Tag: ಜಿವಿಕೆ

  • ಸಮಸ್ಯೆಗಳ ಗೂಡಾದ 108 ಆಂಬುಲೆನ್ಸ್ ಸೇವೆ – ಡಕೋಟ ಎಕ್ಸ್‌ಪ್ರೆಸ್‌ ಸ್ಥಗಿತಕ್ಕೆ ಮುಂದಾದ ಆರೋಗ್ಯ ಇಲಾಖೆ

    ಸಮಸ್ಯೆಗಳ ಗೂಡಾದ 108 ಆಂಬುಲೆನ್ಸ್ ಸೇವೆ – ಡಕೋಟ ಎಕ್ಸ್‌ಪ್ರೆಸ್‌ ಸ್ಥಗಿತಕ್ಕೆ ಮುಂದಾದ ಆರೋಗ್ಯ ಇಲಾಖೆ

    ಬೆಂಗಳೂರು: 108 ಆಂಬುಲೆನ್ಸ್ (108 Ambulances) ಸೇವೆ ಸಮಸ್ಯೆಗಳ ಗೂಡಾಗಿದೆ. ಜೀವ ಉಳಿಸಬೇಕಿರೋ ಆಂಬುಲೆನ್ಸ್‌ಗಳು ಡಕೋಟ ಎಕ್ಸ್‌ಪ್ರೆಸ್‌ ಆಗ್ತಿವೆ. 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಗುಜರಿಗೆ ತಲುಪಿದ್ದು. 340 ಆಂಬುಲೆನ್ಸ್‌ಗಳ ಸ್ಥಗಿತಕ್ಕೆ ಆರೋಗ್ಯ ಇಲಾಖೆ (Health Department) ಮುಂದಾಗಿದೆ.

    ಕಳೆದ ಎರಡ್ಮೂರು ತಿಂಗಳ ಹಿಂದೆ ಸಂಬಳ ವಿಚಾರಕ್ಕೆ ನೌಕರರು ಮುಷ್ಕರ ಮಾಡಿ 108 ಸೇವೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತೆರೆದಿಟ್ಟು ಸೇವೆ ಸ್ಥಗಿತಕ್ಕೆ ಮುಂದಾಗಿದ್ರು. ಈ ಘಟನೆ ಆದ ಬಳಿಕ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯದ 108 ಸೇವೆಯ ಆಂಬುಲೆನ್ಸ್‌ಗಳು ಗುಜರಿಗೆ ತಲುಪಿರೋ ವಿಚಾರ ಬಯಲಾಗಿದೆ. ಇಂಜಿನ್ ಸಮಸ್ಯೆ, ಬೋರ್ ಸಮಸ್ಯೆ ಮತ್ತು ಟೆಕ್ನಿಕಲ್ ಸಮಸ್ಯೆಯಿಂದ 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳನ್ನು ಸ್ಥಗಿತ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ (Bengaluru) ಒಟ್ಟು 709 ಆಂಬುಲೆನ್ಸ್‌ಗಳಿದ್ದು, ಅದರಲ್ಲಿ 340 ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಕೆಲವೊಂದನ್ನು ರೆಡಿ ಮಾಡಿಸಿಕೊಂಡು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ ವಂಚಿಸಿದ ಸೆಕ್ಯೂರಿಟಿ ಗಾರ್ಡ್ – ದೋಚಿದ್ದು 2.50 ಲಕ್ಷ ರೂ.!

    ಶೀಘ್ರದಲ್ಲಿ 340 ಆಂಬುಲೆನ್ಸ್ ಸ್ಥಗಿತಗೊಳಿಸಿ ಹೊಸದಾಗಿ ಖರೀದಿ ಮಾಡೋ ಪ್ಲ್ಯಾನ್ ಮಾಡಿದ್ದಾರಂತೆ. ಸದ್ಯ ಜಿವಿಕೆ (GVK) ಆವರಣ ಸೇರಿದಂತೆ ಹಲವೆಡೆ ಕೆಟ್ಟು ನಿಂತ ಆಂಬುಲೆನ್ಸ್‌ಗಳನ್ನು ನಿಲ್ಲಿಸಲಾಗಿದೆ. 2008ರಿಂದಲೂ ಕೂಡ ಜಿವಿಕೆ ಸಂಸ್ಥೆ ಆಂಬುಲೆನ್ಸ್ ಸೇವೆ ನೀಡ್ತಾ ಇದೆ. ಆದರೆ ಜಿವಿಕೆ ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಅಪಸ್ವರ ಎದ್ದಿದ್ದು, ಸಂಸ್ಥೆಯ ಕಾರ್ಯ ವೈಖರಿ ಚೆನ್ನಾಗಿಲ್ಲ ಅಂತಾ ಸ್ವತಃ ಆಂಬುಲೆನ್ಸ್ ನೌಕರರೇ ಹೇಳಿದ್ದಾರೆ. ಹೀಗಾಗಿ ಜಿವಿಕೆ ಟೆಂಡರ್ ಅವಧಿ ಮುಕ್ತಾಯ ಆಗಿರುವ ಹಿನ್ನೆಲೆ ಹೊಸದಾಗಿ ಟೆಂಡರ್ ಕರೆದ್ರು ಆಂಬುಲೆನ್ಸ್ ಸೇವೆ ನೀಡಲು ಯಾವ ಕಂಪನಿಗಳು ಮುಂದೆ ಬರದೇ ಇರೋದು ಬಹಿರಂಗ ಆಗಿದೆ. ಫೆಬ್ರವರಿ 6ಕ್ಕೆ ಟೆಂಡರ್ ಅವಧಿ ಮುಕ್ತಾಯ ಆಗ್ತಾ ಇದ್ದು. ಯಾವ ಕಂಪನಿಗಳು ಮುಂದೆ ಬರದೇ ಇದ್ರೆ ಸದನದ ಗಮನಕ್ಕೆ ತಂದು ಆಂಬುಲೆನ್ಸ್‌ಗಳಲ್ಲಿ ಇರುವ ಸಮಸ್ಯೆಯನ್ನು ಸರಿಪಡಿಸುತ್ತೇವೆ ಅಂತಿದ್ದಾರೆ ಇಲಾಖೆ ಅಧಿಕಾರಿಗಳು. ಇದನ್ನೂ ಓದಿ: ಕಿಲ್ಲರ್ BMTCಗೆ ಮತ್ತೊಂದು ಬಲಿ – ಮೂವರ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯಾದ್ಯಂತ 108 ಅಂಬುಲೆನ್ಸ್ ನೌಕರರ ಹೋರಾಟದ ಎಚ್ಚರಿಕೆ

    ರಾಜ್ಯಾದ್ಯಂತ 108 ಅಂಬುಲೆನ್ಸ್ ನೌಕರರ ಹೋರಾಟದ ಎಚ್ಚರಿಕೆ

    ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆಯಷ್ಟೇ 262 ಹೊಸ 108 ಅಂಬುಲೆನ್ಸ್ (108 Ambulance) ಖರೀದಿಗೆ ಒಪ್ಪಿಗೆ ಸೂಚಿಸಿದೆ. ಆದ್ರೆ, ಇರುವ 108 ಅಂಬುಲೆನ್ಸ್‌ಗೆ ಸಂಬಂಧಿಸಿದ ನೂರೆಂಟು ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಯಾವುದೇ ಪ್ರಯತ್ನಗಳನ್ನು ನಡೆಸಿದಂತೆ ಕಾಣುತ್ತಿಲ್ಲ.

    108 ಅಂಬುಲೆನ್ಸ್ ನಿರ್ವಹಣೆ ಹೊಣೆ ಹೊತ್ತಿರುವ ಹೈದರಾಬಾದ್‌ ಮೂಲದ ಜಿವಿಕೆ (GVK) ಸಂಸ್ಥೆ ವಿರುದ್ಧ ನೌಕರರ ಸಂಘ ಸಿಡಿದೆದ್ದಿದೆ. ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 31 ಕೋಟಿ ಹಣ ಬಿಡುಗಡೆ ಮಾಡಿದೆ. ಆದ್ರೆ, ಇದನ್ನು ಸಿಬ್ಬಂದಿಗೆ ವರ್ಗಾಯಿಸುವ ಕೆಲಸವನ್ನು ಜಿವಿಕೆ ಸಂಸ್ಥೆ ಮಾಡಿಲ್ಲ. ಇದನ್ನೂ ಓದಿ: ವಿಕೃತಕಾಮಿ ಉಮೇಶ್‌ ರೆಡ್ಡಿಗೆ ರಿಲೀಫ್‌ – ಸುಪ್ರೀಂನಿಂದ ಗಲ್ಲು ಶಿಕ್ಷೆ ರದ್ದು

    ಕೇಳಿದ್ರೆ, ಹೈದರಾಬಾದ್‌ ಹೆಡ್ ಆಫೀಸ್‍ನಿಂದ ವೇತನ ಹೆಚ್ಚಳದ ಆದೇಶ ಬಂದಿಲ್ಲ ಎಂದು ಬೆಂಗಳೂರು (Bengaluru) ಕಚೇರಿ ಅಧಿಕಾರಿಗಳು ಹೇಳುತ್ತಿದ್ದು, ಇದಕ್ಕೆ ಸಿಟ್ಟಿಗೆದ್ದಿರುವ 108 ಅಂಬುಲೆನ್ಸ್ ನೌಕರರ ಸಂಘ ಮತ್ತೊಮ್ಮೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದೆ. ಕೂಡಲೇ ಆರೋಗ್ಯ ಸಚಿವರು ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದೆ. ಜಿವಿಕೆ ಕಂಪನಿಯನ್ನು ವಜಾ ಮಾಡುವಂತೆ ಪಟ್ಟು ಹಿಡಿದಿದೆ. ಇದನ್ನೂ ಓದಿ: ಕೋಟೆ ನಾಡಿನಲ್ಲಿ ದಾರುಣ ಘಟನೆ – ಒಂದೇ ಕುಟುಂಬದ ಮೂವರು ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ಕಾರವಾರ: ರಾಜ್ಯದಲ್ಲಿ 108 ಅಂಬುಲೆನ್ಸ್ (108 Ambulance) ಸೇವೆಯಲ್ಲಿ ಸಮಸ್ಯೆಯಾಗಿದ್ದು, ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಭರವಸೆ ನೀಡಿದ್ದಾರೆ.

    ಈ ಕುರಿತು ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 108 ಅಂಬುಲೆನ್ಸ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಮುಂದುವರಿದ ರಾಷ್ಟ್ರಗಳಲ್ಲಿನ ಸೇವೆಗಳ ಬಗ್ಗೆ ವರದಿ ನೀಡಲು ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: RSS ಸಂಘಟನೆಗೆ ನಾವು ಅವಕಾಶ ಕೊಟ್ಟಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ

    108 ತುರ್ತು ಅಂಬುಲೆನ್ಸ್ ಸೇವೆ 2006-07ರಲ್ಲಿ ಪ್ರಾರಂಭವಾಯಿತು. ಸತ್ಯಂ ಅನ್ನುವ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿತ್ತು. ಆದರೆ ಆಗ ಟೆಂಡರ್ ಮೂಲಕ ನಿರ್ವಹಣೆಗೆ ನೀಡಿರಲಿಲ್ಲ. ಅಂದು ಯಾವುದೇ ಸಮಸ್ಯೆ ಇರಲಿಲ್ಲ. ಕಂಪನಿ ಲಾಸ್ ಆದ ಬಳಿಕ ಜಿವಿಕೆ (GVK) ಸಂಸ್ಥೆಗೆ ನಿರ್ವಹಣೆಗೆ ವಹಿಸಿಕೊಟ್ಟಿತ್ತು. ಮೊದ ಮೊದಲು ಸರಿಯಾಗಿ ನಡೆಸುತ್ತಿದ್ದ ಸಂಸ್ಥೆ ಇತ್ತೀಚೆಗೆ ಸೇವೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಲಿವಿಂಗ್ ಟುಗೆದರ್‌ನಲ್ಲಿದ್ದ ಪ್ರಿಯತಮೆಯೊಂದಿಗೆ ಸಲುಗೆಯಿಂದಿದ್ದ ಸ್ನೇಹಿತನನ್ನೇ ಇರಿದು ಕೊಂದ

    ಈಗಾಗಲೇ ಮುಂದುವರಿದ ದೇಶಗಳಲ್ಲಿ ಯಾವ ರೀತಿ ವ್ಯವಸ್ಥೆಯಿದೆ ಎಂಬುದರ ಬಗ್ಗೆ ತಿಳಿದು ಸರ್ಕಾರಕ್ಕೆ ವರದಿ ನೀಡಲು ತಾಂತ್ರಿಕ ಸಲಹಾ ಸಮಿತಿ (Technical Committee) ರಚನೆ ಮಾಡಲಾಗಿದೆ. ಸಮಿತಿ ನೀಡಿದ ವರದಿ ಆಧರಿಸಿ ಟೆಂಡರ್ ಕರೆಯಲಾಗುತ್ತದೆ. ಮುಂದೆ ಇಂತಹ ಸಮಸ್ಯೆ ಆಗದಂತೆ ಮಾದರಿ ತುರ್ತು ಅಂಬುಲೆನ್ಸ್ ಸೇವೆ ರಾಜ್ಯದಲ್ಲಿ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

    ಕಳೆದ ಎರಡು ತಿಂಗಳಿನಿಂದ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ವೇತನ ನೀಡಿರಲಿಲ್ಲ. ಸರ್ಕಾರ ಈಗ ಎಲ್ಲರಿಗೂ ವೇತನ ನೀಡಿದೆ. ಇನ್ನೂ ಒಂದೂವರೆ – ಎರಡು ತಿಂಗಳಲ್ಲಿ ಎಲ್ಲ ಸಮಸ್ಯೆಗಳೂ ಬಗೆಹರಿಯಲಿದೆ. ಅಲ್ಲಿಯವರೆಗೆ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ರಾಜ್ಯದಲ್ಲಿ ಅಂಬುಲೆನ್ಸ್ ಸೇವೆ ವ್ಯತ್ಯಯ – ನಿನ್ನೆ ಸಂಜೆಯಿಂದ ಕರೆ ಸ್ವೀಕರಿಸದ 108

    ಬೆಂಗಳೂರು: ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ (Health Emergency) ಎದುರಾಗಿದೆಯಾ ಎಂಬ ಅನುಮಾನವೊಂದು ಕಾಡಿದೆ. ಸರ್ಕಾರ (Government) ದ ನಿರ್ಲಕ್ಷ್ಯಕ್ಕೆ ರೋಗಿಗಳು ಕಂಗಾಲಾಗಿದ್ದು, ರಾಜ್ಯದಲ್ಲಿ ಸಾವು-ನೋವಾಗುವ ಸಾಧ್ಯತೆಗಳಿವೆ.

    ಅಪಘಾತ ಪ್ರಕರಣಗಳು, ವಿಷಕುಡಿದ ಪ್ರಕರಣಗಳು, ಹಾವು ಕಚ್ಚಿದ ಪ್ರಕರಗಳು, ಹೆರಿಗೆ ಪ್ರಕರಣಗಳು ಸೇರಿದಂತೆ ಅನೇಕ ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ ಸೇವೆ ಅಗತ್ಯ. ಈ 108 ಅಂಬುಲೆನ್ಸ್ ಸೇವೆಯನ್ನು ಜಿವಿಕೆ ಸಂಸ್ಥೆ ನಡೆಸುತ್ತಾ ಇದೆ. ರಾಜ್ಯಾದ್ಯಂತ ದಿನಕ್ಕೆ ಸುಮಾರು 8 ಸಾವಿರ ಕರೆಗಳು 108 ಗೆ ಹೋಗುತ್ತವೆ. 8 ಸಾವಿರ ಕರೆಗಳಲ್ಲಿ 2 ಸಾವಿರ ಪ್ರಕರಣಗಳು ಗಂಭೀರ ಆಗಿರುತ್ತವೆ. ಆದರೆ ಈ ಅಂಬುಲೆನ್ಸ್ ಸೇವೆ ಸಿಗದೇ ಇದ್ದರೆ 2 ಸಾವಿರ ಗಂಭೀರ ಪ್ರಕರಣಗಳಲ್ಲಿ ಸಾವು ನೋವಾಗುವ ಸಾಧ್ಯತೆ ಹೆಚ್ಚಿರುತ್ತೆ.

