Tag: ಜಿ.ಪರಮೇಶ್ವರ್

  • ಚಿತ್ತಾಪುರ RSS ಪಥ ಸಂಚಲನ – ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ತೀರ್ಮಾನ: ಪರಮೇಶ್ವರ್

    ಚಿತ್ತಾಪುರ RSS ಪಥ ಸಂಚಲನ – ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ತೀರ್ಮಾನ: ಪರಮೇಶ್ವರ್

    – ಕಡ್ಡಾಯ ಅನುಮತಿ ಆದೇಶ RSS ದೃಷ್ಟಿಯಿಂದ ಮಾಡಿದ್ದಲ್ಲ ಎಂದ ಸಚಿವ

    ಬೆಂಗಳೂರು: ಚಿತ್ತಾಪುರದಲ್ಲಿ (Chittapur) ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್ ಹಾಗೂ ಭೀಮ್ ಆರ್ಮಿ ಒಟ್ಟಿಗೆ ಅನುಮತಿ ಕೇಳಿದ್ದಾರೆ. ಸರ್ಕಾರದ ಮಾರ್ಗಸೂಚಿಯನ್ವಯ ಜಿಲ್ಲಾಡಳಿತ ಅದರ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ತಿಳಿಸಿದರು.

    ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಸರ್ಕಾರದ ಮಾರ್ಗಸೂಚಿ ಪ್ರಕಾರ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಸಾರ್ವಜನಿಕ, ಸರ್ಕಾರಿ ಸ್ಥಳಗಳ ಬಳಕೆ ಅನುಮತಿ ಪಡೆಯುವ ಆದೇಶ ಆರ್‌ಎಸ್‌ಎಸ್‌ಗೆ ಮಾತ್ರ ಸೀಮಿತ ಅಲ್ಲ. ಈಗ ಹೊರಡಿಸಿರುವ ತುರ್ತು ಆದೇಶದಲ್ಲಿ ಕ್ಲಾರಿಟಿ ಇದೆ. ಅದರಲ್ಲಿ ಎಲ್ಲಾದರೂ ಆರ್‌ಎಸ್‌ಎಸ್ ಪದ ಬಳಕೆ ಆಗಿದೆಯಾ? ಸುಮ್ಮನೆ ಅನವಶ್ಯಕವಾಗಿ RSSಗೆ ಮಾಡಿದ್ದಾರೆ ಅಂತ ಹೇಳೋದು ಸರಿಯಲ್ಲ. ನಾವು ಆರ್‌ಎಸ್ಎಸ್‌ ಒಬ್ಬರಿಗೆ ಮಾಡಲಿಲ್ಲ. ನಾವು ಎಲ್ಲರಿಗೂ ಅನ್ವಯ ಆಗುವಂತೆ ಮಾಡಿದ್ದೇವೆ. ಸಂಘರ್ಷ ಆಗಬಾರದು ಶಾಂತಿಯುತವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸೇಡಂ ಆರ್‌ಎಸ್ಎಸ್ ಪಥಸಂಚಲನದಲ್ಲಿ ಸರ್ಕಾರಿ ವೈದ್ಯ ಭಾಗಿ

    ಸಾಂದರ್ಭಿಕ ಚಿತ್ರ

    ಸರ್ಕಾರಿ ಶಾಲಾ ಕಾಲೇಜಿನಲ್ಲಿ ಯಾರಿಗೂ ಕೊಡಬಾರದು ಅಂತಲೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಈಗ ಸಮಸ್ಯೆ ಬಂತು ಆರ್‌ಎಸ್‌ಎಸ್ ದೃಷ್ಟಿಯಿಂದಲೇ ಈ ನಿರ್ಧಾರ ಬಂತು ಅಂತ ಇಟ್ಟುಕೊಳ್ಳೋಣ. ಆ ಸಮಸ್ಯೆ ಬಂದಾಗ ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ಶಾಂತಿಯುತವಾಗಿ ಆಗಲಿ ಅಂತ ನಾವು ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು.

    ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬರ್ತಾ ಇತ್ತು. ಅದಕ್ಕಾಗಿ ಅವರಿಗೆ ಬೆಂಗಾವಲು ಪಡೆ ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ದರ್ಜೆ ಸಚಿವರು ಅವರಿಗೆ ರಕ್ಷಣೆ ಕೊಡಬೇಕಾದ ಜವಾಬ್ದಾರಿ ಸರ್ಕಾರದ್ದು ಅಂತ ಪರಮೇಶ್ವರ್ ತಿಳಿಸಿದರು. ಇದನ್ನೂ ಓದಿ: ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

  • ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ – ಪರಿಶೀಲಿಸಿ ಕ್ರಮಕ್ಕೆ ಸೂಚನೆ: ಪರಮೇಶ್ವರ್

    ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ – ಪರಿಶೀಲಿಸಿ ಕ್ರಮಕ್ಕೆ ಸೂಚನೆ: ಪರಮೇಶ್ವರ್

    ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ ಬೆದರಿಕೆ ಕರೆಗಳು ಬಂದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ (G.Parameshwara) ಹೇಳಿದರು.

    ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತಮಾಡಿದ ಅವರು, ಯಾರು ಬೆದರಿಕೆ ಕರೆ ಮಾಡಿದ್ದಾರೆ? ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ಮಾಡುತ್ತೇವೆ. ಆರ್‌ಎಸ್‌ಎಸ್ ವಿಚಾರದಲ್ಲಿ ಸಚಿವರು ತಮ್ಮ ಅಭಿಪ್ರಾಯ ಹೇಳಿರಬಹುದು. ಆ ಬಗ್ಗೆ ಸರ್ಕಾರ ತೀರ್ಮಾನ ‌ಮಾಡುತ್ತದೆ. ಅದಕ್ಕೆ ಅವರಿಗೆ ಬೆದರಿಕೆ ಮಾಡುವುದು ಸರಿಯಲ್ಲ. ಎಲ್ಲವನ್ನು ಪರಿಶೀಲನೆ ಮಾಡುವುದಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮರ್ಯಾದೆ ಉಳಿಸಿಕೊಳ್ಳಲು ಕೆಲವು ಬೆದರಿಕೆ ಕರೆ ವಿಡಿಯೋ ರಿಲೀಸ್ ಮಾಡಿಲ್ಲ: ಪ್ರಿಯಾಂಕ್ ಖರ್ಗೆ

    ಸಿಎಂ ಔತಣಕೂಟ ಸಚಿವ ಸಂಪುಟ ಪುನಾರಚನೆಗೆ ಅಲ್ಲ. ಸರ್ಕಾರ ಬಂದು ಎರಡೂವರೆ ವರ್ಷ ಕಳೆದಿದೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡಬೇಕು ಎಂದು ಮಾತಾಡಿದ್ದೇವೆ. ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದರು.

    ಯಾದಗಿರಿ ಎಎಸ್‌ಐ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆಂಬ ಮಾಜಿ ಸಚಿವ ರಾಜುಗೌಡ ಆರೋಪದ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ವರದಿ ನೀಡುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಬಿಜೆಪಿ ಅವರು ಟೀಕೆ ಮಾಡುವುದರಲ್ಲಿ ನಿಸ್ಸೀಮರು. ಅದು ಅವರ ಕರ್ತವ್ಯ ಕೂಡ ಹೌದು. ನಾನು ಹೇಳುವುದು ಒಂದೇ. ಪಾಸಿಟಿವ್ ಕ್ರಿಟಿಸಸಂ ಮಾಡಿ. ರಾಜಕೀಯಕ್ಕಾಗಿ ಟೀಕೆ ಮಾಡುವುದು ಬೇಡ ಅಂತ ಟಕ್ಕರ್ ಕೊಟ್ಟರು. ಇದನ್ನೂ ಓದಿ: ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ: ನಾರಾ ಲೋಕೇಶ್‌ಗೆ ಡಿಕೆಶಿ ತಿರುಗೇಟು

    ಉದ್ಯಮಿ ಕಿರಣ್ ಮಜುಂದಾರ್ ಶಾ ಟ್ವೀಟ್ ವಿಚಾರದ ಕುರಿತು ಮಾತನಾಡಿ, ರಸ್ತೆ ಗುಂಡಿ ಮುಚ್ಚುವ ಕೆಲಸ ಪ್ರಾರಂಭ ಮಾಡಿದ್ದಾರೆ. ಇದಕ್ಕೆ ಸಮಯ ಹಿಡಿಯುತ್ತದೆ. ಅಷ್ಟರೊಳಗೆ ಪ್ರತಿಕ್ರಿಯಿಸುವುದು ಸರಿಯಲ್ಲ. ಕೆಲಸ ನಡೆಯುತ್ತಿರುವಾಗಲೇ ಟೀಕೆ ಮಾಡುವುದು ಸಮಂಜಸವಲ್ಲ. ಕೆಲಸ ಅಗಿಲ್ಲ ಎಂಬುದಾದರೆ ಮಾತನಾಡಲಿ ಎಂದು ಹೇಳಿದರು.

    ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ 22 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಸಹಿ ಮಾಡಿದ್ದಾರೆ. ಗೂಗಲ್ ಎಐ ಹಬ್ ಹೋಗಿರುವುದು ಬೇರೆ ಕಾರಣಕ್ಕೆ. ನಾವು ಕೂಡ ಕರ್ನಾಟಕಕ್ಕೆ ಬರುವವರನ್ನು ಸ್ವಾಗತ ಮಾಡುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

  • ಪೊಲೀಸ್ ನೇಮಕಾತಿಗಳಿಗೆ ಪ್ರತ್ಯೇಕ ಶಾಶ್ವತ ವಯೋಮಿತಿ ಸಡಿಲಿಕೆ ಮಾಡ್ತೇವೆ – ಪರಮೇಶ್ವರ್

    ಪೊಲೀಸ್ ನೇಮಕಾತಿಗಳಿಗೆ ಪ್ರತ್ಯೇಕ ಶಾಶ್ವತ ವಯೋಮಿತಿ ಸಡಿಲಿಕೆ ಮಾಡ್ತೇವೆ – ಪರಮೇಶ್ವರ್

    ಬೆಂಗಳೂರು: ಪೊಲೀಸ್ ಹುದ್ದೆಗಳ ನೇಮಕಾತಿಗಳಿಗೆ ಪ್ರತ್ಯೇಕ ಶಾಶ್ವತ ವಯೋಮಿತಿ ಸಡಿಲಿಕೆ ನಿಯಮ ಪ್ರಕಟಿಸುವುದಾಗಿ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೋಮವಾರ (ಸೆ.29) ಸರ್ಕಾರಿ ಹುದ್ದೆಗೆ ಅರ್ಜಿ ಹಾಕುವ ಎಲ್ಲ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ. ಅದು ಒಂದು ಸಲಕ್ಕೆ ಮಾತ್ರ ಅನ್ವಯವಾಗುವಂತೆ 2027ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ಆದರೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಶಾಶ್ವತವಾಗಿ ವಯೋಮಿತಿ ಸಡಿಲಿಕೆ ಕೊಡಲು ಮುಂದಾಗಿದ್ದೇವೆ ಎಂದರು.ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್- ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ

    ಇದಕ್ಕೆ ಸಿಅ್ಯಂಡ್‌ಆರ್ ನಿಯಮಗಳಿಗೆ ತಿದ್ದುಪಡಿ ತಂದು ಶಾಶ್ವತವಾಗಿ ಕಾನ್‌ಸ್ಟೇಬಲ್, ಪಿಎಸ್‌ಐ, ಎಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಮಾಡ್ತೇವೆ. ಇದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವಯೋಮಿತಿ ಇದೆ ಎಂದು ಮಾಹಿತಿ ತರಿಸಿಕೊಂಡಿದ್ದೇವೆ. ಸದ್ಯದಲ್ಲೇ ಪೊಲೀಸ್ ಹುದ್ದೆಗಳ ನೇಮಕಾತಿಗಳಿಗೆ ವಯೋಮಿತಿ ಸಡಿಲಿಕೆ ಪ್ರಕಟ ಮಾಡ್ತೇವೆ ಎಂದು ಹೇಳಿದರು.

  • ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್

    ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್

    ತುಮಕೂರು: ತುಮಕೂರು ದಸರಾ (Tumakuru Dasara) ಹಿನ್ನೆಲೆ ಸೆ.30 ರಂದು ಸಂಜೆ ನಡೆಯುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟರಾದ ವಿ ರವಿಚಂದ್ರನ್ (V Ravichandran) ಹಾಗೂ ನಟಿ ರಮ್ಯಾ (Ramya) ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ (G Parameshwar) ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ನ್ಯಾಯಿಕ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 2ರಂದು ನಡೆಯಲಿರುವ ವೈಭವಯುತ ಮೆರವಣಿಗೆಯಲ್ಲಿ ಜಂಬೂ ಸವಾರಿಯೊಂದಿಗೆ ಸಾರೋಟಿನಲ್ಲಿ 50 ಗ್ರಾಮ ದೇವತೆಗಳು ಸಾಗಲಿವೆ. ಈ ಬಾರಿ ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯ, ಕಲಾ ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಎರಡನೇ ಬಾರಿ ತುಮಕೂರು ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು| ಆಸ್ತಿ ಆಸೆಗೆ ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಕೊಂದ ಪಾಪಿ ಮಗ

    ದಸರಾ ಉತ್ಸವವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಉತ್ಸವವನ್ನು ನೋಡಲು ಸಾರ್ವಜನಿಕರಿಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತೀ ದಿನ 250 ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರ ಉಳಿಸಿಕೊಳ್ಳಲು ಎಲ್ಲರನ್ನೂ ಸೋನಿಯಾ ಧರ್ಮಕ್ಕೆ ಸೇರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ: ಅಶೋಕ್‌ ಕಿಡಿ

    ದಸರಾ ಪ್ರಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 22ರಂದು ಬೆಳಿಗ್ಗೆ 9:30ಕ್ಕೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ಧಾರ್ಮಿಕ ಉತ್ಸವ, ನವರಾತ್ರಿ ಉತ್ಸವ, ಧ್ವಜಾರೋಹಣ, ದುರ್ಗಾಪೂಜೆಯನ್ನು ನೆರವೇರಿಸಲಿದ್ದಾರೆ. ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಡಾ. ಹನುಮಂತನಾಥ ಮಹಾಸ್ವಾಮೀಜಿ, ಶಿವಯೋಗೀಶ್ವರ ಮಹಾಸ್ವಾಮೀಜಿ, ವೀರಪತ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ವೀರೇಶಾನಂದ ಸರಸ್ವತ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಂಸದ ವಿ. ಸೋಮಣ್ಣ, ಜನಪ್ರತಿನಿಧಿಗಳಾದ ಟಿ.ಬಿ ಜಯಚಂದ್ರ, ಎಸ್.ಆರ್ ಶ್ರೀನಿವಾಸ್, ಶಿವರಾಜ್ ತಂಗಡಗಿ, ಕೆ.ಎನ್ ರಾಜಣ್ಣ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದು, ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

  • 4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    4 ಶಂಕಾಸ್ಪದ ಸಾವುಗಳ ತನಿಖೆಗೆ ತಿಮರೋಡಿ ದೂರು, ವಿಠಲಗೌಡ ಆರೋಪವನ್ನು ಎಸ್‌ಐಟಿ ಪರಿಶೀಲಿಸಿ ಕ್ರಮ: ಪರಮೇಶ್ವರ್

    ಬೆಂಗಳೂರು: ಧರ್ಮಸ್ಥಳ ಪ್ರಕರಣಗಳಲ್ಲಿ (Dharmasthala Case) ಏನೇ ದೂರು, ಆರೋಪ ಇದ್ದರೂ ಎಸ್‌ಐಟಿ (SIT) ಅಧಿಕಾರಿಗಳೇ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಹೇಳಿದರು.

    ಧರ್ಮಸ್ಥಳದ 3 ಲಾರ್ಡ್ಜ್‌ಗಳಲ್ಲಿ ನಾಲ್ಕು ಅನುಮಾನಸ್ಪದ ಸಾವುಗಳಾಗಿವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ದೂರು ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದರು. ದೂರು ತೆಗೆದುಕೊಳ್ಳಬೇಕೇ, ಬೇಡವೇ ಅಂತ ಎಸ್‌ಐಟಿಯವರು ಪರಿಶೀಲಿಸುತ್ತಾರೆ. ಪ್ರಕರಣ ಬೇರೆ ಬೇರೆ ದಿಕ್ಕಿಗೆ ಹೋಗುವಂತಹ ಪ್ರಯತ್ನ ನಡೆದರೆ, ಎಸ್‌ಐಟಿಯವರು ಬೇರೆ ತರಹ ತನಿಖೆ ಮಾಡುತ್ತಾರೆ ಎಂದರು. ಇದನ್ನೂ ಓದಿ: ಮದ್ದೂರು ಗಲಭೆ | ಪ್ರಚೋದನಕಾರಿ ಭಾಷಣಕ್ಕಾಗಿ ಯತ್ನಾಳ್, ಸಿ.ಟಿ ರವಿ ವಿರುದ್ಧ FIR: ಪರಮೇಶ್ವರ್

    ಬಂಗ್ಲೆಗುಡ್ಡೆ ಅಸ್ಥಿಪಂಜರಗಳ ಬಗ್ಗೆ ವಿಠಲಗೌಡ (Vittal Gowda) ಆರೋಪದ ಬಗ್ಗೆ ಮಾತಾಡಿದ ಅವರು, ಯಾರೋ ಕೊಟ್ಟ ಹೇಳಿಕೆ ಮೇಲೆ ನಾವು ತೀರ್ಮಾನ ಮಾಡುವುದಿಲ್ಲ. ಎಸ್‌ಐಟಿ ಮುಂದೆ ಏನು ದೂರು ಕೊಟ್ಟಿರುತ್ತಾರೆ. ಅದಕ್ಕೆ ಸಾಕ್ಷ್ಯ ಕೊಟ್ಟಿರುತ್ತಾರೆ. ಅದೆಲ್ಲವನ್ನು ನೋಡಿ ಎಸ್‌ಐಟಿಯವರು ತೀರ್ಮಾನ ಮಾಡುತ್ತಾರೆ. ಸರ್ಕಾರದ ಅನುಮತಿ ಬೇಕೆಂದರೆ ಕೇಳುತ್ತಾರೆ. ಸದ್ಯಕ್ಕೆ ಯಾವುದೇ ಅನುಮತಿ ಕೇಳುವುದಕ್ಕೆ ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ – ಬಂಗ್ಲೆ ಗುಡ್ಡ ಕಾಡಿನಲ್ಲಿ 3 ಅಸ್ಥಿಪಂಜರ ಪತ್ತೆ

    ಪ್ರತಿನಿತ್ಯ ನಾವು ಏನು ಮಾಡುತ್ತಿದ್ದೇವೆ ಎಂದು ಎಸ್‌ಐಟಿಯವರು, ಮಾಧ್ಯಮಕ್ಕಾಗಲಿ ಅಥವಾ ಸಾರ್ವಜನಿಕರಿಗಾಗಲಿ ಹೇಳುವುದಿಲ್ಲ. ಅನೇಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಇದರಿಂದ ಎಸ್‌ಐಟಿ ವೇಗ ಕಳೆದುಕೊಂಡು ಬಿಟ್ಟಿದೆ, ತನಿಖೆ ನಡೆಯುತ್ತಿಲ್ಲ ಅಂದುಕೊಳ್ಳಬಾರದು. ಅನೇಕ ವಿಚಾರಗಳಲ್ಲಿ ಸಂಪೂರ್ಣ ಮಾಹಿತಿ ಬರುವವರೆಗೂ ಎಸ್‌ಐಟಿಯವರು ನಮಗೂ ಹೇಳುವುದಿಲ್ಲ ಎಂದರು.

    ಧರ್ಮಸ್ಥಳ ಆರೋಪ ಪ್ರಕರಣದಲ್ಲಿ ಚಿನ್ನಯ್ಯನ ಬೆಂಬಲವಾಗಿ ನಿಂತವರನ್ನು ಬಂಧಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರನ್ನು ಬಂಧಿಸಬೇಕು, ಯಾವಾಗ ಬಂಧಿಸಬೇಕು ಎಂಬುದನ್ನು ನಾವು ಎಸ್‌ಐಟಿಯವರಿಗೆ ಹೇಳಲಾಗುತ್ತದೆಯೇ? ಮಾಧ್ಯಮದವರು ಹೇಳಿದ್ದನ್ನು ಗಣನೆಗೆ ತೆಗೆದುಕೊಂಡು ಕೂಡಲೇ ಬಂಧಿಸಲು ಆಗುವುದಿಲ್ಲ. ಅವರಿಗೆ ಏನು ಮಾಹಿತಿ ಇದೆಯೋ ಅದಕ್ಕೆ ಅಗತ್ಯವಾದ ಪುರಾವೆ, ಸಾಕ್ಷ್ಯ ಸಿಗಬೇಕಲ್ಲ. ಅದನ್ನು ನೋಡಿಕೊಂಡು ಆನಂತರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

  • ಪೊಲೀಸರು ಪದಕ ಪಡೆದಿರುವುದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಇದೆ: ಡಾ.ಜಿ ಪರಮೇಶ್ವರ್

    ಪೊಲೀಸರು ಪದಕ ಪಡೆದಿರುವುದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಇದೆ: ಡಾ.ಜಿ ಪರಮೇಶ್ವರ್

    ಬೆಂಗಳೂರು: ರಾಜ್ಯವನ್ನು ಶಾಂತಿಯಿಂದ ಇಡುವುದರಲ್ಲಿ ಪೊಲೀಸ್ ಇಲಾಖೆಯು (Police Department) ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ್‌ (G Parameshwara) ಅವರು ಹೇಳಿದರು.

    ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ರಾಜ್ಯ ಗೃಹ ಇಲಾಖೆಯಲ್ಲಿ (Home Department) ವಿಶಿಷ್ಟ ಹಾಗೂ ಅಗ್ರಗಣ್ಯ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಗೌರವಾನ್ವಿತ ರಾಜ್ಯಪಾಲ ರವರಿಂದ ʻರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನʼ ಹಾಗೂ ʻಕೇಂದ್ರ ಗೃಹ ಮಂತ್ರಿಗಳ ಪದಕ ಪ್ರದಾನʼ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ – ಸಿದ್ದರಾಮಯ್ಯ

    ಪ್ರಶಸ್ತಿ ಎಂಬುದು‌ ಬರೀ ಪದಕವಲ್ಲ. ಅದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಮತ್ತು ಮುಂದಿನ ಪೀಳಿಗೆಗೆ ಆದರ್ಶ ಇದೆ. ಕರ್ನಾಟಕ ಪೊಲೀಸ್ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಪೊಲೀಸ್ ಇಲಾಖೆಯನ್ನು ನಡೆಸುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಅನುಯಾಯಿಗು ಕೂಡ ಪ್ರಶಸ್ತಿ ಸಿಕ್ಕಿದೆ. ಅನುಯಾಯಿಯಿಂದ ಡಿಜಿಪಿವರೆಗೆ ನಮ್ಮ ಪೊಲೀಸ್ ಇಲಾಖೆ ರಾಜ್ಯವನ್ನು ಶಾಂತಿಯಿಂದ ಇಡುವುದರಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಹೇಳಿದರು.

    ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ನಾಗರಿಕ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ಇತ್ತೀಚೆಗೆ ನಾವು ಗಮನಿಸಿದಾಗ, ಗ್ಲೋಬಲ್ ಇನ್‌ವೆಸ್ಟರ್ಸ್ ಮೀಟ್‌ನಲ್ಲಿ 10,500 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು ಬಂಡಾವಾಳ ಹೂಡುತ್ತೇವೆ ಎಂದು ಪ್ರಪಂಚದಾದ್ಯಂತ ನೂರಾರು ಕಂಪನಿಗಳು ಬಂದವು. ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿದರು. ಅದಕ್ಕೆ ಮೂಲ ಕಾರಣ, ಯಾವುದೇ ಒಂದು ಕಂಪನಿ ರಾಜ್ಯದಲ್ಲಿ ಅಥವಾ ರಾಷ್ಟ್ರದಲ್ಲಿ ಬಂಡಾವಾಳ ಹೂಡಬೇಕಾದ್ರೆ ಆ ರಾಜ್ಯದ ಸಮಾಜವನ್ನು ನೋಡುತ್ತಾರೆ. ರಾಜಕೀಯ ಇಚ್ಛಾಶಕ್ತಿ, ಆ ಸಮಾಜದಲ್ಲಿ ಶಾಂತಿ ಇದೆಯಾ? ಎಂಬುದನ್ನು ಕಂಪನಿಗಳು ನೋಡುತ್ತವೆ. ಕರ್ನಾಟಕದ‌ ಮಟ್ಟಿಗೆ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಬರುತ್ತದೆ ಅಂದರೆ ಕರ್ನಾಟಕದಲ್ಲಿ ಶಾಂತಿ ಇದೆ. ನೆಮ್ಮದಿ, ತೃಪ್ತಿ ಇದೆ. ಯಾವುದೇ ತೊಂದರೆಗಳು ಆಗುವುದಿಲ್ಲ ಎಂಬುದನ್ನು ಗಮನಿಸಿಯೇ ಬಂಡಾವಾಳ ಹೂಡುತ್ತಾರೆ.‌ ಇದಕ್ಕೆ ನಮ್ಮ ಪೊಲೀಸ್ ಇಲಾಖೆಯೂ ಕಾರಣ ಎಂದು ಶ್ಲಾಘಿಸಿದರು.

    ಕರ್ನಾಟಕವನ್ನು ಶಾಂತಿ, ನೆಮ್ಮದಿಯಿಂದ ಇಡಲು ಅನುಯಾಯಿ, ಕಾನ್‌ಸ್ಟೇಬಲ್‌ನಿಂದ ಡಿಜಿಪಿವರೆಗೆ ಶ್ರಮ ಹಾಕುತ್ತಿದ್ದಾರೆ. ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

    ರಾಜ್ಯ ಪೊಲೀಸ್ ಆಧುನೀಕರಣಗೊಳ್ಳುತ್ತಿದೆ.‌ ಆಧುನೀಕರಣ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಸೈಬರ್ ಅಪರಾಧಗಳು ಬಹಳ ಹೆಚ್ಚಾಗುತ್ತಿವೆ. ಸೈಬರ್ ಅಪರಾಧಗಳನ್ನು ಮಟ್ಟ ಹಾಕದೇ ಹೋದರೆ ಜನರಿಗೆ ಕೋಟ್ಯಂತರ ರೂ.‌ ನಷ್ಟ ಉಂಟಾಗುತ್ತದೆ. ಅದಕ್ಕಾಗಿಯೇ ದೇಶದಲ್ಲೆ ಮೊದಲ ಬಾರಿಗೆ ರಾಜ್ಯದಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಯಿತು. ಇಂದು ಸೈಬರ್ ಅಪರಾಧಗಳಿಗಾಗಿಯೇ 45ಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಪೊಲೀಸ್ ಠಾಣೆಯಲ್ಲಿಯೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು ಎಂಬ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ:  ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ಇತ್ತೀಚೆಗೆ ಸಮಾಜವನ್ನು ಕೆಡಿಸುವಂಥ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಧಾರ್ಮಿಕವಾಗಿ, ರಾಜಕೀಯವಾಗಿ ಬೇರೆ ರೀತಿಯಲ್ಲಿ ಸಮಾಜದ ಶಾಂತಿಯನ್ನು ಕೆಡಿಸುವಂತದ್ದನ್ನು ಗಮನಿಸುತ್ತಿದ್ದೇವೆ. ಕರ್ನಾಟಕ ಪೊಲೀಸ್ ಪ್ರತಿಯೊಂದು ಸಂದರ್ಭದಲ್ಲಿ ಯಶಸ್ವಿಯಾಗುತ್ತಿದೆ. ಯಾವುದೇ ತನಿಖೆ, ಅಪರಾಧ, ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ರಾಜ್ಯ ಪೊಲೀಸ್ ಯಶಸ್ವಿಯಾಗಿದೆ. ಇಂತಹ ಸೂಕ್ಷ್ಮ ಇಲಾಖೆ ಸ್ವಾಭಾವಿಕವಾಗಿ ಹಲವು ಟೀಕೆ ಟಿಪ್ಪಣಿಗಳಿಗೆ ಗುರಿಯಾಗುತ್ತದೆ. ಟೀಕೆಗಳನ್ನು ಮೀರಿ ಇಲಾಖೆಯ ಸಿಬ್ಬಂದಿಗಳು ಕೆಲಸ‌ ಮಾಡುತ್ತಿದ್ದಾರೆ.‌ ನಾವು ಯಾವುದೇ ಟೀಕೆಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಸಲಹೆಗಳ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ಆ ಕೆಲಸಗಳನ್ನು ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು.

    ಪೊಲೀಸ್ ಕಾನ್‌ಸ್ಟೇಬಲ್‌ಗಳ ಪ್ರಾಮಾಣಿಕ ಪ್ರಯತ್ನಗಳು ಆಗದೇ ಹೋದರೆ ನಾವು ಅಪರಾಧಗಳನ್ನು ಮಟ್ಟಹಾಕಲು ಕಷ್ಟವಾದೀತು. ಅವರು ಮಾಡುವ ಸೇವೆಗಳನ್ನು ನಾವು ಗಮನ ಹರಿಸಬೇಕಾಗುತ್ತದೆ. ಎರಡು ವರ್ಷಗಳ ಹಿಂದೆ ಮೈಸೂರು ರಸ್ತೆಯಲ್ಲಿ ರಸ್ತೆ ದಾಟಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿಗೆ ಹೆರಿಗೆ ಮಾಡಿಸಿ, ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸ‌ ಮಾಡುತ್ತಾನೆ. ಒಬ್ಬ ಕಾನ್‌ಸ್ಟೇಬ‌ಲ್‌ಗೆ ಎಂತಹ‌ ಮನಸ್ಥಿತಿ ಇರುತ್ತದೆ ಎಂದು ಯೋಚಿಸಬೇಕಿದೆ. ಕರ್ತವ್ಯದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಕೆಲಸಗಳನ್ನು ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಅನೇಕ‌ ಸಂದರ್ಭಗಳಲ್ಲಿ ಕರ್ತವ್ಯದ ವೇಳೆ‌ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಣ‌ ಕಳೆದು ಕೊಂಡಿದ್ದಾರೆ. ಅವರಿಗೆ ಸಾಂತ್ವನ ಹೇಳಬಯಸುತ್ತೇನೆ. ಕರ್ತವ್ಯದ ವೇಳೆ ಅಪರಾಧಿ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬುದು ಗೊತ್ತಿರುವುದಿಲ್ಲ.‌ ಪೊಲೀಸರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುವ ಸಂದರ್ಭಗಳನ್ನು ನೋಡಿದ್ದೇವೆ.

    ಪೊಲೀಸರ ನಿಸ್ವಾರ್ಥ ಸೇವೆ ಬೇರೆಯವರಿಗೆ ಸ್ಫೋರ್ತಿಯಾಗಲಿ. ಇಂದು ತೆಗೆದುಕೊಂಡಿರುವ ಪದಕಗಳು‌ ಅತ್ಯಂತ ಶ್ಲಾಘನೀಯ. ಮುಂದಿನ ಪೀಳಿಗೆಗೆ ಆದರ್ಶವಾಗಲಿ. ನಿಮ್ಮಂತೆ ಸೇವೆ ಮಾಡಿ ರಾಜ್ಯಕ್ಕೆ ಮತ್ತು ಇಲಾಖೆಗೆ ಕೀರ್ತಿಯನ್ನು ತರಲಿ ಎಂದು ಹೇಳಿದರು.

  • ಕಾರ್ಯಕ್ರಮದಲ್ಲಿ ಪ್ರಾಣಹಾನಿಯಾದ್ರೆ ಆಯೋಜಕರೇ ಹೊಣೆಗಾರರು –  ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಏನಿದೆ?

    ಕಾರ್ಯಕ್ರಮದಲ್ಲಿ ಪ್ರಾಣಹಾನಿಯಾದ್ರೆ ಆಯೋಜಕರೇ ಹೊಣೆಗಾರರು – ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಏನಿದೆ?

    ಬೆಂಗಳೂರು: ವಿಧಾನಸಭೆಯಲ್ಲಿ (Legislative Assembly) ಮಂಡನೆಯಾಗಿದ್ದ ಜನಸಂದಣಿ ನಿಯಂತ್ರಣ ವಿಧೇಯಕ-2025ಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿಧೇಯಕದ ಪರಿಶೀಲನೆಗೆ ಸದನ ಸಮಿತಿ ರಚಿಸುವುದಾಗಿ ರೂಲಿಂಗ್ ಕೊಟ್ಟಿದ್ದಾರೆ. ವಿಧೇಯಕದ ಕೆಲ ಅಂಶಗಳನ್ನು ವಿರೋಧಿಸಿದ ಬಿಜೆಪಿ, ಜೆಡಿಎಸ್ ಶಾಸಕರು ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದ್ದರು. ಹಾಗಾಗಿ ಬಿಲ್ ಅಂಗೀಕಾರ ಮಾಡದೇ ಸದನ ಸಮಿತಿ ಪರಿಶೀಲನೆಗೆ ವಹಿಸಲಾಗಿದೆ.

