Tag: ಜಿಲೆಟಿನ್

  • ರಂಜಾನ್‌ ಈದ್‌ ಮುನ್ನ ದಿನ ಮಹಾರಾಷ್ಟ್ರದ ಮಸೀದಿಯಲ್ಲಿ ಸ್ಫೋಟ, ಇಬ್ಬರು ಅರೆಸ್ಟ್‌

    ರಂಜಾನ್‌ ಈದ್‌ ಮುನ್ನ ದಿನ ಮಹಾರಾಷ್ಟ್ರದ ಮಸೀದಿಯಲ್ಲಿ ಸ್ಫೋಟ, ಇಬ್ಬರು ಅರೆಸ್ಟ್‌

    ಮುಂಬೈ: ಈದ್-ಉಲ್-ಫಿತರ್ ಹಬ್ಬದ ಒಂದು ದಿನ ಮೊದಲು ಭಾನುವಾರ ಮಹಾರಾಷ್ಟ್ರದ (Maharastra) ಬೀಡ್ (Beed) ಜಿಲ್ಲೆಯ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ.

    ಜಿಲೆಟಿನ್ ಕಡ್ಡಿಗಳಿಂದ ಈ ಸ್ಫೋಟ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವು ಸಂಭವಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.


    ಒಬ್ಬ ವ್ಯಕ್ತಿ ಮಸೀದಿಯ ಹಿಂಭಾಗದಿಂದ ಪ್ರವೇಶಿಸಿ ಜೆಲೆಟಿನ್ ಕಡ್ಡಿಗಳನ್ನು ಇಟ್ಟಿದ್ದ. ಇದರಿಂದಾಗಿ ಸ್ಫೋಟ ಸಂಭವಿಸಿದ್ದು ಮಸೀದಿಯ (Mosque) ಒಳಭಾಗಕ್ಕೆ ಹಾನಿಯಾಗಿದೆ.

    ಜಿಯೋರೈ ತಹಸಿಲ್‌ನ ಗ್ರಾಮದಲ್ಲಿ ಬೆಳಗಿನ ಜಾವ 2:30 ರ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದರು, ಸ್ಫೋಟದಿಂದ ಒಳಭಾಗಕ್ಕೆ ಹಾನಿಯಾಗಿದೆ. ಇದನ್ನೂ ಓದಿ: ಮಾಸ್ಕೋ ನಡು ಬೀದಿಯಲ್ಲಿ ಪುಟಿನ್‌ ಕಾರು ಸ್ಫೋಟ – ಹತ್ಯೆಗೆ ಯತ್ನ?

    ಸ್ಫೋಟದ ಬಳಿಕ ಗ್ರಾಮದ ಮುಖ್ಯಸ್ಥರು ಬೆಳಿಗ್ಗೆ 4 ಗಂಟೆ ಸುಮಾರಿಗೆ ತಲವಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬೀಡ್ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

    ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಗ್ರಾಮದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದಾರೆ.

  • ಹೆಂಡತಿಯನ್ನು ತಬ್ಬಿ ಕೊಂದೇ ಬಿಟ್ಟ – ಇದು ಸೂಸೈಡ್‌ ಬಾಂಬರ್‌ ಸಿಟ್ಟಿನ ಕಥೆ

    ಹೆಂಡತಿಯನ್ನು ತಬ್ಬಿ ಕೊಂದೇ ಬಿಟ್ಟ – ಇದು ಸೂಸೈಡ್‌ ಬಾಂಬರ್‌ ಸಿಟ್ಟಿನ ಕಥೆ

    ಐಜ್ವಾಲ್: ಪತ್ನಿಯ ಮೇಲೆ ಕೋಪ ಮಾಡಿಕೊಂಡು ಬೇರೆಯಾಗಿ ವಾಸಿಸುತ್ತಿದ್ದ ಗಂಡನೊಬ್ಬ ಆಕೆಯನ್ನು ಕೊಲ್ಲಲು ತನ್ನ ಬಟ್ಟೆಯೊಳಗೆ ಜಿಲೆಟಿನ್ ಬಾಂಬ್ ಇಟ್ಟುಕೊಂಡು ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಬಾಂಬ್ ಸ್ಫೋಟವಾಗಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಮಿಜೋರಾಂನ ಲುಂಗೇಲಿಯಲ್ಲಿ ನಡೆದಿದೆ.

    61 ವರ್ಷದ ಮಹಿಳೆ ಮತ್ತು ಈಕೆಯ ಪತಿ ರೋಹ್‍ಮಿಂಗ್ಲಿಯಾನ ಮೃತರಾಗಿದ್ದಾರೆ. ನಿನ್ನೆ ಮಧ್ಯಾಹ್ನ 12:15ರ ವೇಳೆಗೆ ಬಾಂಬ್ ಸ್ಫೋಟವಾಗಿದೆ. ಆತ್ಮಾಹುತಿ ಬಾಂಬ್ ಸಿಡಿಸಿ ಹೆಂಡತಿಯನ್ನು ಕೊಲ್ಲಲು ಮುಂದಾದ ಗಂಡ, ಆ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನೆಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್‌ ಸ್ಮಾರ್ಟ್‌ ಫ್ರಿಡ್ಜ್‌

     

    ಮಹಿಳೆ ರೋಹ್‍ಮಿಂಗ್ಲಿಯಾನನ್ನು ಎರಡನೇ ಮದುವೆಯಾಗಿದ್ದಳು. ಇಬ್ಬರ ನಡುವೆ ಜಗಳ ನಡೆದಿದ್ದರಿಂದ ಪ್ರತ್ಯೇಕವಾಗಿ ಒಂದು ವರ್ಷದಿಂದ ವಾಸವಾಗಿದ್ದರು. ಆದರೆ ಅವರು ನಿನ್ನೆ ಒಂದೇ ಕಡೆ ಸೇರಿದ್ದರು. ತರಕಾರಿ ಮಾರುತ್ತಿದ್ದ ಆ ಮಹಿಳೆಯನ್ನು ಹುಡುಕಿ ಬಂದ ಆಕೆಯ ಪತಿ, ಆಕೆಯ ಜೊತೆಯಲ್ಲಿದ್ದ ಮಗಳನ್ನು ದೂರ ಕಳಿಸಿದ್ದ. ಮಗಳು ದೂರ ಹೋದ ನಂತರ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಇದನ್ನೂ ಓದಿ:RSS ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ: ಜಗ್ಗೇಶ್

    ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಪ್ರಕಾರ, ತರಕಾರಿ ಮಾರುತ್ತಾ ಗಾಡಿಯ ಬಳಿ ಕುಳಿತಿದ್ದ ಹೆಂಡತಿಯ ಪಕ್ಕದಲ್ಲೇ ಕುಳಿತ ಆಕೆಯ ಗಂಡ ತನಗಾಗಿ ಒಂದು ಸಿಗರೇಟ್ ತಂದುಕೊಡುವಂತೆ ಕೇಳಿದ್ದ. ಆಕೆ ಸಿಗರೇಟ್ ತಂದು ಕೊಟ್ಟಾಗ ಅದನ್ನು ಬಾಯಿಗಿಟ್ಟುಕೊಂಡ ಆತ ಎದ್ದು ನಿಂತವನೇ ತಲೆ ಸುತ್ತುಬಂದಂತೆ ನಟಿಸಿ ಕೆಳಗೆ ಬೀಳುವವನಿದ್ದ. ಆಗ ಎದ್ದು ನಿಂತ ಆತನ ಹೆಂಡತಿಯನ್ನು ಜೋರಾಗಿ ತಬ್ಬಿಕೊಂಡ ಕೂಡಲೇ ಬಾಂಬ್ ಸ್ಫೋಟವಾಗಿತ್ತು. ಸುತ್ತಮುತ್ತಲಿದ್ದವರು ನೋಡನೋಡುತ್ತಿದ್ದಂತೆಯೇ ಅವರಿಬ್ಬರ ದೇಹ ಛಿದ್ರವಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಪಿಡಿಒನಿಂದ ರಾಷ್ಟ್ರಪತಿವರೆಗೆ RSS ಕಾರ್ಯಕರ್ತರೇ ಇರೋದು- ಹೆಚ್‍ಡಿಕೆಗೆ ಸುನೀ

    ಈ ಘಟನೆ ಬಳಿಕ ಅವರ ಮಗಳು ನಾಪತ್ತೆಯಾಗಿದ್ದಾಳೆ. ಬಾಂಬ್ ತಯಾರಿಸಲು ಬಳಸುವ ಜಿಲೆಟಿನ್ ಅನ್ನು ಬಟ್ಟೆಯೊಳಗೆ ಇಟ್ಟುಕೊಂಡಿದ್ದ ಗಂಡ ತಾನೂ ಸತ್ತು ಹೆಂಡತಿಯನ್ನೂ ಕೊಂದಿದ್ದಾನೆ.

  • ಕಾರ್ ಸ್ಫೋಟ ಪ್ರಕರಣ, ಕ್ವಾರಿಯಲ್ಲಿ ಜಿಲೆಟಿನ್ ಬಳಸ್ತಿರಲಿಲ್ಲ: ಎಸ್‍ಪಿ ಗಿರೀಶ್

    ಕಾರ್ ಸ್ಫೋಟ ಪ್ರಕರಣ, ಕ್ವಾರಿಯಲ್ಲಿ ಜಿಲೆಟಿನ್ ಬಳಸ್ತಿರಲಿಲ್ಲ: ಎಸ್‍ಪಿ ಗಿರೀಶ್

    ಬೆಂಗಳೂರು: ಶಿವಮೊಗ್ಗದ ಹುಣಸೋಡು ಮತ್ತು ಚಿಕ್ಕಬಳ್ಳಾಪುರದ ಗುಡಿಬಂಡೆ ಸ್ಫೋಟ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸ್ಫೋಟ ಸಂಭವಿಸಿದೆ. ಕನಕಪುರ ತಾಲೂಕಿನ ಸಂಗಮ ರಸ್ತೆಯ ಮರಳೇಗವಿ ಮಠದ ಕಲ್ಲು ಕ್ವಾರಿ ಬಳಿ ಕಾರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಛಿದ್ರ ಛಿದ್ರವಾಗಿ ಸಾವನ್ನಪ್ಪಿದಾನೆ. ಆದರೆ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಅಲ್ಲಿನ ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.

    ಕನಕಪುರದ ಮಹೇಶ್ ಎಂಬವರು ಸಾವನ್ನಪ್ಪಿರುವ ದುರ್ದೈವಿ. ಮರಳೇಗವಿ ಮಠದ ಕ್ವಾರಿಯಲ್ಲಿ ಮಹೇಶ್ ಅವರು ಕ್ವಾರಿಗೆ ಕಬ್ಬಿಣದ, ಸಲಕರಣೆಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿದ್ದರು. ಯಾವ ಕಾರಣಕ್ಕೆ ಕಾರು ಸ್ಫೋಟವಾಗಿದೆ ಅನ್ನೋದು ಗೊತ್ತಾಗಿಲ್ಲ. ಆದರೆ ಮಠದ ಕ್ವಾರಿಯಲ್ಲಿ ಜಿಲೆಟಿನ್ ಬಳಸುತ್ತಿರಲಿಲ್ಲ ಎಂದು ಎಸ್‍ಪಿ ಗಿರೀಶ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಿಂದ ಭಾರತೀಯರ ಕರೆತರಲು ಕಸರತ್ತು

    ಕ್ವಾರಿಯಲ್ಲಿ ಕಲ್ಲು ಕಟ್ ಮಾಡುವ ಕೆಲಸ ಮಾಡಲಾಗುತ್ತಿದೆ. ಕಲ್ಲು ಕಟ್ ಮಾಡಲು ಜಿಲೆಟಿನ್ ಬೇಕಾಗಿಲ್ಲ. ಕ್ವಾರಿಯಿಂದ ಎರಡು ಕಿಮೀ ದೂರದಲ್ಲಿ ಕಾರು ಸ್ಫೋಟವಾಗಿದೆ. ಕ್ವಾರಿಯಿಂದ ವಾಪಸ್ ಎರಡು ಕಿಮೀ ದೂರದವರೆಗೆ ಮಹೇಶ್ ಕಾರನ್ನು ಓಡಿಸಿಕೊಂಡು ಹೋಗಿದ್ದಾರೆ, ಆ ಬಳಿಕ ಕಾರು ಸ್ಫೋಟವಾಗಿದ್ದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಫೋಟದ ರಭಸಕ್ಕೆ ಮಹೇಶ್ ಅವರ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದು, ಘಟನಾ ಸ್ಥಳಕ್ಕೆ ಬಾಂಬ್ ಸ್ಕ್ಯಾಡ್ ಕರೆಸಿ ಪರಿಶೀಲನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಅವರ ತನಿಖೆಯ ಬಳಿಕ ಸ್ಫೋಟದ ಕಾರಣ ತಿಳಿಯಲಿದೆ.ಈ ನಡುವೆ ಕಾರ್ ನಲ್ಲಿ ಜಿಲೆಟಿನ್ ಇತ್ತಾ, ಇಲ್ವಾ ಅನ್ನೋದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ: ಅರವಿಂದ್ ಕೇಜ್ರಿವಾಲ್

  • ಚಾಕೇನಹಳ್ಳಿ ಸ್ಫೋಟ ಪ್ರಕರಣ- ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಿದ ಸಚಿವ ಗೋಪಾಲಯ್ಯ

    ಚಾಕೇನಹಳ್ಳಿ ಸ್ಫೋಟ ಪ್ರಕರಣ- ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಿದ ಸಚಿವ ಗೋಪಾಲಯ್ಯ

    ಹಾಸನ: ಜಿಲೆಟಿನ್ ರೀತಿಯ ವಸ್ತು ಸಿಡಿದು ಮೃತಪಟ್ಟ ಮೂವರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪರಿಹಾರದ ಚೆಕ್ ವಿತರಿಸಿದರು.

