Tag: ಜೀತು ಚೌಧರಿ

  • ಗುಂಡಿಕ್ಕಿ ಬಿಜೆಪಿ ಮುಖಂಡ ಜೀತು ಚೌಧರಿ ಹತ್ಯೆ

    ಗುಂಡಿಕ್ಕಿ ಬಿಜೆಪಿ ಮುಖಂಡ ಜೀತು ಚೌಧರಿ ಹತ್ಯೆ

    ನವದೆಹಲಿ: ಬಿಜೆಪಿ ನಾಯಕ ಜೀತು ಚೌಧರಿ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಬುಧವಾರ ರಾತ್ರಿ 8:15ರ ಸುಮಾರಿಗೆ ಬಿಜೆಪಿ ನಾಯಕನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  2023ರ ವಿಧಾನಸಭಾ ಚುನಾವಣೆ ಮೇಲೆ ಕೇಜ್ರಿವಾಲ್ ಚಿತ್ತ – ಬೆಂಗಳೂರಿನಲ್ಲಿ ಭಾಷಣ

    crime

    ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಅಧಿಕಾರಿಗಳು ದೆಹಲಿಯ ಮಯೂರ್ ವಿಹಾರ್-III, ಪಾಕೆಟ್ ಸಿ -1 ಬಳಿ ಜಮಾಯಿಸಿರುವುದನ್ನು ಗಮನಿಸಿದ್ದಾರೆ. ನಂತರ ಗುಂಪಿನಲ್ಲಿ ಒಬ್ಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ನೋಡಿದ್ದು, ಪರಿಶೀಲನೆ ನಡೆಸಿದಾಗ ಅದು ಜಿತೇಂದರ್ ಅಕಾ ಜೀತು ಚೌಧರಿ ಎಂದು ತಿಳಿದುಬಂದಿದೆ. ನಂತರ ಗುಂಡೇಟಿನಿಂದ ಒದ್ದಾಡುತ್ತಿದ್ದ ಅವರನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಸ್ಥಳದಿಂದ ಕೆಲವು ಖಾಲಿ ಕಾಟ್ರಿಡ್ಜ್‍ಗಳು ಮತ್ತು ಇತರೆ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳಿಗಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ಹೆದ್ದಾರಿ ಅಭಿವೃದ್ಧಿಗೆ ಭಾರತ್ ಮಾಲಾ 2ರಲ್ಲಿ ಪರಿಗಣನೆ: ಗಡ್ಕರಿ ಭರವಸೆ