    ಬುಧವಾರವಷ್ಟೇ (ಆ.20) ವಿಧೇಯಕ ಮಂಡಿಸಿ ಗುರುವಾರ (ಆ.21) ಅಂಗೀಕಾರಕ್ಕೆ ಗೃಹ ಸಚಿವ ಪರಮೇಶ್ವರ್ (G.Parameshwar) ಪ್ರಸ್ತಾಪಿಸಿದ್ದರು. ಕೌಟುಂಬಿಕ ಕಾರ್ಯಕ್ರಮಗಳಾದ ಮದುವೆ ಸೇರಿ ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ. ಖಾಸಗಿ ಆವರಣಗಳೊಳಗೆ ನಡೆಸುವ ಕೌಟುಂಬಿಕ ಸಮಾರಂಭಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ. ಬಾಡಿಗೆ, ಭೋಗ್ಯ, ಗುತ್ತಿಗೆಗೆ ಪಡೆದ ಸ್ಥಳಗಳಲ್ಲಿ ನಡೆಸುವ ಖಾಸಗಿ ಆವರಣಗಳೊಳಗೆ ನಡೆಸುವ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.ಇದನ್ನೂ ಓದಿ: ಗಣಿ ನಷ್ಟ ವಸೂಲಾತಿಗೆ ಸರ್ಕಾರದಿಂದ ಹೊಸ ಕಾಯ್ದೆ – ಆಯುಕ್ತರ ನೇಮಕಕ್ಕೆ ಮುಂದಾದ ಸರ್ಕಾರ

    ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಮಾತನಾಡಿ, ರಾಜಕೀಯ ಸಮಾವೇಶಗಳಿಗೂ ಅನ್ವಯ ಆಗುತ್ತದೆ, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾನೂನು ಮಾಡಿ ಅಂತಾ ಆಗ್ರಹಿಸಿದರು. ಶಾಸಕರಾದ ಸುರೇಶ್ ಕುಮಾರ್ ಮಾತನಾಡಿ, ಪೋಸ್ಟ್ ಮಾರ್ಟಮ್ ವಿಧೇಯಕ ಇದು. ಧಾರ್ಮಿಕ ಉತ್ಸವಗಳಿಗೂ ಲಕ್ಷಾಂತರ ಜನ ಸೇರುತ್ತಾರೆ. ಕಾಯ್ದೆ ತರದೇ ನಿಯಮ ರೂಪಿಸಿ ಎಂದು ಆಕ್ರೋಶ ಹೊರಹಾಕಿದರು. ಶಾಸಕ ಸುನೀಲ್ ಕುಮಾರ್ ಮಾತನಾಡಿ, ಪೊಲೀಸರು ಈ ನಿಯಮಗಳನ್ನ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ, ಪ್ರತಿಭಟನೆ, ಕಾರ್ಯಕ್ರಮಗಳನ್ನು ಹತ್ತಿಕ್ಕುವ ಪ್ರಯತ್ನ ಎಂದರು. ಅಂತಿಮವಾಗಿ ವಿರೋಧ ಪಕ್ಷಗಳ ಆಕ್ಷೇಪದ ಹಿನ್ನೆಲೆಯಲ್ಲಿ ಬಿಲ್ ಅಂಗೀಕಾರಕ್ಕೆ ಹಾಕದೇ ಸದನ ಸಮಿತಿಗೆ ವಹಿಸಲಾಗಿದೆ.

    ಜನಸಂದಣಿ ನಿಯಂತ್ರಣ ವಿಧೇಯಕದಲ್ಲಿ ಏನಿದೆ?
    -ಜನಸಂದಣಿ 7 ಸಾವಿರಕ್ಕಿಂತ ಕಮ್ಮಿ ಇದ್ದರೆ ಪೊಲೀಸ್ ಠಾಣೆ ಅಧಿಕಾರಿಯು ಆಯೋಜಕರ ಅರ್ಜಿಯ ಮೇರೆಗೆ ವಿಚಾರಣೆ ನಡೆಸಿ ಅನುಮತಿ ನೀಡಬಹುದು.
    -ಜನಸಂದಣಿ 7 ಸಾವಿರಕ್ಕಿಂತ ಹೆಚ್ಚು 50 ಸಾವಿರಕ್ಕಿಂತ ಕಡಿಮೆ ಇದ್ದಾಗ ಡಿಸಿಪಿ ಅವರು ಪರಿಶೀಲಿಸಿ ಅನುಮತಿ ಕೊಡಲು ಅವಕಾಶ.
    -ಜನಸಂದಣಿ 50 ಸಾವಿರಕ್ಕೂ ಹೆಚ್ಚಿದ್ದರೆ ಎಸ್‌ಪಿ ಅಥವಾ ಪೊಲೀಸ್ ಆಯುಕ್ತರು ಆಯೋಜಕರ ಅರ್ಜಿ ಮೇರೆಗೆ ಪರಿಶೀಲಿಸಿ ಅನುಮತಿ ಕೊಡಬಹುದು.
    -ಸಮಾರಂಭದ ಆಯೋಜಕರು ಸಮಾರಂಭದ ಹತ್ತು ದಿನಗಳ ಮೊದಲು ಪೂರ್ಣ ವಿವರವನ್ನು ಲಿಖಿತ ಅರ್ಜಿ ಸಲ್ಲಿಸಬೇಕು.
    -ಕಾರ್ಯಕ್ರಮದಲ್ಲಿ ಆಸ್ತಿ ಮತ್ತು ಪ್ರಾಣ ಹಾನಿ ಆದರೆ ಕಾರ್ಯಕ್ರಮದ ಆಯೋಜಕರೇ ಹೊಣೆಗಾರರು.
    -ಕಾರ್ಯಕ್ರಮಗಳಿಗೆ ಅರ್ಜಿ ಹಾಕಿದ ನಾಲ್ಕು ದಿನಗಳ ಒಳಗೆ ಪರಿಶೀಲಿಸಿ, ಅನುಮತಿ ಕೊಡುವ ಅಥವಾ ಕೊಡದಿರುವ ಬಗ್ಗೆ ಸಕ್ಷಮ ಪ್ರಾಧಿಕಾರಗಳು ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಇದನ್ನು ಲಿಖಿತವಾಗಿ ಆಯೋಜಕರಿಗೆ ತಿಳಿಸಬೇಕು.
    -ಅನುಮತಿ ಪಡೆಯುವ ವೇಳೆ ಆಯೋಜಕರು 1 ಕೋಟಿ ರೂ. ಮೌಲ್ಯದ ನಷ್ಟ ಭರ್ತಿ ಬಾಂಡ್ ಸಲ್ಲಿಸಬೇಕು.
    -ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿದರೆ 3 ವರ್ಷದಿಂದ 7 ವರ್ಷದವರೆಗೆ ಕಾರಾಗೃಹ ವಾಸ ಹಾಗೂ 1 ಕೋಟಿ ರೂ.ವರೆಗೆ ದಂಡ.
    -ಕಾರ್ಯಕ್ರಮದಲ್ಲಿ ಸುಳ್ಳು ವದಂತಿ ಹಬ್ಬಿಸಿ, ಹಿಂಸಾಚಾರ, ಕುಕೃತ್ಯ ಎಸಗಲು ಪ್ರೇರೆಪಿಸಿದರೆ, ಅದರಿಂದ ನಾಗರಿಕರಿಗೆ ತೊಂದರೆ, ಶಾಂತಿಭಂಗ ಉಂಟಾದರೆ 3 ವರ್ಷದವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ವರೆಗೆ ದಂಡ
    -ಜನಸಂದಣಿ ವಿಪತ್ತಿಗೆ ಕಾರಣವಾದರೆ, ವ್ಯಕ್ತಿಯ ದುಷ್ಕೃತ್ಯದಿಂದ ನಾಗರಿಕರಿಗೆ ದೈಹಿಕ ಆಸ್ತಿ ಹಾನಿಯಾದರೆ 3 ವರ್ಷದಿಂದ 7 ವರ್ಷದವರೆಗೆ ಜೈಲುಶಿಕ್ಷೆ, ಪ್ರಾಣ ಹಾನಿಯಾದರೆ ಕನಿಷ್ಟ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ.
    -ಪೊಲೀಸರ ನಿರ್ದೇಶನಗಳನ್ನು ಪಾಲಿಸದಿದ್ದರೆ, ಉಲ್ಲಂಘಿಸಿದರೆ 1 ತಿಂಗಳವರೆಗೆ ಸಮುದಾಯ ಸೇವೆ ಮಾಡಬೇಕು ಮತ್ತು 50 ಸಾವಿರ ರೂ. ಜುಲ್ಮಾನೆ ಭರಿಸಬೇಕು.ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ

  • ಚಿತ್ರದುರ್ಗ ವರ್ಷಿತಾ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್

    ಚಿತ್ರದುರ್ಗ ವರ್ಷಿತಾ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್

    ಬೆಂಗಳೂರು: ಚಿತ್ರದುರ್ಗದಲ್ಲಿ (Chitradurga) ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣ (Varshitha Murder Case) ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು. ಬಿಜೆಪಿ ಸದಸ್ಯ ನವೀನ್ ವಿಷಯ ಪ್ರಸ್ತಾಪ ಮಾಡಿದ್ರು.

    ಚಿತ್ರದುರ್ಗದ ವಿದ್ಯಾರ್ಥಿನಿ ಕೊಲೆ ಆಗಿದೆ. ದಲಿತ ಮಾದಿಗ ಸಮುದಾಯದ ವಿದ್ಯಾರ್ಥಿನಿ ವರ್ಷಿತಾ. ಅವಳನ್ನು ಬರ್ಬರವಾಗಿ ಹತ್ಯೆ ಮಾಡಿ ಸುಟ್ಟು ಹಾಕಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಅತ್ಯಂತ ಬಡತನದ ಕುಟುಂಬದಿಂದ ಬಂದು ಭವಿಷ್ಯದ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿ. ಸರ್ಕಾರಿ ಹಾಸ್ಟೆಲ್ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ. ರಾಜ್ಯದಲ್ಲಿ ಈ ರೀತಿ ಘಟನೆಗಳು ನಡೆದ ಸಂದರ್ಭದಲ್ಲಿ ಸರ್ಕಾರ ನ್ಯಾಯ ಕೊಡಿಸಬೇಕು. ಈ ಹತ್ಯೆಗೆ ಕಾರಣವಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹ ಮಾಡಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

    ಇಡೀ ದಿನ ಸಂಘಟನೆಗಳು ಹೋರಾಟ ಮಾಡಿವೆ. ರಾಜ್ಯ ಇಡೀ ಭಯದ ವಾತಾವರಣದಲ್ಲಿ ಇರುವಂತೆ ಮಾಡಿದೆ. ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಅಂತ ನವೀನ್ ಒತ್ತಾಯಿಸಿದರು. ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ್, ತಿಮರೋಡಿ, ಸಮೀರ್ ವಿರುದ್ಧ ಸ್ನೇಹಮಯಿ ಕೃಷ್ಣ ದೂರು

    ಇದಕ್ಕೆ ಗೃಹ ಸಚಿವ ಪರಮೇಶ್ವರ್ (G Parameshwar) ಉತ್ತರ ನೀಡಿ, ಸರ್ಕಾರ ಇಂತಹ ಘಟನೆ ಸಹಿಸುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕಠಿಣ ಕ್ರಮ ಮುಲಾಜಿಲ್ಲದೇ ತೆಗೆದುಕೊಳ್ಳುತ್ತೇವೆ. ಯಾರೇ ಇದ್ದರು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಘಟನೆಗೆ ಸಂಬಂಧಿಸಿ ನಿರ್ದಿಷ್ಟ ಉತ್ತರ ನಾಳೆ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹೊರರಾಜ್ಯದ ಜಾನುವಾರನ್ನು ಕಾಡಲ್ಲಿ ಮೇಯಿಸಲು ನಿರ್ಬಂಧ, ರಾಜ್ಯದ ಕುರಿಗಾಹಿಗಳಿಗೆ ಇಲ್ಲ ತೊಂದರೆ: ಈಶ್ವರ್ ಖಂಡ್ರೆ

  • ಧರ್ಮಸ್ಥಳ ಬುರುಡೆ ಕೇಸ್ – ನಾಳೆ ಸದನದಲ್ಲಿ ಪರಂ ಉತ್ತರ

    ಧರ್ಮಸ್ಥಳ ಬುರುಡೆ ಕೇಸ್ – ನಾಳೆ ಸದನದಲ್ಲಿ ಪರಂ ಉತ್ತರ

    ಚಾಮರಾಜನಗರ: ಧರ್ಮಸ್ಥಳ ಪ್ರಕರಣದ (Dharmasthala Mass Burials) ಬಗ್ಗೆ ನಾಳೆ (ಸೋಮವಾರ) ಸದನದಲ್ಲಿ ಸಂಪೂರ್ಣ ಉತ್ತರ ನೀಡುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ತಿಳಿಸಿದ್ದಾರೆ

    ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿ ಧರ್ಮಸ್ಥಳ ಚಲೋ ನಡೆಸಿರುವ ಬಗ್ಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾರೂ ಸಹ ರಾಜಕಾರಣ ಮಾಡಬಾರದು. ಧರ್ಮಸ್ಥಳ ಪ್ರಕರಣ ನ್ಯಾಯಕ್ಕೆ ಹಾಗೂ ಕಾನೂನಿಗೆ ಸಂಬಂಧಿಸಿದ ವಿಚಾರವಾಗಿದೆ. ಯಾವುದೇ ವ್ಯಕ್ತಿ ಕಂಪ್ಲೆಂಟ್ ಕೊಟ್ಟರೆ ಪೋಲಿಸರು ಎಫ್‌ಐಆರ್ ಹಾಕಿ ತನಿಖೆ ಮಾಡುತ್ತಾರೆ. ತಪ್ಪು ಕಂಡು ಬಂದರೆ ಮಾತ್ರ ಕೇಸ್ ಮುಂದುವರಿಸುತ್ತಾರೆ ಎಂದರು. ಇದನ್ನೂ ಓದಿ: ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆ – ಸೋಮವಾರ ಶಾಲೆಗಳಿಗೆ ರಜೆ ಘೋಷಣೆ

