿ ಸ್ವತಃ ಸೆಲ್ಯೂಟ್ ಮಾಡುವುದರ ಮೂಲಕ ಅವರಿಗೆ ಗೌರವ ನೀಡಿದರು.

    ಐಶ್ವರ್ಯ ಈಗ ಅನುರಾಗ್ ಕಶ್ಯಪ್ ನಿರ್ದೇಶನದ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ತಮ್ಮ ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಐಶ್ವರ್ಯ ಈ ಹಿಂದೆ ‘ಫನೆ ಖಾನ್’ ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv