Tag: ಜಿಸ್ಯಾಟ್-29

  • ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್-29 ಉಡಾವಣೆ

    ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್-29 ಉಡಾವಣೆ

    ಶ್ರೀಹರಿಕೋಟಾ: ಇಸ್ರೋ ಇಂದು ಭಾರತದ ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್-29ನ್ನು ಉಡಾವಣೆ ಮಾಡಿದೆ. ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಸಂಜೆ 5.08ಕ್ಕೆ ಜಿಎಸ್‍ಎಸ್‍ವಿ ಎಂಕೆ3-ಡಿ2 ರಾಕೆಟ್ ಮೂಲಕ ಉಪಗ್ರಹ ಉಡಾವಣೆ ಮಾಡಲಾಯಿತು.

    3,423 ಕೆಜಿ ತೂಕವುಳ್ಳ ಜಿಸ್ಯಾಟ್-29 ಜಮ್ಮು ಕಾಶ್ಮೀರ ಹಾಗು ಈಶಾನ್ಯ ಭಾಗದ ಬಳಕೆದಾರರಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಲಿದೆ. ಉಡಾವಣೆ ವೇಳೆ ಗಜ ಚಂಡಮಾರುತದಿಂದ ಅಪಾಯ ಉಂಟಾಗುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದರು. ಗಜ ಚಂಡಮಾರುತ ತನ್ನ ಪಥವನ್ನ ಬದಲಿಸಿದ್ದರಿಂದ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಉಪಗ್ರಹ ಉಡಾವಣೆ ಆಗಿದೆ.

    ಮಂಗಳವಾರ ಮಧ್ಯಾಹ್ನ 2.50ಕ್ಕೆ ಉಡವಾಣೆಯ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿತ್ತು. ಇಂದು ಸಂಜೆ ನಿಗದಿತ 5.08ಕ್ಕೆ ಉಪಗ್ರಹ ಉಡಾವಣೆ ಆಗಿದೆ. ಶ್ರೀಹರಿಕೋಟಾದಿಂದ ಉಡಾವಣೆಗೊಂಡ 67ನೇ ಉಪಗ್ರಹ ಇದಾಗಿದ್ದು, ಭಾರತದಲ್ಲಿ ನಿರ್ಮಿಸಿದ 33ನೇ ಸಂವಹನ ಸ್ಯಾಟ್‍ಲೈಟ್ ಇದಾಗಿದೆ.

    ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ಜಿಸ್ಯಾಟ್-29 ಒಟ್ಟು 3,423 ಕೆಜಿ ತೂಕವನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರ ಹಾಗು ಈಶಾನ್ಯ ರಾಜ್ಯಗಳ ಸಂವಹನ ಸಂಪರ್ಕವನ್ನು ಕಲ್ಪಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews