ಮುಂಬೈ: ಜಿಯೋ ತನ್ನ 1 ರೂ. ಪ್ರಿ ಪೇಯ್ಡ್ ಪ್ಲಾನ್ ಅನ್ನು ಸದ್ದಿಲ್ಲದೇ ಆರಂಭಿಸಿದೆ. ಇದರ ಮೂಲಕ ಬಳಕೆದಾರರು ಅತೀ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಬಳಸಬಹುದು.
ಈ ಅಗ್ಗದ ಪ್ರಿಪೇಯ್ಡ್ ಯೋಜನೆ ಅತೀ ಹೆಚ್ಚು ಇಂಟರ್‌ನೆಟ್ ಬಳಕೆ ಮಾಡದೇ ಇರುವ ಜನರಿಗೆ ಉಪಯೋಗವಾಗಲಿದೆ. ಈ 1 ರೂ.ಯ ಯೋಜನೆ 100ಜಿಬಿ ಡೇಟಾದೊಂದಿಗೆ 30 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ.
ಈ ಯೋಜನೆ ಮೈಜಿಯೋ ಅಪ್ಲಿಕೇಶನ್‌ನಲ್ಲಿ ಗೋಚರವಾಗುತ್ತಿದ್ದು, ಸದ್ಯ ಯಾವುದೇ ವೆಬ್‌ಸೈಟ್‌ನಲ್ಲಿ ತೋರಿಸುತ್ತಿಲ್ಲ. ಜಿಯೋವಿನ 1 ರೂ.ಯ ಪ್ರಿಪೇಯ್ಡ್ ಯೋಜನೆ 64 ಕೆಬಿಪಿಎಸ್ ಇಂಟರ್‌ನೆಟ್ ಸ್ಪೀಡ್ ಅನ್ನು ಹೊಂದಿರುತ್ತದೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ
ಜಿಯೋ ಹೊರತು ಪಡಿಸಿ ಭಾರತದಲ್ಲಿ ಇತರ ನೆಟ್‌ವರ್ಕ್ಗಳು ಇಷ್ಟೊಂದು ಕಡಿಮೆ ಬೆಲೆಗೆ ಯಾವುದೇ ಯೋಜನೆಯನ್ನು ನೀಡುತ್ತಿಲ್ಲ. ಹೀಗಾಗಿ ಅಗತ್ಯಕ್ಕಿತ ಹೆಚ್ಚಿನ ಡೇಟಾವನ್ನು ಖರೀದಿಸಲು ಬಯಸದ ಬಳಕೆದಾರರಿಗೆ ಈ ಯೋಜನೆ ಉಪಯೋಗವಾಗಲಿದೆ. ಆದರೆ ಈ ಯೋಜನೆಯನ್ನು ಒಂದು ತಿಂಗಳಿನಲ್ಲಿ ಎಷ್ಟು ಬಾರಿ ಬಳಸಬಹುದು ಎಂಬ ಮಾಹಿತಿ ಲಭ್ಯವಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ 150 ಕೆಜಿ ಹೊರಬಲ್ಲ ಡ್ರೋನ್
ಇದೇ ವಾರ ಜಿಯೋ ಸದ್ದಿಲ್ಲದೆ ಇನ್ನೊಂದು ಪ್ಲಾನ್ ಬಿಡುಗಡೆ ಮಾಡಿತ್ತು. 119 ರೂ.ಯ ಪ್ಲಾನ್ ದಿನಕ್ಕೆ 1.5 ಜಿಬಿಯ ಹೈ ಸ್ಪೀಡ್ ಡೇಟಾದೊಂದಿಗೆ ಅನಿಯಮಿತ ಕರೆ ಹಾಗೂ 300 ಎಸ್‌ಎಮ್‌ಎಸ್ ಹೊಂದಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನೂ ಹೊಂದಿದೆ. ಇದೇ ರೀತಿಯ 98 ರೂ.ಯ ಪ್ಲಾನ್ 14 ದಿನಗಳ ವರೆಗೆ ವ್ಯಾಲಿಡಿಟಿ ಹೊಂದಿದೆ.
ನವದೆಹಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ದಿನಬಳಕೆ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದರ ವಿರುದ್ಧ 4.50 ಲಕ್ಷ ಸೇಲ್ಸ್‌ಮನ್ಸ್ ಗಳು ಪ್ರತಿಭಟನೆಗೆ ಇಳಿದಿದ್ದಾರೆ.
ಜಿಯೋ ಇತ್ತೀಚೆಗೆ ದಿನಬಳಕೆ ವಸ್ತುಗಳನ್ನು ಕಡಿಮೆ ದರದಲ್ಲಿ ಜಿಯೋ ಮಾರ್ಟ್ ಮೂಲಕ ಕಿರಾಣಿ ಅಂಗಡಿ ಮಾಲೀಕರಿಗೆ ನೀಡುತ್ತಿದೆ. ಈ ಹಿನ್ನೆಲೆ ಸೇಲ್ಸ್‌ಮನ್ಸ್ ಗಳು ಜಿಯೋ ಕಂಪನಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಂದು ವೇಳೆ ನೀವು ಕಡಿಮೆ ದರದಲ್ಲಿ ಉತ್ಪನ್ನಗಳ ಪೂರೈಕೆ ನಿಲ್ಲಿಸದೇ ಹೋದರೆ, ನಾವು ನಮ್ಮ ಉತ್ಪನ್ನಗಳ ಪೂರೈಕೆಗಳನ್ನು ನಿಲ್ಲಿಸುತ್ತೇವೆ ಎಂದು ಬೆದರಿಕೆಯನ್ನು ಹಾಕುತ್ತಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಮಗಳ ತಲೆಯನ್ನು ಕತ್ತರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಪಾಪಿ ಅಮ್ಮ-ಮಗ
ಕಾರಣವೇನು?
ಇತ್ತೀಚೆಗೆ ರಿಲಯನ್ಸ್ ತನ್ನ ಜಿಯೋ ಮಾರ್ಟ್‍ನಲ್ಲಿ ಎಲ್ಲ ದಿನಬಳಕೆಯ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಕಿರಾಣಿ ಅಂಗಡಿಗೆ ಮಾರಾಟ ಮಾಡುತ್ತಿದೆ. ಈ ಪರಿಣಾಮ ಕಿರಾಣಿ ಅಂಗಡಿ ಅವರಿಗೆ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದ ಸೇಲ್ಸ್‌ಮನ್ಸ್ ಗಳಿಗೆ ದೊಡ್ಡ ಪೆಟ್ಟುಬಿದ್ದಿದೆ. ಇದಕ್ಕೆ 4.50 ಲಕ್ಷ ಸೇಲ್ಸ್‌ಮನ್ಸ್ ಗಳು ರಿಲಯನ್ಸ್ ಕಂಪನಿ ಕಡಿಮೆ ಹಣದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ನಮ್ಮ ವ್ಯಾಪಾರದಲ್ಲಿ ಶೇ.25 ಕಡಿಮೆಯಾಗಿದೆ ಎಂದು ಆರೋಪಿಸುತ್ತಿದ್ದಾರೆ.
ಒಂದು ವೇಳೆ ಜನವರಿ 1ರೊಳಗೆ ರಿಲಯನ್ಸ್ ಕಡಿಮೆ ದರದಲ್ಲಿ ಉತ್ಪನ್ನ ನೀಡುವುದನ್ನು ನಿಲ್ಲಿಸದೇ ಇದ್ದರೆ, ಕಿರಾಣಿ ಅಂಗಡಿಗಳಿಗೆ ನಾವು ಯಾವುದೇ ವಸ್ತುಗಳನ್ನು ನೀಡುವುದಿಲ್ಲ. ಇದರ ಜೊತೆ ಹೊಸದಾಗಿ ಮಾರುಕಟ್ಟೆಗೆ ಪ್ರವೇಶಿಸಬೇಕಿರುವ ಸರಕುಗಳನ್ನು ನೀಡದೆ ನಾವು ಅಸಹಕಾರ ಪ್ರತಿಭಟನೆ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಪರಿಷತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್‌ನಲ್ಲಿ ಕುದುರೆ ವ್ಯಾಪಾರ ಜೋರು
ರಿಲಯನ್ಸ್ ಕಂಪೆನಿ ಕಡಿಮೆ ದರದಲ್ಲಿ ಉತ್ಪನ್ನವನ್ನು ನೀಡುತ್ತಿರುವ ಪರಿಣಾಮ 4.50 ಲಕ್ಷ ಸೇಲ್ಸ್‌ಮನ್ಸ್ ಗಳು ನಷ್ಟ ಅನುಭವಿಸುತ್ತಿದ್ದು, ಇನ್ನು ಅತಂತ್ರ ಆಗುವ ಭೀತಿಯಿಂದ ಕಂಪನಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ನವದೆಹಲಿ: ಜಿಯೋದ ಅನ್‍ಲಿಮಿಟೆಡ್ ಪ್ರೀಪೇಯ್ಡ್ ಯೋಜನೆಗಳು ದುಬಾರಿಯಾಗಲಿದ್ದು, ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ.
ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ(ವಿಐ) ಕೂಡಾ ಪ್ರಿಪೇಯ್ಡ್ ಯೋಜನೆಯಲ್ಲಿ 25%ದಷ್ಟು ಹೆಚ್ಚಳವನ್ನು ಘೋಷಿಸಿದ್ದು, ಈಗಾಗಲೇ ಅದು ಜಾರಿಗೆ ಬಂದಿದೆ. ಈಗ ಜಿಯೋ ಪ್ರಿಪೇಯ್ಡ್ ಪ್ಯಾಕ್‍ಗಳ ಬೆಲೆಯನ್ನು 20% ಏರಿಕೆ ಮಾಡುವುದಾಗಿ ತಿಳಿಸಿದೆ.
75 ರೂ. ಇದ್ದ ಪ್ಯಾಕ್ ಬೆಲೆ 91 ರೂ.ಗೆ ಏರಿಕೆಯಾಗಿದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಅನ್‍ಲಿಮಿಟೆಡ್ ಕರೆ ಹಾಗೂ 50 ಎಸ್‍ಎಂಎಸ್ ನೊಂದಿಗೆ ತಿಂಗಳಿಗೆ 3ಜಿಬಿ ಡೇಟಾವನ್ನು ನೀಡುತ್ತದೆ. 24 ದಿನಗಳ ವ್ಯಾಲಿಡಿಟಿಯ ಯೋಜನೆ ಈ ಹಿಂದೆ 149 ರೂ. ಇದ್ದು, 179 ರೂ.ಗೆ ಏರಿಕೆಯಾಗಿದೆ. ಇದರಲ್ಲಿ 1ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಮತ್ತು ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ನೀಡುತ್ತದೆ. ಇದನ್ನೂ ಓದಿ: ಏರ್‌ಟೆಲ್ ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕ ಹೆಚ್ಚಳ – ಹೀಗಿದೆ ಪರಿಷ್ಕೃತ ದರ
28 ದಿನಗಳ ಪ್ಯಾಕ್: 129 ರೂ.ಯ ಪ್ಯಾಕ್ ಅನ್ನು 155 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 300 ಎಸ್‍ಎಂಎಸ್ ಉಚಿತವಾಗಿ ಇದೆ. 199 ರೂ.ಯ ಯೋಜನೆ 239 ರೂ.ಯಾಗಿದೆ. ಇದರಲ್ಲಿ 1.5ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ ದಿನಕ್ಕೆ 100 ಎಸ್‍ಎಮ್‍ಎಸ್ ಉಚಿತವಾಗಿ ಇದೆ. 249 ರೂ.ಯ ಯೋಜನೆ 299 ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ 2ಜಿಬಿ ಡೇಟಾ, ಅನ್‍ಲಿಮಿಟೆಡ್ ಕರೆ ಹಾಗೂ 100 ಎಸ್‍ಎಮ್‍ಎಸ್ ಉಚಿತವಾಗಿ ಸಿಗುತ್ತದೆ.
56 ದಿನಗಳ ಪ್ಯಾಕ್: 56 ದಿನಗಳ ವ್ಯಾಲಿಡಿಟಿ ಹೊಂದಿರುವ ಎರಡು ಯೋಜನೆಗಳು 1.5ಜಿಬಿ ಹಾಗೂ 2ಜಿಬಿ ದೈನಂದಿನ ಡೇಟಾ, ಅನ್‍ಲಿಮಿಟೆಡ್ ಕರೆಗಳು ಹಾಗೂ 100 ಎಸ್‍ಎಮ್‍ಎಸ್ ಉಚಿತವಾಗಿ ನೀಡುತ್ತದೆ. ಇವುಗಳು ಈ ಹಿಂದೆ 399 ರೂ. ಹಾಗೂ 444 ರೂ. ಇದ್ದು, ಕ್ರಮವಾಗಿ 479 ರೂ. ಹಾಗೂ 533 ರೂ.ಗೆ ಏರಿಕೆಯಾಗಿದೆ.
84 ದಿನಗಳ ಪ್ಯಾಕ್: 329 ರೂ., 555 ರೂ. ಹಾಗೂ 599 ರೂ. ಇದ್ದ ಪ್ಯಾಕ್‌ಗಳು ಕ್ರಮವಾಗಿ 395 ರೂ., 666 ರೂ. ಹಾಗೂ 719 ರೂ.ಗಳಿಗೆ ಏರಿಕೆಯಾಗಿದೆ. ಈ ಮೂರೂ ಯೋಜನೆಗಳು ಅನ್‍ಲಿಮಿಟೆಡ್ ಕರೆ, 100 ಎಸ್‍ಎಮ್‍ಎಸ್‍ಗಳನ್ನು ಉಚಿತವಾಗಿ ನೀಡುವುದರೊಂದಿಗೆ ಕ್ರಮವಾಗಿ 6ಜಿಬಿ ಡೇಟಾ, 1.5ಜಿಬಿ ದೈನಂದಿನ ಡೇಟಾ ಹಾಗೂ 2ಜಿಬಿ ದೈನಂದಿನ ಡೇಟಾವನ್ನು ನೀಡುತ್ತದೆ. ಇದನ್ನೂ ಓದಿ: ಕೊಹ್ಲಿ ಭಾವನಾತ್ಮಕ ಪೋಸ್ಟ್- ನಗುವೇ ಪತ್ನಿಯ ಉತ್ತರ
336 ದಿನಗಳ ಯೋಜನೆ 1,299 ರೂ.ಯಿಂದ 1,559 ರೂ.ಗೆ ಏರಿಕೆಯಾಗಿದೆ. 24 ಜಿಬಿ ಡೇಟಾ ಹಾಗೂ 3,600 ಎಸ್‍ಎಂಎಸ್‍ಗಳನ್ನು ಉಚಿತವಾಗಿ ಇದು ನೀಡುತ್ತದೆ. ಈ ಹಿಂದೆ ಇದ್ದ ವಾರ್ಷಿಕ ಯೋಜನೆಗೆ 2,399 ರೂ. ಇದ್ದರೆ ಈಗ 2,879 ರೂ.ಗೆ ಏರಿಕೆಯಾಗಿದೆ. ಇದು ದೈನಂದಿನ 2ಜಿಬಿ ಡೇಟಾ ಅನ್‍ಲಿಮಿಟೆಡ್ ಕರೆ, ದಿನಕ್ಕೆ 100 ಎಸ್‍ಎಮ್‍ಎಸ್ ಹಾಗೂ 365 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ.