    ಜಿಲೆಟಿನ್ ರೀತಿಯ ಸ್ಫೋಟಕ ಸಿಡಿದು ಮೂವರು ಮೃತಪಟ್ಟಿದ್ದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ನಡೆದಿತ್ತು. ಈ ವೇಳೆ ಮೂವರು ಸಾವನ್ನಪ್ಪಿದ್ದರು. ಇವರ ಕುಟುಂಬಗಳಿಗೆ ಇದೀಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳ ಚೆಕ್‍ನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಿತರಿಸಿದರು. ಇದನ್ನೂ ಓದಿ: ಚಾಕೇನಹಳ್ಳಿ ಸ್ಫೋಟ ಪ್ರಕರಣ- ಸಚಿವ, ಸಂಸದ, ಶಾಸಕರು ಸ್ಥಳಕ್ಕೆ ಭೇಟಿ, ಪರಿಶೀಲನೆ

    ನಂತರ ಮಾತನಾಡಿದ ಅವರು, ಮೃತರ ಕುಟುಂಬದ ನಿರ್ವಹಣೆಗಾಗಿ 5 ಲಕ್ಷ ರೂ.ಗಳ ಚಕ್‍ನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿತರಿಸಲಾಗಿದೆ. ಇನ್ನೂ 7.5 ಲಕ್ಷ ರೂ.ಗಳನ್ನು ಗಣಿ ಮಾಲೀಕರಿಂದ ನೀಡಲಾಗುತ್ತದೆ ಎಂದು ತಿಳಿದಿದರು. ಈ ವೇಳೆ ಶಾಸಕ ಬಾಲಕೃಷ್ಣ, ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜ್, ಸಿಇಒ ಪರಮೇಶ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಉಪಸ್ಥಿತರಿದ್ದರು.

  • ಚಾಕೇನಹಳ್ಳಿ ಸ್ಫೋಟ ಪ್ರಕರಣ- ಸಚಿವ, ಸಂಸದ, ಶಾಸಕರು ಸ್ಥಳಕ್ಕೆ ಭೇಟಿ, ಪರಿಶೀಲನೆ

    ಚಾಕೇನಹಳ್ಳಿ ಸ್ಫೋಟ ಪ್ರಕರಣ- ಸಚಿವ, ಸಂಸದ, ಶಾಸಕರು ಸ್ಥಳಕ್ಕೆ ಭೇಟಿ, ಪರಿಶೀಲನೆ

    – ಘಟನೆಯಲ್ಲಿ ಓರ್ವ ಸಾವು, ಇಬ್ಬರಿಗೆ ತೀವ್ರ ಗಾಯ

    ಹಾಸನ: ಹೊಳೆನರಸೀಪುರದ ಚಾಕೇನಹಳ್ಳಿಯಲ್ಲಿ ಸ್ಪೋಟಕ ದುರ್ಘಟನೆ ಪ್ರಕರಣ ನಡೆದ ಸ್ಥಳಕ್ಕೆ ಇಂದು ಉಸ್ತುವಾರಿ ಸಚಿವ ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಸಚಿವರು ಹಾಗೂ ಶಾಸಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಬರವಸೆ ನೀಡಿದರು.

    ಚಾಕೇನಹಳ್ಳಿಯಲ್ಲಿ ಭಾನುವಾರ ಸ್ಫೋಟಕ ತುಂಬಿದ ಗೋಡೌನ್ ಬಳಿ ಸ್ಫೋಟ ಸಂಭವಿಸಿತ್ತು. ಪ್ರಕರಣದಲ್ಲಿ ಸಂಪತ್ ಸಾವನ್ನಪ್ಪಿ, ನಟರಾಜ್ ಹಾಗೂ ರವಿ ಗಂಭೀರ ಸ್ಥಿತಿ ತಲುಪಿದ್ದಾರೆ. ಇಂದು ಈ ಘಟನಾ ಸ್ಥಳಕ್ಕೆ ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಪೋಟಕ ಗೋಡೌನ್ ದುರ್ಗಾಂಬಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.

    ಪರಿಶೀಲನೆ ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ, ಸ್ಫೋಟಕದ ಗೋಡೌನ್ ನ್ನು ಬೇರೆಡೆ ಸ್ಥಳಾಂತರಿಸಬೇಕು. ಹೊಲ, ಹಳ್ಳಿ ಸಮೀಪ ಇರುವ ಕಾರಣ ಲೈಸೆನ್ಸ್ ಇದ್ದರೂ ಇಂತಹ ಸ್ಫೋಟಕ ಗೋಡೌನ್ ಇಲ್ಲಿ ಇರುವುದು ಸೂಕ್ತ ಅಲ್ಲ. ಘಟನೆ ಹೇಗೆ ನಡೆದಿದೆ ಎನ್ನುವ ಬಗ್ಗೆ ಈಗಲೇ ಮಾತನಾಡುವುದು ಸೂಕ್ತ ಅಲ್ಲ. ಏನೇ ಆದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸ್ಫೋಟಕ ಗೋಡೌನ್ ಮಾಲೀಕ ನಾಗೇಶ್ ನಾಪತ್ತೆಯಾಗಿದ್ದಾನೆ ಎಂದು ಸಂಸದ ಪ್ರಜ್ವಲ್ ಹೇಳಿದರು.

