Tag: ಜಿಯೋ

  • ಭಾರತದ ಟೆಲಿಕಾಂ ಕ್ಷೇತ್ರವನ್ನು ಜಿಯೋ ಶೇಕ್ ಮಾಡಿದ್ದು ಹೇಗೆ?

    ಭಾರತದ ಟೆಲಿಕಾಂ ಕ್ಷೇತ್ರವನ್ನು ಜಿಯೋ ಶೇಕ್ ಮಾಡಿದ್ದು ಹೇಗೆ?

    ಮುಂಬೈ: ದೇಶದ ನಂಬರ್ ಒನ್ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಒಡೆತನದ ಜಿಯೋ ನೆಟ್‍ವರ್ಕ್ ಭಾರತದ ಟೆಲಿಕಾಂ ಮಾರುಕಟ್ಟೆಯನ್ನೇ ಬುಡಮೇಲು ಮಾಡಿದೆ. ಒಂದು ಜಿಬಿ ಡೇಟಾ ಪ್ಯಾಕ್ ಹಾಕಲು ಹಿಂದೆ ಮುಂದೆ ನೋಡುತ್ತಿದ್ದ ಜನ ಈಗ ಜಿಯೋದಿಂದ ಪ್ರತಿದಿನ ಒಂದು ಜಿಬಿ ಡೇಟಾದ ಜೊತೆಗೆ ಉಚಿತವಾಗಿ ಕರೆಯನ್ನು ಮಾಡುವಂತೆ ಮಾಡಿದೆ.

    2016ರಲ್ಲಿ ಸ್ಥಾಪನೆಯಾದ ಜಿಯೋ ದೇಶದ ಮೂರನೇ ಅತಿದೊಡ್ಡ ನೆಟ್‍ವರ್ಕ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಮೊದಲನೇ ಸ್ಥಾನದಲ್ಲಿ ಭಾರತಿ ಏರ್‍ಟೆಲ್ ಇದ್ದರೆ,  ಎರಡನೇ ಸ್ಥಾನದಲ್ಲಿ ಐಡಿಯಾ ಸೆಲ್ಯುಲರ್ ಹಾಗೂ ವೊಡಾಫೋನ್ ಇದೆ.

    1 ಜಿಬಿ ಡೇಟಾ ದರ ಎಷ್ಟಿತ್ತು?
    2013ರಲ್ಲಿ ಪ್ರತಿ ಜಿಬಿ ದರ 350 ರೂಪಾಯಿಗಳಾಗಿದ್ದರೆ, 2014ರಲ್ಲಿ 250 ರೂ. ಆಗಿ, ಕ್ರಮೇಣ 2015 ರಲ್ಲಿ 225 ರೂ. ಆಗಿತ್ತು. ಆದರೆ 2016ರಲ್ಲಿ ಜಿಯೋ ಮಾರುಕಟ್ಟೆಗೆ ಪ್ರವೇಶಿಸಿದ ಸಮಯದಲ್ಲಿ ಪ್ರತಿ ಜಿಬಿಗೆ 150 ರೂ. ನಿಗದಿಪಡಿಸಿತ್ತು. ಆರಂಭದ ಮೂರು ತಿಂಗಳು ಜಿಯೋ ಉಚಿತ ಡೇಟಾ ನೀಡಿತ್ತು. 2018 ರಲ್ಲಿ 1 ಜಿಬಿ ಡೇಟಾಗೆ 1.50 ರೂ. ಇದೆ. ಪ್ರಸ್ತುತ ಜಿಯೋದಲ್ಲಿ 449 ರೂ. ರಿಚಾರ್ಜ್ ಮಾಡಿದರೆ ದಿನಕ್ಕೆ ಗರಿಷ್ಟ 1.5 ಜಿಬಿ ಡೇಟಾದಂತೆ 91 ದಿನ ವ್ಯಾಲಿಡಿಟಿ ಇರುವ ಪ್ಯಾಕ್ ಸಿಗುತ್ತಿದೆ.

    2016ಕ್ಕೂ ಮೊದಲು ಯಾವೆಲ್ಲ ಕಂಪನಿಗಳು ಇತ್ತು?
    ಭಾರತಿ ಏರ್‍ಟೆಲ್ 24.8% ರಷ್ಟು ಗ್ರಾಹಕರನ್ನು ಹೊಂದಿದ್ದರೆ, ವೋಡಫೋನ್ 19.1%ರಷ್ಟು, ಐಡಿಯಾ 17.0%, ಬಿಎಸ್‍ಎನ್‍ಎಲ್/ಎಂಟಿಎನ್‍ಎಲ್ 9.3% ರಷ್ಟು ಗ್ರಾಹಕರನ್ನು ಹೊಂದಿತ್ತು. ಏರ್ ಸೆಲ್ 8.6% ಗ್ರಾಹಕರನ್ನು ಹೊಂದಿದ್ದರೆ, 21.2% ಇತರೆ ಐದು ಕಂಪೆನಿಗಳು ಸ್ಥಾನವನ್ನು ಗಳಿಸಿದ್ದವು. ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    2016ರ ಏನೆಲ್ಲಾ ಬದಲಾವಣೆಗಳಾಯಿತು?
    ವೋಡಾಫೋನ್ ಹಾಗೂ ಐಡಿಯಾ ಕಂಪೆನಿಗಳು ವಿಲೀನಗೊಂಡು 38.4% ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ದೇಶದ ನಂಬರ್ ಒನ್ ಕಂಪನಿಯಾಗಿ ಬದಲಾಗಿದ್ದರೆ, ಭಾರತಿ ಏರ್‍ಟೆಲ್ 29.8% ರಷ್ಟು ಮಾರುಕಟ್ಟೆಯನ್ನು ಹೊಂದುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ರಿಲಯನ್ಸ್ ಜಿಯೋ 19.6% ಮಾರುಕಟ್ಟೆ ಪಾಲನ್ನು ಹೊಂದಿದೆ. ಇತರೇ ಕಂಪನಿಗಳು 12.2% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಜಿಯೋ ನಿವ್ವಳ ಲಾಭ ಏರಿಕೆ- ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಭಾರತ ನಂಬರ್ ಒನ್:
    2016ರ ಅವಧಿಯಲ್ಲಿ ವಿಶ್ವದ ಇಂಟರ್ ನೆಟ್ ಬಳಕೆಯಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಆದರೆ ಜಿಯೋ ಬಂದ ಬಳಿಕ 2017ರಲ್ಲಿ ಭಾರತ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಮುಂಬೈ: ದೇಶದ ನಂ.1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಪ್ರತಿ ಬಳಕೆದಾರನಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಂಡ ಎರಡನೇ ತ್ರೈಮಾಸಿಕದಲ್ಲಿ 131.7 ರೂ. ಆದಾಯ ಗಳಿಸಿದೆ.

    ಬಾಂಬೆ ಶೇರು ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಜಿಯೋ ಶೇ.11 ರಷ್ಟು ಪ್ರಗತಿ ಸಾಧಿಸಿದ್ದು, 681 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು ಆದಾಯದಲ್ಲಿ ಶೇ.13.9 ಏರಿಕೆಯಾಗಿದ್ದು 9,240 ಕೋಟಿ ರೂ. ಗಳಿಸಿದೆ. ಕಾರ್ಯಾಚರಣಾ ಲಾಭ ಶೇ.13.5 ಏರಿಕೆಯಾಗಿದ್ದು 3,563 ಕೋಟಿ ರೂ. ಗಳಿಸಿದೆ.

    ಪ್ರತಿ ಬಳಕೆದಾರನಿಂದ 131.7 ರೂ. ಆದಾಯ ಬಂದಿದ್ದು, ಕಳೆದ 4 ತ್ರೈಮಾಸಿಕಕ್ಕೆ ಹೋಲಿಸಿದರೆ ಕಡಿಮೆ ಆದಾಯ ಬಂದಿದೆ. ಜಿಯೋ ಫೋನ್ ಮೂಲಕ ಗ್ರಾಹಕರನ್ನು ಹೆಚ್ಚಿಸಲು ಮುಂದಾಗಿದ್ದರ ಜೊತೆಗೆ ಕಡಿಮೆ ಬೆಲೆಗೆ ಡೇಟಾ ಪ್ಯಾಕ್ ನೀಡಿದ ಪರಿಣಾಮ ಆದಾಯ ಕುಸಿದಿದೆ. ಇದರ ಜೊತೆಗೆ 501 ರೂ. ನೀಡಿ ಹೊಸ ಜಿಯೋ ಫೋನ್ ಖರೀದಿಸಲು ನೀಡಿದ ಆಫರ್ ನಿಂದಾಗಿಯೂ ಈ ಆದಾಯದಲ್ಲಿ ಕುಸಿತ ಕಂಡಿದೆ.

    ಈ ಹಿಂದಿನ ನಾಲ್ಕು ತ್ರೈಮಾಸಿಕದಲ್ಲಿ ಜಿಯೋ ಅನುಕ್ರಮವಾಗಿ 156 ರೂ., 154 ರೂ., 137 ರೂ., 135 ರೂ., ಸೆಪ್ಟೆಂಬರ್‍ನಲ್ಲಿ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರನಿಂದ 131.7 ರೂ. ಆದಾಯಗಳಿಸಿದೆ.

    ಎರಡನೇ ತ್ರೈಮಾಸಿಕದಲ್ಲಿ ಒಟ್ಟು 3 ಕೋಟಿ ಗ್ರಾಹಕರನ್ನು ಹೆಚ್ಚಿಸಿಕೊಂಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 25.2 ಕೋಟಿ ಜಿಯೋ ಗ್ರಾಹಕರಿದ್ದಾರೆ. ಫೀಚರ್ ಫೋನ್‍ಗಳ ಪೈಕಿ ಈಗ 4ಜಿ ಜಿಯೋ ಫೋನ್2 ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಈ ಸೆಟ್ ವಾಟ್ಸಪ್, ಫೇಸ್‍ಬುಕ್, ಯೂ ಟ್ಯೂಬ್ ಅಪ್ಲಿಕೇಶನ್ ಗಳನ್ನೂ ಸಪೋರ್ಟ್ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಯೋ ಗಿಗಾ ಫೈಬರ್ ಪ್ರಿವ್ಯೂ ಆಫರ್: ಮೂರು ತಿಂಗಳು ಎಷ್ಟು ಜಿಬಿ ಡೇಟಾ ಫ್ರೀ? ಸ್ಪೀಡ್ ಎಷ್ಟು? ಶುಲ್ಕ ಎಷ್ಟು?

    ಜಿಯೋ ಗಿಗಾ ಫೈಬರ್ ಪ್ರಿವ್ಯೂ ಆಫರ್: ಮೂರು ತಿಂಗಳು ಎಷ್ಟು ಜಿಬಿ ಡೇಟಾ ಫ್ರೀ? ಸ್ಪೀಡ್ ಎಷ್ಟು? ಶುಲ್ಕ ಎಷ್ಟು?

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರಾದ ಮುಕೇಶ್ ಅಂಬಾನಿ 2018 ರ ವಾರ್ಷಿಕ ಮಹಾಸಭೆಯಲ್ಲಿ ಜಿಯೋ ಗಿಗಾ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯನ್ನು ಅನಾವಣಗೊಳಿಸಿದ್ದರು. ಈಗ ಈ ಗಿಗಾಫೈಬರ್ ಬ್ರಾಡ್‍ಬ್ಯಾಂಡ್ ಸೇವೆಯ ಪ್ರಿವ್ಯೂ ಆಫರ್ ಪ್ರಕಟಗೊಂಡಿದೆ.

    ಆಫರ್ ನಲ್ಲಿ ಏನಿರುತ್ತೆ?
    ಜಿಯೋ ಗಿಗಾ ಫೈಬರ್ ಪ್ರಿವ್ಯೂ ಆಫರ್ ಒಟ್ಟು 90 ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ. ಈ ವೇಳೆ ಗ್ರಾಹಕರಿಗೆ 300 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಇದರ ಪ್ರಕಾರ ಪ್ರತಿ ತಿಂಗಳಿಗೆ 100 ಜಿಬಿ ಡೇಟಾ ಸಿಗುತ್ತದೆ. ಇದಲ್ಲದೇ ಪ್ರಿವ್ಯೂ ಆಫರ್ ನಲ್ಲಿರುವ ಗ್ರಾಹಕರಿಗೆ ತನ್ನ ಮೈ ಜಿಯೋ ಆ್ಯಪ್ ಮೂಲಕ ಹೆಚ್ಚುವರಿಯಾಗಿ 40 ಜಿಬಿ ಡೇಟಾ ಸಿಗುತ್ತದೆ. 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ಡೌನ್‍ಲೋಡ್ ಸ್ಪೀಡ್ ಹಾಗೂ 100 ಎಂಬಿಪಿಎಸ್(ಮೆಗಾ ಬೈಟ್ ಪರ್ ಸಕೆಂಡ್) ಅಪ್ಲೋಡ್ ಸ್ಪೀಡ್‍ನ್ನು ಹೊಂದಿರುತ್ತದೆ ಎಂದು ಜಿಯೋ ಹೇಳಿದೆ. ಜಿಯೋ ಹೇಳಿದಷ್ಟೇ ವೇಗದಲ್ಲಿ ನೆಟ್ ಸಿಕ್ಕಿದರೆ 2 ಜಿಬಿ ಫೈಲ್ ಗಳು ಕೆಲವೇ ಸೆಕೆಂಡ್ ನಲ್ಲಿ ಡೌನ್ ಲೋಡ್ ಆಗಲಿದೆ.

    ಬೆಲೆ ಎಷ್ಟು?
    ಜಿಯೋ ಈ ಆಫರ್ ರನ್ನು ಉಚಿತವಾಗಿ ನೀಡಲಿದ್ದು, ಕೇವಲ ತನ್ನ ಬ್ರಾಡ್‍ಬ್ಯಾಂಡ್ ರೂಟರ್ ಗಳ ಭದ್ರತಾ ಠೇವಣಿಯಾಗಿ 4,500 ರೂಪಾಯಿಗಳನ್ನು ಪಾವತಿಸಬೇಕು. ಅಷ್ಟೇ ಅಲ್ಲದೇ ಇನ್ಸ್ಟಾಲೇಷನ್ ಹಾಗೂ ಇತರೆ ಯಾವುದೇ ವೆಚ್ಚಗಳು ಇರುವುದಿಲ್ಲ. ಈ ಹಣವನ್ನು ಕ್ರೆಡಿಟ್, ಡೆಬಿಟ್ ಕಾರ್ಡ್, ಜಿಯೋ ಮನಿ, ಪೇಟಿಂಎ ಮೂಲಕ ಪಾವತಿಸಬೇಕಾಗುತ್ತದೆ. ಬಳಕೆ ಮಾಡಿದ ಬಳಿಕ ಈ ರೂಟರ್ ಬೇಡ ಎಂದಾದರೆ ನಿಮ್ಮ ಖಾತೆಗೆ 4,500 ರೂ. ಜಮೆ ಆಗುತ್ತದೆ.

    ಗಿಗಾ ಫೈಬರ್ ನೋಂದಣಿ ಹೇಗೆ?
    ಗ್ರಾಹಕರ ಜಿಯೋ ಫೈಬರ್ www.gigafiber.jio.com ನ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ, ಅಲ್ಲಿ ನೀಡಿರುವ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಅಲ್ಲದೇ ತಮ್ಮ ಸ್ಥಳಗಳನ್ನು ಗೂಗಲ್ ಮ್ಯಾಪ್ ಸಹಾಯದೊಂದಿಗೆ ಸರಿಯಾಗಿ ಗುರುತಿಸಬೇಕು. ನಂತರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಹಾಕಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಇದಾದ ನಂತರ ನಿಮಗೆ ಜಿಯೋ ಕಡೆಯಿಂದ ನೋಂದಣಿಯಾದ ಸಂದೇಶ ಬರುತ್ತದೆ. ಸದ್ಯಕ್ಕೆ ಗಿಗಾ ಫೈಬರ್ ಎಲ್ಲ ನಗರಗಳಲ್ಲಿ ಲಭ್ಯವಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸ ಐಫೋನಲ್ಲಿ ಇ ಸಿಮ್ ಹಾಕಬಹುದು – ಏನಿದು ಇ-ಸಿಮ್? ಹೇಗೆ ಕಾರ್ಯನಿರ್ವಹಿಸುತ್ತೆ?

    ಹೊಸ ಐಫೋನಲ್ಲಿ ಇ ಸಿಮ್ ಹಾಕಬಹುದು – ಏನಿದು ಇ-ಸಿಮ್? ಹೇಗೆ ಕಾರ್ಯನಿರ್ವಹಿಸುತ್ತೆ?

    ನವದೆಹಲಿ: ಆಪಲ್ ಕಂಪೆನಿಯು ಮೊದಲ ಬಾರಿಗೆ ಡ್ಯುಯಲ್ ಸಿಮ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ ಈಗ ಇರುವ ಡ್ಯುಯಲ್ ಸಿಮ್ ನಂತೆ ಈ ಫೋನ್ ನಲ್ಲಿ ಎರಡು ಟ್ರೇಯಲ್ಲಿ ಸಿಮ್ ಹಾಕಲು ಸಾಧ್ಯವಿಲ್ಲ.

    ಹೊಸ ಐಫೋನ್ ಎಕ್ಸ್ಎಸ್, ಎಕ್ಸ್ಎಸ್ ಮ್ಯಾಕ್ಸ್ ಹಾಗೂ ಎಕ್ಸ್ಆರ್ ಫೋನುಗಳಿಗೆ ಇ ಸಿಮ್ ಹಾಕಿ ಕರೆ ಮಾಡಬಹುದು. ಸಿಮ್ ಕಾರ್ಡ್ ಗಳನ್ನು ನಾವು ನೋಡಬಹುದು. ಆದರೆ ಇ-ಸಿಮ್ ಕಾರ್ಡ್ ಗಳನ್ನು ನೋಡಲು ಸಾಧ್ಯವಿಲ್ಲ. ಐಫೋನ್ ನ್ಯಾನೋ ಸಿಮ್ ಸ್ಲಾಟ್‍ನೊಂದಿಗೆ ಲಭ್ಯವಾದರೆ, ಇನ್ನೊಂದು ಡಿಜಿಟಲ್ ಮಾದರಿಯ ಸಿಮ್ ಆಗಿರುತ್ತದೆ.

    ಈ ಫೋನ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಆಪಲ್ ಕಂಪೆನಿಯ ಮಾರುಕಟ್ಟೆ ಉಪಾಧ್ಯಕ್ಷ ಫಿಲಿಪ್ ಷಿಲ್ಲರ್, ಬಹಳಷ್ಟು ಜನ ವಿದೇಶಕ್ಕೆ ಪ್ರವಾಸ ಹೋಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಂವಹನಕ್ಕಾಗಿ ಆ ದೇಶದಲ್ಲಿರುವ ಸಿಮ್ ಕಾರ್ಡ್ ಬಳಸಲು ತಾನು ಬಳಸುತ್ತಿರುವ ಸಿಮ್ ತೆಗೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಇ ಸಿಮ್ ವಿಶೇಷತೆಯನ್ನು ಸೇರಿಸಲಾಗಿದೆ ಎಂದು ತಿಳಿಸಿದರು.

    ಏನಿದು ಇ-ಸಿಮ್?
    ಇ-ಸಿಮ್ ಎಂದರೆ ಎಂಬೆಡೆಡ್ ಸಬ್‍ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್. ಇದು ಮ್ಯಾನುವಲ್ ಸಿಮ್ ರೀತಿಯಂತೆ ಕಾರ್ಯನಿರ್ವಹಿಸಲಿದ್ದು, ಯಾವುದೇ ಸಿಮ್‍ಗಳ ಅವಶ್ಯಕತೆ ಇರುವುದಿಲ್ಲ. ಫೋನುಗಳಲ್ಲಿ ಒಂದು ಸಾಮಾನ್ಯ ಸಿಮ್ ಸ್ಲಾಟ್ ಇದ್ದೇ ಇರುತ್ತದೆ. ಇದರ ಜೊತೆ ಇ-ಸಿಮ್ ಮುಖಾಂತರ ಇನ್ನೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಇ-ಸಿಮ್‍ಗಳನ್ನು ಮುಂದಿನ ಪೀಳಿಗೆಯ ಪರಿಣಾಮಕಾರಿ ಸಂವಹನ ತಂತ್ರಜ್ಞಾನವೆಂದೇ ಪರಿಗಣಿಸಲಾಗಿದೆ.

    ಭಾರತದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ?
    ಇ-ಸಿಮ್ ತಂತ್ರಜ್ಞಾನಕ್ಕೆ ಭಾರತದ ಕಂಪೆನಿಗಳು ಕೈಜೋಡಿಸಿದ್ದು, ಈಗಾಗಲೇ ಜಿಯೋ ಹಾಗೂ ಏರ್‌ಟೆಲ್‌ ಕಂಪೆನಿಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಹೀಗಾಗಿ ಭಾರತದಲ್ಲಿನ ಇ-ಸಿಮ್ ಫೋನ್‍ಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೊಬೈಲ್ ಖರೀದಿಸಿದ ನಂತರ ಗ್ರಾಹಕರು ತಮ್ಮ ಮ್ಯಾನುವಲ್ ಸಿಮ್‍ನೊಂದಿಗೆ ಇನ್ನೊಂದು ಸಿಮ್‍ನ ಅವಶ್ಯಕತೆಯಿದ್ದರೆ ಇ-ಸಿಮ್ ಮುಖಾಂತರ ಮತ್ತೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಗೂಗಲ್ ಪಿಕ್ಸೆಲ್ 2 ಮೊದಲ ಬಾರಿಗೆ ಇ-ಸಿಮ್ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬಂದಿತ್ತು. ಪ್ರಸ್ತುತ ಇ-ಸಿಮ್ ವಿಶೇಷತೆ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು ಡ್ಯುಯಲ್ ಸಿಮ್ ಐಫೋನ್‍ಗಳು: ಭಾರತಕ್ಕೆ ಯಾವಾಗ ಬರುತ್ತೆ? ಬೆಲೆ ಎಷ್ಟು?

    ಹೇಗೆ ಸಹಕಾರಿ?
    ಮೆಸೇಂಜಿಗ್ ಅಪ್ಲಿಕೇಶನ್ ಗಳಿಗೆ ಫೋನ್ ನಂಬರ್ ಬೇಕೇಬೇಕು. ಆದರೆ ಒಂದು ಬಾರಿ ಅಪ್ಲಿಕೇಶನ್ ಇನ್ ಸ್ಟಾಲ್ ಆದ ನಂತರ ಸಿಮ್ ತೆಗೆಯಬಹುದು. ಆದರೆ ಈ ಅಪ್ಲಿಕೇಶನ್ ಕೆಲಸ ಮಾಡಲು ಇಂಟರ್ ನೆಟ್ ಸಂಪರ್ಕ ಬೇಕಾಗುತ್ತದೆ. ಉದಾಹರಣೆಗೆ ಭಾರತದ ವ್ಯಕ್ತಿಯೊಬ್ಬರು ಅಮೆರಿಕಕ್ಕೆ ಹೋದರೆ ಮೊಬೈಲ್ ಡೇಟಾ ಮೂಲಕವೇ ಇಂಟರ್ ನೆಟ್/ ಮೆಸೇಜಿಂಗ್ ಆಪಿಕ್ಲೇಶನ್ ಮೂಲಕ ಓಪನ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಭಾರತದ ಕಂಪೆನಿಗಳು ಅಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಡೇಟಾ ಬೇಕಾದರೆ ಅಮೆರಿಕದ ಟೆಲಿಕಾಂ ಕಂಪೆನಿಯ ಸಿಮ್ ಬಳಕೆ ಮಾಡಬೇಕಾಗುತ್ತದೆ. ಸಿಮ್ ತೆಗೆಯುವುದು, ಸಿಮ್ ಹಾಕುವ ಕೆಲಸ ತ್ರಾಸದಾಯಕ. ಈ ಸಮಸ್ಯೆಯನ್ನು ದೂರ ಮಾಡಲು ಇ ಸಿಮ್ ಸಹಕಾರಿಯಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಗಸ್ಟ್ 15ರಿಂದ ಜಿಯೋ ಬ್ರಾಡ್‍ಬ್ಯಾಂಡ್ ನೋಂದಣಿ ಪ್ರಾರಂಭ: ಬೆಲೆ ಎಷ್ಟು? ಡೇಟಾ ಸ್ಪೀಡ್ ಎಷ್ಟು?

    ಆಗಸ್ಟ್ 15ರಿಂದ ಜಿಯೋ ಬ್ರಾಡ್‍ಬ್ಯಾಂಡ್ ನೋಂದಣಿ ಪ್ರಾರಂಭ: ಬೆಲೆ ಎಷ್ಟು? ಡೇಟಾ ಸ್ಪೀಡ್ ಎಷ್ಟು?

    ಮುಂಬೈ: ಟೆಲಿಕಾಂ ಕಂಪೆನಿಗಳ ಡೇಟಾ ದರ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು, ಇದೇ ಆಗಸ್ಟ್ 15 ರಿಂದ ಅಧಿಕೃತವಾಗಿ ಜಿಯೋ ಫೈಬರ್  ಬ್ರಾಡ್‍ಬ್ಯಾಂಡ್ ಸೇವೆಯು ದೇಶದಲ್ಲಿ ಉದ್ಘಾಟನೆಯಾಗಲಿದೆ.

    ಜಿಯೋ ಬ್ರಾಡ್‍ಬ್ಯಾಂಡ್ ಸೇವೆ ಭಾರತದ ಕೆಲವು ನಗರಗಳಲ್ಲಿ 2016 ರಿಂದಲೂ ಪ್ರಾಯೋಗಿಕವಾಗಿ ಚಾಲನೆಯಲ್ಲಿದ್ದು, ಇದೀಗ ದೇಶಾದ್ಯಂತ ಇರುವ ಒಟ್ಟು 1,100 ನಗರಗಳಿಗೆ ಸೇವೆಯನ್ನು ಒದಗಿಸಲು ಜಿಯೋ ನೋಂದಣಿಯನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ ಒಟ್ಟಾರೆ 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ಡೌನ್‍ಲೋಡ್ ಸ್ಪೀಡ್ ಹಾಗೂ 100 ಎಂಬಿಪಿಎಸ್(ಮೆಗಾ ಬೈಟ್ ಪರ್ ಸೆಕೆಂಡ್) ಅಪ್ಲೋಡ್ ಸ್ಪೀಡ್ ನೀಡಲಿದೆ.

    ಇದೇ ಆಗಸ್ಟ್ 15 ರಿಂದ ಬ್ರಾಡ್‍ಬ್ಯಾಂಡ್ ಸೇವೆ ಆರಂಭಗೊಳ್ಳಲಿದ್ದು, ಈ ಸೇವೆ ಪಡೆಯಬೇಕಾದರೆ ಗ್ರಾಹಕರು ಆನ್‍ಲೈನಲ್ಲಿ ನೋಂದಣಿ ಮಾಡಬೇಕಾಗಿರುತ್ತದೆ.

    ಬೆಲೆ ಎಷ್ಟು?
    ಜಿಯೋ ಬ್ರಾಡ್‍ಬ್ಯಾಂಡ್ ತನ್ನ ಸೇವೆಯನ್ನು 4,500 ರೂ.ಗಳಿಗೆ ನಿಗದಿಪಡಿಸಿದ್ದು, ಈ ಹಣವನ್ನು ಕಂಪೆನಿ ಮರು ಪಾವತಿ ಮಾಡುವುದಾಗಿ ತಿಳಿಸಿದೆ. ಕೇವಲ ತನ್ನ ಗೀಗಾ ರೂಟರ್ ಹಾಗೂ ಇತರೆ ಬಿಡಿಭಾಗಗಳ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಠೇವಣಿಯನ್ನಾಗಿ ಈ ಮೊತ್ತವನ್ನು ಪಡೆದುಕೊಳ್ಳುತ್ತದೆ. ಈ ಹಣವನ್ನು ಪಾವತಿಸಿದ ಗ್ರಾಹಕರಿಗೆ 3 ತಿಂಗಳುಗಳವರೆಗೆ ಅನ್‍ಲಿಮಿಟೆಡ್ ಇಂಟರ್‌ನೆಟ್ ಸೇವೆಯನ್ನು 1 ಜಿಬಿಪಿಎಸ್ ಡೌನ್‍ಲೋಡ್ ಹಾಗೂ 100 ಎಂಬಿಪಿಎಸ್ ಅಪ್‍ಲೋಡ್ ಸ್ಪೀಡ್‍ನೊಂದಿಗೆ ನೀಡಲಿದೆ. ಪ್ರತಿ ತಿಂಗಳ ಪ್ಯಾಕೇಜ್‍ಗಳ ಕುರಿತು ಮಾಹಿತಿಯನ್ನು ಸದ್ಯವೇ ಬಿಡುಗಡೆಮಾಡಲಿದೆ. ನೊಂದಣಿಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀವು ನೆಲೆಸಿರುವ ಸ್ಥಳದಲ್ಲಿ ಈ ಸೇವೆ ಆರಂಭದಲ್ಲೇ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಸಿಗಲಿದೆ.

    ಗೀಗಾ ಟಿವಿ:
    ಬ್ಯಾಡ್‍ಬ್ಯಾಂಡ್ ಸೇವೆಯ ಜೊತೆಗೆ ಜಿಯೋ ತನ್ನ ನೂತನ ಜಿಯೋಫೈಬರ್ ಸೇವೆಯೊಂದಿಗೆ ಜಿಯೋ ಗೀಗಾ ಟಿವಿಯ ಸೌಲಭ್ಯವನ್ನು ನೀಡಲಿದೆ. ಗೀಗಾ ರೂಟರ್ ಮನೆ ಹಾಗೂ ಕಚೇರಿಯಲ್ಲಿನ ವಾಲ್-ಟು-ವಾಲ್ ಹೈ ಸ್ಪೀಡ್ ವೈ-ಫೈ ವದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಗೀಗಾ ಟಿವಿಯನ್ನು ಗ್ರಾಹಕರು ತಮ್ಮ ಸ್ಮಾರ್ಟ್ ಟಿವಿಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ 4ಕೆ ವಿಡಿಯೋ ಹಾಗೂ ಅತ್ಯಾಧುನಿಕ ವಿಡಿಯೋ ಗೇಮ್‍ಗಳನ್ನು ಯಾವುದೇ ಅಡೆತಡೆಯಿಲ್ಲದೆ ಪಡೆಯಬಹುದಾಗಿದೆ.

    ಜಿಯೋ ಸಂಸ್ಥೆಯು ಗಿಗಾ ಟಿವಿ ಸೆಟ್-ಟಾಪ್ ಬಾಕ್ಸ್ ಜೊತೆಗೆ ವಾಯ್ಸ್ ಆಧರಿತ ರಿಮೋಟ್ ಗಳನ್ನು ನೀಡಲಿದೆ. ಈ ರಿಮೋಟ್ ಗಳ ಮೂಲಕ ಗ್ರಾಹಕರು ವಾಯ್ಸ್ ಮೂಲಕವೇ ತಮಗೇ ಬೇಕಾದ ಚಾನಲ್ ಹಾಗೂ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ಗಿಗಾ ಟಿವಿಯಲ್ಲಿ ಸುಮಾರು 600 ಕ್ಕೂ ಹೆಚ್ಚಿನ ಚಾನೆಲ್‍ಗಳು, ಲಕ್ಷಾಂತರ ಹಾಡುಗಳನ್ನು ವೀಕ್ಷಿಸಬಹುದಾಗಿದೆ. ಇದಲ್ಲದೇ ತನ್ನ ಜಿಯೋ ಸಿನಿಮಾ, ಜಿಯೋ ಟಿವಿ ಕಾಲ್, ಜಿಯೋ ಸ್ಮಾರ್ಟ್ ಲಿವಿಂಗ್, ಜಿಯೋ ಕ್ಲೌಡ್, ಮೀಡಿಯಾಶೇರ್ ಮತ್ತು ಜಿಯೋ ಸ್ಟೋರ್ಸ್ ನಂತಹ ಅಪ್ಲಿಕೇಶನ್ ತಮ್ಮ ಟಿವಿಗಳಲ್ಲಿ ಪಡೆದುಕೊಳ್ಳಬಹುದು.

    ಜಿಯೋ ಬ್ರಾಡ್‍ಬ್ಯಾಂಡ್ ನೆಟ್‍ವರ್ಕ್ ಅಡಿಯಲ್ಲಿ ಇಂಟರ್‌ನೆಟ್ ಬಳಕೆಮಾಡಿಕೊಂಡು ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಬದಲಾಯಿಸಿಕೊಳ್ಳಬಹುದು. ಮನೆಯಲ್ಲಿನ ಆಡಿಯೊ ಡಾಂಗಲ್, ವಿಡಿಯೋ ಡಾಂಗಲ್, ಸ್ಮಾರ್ಟ್ ಸ್ಪೀಕರ್, ವೈ-ಫೈ ಎಕ್ಸ್ಟೆಂಡರ್, ಸ್ಮಾರ್ಟ್ ಪ್ಲಗ್, ಸೆಕ್ಯುರಿಟಿ ಕ್ಯಾಮೆರಾ ಮತ್ತು ಟಿವಿ ಕ್ಯಾಮೆರಾ ಸೇರಿದಂತೆ ಹಲವು ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಯಂತ್ರಿಸಬಹುದು. ಮನೆಯ ತಾಪಮಾನ, ಬೆಳಕು, ಗ್ಯಾಸ್ ಮತ್ತು ನೀರಿನ ಸೋರಿಕೆಯನ್ನು ಸ್ಮಾರ್ಟ್ ಫೋನ್ ಬಳಸಿಕೊಂಡು ಗೀಗಾ ಟಿವಿಯೊಂದಿಗೆ ನಿಯಂತ್ರಿಬಹುದು ಎಂದು ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಕಂಪೆನಿಯನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ತನ್ನ ಷೇರಿನ ಬೆಲೆ 2.4% ಏರಿಕೆಯಾದ ಹಿನ್ನೆಲೆಯಲ್ಲಿ ರಿಲಯನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ರಿಲಯನ್ಸ್ ಷೇರಿನ ಬೆಲೆ 2.4% ಏರಿಕೆಯಾದ ಪರಿಣಾಮ ಮಂಗಳವಾರ  ಒಂದು ಷೇರಿನ ಬೆಲೆ 1,177 ರೂ. ಇದ್ದರೆ, ಟಿಸಿಎಸ್ ಒಂದು ಷೇರಿನ ಬೆಲೆ 1,930 ರೂ. ಇತ್ತು. ಟಿಸಿಎಸ್ 7.39 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿದ್ದರೆ ರಿಲಯನ್ಸ್ ಈಗ 7.46 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿ ಹೊರಹೊಮ್ಮಿದೆ.

    ಕಳೆದ ಎರಡು ತಿಂಗಳಿನಿಂದ ರಿಲಯನ್ಸ್ ಷೇರು ಏರಿಕೆ ಕಾಣುತ್ತಿದ್ದು, ವಿಶೇಷವಾಗಿ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಜಿಯೋದಿಂದಾಗಿ ಏರಿಕೆಯಾಗುತ್ತಿದೆ.

    ಶುಕ್ರವಾರ ರಿಲಯನ್ಸ್ ಕಂಪೆನಿ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್-ಜೂನ್ ಅವಧಿಯಲ್ಲಿ 9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಸಂಸ್ಥೆ ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು. ಇದನ್ನೂ ಓದಿ: ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

     

     

  • ಯಾವುದೇ ಹಳೆಯ ಫೀಚರ್ ಫೋನ್ ನೀಡಿ ಹೊಚ್ಚ ಹೊಸ ಜಿಯೋ ಫೋನ್-2 ಖರೀದಿಸಿ

    ಯಾವುದೇ ಹಳೆಯ ಫೀಚರ್ ಫೋನ್ ನೀಡಿ ಹೊಚ್ಚ ಹೊಸ ಜಿಯೋ ಫೋನ್-2 ಖರೀದಿಸಿ

    ಮುಂಬೈ: 50 ಕೋಟಿಗೂ ಹೆಚ್ಚಿನ ಭಾರತೀಯರು ಇನ್ನೂ ಅಂತರ್ಜಾಲ ಸಂಪರ್ಕವಿಲ್ಲದ ಫೀಚರ್ ಫೋನುಗಳನ್ನು ಬಳಸುತ್ತಿದ್ದು, ಇದರಿಂದ ಅವರು ಅಂತರ್ಜಾಲ ಸಂಪರ್ಕಕ್ಕೆ ಒಳಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜಿಯೋ ಸಂಸ್ಥೆಯು ಕೈಗೆಟುಕುವ ಬೆಲೆಯಲ್ಲಿ ಡಿಜಿಟಲ್ ಸೇವೆಯನ್ನು ಎಲ್ಲರೂ ಬಳಸಬೇಕೆಂದು ನೂತನ ಯೋಜನೆಯನ್ನು ಜಾರಿಗೊಳಿಸಿದೆ.

    ಈ ಯೋಜನೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಯಾವುದೇ ಫೀಚರ್ ಫೋನ್‍ನ್ನು ಜಿಯೋದ ನೂತನ ಮೊಬೈಲ್ ನೊಂದಿಗೆ ಬದಲಾಯಿಸಿಕೊಳ್ಳುವ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ. 25 ಕೋಟಿ ಭಾರತೀಯರು ಈಗಾಗಲೇ ಜಿಯೋ ಫೋನ್ ಬಳಸುತ್ತಿದ್ದು, ಇನ್ನೂ ಹಲವು ಕೋಟಿ ಜನರು ಜಿಯೋಫೋನ್ ಬಳಕೆ ಪ್ರಾರಂಭಿಸಲು ನೆರವಾಗುವಂತೆ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ.

    ಇದೇ ಶುಕ್ರವಾರ ಸಂಜೆ 5 ಗಂಟೆಯಿಂದ ಆರಂಭಿಸಿ ಗ್ರಾಹಕರು ತಮ್ಮ ಯಾವುದೇ ಹಳೆಯ ಫೀಚರ್ ಫೋನ್‍ಗಳನ್ನು ಕೇವಲ ರೂ. 501 ವಾಸ್ತವಿಕ ವೆಚ್ಚ ಪಾವತಿಸಿ ಹೊಸ ಜಿಯೋ ಫೋನ್‍ನೊಡನೆ ಬದಲಾಯಿಸಿಕೊಳ್ಳಬಹುದು ಎಂದು ಜಿಯೋ ಹೇಳಿದೆ.

    ಜಿಯೋ ಫೋನ್-2ರ ಗುಣವೈಶಿಷ್ಟ್ಯಗಳು:

    * ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
    * ಜಿಯೋ ಫೋನ್’ನ ಧ್ವನಿ ಆಜ್ಞೆ (ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು
    * ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.
    * 512 RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
    * ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
    * ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
    * 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

    ಜಿಯೋ ತನ್ನ ಮೊದಲ ಫೋನಿನಲ್ಲಿ ನೀಡಿದಂತೆ ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್  ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

     

  • ಅಸ್ತಿತ್ವವೇ ಇಲ್ಲದ ಜಿಯೋ ಸಂಸ್ಥೆಗೆ ಉತ್ಕೃಷ್ಟ ಸ್ಥಾನಮಾನ ಸಿಕ್ಕಿದ್ದು ಹೇಗೆ? ಶಿಕ್ಷಣ ಸಂಸ್ಥೆಗಳಿಗೆ ಏನು ಲಾಭ?

    ಅಸ್ತಿತ್ವವೇ ಇಲ್ಲದ ಜಿಯೋ ಸಂಸ್ಥೆಗೆ ಉತ್ಕೃಷ್ಟ ಸ್ಥಾನಮಾನ ಸಿಕ್ಕಿದ್ದು ಹೇಗೆ? ಶಿಕ್ಷಣ ಸಂಸ್ಥೆಗಳಿಗೆ ಏನು ಲಾಭ?

    ನವದೆಹಲಿ: ಅಸ್ತಿತ್ವವೇ ಇಲ್ಲದ ಜಿಯೋ ಶಿಕ್ಷಣ ಸಂಸ್ಥೆಗೆ ಉತ್ಕೃಷ್ಟ ಸ್ಥಾನಮಾನ ನೀಡಿದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಕುರಿತು ಸ್ಪಷ್ಟನೆ ನೀಡಿದೆ.

    ಸೋಮವಾರದಂದು ಕೇಂದ್ರ ಸರ್ಕಾರ ಮೂರು ಖಾಸಗಿ ಮತ್ತು ಮೂರು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳೆಂದು ಪ್ರಕಟಿಸಿತ್ತು. ಈ ಪ್ರಕಟಣೆಯಲ್ಲಿ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ಮದ್ರಾಸ್ ಐಐಟಿ ಮತ್ತು ಐಐಟಿ ಖರಗ್‍ಪುರ ಪಟ್ಟಿಯಲ್ಲಿ ಸ್ಥಾನ ನೀಡಿರಲಿಲ್ಲ. ಅಲ್ಲದೇ ಇನ್ನೂ ಅಸ್ತಿತ್ವಕ್ಕೇ ಬಾರದ ಜಿಯೋ ಶಿಕ್ಷಣ ಸಂಸ್ಥೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು.

    ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಆ ಸುಬ್ರಮಣ್ಯಂ ಅವರು, ಗ್ರೀನ್ ಫೀಲ್ಡ್ ಕೆಟಗರಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ತಮ್ಮ ಶಿಕ್ಷಣ ಸಂಸ್ಥೆಗಳನ್ನು ಹೇಗೆ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡಲಾಗುತ್ತದೆ ಎನ್ನುವ ದೂರದೃಷ್ಟಿ ಯೋಜನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಉತ್ಕೃಷ್ಟ ಸ್ಥಾನಮಾನ ನೀಡಿದೆ. ಈ ಯೋಜನೆಯಲ್ಲಿ ಸ್ಥಾನಮಾನ ಹೊಂದಿದ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಇಂತಹ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯದೇ ಸ್ವಂತತ್ರವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಸಂಸ್ಥೆಗಳಿಗೆ ಸರ್ಕಾರದ ನೀತಿಗಳಿಂದ ಕೊಂಚ ರಿಯಾಯಿತಿ ಮಾತ್ರ ದೊರೆಯುತ್ತದೆ. ಆಯಾ ಶಿಕ್ಷಣ ಸಂಸ್ಥೆಗಳು ಇಲಾಖೆಗೆ ನೀಡಿರುವ ವಿಷನ್ ಡಾಕ್ಯುಮೆಂಟ್ ಆಧಾರದ ಮೇರೆಗೆ ಶ್ರೇಷ್ಠ ಸ್ಥಾನಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿ ಒಟ್ಟು 800 ವಿಶ್ವವಿದ್ಯಾಲಯಗಳಿವೆ. ಆದರೆ ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾನಿಲಯಗಳ ಪೈಕಿ 100 ಹಾಗೂ 200 ರೊಳಗೆ ಒಂದು ಸಹ ಇಲ್ಲ. ಇದು ಅತ್ಯಂತ ಬೇಸರದ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಪ್ರಕಟಿಸಿದ 6 ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಮೂಲಕ ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಸೇರುವುದಕ್ಕೆ ಈ ಪ್ರಕಟಣೆ ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದ್ದಾರೆ.

    ಸರ್ಕಾರ ಪ್ರಕಟಿಸಿದ್ದ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಪೈಕಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಎಸ್‍ಸಿ ಬೆಂಗಳೂರು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದುಕೊಂಡಿದ್ದವು. ಖಾಸಗಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಿಟ್ಸ್ ಪಿಲಾನಿ ಮತ್ತು ಮಣಿಪಾಲ ವಿಶ್ವವಿದ್ಯಾಲಯಗಳು ಸ್ಥಾನಪಡೆದುಕೊಂಡಿದ್ದರೆ, ಗ್ರೀನ್ ಫೀಲ್ಡ್ ಕೆಟಗರಿ ವಿಭಾಗದಿಂದ ಜಿಯೋ ಶಿಕ್ಷಣ ಸಂಸ್ಥೆ ಸ್ಥಾನಗಳಿಸಿದೆ.

    ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಲು ಕೇಂದ್ರ ಸರ್ಕಾರ ಈ ನಾಲ್ಕು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿತ್ತು.
    1. ಶಿಕ್ಷಣ ಸಂಸ್ಥೆಯ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಭೂಮಿಯನ್ನು ಹೊಂದಿರುವುದು.
    2. ಉನ್ನತ ಮಟ್ಟದ ಅರ್ಹತೆಯುಳ್ಳ ಅನುಭವಿ ಬೋಧಕ ತಂಡವನ್ನು ಹೊಂದಿರುವುದು.
    3. ಶಿಕ್ಷಣ ಸಂಸ್ಥೆಗೆ ಬೇಕಾಗುವ ಆರ್ಥಿಕ ಬಂಡವಾಳವನ್ನು ಹೂಡಲು ಶಕ್ತವಾದ ಸಂಸ್ಥೆಗಳು.
    4. ಶಿಕ್ಷಣ ಯೋಜನೆಯಲ್ಲಿ ಕಾರ್ಯತಂತ್ರ ರೂಪಿಸಿ ವಾರ್ಷಿಕ ಮೈಲುಗಲ್ಲನ್ನು ಸ್ಥಾಪಿಸುವ ಕಾರ್ಯಕ್ಷಮತೆ ಹೊಂದಿರುವ ಶಿಕ್ಷಣ ಸಂಸ್ಥೆಗಳು.

    ಗ್ರೀನ್ ಫೀಲ್ಡ್ ಕೆಟಗರಿ ಸ್ಥಾನ ಪಡೆಯಲು ಒಟ್ಟು 11 ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಇವುಗಳ ಪೈಕಿ ಜಿಯೋ ಸಂಸ್ಥೆ ಮಾತ್ರ ಆಯ್ಕೆಯಾಗಿದೆ.

    ಏನೇನು ವಿಶೇಷ ಸೌಲಭ್ಯ ಸಿಗುತ್ತೆ?
    ಈ ಸ್ಥಾನಮಾನದಿಂದ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ದೊರೆಯಲಿದೆ. ಮೂರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 1000 ಕೋಟಿ ರೂ. ಅನುದಾನ ದೊರೆಯಲಿದೆ. ಆದರೆ, ಖಾಸಗಿ ಸಂಸ್ಥೆಗಳಿಗೆ ಈ ಅನುದಾನ ಸಿಗುವುದಿಲ್ಲ.

    ಏನು ಲಾಭ?
    ಆರೂ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ಸಿಗುವ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಯಾವುದೇ ಹೊಸ ಕೋರ್ಸ್ ಆರಂಭಕ್ಕೆ ಅವಕಾಶವಿದೆ. ವಿದೇಶದ ಬೋಧಕರನ್ನು ನೇಮಿಸಲು ಅವಕಾಶದ ಜೊತೆಗೆ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಸ್ವಾತಂತ್ರ್ಯವಿದೆ. ಸರಕಾರದ ಅನುಮತಿ ಇಲ್ಲದೆಯೇ ಯಾವುದೇ ವಿದೇಶಿ ಶಿಕ್ಷಣ ಸಂಸ್ಥೆಗಳ ಜತೆ ಮಾತುಕತೆ ನಡೆಸಬಹುದು.

  • 501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿಯವರು ನೂತನ ಜಿಯೋ ಫೋನ್- 2 ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

    ಈ ಬಾರಿ ಜಿಯೋ ಫೋನ್- 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, ವಾಟ್ಸಪ್ ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳನ್ನು ಒಳಗೊಂಡಿದೆ.

    ರಿಲಯನ್ಸ್ ಕಂಪನಿಯ ನೂತನ ಜಿಯೋ ಫೋನ್-2, ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999 ರೂಪಾಯಿಗಳಾಗಿದೆ. ಇದಲ್ಲದೆ ಕಂಪನಿಯು ತನ್ನ ಹಳೆಯ ಜಿಯೋ ಫೋನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅವರಿಗಾಗಿಯೇ ನೂತನ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಜಿಯೋ ಫೋನನ್ನು ಕಂಪೆನಿಗೆ ಹಿಂದುರಿಗಿಸಿ 501 ರೂಪಾಯಿಯನ್ನು ಮಾತ್ರ ನೀಡಿ ಹೊಸ ಜಿಯೋ ಫೋನ್-2 ಖರೀದಿಸಬಹುದಾಗಿದೆ.

    ಜಿಯೋ ಫೋನ್-2ರ ಗುಣವೈಶಿಷ್ಟ್ಯಗಳು:
    * ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
    * ಜಿಯೋ ಫೋನ್’ನ ಧ್ವನಿ ಆಜ್ಞೆ (ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು
    * ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.
    * 512 MB RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
    * ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
    * ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
    * 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

    ಜಿಯೋ ಮೊದಲ ಫೋನಿನಲ್ಲಿ ನೀಡಿದಂತೆ ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್  ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

    ಜಿಯೋ ಫೋನ್ -1ರ ಗುಣವೈಶಿಷ್ಟ್ಯ ಏನಿತ್ತು?
    ಸಿಂಗಲ್ ನ್ಯಾನೋ ಸಿಮ್ 2.4 ಇಂಚಿನ (240X320 ಪಿಕ್ಸೆಲ್), ಟಾರ್ಚ್ ಲೈಟ್ ಹೊಂದಿರುವ ಈ ಫೀಚರ್ ಫೋನ್ ಕೈ ಆಪರೇಟಿಂಗ್ ಸಿಸ್ಟಂ( KaiOS ) ನೀಡಿತ್ತು.

    1.2 GHz ಡ್ಯುಯಲ್ ಕೋರ್ ಎಸ್‍ಪಿಆರ್ಡಿ ಪ್ರೋಸೆಸರ್ ಹೊಂದಿರುವ ಈ ಫೋನ್ ಮಲಿ 400 ಗ್ರಾಫಿಕ್ಸ್ ಪ್ರೋಸೆಸರ್ ಇದೆ. 2000 ಎಂಎಎಚ್ ಲಿಪೋ ಬ್ಯಾಟರಿ ಹೊಂದಿರುವ ಈ ಫೋನ್ 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮರ್ಥ್ಯ, ಹಿಂದುಗಡೆ 2 ಎಂಪಿ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾ ಇದ್ದು, ವಿಡಿಯೋ ರೆಕಾರ್ಡಿಂಗ್ ನೀಡಿತ್ತು.

  • ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

    ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?

    ಮುಂಬೈ: ರಿಲಯನ್ಸ್ ಜಿಯೋ ಹೊಸ ಮಾದರಿಯ ಜಿಯೋಫಿ 4ಜಿ ಎಲ್‍ಟಿಇ ಹಾಟ್ ಸ್ಪಾಟ್ ಸಾಧನವನ್ನು ಬಿಡುಗಡೆ ಮಾಡಿದ್ದು 999 ರೂ. ಬೆಲೆಯಲ್ಲಿ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಲಭ್ಯವಿದೆ.

    ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ಒಂದು ವರ್ಷ ವಾರಂಟಿ ಸಿಗಲಿದೆ. ಹಿಂದೆ ಬಿಡುಗಡೆ ಮಾಡಿದ್ದ ಸಾಧನ ಮೊಟ್ಟೆ ಆಕಾರದಲ್ಲಿ ಇದ್ದರೆ ಈಗ ಬಿಡುಗಡೆಯಾಗಿರುವ ಸಾಧನ ವೃತ್ತಾಕಾರದಲ್ಲಿದೆ.

    ಆನ್, ಆಫ್, ಡಬ್ಲ್ಯೂಪಿಎಸ್(ವೈಫೈ ಪ್ರೊಟೆಕ್ಟೆಡ್ ಸೆಟಪ್), ಬ್ಯಾಟರಿ ನೋಟಿಫಿಕೇಶನ್ ಲೈಟ್, 4ಜಿ, ವೈಫೈ ಸಿಗ್ನಲ್ ನೋಡಲು ಸಾಧ್ಯವಿದೆ. 150 ಎಂಬಿಎಸ್ ಡೌನ್ಲೋಡ್ ಸ್ಪೀಡ್ ಇದ್ದರೆ 50 ಎಂಬಿ ಅಪ್ಲೋಡ್ ಸ್ವೀಡ್ ಇದೆ.

    ಒಂದು ಬಾರಿ ಗರಿಷ್ಟ 32 ಸಾಧನಗಳನ್ನು ಕನೆಕ್ಟ್ ಮಾಡುವ ಸಾಮರ್ಥ್ಯ ಈ ಸಾಧನಕ್ಕಿದೆ. ಮೈಕ್ರೋ ಎಸ್‍ಡಿ ಸ್ಲಾಟ್ ನೀಡಲಾಗಿದ್ದು, ಗರಿಷ್ಟ 64 ಜಿಬಿ ಮೆಮೊರಿ ಕಾರ್ಡ್ ಹಾಕಬಹುದಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಸಾಧನ 2300 ಎಂಎಎಚ್ ಬ್ಯಾಟರಿ ಹೊಂದಿದ್ದರೆ ಹೊಸ ಸಾಧನ 3000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.