ಜಿಯೋ ಡೇಟಾ ಆಡ್-ಆನ್ ಪ್ರೀಪೇಯ್ಡ್ ಯೋಜನೆಯನ್ನೂ ಹೆಚ್ಚಿಸಲಿದ್ದು, ಇದು 51 ರೂ. ಪ್ಲ್ಯಾನ್ 61 ರೂ.ಗೆ, 101 ಪ್ಲ್ಯಾನ್ 121 ರೂ.ಗೆ ಹಾಗೂ 251 ರೂ.ಪ್ಲ್ಯಾನ್ 301 ರೂ.ಗೆ ಏರಿಕೆಯಾಗಿದೆ. ಈ ಪ್ಲ್ಯಾನ್‍ಗಳು ಕ್ರಮವಾಗಿ 6ಜಿಬಿ, 12ಜಿಬಿ ಮತ್ತು 50ಜಿಬಿ ಡೇಟಾವನ್ನು ನೀಡುತ್ತದೆ.
ಬೆಂಗಳೂರು: ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಜಿಯೋ ಈಗ ಆಂಡ್ರಾಯ್ಡ್ ಸ್ಮಾರ್ಟ್‍ಫೋನ್ ಕ್ಷೇತ್ರದಲ್ಲೂ ಕ್ರಾಂತಿ ಮಾಡಲು ಮುಂದಾಗಿದೆ. ಕಳೆದ ವಾರ ಬಿಡುಗಡೆ ಮಾಡಿದ್ದ ಜಿಯೋ ಫೋನ್ ನೆಕ್ಷ್ಟ್ ಡ್ಯುಯಲ್ ಸಿಮ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಜಿಯೋ ನೆಕ್ಷ್ಟ್ ಹೆಸರಿನ ಫೋನಿಗೆ 6,499 ರೂ. ದರವನ್ನು ನಿಗದಿ ಮಾಡಿದೆ. ಆದರೆ 2,499 ರೂ.(1999 ರೂ.+ 500 ರೂ. ಸಂಸ್ಕರಣಾ ಶುಲ್ಕ) ಪಾವತಿಸಿಯೂ ಖರೀದಿಸಬಹುದು. ಬಾಕಿ ಹಣವನ್ನು 18 ಅಥವಾ 24 ತಿಂಗಳಲ್ಲಿ ಪಾವತಿಸಬಹುದು.
ಗೂಗಲ್ ಸಹಯೋಗದೊಂದಿಗೆ ಫೋನ್ ನಿರ್ಮಾಣವಾಗಿದ್ದು ಆಂಡ್ರಾಯ್ಡ್ ಓಎಸ್‍ಗೆ ‘ಪ್ರಗತಿ’ ಎಂದು ಹೆಸರನ್ನಿಟ್ಟಿದೆ. 5.45 ಇಂಚಿನ ಸ್ಕ್ರೀನ್ ಹೊಂದಿರುವ ಫೋನಿಗೆ ಮುಂದುಗಡೆ 8 ಎಂಪಿ, ಹಿಂದುಗಡೆ 13 ಎಂಪಿ ಕ್ಯಾಮೆರಾ, 16 ಜಿಬಿ ಆಂತರಿಕ ಮೆಮೋರಿ, 2 ಜಿಬಿ ರ್ಯಾಮ್, 3500 ಎಂಎಎಚ್ ಬ್ಯಾಟರಿ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿದೆ.
ಕನ್ನಡ ಸೇರಿದಂತೆ 10 ಭಾಷೆಯಲ್ಲಿ ಮಾಹಿತಿಯನ್ನು ಪಡೆಯಬಹುದು. ಅಷ್ಟೇ ಅಲ್ಲದೇ ಕನ್ನಡದಲ್ಲೇ ಸಂವಹನ ಮಾಡಬಹುದು. ಫೋನ್ ಖರೀದಿಗೆ ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್ ಅನ್ನು ಭೇಟಿಮಾಡಿ ಅಥವಾ www.jio.com/next ಗೆ ಭೇಟಿ ನೀಡಬಹುದು.
ಆಂಡ್ರಾಯ್ಡ್‌ನಿಂದ ಸಶಕ್ತವಾದ ಪ್ರಗತಿ ಓಎಸ್ ಭಾರತಕ್ಕಾಗಿ ರೂಪಿಸಲಾದ ಒಂದು ವಿಶ್ವದರ್ಜೆಯ ಆಪರೇಟಿಂಗ್ ಸಿಸ್ಟಂ ಆಗಿದ್ದು, ಜಿಯೋಫೋನ್ ನೆಕ್ಸ್ಟ್‌ನ ಹೃದಯದಲ್ಲಿದೆ. ಕೈಗೆಟುಕುವ ಬೆಲೆಯಲ್ಲಿ ನೈಜ ತೊಡಕಿಲ್ಲದ ಅನುಭವವನ್ನು ನೀಡುವುದರೊಂದಿಗೆ ಎಲ್ಲರಿಗೂ ಪ್ರಗತಿ ತರುವ ಉದ್ದೇಶದಿಂದ ಜಿಯೊ ಮತ್ತು ಗೂಗಲ್‌ನ ಅತ್ಯುತ್ತಮ ಪ್ರತಿಭೆಗಳು ಫೋನ್ ರೂಪಿಸಿದ್ದಾರೆ.
ತಂತ್ರಜ್ಞಾನ ಕ್ಷೇತ್ರದ ಇನ್ನೊಂದು ಮುಂಚೂಣಿ ಸಂಸ್ಥೆಯಾದ ಕ್ವಾಲ್‌ಕಾಮ್ ಜಿಯೋಫೋನ್ ನೆಕ್ಸ್ಟ್‌ನ ಪ್ರಾಸೆಸರ್ ಅನ್ನು ರೂಪಿಸಿದೆ. ಸಾಧನದ ಕಾರ್ಯಕ್ಷಮತೆ, ಆಡಿಯೋ ಮತ್ತು ಬ್ಯಾಟರಿಯಲ್ಲಿ ಆಪ್ಟಿಮೈಸೇಶನ್ ಜೊತೆಗೆ ಆಪ್ಟಿಮೈಸ್ಡ್ ಕನೆಕ್ಟಿವಿಟಿ ಮತ್ತು ಲೊಕೇಶನ್ ತಂತ್ರಜ್ಞಾನಗಳನ್ನು ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಕ್ವಾಲ್‌ಕಾಮ್ ಪ್ರಾಸೆಸರ್‌ನ ಒದಗಿಸುತ್ತದೆ. ಇದನ್ನೂ ಓದಿ: ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್
ಜಿಯೋಫೋನ್ ನೆಕ್ಸ್ಟ್ ವೈಶಿಷ್ಟ್ಯಗಳು: ವಾಯ್ಸ್ ಅಸಿಸ್ಟೆಂಟ್
ಬಳಕೆದಾರರು ತಮ್ಮ ಸಾಧನವನ್ನು ನಿರ್ವಹಿಸಲು (ಆಪ್ ತೆರೆಯುವುದು, ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು ಇತ್ಯಾದಿ) ಮತ್ತು ತಮಗೆ ತಿಳಿದಿರುವ ಭಾಷೆಯಲ್ಲಿ ಅಂತರಜಾಲದಿಂದ ಮಾಹಿತಿ/ಕಂಟೆಂಟ್ ಅನ್ನು ಸುಲಭವಾಗಿ ಪಡೆದುಕೊಳ್ಳಲು ವಾಯ್ಸ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಇದನ್ನೂ ಓದಿ: ಜಿಯೋ ಫೋನ್ ನೆಕ್ಸ್ಟ್ ಹೇಗೆ ತಯಾರಾಗುತ್ತಿದೆ? – ತಿರುಪತಿ ಫ್ಯಾಕ್ಟರಿಯ ವಿಡಿಯೋ ರಿಲೀಸ್
ರೀಡ್ ಅಲೌಡ್
ಆಲಿಸುವ (ʼಲಿಸನ್’) ಸೌಲಭ್ಯವು ಯಾವುದೇ ಪರದೆಯ ಮೇಲಿರುವ ವಿಷಯವನ್ನು ಬಳಕೆದಾರರಿಗೆ ಓದಿ ಹೇಳುತ್ತದೆ. ತಮಗೆ ಅರ್ಥವಾಗುವ ಭಾಷೆಯಲ್ಲಿ ಕೇಳುವ ಮೂಲಕ ಕಂಟೆಂಟ್ ಅನ್ನು ಪಡೆದುಕೊಳ್ಳಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.
ಅನುವಾದ
ಅನುವಾದ ಸೌಲಭ್ಯವು ಯಾವುದೇ ಪರದೆಯನ್ನು ಬಳಕೆದಾರರ ಆಯ್ಕೆಯ ಭಾಷೆಗೆ ಅನುವಾದಿಸಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.
ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ
ಈ ಸಾಧನದಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲದೇ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಹಬ್ಬಗಳ ಜೊತೆಗೂಡಿ ಚಿತ್ರಗಳ ಅಂದ ಹೆಚ್ಚಿಸಲು ಕ್ಯಾಮೆರಾ ಆಪ್‌ನಲ್ಲಿ ವಿಶಿಷ್ಟವಾದ ಭಾರತೀಯ ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳನ್ನು ನೀಡಲಾಗಿದೆ.
ಪ್ರಿಲೋಡೆಡ್ ಜಿಯೋ ಮತ್ತು ಗೂಗಲ್ ಆಪ್‌ಗಳು
ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.
ಸ್ವಯಂಚಾಲಿತ ಸಾಫ್ಟ್‌ವೇರ್ ಅಪ್‌ಗ್ರೇಡ್
ಸ್ವಯಂಚಾಲಿತ ಸಾಫ್ಟ್‌ವೇರ್ ಅಪ್‌ಡೇಟ್‌ಗಳೊಂದಿಗೆ ಜಿಯೋಫೋನ್ ನೆಕ್ಸ್ಟ್ ಯಾವಾಗಲೂ ಅಪ್-ಟು-ಡೇಟ್ ಆಗಿರುತ್ತದೆ. ಇತ್ತೀಚಿನ ವೈಶಿಷ್ಟ್ಯಗಳನ್ನು ಸ್ವಯಂಚಾಲಿತವಾಗಿ ಒದಗಿಸಲಾಗುವುದರಿಂದ ಬಳಕೆದಾರರ ಅನುಭವವು ಕಾಲಕ್ರಮೇಣ ಉತ್ತಮಗೊಳ್ಳುತ್ತಲೇ ಇರುತ್ತದೆ. ರೇಜಿಗೆಯಿಲ್ಲದ ಅನುಭವವನ್ನು ಖಾತ್ರಿಪಡಿಸುವುದಕ್ಕಾಗಿ ಭದ್ರತಾ ಅಪ್‌ಡೇಟ್‌ಗಳನ್ನೂ ನೀಡಲಾಗುತ್ತದೆ.
ಅದ್ಭುತ ಬ್ಯಾಟರಿ ಲೈಫ್
ಆಂಡ್ರಾಯ್ಡ್‌ನಿಂದ ಚಾಲಿತವಾದ, ಹೊಸದಾಗಿ ವಿನ್ಯಾಸಗೊಳಿಸಲಾದ ಪ್ರಗತಿ ಓಎಸ್, ದೀರ್ಘಾವಧಿಯ ಬ್ಯಾಟರಿ ಬಾಳಿಕೆಯನ್ನು ಖಚಿತಪಡಿಸುವುದಲ್ಲದೆ ಅತ್ಯುತ್ತಮ ಕಾರ್ಯಕ್ಷಮತೆಯನ್ನೂ ನೀಡುತ್ತದೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರ ಪುತ್ರಿ, ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ ಅವರು ಪ್ರತಿಷ್ಠಿತ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಗೆ ಟ್ರಸ್ಟಿಯಾಗಿ ನೇಮಕವಾಗಿದ್ದಾರೆ. ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯು ಅಮೆರಿಕ ಮೂಲದ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರಮುಖ ಭಾಗವಾಗಿದೆ.
ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ಜಿ ರಾಬರ್ಟ್ಸ್, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತ ಮಂಡಳಿಯು ಸೆಪ್ಟೆಂಬರ್ 23 ರಂದು ಇಶಾ ಅಂಬಾನಿ ಅವರ ನೇಮಕಾತಿಗೆ ಅನುಮೋದನೆ ನೀಡಿದೆ.
ನಾಲ್ಕು ವರ್ಷಗಳವರೆಗೆ ಇಶಾ ಅಂಬಾನಿ ಅವರು ಟ್ರಸ್ಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಡಾ. ವಿಜಯ್ ಆನಂದ್ ಅವರನ್ನು ಮಂಡಳಿಯ ಉಪಾಧ್ಯಕ್ಷರನ್ನಾಗಿ, ರಾಯಭಾರಿ ಪಮೇಲಾ ಎಚ್. ಸ್ಮಿತ್ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
1923 ರಲ್ಲಿ ಫ್ರೀರ್ ಗ್ಯಾಲರಿ ಆಫ್ ಆರ್ಟ್ ಆಗಿ ಪ್ರಾರಂಭವಾದಾಗಿನಿಂದ ತನ್ನ ಅತ್ಯಪರೂಪದ ಸಂಗ್ರಹ ಮತ್ತು ಅದರ ಶತಮಾನದಷ್ಟು ಹಿಂದಿನ ವಿಶೇಷ ಸಂಗ್ರಹಗಳು, ಪ್ರದರ್ಶನಗಳು, ಸಂಶೋಧನಾ ಕಲೆಗಳ ಸಂರಕ್ಷಣೆ ಮತ್ತು ಸಂರಕ್ಷಣಾ ವಿಜ್ಞಾನದ ದೀರ್ಘ ಸಂಪ್ರದಾಯ ಶ್ರೇಷ್ಠತೆಗಾಗಿ ಅಂತರಾಷ್ಟ್ರೀಯ ಪ್ರಖ್ಯಾತಿ ಹೊಂದಿದೆ. ಇದನ್ನೂ ಓದಿ: ಜಿಯೋ ಫೋನ್ ನೆಕ್ಸ್ಟ್ ಹೇಗೆ ತಯಾರಾಗುತ್ತಿದೆ? – ತಿರುಪತಿ ಫ್ಯಾಕ್ಟರಿಯ ವಿಡಿಯೋ ರಿಲೀಸ್
2023ರಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಇಶಾ ಅಂಬಾನಿ ಅವರನ್ನು ಟ್ರಸ್ಟಿಯಾಗಿ ನೇಮಕ ಮಾಡಿರುವುದು ವಿಶೇಷ. ಶಮಾನೋತ್ಸವ ಸಂಭ್ರಮವು ವಸ್ತುಸಂಗ್ರಹಾಲಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಮುಂದಿನ ಪೀಳಿಗೆಗೆ ವಸ್ತುಸಂಗ್ರಹಾಲಯವನ್ನು ಕಾಪಾಡುವ, ಸಂರಕ್ಷಿಸುವ ಮತ್ತು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ನ ಅಂಗಸಂಸ್ಥೆಯ ನಿರ್ದೇಶಕಿಯಾಗಿರುವ ಇಶಾ ಅಂಬಾನಿ, ಭಾರತದಲ್ಲಿ ತ್ವರಿತಗತಿ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2016ರಲ್ಲಿ 4ಜಿ ಸೇವೆಯು ಅತ್ಯಂತ ಕಡಮೆ ದರದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಶ್ರಮಿಸಿದ್ದಾರೆ. 44 ಕೋಟಿ ಚಂದಾದಾರನ್ನು ಹೊಂದಿರುವ ರಿಲಯನ್ಸ್ ಜಿಯೋ 20 ಬಿಲಿಯನ್ ಡಾಲರ್ ಬಂಡವಾಳ ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಭಾಗವಾಗಿದೆ. ಹೊಸತಲೆಮಾರಿನ ತಾಂತ್ರಜ್ಞಾನ ಆಧರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖಪಾತ್ರ ವಹಿಸಿರುವ ಇಶಾ ಅಂಬಾನಿ, ಅಜಿಯೋಡಾಟ್ಕಾಮ್ ನ ಶಕ್ತಿಯೂ ಆಗಿದ್ದಾರೆ. ಜಿಯೋಮಾರ್ಟ್ ಮೂಲಕ ಇಕಾಮರ್ಸ್ ವಿಸ್ತರಿಸುವ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಇಶಾ ಅಂಬಾನಿ ಸಾಮಾಜಿಕ ಸೇವೆಗಾಗಿ ತೊಡಗಿಸಿಕೊಂಡಿರುವ ದೇಶದ ಅತಿದೊಡ್ಡ ಸೇವಾಸಂಸ್ಥೆ ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಯ ಪ್ರಕಟಣೆ ತಿಳಿಸಿದೆ.
