Tag: ಜೀತೇಂದ್ರ ಸಿಂಗ್

  • ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ

    ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ

    ನವದೆಹಲಿ: ರಾಮ ಸೇತು(Ram Setu) ಇದೆಯೇ ಎಂದು ನಿಖರವಾಗಿ ಹೇಳುವುದು ಕಷ್ಟ ಸಾಧ್ಯ. ಆದರೆ ಅಲ್ಲಿ ಸೇತುವೆ ರೂಪದ ರಚನೆ ಇದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ(Rajya Sabha) ಉತ್ತರ ನೀಡಿದೆ.

    ಹರ್ಯಾಣದ ಸ್ವತಂತ್ರ ಸಂಸದ ಕಾರ್ತಿಕೇಯ ಶರ್ಮಾ ಅವರು, ಈ ಹಿಂದಿನ ಸರ್ಕಾರ ರಾಮ ಸೇತು ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು. ಈಗಿನ ಸರ್ಕಾರ ದೇಶದ ಗತಕಾಲದ ಚರಿತ್ರೆಗೆ ಸಾಕ್ಷಿಯಾಗಿರುವ ರಾಮ ಸೇತು ಬಗ್ಗೆ ವೈಜ್ಞಾನಿಕ ಸಂಶೋಧನೆಗೆ ಮುಂದಾಗಿದೆಯೇ ಎಂದು ಪ್ರಶ್ನೆ ಕೇಳಿದ್ದರು.

    ಈ ಪ್ರಶ್ನೆಗೆ ಉತ್ತರ ನೀಡಿದ ಬಾಹ್ಯಾಕಾಶ ಖಾತೆಯ ರಾಜ್ಯ ಸಚಿವ ಜೀತೇಂದ್ರ ಸಿಂಗ್, 18 ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸೇತುವೆಯ ಬಗ್ಗೆ ಈಗ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆ ಸೇತುವೆಯು ಸುಮಾರು 56 ಕಿಲೋಮೀಟರ್‌ಗಳಷ್ಟು ಉದ್ದವಾಗಿದ್ದು, ಇದನ್ನು ಕಂಡುಹಿಡಿಯಲು ನಮಗೆ ಕೆಲವು ಮಿತಿಗಳಿವೆ ಎಂದು ಹೇಳಿದರು.

    ಸ್ವಲ್ಪ ಮಟ್ಟಿಗೆ ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ತುಣುಕುಗಳು, ಕೆಲವು ರೀತಿಯ ಸುಣ್ಣದ ಕಲ್ಲುಗಳನ್ನು ಕಂಡುಹಿಡಿಯಲು ಸಾಧ್ಯವಾಗಿದೆ. ಇದು ಅವಶೇಷಗಳು ಅಥವಾ ಸೇತುವೆಯ ಭಾಗಗಳೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.

    ಸಂಕ್ಷಿಪ್ತವಾಗಿ ಹೇಳುವುದಾದರೆ ಅಲ್ಲಿ ಅಸ್ತಿತ್ವದಲ್ಲಿದ್ದ ರಚನೆಯನ್ನು ನಿಖರವಾಗಿ ಗುರುತಿಸುವುದು ಕಷ್ಟ, ಆದರೆ ಆ ರಚನೆಗಳು ಅಸ್ತಿತ್ವದಲ್ಲಿವೆ ಎಂಬುದಕ್ಕೆ ನೇರ ಅಥವಾ ಪರೋಕ್ಷವಾಗಿ ಕೆಲವು ರೀತಿಯ ಸೂಚನೆಗಳಿವೆ. ಬಾಹ್ಯಾಕಾಶ ಇಲಾಖೆ ರಾಮಸೇತು ಬಗ್ಗೆ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ ಎಂದು ಸಂಸದರೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದು ಜೀತೇಂದ್ರ ಸಿಂಗ್(Jitendra Singh) ಹೇಳಿದರು. ಇದನ್ನೂ ಓದಿ: ರಾಮ ಸೇತುವೆ ಅಸ್ತಿತ್ವ ನಿಜ ಅಂತಿದೆ ಅಮೆರಿಕ ವಾಹಿನಿಯ ಈ ಪ್ರೋಮೋ

    ಹಿಂದೂ ಪುರಾಣಗಳಲ್ಲಿ ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸಂಯೋಜನೆಯನ್ನು ರಾಮ ಸೇತು ಕರೆಯಲಾಗುತ್ತದೆ. ಯುಪಿಎ-1 ಅವಧಿಯಲ್ಲಿನ ವಿವಾದಿತ ಸೇತುಸಮುದ್ರಂ ಹಡಗು ಕಾಲುವೆ ಯೋಜನೆಯ ವಿರುದ್ಧ ಸುಬ್ರಮಣಿಯನ್‌ ಸ್ವಾಮಿ(Subramanian Swamy) ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

    2018ರಲ್ಲಿ ಸೇತುಸಮುದ್ರಂ(Sethusamudram) ಯೋಜನೆಗಾಗಿ ಮೊದಲು ನಿಗದಿಯಾಗಿದ್ದ ಮಾರ್ಗಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗುವುದು. ರಾಷ್ಟ್ರದ ಹಿತದೃಷ್ಟಿಯಿಂದ ರಾಮಸೇತುವೆಗೆ ಯಾವುದೇ ಹಾನಿ ಮಾಡದಂತೆ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಹಿಂದೆ ಅಫಿಡವಿಟ್‍ನಲ್ಲಿ ಸುಪ್ರೀಂಗೆ ತಿಳಿಸಿತ್ತು. ಕೇಂದ್ರದಿಂದ ಈ ನಿರ್ಧಾರ ಬಂದ ಕೂಡಲೇ ಸುಬ್ರಮಣಿಯನ್‌ ಸ್ವಾಮಿ ರಾಮ ಸೇತುವೆಯನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ(National Heritage Monument) ಘೋಷಿಸುವಂತೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.

