Tag: ಜಿಲ್ಲಾಧಿಕಾರಿ ಚಾರುಲತಾ ಸೋಮಲ್

  • ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ಪತ್ರ

    – ಪೊಲೀಸ್ ಠಾಣೆಗೆ ದೂರು ನೀಡಿದ ಜಿಲ್ಲಾಡಳಿತ

    ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ಜಿಲ್ಲೆಯ ಯುವತಿಯೋರ್ವಳಿಗೆ ಗ್ರಾಮಲೆಕ್ಕಿಗರ ಹುದ್ದೆಗೆ ನೇಮಿಸಲು ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು 1.50 ಲಕ್ಷ ರೂ. ವನ್ನು ನೀಡುವಂತೆ ಬೇಡಿಕೆ ಇಡಲಾಗಿದೆ. ಅದು ಜಿಲ್ಲಾಧಿಕಾರಿ ಗಮನಕ್ಕೆ ಬಂದ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಜಿಲ್ಲಾಧಿಕಾರಿ ಕಚೇರಿ ಹೆಸರಿನಲ್ಲಿ ಅನಾಮಿಕನೊಬ್ಬ ನಕಲಿ ಆದೇಶ ಪತ್ರವನ್ನು ಮಾಡಿ ಉದ್ಯೋಗಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿಗಳಿಗೆ ಕೆಲಸ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ್ಣದ ಕುಮಾರಿ ಯಶ್ವಿತ ಎಂಬ ಯುವತಿಗೆ ಗ್ರಾಮಲೆಕ್ಕಿಗಾರ ಪೋಸ್ಟ್ ಗೆ ಆಯ್ಕೆ ಅಗಿದೆ ಎಂದು ತಮ್ಮಗೆ ಸಿಂಧುತ್ವದ ಪ್ರಮಾಣ ಪತ್ರ ನೀಡಲು 1.50 ಲಕ್ಷ ರೂ. ನೀಡಲು ವಾಟ್ಸಪ್ ಮೂಲಕ ಕೇಳಿಕೊಂಡರು. ಇದನ್ನೂ ಓದಿ: ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ- ಓಂ ಬಿರ್ಲಾರಿಂದ ಪ್ರಶಸ್ತಿ ಪ್ರದಾನ

    ಅನುಮಾನಗೊಂಡ ಯುವತಿ ಇದು ಅಸಲಿ ಪತ್ರವೋ, ನಕಲಿ ಪತ್ರವೋ ಎಂದು ಗೊಂದಲ ಮೂಡಿದೆ. ಬಳಿಕ ಸ್ನೇಹಿತರಿಗೆ ಅವರು ಕಳಿಸಿದ ಪತ್ರದ ಫೋಟೋ ಕಳುಹಿಸಿದ್ದಾರೆ. ಈ ಫೋಟೋವನ್ನು ಗಮನಿಸಿದ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮಲೆಕ್ಕಿಗಾರ ಅಕ್ಷಾತಾ ಅವರು ಜಿಲ್ಲಾಧಿಕಾರಿ ಅವರಿಗೆ ವಾಟ್ಸ್ ಆಪ್ ಸಂದೇಶ ಕಳುಹಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮಲೆಕ್ಕಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವುದಿದ್ದಲ್ಲಿ ನಿಯಮಾನುಸಾರ ಮಾಡಲಾಗುತ್ತೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಇದು ನಕಲಿ ಆದೇಶ ಪತ್ರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕ್ಯಾತಿನಕೊಪ್ಪ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿತ್ತು

    ಈ ರೀತಿಯ ನಕಲಿ ನೇಮಕಾತಿ ಪತ್ರ ನೀಡುವ ಜಾಲಕ್ಕೆ ಸಾರ್ವಜನಿಕರು ನಿರುದ್ಯೋಗಿಗಳು ಹಣ ನೀಡಿ ಮೋಸ ಹೋಗಬಾರದು. ಒಂದು ವೇಳೆ ಹಣ ನೀಡಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲು ಮನವಿ ಮಾಡಿದ್ದಾರೆ.

    ಸದ್ಯ ಈ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ದುಬಾರೆಯಲ್ಲಿ ಇಂದಿನಿಂದ ಜಲಕ್ರೀಡೆ ಪುನರಾರಂಭ

    ದುಬಾರೆಯಲ್ಲಿ ಇಂದಿನಿಂದ ಜಲಕ್ರೀಡೆ ಪುನರಾರಂಭ

    ಮಡಿಕೇರಿ: ಕೊರೊನಾ ಕಾರಣದಿಂದ ಕಳೆದ ಎರಡು ತಿಂಗಳುಗಳಿಸಿದ ಸ್ಥಗಿತಗೊಂಡಿದ್ದ ದುಬಾರೆಯ ಕಾವೇರಿ ನದಿಯ ರಿವರ್ ರಾಫ್ಟಿಂಗ್(ಜಲಕ್ರೀಡೆ) ಇಂದಿನಿಸಿದ ಪುನರಾರಂಭಗೊಂಡಿದೆ. ಹಾಗೆಯೇ ವೈಟ್ ವಾಟರ್ ಗೇಮ್ ಕೂಡ ಆರಂಭಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

    ಕೊರೊನಾ ಪ್ರಕರಣಗಳು ಇಳಿಮುಖಗೊಂಡಿದ್ದರಿಂದ ರಿವರ್ ರಾಫ್ಟಿಂಗ್‍ಗೆ ಜಿಲ್ಲಾಧಿಕಾರಿಗಳು ಅವಕಾಶ ಕಲ್ಪಿಸಿದ್ದಾರೆ. ಆದರೆ ಕಾವೇರಿ ನದಿಯಲ್ಲಿ ನೀರಿನ ಹರಿವು ಸದ್ಯದ ಸ್ಥಿತಿಯಲ್ಲಿ ಕ್ಷೀಣವಾಗಿರುವುದರಿಂದ ಏಳು ಕಿಮೀವರೆಗಿನ ರಾಫ್ಟಿಂಗ್ ಅಸಾಧ್ಯವಾಗಿದ್ದು, ದುಬಾರೆಯ ಆವರಣದಲ್ಲಿನ ನೀರಿನಲ್ಲಿಯೇ ಸ್ಟಿಲ್ ವಾಟರ್ ಬ್ಯಾಪ್ಟಿಂಗ್ ಮಾಡಲು ಕ್ಯಾಫ್ಟಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಈಗ ತೀರ್ಮಾನಿಸಿದ್ದಾರೆ. ಇದನ್ನೂ ಓದಿ:  ಯತ್ನಾಳ್, ಬೆಲ್ಲದ್‍ಗೆ ಅಭಿನಂದನೆ ಸಲ್ಲಿಸಿದ ಜಯಮೃತ್ಯುಂಜಯ ಸ್ವಾಮೀಜಿ

    ವಾರಾಂತ್ಯದ ದಿನಗಳಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಒಂದಷ್ಟು ಪ್ರಮಾಣದಲ್ಲಿ ಧಾವಿಸುತ್ತಿರುವುದರಿಂದ ಪ್ರವಾಸೋದ್ಯಮ ಚಟುವಟಿಕೆಗಳು ಇನ್ನಷ್ಟೇ ಆರಂಭವಾಗಬೇಕಿದೆ. ದುಬಾರೆ ಸಂಪರ್ಕದ ಗುಡ್ಡೆಹೊಸೂರು ರಂಗಸಮುದ್ರ ಮಾರ್ಗದಲ್ಲಿ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವುದರಿಂದ ಕೊಡಗರಹಳ್ಳಿ, ಕಂಬಿಬಾಣೆಗಾಗಿ ಚಿಕ್ಲಿಹೊಳೆ ಜಲಾಶಯದ ಮೂಲಕ ದುಬಾರೆಗೆ ತೆರಳಬೇಕಿದೆ.

