Tag: ಜಿಲ್ಲಾ ಪಂಚಾಯತ್ ಸದಸ್ಯ

  • ನಡು ರಸ್ತೆಯಲ್ಲೇ ಜಿ.ಪಂ. ಸದಸ್ಯನಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ರು

    ನಡು ರಸ್ತೆಯಲ್ಲೇ ಜಿ.ಪಂ. ಸದಸ್ಯನಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ರು

    ಭೋಪಾಲ್: ಹೊಸದಾಗಿ ಚುನಾಯಿತರಾದ ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಗ್ಯಾಂಗ್ ಒಂದು ದೊಣ್ಣೆಗಳಿಂದ ಹೊಡೆದು, ಒದ್ದು, ಗುದ್ದಿರುವ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಜಿಲ್ಲಾ ಪಂಚಾಯತ್ ಚುನಾವಣೆಯ ಫಲಿತಾಂಶ ಬಂದ ನಂತರ ಈ ಘಟನೆ ನಡೆದಿದೆ. ರಾಕೇಶ್ ಲೋಧಿ ಅವರು ತಮ್ಮ ಕೆಲವು ಸಹಾಯಕರೊಂದಿಗೆ ನಿಂತಿದ್ದ ವೇಳೆ, ಐದು ಜನರಿದ್ದ ಮಹೇಶ್ ಲೋಧಿಯವರ ಗ್ಯಾಂಗ್ ದೊಣ್ಣೆಯನ್ನು ಹಿಡಿದುಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಹಾಡಗಲಲ್ಲೇ ನಡು ರಸ್ತೆಯಲ್ಲಿ ಪಂಚ ರಾಕೇಶ್ ಲೋಧಿ ಮೇಲೆ ದೊಣ್ಣೆಯಿಂದ ಹೊಡೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

    ವೀಡಿಯೋದಲ್ಲಿ ರಾಕೇಶ್ ಅವರ ಬೆನ್ನು, ಹೊಟ್ಟೆ ಮತ್ತು ತಲೆಯ ಮೇಲೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ, ದುಷ್ಕರ್ಮಿಗಳು ಬಿಡದೇ ಮನಬಂದಂತೆ ಥಳಿಸಿದ್ದಾರೆ. ಕೊನೆಗೆ ರಾಕೇಶ್ ಅನ್ನು ಆತನ ಸಹಾಯಕ ಸೋನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: ಶಾಸಕರು ತುಲಾಭಾರ ಮಾಡುವಷ್ಟು ಹಣ ಮಾಡ್ಕೊಂಡಿದ್ದಾರೆ, ಆದರೆ ಅವರಿಗೆ ಆಸ್ಪತ್ರೆ ಬೇಡ: ಚಕ್ರವರ್ತಿ ಸೂಲಿಬೆಲೆ

    Live Tv
    [brid partner=56869869 player=32851 video=960834 autoplay=true]

  • ಕಾಲುವೆ ತಡೆಗೋಡೆ ಒಡೆದು ಜಿ.ಪಂ ಕಾಂಗ್ರೆಸ್ ಸದಸ್ಯನ ದರ್ಪ ಅಡಗಿಸಿದ ರೈತರು

    ಕಾಲುವೆ ತಡೆಗೋಡೆ ಒಡೆದು ಜಿ.ಪಂ ಕಾಂಗ್ರೆಸ್ ಸದಸ್ಯನ ದರ್ಪ ಅಡಗಿಸಿದ ರೈತರು

    ರಾಯಚೂರು: ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರೊಬ್ಬರು ತುಂಗಭದ್ರಾ ಎಡದಂಡೆ ಕಾಲುವೆಗೆ ತಡೆಗೋಡೆ ಕಟ್ಟಿ, ತಮ್ಮ ಜಮೀನಿಗೆ ನೀರು ಹರಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ರೆ, ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಆಕ್ರೋಶಗೊಂಡ ರೈತರು ಕಾಲುವೆಗೆ ಕಟ್ಟಲಾಗಿದ್ದ ತಡೆಗೋಡೆಯನ್ನು ಒಡೆದು ಹಾಕಿದ್ದಾರೆ.

    ಯಾರು ಈ ಜನಪ್ರತಿನಿಧಿ: ಸಿಂಧನೂರಿನ ಗುಡದೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ದುರಗಪ್ಪ ಗುಡಗಲದಿನ್ನಿ ಅಕ್ರಮವಾಗಿ ನೀರು ಪಡೆಯುತ್ತಿರುವ ಜನಪ್ರತಿನಿಧಿ. ತುಂಗಭದ್ರಾ ಎಡದಂಡೆ ಕಾಲುವೆಯ 49 ನೇ ಉಪಕಾಲುವೆಗೆ ತಡೆಗೊಡೆ ಕಟ್ಟಿ, ತಮ್ಮ 12 ಎಕರೆ ಜಮೀನಿಗೆ ನೀರು ಹರಿಸಿಕೊಂಡಿದ್ದರು.

    ತಡೆಗೋಡೆ ಕಟ್ಟಿದ್ದರಿಂದ ಕೆಳಭಾಗದ ಕೋಳಬಾಳ, ಕನ್ನೂರು, ಹೆಡಗಿಬಾಳ ಕ್ಯಾಂಪ್, ಮದ್ದಾಪುರ, ಎಲೆಕೂಡ್ಲಿಗಿ, ಗೋನಾಳ ಸೇರಿ ಇನ್ನೂ ಹಲವು ಗ್ರಾಮದ ರೈತರ ಜಮೀನಿಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಕಾಲುವೆಗೆ ನೀರು ಬಿಟ್ಟಿದ್ದರೂ ತಮ್ಮ ಹೊಲಗಳ ಸಮೀಪದ ಕಾಲುವೆಗೆ ನೀರು ಬಾರದಿದ್ದಕ್ಕೆ ಸಂದೇಹ ವ್ಯಕ್ತಪಡಿಸಿ, ಕೆಲವು ರೈತರು ಕಾಲುವೆ ಪರಿಶೀಲನೆ ಮಾಡಿದ್ದರು. ಈ ವೇಳೆ ದುರಗಪ್ಪ ಗುಡಗಲದಿನ್ನಿ ಕಾಲುವೆಗೆ ತಡೆಗೊಡೆ ಕಟ್ಟಿದ್ದು ತಿಳಿದು, ನೀರು ಬಿಡುವಂತೆ ಅವರು ಕೇಳಿದ್ದರು. ಆದರೆ ಇದಕ್ಕೆ ಒಪ್ಪದ ದುರಗಪ್ಪ ಗೂಂಡಾಗಿರಿ ದರ್ಪ ಮೆರೆದಿದ್ದರು.

    ಕೆಲವು ರೈತರು ದುರಗಪ್ಪ ಗುಡಗಲದಿನ್ನಿ ವಿರುದ್ಧ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಪೊಲೀಸರ ಎದುರೇ ರೈತರೇ ಕಾಂಕ್ರೀಟ್‍ನಿಂದ ಕಟ್ಟಿದ್ದ ತಡೆಗೋಡೆಯನ್ನು ಒಡೆದುಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಿಎಂ ಎಲೆಕ್ಷನ್ ವೇಳೆ ಕಾರ್ ಟೈರ್‍ನಲ್ಲಿ ಸಾಗಿಸಿದ್ರಂತೆ ಕಂತೆ ಕಂತೆ ನೋಟು- ಜಿಪಂ ಸದಸ್ಯನಿಂದ ಹೊಸ ಬಾಂಬ್

    ಸಿಎಂ ಎಲೆಕ್ಷನ್ ವೇಳೆ ಕಾರ್ ಟೈರ್‍ನಲ್ಲಿ ಸಾಗಿಸಿದ್ರಂತೆ ಕಂತೆ ಕಂತೆ ನೋಟು- ಜಿಪಂ ಸದಸ್ಯನಿಂದ ಹೊಸ ಬಾಂಬ್

    ತುಮಕೂರು: ಜಿಲ್ಲೆಯ ಹೊನವಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯ ಜಿ.ನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಾಗ ನಡೆದಂತಹ ಉಪಚುನಾಚಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ. ನನ್ನಲ್ಲಿದ್ದ ಸ್ಯಾಂಟ್ರೋ ಕಾರಿನ ಟೈರ್‍ನಲ್ಲಿ 4 ಲಕ್ಷ ರೂ. ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದು ಸೋಮವಾರದಂದು ತಿಪಟೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

    ಸಿದ್ದರಾಮಯ್ಯನವರು ಸಿಎಂ ಆಗಬೇಕು ಎಂಬ ಕನಸು ಕಂಡಿದ್ದೆ. ಈಗ ಅವರು ಪ್ರಧಾನಿಯೂ ಆಗಬೇಕು ಎಂಬ ಹಂಬಲ ಇದೆ. ಆದರೆ ಸಿದ್ದರಾಮಯ್ಯಗೋಸ್ಕರ ದುಡಿದ ನನಗೆ ಕಾಂಗ್ರೆಸ್ ನವರೇ ದ್ವೇಷ ಮಾಡ್ತಾ ಇದ್ದಾರೆ ಎಂದು ನೋವನ್ನು ತೋಡಿಕೊಂಡರು. ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸುತ್ತೇನೆ ಅಂದ್ರು.

    ಇದು ಸೂರ್ಯ ಚಂದ್ರರಿರುವಷ್ಟೇ ಸತ್ಯ ಎಂದು ಆಕ್ರೋಶಭರಿತರಾಗಿ ಹೇಳಿ ಇನ್ನೊಂದು ವಿವಾದ ಸೃಷ್ಟಿಸಿದ್ದಾರೆ. ವೇದಿಕೆಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಇದ್ದರೂ ಜಿ.ನಾರಾಯಣ ಈ ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.