Tag: ಜಿಯೋ

  • ದೇಶದಲ್ಲಿ 5G ಸೇವೆಗೆ ಚಾಲನೆ – ಯಾವ ನಗರಗಳಲ್ಲಿ ಆರಂಭದಲ್ಲಿ ಸಿಗುತ್ತೆ? ಎಷ್ಟು ಸ್ಪೀಡ್ ಇರುತ್ತೆ?

    ದೇಶದಲ್ಲಿ 5G ಸೇವೆಗೆ ಚಾಲನೆ – ಯಾವ ನಗರಗಳಲ್ಲಿ ಆರಂಭದಲ್ಲಿ ಸಿಗುತ್ತೆ? ಎಷ್ಟು ಸ್ಪೀಡ್ ಇರುತ್ತೆ?

    ನವದೆಹಲಿ: ಬಹು ನಿರೀಕ್ಷಿತ ನೆಟ್‍ವರ್ಕ್ ಕ್ರಾಂತಿ 5ಜಿ (5G) ಸೇವೆಗಳು ಇಂದಿನಿಂದ ಭಾರತದಲ್ಲಿ ಆರಂಭವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 5ಜಿ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

    6ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022  (6th Edition of India Mobile Congress 2022 Event) ಈವೆಂಟ್‍ನಲ್ಲಿ 5ಜಿ ಸೇವೆಗಳನ್ನು ಉದ್ಘಾಟಿಸಲಾಯಿತು. ದೆಹಲಿಯ ಪ್ರಗತಿ ಮೈದಾನದಲ್ಲಿ 4 ದಿನಗಳ ಕಾಲ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಡೆಯುತ್ತಿದೆ. 5ಜಿ ಉದ್ಘಾಟನೆಯ ಬಳಿಕ ಭಾರತದಲ್ಲಿ 5ಜಿ ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ದೇಶದ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಪ್ರಾತ್ಯಕ್ಷಿಕೆ ನೀಡಿದವು. ರಿಲಯನ್ಸ್ ಜಿಯೋ ಮುಂಬೈನ ಶಾಲೆಯೊಂದರ ಶಿಕ್ಷಕರನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದ ಮೂರು ವಿಭಿನ್ನ ಸ್ಥಳಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಿ ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರ ತರುವ ಮೂಲಕ, ಅವರ ನಡುವಿನ ಭೌತಿಕ ಅಂತರವನ್ನು ಕಡಿಮೆ ಮಾಡುವ ಮೂಲಕ 5ಜಿ ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ಇದು ತೋರಿಸಿದೆ. ಇದನ್ನೂ ಓದಿ: ನಾಗಾಲ್ಯಾಂಡ್‌ನ 9 ಜಿಲ್ಲೆಗಳಲ್ಲಿ AFSPA ಜಾರಿ

    ಸ್ಕ್ರೀನ್ ಮೇಲೆ ವರ್ಧಿತ ರಿಯಾಲಿಟಿ ಎಆರ್ ಶಕ್ತಿಯನ್ನು ಪ್ರದರ್ಶಿಸುತ್ತದೆ. ಎಆರ್ ಸಾಧನದ ಅಗತ್ಯವಿಲ್ಲದೆ ದೂರದಿಂದಲೇ ದೇಶಾದ್ಯಂತ ಮಕ್ಕಳಿಗೆ ಕಲಿಸಲು ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಇದು ತೋರಿಸಿದೆ. ಏರ್‍ಟೆಲ್ ಆಪರೇಟರ್ ಉತ್ತರ ಪ್ರದೇಶದ ಹುಡುಗಿಯೊಬ್ಬಳು ವರ್ಚುವಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸಹಾಯದಿಂದ ಸೌರವ್ಯೂಹದ ಬಗ್ಗೆ ಕಲಿಯವ ಶಿಕ್ಷಣದ ಅನುಭವವನ್ನು ವೀಕ್ಷಿಸುತ್ತಾಳೆ. ಹಾಲೊಗ್ರಾಮ್ ಮೂಲಕ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹುಡುಗಿ ತನ್ನ ಕಲಿಕೆಯ ಅನುಭವವನ್ನು ಪ್ರಧಾನಿಯೊಂದಿಗೆ ಹಂಚಿಕೊಂಡಿದ್ದಾಳೆ. ವೊಡಾಫೋನ್ ಐಡಿಯಾವು (Vodafone Idea) ದೆಹಲಿ ಮೆಟ್ರೋದ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಸುರಂಗದ ಡಿಜಿಟಲ್ ಟ್ವಿನ್ ಅನ್ನು ಡಯಾಸ್‍ನಲ್ಲಿ ರಚಿಸುವ ಮೂಲಕ ಕಾರ್ಮಿಕರ ಸುರಕ್ಷತೆಯನ್ನು ಪ್ರದರ್ಶಿಸಿದೆ. ದೂರದ ಸ್ಥಳದಿಂದ ನೈಜ ಸಮಯದಲ್ಲಿ ಕಾರ್ಮಿಕರಿಗೆ ಸುರಕ್ಷತೆ ಎಚ್ಚರಿಕೆಗಳನ್ನು ನೀಡಲು ಡಿಜಿಟಲ್ ಟ್ವಿನ್ ಸಹಾಯ ಮಾಡುತ್ತದೆ. ವಿಆರ್ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ನೈಜ ಸಮಯದಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡುವ ಬಗ್ಗೆ ಇರುವ ಪ್ರಾತ್ಯಕ್ಷಿಕೆ ಇದಾಗಿತ್ತು. ಇದನ್ನೂ ಓದಿ: ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

    ಯಾವೆಲ್ಲ ನಗರದಲ್ಲಿ 5ಜಿ?:
    ದೇಶದ ಒಟ್ಟು 12 ನಗರಗಳಾದ ದೆಹಲಿ, ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ಕೋಲ್ಕತ್ತಾ, ಪುಣೆ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮನಗರ, ಲಕ್ನೋದಲ್ಲಿ ಸೇವೆ ಆರಂಭಗೊಂಡಿದೆ. ಇದನ್ನೂ ಓದಿ: ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ಕೊಟ್ರೆ ಬೀಳುತ್ತೆ 50 ಸಾವಿರ ದಂಡ,1 ವರ್ಷ ಜೈಲು

    5ಜಿ ಲಾಭಗಳೇನು?:
    5ಜಿ ತಂತ್ರಜ್ಞಾನವು ಸಾಮಾನ್ಯ ಜನರಿಗೆ ತಡೆರಹಿತ ಇಂಟರ್‌ನೆಟ್‌ ಸೇವೆ ನೀಡಲಿದೆ. ಕಡಿಮೆ ಸುಪ್ತತೆ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನಗಳನ್ನು ಒದಗಿಸಲು ಸಹಾಯ ಮಾಡಲಿದೆ. 5ಜಿ ಶತಕೋಟಿ ಇಂಟರ್‌ನೆಟ್‌ ಆಫ್ ಥಿಂಗ್ಸ್ ಡಿವೈಸ್‍ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಚಲನಶೀಲತೆಯೊಂದಿಗೆ ಉತ್ತಮ ಗುಣಮಟ್ಟದ ವೀಡಿಯೋ ಸೇವೆಗಳನ್ನು, ಟೆಲಿ-ಸರ್ಜರಿ ಮತ್ತು ಆಟೋನಾಮಸ್ ಕಾರುಗಳಂತಹ ನಿರ್ಣಾಯಕ ಸೇವೆಗಳ ವಿತರಣೆಯನ್ನು ಅನುಮತಿಸುತ್ತದೆ. 5ಜಿ ಸೇವೆ ವಿಪತ್ತುಗಳ ನೈಜ ಸಮಯದ ಮೇಲ್ವಿಚಾರಣೆ, ನಿಖರವಾದ ಕೃಷಿ, ಆಳವಾದ ಗಣಿಗಳಲ್ಲಿ, ಕಡಲಾಚೆಯ ಚಟುವಟಿಕೆಗಳಲ್ಲಿ ಅಪಾಯಕಾರಿ ಕೈಗಾರಿಕಾ ಕಾರ್ಯಾಚರಣೆಗಳಲ್ಲಿ ಮಾನವರ ಪಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈಗಿರುವ ಮೊಬೈಲ್ ಸಂವಹನ ನೆಟ್‍ವರ್ಕ್‍ಗಳಿಗಿಂತ ಭಿನ್ನವಾಗಿ, 5ಜಿ ನೆಟ್‍ವರ್ಕ್‍ಗಳು ಒಂದೇ ನೆಟ್‍ವರ್ಕ್‍ನಲ್ಲಿ ಈ ಪ್ರತಿಯೊಂದು ವಿಭಿನ್ನ ಬಳಕೆಯ ಸಂದರ್ಭಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತವೆ.

