Tag: ಜಿ20 ಸಭೆ

  • G-20 ಶೃಂಗಸಭೆ ಹಿನ್ನೆಲೆ ಸೆ.14ರ ವರೆಗೆ ಚೀನಾ-ಪಾಕ್ ಗಡಿಯಲ್ಲಿ ಡ್ರಿಲ್ಲಿಂಗ್ ಕಾರ್ಯಾಚರಣೆ ಸ್ಥಗಿತ

    G-20 ಶೃಂಗಸಭೆ ಹಿನ್ನೆಲೆ ಸೆ.14ರ ವರೆಗೆ ಚೀನಾ-ಪಾಕ್ ಗಡಿಯಲ್ಲಿ ಡ್ರಿಲ್ಲಿಂಗ್ ಕಾರ್ಯಾಚರಣೆ ಸ್ಥಗಿತ

    – ಭದ್ರತೆಗೆ ಸುಧಾರಿತ ಯುದ್ಧ ವಿಮಾನಗಳ ನಿಯೋಜನೆ

    ಶ್ರೀನಗರ: ಜಿ20 ಶೃಂಗಸಭೆಗೆ (G20 Summit) ಭಾರತ ಸಂಪೂರ್ಣ ಸಿದ್ಧವಾಗಿದೆ. ಬರುವ ಗಣ್ಯರಿಗೆ ವಾಸ್ತವ್ಯದೊಂದಿಗೆ ಹಲವು ಹಂತಗಳಲ್ಲಿ ಭದ್ರತೆ ನಿಯೋಜನೆ ಮಾಡಲಾಗಿದೆ. ಈ ನಡುವೆ ಭಾರತೀಯ ವಾಯುಸೇನೆಯು (IAF) ಉತ್ತರ ವಲಯದಲ್ಲಿ ನಡೆಯುತ್ತಿರುವ ತ್ರಿಶೂಲ್ ವ್ಯಾಯಾಮಕ್ಕೆ (ಡ್ರಿಲ್ಲಿಂಗ್) ವಿರಾಮ ನೀಡಿದೆ. ಸೆಪ್ಟೆಂಬರ್ 10ರ ವರೆಗೆ ಯಾವುದೇ ಯುದ್ಧ ವಿಮಾನಗಳು (Fighter Jets) ಹಾರಾಟ ನಡೆಸುವುದಿಲ್ಲ. ಡ್ರಿಲ್ಲಿಂಗ್ ಕಾರ್ಯಾಚರಣೆಯನ್ನು ಮೊಟಕುಗೊಳಿಸಲಾಗುವುದು ಎಂದು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ.

    ಇದೇ ಅವಧಿಯಲ್ಲಿ G20 ಶೃಂಗಸಭೆ (G-20 Summit) ನಡೆಯಲಿದ್ದು ರಾಜಧಾನಿಯ ವಾಯು ಪ್ರದೇಶವನ್ನು ರಕ್ಷಿಸಲು ಹಾಗೂ ದೇಶಾದ್ಯಂತ ವಾಯುನೆಲೆಗಳಲ್ಲಿ ಹೆಚ್ಚಿನ ನಿಗಾ ಇರಿಸಲು ಫಾಲ್ಕನ್ ಅವಾಕ್ಸ್ ವಿಮಾನವನ್ನ ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ರಫೇಲ್ ಸೇರಿದಂತೆ ಇತರೆ ಸುಧಾರಿತ ಯುದ್ಧ ವಿಮಾನಗಳನ್ನ ವಾಯುನೆಲೆಗಳಲ್ಲಿ ಭದ್ರತೆಗೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ಜಿ20 ಶೃಂಗಸಭೆ ಹಿನ್ನೆಲೆ ಗಣ್ಯಾತಿಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಆದ್ದರಿಂದ ಶತ್ರು ವಿಮಾನ ಭಾರತಕ್ಕೆ ನುಸುಳಿದರೆ ಅಥವಾ ಡ್ರೋನ್ ಮೂಲಕ ದಾಳಿ ನಡೆಸುವ ಪ್ರಯತ್ನಗಳು ನಡೆದರೆ ತಕ್ಷಣವೇ ಹೊಡೆದುರುಳಿಸಲು ಸುಧಾರಿತ ಯುದ್ಧವಿಮಾನಗಳ ನಿಯೋಜನೆ ಮಾಡಲಾಗಿದೆ. ಅದಕ್ಕಾಗಿ ದೆಹಲಿಯ ಸುತ್ತಮುತ್ತಲಿನ ವಾಯುನೆಲೆಗಳಲ್ಲೂ ಯುದ್ಧ ವಿಮಾನಗಳ ನಿಯೋಜನೆ ಮಾಡಲಾಗಿದೆ ಎಂದು ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ

    ಭಾರತೀಯ ವಾಯುಪಡೆಯು ಸೆಪ್ಟೆಂಬರ್ 4 ರಿಂದ ಚೀನಾ ಮತ್ತು ಪಾಕಿಸ್ತಾನ ಗಡಿಯುದ್ಧಕ್ಕೂ ಉತ್ತರ ವಲಯದಲ್ಲಿ ತ್ರಿಶೂಲ್ ವ್ಯಾಯಾಮ (ಡ್ರಿಲ್ಲಿಂಗ್) ನಡೆಸುತ್ತಿದೆ. ಲಡಾಖ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಪಂಜಾಬ್ ಸೇರಿದಂತೆ ಉತ್ತರ ವಲಯದಲ್ಲಿ ಡ್ರಿಲ್ಲಿಂಗ್ ನಡೆಯುತ್ತಿದ್ದು, ಸೆಪ್ಟೆಂಬರ್ 14ರಂದು ಇದು ಮುಕ್ತಾಯಗೊಳ್ಳಲಿದೆ. ರಫೇಲ್, ಮಿರಾಜ್-2000, SU-30MKI, ಹೆವಿ-ಲಿಫ್ಟ್ ಸಾರಿಗೆ ವಿಮಾನಗಳು, ಚಿನೂಕ್ಸ್ ಮತ್ತು ಅಪಾಚೆ ಸೇರಿದಂತೆ ಚಾಪರ್‌ಗಳು ತರಬೇತಿಯಲ್ಲಿ ಪಾಲ್ಗೊಳ್ಳುತ್ತಿವೆ. ಸೆಪ್ಟೆಂಬರ್ 10ರ ವರೆಗೆ ಈ ತರಬೇತಿಗೆ ವಿರಾಮ ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಂಪಿಯಲ್ಲಿ ನಡೆದ ಜಿ20 ಸಭೆ ಯಶಸ್ವಿ: ಅಮಿತಾಬ್ ಕಾಂತ್

    ಹಂಪಿಯಲ್ಲಿ ನಡೆದ ಜಿ20 ಸಭೆ ಯಶಸ್ವಿ: ಅಮಿತಾಬ್ ಕಾಂತ್

    ವಿಜಯನಗರ: ಹಂಪಿಯಲ್ಲಿ ನಡೆದ ಜಿ20  ಶೆರ್ಪಾ ಸಭೆ (G20 Summit) ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾಗವಹಿಸಿದ ಶೆರ್ಪಾಗಳಿಗೆ ಅಭೂತಪೂರ್ವ ಅನುಭವವಾಗಿದೆ ಎಂದು ಭಾರತದ ಶೆರ್ಪಾ ಅಮಿತಾಬ್ ಕಾಂತ್ (Amitabh Kant) ತಿಳಿಸಿದ್ದಾರೆ.

    ಹಂಪಿಯ (Hampi) ಎವಾಲ್ವ್ ಬ್ಯಾಕ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಪಿಯನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡಿದ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಅಭಿನಂದನಾರ್ಹರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಹಾಗೂ ಮಕ್ಕಳ ಪ್ರದರ್ಶನ ಚೆನ್ನಾಗಿತ್ತು. ಹಂಪಿ ಬೈ ನೈಟ್ ಬಹಳ ಒಳ್ಳೆಯ ಅನುಭವ ನೀಡಿದೆ. ಹಂಪಿ ಭಿನ್ನವಾಗಿ ಸುಂದರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ರಾಜೀನಾಮೆ

    ಮೂರನೇ ಜಿ20 ಶೃಂಗಸಭೆಗೆ ಹಂಪಿ ಸಾಕ್ಷಿಯಾಗಿದೆ. ಈ ಸಭೆಯಲ್ಲಿ ಯಾವುದಕ್ಕೆ ಭಾರತದ ಪ್ರಾಮುಖ್ಯತೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಗಿದೆ. ಸಭೆಯಲ್ಲಿ ಜಿ20 ರಾಷ್ಟ್ರಗಳು ಯಶಸ್ವಿಯಾಗಿ ಭಾಗವಹಿಸಿವೆ. ಅಲ್ಲದೇ ಪ್ರಾಪಂಚಿಕ ಅಭಿವೃದ್ಧಿಪರ ವಿಚಾರಗಳು ಚರ್ಚೆಯಾಗಿದ್ದು, ತಾಂತ್ರಿಕತೆಯ ಕೊಂಡುಕೊಳ್ಳುವಿಕೆ ಮತ್ತು ವಿನಿಮಯ ಮಾಡಿಕೊಳ್ಳಲು ಒಪ್ಪಂದವಾಗಿದೆ. ಪ್ರಮುಖವಾಗಿ ಆಫ್ರಿಕನ್ ಒಕ್ಕೂಟಗಳಿಗೆ ಜಿ20 ಸದಸ್ಯತ್ವ ನೀಡಲು ಒತ್ತಾಯಿಸಲಾಗಿದೆ. ಇದಕ್ಕೆ ಉಳಿದ ದೇಶಗಳು ಸಹಮತ ಸೂಚಿಸಿವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?

    ಈ ಬಾರಿಯ ಜಿ20 ಶೃಂಗಸಭೆಯು ಜುಲೈ 9ರಿಂದ 16ರವರೆಗೆ ಹಂಪಿಯಲ್ಲಿ ನಡೆದಿದ್ದು, ಭಾರತ ಅಧ್ಯಕ್ಷೀಯ ರಾಷ್ಟ್ರವಾಗಿತ್ತು. ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಆಯುಷ್ಮಾನ್, ಆರೋಗ್ಯ ಕರ್ನಾಟಕಕ್ಕೆ ಕೇಂದ್ರ 60% ನೆರವು ನೀಡಲಿ – ದಿನೇಶ್ ಗುಂಡೂರಾವ್ ಮನವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]