Tag: ಜಿಲ್ಲಾ ಕಾರಾಗೃಹ

  • Ramanagara | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ – 23 ಮಂದಿಯ ವಿರುದ್ಧ ಎಫ್‌ಐಆರ್

    Ramanagara | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ – 23 ಮಂದಿಯ ವಿರುದ್ಧ ಎಫ್‌ಐಆರ್

    ರಾಮನಗರ: ರಾಮನಗರ ಜಿಲ್ಲಾ ಕಾರಾಗೃಹದಲ್ಲಿ (Ramanagara District Jail) ಕೈದಿಗಳ (Prisoners) ನಡುವೆ ಮಾರಾಮಾರಿ ನಡೆದಿದ್ದು, ಎರಡು ಗುಂಪುಗಳು ಪರಸ್ಪರ ಬಡಿದಾಡಿಕೊಂಡಿವೆ. ಈ ಹಿನ್ನೆಲೆ ಜಿಲ್ಲಾ ಕಾರಾಗೃಹದ 23 ಕೈದಿಗಳ ಎಫ್‌ಐಆರ್ (FIR) ದಾಖಲಾಗಿದೆ.

    ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್ ಹರ್ಷ ಹಾಗೂ ಮತ್ತೋರ್ವ ರೌಡಿಶೀಟರ್ ದೇವರಾಜು ನಡುವೆ ಹಳೇ ವೈಷಮ್ಯಕ್ಕೆ ಗಲಾಟೆ ಆರಂಭವಾಗಿದೆ. ಜೈಲಿನಲ್ಲಿದ್ದ ಹಲವು ಕೈದಿಗಳು ಎರಡು ಗುಂಪುಗಳಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಧ್ಯಪ್ರವೇಶ ಮಾಡಿ ಗಲಾಟೆ ನಿಯಂತ್ರಿಸಿ ಕೈದಿಗಳ ಸಮಾಧಾನ ಮಾಡಿದ್ದಾರೆ. ಗಲಾಟೆ ತಡೆಯುವ ವೇಳೆ ಜೈಲು ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಗುಂಪು ಚದುರಿಸಿ ಎರಡೂ ಗುಂಪಿನ ಕೈದಿಗಳನ್ನು ಪ್ರತ್ಯೇಕ ಬ್ಯಾರಾಕ್‌ಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು – ರಾಜ್ಯಪಾಲ, ಸಿಎಂರಿಂದ ಆತ್ಮೀಯ ಸ್ವಾಗತ

    ಈ ಬಗ್ಗೆ ರಾಮನಗರ ಟೌನ್ ಠಾಣೆಯಲ್ಲಿ ಕಾರಾಗೃಹ ಅಧೀಕ್ಷಕ ರಾಕೇಶ್ ಕಾಂಬಳೆ ದೂರು ದಾಖಲು ಮಾಡಿದ್ದು, ಕಾರಾಗೃಹ ನಿಯಮ ಉಲ್ಲಂಘನೆ ಹಾಗೂ ಗುಂಪುಕಟ್ಟಿಕೊಂಡು ಗಲಾಟೆ ಮಾಡಿದ ಆರೋಪದಡಿ 23 ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಅಮಿತ್‌ ಶಾ ಜಮ್ಮು ಕಾಶ್ಮೀರದಲ್ಲಿದ್ದಾಗಲೇ ಒಳನುಸುಳಲು ಯತ್ನ – ಶಂಕಿತ ಉಗ್ರರ ಮೇಲೆ ಗುಂಡಿನ ದಾಳಿ

  • ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರಿಂದ ರಾತ್ರೋ ರಾತ್ರಿ ದಾಳಿ – 17 ಮೊಬೈಲ್‌, ಗಾಂಜಾ, ಸಿಗರೇಟ್‌ ಸೀಜ್‌

    ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರಿಂದ ರಾತ್ರೋ ರಾತ್ರಿ ದಾಳಿ – 17 ಮೊಬೈಲ್‌, ಗಾಂಜಾ, ಸಿಗರೇಟ್‌ ಸೀಜ್‌

    ಹಾಸನ: ಜಿಲ್ಲಾ ಕಾರಾಗೃಹದ (District Jail) ಮೇಲೆ ಪೊಲೀಸರು (Police) ತಡರಾತ್ರಿ ದಿಢೀರ್ ದಾಳಿ ನಡೆಸಿ 17 ಮೊಬೈಲ್‌ಗಳು, ಚಾರ್ಜರ್, ಗಾಂಜಾ, ಬಿಡಿ ಹಾಗೂ ಸಿಗರೇಟ್‌ನ್ನು ವಶಪಡಿಸಿಕೊಂಡಿದ್ದಾರೆ.

    ಹಾಸನ ನಗರದ (Hassan City) ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲೆ ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ತಮ್ಮಯ್ಯ ಹಾಗೂ ಇನ್ಸ್‌ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ 60 ಪೊಲೀಸ್‌ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮುಂಜಾನೆಯವರೆಗೂ ಜೈಲಿನ ಕೊಠಡಿಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ.

    ಈ ವೇಳೆ ಜೈಲಿನಲ್ಲಿರುವ ಆರೋಪಿಗಳು (Accused) ಹಾಗೂ ಖೈದಿಗಳ ಬಳಿ ಮೊಬೈಲ್‌ ಫೋನ್‌ಗಳು ಹಾಗೂ ಗಾಂಜಾ ಪತ್ತೆಯಾಗಿದೆ. ಒಟ್ಟು 6 ಆ್ಯಂಡ್ರಾಯ್ಡ್‌ ಮೊಬೈಲ್‌ಗಳು ಹಾಗೂ ಹನ್ನೊಂದು ಬೇಸಿಕ್ ಮೊಬೈಲ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಜೈಲಿನೊಳಗೆ ಮೊಬೈಲ್‌, ಗಾಂಜಾ ಪೂರೈಕೆ ಮಾಡುತ್ತಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲೋಕಸಮರಕ್ಕೆ ಆಪರೇಷನ್ ಹಸ್ತ – ಕರಾವಳಿಯಿಂದ ಸ್ಪರ್ಧಿಸ್ತಾರಾ ಬಿಜೆಪಿಯ ಆ ಸಂಸದ?

    ಕಳೆದ ಜ.19 ರಂದು ಮುಂಜಾನೆ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ ಮೊಬೈಲ್, ಚಾಕು ಹಾಗೂ ಅಪಾರ ಪ್ರಮಾಣದ ಗಾಂಜಾವನ್ನ ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿನ ಬಳಿಕ ದಳಪತಿಗೆ ಶಾಕ್ – ಪುಟ್ಟರಾಜುಗೆ ‘ಕೈ’ ನಾಯಕರಿಂದ ಗಾಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕಾರಾಗೃಹದಲ್ಲಿ ಅಕ್ಷರ ಜ್ಞಾನಾರ್ಜನೆ- ಸಾಕ್ಷರ ಕೈದಿಗಳಿಂದ ಅನಕ್ಷರಸ್ಥ ಕೈದಿಗಳಿಗೆ ಪಾಠ

    ಕೊಪ್ಪಳ: ಜೀವನದ ಯಾವುದೋ ಒಂದು ಸಮಯದಲ್ಲಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿದ ಕೈದಿಗಳ ಜೀವನದಲ್ಲಿ ಹೊಸ ಪುಟವನ್ನು ತೆರೆಯುವ ಕೆಲಸವನ್ನು ಕೊಪ್ಪಳದ ಜಿಲ್ಲಾ ಕಾರಾಗೃಹದಲ್ಲಿ ಮಾಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಅಕ್ಷರ ಕಲಿಕೆಯ ವಿಶೇಷ ಕಾರ್ಯಕ್ರಮವನು ಹಮ್ಮಿಕೊಳ್ಳಲಾಗಿದೆ. ವಿಶೇಷ ಎಂದರೆ ಕಾರಾಗೃಹದಲ್ಲಿರುವ ಅಕ್ಷರಸ್ಥ ಕೈದಿಗಳಿಂದಲೇ ಅನಕ್ಷರಸ್ಥ ಕೈದಿಗಳಿಗೆ ಪಾಠ ಮಾಡಲಾಗುತ್ತಿದೆ. ನಿತ್ಯ ಅನಕ್ಷರಸ್ಥ ಕೈದಿಗಳಿಗೆ 1 ಗಂಟೆ ಅಕ್ಷರಗಳ ಸಾಮಾನ್ಯ ಜ್ಞಾನ ಹೇಳಿಕೊಡಲಾಗುತ್ತಿದೆ.

    ಜಿಲ್ಲಾ ಕಾರಾಗೃಹದಲ್ಲಿ ಸುಮಾರು 300 ಜನ ವಿಚಾರಣಾಧೀನ ಕೈದಿಗಳಿದ್ದಾರೆ. ಅದರಲ್ಲಿ ಸುಮಾರು 90 ಕ್ಕೂ ಹೆಚ್ಚು ಜನರಿಗೆ ಅಕ್ಷರ ಜ್ಞಾನ ಇಲ್ಲ. ಹೀಗಾಗಿ ಅನಕ್ಷರಸ್ಥ ಕೈದಿಗಳಿಗೆ ಜೈಲಿನಲ್ಲಿರುವ ಅಕ್ಷರಸ್ಥ ಕೈದಿಗಳಿಂದ ಪಾಠ ಮಾಡಿಸಲಾಗುತ್ತಿದೆ. ಪ್ರತಿ 10 ಅನಕ್ಷರಸ್ಥರನ್ನು ಒಂದು ತಂಡ ಮಾಡಿ ನಿತ್ಯ 1 ಗಂಟೆ ಅವರಿಗೆ ಪಾಠ ಮಾಡಲಾಗುತ್ತಿದೆ.

    ಕೈದಿಗಳಿಗೆ ಶಿಕ್ಷಣ ನೀಡುವ ಈ ಕಾರ್ಯಕ್ಕೆ ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆ ಕೂಡಾ ಸಾಥ್ ನೀಡಿದ್ದು, ಕೈದಿಗಳಿಗೆ ಅಗತ್ಯ ಪುಸ್ತಕಗಳನ್ನು ನೀಡಿದೆ. ವಿವಿಧ ಅಪರಾಧದಲ್ಲಿ ಭಾಗಿಯಾದ ಬಂದ ಕೈದಿಗಳು ಇಲ್ಲಿಂದ ಹೊರಗಡೆ ಹೋದಾಗ ಅಕ್ಷರ ಕಲಿತು ಹೋಗಲಿ ಎಂಬುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕಾರಾಗೃಹ ಅಧೀಕ್ಷಕರಾದ ಬಿ.ಎಮ್.ಕೊಟ್ರೇಶ್ ತಿಳಿಸಿದ್ದಾರೆ.

    ಮೊದಲಿಗೆ ಅಕ್ಷರ ಜ್ಞಾನ ಹೊಂದಿರುವ ಕೈದಿಗಳಿಗೆ ಕೆಲ ಮಾರ್ಗದರ್ಶನಗಳನ್ನು ನೀಡಿ ಆ ಬಳಿಕ ಇತರೇ ಕೈದಿಗಳಿಗೆ ಕಲಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಈ ಕಾರ್ಯಕ್ರಮ ಮೊದಲ ಭಾಗವಾಗಿ 6 ತಿಂಗಳ ಕಾಲ ನಡೆಯಲಿದೆ. ಇದು ಕೈದಿಗಳ ಜೀವನಕ್ಕೆ ನೆರವಾಗಲಿ. ಅಕ್ಷರ ಕಲಿತ ಕೈದಿಗಳು ಮನ ಪರಿವರ್ತನೆ ಮಾಡಿಕೊಂಡು ಹೊಸ ದಾರಿ ರೂಪಿಸಿಕೊಳ್ಳಿ ಎಂಬುವುದು ನಮ್ಮ ಗುರಿಯಾಗಿದೆ ಎಂದರು. ಅಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.