    ದುಬಾರೆಯಲ್ಲಿ 34 ಮಂದಿ ಮಾಲೀಕರಿದ್ದಾರೆ. ಈ ಕ್ರೀಡಾ ಚಟುವಟಿಕೆಯಿಂದಾಗಿ ಇಲ್ಲಿ ನೂರಕ್ಕೂ ಅಧಿಕ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಿದ್ದ ಸಂದರ್ಭದಲ್ಲಿ ಪ್ರವಾಸಿಗರ ಹಿತರಕ್ಷಣೆಯ ದಿಸೆಯಿಂದ ಕೊರೊನಾ ಸೋಂಕಿತರ ಪ್ರಮಾಣ ತಗ್ಗುವವರೆಗೂ ಜಲಕ್ರೀಡೆಯನ್ನು ಸ್ಥಗಿತಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಇದನ್ನೂ ಓದಿ:  ಅರ್ಚಕರಿಗೆ ಹಾಗೂ ದೇವಾಲಯ ನೌಕರರಿಗೆ ಆರೋಗ್ಯ ವಿಮೆ ಜಾರಿಗೊಳಿಸಲು ಶೀಘ್ರ ಕ್ರಮ: ಜೊಲ್ಲೆ

    ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಎಲ್ಲಾ ರೀತಿಯ ಜಲಕ್ರೀಡೆ ಹಾಗೂ ಸಂಬಂಧಿತ ಚಟುವಟಿಕೆಗಳನ್ನು ನದಿಗಳಲ್ಲಿ ನೈಸರ್ಗಿಕ ತೊರೆಗಳಲ್ಲಿ ಹಾಗೂ ಕೆರೆಗಳಲ್ಲಿ ನಡೆಸಲು ಅನುಮತಿಸಿದೆ. ‘ಅಮ್ಯೂಸ್‍ಮೆಂಟ್ ಪಾರ್ಕ್ ಗಳಲ್ಲಿ ಹಾಗೂ ಸ್ವಿಮ್ಮಿಂಗ್ ಪೂಲ್‍ಗಳಲ್ಲಿ ಕೇವಲ ಸ್ಪರ್ಧಾತ್ಮಕ ತರಬೇತಿ ಉದ್ದೇಶಕ್ಕೆ ಮಾತ್ರ ಅವಕಾಶ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

     

  • ಕೊಡಗಿನಲ್ಲಿ 16 ಮಂದಿ ಕೊರೊನಾಗೆ ಬಲಿ- ಕುತೂಹಲ ಹುಟ್ಟಿಸಿದ ತುರ್ತು ಸಭೆ

    ಕೊಡಗಿನಲ್ಲಿ 16 ಮಂದಿ ಕೊರೊನಾಗೆ ಬಲಿ- ಕುತೂಹಲ ಹುಟ್ಟಿಸಿದ ತುರ್ತು ಸಭೆ

    ಮಡಿಕೇರಿ: ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ.

    16 ಸೋಂಕಿತರು ಮೃತಟ್ಟಿರುವುದನ್ನು ಸ್ವತಃ ಜಿಲ್ಲಾಡಳಿತವೇ ಸ್ಪಷ್ಟಪಡಿಸುತ್ತಿದೆ. ಆದರೂ 16 ಸೋಂಕಿತರು ಮೃತಪಟ್ಟಿದ್ದಾದಾದರೂ ಯಾಕೆ ಎನ್ನುವುದನ್ನು ಮಾತ್ರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಡೀನ್ ಆಗಲಿ, ಸರ್ಜನ್ ಆಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ಪಷ್ಟಪಡಿಸುತ್ತಿಲ್ಲ.

    ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮೃತ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನಾಲ್ವರು ವೈದ್ಯರನ್ನು ತುರ್ತು ಸಭೆ ಕರೆದಿದ್ದಾರೆ. ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ತುರ್ತು ಸಭೆ ಕರೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ, ಮೃತರೆಲ್ಲರೂ ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ.

    ಕೊಡಗಿನಲ್ಲಿ ಕಳೆದ ಎರಡು ವಾರಗಳಿಂದ ಸೋಂಕಿತರು ಸಂಖ್ಯೆ ಜಾಸ್ತಿಯಾಗುತ್ತಿದೆ. ಜೊತೆಗೆ ಸೋಂಕಿನಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಿದೆಯಾದರೂ, ಐದರಿಂದ ಆರು ಸೋಂಕಿತರು ಸಾವನ್ನಪ್ಪುತ್ತಿದ್ದರು. ಈಗ ಕಳೆದ 24 ಗಂಟೆಯಲ್ಲಿ 16 ಜನರು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.