Tag: ಜಿಲ್ಲಾ ಮ್ಯಾಜಿಸ್ಟ್ರೇಟ್

  • ಐಎಎಸ್ ಅಧಿಕಾರಿ ಕೊಲೆ ಅಪರಾಧಿ ರಿಲೀಸ್ – ಬಿಹಾರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಐಎಎಸ್ ಅಧಿಕಾರಿ ಕೊಲೆ ಅಪರಾಧಿ ರಿಲೀಸ್ – ಬಿಹಾರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ನವದೆಹಲಿ: ದರೋಡೆಕೋರ, ರಾಜಕಾರಣಿ ಆನಂದ್ ಮೋಹನ್‍ನನ್ನು ಅವಧಿ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ (Supreme Court) ಬಿಹಾರ (Bihar) ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಸರ್ಕಾರ ಎರಡು ವಾರಗಳಲ್ಲಿ ಉತ್ತರಿಸಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.

    ಐಎಎಸ್ (IAS) ಅಧಿಕಾರಿ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆನಂದ್ ಮೋಹನ್‍ನನ್ನು ಬಿಹಾರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಕೃಷ್ಣಯ್ಯ ಪತ್ನಿ ಉಮಾ ಕೃಷ್ಣಯ್ಯ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಸುಪ್ರೀಂ ಪ್ರತಿಕ್ರಿಯೆಯಿಂದ ನನಗೆ ಸಂತಸವಾಗಿದೆ. ನ್ಯಾಯ ಸಿಗುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಂಧನ ಭೀತಿ – ಸುಪ್ರೀಂ ಮೊರೆ ಹೋದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್

    ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಜೈಲು ಕೈಪಿಡಿಯನ್ನು ಇತ್ತೀಚೆಗೆ ತಿದ್ದುಪಡಿ ಮಾಡಿತ್ತು. ಇದಾದ ನಂತರ 27 ಅಪರಾಧಿಗಳ ಬಿಡುಗಡೆಯಾಗಿತ್ತು. ಏ. 27 ರಂದು ಆನಂದ್ ಮೋಹನ್‍ನನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನು ಸುಪ್ರೀಂ ಗಮನಕ್ಕೆ ತಂದಿದ್ದ ಅರ್ಜಿದಾರರು ಆನಂದ್‍ನನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಕೈಪಿಡಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

    1994ರಲ್ಲಿ ಅಂದಿನ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate) ಜಿ. ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಆನಂದ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈ ಹಿಂದೆ ಪುತ್ರ ಚೇತನ್ ಆನಂದ್ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 15 ದಿನಗಳ ಪೆರೋಲ್‍ನಲ್ಲಿದ್ದ. ಪೆರೋಲ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಏ.26 ರಂದು ಸಹರ್ಸಾ ಜೈಲಿಗೆ ಮರಳಿದ್ದ. ಆದರೆ ಏ.27 ರಂದು ಬಿಡುಗಡೆಯಾಗಿದ್ದ.

    ಪ್ರಕರಣದ ಹಿನ್ನೆಲೆ ಏನು?
    1994 ರ ಡಿಸೆಂಬರ್ 5 ರಂದು ಮುಜಾಫರ್‍ಪುರ್‍ನಲ್ಲಿ ಕೃಷ್ಣಯ್ಯ ಅವರನ್ನು ಆನಂದ್ ಮೋಹನ್‍ನ ಪ್ರಚೋದನೆಗೆ ಒಳಗಾದ ಗುಂಪು ಥಳಿಸಿ ಕೊಂದಿತ್ತು. 2007 ರಲ್ಲಿ ವಿಚಾರಣಾ ನ್ಯಾಯಾಲಯವು ಆನಂದ್ ಮೋಹನ್‍ಗೆ ಮರಣದಂಡನೆ ವಿಧಿಸಿತ್ತು. ಒಂದು ವರ್ಷದ ನಂತರ ಪಾಟ್ನಾ  ಹೈಕೋರ್ಟ್ (Patna High Court) ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ನಂತರ ಮೋಹನ್ ಸುಪ್ರೀಂ ಕೋರ್ಟ್‍ನಲ್ಲಿ ತೀರ್ಪನ್ನು ಪ್ರಶ್ನಿಸಿದ್ದ. ಆದರೆ ಈ ಅರ್ಜಿಯ ಯಾವುದೇ ವಿಚಾರಣೆ ನಡೆಯದೇ 2007 ರಿಂದ ಸಹರ್ಸಾ (Saharsa) ಜೈಲಿನಲ್ಲಿದ್ದ. ಇದನ್ನೂ ಓದಿ: ಸಿಹಿ ಹಂಚಿ ರೇಪ್ – 30 ಮಕ್ಕಳ ಮೇಲೆ ಅತ್ಯಾಚಾರಗೈದವ ಕೊನೆಗೂ ದೋಷಿಯಾದ

  • ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳನ್ನು ದತ್ತು ಪಡೆದ ಜಿಲ್ಲಾಧಿಕಾರಿ

    ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳನ್ನು ದತ್ತು ಪಡೆದ ಜಿಲ್ಲಾಧಿಕಾರಿ

    ಪಾಟ್ನಾ: ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸಿನಿಮಾ ಸ್ಟಾರ್ ಸೇರಿದಂತೆ ಇನ್ನೂ ಅನೇಕರು ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಇವರ ಜೊತೆ ಬಿಹಾರದ ಜಿಲ್ಲಾಧಿಕಾರಿಯೊಬ್ಬರು ಹುತಾತ್ಮ ಯೋಧರ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ.

    ಬಿಹಾರದ ಶೇಕ್‍ಪುರ್ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರು ಇಬ್ಬರು ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ. ಪಾಟ್ನಾದ ಹುತಾತ್ಮ ಯೋಧ ಸಂಜಯ್ ಕುಮಾರ್ ಸಿಂಗ್ ಮತ್ತು ಬಾಗಲ್ಪುರ್ ನ ರತನ್ ಕುಮಾರ್ ಠಾಕೂರ್ ಅವರು ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಇವರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣವನ್ನು ಭರಿಸುವುದಾಗಿ ಇನಾಯತ್ ಖಾನ್ ಹೇಳಿದ್ದಾರೆ.

    ದತ್ತ ಪಡೆದಿರುವ ಎರಡು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ಅಗತ್ಯವಾದ ಹಣ ಒದಗಿಸುತ್ತೇನೆ. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಸಹಾಯ ಮಾಡುತ್ತೇನೆ ಎಂದು ಇನಾಯತ್ ಖಾನ್ ಅವರು ಭರವಸೆ ನೀಡಿದ್ದಾರೆ. ಎರಡು ದಿನದ ಸಂಬಳವನ್ನು ನೀಡಿದ ಅವರು ಈ ಕುಟುಂಬಗಳಿಗೆ ನೆರವಾಗಲು ಒಂದು ದಿನದ ವೇತನವನ್ನು ದಾನ ಮಾಡುವಂತೆ ತಮ್ಮ ಜಿಲ್ಲೆಯ ಸರ್ಕಾರಿ ಸಿಬ್ಬಂದಿಯ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಎರಡು ಕುಟುಂಬಗಳಿಗೂ ಸಹ ಹಣವನ್ನು ಸಂಗ್ರಹಿಸಲು ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಮುಂದಿನ ತಿಂಗಳು ಮಾರ್ಚ್ 10ರ ಒಳಗೆ ಹಣ ನೀಡುವಂತೆ ಹೇಳಿದ್ದಾರೆ. ಅಷ್ಟರಲ್ಲಿ ಎಷ್ಟು ಹಣ ಸಂಗ್ರಹವಾಗಿರುತ್ತದೆಯೂ ಅಷ್ಟು ಹಣವನ್ನು ಸೈನಿಕರ ಕುಟುಂಬಕ್ಕೆ ನೀಡಲಾಗುವುದು ಎಂದು ಖಾನ್ ತಿಳಿಸಿದ್ದಾರೆ.

    ಈಗಾಗಲೇ ಸರ್ಕಾರ, ಸೇನೆ, ರಾಜಕಾರಣಿಗಳು ಹುತಾತ್ಮ ಯೋಧರ ಕುಟುಂಬದವರಿಗೆ ಪರಿಹಾರ  ನಿಧಿಯ ರೂಪದಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv