Tag: ಜಿಸ್‍ಟಿ

  • ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ಜಿಎಸ್‍ಟಿ

    ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ಜಿಎಸ್‍ಟಿ

    ನವದೆಹಲಿ: 2022ನೇ ಸಾಲಿನಲ್ಲಿ ಫೆಬ್ರವರಿಯಲ್ಲಿ 1.33 ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸಂಗ್ರಹವಾಗಿದೆ.

    ಕಳೆದ ಫೆಬ್ರವರಿಯಲ್ಲಿ ಸಂಗ್ರಹವಾಗಿದ್ದ ತೆರಿಗೆಗಿಂತ ಶೇ.18 ರಷ್ಟು ಮತ್ತು 2020ರಲ್ಲಿ ಸಂಗ್ರಹವಾಗಿದ್ದ ತೆರಿಗೆಗಿಂತ ಶೇ.18 ರಷ್ಟು ಅಧಿಕ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ರಾಜ್ಯವಾರು, 9,176 ಕೋಟಿ ರೂಪಾಯಿ ಸಂಗ್ರಹದೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ.

    2022ರ ಫೆಬ್ರವರಿಯ ಆರಂಭದಲ್ಲಿ ದೇಶಾದ್ಯಂತ ಕೋವಿಡ್ ರೂಪಾಂತರಿ ಒಮಿಕ್ರೋನ್ ಸೋಂಕು ವ್ಯಾಪಾರ ವಹಿವಾಟುಗಳ ಮೇಲೆ ಪ್ರಭಾವ ಬೀರಿತ್ತು. ಅಲ್ಲದೆ ಫೆಬ್ರವರಿಯಲ್ಲಿ 28 ದಿನಗಳು ಮಾತ್ರ ಇತ್ತು. ಹೀಗಾಗಿ ಜಿಸ್‍ಟಿ ಸಂಗ್ರಹ ಕಳೆದ ಜನವರಿಗಿಂತ ಕಡಿಮೆಯಾಗಿದೆ. ಜನವರಿಯಲ್ಲಿ 1.40 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಇದನ್ನೂ ಓದಿ: ಸ್ಮಾರ್ಟ್‍ಫೋನ್, ಟ್ಯಾಬ್ ವಿತರಿಸಲು ಎಸ್‍ಪಿಯಿಂದ ತಡೆ: ಯೋಗಿ ಕಿಡಿ

    ಫೆಬ್ರವರಿಯಲ್ಲಿ ಒಟ್ಟು 1,33,026 ಕೋಟಿ ರೂಪಾಯಿ ಜಿಎಸ್‍ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರದ ಜಿಎಸ್‍ಟಿ 24,435 ಕೋಟಿ ರೂಪಾಯಿ, ರಾಜ್ಯ ಜಿಎಸ್‍ಟಿ 30,779 ಕೋಟಿ ರೂಪಾಯಿ ಮತ್ತು ಸಮಗ್ರ ಜಿಎಸ್‍ಟಿ 67,471 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದನ್ನೂ ಓದಿ: ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