    ಪ್ರಾಚೀನ ಪುರಾಣದ ದಂತಕತೆಗಳನ್ನೊಳಗೊಂಡ ರಾಮಸೇತು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಇದು ತಮಿಳುನಾಡಿನ ಆಗ್ನೇಯ ಕರಾವಳಿಯ ರಾಮೇಶ್ವರದಿಂದ ಶ್ರೀಲಂಕಾದ ವಾಯುವ್ಯ ಕರಾವಳಿಯ ಮನ್ನಾರ್ ದ್ವೀಪಕ್ಕೆ ಸಂಪರ್ಕಿಸುತ್ತದೆ. ಹಿಂದೂ ಪುರಾಣ ಹಾಗೂ ರಾಮಾಯಣದಲ್ಲಿ ರಾಮನು ರಾವಣನ ವಿರುದ್ಧ ಹೋರಾಡಲು ಲಂಕೆಗೆ ಹೋಗುತ್ತಿದ್ದಾಗ ರಾಮನ ಸೈನ್ಯ ಈ ಸೇತುವೆ ನಿರ್ಮಾಣ ಮಾಡಿದೆ ಎಂದು ಉಲ್ಲೇಖವಿದೆ.

    Live Tv
    [brid partner=56869869 player=32851 video=960834 autoplay=true]

  • ಹನಿಟ್ರ್ಯಾಪ್‍ಗೆ ಬಲೆಗೆ ಬಿದ್ದು ಪಾಕಿಗೆ ಸೇನಾ ಮಾಹಿತಿ ರವಾನೆ

    ಹನಿಟ್ರ್ಯಾಪ್‍ಗೆ ಬಲೆಗೆ ಬಿದ್ದು ಪಾಕಿಗೆ ಸೇನಾ ಮಾಹಿತಿ ರವಾನೆ

    ಬೆಂಗಳೂರು: ಪಾಕಿಸ್ತಾನದ ಗೂಢಾಚಾರಿಯಾಗಿ ಕೆಲಸ ಮಾಡಿ ಬಂಧನಕ್ಕೆ ಒಳಗಾದ ವ್ಯಕ್ತಿ ಐಎಸ್‍ಐ ಬೀಸಿದ ಹನಿಟ್ರ್ಯಾಪ್‍ಗೆ ಒಳಗಾಗಿದ್ದ ವಿಚಾರ ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ರಾಜಸ್ಥಾನ ಮೂಲದ ಜೀತೇಂದ್ರ ಸಿಂಗ್ ಭಾರತೀಯ ಸೇನೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಈತ ರವಾನಿಸುತ್ತಿದ್ದ. ಭಾರತೀಯ ಸೇನೆಯ ಯೂನಿಫಾರ್ಮ್ ಹಾಕಿಕೊಂಡು ತಾನೂ ಕಮಾಂಡೋ ಎಂಬಂತೆ ಪೋಸ್ ಕೊಡುತ್ತಿದ್ದ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಗಡಿಯಲ್ಲಿ ಸಾರ್ವಜನಿರು, ಸೇನೆಯ ಅಧಿಕಾರಿಗಳನ್ನ ಟ್ರ್ಯಾಪ್ ಮಾಡಲು ಐಎಸ್‍ಐ ಬಲೆ ಬೀಸುತ್ತದೆ. ಸೈನಿಕರಿಗೆ, ಅಧಿಕಾರಿಗಳಿಗೆ ಹಣದ ಆಸೆ ತೋರಿಸಿ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸುತ್ತದೆ. ಜಿತೇಂದರ್ ಸಿಂಗ್‍ನನ್ನು ಕೂಡ ಹೆಣ್ಣು ಮತ್ತು ಹಣ ತೋರಿಸಿ ಟ್ರ್ಯಾಪ್ ಮಾಡಲಾಗಿತ್ತು. ಇದನ್ನೂ ಓದಿ:  ಮೊದಲ ಅವಾರ್ಡ್ ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್ ಅಂಬರೀಷ್

    ಐಎಸ್‍ಐ ಏಜೆಂಟ್ ಯುವತಿ ಜಿತೇಂದರ್ ಸಿಂಗ್ ಫೇಸ್‍ಬುಕ್‍ನಲ್ಲಿ ಫ್ರೆಂಡ್ ಆಗಿ ರಹಸ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಳು.ಭಾರತೀಯ ಸೇನೆಯ ಬಗ್ಗೆ ವಾಟ್ಸಪ್ ಮೂಲಕ ಈತ ಮಾಹಿತಿ ನೀಡುತ್ತಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಕಾಟನ್ ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಸೇನಾಧಿರಿಸು ಧರಿಸಿ ವಂಚನೆಗೆ ಇಳಿದಿದ್ದು, ಇಂದು ಮಿಲಿಟರಿ ಇಂಟಲಿಜೆನ್ಸ್ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯ ವೇಳೆ ಸಿಕ್ಕಿಬಿದ್ದಿದ್ದಾನೆ.