Tag: ಜಿಲ್ಲಾ ಉಸ್ತುವಾರಿ ಸಚಿವರು

  • ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ

    ಬೆಂಗಳೂರು: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆಯ ನಿರ್ಧಾರ ಮಾಡಲಾಗಿದೆ. ಈ ರೀತಿಯ ಪ್ರಯೋಗಗಳು ಬೇರೆ ಬೇರೆ ಜಿಲ್ಲೆಯಲ್ಲೂ ನಡೆಯುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೇರೆ ಬೇರೆ ಜಿಲ್ಲೆಯಲ್ಲಿ ಈ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಅದರಂತೆ ನಮ್ಮಲ್ಲೂ ಮಾಡಿದ್ದಾರೆ. ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

    Somanna

    ನಾನೂ ಬೆಂಗಳೂರು ಉಸ್ತುವಾರಿ ಕೇಳಿದ್ದೆ. ಆದರೆ ಅದನ್ನು ಬೇರೆ ಯಾರಿಗೂ ಕೊಟ್ಟಿಲ್ಲ. ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಂಡಿದ್ದಾರೆ. ಅವರ ಬಳಿ ಇರುವುದೇ ಸೂಕ್ತ ಎಂದ ಅವರು, ವರಿಷ್ಠರು ಹಾಗೂ ಹೈಕಮಾಂಡ್ ತೀರ್ಮಾನ ಮಾಡಿ ಉಸ್ತುವಾರಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಯಾವ ಲೆಕ್ಕಾಚಾರದಲ್ಲಿ ಬೇರೆ ಬೇರೆ ಜಿಲ್ಲೆ ಹಂಚಿಕೆ ಮಾಡಲಾಗಿದೆ ಗೊತ್ತಿಲ್ಲ. ಆದರೆ ತವರು ಜಿಲ್ಲೆ ಸಿಕ್ಕಿಲ್ಲ ಅಂದ ಮೇಲೆ ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿ ಇರುವುದೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್

  • ಬೆಂಗಳೂರು ನಗರಕ್ಕೆ ಸಿಎಂ ಸೇರಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ – ಯಾರಿಗೆ ಯಾವ ಜಿಲ್ಲೆ?

    ಬೆಂಗಳೂರು ನಗರಕ್ಕೆ ಸಿಎಂ ಸೇರಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ – ಯಾರಿಗೆ ಯಾವ ಜಿಲ್ಲೆ?

    ಬೆಂಗಳೂರು: ರಾಜ್ಯದ 30 ಜಿಲ್ಲೆಗಳಿಗೆ ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಯಾರಿಗೆ ಯಾವ ಜಿಲ್ಲೆ?
    ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
    ಗೋವಿಂದ ಎಂ.ಕಾರಜೋಳ – ಬೆಳಗಾವಿ
    ಕೆ.ಎಸ್‌.ಈಶ್ವರಪ್ಪ – ಚಿಕ್ಕಮಗಳೂರು
    ಬಿ.ಶ್ರೀರಾಮುಲು – ಬಳ್ಳಾರಿ
    ವಿ.ಸೋಮಣ್ಣ – ಚಾಮರಾಜನಗರ
    ಉಮೇಶ್‌ ಕತ್ತಿ – ವಿಜಯಪುರ
    ಎಸ್.ಅಂಗಾರ – ಉಡುಪಿ
    ಆರಗ ಜ್ಞಾನೇಂದ್ರ – ತುಮಕೂರು
    ಡಾ. ಸಿ.ಎನ್.ಅಶ್ವತ್ಥ ನಾರಾಯಣ – ರಾಮನಗರ
    ಸಿ.ಸಿ.ಪಾಟೀಲ್‌ – ಬಾಗಲಕೋಟೆ
    ಆನಂದ್‌ ಸಿಂಗ್‌ – ಕೊಪ್ಪಳ
    ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
    ಪ್ರಭು ಚವ್ಹಾಣ್‌ – ಯಾದಗಿರಿ
    ಮುರುಗೇಶ್‌ ನಿರಾಣಿ – ಕಲಬುರಗಿ
    ಶಿವರಾಮ್‌ ಹೆಬ್ಬಾರ್‌ – ಹಾವೇರಿ
    ಎಸ್‌.ಟಿ.ಸೋಮಶೇಖರ್‌ – ಮೈಸೂರು
    ಬಿ.ಸಿ.ಪಾಟೀಲ್‌ – ಚಿತ್ರದುರ್ಗ/ಗದಗ
    ಬಿ.ಎ.ಬಸವರಾಜ್‌ – ದಾವಣಗೆರೆ
    ಡಾ. ಕೆ.ಸುಧಾಕರ್‌ – ಬೆಂಗಳೂರು ಗ್ರಾಮಾಂತರ
    ಕೆ.ಗೋಪಾಲಯ್ಯ – ಹಾಸನ/ಮಂಡ್ಯ
    ಶಶಿಕಲಾ ಜೊಲ್ಲೆ – ವಿಜಯನಗರ
    ಎಂಟಿಬಿ ನಾಗರಾಜು – ಚಿಕ್ಕಬಳ್ಳಾಪುರ
    ಕೆ.ಸಿ.ನಾರಾಯಣಗೌಡ – ಶಿವಮೊಗ್ಗ
    ಬಿ.ಸಿ.ನಾಗೇಶ್‌ – ಕೊಡಗು
    ವಿ.ಸುನೀಲ್‌ ಕುಮಾರ್‌ – ದಕ್ಷಿಣ ಕನ್ನಡ
    ಹಾಲಪ್ಪ ಆಚಾರ್‌ – ಧಾರವಾಡ
    ಶಂಕರ್‌ ಬಿ.ಪಾಟೀಲ್‌ ಮುನೇನಕೊಪ್ಪ – ರಾಯಚೂರು/ಬೀದರ್‌
    ಮುನಿರತ್ನ – ಕೋಲಾರ

