Tag: ಜೀನಿ ಪೌಡರ್

  • ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    – ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
    – ರಾಜ್ಯವ್ಯಾಪಿ ಜನಪ್ರಿಯವಾಗುತ್ತಿದೆ ಸಿರಿಧಾನ್ಯಗಳ ಪೌಡರ್

    ಮೇಲ್ನೋಟಕ್ಕೆ ಎಷ್ಟೇ ಗಟ್ಟಿಮುಟ್ಟಾಗಿದ್ರು ಕಾಯಿಲೆಗಳು ಕಾಡಲು ಶುರು ಮಾಡಿವೆ. ಕಾಯಿಲೆ ಅಂದಾಕ್ಷಣ ದೊಡ್ಡದೊಡ್ಡ ಕಾಯಿಲೆಗಳೇ ಆಗಬೇಕೆಂದೇನಿಲ್ಲ. ದೊಡ್ಡ ಕಾಯಿಲೆಯಿಂದ ಹಿಡಿದು ಸಣ್ಣ ನೆಗಡಿ, ಕೆಮ್ಮೂ ಸಹ ಘಟಾನುಘಟಿಗಳನ್ನ ನಡುಗಿಸಿ ಬಿಡುತ್ತಿದೆ. ಇಷ್ಟಕ್ಕೆಲ್ಲ ಕಾರಣ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು.

    ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಏನು ಅಂತ ನೋಡಿದರೆ ನಾವು ತಿನ್ನುತ್ತಿರುವ ಆಹಾರದಲ್ಲಿ ಯಾವುದೇ ಸತ್ವ ಇಲ್ಲ. ಜೊತೆಗೆ ಆಹಾರವೇ ಸ್ಲೋ ಪಾಯಿಸನ್ ಆಗಿ ನಮ್ಮನ್ನ ನಿಶ್ಯಕ್ತರನ್ನಾಗಿ ಮಾಡುತ್ತಿದೆ. ನಾವು ತಿನ್ನುತ್ತಿರುವ ಆಹಾರ ಬೆಳೆಯಲು ಭೂಮಿಗೆ ಹಾಕುತ್ತಿರುವ ರಸಗೊಬ್ಬರ, ಕೀಟಗಳಿಂದ ಕಾಪಾಡಲು ಕೀಟ ನಾಶಕ ಬಳಸುತ್ತಿದ್ದಾರೆ. ಬೆಳೆ ಬೆಳೆದ ಮೇಲೆ ಇದನ್ನು ನಾವು ಆಹಾರವಾಗಿ ಬಳಸುತ್ತಿದ್ದೇವೆ. ಇದರಲ್ಲಿ ಬಹುತೇಕ ಪೋಷಕಾಂಶಗಳು ನಾಶವಾಗಿ ನಮ್ಮ ದೇಹಕ್ಕೆ ರಸಗೊಬ್ಬರದ ಅಂಶ ಹಾಗೂ ಕೀಟ ನಾಶಕ ಅಂಶ ಸೇರ್ಪಡೆಯಾಗ್ತಿದೆ. ಇದು ನಮ್ಮ ಆರೋಗ್ಯ ಹಾಳಾಗಲು ಕಾರಣವಾಗಿದೆ.

    ಇದಕ್ಕೆಲ್ಲ ಪರಿಹಾರ ಏನು ಅಂತ ನೋಡೋದಾದ್ರೆ, ಮೊದಲು ನಮ್ಮ ಆಹಾರದ ಆರೋಗ್ಯವನ್ನ ಕಾಪಾಡಬೇಕು. ಅಂದ್ರೆ ರಸಗೊಬ್ಬರ ರಹಿತ, ಕೀಟ ನಾಶಕ ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರವನ್ನ ಬಳಸಲು ಶುರು ಮಾಡಬೇಕು. ಇಷ್ಟಕ್ಕೆ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳು ಸಿಗೋದು ಸ್ವಲ್ಪ ಕಷ್ಟ. ಯಾಕಂದ್ರೆ ನಮ್ಮಲ್ಲಿ ಒಂದೊಂದು ಧಾನ್ಯಗಳು ಒಂದೊಂದು ವಿಶೇಷ ಗುಣಗಳನ್ನ ಹೊಂದಿದೆ.

    ಸಿರಿಧಾನ್ಯಗಳು ಇತ್ತೇಚೆಗೆ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಬಿಜಾಪುರದಿಂದ ಬಿಳಿ ಜೋಳ, ಬಳ್ಳಾರಿ ನವಣೆ, ಹಾವೇರಿಯ ಕಡಲೆಕಾಳು, ಶಿರಾದ ಕೊರಲೆ, ಚಿಕ್ಕನಾಯಕನಹಳ್ಳಿಯ ಹೆಸರುಕಾಳು, ಚಿಕ್ಕಮಗಳೂರಿನ ಏಲಕ್ಕಿ, ಪುತ್ತೂರಿನ ಮೆಣಸು, ಬೆಳ್ತಂಗಡಿಯ ಗೋಡಂಬಿ, ಚಳ್ಳಕೆರೆಯ ಕಡಲೆ ಬೀಜ, ಕೋಲಾರದ ರಾಗಿ, ಮೈಸೂರಿನ ಹುರುಳಿಕಾಳು, ದಾವಣಗೆರೆಯ ಮುಸುಕಿನ ಜೋಳ, ಹೊಸದುರ್ಗದ ಸಾಮೆ ಊದಲು, ಕಲಬುರಗಿಯಿಂದ ತೊಗರಿಕಾಳು, ಬಾಗಲಕೋಟೆಯ ಸಜ್ಜೆ ಸೇರಿದಂತೆ 9 ಸಿರಿಧಾನ್ಯ ಹಾಗೂ 14 ಕಾಳುಗಳನ್ನ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ರೈತರಿಂದ ನೇರವಾಗಿ ಖರೀದಿ ಮಾಡಿ ಈ ಜೀನಿಯನ್ನ ತಯಾರಿಸಲಾಗುತ್ತದೆ. ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನ ಖರೀದಿ ಮಾಡಿದ ನಂತರ ಅದನ್ನ ಅಕ್ಕಿ ಮಾಡಲಾಗುತ್ತದೆ.

    ಸಿರಿಧಾನ್ಯಗಳು ಸೇರಿದಂತೆ 14 ರೀತಿಯ ಕಾಳುಗಳನ್ನು ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಗಿಹಾಕಲಾಗುತ್ತದೆ. ಒಣಗಿದ ಕಾಳುಗಳನ್ನ ಮಹಿಳೆಯರು ಕ್ಲೀನ್ ಮಾಡ್ತಾರೆ. ನಂತರ ಮಣ್ಣಿನ ಮಡಿಕೆಯಲ್ಲಿ ಹದವಾಗಿ ಹುರಿಯಲಾಗುತ್ತೆ. ಹುರಿದ ಕಾಳುಗಳನ್ನ ಸರಿಯಾದ ಪ್ರಮಾಣದಲ್ಲಿ ಒಟ್ಟಿಗೆ ಮಿಶ್ರಣ ಮಾಡಲಾಗುತ್ತದೆ.

    ನಂತರ ಹುರಿದ ಕಾಳುಗಳನ್ನ ಪೌಡರ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ನೀವು ಮನೆಯಲ್ಲಿ ಹೇಗೆ ಅಕ್ಕಿ ಹಿಟ್ಟು, ರಾಗಿ ಹಿಟ್ಟನ್ನ ಮಾಡುತ್ತಿರೋ ಅದೇ ರೀತಿ ಮಾಡಲಾಗುತ್ತದೆ. ಇದರ ಎಕ್ಸ್ಪೆರಿ ಡೇಟ್ ಕೇವಲ 5 ತಿಂಗಳು ಮಾತ್ರ. ನ್ಯಾಚುರಲ್ ಆಗಿ ಪೌಡರ್ ಪ್ಯಾಕೇಟ್ ಆದ 5 ತಿಂಗಳ ವರೆಗೆ ಕೆಡುವುದಿಲ್ಲ. ಓಪನ್ ಮಾಡಿದ ನಂತರ ಒಂದು ತಿಂಗಳಲ್ಲಿ ಖಾಲಿ ಮಾಡಬೇಕು. ಬಳಕೆ ಮಾಡುವಾಗ ಮಾತ್ರ ತೆರೆದು, ಉಳಿದ ಸಂದರ್ಭದಲ್ಲಿ ಪ್ಯಾಕೇಟ್ ಮುಚ್ಚಿಡಬೇಕು.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ 200 ಜನರಿಗೆ ದಿಲೀಪ್ ಉದ್ಯೋಗ ನೀಡಿದ್ದಾರೆ. ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಯಂತ್ರಗಳನ್ನ ಹಾಕದೇ ಕೈಯಿಂದಲೇ ಮಾಡಿಸಲಾಗುತ್ತಿದೆ. ಒಂದು ಯಂತ್ರ 20 ಜನರ ಕೆಲಸ ಕಸಿದುಕೊಳ್ಳುತ್ತದೆ. ಹಾಗಾಗಿ ನಾವು ಯಂತ್ರಗಳನ್ನ ಹಾಕೋದಿಲ್ಲ ಅಂತಾರೆ ದಿಲೀಪ್.

    ಮಧ್ಯಾಹ್ನ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಸಹ ದಿಲೀಪ್ ಮಾಡ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀನಿ ತಯಾರಿಕೆ ಮಾಡ್ತಿದ್ರು. ಬೆಂಗಳೂರಿನ ಕಂಪನಿಗಳಂತೆಯೇ ಕಾರ್ಮಿಕರಿಗೆ ಯೂನಿಫಾರಂ ಜೊತೆಗೆ ಹೈಜೆನಿಕ್ ಮೇಂಟೇನ್ ಮಾಡಲು ಹ್ಯಾಂಡ್ ಗ್ಲೌಸ್, ಮಾಸ್ಕ್, ಕ್ಯಾಪ್‍ಗಳನ್ನು ಇಲ್ಲಿನ ಕಾರ್ಮಿಕರು ಬಳಸ್ತಾರೆ. ಒಟ್ಟಾರೆ ಜೀನಿ ತಯಾರಿಕೆಯಲ್ಲಿ ಸುರಕ್ಷಿತಾ ಕ್ರಮಗಳನ್ನ ಜೀವಿತಾ ಎಂಟಪ್ರ್ರೈಸಸ್ ಅನುಸರಿಕೊಂಡು ಹೋಗುತ್ತಿದೆ.