Tag: ಜಿಲ್ಲಾಧಿಕಾರಿ ಜಿ. ಜಗದೀಶ್

  • ಪೊಲೀಸರು ಕೊರೊನಾ ವಾರಿಯರ್ಸ್, ಅವರನ್ನು ಅಸ್ಪೃಶ್ಯರಂತೆ ನೋಡಬೇಡಿ: ಉಡುಪಿ ಡಿಸಿ

    ಪೊಲೀಸರು ಕೊರೊನಾ ವಾರಿಯರ್ಸ್, ಅವರನ್ನು ಅಸ್ಪೃಶ್ಯರಂತೆ ನೋಡಬೇಡಿ: ಉಡುಪಿ ಡಿಸಿ

    – ಕೊರೊನಾ ಗೆದ್ದ ಉಡುಪಿಯ 9 ಪೊಲೀಸರು ಡಿಸ್ಚಾರ್ಜ್

    ಉಡುಪಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಎಲ್ಲಾ ಪೊಲೀಸರನ್ನು ಅಸ್ಪೃಶ್ಯರಂತೆ ನೋಡಬೇಡಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.

    ಉಡುಪಿ ಜಿಲ್ಲೆಯ 9 ಪೊಲೀಸರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಅವರ ಜೊತೆ ಕೆಲಸ ಮಾಡಿದ್ದ ಇತರೇ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಜಿಲ್ಲೆಯ ಜನ ಖಾಕಿ ಯುನಿಫಾರ್ಮ್ ನೋಡಿದಾಗ ದೂರ ಹೋಗುತ್ತಿದ್ದರು. ಗೆಳೆಯರು ಕೂಡಾ ಅಂತರ ಕಾಯ್ದು ಕೊಳ್ಳುತ್ತಿದ್ದರು ಎಂಬ ದೂರುಗಳು ಉಡುಪಿಯಲ್ಲಿ ಕೇಳಿಬಂದಿತ್ತು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಸಿ ಜಿ.ಜಗದೀಶ್, ಉಡುಪಿ ಜಿಲ್ಲೆಯಲ್ಲಿ 9 ಪೊಲೀಸರಿಗೆ ಕೊರೊನಾ ಬಂದಿತ್ತು. ಇಡೀ ಜಿಲ್ಲೆಗೆ ಬಹಳ ಆತಂಕವಾಗಿತ್ತು. ಎಲ್ಲಾ 9 ಜನ ಪೊಲೀಸರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ. ಪೊಲೀಸರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಕೊರೊನಾ ವಾರಿಯರ್ಸ್‍ಗಳು. ಕೊರೊನಾ ವಾರಿಯರ್ಸ್‍ಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

    ಕೊರೊನಾ ಬಂತು ಅಂತ ಸಾರ್ವಜನಿಕವಾಗಿ ಪೊಲೀಸರನ್ನು ಯಾರೂ ಸಂಶಯದಿಂದ ನೋಡಬಾರದು. ಕೊರೊನಾ ಬಂದ ಸಾರ್ವಜನಿಕರನ್ನು ಅಸ್ಪೃಶ್ಯರಂತೆ ನೋಡಬಾರದು. ಪೊಲೀಸರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡುವ ಯೋಧರು, ಪೊಲೀಸರ ಮೇಲೆ ಸಾರ್ವಜನಿಕರಿಗೆ ಹೆಚ್ಚು ಗೌರವ ಬರಬೇಕು ಎಂದು ತಿಳಿಸಿದರು.

  • ಕ್ವಾರಂಟೈನ್ ತಪ್ಪಿಸಿ ಓಡಾಡಿದರೆ ಕ್ರಿಮಿನಲ್ ಕೇಸ್: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

    ಕ್ವಾರಂಟೈನ್ ತಪ್ಪಿಸಿ ಓಡಾಡಿದರೆ ಕ್ರಿಮಿನಲ್ ಕೇಸ್: ಉಡುಪಿ ಜಿಲ್ಲಾಧಿಕಾರಿ ಎಚ್ಚರಿಕೆ

    ಉಡುಪಿ: ವಿದೇಶ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಉಡುಪಿಗೆ ಬಂದು ಕ್ವಾರಂಟೈನ್‍ನಲ್ಲಿ ಇರುವವರು ಸಾರ್ವಜನಿಕವಾಗಿ ಬಂದು ಸುತ್ತಾಡಿ, ವಸ್ತುಗಳನ್ನು ಖರೀದಿ ಮಾಡಿ ವಾಪಾಸ್ಸಾಗುತ್ತಿದ್ದಾರೆ ಎಂಬ ಆತಂಕಕಾರಿ ದೂರು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ಇಂತಹ ದೂರುಗಳು ಸಾರ್ವಜನಿಕರಿಂದ ಮೇಲಿಂದ ಬಂದಿರುವ ಕಾರಣ ಜಿಲ್ಲಾಧಿಕಾರಿ ಜಿ.ಜಗದೀಶ್ ಗರಂ ಆಗಿದ್ದಾರೆ. ಅಲ್ಲದೇ ಕ್ವಾರಂಟೈನ್ ತಪ್ಪಿಸಿ ಓಡಾಡುವವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿಗಳು, ಹೊರದೇಶ, ರಾಜ್ಯಗಳಿಂದ 6,000 ಜನ ಉಡುಪಿಗೆ ಬಂದಿದ್ದಾರೆ. ಎಲ್ಲರನ್ನೂ ಜಿಲ್ಲೆಗೆ ಸ್ವಾಗತ ಮಾಡಿ ಕ್ವಾರಂಟೈನ್ ಮಾಡಿದ್ದೇವೆ. ಕ್ವಾರಂಟೈನ್‍ನಲ್ಲಿರುವವರು ಹೊರಗಡೆ ಓಡಾಡುತ್ತಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ಬಂದಿದೆ. ಹೋಟೆಲ್, ಹಾಸ್ಟೆಲ್ ಶಾಲೆಗಳಿಂದ ಹೊರಬರುತ್ತಿದ್ದಾರೆ ಎಂಬ ಮಾಹಿತಿ ನಮಗೂ ಇದೆ. ಕ್ವಾರಂಟೈನ್ ನಲ್ಲಿರುವವರು ಓಡಾಡುವುದು ಎಪಿಡೆಮಿಕ್ ಕಾಯ್ದೆಗೆ ವಿರುದ್ಧವಾಗಿದೆ ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.

    ಹೊರಗಡೆ ಓಡಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಸೆಕ್ಷನ್ 188 ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಕೊರೊನಾ ವೈರಸ್ ನಂತಹ ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ನಿಮಗೆ ಜಿಲ್ಲಾ ಪ್ರವೇಶಕ್ಕೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮಿಂದಾಗಿ ಉಡುಪಿಯ ಜನರಿಗೆ ರೋಗ ಹರಡಬಾರದು ಎಂದು ತಿಳಿಸಿದ್ದಾರೆ.

  • 14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    ಉಡುಪಿ: ಹೊರ ದೇಶ ಮತ್ತು ಹೊರ ರಾಜ್ಯದಿಂದ ಬರುವವರು ಸರ್ಕಾರಿ ಕ್ವಾರಂಟೈನ್ ಒಪ್ಪುವುದಾದರೆ ಉಡುಪಿ ಜಿಲ್ಲೆಗೆ ನಿಮಗೆ ಸ್ವಾಗತ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

    ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊರ ದೇಶ ಮತ್ತು ಹೊರ ರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುವವರು ಸೇವಾ ಸಿಂಧು ಆ್ಯಪ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್‍ಗೆ ಈ ಪಾಸ್ ಬರುತ್ತದೆ. ತಪಾಸಣೆ ಮಾಡಿ ಉಡುಪಿ ಜಿಲ್ಲಾ ಪ್ರವೇಶ ಮಾಡಬಹುದು ಎಂದು ಡಿಸಿ ಜಗದೀಶ್ ಮಾಹಿತಿ ನೀಡಿದರು.

    ಉಡುಪಿ ಜಿಲ್ಲೆಯಲ್ಲಿ ಕಳೆದ ನಲವತ್ತು ದಿನಗಳಿಂದ ಯಾವುದೇ ಪಾಸಿಟಿವ್ ಕೇಸುಗಳು ಇಲ್ಲ. ಹಾಗಾಗಿ ಕೇಂದ್ರ ಸರ್ಕಾರ ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡಿದೆ. ಜಿಲ್ಲೆಯನ್ನು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಮುಂದುವರಿಸಲು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬರುವವರು ಸಹಕರಿಸಿ ಎಂದು ವಿನಂತಿ ಮಾಡಿದ್ದಾರೆ. ಈ ಪಾಸ್ ತೆಗೆದುಕೊಂಡು ಬಂದವರನ್ನು ಹದಿನಾಲ್ಕು ದಿನ ಕಡ್ಡಾಯವಾಗಿ ಸರ್ಕಾರ ಕ್ವಾರಂಟೈನ್ ಮಾಡುತ್ತೇವೆ. ಈಗಾಗಲೇ ಹಾಸ್ಟೆಲ್ ಗಳನ್ನು ನಿಗದಿ ಮಾಡಿದ್ದೇವೆ. ಉಪಹಾರ ಮತ್ತು ಊಟವನ್ನು ಉಚಿತವಾಗಿ ಕೊಡುತ್ತೇವೆ. ಕ್ವಾರಂಟೈನ್ ಅವಧಿ ಮುಗಿಸಿ ಅವರು ಸೇಫ್ ಆಗಿ ಮನೆಗೆ ಹೋಗಬಹುದು ಎಂದು ಡಿಸಿ ಹೇಳಿದರು.

    ಸರ್ಕಾರಿ ವ್ಯವಸ್ಥೆಯಲ್ಲಿ ಉಳಿದುಕೊಳ್ಳುವ ಇಚ್ಛೆ ಇಲ್ಲದಿದ್ದರೆ ಹೋಟೆಲ್ ಅಥವಾ ಲಾಡ್ಜಿಂಗ್ ಅರೇಂಜ್ಮೆಂಟ್ ಮಾಡುತ್ತೇವೆ. ಅಲ್ಲಿನ ಸಂಪೂರ್ಣ ವೆಚ್ಚವನ್ನು ಅವರೇ ಭರಿಸತಕ್ಕದ್ದು ಎಂದು ಅವರು ತಿಳಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರ ತಂಡ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಹೇಳಿದರು.