Tag: ಜಿ7 ರಾಷ್ಟ್ರಗಳು

  • ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ

    ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ

    ವಾಷಿಂಗ್ಟನ್‌: ಚೀನಾ ಸೇರಿದಂತೆ ರಷ್ಯಾದಿಂದ ತೈಲ (Russian Oil) ಖರೀದಿ ರಾಷ್ಟ್ರಗಳ ಮೇಲೆ ಸುಂಕ (Tariffs) ವಿಧಿಸುವಂತೆ ಅಮೆರಿಕ ತನ್ನ G7 ದೇಶಗಳಿಗೆ (7 ರಾಷ್ಟ್ರಗಳ ಒಕ್ಕೂಟ) ಕರೆ ನೀಡಿದೆ.

    ಉಕ್ರೇನ್‌ ವಿರುದ್ಧದ ಯುದ್ಧವನ್ನು (Russia Ukraine War) ಸಕ್ರಿಯಗೊಳಿಸಲು ಬಯಸುವ ದೇಶಗಳ ಮೇಲೆ ಸಂಭಾವ್ಯ ಸುಂಕ ವಿಧಿಸುವ ಕುರಿತು 7 ರಾಷ್ಟ್ರಗಳ ಹಣಕಾಸು ಸಚಿವರು ಶುಕ್ರವಾರ ನಡೆದ ಜಿ7 ಸಭೆಯಲ್ಲಿ ಚರ್ಚಿಸಿದರು. ಕೆನಡಾ ಹಣಕಾಸು ಸಚಿವ ಫ್ರಾಂಕೋಯಿಸ್-ಫಿಲಿಪ್ ಷಾಂಪೇನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದನ್ನೂ ಓದಿ: 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್‌

    ಸಭೆಯಲ್ಲಿ ಉಕ್ರೇನ್‌ ವಿರುದ್ಧ ಯುದ್ಧವನ್ನು ಕೊನೆಗಾಣಿಸಲು ರಷ್ಯಾದ ಮೇಲೆ ಸಾಧ್ಯವಾದಷ್ಟು ಒತ್ತಡ ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಜೊತೆಗೆ ರಷ್ಯಾದ ಯುದ್ಧದ ಪ್ರಯತ್ನಕ್ಕೆ ಸಹಕಾರ ನೀಡುತ್ತಿರುವ ದೇಶಗಳ ಮೇಲೆ ಮತ್ತಷ್ಟು ನಿರ್ಬಂಧ ಹಾಗೂ ಸುಂಕದಂತಹ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲು ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಸಮುದ್ರದ ತಳದಲ್ಲಿ ಇದೆಯಂತೆ ಸಿಹಿನೀರು – ಭೂಮಿ ಮೇಲಿನ ಜನರಿಗೆ ಕುಡಿಯೋಕೆ ಸಿಗುತ್ತಾ?

    ಸಭೆಯ ಬಳಿಕ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ (Scott Bessent) ಜಂಟಿ ಹೇಳಿಕೆ ಬಿಡುಗಡೆ ಮಾಡಿದರು. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು ಅಮೆರಿಕದೊಂದಿಗೆ ಸೇರಬೇಕು ಕರೆ ನೀಡಲಾಗಿದೆ. ಪುಟಿನ್‌ ಅವರ ಯುದ್ಧ ತಂತ್ರವನ್ನು ಕೊನೆಗೊಳಿಸಬೇಕಾದ್ರೆ ಹಣಕಾಸು ಒದಗಿಸುವುದನ್ನು ಕಡಿತಗೊಳಿಸಬೇಕು. ಅರ್ಥಹೀನ ಹತ್ಯೆಯನ್ನು ತಡೆಯಲು ಇದೊಂದೇ ಮಾರ್ಗ, ಆರ್ಥಿಕ ಒತ್ತಡ ಸೃಷ್ಟಿಸಿದ್ರೆ ಯುದ್ಧ ತಾನಾಗೇ ನಿಲ್ಲುತ್ತದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಅಮೆರಿಕದ ಖಜಾನೆ ವಕ್ತಾರರು, ಜಿ7 ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳಿಗೆ ರಷ್ಯಾದ ತೈಲ ಖರೀದಿಯನ್ನ ನಿಲ್ಲಿಸುವಂತೆ ಒತ್ತಡ ಹೇರುವಂತೆ ಕರೆ ನೀಡಿದ್ದರು. ಇದನ್ನೂ ಓದಿ: ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ಸುಂಕ ವಿಧಿಸಿದ್ದೇಕೆ?
    ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿದೆ. ಈ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಅನ್ನೋದು ಟ್ರಂಪ್‌ ಅವರ ಬಲವಾದ ವಾದ. ಅದಕ್ಕಾಗಿ ಈ ಹಿಂದೆ ವಿಧಿಸಿದ್ದ 25% ಆಮದು ಸುಂಕವನ್ನ ಕಳೆದ ಆಗಸ್ಟ್‌ 27ರಿಂದ 50%ಗೆ ಏರಿಸಿದೆ. ಆದ್ರೆ ಪಾಕಿಸ್ತಾನದ ಆಮದಿನ ಮೇಲೆ ಟ್ರಂಪ್‌ 19% ಸುಂಕ ಮಾತ್ರ ವಿಧಿಸಿದ್ದಾರೆ. ಇದನ್ನೂ ಓದಿ: ಚಾರ್ಲಿ ಕಿರ್ಕ್‌ ಹತ್ಯೆಯ ಶಂಕಿತ ಆರೋಪಿ ಬಂಧನ: ಡೊನಾಲ್ಡ್‌ ಟ್ರಂಪ್‌

  • ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

    ಜರ್ಮನಿ ಸಚಿವರ ಭಾರತ ಪ್ರವಾಸ – ಹಲವು ಒಪ್ಪಂದಗಳಿಗೆ ಇಂದು ಸಹಿ

    ನವದೆಹಲಿ: ಚೀನಾ (China), ರಷ್ಯಾದೊಂದಿಗೆ (Russia) ಭಾರತದ ಸಂಬಂಧಗಳು ಹಾಗೂ ಭಾರತ ಮತ್ತು ಜರ್ಮನಿ ನಡುವಿನ ಅಭಿವೃದ್ಧಿ ಸಹಕಾರ ಕುರಿತು ಚರ್ಚೆ ನಡೆಸಲು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ (Annalena Baerbock) ಅವರು ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

    ಅನ್ನಾಲೆನಾ ಬೇರ್ಬಾಕ್ ಎರಡು ದಿನಗಳ ಭೇಟಿಯಾಗಿ ಭಾರತಕ್ಕೆ ಆಗಮಿಸಿದ್ದು, ವಿದೇಶಾಂಗ ಸವಿವ ಜೈಶಂಕರ್ (Jaishankar) ಜೊತೆಗೆ ಮಾತುಕತೆ ನಡೆಸಲಿದ್ದಾರೆ. ರಷ್ಯಾ-ಉಕ್ರೆನ್ ಸಂಘರ್ಷದ (Russia Ukraine War) ಜಾಗತಿಕ ಪರಿಣಾಮಗಳು, ಗಾಲ್ವಾನ್ ಕಣಿವೆ ಘಟನೆಗಳು, ಚೀನಾದೊಂದಿಗೆ ಭಾರತದ ಸಂಬಂಧಗಳ ಕುರಿತು ಉಭಯ ದೇಶಗಳ ಸಚಿವರು ಚರ್ಚೆ ಮಾಡಲಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್

    ಇದೇ ವೇಳೆ ಎರಡೂ ಕಡೆಯವರು ವಿವಿಧ ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಇದರಿಂದ ಪರಸ್ಪರ ದೇಶದ ಜನರು ಎರಡೂ ದೇಶಗಳಲ್ಲಿ ಅಧ್ಯಯನ, ಸಂಶೋಧನೆ ಹಾಗೂ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕ ಶಾಕ್‌!

    ಭಾರತ ಜಿ7 ರಾಷ್ಟ್ರಗಳ (G7 Nations) ಅಧ್ಯಕ್ಷತೆ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಜರ್ಮನ್ ಸಚಿವರು ಭೇಟಿ ನೀಡಿದ್ದಾರೆ. ಜಿ20 ಶೃಂಗ ಸಭೆಯಲ್ಲಿ ಭಾರತವು ಜಾಗತಿಕವಾಗಿ ತನ್ನ ಸಾಮರ್ಥ್ಯ ನಿರ್ವಹಿಸಲು ಸಿದ್ಧವಾಗಿದೆ ಎಂಬುದನ್ನು ತೋರಿಸಿದೆ. ಎಲ್ಲಾ ಆಂತರಿಕ ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ಭಾರತ ವಿಶ್ವದ ಇತರ ದೇಶಗಳಿಗೆ ಮಾದರಿಯಾಗಿದೆ. ಅಲ್ಲದೇ ಕಳೆದ 15 ವರ್ಷಗಳಲ್ಲಿ ಭಾರತವು 400 ಮಿಲಿಯನ್ ಜನರನ್ನು ಸಂಪೂರ್ಣ ಬಡತನದಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

    ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

    ನವದೆಹಲಿ: ಒಂದು ಷರತ್ತನ್ನು ವಿಧಿಸಿದ ಭಾರತಕ್ಕೆ ಇನ್ನಷ್ಟು ರಿಯಾಯಿತಿ ದರದಲ್ಲಿ ತೈಲವನ್ನು(Crude Oil) ನೀಡಲು ನಾನು ಸಿದ್ಧ ಎಂದು ರಷ್ಯಾ(Russia) ಹೇಳಿದೆ.