    ಇದು ಅಷ್ಟಕ್ಕೇ ಸೀಮಿತವಾಗಬೇಕೆ ವಿನಃ ರಾಜಕೀಯ ಮಾಡಬಾರದು. ಇದರಲ್ಲಿ ಧಾರ್ಮಿಕ ವಿಚಾರ ಎಳೆದು ತರೋದು ಸರಿಯಲ್ಲ. ಎಸ್‌ಐಟಿ ತನಿಖೆ ಪೂರ್ಣಗೊಳ್ಳಲು ಬಿಡಬೇಕು, ಸತ್ಯಾಸತ್ಯತೆ ಗೊತ್ತಾಗುತ್ತೆ. ಮಧ್ಯಂತರ ವರದಿ ಕೊಡಬೇಕಾ, ಅಂತಿಮ ವರದಿ ಕೊಡಬೇಕಾ ಎಂಬುದು ಎಸ್‌ಐಟಿಗೆ ಬಿಟ್ಟ ವಿಚಾರ. ಸರ್ಕಾರ ಅವರಿಗೆ ಯಾವುದೇ ನಿರ್ದೇಶನ ಕೊಡಲ್ಲ. ಎಸ್‌ಐಟಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ ಚಾಲನೆ – ಬಿಜೆಪಿ, ಚು. ಆಯೋಗ ವಿರುದ್ಧ ರಾಗಾ ವಾಗ್ದಾಳಿ

    ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ಇದು ರಾಜಕೀಯ ಆಗಬಾರದು. ಯಾರೂ ಕೂಡ ರಾಜಕೀಯ ಮಾಡಬಾರದು. ಮತ್ತೆ ಶವಗಳಿಗೆ ಶೋಧಕಾರ್ಯ ನಡೆಸುವ ಬಗ್ಗೆ ಎಸ್‌ಐಟಿ ತೀರ್ಮಾನ ಮಾಡುತ್ತದೆ. ಎಲ್ಲೋ ಒಂದು ಕಡೆ ಅಂತ್ಯ ಆಗುತ್ತೆ ಎನ್ನುವ ಮೂಲಕ ಶವಗಳ ಶೋಧ ಕಾರ್ಯಕ್ಕೆ ಫುಲ್‌ಸ್ಟಾಪ್ ಇಡುವ ಸುಳಿವು ನೀಡಿದರು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಪತ್ರದ ಮೂಲಕ ಪ್ರಧಾನಿ ಮೋದಿ ಸಂತಾಪ

  • ಯಾವ ಕಾರಣಕ್ಕೆ ರಾಜಣ್ಣ ಅವ್ರನ್ನ ವಜಾ ಮಾಡಿದ್ದಾರೆ ಗೊತ್ತಿಲ್ಲ: ಪರಮೇಶ್ವರ್

    ಯಾವ ಕಾರಣಕ್ಕೆ ರಾಜಣ್ಣ ಅವ್ರನ್ನ ವಜಾ ಮಾಡಿದ್ದಾರೆ ಗೊತ್ತಿಲ್ಲ: ಪರಮೇಶ್ವರ್

    ಬೆಂಗಳೂರು: ಹಿರಿಯ ಕಾಂಗ್ರೆಸ್ (Congress) ನಾಯಕ ಕೆ.ಎನ್ ರಾಜಣ್ಣ (KN Rajanna) ಅವರನ್ನು ಸಚಿವ ಸಂಪುಟದಿಂದ ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಹೇಳಿದರು.ಇದನ್ನೂ ಓದಿ: ನನ್ನ ಮಾತು ಇಷ್ಟೊಂದು ತೀವ್ರ ಸ್ವರೂಪಕ್ಕೆ ಹೋಗುತ್ತೆ ಅಂತ ಗೊತ್ತಿರಲಿಲ್ಲ: ರಾಜಣ್ಣ ಪಶ್ಚಾತ್ತಾಪದ ಮಾತು

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ವಿಧಾನಸೌಧದಲ್ಲಿ ನನ್ನ ಜೊತೆಗೆ ಮಾತಾನಾಡಿದ್ದರು. ಅವರಿಗೂ ಕೂಡ ಕಾರಣ ಏನು ಅನ್ನೋದು ಗೊತ್ತಿಲ್ಲ. ನನಗೆ ಹೈಕಮಾಂಡ್ ಜೊತೆಗೆ ಮಾತಾನಾಡಿ, ಕಾರಣ ಕೇಳಿ ಎಂದು ಹೇಳಿದರು. ಅದಕ್ಕೆ ನಾನು ಈಗಾಗಲೇ ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ಈಗ ಕೇಳಿ ಪ್ರಯೋಜನ ಇಲ್ಲ ಎಂದು ಸುಮ್ಮನಾದೆ ಎಂದು ತಿಳಿಸಿದರು.

    ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಅನ್ನೋದು ಅಷ್ಟು ವಿವರವಾಗಿ ಗೊತ್ತಿಲ್ಲ. ಸಿಎಂ ಮತ್ತು ಅಧ್ಯಕ್ಷರಿಗೆ ಗೊತ್ತಿರಬಹುದು. ನಮ್ಮ ಪಕ್ಷದ ಹೈಕಮಾಂಡ್‌ನಲ್ಲಿ ಕೆಲವು ನಿಯಮಗಳಿವೆ. ಅವರದ್ದೇ ಆದ ನಿಬಂಧನೆಗಳಿವೆ. ರಾಜಣ್ಣ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಅವ್ರಿಗೂ ಕಾರಣ ಗೊತ್ತಿಲ್ಲ. ಅವ್ರು ರಾಜೀನಾಮೆ ಪತ್ರ ಕೊಡೋದಕ್ಕೆ ಸಿದ್ಧರಾಗಿದ್ದರು. ಅಷ್ಟರಲ್ಲಿ ಹೈಕಮಾಂಡ್‌ನಿಂದ ತೆಗೆಯಿರಿ ಎಂದು ಪತ್ರ ಬಂದಿದೆ ಎಂದರು.ಇದನ್ನೂ ಓದಿ: ಇಂದು ವಿಶ್ವ ಆನೆ ದಿನಾಚರಣೆ – ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ರಾಜ್ಯದಲ್ಲೇ ನಂ.1