ಇಶಾ ಅವರ ದೃಷ್ಟಿ ಮತ್ತು ಕಲೆಗಳ ಮೇಲಿನ ಉತ್ಸಾಹವು ಸ್ಮಿತ್ಸೋನಿಯನ್ ಅವರ ಸಂಗ್ರಹಣೆಗಳು ಮತ್ತು ಪರಿಣತಿಯನ್ನು ಹೆಚ್ಚು ಸುಲಭವಾಗಿ ಮತ್ತು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಹಾಗೂ ಭಾರತೀಯ ಮತ್ತು ಏಷ್ಯಾ ಭಾಗದ ಕಲೆಗಳು ಮತ್ತು ಸಂಸ್ಕೃತಿಗಳ ಉತ್ತಮ ತಿಳುವಳಿಕೆ ಮತ್ತು ಆಚರಣೆಯನ್ನು ಸಕ್ರಿಯಗೊಳಿಸುವ ಪ್ರಯತ್ನಗಳನ್ನು ಉದ್ದೀಪಿಸುತ್ತದೆ ಎಂದು ನಿರೀಕ್ಷಿಸಿದ್ದೇವೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ಶ್ಲಾಘಿಸಿದೆ.
– ಮೇಕಿಂಗ್ ಆಫ್ ಜಿಯೋಫೋನ್ ನೆಕ್ಸ್ಟ್ ಅನಾವರಣ – ಗೂಗಲ್, ಕ್ವಾಲ್‌ಕಾಮ್ ಜೊತೆ ಸಮಾನ ದೂರದೃಷ್ಟಿಯ ಸಹಭಾಗಿತ್ವ
ಮುಂಬೈ: ದೀಪಾವಳಿಗೆ ಮುನ್ನ, ‘ಮೇಕಿಂಗ್ ಆಫ್ ಜಿಯೋಫೋನ್ ನೆಕ್ಸ್ಟ್’ ಕಿರುಚಿತ್ರವನ್ನು ಜಿಯೋ ಬಿಡುಗಡೆಗೊಳಿಸಿದೆ. ಇತ್ತೀಚಿನ ದಿನಗಳ ಬಹುನಿರೀಕ್ಷಿತ ಫೋನ್‌ಗಳಲ್ಲೊಂದಾದ ಜಿಯೋಫೋನ್ ನೆಕ್ಸ್ಟ್ ಅನ್ನು ಬಿಡುಗಡೆ ಮಾಡುತ್ತಿರುವುದರ ಹಿಂದಿನ ದೂರದೃಷ್ಟಿ ಮತ್ತು ಕಲ್ಪನೆಯ ಒಳನೋಟವನ್ನು ಈ ಕಿರುಚಿತ್ರವು ನೀಡುತ್ತದೆ.
5 ವರ್ಷಗಳಷ್ಟು ಕಡಿಮೆ ಅವಧಿಯಲ್ಲಿ, ಜಿಯೋ ಭಾರತದಲ್ಲಿ ಮನೆಮಾತಾಗಿದ್ದು, 43 ಕೋಟಿ ಬಳಕೆದಾರರೊಂದಿಗೆ, ಅದರ ಸೇವೆಗಳು ವಿವಿಧ ಪ್ರದೇಶಗಳಲ್ಲಿ, ಆರ್ಥಿಕ ಹಾಗೂ ಸಾಮಾಜಿಕ ವರ್ಗಗಳಲ್ಲಿ ವಿಸ್ತರಿಸಿವೆ. ಜಿಯೋಫೋನ್ ನೆಕ್ಸ್ಟ್‌ನೊಂದಿಗೆ, ಜಿಯೋ ಭಾರತದಲ್ಲಿ ಡಿಜಿಟಲ್ ಸಂಪರ್ಕವನ್ನು ಪ್ರಜಾತಂತ್ರೀಕರಿಸುವ ದೃಷ್ಟಿಕೋನದ ಕಡೆಗೆ ನಿರ್ಣಾಯಕ ಹೆಜ್ಜೆ ಇಡಲು ಯೋಜಿಸಿದೆ.
ಜಿಯೋಫೋನ್ ನೆಕ್ಸ್ಟ್ ಅನ್ನು ಭಾರತದಲ್ಲಿ, ಭಾರತಕ್ಕಾಗಿ ಹಾಗೂ ಭಾರತೀಯರಿಂದ ನಿರ್ಮಿಸಲಾಗಿದೆ. ಭಾರತೀಯರೆಲ್ಲರೂ ಡಿಜಿಟಲ್ ತಂತ್ರಜ್ಞಾನಕ್ಕೆ ಸಮಾನ ಅವಕಾಶ ಮತ್ತು ಸಮಾನ ಪ್ರವೇಶವನ್ನು ಪಡೆಯುವುದನ್ನು ಜಿಯೋಫೋನ್ ನೆಕ್ಸ್ಟ್ ಖಚಿತಪಡಿಸುತ್ತದೆ. ಲಕ್ಷಾಂತರ ಭಾರತೀಯರ ಜೀವನವನ್ನು ಬದಲಿಸಲು ಜಿಯೋಫೋನ್ ನೆಕ್ಸ್ಟ್ ಹೇಗೆ ಸನ್ನದ್ಧವಾಗಿದೆ ಎನ್ನುವುದನ್ನು ಈ ಕಿರುಚಿತ್ರ ಪರಿಚಯಿಸುತ್ತದೆ. ಇದನ್ನೂ ಓದಿ: ಜಿಯೋ-ಬಿಪಿ ಮೊದಲ ಮೊಬಿಲಿಟಿ ಸ್ಟೇಷನ್ ಆರಂಭ- ಇವಿ ಚಾರ್ಜಿಂಗ್, ಬ್ಯಾಟರಿ ಸ್ವಾಪ್
ಆಂಡ್ರಾಯ್ಡ್‌ನಿಂದ ಸಶಕ್ತವಾದ ಪ್ರಗತಿ ಓಎಸ್ ಭಾರತಕ್ಕಾಗಿ ರೂಪಿಸಲಾದ ಒಂದು ವಿಶ್ವದರ್ಜೆಯ ಆಪರೇಟಿಂಗ್ ಸಿಸ್ಟಂ ಆಗಿದ್ದು, ಜಿಯೋಫೋನ್ ನೆಕ್ಸ್ಟ್‌ನ ಹೃದಯದಲ್ಲಿದೆ. ಕೈಗೆಟುಕುವ ಬೆಲೆಯಲ್ಲಿ ನೈಜ ತೊಡಕಿಲ್ಲದ ಅನುಭವವನ್ನು ನೀಡುವುದರೊಂದಿಗೆ ಎಲ್ಲರಿಗೂ ಪ್ರಗತಿ ತರುವ ಉದ್ದೇಶದಿಂದ ಜಿಯೊ ಮತ್ತು ಗೂಗಲ್‌ನ ಅತ್ಯುತ್ತಮ ಪ್ರತಿಭೆಗಳು ಫೋನ್ ರೂಪಿಸಿದ್ದಾರೆ.