    ಇಲ್ಲಿ ಸ್ಫೋಟಕ ಗೋಡೌನ್ ಇರೋದೆ ನನಗೆ ತಿಳಿದಿರಲಿಲ್ಲ. ಕೆಲವಡೆ 30 ಅಡಿ ವರೆಗೆ ರಿಗ್ ತೋಡಿ ಸ್ಫೋಟಕ ಇಡುತ್ತಾರೆ. ಈ ಹಿಂದೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಎಲ್ಲ ಕಲ್ಲು ಕ್ವಾರಿಗಳ ಡ್ರೋನ್ ಸರ್ವೇ ನಡೆಯಬೇಂದು ಪತ್ರ ಕೂಡ ಬರೆದಿದ್ದೇನೆ. ನನ್ನ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

    ಪ್ರಕರಣದ ನಂತರ ಜಿಲೆಟಿನ್ ಸಂಗ್ರಹ ಗೋಡೌನ್ ಮಾಲೀಕ ನಾಗೇಶ್ ನಾಪತ್ತೆಯಾಗಿದ್ದಾನೆ. ತಮಿಳುನಾಡಿನಿಂದ ಇಲ್ಲಿಗೆ ಸ್ಪೋಟಕ ತರಲಾಗಿದ್ದು, ರಸೀದಿಗಳು ಇವೆ ಎಂದು ಸಚಿವರು ಅಧಿಕೃತ ಹೇಳಿಕೆ ನೀಡಿದ್ದಾರೆ. ಆದರೆ ಡಿಟೋನೇಟರ್ ಸ್ಫೋಟದಿಂದಲೇ ಈಘಟನೆ ನಡೆದಿದ್ದು, ಈ ಸ್ಪೋಟಕಗಳನ್ನು ಸಾಗಿಸುವ ಕ್ರಮದಲ್ಲಿ ತಪ್ಪಾಗಿರೋದು ಕಂಡುಬಂದಿದೆ. ಯಾರೇ ಆದರೂ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

    ಈ ಸ್ಫೋಟಕ ಗೋಡೌನ್ ಗೆ ಲೈಸೆನ್ಸ್ ಇದ್ದರೂ ಜಿಲೆಟಿನ್ ಸಾಗಿಸುವಾಗ ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮ ವಹಿಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆಯಲ್ಲಿ ತೀವ್ರಗಾಯಗೊಂಡ ರವಿ ಹಾಗೂ ನಟರಾಜ್ ಕೂಡ ಜೀವನ್ಮರಣ ಹೋರಾಟದಲ್ಲಿದ್ದಾರೆ.

  • ಜಿಲೆಟಿನ್ ರೀತಿಯ ವಸ್ತು ಸ್ಫೋಟ- ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಜಿಲೆಟಿನ್ ರೀತಿಯ ವಸ್ತು ಸ್ಫೋಟ- ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    – ಸ್ಫೋಟದ ತೀವ್ರತೆಗೆ 300 ಮೀ. ಹಾರಿದ ವ್ಯಕ್ತಿಯ ದೇಹ
    – ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ

    ಹಾಸನ: ಸ್ಫೋಟಕ ವಸ್ತುಗಳಿಂದಾಗಿ ರಾಜ್ಯದಲ್ಲಿ ಎಷ್ಟೆಲ್ಲ ಅನಾಹುತ ಸಂಭವಿಸಿದರೂ ಜನ, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಯಲ್ಲಿ ಜಿಲೆಟಿನ್ ರೀತಿಯ ಸ್ಫೋಟಕ ಸಿಡಿದು ಓರ್ವ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

    ಸ್ಫೋಟಕ ವಸ್ತುಗಳನ್ನು ಅನ್‍ಲೋಡ್ ಮಾಡುವಾಗ ಘಟನೆ ಸಂಭವಿಸಿದೆ. ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಚಾಕೇನಹಳ್ಳಿ ಗ್ರಾಮದ ಸಮೀಪವೇ ಸ್ಫೋಟಕಗಳ ಗೋಡೋನ್ ಇದ್ದು, ಸ್ಫೋಟದ ತೀವ್ರತೆಗೆ ವ್ಯಕ್ತಿಯ ದೇಹ ಮುನ್ನೂರು ಮೀಟರ್ ಹಾರಿ ಹೋಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಆಗಮಿಸಿದ್ದು, ಗೋಡೋನ್‍ನಲ್ಲಿ ಜಿಲೆಟಿನ್ ಕಡ್ಡಿ ಸೇರಿದಂತೆ ಇತರೆ ಸ್ಫೋಟಕ ವಸ್ತುಗಳು ತುಂಬಿವೆ ಎಂಬ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಎಎಸ್‍ಪಿ ನಂದಿನಿ ಭೇಟಿ ನೀಡಿದ್ದಾರೆ.