    5ಜಿ ವಿಶೇಷತೆ?:
    4ಜಿ (4G) ಗರಿಷ್ಠ ವೇಗವು 100 ಎಂಬಿಪಿಎಸ್ (ಮೆಗಾ ಬಿಟ್ಸ್ ಪರ್ ಸೆಕೆಂಡ್) ಇದ್ದರೆ, 5ಜಿಯಲ್ಲಿ ಗರಿಷ್ಠ ವೇಗವು 20ಜಿಬಿಪಿಎಸ್ (ಸೆಕೆಂಡಿಗೆ 20 ಗಿಗಾಬಿಟ್ಸ್) ವರೆಗೂ ಇದೆ. 5ಜಿ ಹೊಸ ಆರ್ಥಿಕ ಅವಕಾಶಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡಲಿದೆ. ಭಾರತೀಯ ಸಮಾಜಕ್ಕೆ ಪರಿವರ್ತನಾ ಶಕ್ತಿಯಾಗುವ ಸಾಮರ್ಥ್ಯವನ್ನು ನೀಡುತ್ತದೆ.

    ಏರ್‌ಟೆಲ್‌ (Airtel)  ಇಂದು 8 ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಶನಿವಾರ ನಾಲ್ಕು ಮಹಾನಗರಗಳು ಸೇರಿದಂತೆ ಎಂಟು ನಗರಗಳಲ್ಲಿ 5ಜಿ ಟೆಲಿಕಾಂ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಮತ್ತು ಮಾರ್ಚ್ 2024ರ ವೇಳೆಗೆ ಇಡೀ ದೇಶದಲ್ಲಿ ಹಂತಹಂತವಾಗಿ ಆವರಿಸಲಿದೆ ಎಂದು ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ (Sunil Bharti Mittal) ಭರವಸೆ ನೀಡಿದರು. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಮಾತನಾಡಿ, ತಮ್ಮ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ (Reliance Jio) ಡಿಸೆಂಬರ್ 2023ರ ವೇಳೆಗೆ ದೇಶಾದ್ಯಂತ 5ಜಿ ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿದರು.

    Live Tv
    [brid partner=56869869 player=32851 video=960834 autoplay=true]

  • ದೀಪಾವಳಿಗೆ ಜಿಯೋ ಗಿಫ್ಟ್ – 4 ಮೆಟ್ರೋ ನಗರಗಳಲ್ಲಿ 5ಜಿ ರೋಲ್‌ಔಟ್

    ದೀಪಾವಳಿಗೆ ಜಿಯೋ ಗಿಫ್ಟ್ – 4 ಮೆಟ್ರೋ ನಗರಗಳಲ್ಲಿ 5ಜಿ ರೋಲ್‌ಔಟ್

    ಮುಂಬೈ: ರಿಲಯನ್ಸ್ ಜಿಯೋ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 5ಜಿ ಸೇವೆಯನ್ನು ದೀಪಾವಳಿ ಸಂದರ್ಭ ರೋಲ್‌ಔಟ್ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಭಾರತದಲ್ಲಿ 5ಜಿ ಸೇವೆಗಳನ್ನು ಹೊರತರಲು ರಿಲಯನ್ಸ್ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಹೇಳಿದರು.