ತಂತ್ರಜ್ಞಾನ ಕ್ಷೇತ್ರದ ಇನ್ನೊಂದು ಮುಂಚೂಣಿ ಸಂಸ್ಥೆಯಾದ ಕ್ವಾಲ್‌ಕಾಮ್ ಜಿಯೋಫೋನ್ ನೆಕ್ಸ್ಟ್‌ನ ಪ್ರಾಸೆಸರ್ ಅನ್ನು ರೂಪಿಸಿದೆ. ಸಾಧನದ ಕಾರ್ಯಕ್ಷಮತೆ, ಆಡಿಯೋ ಮತ್ತು ಬ್ಯಾಟರಿಯಲ್ಲಿ ಆಪ್ಟಿಮೈಸೇಶನ್ ಜೊತೆಗೆ ಆಪ್ಟಿಮೈಸ್ಡ್ ಕನೆಕ್ಟಿವಿಟಿ ಮತ್ತು ಲೊಕೇಶನ್ ತಂತ್ರಜ್ಞಾನಗಳನ್ನು ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಕ್ವಾಲ್‌ಕಾಮ್ ಪ್ರಾಸೆಸರ್‌ನ ಒದಗಿಸುತ್ತದೆ. ಜಿಯೋಫೋನ್ ನೆಕ್ಸ್ಟ್‌ನ ವೈವಿಧ್ಯಮಯ ಫೀಚರ್‌ಗಳು ತಂತ್ರಜ್ಞಾನದೊಂದಿಗೆ ಸಂಪೂರ್ಣ ಹೊಸ ರೀತಿಯ ಸಂವಹನವನ್ನು ಸಾಧ್ಯವಾಗಿಸುತ್ತವೆ. ಇದನ್ನೂ ಓದಿ: ಉದ್ಯೋಗಿಗಳ ಬೆಸ್ಟ್ ಕಂಪನಿ ಔಟ್ – ಭಾರತದ ಯಾವ ಕಂಪನಿಗೆ ಎಷ್ಟನೇ ಸ್ಥಾನ?
ಜಿಯೋಫೋನ್ ನೆಕ್ಸ್ಟ್ ವೈಶಿಷ್ಟ್ಯಗಳು: ವಾಯ್ಸ್ ಅಸಿಸ್ಟೆಂಟ್
ಬಳಕೆದಾರರು ತಮ್ಮ ಸಾಧನವನ್ನು ನಿರ್ವಹಿಸಲು (ಆಪ್ ತೆರೆಯುವುದು, ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು ಇತ್ಯಾದಿ) ಮತ್ತು ತಮಗೆ ತಿಳಿದಿರುವ ಭಾಷೆಯಲ್ಲಿ ಅಂತರಜಾಲದಿಂದ ಮಾಹಿತಿ/ಕಂಟೆಂಟ್ ಅನ್ನು ಸುಲಭವಾಗಿ ಪಡೆದುಕೊಳ್ಳಲು ವಾಯ್ಸ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ.
ರೀಡ್ ಅಲೌಡ್
ಆಲಿಸುವ (ʼಲಿಸನ್’) ಸೌಲಭ್ಯವು ಯಾವುದೇ ಪರದೆಯ ಮೇಲಿರುವ ವಿಷಯವನ್ನು ಬಳಕೆದಾರರಿಗೆ ಓದಿ ಹೇಳುತ್ತದೆ. ತಮಗೆ ಅರ್ಥವಾಗುವ ಭಾಷೆಯಲ್ಲಿ ಕೇಳುವ ಮೂಲಕ ಕಂಟೆಂಟ್ ಅನ್ನು ಪಡೆದುಕೊಳ್ಳಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.
ಅನುವಾದ
ಅನುವಾದ ಸೌಲಭ್ಯವು ಯಾವುದೇ ಪರದೆಯನ್ನು ಬಳಕೆದಾರರ ಆಯ್ಕೆಯ ಭಾಷೆಗೆ ಅನುವಾದಿಸಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.
ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ
ಈ ಸಾಧನದಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲದೇ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಹಬ್ಬಗಳ ಜೊತೆಗೂಡಿ ಚಿತ್ರಗಳ ಅಂದ ಹೆಚ್ಚಿಸಲು ಕ್ಯಾಮೆರಾ ಆಪ್‌ನಲ್ಲಿ ವಿಶಿಷ್ಟವಾದ ಭಾರತೀಯ ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳನ್ನು ನೀಡಲಾಗಿದೆ.
ಪ್ರಿಲೋಡೆಡ್ ಜಿಯೋ ಮತ್ತು ಗೂಗಲ್ ಆಪ್‌ಗಳು
ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.
ಸ್ವಯಂಚಾಲಿತ ಸಾಫ್ಟ್‌ವೇರ್ ಅಪ್‌ಗ್ರೇಡ್
ಸ್ವಯಂಚಾಲಿತ ಸಾಫ್ಟ್‌ವೇರ್ ಅಪ್‌ಡೇಟ್‌ಗಳೊಂದಿಗೆ ಜಿಯೋಫೋನ್ ನೆಕ್ಸ್ಟ್ ಯಾವಾಗಲೂ ಅಪ್-ಟು-ಡೇಟ್ ಆಗಿರುತ್ತದೆ. ಇತ್ತೀಚಿನ ವೈಶಿಷ್ಟ್ಯಗಳನ್ನು ಸ್ವಯಂಚಾಲಿತವಾಗಿ ಒದಗಿಸಲಾಗುವುದರಿಂದ ಬಳಕೆದಾರರ ಅನುಭವವು ಕಾಲಕ್ರಮೇಣ ಉತ್ತಮಗೊಳ್ಳುತ್ತಲೇ ಇರುತ್ತದೆ. ರೇಜಿಗೆಯಿಲ್ಲದ ಅನುಭವವನ್ನು ಖಾತ್ರಿಪಡಿಸುವುದಕ್ಕಾಗಿ ಭದ್ರತಾ ಅಪ್‌ಡೇಟ್‌ಗಳನ್ನೂ ನೀಡಲಾಗುತ್ತದೆ.
ಅದ್ಭುತ ಬ್ಯಾಟರಿ ಲೈಫ್
ಆಂಡ್ರಾಯ್ಡ್‌ನಿಂದ ಚಾಲಿತವಾದ, ಹೊಸದಾಗಿ ವಿನ್ಯಾಸಗೊಳಿಸಲಾದ ಪ್ರಗತಿ ಓಎಸ್, ದೀರ್ಘಾವಧಿಯ ಬ್ಯಾಟರಿ ಬಾಳಿಕೆಯನ್ನು ಖಚಿತಪಡಿಸುವುದಲ್ಲದೆ ಅತ್ಯುತ್ತಮ ಕಾರ್ಯಕ್ಷಮತೆಯನ್ನೂ ನೀಡುತ್ತದೆ.
ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಜಸ್ಟ್ ಡಯಲ್ ಕಂಪನಿಯನ್ನು ಖರೀದಿಸಲು ಮುಂದಾಗಿದೆ. ಒಟ್ಟು 6,600 ಕೋಟಿ ರೂ. ಖರೀದಿ ಸಂಬಂಧ ಎರಡು ಕಂಪನಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
25 ವರ್ಷದ ಹಳೆಯ ಕಂಪನಿಯಾಗಿರುವ ಜಸ್ಟ್ ಡಯಲ್ ಬೋರ್ಡ್ ಸಭೆ ನಾಳೆ ನಡೆಯಲಿದ್ದು, ನಾಳೆಯೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಭಾರತದ ಲೋಕಲ್ ಸರ್ಚ್ ಇಂಜಿನ್ ಆಗಿರುವ ಜಸ್ಟ್ ಡಯಲ್, ಆನ್ ಲೈನ್ ಶಾಪಿಂಗ್, ಹೋಟೆಲ್, ಸಿನಿಮಾ, ಬಸ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ.