    ರಷ್ಯಾ ಭಾರೀ ರಿಯಾಯಿತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತಕ್ಕೆ(India) ನೀಡಲು ಮುಂದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಭಾರತ ಜಿ7(G7) ರಾಷ್ಟ್ರದ ಪ್ರಸ್ತಾಪಗಳನ್ನು ಬೆಂಬಲಿಸಬಾರದು ಎಂದು ರಷ್ಯಾ ಷರತ್ತು ವಿಧಿಸಿದೆ.

    ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದ ಮೇಲೆ ಯುರೋಪ್ ಮತ್ತು ಅಮೆರಿಕ ಹಲವು ಆರ್ಥಿಕ ನಿರ್ಬಂಧ ವಿಧಿಸಿದೆ. ಆರ್ಥಿಕ ನಿರ್ಬಂಧ ವಿಧಿಸಿದರೂ ರಷ್ಯಾ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರದ ಪರಿಣಾಮ ಜಿ7 ರಾಷ್ಟ್ರಗಳು ಮತ್ತೊಂದು ಆರ್ಥಿಕ ಸಮರಕ್ಕೆ ಮುಂದಾಗಿವೆ. ರಷ್ಯಾದ ತೈಲ ಆಮದಿನ ಮೆಲೆ ಬೆಲೆ ಮಿತಿಯನ್ನು ಜಾರಿಗೊಳಿಸಲು ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಮುಂದಾಗಿದೆ.

    ಯುದ್ಧ ಸಾರಿದ ಬಳಿಕ ಭಾರತ ಮತ್ತು ಚೀನಾ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ರಷ್ಯಾದಿಂದ ಆಮದು ಮಾಡುತ್ತಿದೆ. ಈ ಕಾರಣಕ್ಕೆ ಜಿ7 ರಾಷ್ಟ್ರಗಳು ಒತ್ತಡಕ್ಕೆ ಭಾರತ ಮಣಿಯದೇ ಇದ್ದರೆ ಮತ್ತಷ್ಟು ಅಗ್ಗದ ದರದಲ್ಲಿ ತೈಲ ಪೂರೈಸುವುದಾಗಿ ರಷ್ಯಾ ಹೇಳಿದೆ. ಈ ಬಗ್ಗೆ ಭಾರತ ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಾತುಕತೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    ಎಷ್ಟು ಅಗ್ಗದಲ್ಲಿ ಸಿಕ್ಕಿತ್ತು?
    ರಷ್ಯಾ ಭಾರತಕ್ಕೆ ಮೇ ತಿಂಗಳಿನಲ್ಲಿ ಸರಾಸರಿ ತೈಲ ಬೆಲೆ 110 ಡಾಲರ್(8,751 ರೂ.) ಇದ್ದಾಗ 16 ಡಾಲರ್‌ನಷ್ಟು(1,272 ರೂ.) ರಿಯಾಯಿತಿ ದರದಲ್ಲಿ ತೈಲವನ್ನು ಪೂರೈಸಿತ್ತು. ಬಳಿಕ ಜೂನ್ ತಿಂಗಳಿನಲ್ಲೂ ಸರಾಸರಿ ತೈಲ ಬೆಲೆ 116 ಡಾಲರ್(9,226 ರೂ.) ಇದ್ದಾಗ 14 ಡಾಲರ್(1,193 ರೂ.) ವರೆಗಿನ ರಿಯಾಯಿತಿಯನ್ನು ನೀಡಿತ್ತು. ಇದೀಗ ರಷ್ಯಾ ಭಾರತಕ್ಕೆ ಮತ್ತೆ ಶೇ.27 ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಲು ಮುಂದಾಗಿದೆ.

    ಭಾರತದ ತೈಲ ಅಗತ್ಯದಲ್ಲಿ ರಷ್ಯಾ ಶೇ.18.2 ರಷ್ಟು ತೈಲವನ್ನು ಪೂರೈಕೆ ಮಾಡುತ್ತದೆ. ಈ ಮೂಲಕ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಶೇ.20.8 ರಷ್ಟು ತೈಲ ಪೂರೈಕೆ ಮಾಡಿದರೆ, ಇರಾಕ್ ಶೇ.20.6 ರಷ್ಟು ನೀಡುತ್ತದೆ. ಈ ಮೂಲಕ ಈ ಎರಡು ರಾಷ್ಟ್ರಗಳು ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಮೊದಲ ಹಾಗೂ 2ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ

    Live Tv
    [brid partner=56869869 player=32851 video=960834 autoplay=true]