    ಚಾಕೇನಹಳ್ಳಿಕಟ್ಟೆ ಸುತ್ತ ಅಕ್ರಮವಾಗಿ ಸ್ಫೋಟಕ ಸಂಗ್ರಹಿಸಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಆದರೂ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ.

    ಮೃತ ವ್ಯಕ್ತಿಯನ್ನು ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಹೊಳೆನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

  • ಸ್ಟೋನ್ ಕ್ರಶರ್ ಮೇಲೆ ಪೊಲೀಸ್ ದಾಳಿ – 200 ಕಿಲೋ ಜಿಲೆಟಿನ್ ವಶಕ್ಕೆ

    ಸ್ಟೋನ್ ಕ್ರಶರ್ ಮೇಲೆ ಪೊಲೀಸ್ ದಾಳಿ – 200 ಕಿಲೋ ಜಿಲೆಟಿನ್ ವಶಕ್ಕೆ

    ಧಾರವಾಡ: ಸ್ಟೋನ್ ಕ್ರಶರ್ ಮೇಲೆ ದಾಳಿ ಮಾಡಿದ ಧಾರವಾಡ ಜಿಲ್ಲಾ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 200 ಕಿಲೋ ಜಿಲೆಟಿನ್ ಕಡ್ಡಿ ವಶಕ್ಕೆ ಪಡೆದು ಕ್ರಷರ್ ಮಾಲಿಕರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.

    ಜಿಲ್ಲೆಯ ಅಮ್ಮಿನಬಾವಿ ಗ್ರಾಮದ ದಯಾನಂದ ಮಾಸೂರ ಎಂಬುವವರಿಗೆ ಸೇರಿದ ಕ್ರಶರ್ ಮೇಲೆ ದಾಳಿ ಮಾಡಿದ್ದ ಪೊಲೀಸರು, ಸ್ಥಳದಿಂದ 1650 ಜಿಲೆಟಿನ್ ಕಡ್ಡಿಗಳು ಹಾಗೂ 700 ಎಲೆಕ್ಟ್ರಾನಿಕ್ ಡಿಟೋನೇಟರ್‍ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಕ್ರಶರ್ ಇರುವ ಸ್ಥಳದಲ್ಲಿ ಈ ಜಿಲೆಟಿನ್ ಕಡ್ಡಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಮಾಲೀಕ ಸೇರಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್, ಲೈಸನ್ಸ್ ಇದ್ದವರು ಮಾತ್ರ ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹ ಮಾಡಿ ಬ್ಲಾಸ್ಟ್ ಮಾಡಬಹುದು. ಆದರೆ ಇಲ್ಲಿ ಲೈಸನ್ಸ್ ಇಲ್ಲದೆ ಅಕ್ರಮವಾಗಿ ಈ ರೀತಿ ಇಟ್ಟಿರುವುದರಿಂದಾಗಿ ಕ್ರಶರ್ ಮಾಲಿಕ, ಜಿಲೆಟಿನ್ ಪೂರೈಕೆ ಮಾಡಿದವರು ಹಾಗೂ ಕ್ರಶರ್‍ ನಲ್ಲಿ ಕೆಲಸ ಮಾಡುವವರ ಮೇಲೆ ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದರು.

  • ಚಿಕ್ಕಬಳ್ಳಾಪುರದಲ್ಲಿ ಮತ್ತೆ ರಾಶಿ ರಾಶಿ ಜಿಲೆಟಿನ್ ಕಡ್ಡಿ, ಸ್ಫೋಟಕ ಪತ್ತೆ

    ಚಿಕ್ಕಬಳ್ಳಾಪುರದಲ್ಲಿ ಮತ್ತೆ ರಾಶಿ ರಾಶಿ ಜಿಲೆಟಿನ್ ಕಡ್ಡಿ, ಸ್ಫೋಟಕ ಪತ್ತೆ

    ಚಿಕ್ಕಬಳ್ಳಾಪುರ: ಹಿರೇನಾಗವಲ್ಲಿ ಗಣಿ ಪ್ರದೇಶದಲ್ಲಿ ಕಳೆದ ರಾತ್ರಿ ರಾಶಿ ರಾಶಿ ಸ್ಫೋಟಕಗಳ ಪತ್ತೆಯಾಗಿವೆ. ಮುತ್ತಗದಹಳ್ಳಿ ಗ್ರಾಮದ ಬಳಿಯ ಟಿ.ಎಸ್.ಕೆ ಕ್ರಷರ್ ಪಕ್ಕದ ಕಾಲುವೆಯಲ್ಲಿ ರಾಶಿ ರಾಶಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.