ಜಸ್ಟ್ ಡಯಲ್ ಸಂಸ್ಥಾಪಕ ವಿಎಸ್‍ಎಸ್ ಮಣಿ ಮತ್ತು ಕುಟುಂಬದ ಸದಸ್ಯರು ಕಂಪನಿಯಲ್ಲಿ ಶೇ.35.5 ಪಾಲು ಹೊಂದಿದ್ದಾರೆ. ಕಂಪನಿ ಒಟ್ಟು 2,387 ಕೋಟಿ ರೂ. ಮೌಲ್ಯವನ್ನು ಹೊಂದಿದೆ.
ನವದೆಹಲಿ: ನೈಜ ಜಗತ್ತಿನ ಕೆಲಸದ ಹೊರೆ ಹಾಗೂ ಮಾಹಿತಿ ರವಾನೆಯ ಪರಿಸ್ಥಿತಿಗಳಿಗಾಗಿ ಕ್ಲೌಡ್-ಆಧಾರಿತ 5ಜಿ ಸ್ಟಾಂಡ್ ಅಲೋನ್ ಕೋರ್ ನೆಟ್‌ವರ್ಕ್ ಪರೀಕ್ಷಿಸಲು ಜಿಯೋ ಪ್ಲಾಟ್‌ಫಾರ್ಮ್ಸ್‌ನೊಂದಿಗೆ ಕೈಜೋಡಿಸಿರುವುದಾಗಿ ಐಟಿ ಸಂಸ್ಥೆ ಸ್ಪೈರೆಂಟ್ ಕಮ್ಯುನಿಕೇಷನ್ಸ್ ತಿಳಿಸಿದೆ.
ಕೋರ್ ನೆಟ್‌ವರ್ಕ್ ಸಾಮರ್ಥ್ಯ ಪರೀಕ್ಷೆಗಳನ್ನು ನಿರ್ವಹಿಸಲು, ಡಿವೈಸ್ ಡೇಟಾ ಥ್ರೂಪುಟ್ ಅಳೆಯಲು ಹಾಗೂ ವಿವಿಧ ರೀತಿಯ ಸಂಕೀರ್ಣ ಅಂತಿಮ-ಬಳಕೆದಾರ ಕರೆ ಮಾದರಿಗಳು ಮತ್ತು ಮೊಬಿಲಿಟಿ ಸನ್ನಿವೇಶಗಳನ್ನು ರೂಪಿಸಲು ಜಿಯೋ ತನ್ನ ಲ್ಯಾಂಡ್‌ಸ್ಲೈಡ್ ವೇದಿಕೆಯನ್ನು ಬಳಸಿದೆಯೆಂದು ಸ್ಪೈರೆಂಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಸ್ಪೈರೆಂಟ್ ಜೊತೆಗಿನ ನಮ್ಮ ಸಹಯೋಗವು ಈ ಉದ್ದೇಶವನ್ನು ಸಾಧಿಸುವಲ್ಲಿ ಒಂದು ಪ್ರಮುಖ ಭಾಗವಾಗಿದೆ. ಕಾರ್ಯಸಾಮರ್ಥ್ಯ ಮತ್ತು ಕ್ಷಮತೆಗಾಗಿ 5ಜಿ ಕೋರ್ ನೆಟ್‌ವರ್ಕ್‌ಗಳನ್ನು ವ್ಯಾಲಿಡೇಟ್ ಮಾಡಲು ಲ್ಯಾಂಡ್‌ಸ್ಲೈಡ್ ಜಾಗತಿಕವಾಗಿ ಒಂದು ಗೋಲ್ಡನ್ ರೆಫರೆನ್ಸ್ ಆಗಿದ್ದು, ಇದು 5ಜಿ ಸ್ಟಾಂಡ್ ಅಲೋನ್ ಕೋರ್ ನೆಟ್‌ವರ್ಕ್‌ನ ಪ್ರತಿಯೊಂದು ಅಂಶವನ್ನೂ ಯಶಸ್ವಿಯಾಗಿ ವ್ಯಾಲಿಡೇಟ್ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಜಿಯೋ 5ಜಿ ಪರಿಹಾರಗಳೊಂದಿಗೆ 5ಜಿ ಬಳಕೆಯ ವೈವಿಧ್ಯಮಯ ಪ್ರಕರಣಗಳನ್ನು ವ್ಯಾಲಿಡೇಟ್ ಮಾಡುವುದಕ್ಕಾಗಿ ಲ್ಯಾಂಡ್‌ಸ್ಲೈಡ್‌ನ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಜಿಯೋ ಪ್ಲಾಟ್‌ಫಾರ್ಮ್ಸ್ ಹಿರಿಯ ಉಪಾಧ್ಯಕ್ಷ ಆಯುಷ್ ಭಟ್ನಾಗರ್ ಹೇಳಿದ್ದಾರೆ. ಇದನ್ನೂ ಓದಿ : ಜಿಯೋದಿಂದ ಬರುತ್ತೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ – ಬೆಲೆ ಎಷ್ಟು? ವಿಶೇಷತೆ ಏನು? ಕಡಿಮೆ ಬೆಲೆಗೆ ಹೇಗೆ ಸಿಗುತ್ತೆ?
ಎಲ್ಲ ಅಂತರಜಾಲ-ಆಧಾರಿತ ಸೇವೆಗಳನ್ನು ನೀಡಲು ಬಳಕೆಯಾಗುವ ಎಲ್‌ಟಿಇ 4ಜಿ ಮತ್ತು ಐಪಿ ಮಲ್ಟಿಮೀಡಿಯಾ ಉಪವ್ಯವಸ್ಥೆಯ ಸಂಪರ್ಕಸಾಧನಗಳನ್ನು ಬೆಂಬಲಿಸುತ್ತಲೇ ಜಿಯೋ ತನ್ನ ಆಂತರಿಕ 5ಜಿ ಕೋರ್ ನೆಟ್‌ವರ್ಕ್ ಕಾರ್ಯಗಳಲ್ಲಿ ಕ್ಷಮತೆಯನ್ನು ವ್ಯಾಲಿಡೇಟ್ ಮಾಡಬೇಕಾದ ಅಗತ್ಯವಿತ್ತು ಎಂದು ಸ್ಪೈರೆಂಟ್‌ನ ಉಪಾಧ್ಯಕ್ಷ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶದ ಜನರಲ್ ಮ್ಯಾನೇಜರ್ ಪೀಟರ್ ಟಾನ್ ಹೇಳಿದ್ದಾರೆ.
“5ಜಿ ಕೋರ್‌ನಾದ್ಯಂತ ಇಂಟರ್‌ಫೇಸ್‌ಗಳನ್ನು ಬೆಂಬಲಿಸುವ ಮೂಲಕ ಲ್ಯಾಂಡ್‌ಸ್ಲೈಡ್ ಇದಕ್ಕೆ ಆದರ್ಶ ಪರಿಹಾರವನ್ನು ಒದಗಿಸಿತು,” ಎಂದೂ ಅವರು ತಿಳಿಸಿದ್ದಾರೆ.
ದೆಹಲಿ, ಮುಂಬೈ, ಗುಜರಾತ್ ಮತ್ತು ಹೈದರಾಬಾದ್‌ನಲ್ಲಿ 5ಜಿ ಪರೀಕ್ಷೆಗಳಿಗೆ ಜಿಯೋ ಪರವಾನಗಿ ಪಡೆದಿದೆ. ಮುಖೇಶ್ ಅಂಬಾನಿ ನೇತೃತ್ವದ ದೂರಸಂಪರ್ಕ ಸಂಸ್ಥೆ ಪರೀಕ್ಷೆಯ ಸಮಯದಲ್ಲಿ ಸೆಕೆಂಡಿಗೆ 1 ಗಿಗಾಬಿಟ್‌ಗಿಂತ ಹೆಚ್ಚಿನ ಡೇಟಾ ವೇಗವನ್ನು ಸಾಧಿಸಿದೆ ಎಂದು ಜಿಯೋ ಪಾಲುದಾರ ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ಹೇಳಿದೆ.
ಮುಂಬೈ: ಕಡಿಮೆ ಬೆಲೆಯಲ್ಲಿ ಡೇಟಾ, ಕಡಿಮೆ ಬೆಲೆಯ ಫೋನ್ ನೀಡಿದ ಬಳಿಕ ಜಿಯೋ ಕಂಪನಿ ಈಗ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ,
ಈ ಲ್ಯಾಪ್‌ಟಾಪ್‌ಗೆ ಜಿಯೋಬುಕ್ ಎಂದು ಹೆಸರನ್ನು ಇಡಲಾಗಿದ್ದು ಕಸ್ಟಮೈಸ್ಡ್ ಆಂಡ್ರಾಯ್ಡ್ ಓಎಸ್ ಇರಲಿದೆ. ಇದರಲ್ಲಿ ಜಿಯೋ ಅಪ್‌ಗಳು ಇನ್ ಬಿಲ್ಟ್ ಇರಲಿದ್ದು 4ಜಿ ಎಲ್‌ಟಿಇ ಬೆಂಬಲ ನೀಡಲಿದೆ ಎಂದು ʼಎಕ್ಸ್‌ಡಿಎ ಡೆವಲಪರ್ಸ್ʼ ವರದಿ ಮಾಡಿದೆ.
ಕೊರೊನಾ ಸಮಯದಲ್ಲಿ ಫೋನ್ ಮೂಲಕ ವ್ಯವಹಾರ ನಡೆಸುತ್ತಿರುವ ಗ್ರಾಹಕರ ಗಮನದಲ್ಲಿಟ್ಟುಕೊಂಡು ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ.
ಮಾಧ್ಯಮಗಳಲ್ಲಿ ಪ್ರಕಟವಾದಂತೆ ಚೀನಾದ ಬ್ಲೂಬ್ಯಾಂಕ್ ಕಮ್ಯೂನಿಕೇಷನ್ ಟೆಕ್ನಾಲಜಿ ಜೊತೆ ಸೇರಿ ಈ ಲ್ಯಾಪ್‌ಟಾಪ್ ತಯಾರಿಸಲು ಮಾತುಕತೆ ನಡೆದಿದೆ. ಈಗಾಗಲೇ ಜಿಯೋ ಫೋನ್ ಮಾದರಿಯನ್ನು ಈ ಕಂಪನಿ ತಯಾರಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲೇ ಈ ಯೋಜನೆ ಆರಂಭವಾಗಿದ್ದು, ಉತ್ಪನ್ನ ಈಗ ಅಂತಿಮ ಹಂತದಲ್ಲಿದೆ. ಏಪ್ರಿಲ್ ವೇಳೆಗೆ ಉತ್ಪನ್ನದ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಬಿಡುಗಡೆಯಾದ ಚಿತ್ರದಲ್ಲಿ ವಿಂಡೋಸ್ ಕೀ ಇದೆ. ಆದರೆ ಇದು ವಿಂಡೋಸ್ ಕೀ ಅಲ್ಲ.
ಈ ಲ್ಯಾಪ್‌ಟಾಪ್ ಬೆಲೆ ಎಷ್ಟಿರಲಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ಬಜೆಟ್ ಸೆಗ್ಮೆಂಟ್ ದರದಲ್ಲಿ ಇರಲಿದೆ ಎನ್ನಲಾಗುತ್ತಿದೆ.
ಕೊರೊನಾ ವೈರಸ್ ಬಂದ ನಂತರ ಕಚೇರಿಗಳು ಮುಚ್ಚಲ್ಪಟ್ಟಿದ್ದು ಮನೆಯಿಂದಲೇ ಕೆಲಸಗಳು ನಡೆಯುತ್ತಿದೆ. ಹೀಗಾಗಿ ಲ್ಯಾಪ್‌ಟಾಪ್‌ಗಳ ಬೇಡಿಕೆ ದಿಢೀರ್ ಹೆಚ್ಚಾಗಿದೆ. ಇದರಿಂದಾಗಿ ಡೆಲ್, ಎಚ್‌ಪಿ ಮತ್ತು ಲೆನೆವೊ ಕಂಪನಿಗಳು ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಭಾರೀ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡಿದೆ. ಈ ಕಾರಣಕ್ಕೆ ಜಿಯೋ ಈಗ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ನಿರ್ಮಾಣಕ್ಕೆ ಮುಂದಾಗಿದೆ.
ಮುಂಬೈ: ಹೊಸ ವರ್ಷಕ್ಕೆ ಜಿಯೋ ಬಳಕೆದಾರರಿಗೆ ಗಿಫ್ಟ್ ಸಿಕ್ಕಿದೆ. 2021 ಜನವರಿ 1 ರಿಂದ ಭಾರತದಲ್ಲಿ ಜಿಯೋದಿಂದ ಇತರ ಟೆಲಿಕಾಂ ಕಂಪನಿಗಳಿಗೆ ಹೋಗುವ ಎಲ್ಲ ಕರೆಗಳು ಉಚಿತವಾಗಲಿದೆ.
ಜಿಯೋದಿಂದ ಜಿಯೋ ಸಿಮ್‌ಗೆ ಹೋಗುವ ಕರೆಗಳು ಉಚಿತವಾಗಿತ್ತು. ಆದರೆ ಜಿಯೋದಿಂದ ಇತರೆ ಟೆಲಿಕಾಂ ಕಂಪನಿಯ ಸಿಮ್‌ಗೆ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸುತ್ತಿತ್ತು. ಆದರೆ ಈಗ ಹೊರ ಹೋಗುವ ಕರೆಗಳಿಗಿದ್ದ ದರವನ್ನು ತೆಗೆದು ಹಾಕಿದೆ.
ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) 2021ರ ಜನವರಿ ಒಂದರಿಂದ ದೇಶದ ಒಳಗಡೆ ಮಾಡಲಾಗುವ ಕರೆಗಳಿಗೆ ವಿಧಿಸಲಾಗುತ್ತಿದ್ದ ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ಕೊನೆಗೊಳಿಸಬೇಕೆಂದು ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಜಿಯೋ ಪಾಲಿಸುವುದಾಗಿ ತಿಳಿಸಿದೆ.
ಜಿಯೋ ಸೇವೆ ಆರಂಭಗೊಂಡ ಬಳಿಕ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರ ಹೋಗುವ ಕರೆಗೆ ದರ ವಿಧಿಸುತ್ತಿರಲಿಲ್ಲ. ಆದರೆ 2019ರ ಅಕ್ಟೋಬರ್ 9 ರಂದು ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿತ್ತು. ಟ್ರಾಯ್ ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಮುಂದಾಗುತ್ತಿದ್ದೇವೆ ಎಂದು ಜಿಯೋ ಹೇಳಿತ್ತು.
ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಾ ಬಂದಿತ್ತು.
ಏನಿದು ಐಯುಸಿ?
ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್ ಕಂಪನಿಗೆ ಪಾವತಿಸಬೇಕಾಗುತ್ತದೆ.
2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಬಳಿಕ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿತ್ತು.
ಐಯುಸಿಯಿಂದಾಗಿ ಇತರೇ ಟೆಲಿಕಾಂ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. 2019ರಲ್ಲಿ ತಿಳಿಸಿದಂತೆ ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದರು. ಇದರಿಂದಾಗಿ ನಮಗೆ ಭಾರೀ ನಷ್ಟವಾಗಿದೆ ಎಂದು ಜಿಯೋ ಹೇಳಿತ್ತು.
ಈ ಹಿಂದೆ ಭಾರತಿ ಎಂಟರ್ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.
ಜಿಯೋ ವಿರೋಧ ಯಾಕೆ?
ಈ ಹಿಂದೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸಿಕೊಂಡು ಬಂದಿತ್ತು. ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸುತ್ತಿತ್ತು.