  • ಸದ್ಯದಲ್ಲೇ ನಿಗಮ ಮಂಡಳಿ, ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಪರಮೇಶ್ವರ್

    ಸದ್ಯದಲ್ಲೇ ನಿಗಮ ಮಂಡಳಿ, ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಪರಮೇಶ್ವರ್

    ಬೆಂಗಳೂರು: ಸದ್ಯದಲ್ಲಿಯೇ ನಿಗಮ ಮಂಡಳಿ ಹಾಗೂ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜುಲೈ 18 ರಂದು ದೆಹಲಿಯಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಸದರ ಸಭೆ ನಡೆಯಲಿದೆ. ಹೀಗಾಗಿ ಆ ವೇಳೆ ಅನೇಕ ವಿಚಾರಗಳ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಜುಲೈ 20ಕ್ಕೆ ಕಾವೇರಿ ನದಿಗೆ ಬಾಗಿನ ಅರ್ಪಣೆ ಮಾಡಲಾಗುತ್ತದೆ ಎಂದರು.  ಇದನ್ನು ಓದಿ: ಆಷಾಢ ಮಾಸ ನಿಮಗೆ ಮಾತ್ರ, ನಮಗೆ ಏನು ಇಲ್ಲ: ಸಿದ್ದರಾಮಯ್ಯ ಪಟ್ಟಿಗೆ ದೇವೇಗೌಡರು ಗ್ರೀನ್ ಸಿಗ್ನಲ್ ಕೊಡ್ತಾರಾ?

    ಗಾಲ್ಫ್ ಚೆಂಡು ಮುಖ್ಯಮಂತ್ರಿಗಳ ಕೃಷ್ಣಾ ನಿವಾಸದ ಅಂಗಳಕ್ಕೆ ಬಿದ್ದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪರಿಶೀಲನೆ ಮಾಲಾಗುತ್ತದೆ. ಅಲ್ಲದೆ ಗಾಲ್ಫ್ ಕ್ಲಬ್ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿ, ಮೈದಾನದ ಸುತ್ತ ಇರುವ ರಕ್ಷಣಾ ಬಲೆ ಎತ್ತಿರಿಸುವ ಕುರಿತು, ಇಲ್ಲವೇ ಸಾಧ್ಯಗಳಿದ್ದರೆ ಗಾಲ್ಫ್ ಮೈದಾನ ಸ್ಥಳಾಂತರ ಮಾಡಬಹುದೇ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

    ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಕಚೇರಿ, ಕೃಷ್ಣಾ ಹಾಗೂ ಕಾವೇರಿ ನಿವಾಸಗಳಿಗೆ ಪ್ರತ್ಯೇಕ ರಕ್ಷಣಾ ದಳ ರಚಿಸುವ ಯೋಜನೆ ಇದೆ. ಈ ದಳದಲ್ಲಿ ನೂರು ಜನ ಸಿಬ್ಬಂದಿ ಇರಲಿದ್ದು, ಇದಕ್ಕೆ ಹೈ ಸೆಕ್ಯೂರಿಟಿ ಜೋನ್ ಎಂದು ಘೋಷಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.