    ಮಾಹಿತಿ ಅರಿತು ಮಧ್ಯರಾತ್ರಿ ಬಾಂಬ್ ನಿಷ್ಕ್ರಿಯ ದಳದ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಜಿಲೆಟಿನ್ ಕಡ್ಡಿಗಳನ್ನ ನಿಷ್ಕ್ರಿಯ ಮಾಡುವಲ್ಲಿ ಸಫಲರಾಗಿದ್ದಾರೆ. ಈ ಬಗ್ಗೆ ಸ್ಪಷ್ಟಪಡಿಸಿರುವ ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್, ಕಾಲುವೆ ಬಳಿ ಅಪರಿಚಿತರು ಜಿಲೆಟಿನ್ ಕಡ್ಡಿ ಹಾಗೂ ಸ್ಫೋಟಕಗಳನ್ನ ಬಿಸಾಡಿದ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ತಿಳಿದು ಎಲ್ಲವನ್ನ ವಿಲೇವಾರಿ ಮಾಡಲಾಗಿದೆ. ಅಕ್ರಮವಾಗಿ ದಾಸ್ತಾನು ಮಾಡಿರುವವರು ಈಗ ಹಿರೇನಾಗವಲ್ಲಿ ಘಟನೆ ನಂತರ ಬಿಸಾಡಿ ಹೋಗಿರಬಹುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಹಿರೇನಾಗವಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಷರ್ ಮಾಲೀಕ, ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಫೋಟದ ಬಳಿಕ ನಾಗರಾಜು ರೆಡ್ಡಿ ತಲೆಮರೆಸಿಕೊಂಡಿದ್ದನು. ನಾಗರಾಜು ರೆಡ್ಡಿಗೆ ಸ್ಫೋಟಕಗಳನ್ನ ಪೂರೈಸುತ್ತಿದ್ದ ಗಣೇಶ್ ಎಂಬಾತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬುಧವಾರ ಎ2 ಆರೋಪಿ, ಕ್ರಷರ್ ಮಾಲಿಕ ರಾಘವೇಂದ್ರ ರೆಡ್ಡಿಯನ್ನು ಬಂಧಿಸಲಾಗಿತ್ತು. ದುರಂತ ಸಂಬಂಧ ಕರ್ತವ್ಯಲೋಪದ ಆರೋಪದ ಮೇಲೆ ಗುಡಿಬಂಡೆ ಎಸ್‍ಐ ಗೋಪಾಲ್ ರೆಡ್ಡಿ, ಇನ್‍ಸ್ಪೆಕ್ಟರ್ ಮಂಜುನಾಥ್‍ರನ್ನು ಅಮಾನತು ಮಾಡಲಾಗಿದೆ.

  • ಅಕ್ರಮವಾಗಿ ಸಂಗ್ರಹಿಸಿದ್ದ 1,200 ಜಿಲೆಟಿನ್ ಟ್ಯೂಬ್ ವಶ

    ಅಕ್ರಮವಾಗಿ ಸಂಗ್ರಹಿಸಿದ್ದ 1,200 ಜಿಲೆಟಿನ್ ಟ್ಯೂಬ್ ವಶ

    ಹಾಸನ: ಶಿವಮೊಗ್ಗ ಕ್ವಾರೆಯೊಂದರಲ್ಲಿ ನಡೆದ ಸ್ಫೋಟದ ನಂತರ ಹಾಸನ ಜಿಲ್ಲೆಯ ಪೊಲೀಸರು ಎಚ್ಚೆತ್ತಿದ್ದಾರೆ. ಐ.ಎಸ್.ಡಿ. ಹಾಗೂ ಗೊರೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಜಿಲೆಟಿನ್ ಹಾಗೂ ಇತರೆ ವಸ್ತಗಳನ್ನು ವಶಪಡಿಸಿಕೊಂಡಿದ್ದಾರೆ.

    ಹಾಸನ ತಾಲೂಕಿನ ಕಟ್ಟಾಯ ಹೋಬಳಿ ಇಂದ್ರಾಪುರ ಗ್ರಾಮದ ಬಳಿಯಿರುವ ಕ್ವಾರೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 1,200 ಜಿಲೆಟಿನ್ ಟ್ಯೂಬ್, 2 ಡೀಟೇನೆಟರ್, 10 ಕೆಜಿ ಅಮೋನಿಯಂ ನೈಟ್ರೆಟ್, ಕನೆಕ್ಟಿಂಗ್ ವೈರ್ ಗಳು ವಶಪಡಿಸಿಕೊಳ್ಳಲಾಗಿದೆ. ಹನುಮಂತಪುರದ ಮಂಜೇಗೌಡ ಎಂಬವರಿಗೆ ಸೇರಿದ ಕ್ವಾರೆ ಇದಾಗಿದ್ದು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಐ.ಎಸ್.ಡಿ. ಮೈಸೂರು ವಿಭಾಗದ ಡಿ.ಎಸ್.ಪಿ. ಪ್ರಭಾಕರ್ ರಾವ್ ಸಿಂದೆ, ಹಾಸನ-ಕೊಡಗು ಪಿಐ ಗೋಪಾಲಕೃಷ್ಣ, ಹಾಸನ ವೃತ್ತ ನಿರೀಕ್ಷಕ ಸುರೇಶ್, ಗೊರೂರು ಠಾಣೆ ಪಿ.ಎಸ್.ಐ. ಸಾಗರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

  • ಜಿಲೆಟಿನ್‌, ಡೈನಾಮೈಟ್‌ ಅಲ್ಲ -ಹುಣಸೋಡಿನಲ್ಲಿ ಜೆಲ್‌ ಸ್ಫೋಟಕ ಸ್ಫೋಟ

    ಜಿಲೆಟಿನ್‌, ಡೈನಾಮೈಟ್‌ ಅಲ್ಲ -ಹುಣಸೋಡಿನಲ್ಲಿ ಜೆಲ್‌ ಸ್ಫೋಟಕ ಸ್ಫೋಟ

    – ಪಬ್ಲಿಕ್‌ ಟಿವಿಗೆ ಶಿವಮೊಗ್ಗ ಡಿಸಿ ಹೇಳಿಕೆ
    – ವಿದೇಶದಲ್ಲಿ ಬಳಸುವ ಸ್ಫೋಟಕವನ್ನು ತಂದವರು ಯಾರು?

    ಶಿವಮೊಗ್ಗ: ಹುಣಸೋಡಿನಲ್ಲಿ ಜಿಲೆಟಿನ್‌ ಮತ್ತು ಡೈನಾಮೈಟ್‌ ಸ್ಫೋಟಗೊಂಡಿಲ್ಲ. ಬದಲಾಗಿ ಜೆಲ್‌ ರೂಪದ ವಸ್ತು ಸ್ಫೋಟಗೊಂಡ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಪಬ್ಲಿಕ್‌ ಟಿವಿಗೆ ಜಿಲ್ಲಾಧಿಕಾರಿ ಡಿಸಿ ಶಿವಕುಮಾರ್‌ ಪ್ರತಿಕ್ರಿಯಿಸಿ, ಬೆಂಗಳೂರು ಮತ್ತು ಮಂಗಳೂರಿನಿಂದ ಆಗಮಿಸಿದ ಬಾಂಬ್‌ ನಿಷ್ಕ್ರಿಯ ದಳದ ಸದಸ್ಯರು ಬಂದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಜೆಲ್‌ ರೂಪದ ವಸ್ತು ಸ್ಫೋಟಗೊಂಡ ವಿಚಾರ ತಿಳಿದು ಬಂದಿದೆ. ಇದು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಮಾಹಿತಿ ಎಂದು ತಿಳಿಸಿದರು.

    ಜೆಲ್‌ ರೀತಿಯ ಸ್ಫೋಟಕವನ್ನು ವಿದೇಶದಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಈ ಕ್ವಾರಿಗೆ ಸ್ಫೋಟಕ ಬಂದಿದ್ದು ಹೇಗೆ? ಎಲ್ಲಿಂದ ತಂದಿದ್ದಾರೆ? ಇಷ್ಟು ದೊಡ್ಡ ಪ್ರಮಾಣದಲ್ಲಿ ತಂದವರು ಯಾರು? ಎಂಬುದರ ಬಗ್ಗೆ ತನಿಖೆ ನಡೆದಾಗ ಸ್ಪಷ್ಟವಾದ ವಿಚಾರ ಲಭ್ಯವಾಗಲಿದೆ ಎಂದು ತಿಳಿಸಿದರು.

    ಸದ್ಯ ಸ್ಫೋಟದ ಸ್ಥಳದಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಮುಖ್ಯಮಂತ್ರಿಗಳಿಗೆ ಎಲ್ಲ ಮಾಹಿತಿಗಳನ್ನು ನೀಡುತ್ತಿದ್ದೇವೆ. ಅಕ್ರಮ ಕಲ್ಲು ಕ್ವಾರಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.

    ಗುರುವಾರ ರಾತ್ರಿ 2 ಶವಗಳು ಪತ್ತೆಯಾಗಿತ್ತು. ಇಂದು ಮೂರು ಶವ ಪತ್ತೆಯಾಗಿದೆ. ದುರಂತದಲ್ಲಿ ಒಟ್ಟು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.