    ನಿನ್ನೆ ಸಂಜೆಯಿಂದ ಅಂಬುಲೆನ್ಸ್ (Ambulance) ಸೇವೆ ಇಲ್ಲದ ಕಾರಣ ಜನರಿಗೆ ತೀರ ಸಮಸ್ಯೆ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ 108 ಸೇವೆ ಸಿಗ್ತಿಲ್ಲ ಅಂತಾ ಹೇಳಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ 108ಗೆ ಕರೆ ಹೋಗ್ತಿಲ್ಲ ಮತ್ತು ಕರೆ ಸ್ವೀಕರಿಸ್ತಿಲ್ಲ ಅಂತಾ ಹೇಳಲಾಗುತ್ತಿದೆ.

    ಈ ಸಂಬಂಧ ಜಿವಿಕೆ (GVK) ಟೆಕ್ನಿಕಲ್ ಟೀಂನಿಂದ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, 108 ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಆಗಿರೋದು ನಿಜ. ಸರ್ವರ್ ಪ್ರಾಬ್ಲಂನಿಂದ ಕರೆ ಸ್ವೀಕರಿಸಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    Live Tv
    [brid partner=56869869 player=32851 video=960834 autoplay=true]

  • ಅಡ್ಡದಾರಿ ಮೂಲಕ ಸರ್ಕಾರದ ದುಡ್ಡು ಹೊಡೆಯುತ್ತಿದೆ ಜಿವಿಕೆ

    ಅಡ್ಡದಾರಿ ಮೂಲಕ ಸರ್ಕಾರದ ದುಡ್ಡು ಹೊಡೆಯುತ್ತಿದೆ ಜಿವಿಕೆ

    – ನಡುರೋಡಲ್ಲಿ ರೋಗಿಗಳ ಶಿಫ್ಟಿಂಗ್
    – ಪಬ್ಲಿಕ್ ಟಿವಿಯಲ್ಲಿ 108 ಆಂಬ್ಯುಲೆನ್ಸ್ ಕರ್ಮಕಾಂಡ

    * ರಕ್ಷಾ ಕಟ್ಟೆಬೆಳಗುಳಿ

    ಬೆಂಗಳೂರು: ಪ್ರಾಣ ರಕ್ಷಣೆಗಾಗಿ ಮೀಸಲಿರೋ 108 ಅಂಬುಲೆನ್ಸ್‍ಗಳು ಪ್ರಾಣ ಭಕ್ಷಕನ ರೀತಿ ಕೆಲಸ ಮಾಡ್ತಾ ಇವೆ. ಸರ್ಕಾರಕ್ಕೆ ಹೆಚ್ಚೆಚ್ಚು ಟ್ರಿಪ್‍ಗಳನ್ನು ತೋರಿಸೋ ನಿಟ್ಟಿನಲ್ಲಿ ರಸ್ತೆ ಮಧ್ಯದಲ್ಲೇ ರೋಗಿಗಳ ಶಿಫ್ಟಿಂಗ್ ನಡೆಯುತ್ತಿದೆ.

    ಹೌದು. ಜನರ ಜೀವ ರಕ್ಷಣೆಕಾಗಿ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸೋ 108 ಆಂಬ್ಯುಲೆನ್ಸ್ ಗಳಲ್ಲಿ ಇತ್ತೀಚೆಗೆ ಶುರುವಾಗಿರೋ ಮತ್ತೊಂದು ಕರ್ಮಕಾಂಡ ಇದು. ರಾಜ್ಯದಲ್ಲಿ ಒಟ್ಟು 717 108 ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. ಈ ವಾಹನಗಳ ಮೇಲುಸ್ತುವಾರಿ ವಹಿಸಿರೋ ಜಿವಿಕೆ ಸಂಸ್ಥೆ ಸರ್ಕಾರಕ್ಕೆ ಹೆಚ್ಚು ಶೆಡ್ಯೂಲ್‍ಗಳನ್ನು ತೋರಿಸೋಕೆ ಒಂದು ಪೇಷೆಂಟ್‍ನ ಎರಡು 108 ಆಂಬ್ಯುಲೆನ್ಸ್ ಆಸ್ಪತ್ರೆಗೆ ಸಾಗಿಸೋ ಕೆಲಸ ಮಾಡ್ತಿದ್ದು, ರೋಗಿಗಳ ಜೀವದೊಂದಿಗೆ ಆಟವಾಡ್ತಿದ್ದಾರೆ. ಇತ್ತ ಇದೇ ಶಿಫ್ಟಿಂಗ್ ವಿಚಾರದಿಂದ 108 ಆಂಬ್ಯುಲೆನ್ಸ್ ಸಿಬ್ಬಂದಿಗಳು ಸ್ಥಳೀಯರಿಂದ ಥಳಿತಕೊಳಗಾದ ಘಟನೆಗೆಳು ಸಹ ನಡೆದಿವೆ.

    ಶವ ಸಾಗಿಸೋಕ್ಕೆ ತಯಾರಿ: ಈಗಾಗ್ಲೇ 717, 108 ಆಂಬ್ಯುಲೆನ್ಸ್ ಗಳನ್ನು ಮೇಲುಸ್ತುವಾರಿ ಹೊತ್ತಿರೋ ಪರರಾಜ್ಯದ ಜಿವಿಕೆ, ಭ್ರಷ್ಟಾಚಾರ, ಹಾಗೂ ರೊಗಿಗಳ ಬಗೆಗಿನ ನಿರ್ಲಕ್ಷ್ಯಕ್ಕೆ ಹೆಸರಾಗಿರೋ ಜೆವಿಕೆಗೆ ರಾಜ್ಯದ ತಾಲೂಕು ಆಸ್ಪತ್ರೆಗಳ 800 ಆಂಬ್ಯುಲೆನ್ಸ್ ಗಳು ಹಾಗೂ ಮುಕ್ತಿ ವಾಹನದ ಉಸ್ತುವಾರಿಯನ್ನು ನೀಡೋಕೆ ಸರ್ಕಾರ ಚಿಂತನೆ ನಡೆಸಿದೆ. ಹಾಗಾಗಿ ಶವವನ್ನು ಸಹ 108 ಆಂಬ್ಯುಲೆನ್ಸ್ ಗಳಲ್ಲಿ ಸಾಗಿಸುವಂತೆ ಸೂಚನೆ ನೀಡಿದ್ದಾರಂತೆ.

    108 ಆಂಬ್ಯುಲೆನ್ಸ್ ನಲ್ಲಿ ಜಿವಿಕೆ ನಡೆಸುತ್ತಿರೋ ಕರ್ಮಕಾಂಡ ಇಷ್ಟಕ್ಕೆ ಮುಗಿಯೋದಿಲ್ಲ, ದುರಸ್ಥಿತಿಯಲ್ಲಿರೋ, ವಾಹನಗಳ ಬಗ್ಗೆ ಕಂಪ್ಲೇಟ್ ಮಾಡಿದ್ರೂ ಕೇಳೋರಿಲ್ಲ. ಕೆಲವೊಂದು ಬಾರಿ 108 ಆಂಬ್ಯುಲೆನ್ಸ್‍ಗಳಲ್ಲಿ ರೋಗಿಗಳಿದ್ದಾಗ ಕೆಟ್ಟು ನಿಂತು ಪರದಾಡೋ ಪರಿಸ್ಥಿತಿ ಸಿಬ್ಬಂದಿಯದ್ದು.

    https://www.youtube.com/watch?v=x_qQg8Ybbqs