    ಮುಂದಿನ 2 ತಿಂಗಳಲ್ಲಿ ದೀಪಾವಳಿಯ ವೇಳೆಗೆ ಜಿಯೋ 5ಜಿ ಸೇವೆಗಳು ಪ್ರಾರಂಭವಾಗಲಿದೆ. ಮೊದಲಿಗೆ ದೇಶದ 4 ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ರೋಲ್‌ಔಟ್ ಪ್ರಾರಂಭವಾಗಿ, ಆಯ್ದ ಬಳಕೆದಾರರನ್ನು ತಲುಪಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ಜಿಯೋ 5ಜಿ ವಿಶ್ವದ ಅತಿದೊಡ್ಡ ಹಾಗೂ ಅತ್ಯಾಧುನಿಕ ನೆಟ್‌ವರ್ಕ್ ಆಗಲಿದೆ. 2023ರ ಡಿಸೆಂಬರ್ ವೇಳೆಗೆ ಜಿಯೋ 5ಜಿ ಸೇವೆ ದೇಶದ ಎಲ್ಲಾ ಪಟ್ಟಣ, ತಾಲೂಕು, ಹಳ್ಳಿ, ದೇಶದ ಮೂಲೆ ಮೂಲೆಯನ್ನು ತಲುಪಲಿದೆ ಎಂದು ಅಂಬಾನಿ ಹೇಳಿದ್ದಾರೆ. ಇದನ್ನೂ ಓದಿ: ಕಿರಿಯ ಪುತ್ರನಿಗಾಗಿ ದುಬೈನಲ್ಲಿ ಅತ್ಯಂತ ದುಬಾರಿ ಮನೆ ಖರೀದಿಸಿದ ಮುಖೇಶ್ ಅಂಬಾನಿ

    Live Tv
    [brid partner=56869869 player=32851 video=960834 autoplay=true]

  • 10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    10 ಸಾವಿರ ಟವರ್‌ ಮಾರಾಟಕ್ಕೆ ಮುಂದಾದ ಬಿಎಸ್‌ಎನ್‌ಎಲ್‌

    ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ 10 ಸಾವಿರ ಟೆಲಿಕಾಂ ಟವರ್‌ಗಳನ್ನು ಮಾರಾಟ ಮಾಡಲು ಮುಂದಾಗಿದೆ.

    ಕೇಂದ್ರ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ(NMP) ಭಾಗವಾಗಿ ನಿಗದಿ ಪಡಿಸಿದ ಗುರಿಗಳನ್ನು ಪೂರೈಸಲು ಟವರ್‌ ಮಾರಾಟ ಮಾಡುವ ಪ್ರಕ್ರಿಯೆಯನ್ನು ಬಿಎಸ್‌ಎನ್‌ಎಲ್‌ ಆರಂಭಿಸಿದೆ ಎಂದು ವರದಿಯಾಗಿದೆ.

    ಟವರ್‌ ಮಾರಾಟದಿಂದ 4 ಸಾವಿರ ಕೋಟಿ ರೂ. ಆದಾಯವನ್ನು ಬಿಎಸ್‌ಎನ್‌ಎಲ್‌ ನಿರೀಕ್ಷಿಸುತ್ತಿದೆ. ಮಾರಾಟ ನಿರ್ವಹಣೆಗೆ ಹಣಕಾಸು ಸಲಹೆ ಪಡೆಯಲು ಹಣಕಾಸು, ವ್ಯಾಪಾರ, ತೆರಿಗೆ ಇತ್ಯಾದಿ ಸೇವೆಗಳನ್ನು ನೀಡುತ್ತಿರುವ ಜಾಗತಿಕ ಕೆಪಿಎಂಜಿ(KPMG) ಕಂಪನಿ ಜೊತೆ ಬಿಎಸ್‌ಎನ್‌ಎಲ್‌ ಈಗ ಮಾತುಕತೆ ನಡೆಸುತ್ತಿದೆ.

    ಮುಂಬೈ ಮತ್ತು ದೆಹಲಿ ಹೊರತುಪಡಿಸಿ ದೇಶದ ಎಲ್ಲಾ ಭಾಗಗಳಲ್ಲಿ ಟೆಲಿಕಾಂ ಸೇವೆಗಳನ್ನು ಒದಗಿಸುವ ಬಿಎಸ್‌ಎನ್‌ಎಲ್‌ 68 ಸಾವಿರ ಟೆಲಿಕಾಂ ಟವರ್‌ಗಳನ್ನು ಹೊಂದಿದೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಂತಹ ಥರ್ಡ್ ಪಾರ್ಟಿ ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಹ-ಸ್ಥಳ ವ್ಯವಸ್ಥೆಯನ್ನು ಹೊಂದಿರುವ ಟವರ್‌ಗಳನ್ನು ಮಾತ್ರ ಮಾರಾಟ ಮಾಡಲು ಬಿಎಸ್‌ಎನ್‌ಎಲ್‌ ಮುಂದಾಗಿದೆ. ಇದನ್ನೂ ಓದಿ: ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : BSNL ಉದ್ಯೋಗಿಗಳಿಗೆ ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

    ಈ ವಿಚಾರದ ಬಗ್ಗೆ ಬಿಎಸ್‌ಎನ್‌ಎಲ್‌ ಮತ್ತು ಕೆಪಿಎಂಜಿಯನ್ನು ಸಂರ್ಪಕಿಸಲಾಗಿದ್ದು ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಬಿಎಸ್‌ಎನ್‌ಎಲ್‌ನ ಟವರ್ ಪೋರ್ಟ್‌ಫೋಲಿಯೊ ದೇಶದಲ್ಲೇ ಅತ್ಯುತ್ತಮವಾದದ್ದು ಎಂದು ಹೇಳಲಾಗುತ್ತದೆ. ಯಾಕೆಂದರೆ ಅದರ ಸುಮಾರು ಶೇ.70 ಟವರ್‌ಗಳು ಫೈಬರ್ ಆಗಿದ್ದು 4G ಮತ್ತು 5G ಸೇವೆಗಳ ನಿಯೋಜನೆಗೆ ಸಿದ್ಧವಾಗಿವೆ.

    ಎನ್‌ಎಂಪಿ ಗುರಿಗಳ ಭಾಗವಾಗಿ ಬಿಎಸ್‌ಎನ್‌ಎಲ್‌ 2025 ರ ಹಣಕಾಸು ವರ್ಷದ ಒಳಗಡೆ 13,567 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ ಮತ್ತು ದೆಹಲಿ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುವ ಎಂಟಿಎನ್‌ಎಲ್‌ 1,350 ಟವರ್‌ಗಳನ್ನು ಮಾರಾಟ ಮಾಡಬೇಕಾಗಿದೆ. ಒಟ್ಟಾರೆಯಾಗಿ ಎರಡು ಸರ್ಕಾರಿ ಸ್ವಾಮ್ಯದ ಟೆಲಿಕಾಂಗಳು 14,917 ಟವರ್‌ಗಳನ್ನು ಹಂತ ಹಂತವಾಗಿ ಮಾರಾಟ ಮಾಡಲಿವೆ.

    Live Tv
    [brid partner=56869869 player=32851 video=960834 autoplay=true]

  • ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಮುಂಬೈ: ಕಡಿಮೆ ಬೆಲೆಯ 4ಜಿ ಫೋನ್‌ ಬಿಡುಗಡೆ ಮಾಡಿದ್ದ ರಿಲಯನ್ಸ್‌ ಜಿಯೋ ಈಗ ಕಡಿಮೆ ಬೆಲೆಯಲ್ಲಿ 5ಜಿ ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ, ಡಿಜಿಟಲ್ ಇಂಡಿಯಾ ಕ್ರಾಂತಿಯನ್ನು ತಳ ಮಟ್ಟಕ್ಕೆ ತರಲಾಗುತ್ತದೆ. ಶೀಘ್ರದಲ್ಲೇ ನಾವು 5ಜಿ ಯುಗವನ್ನು ಪ್ರಾರಂಭಿಸುತ್ತಿದ್ದಂತೆ ಪ್ರತಿ ಹಳ್ಳಿಗಳಿಗೂ ಡಿಜಿಟಲ್ ಸಂಪರ್ಕ ಸಿಗಲಿದೆ ಎಂದು ಹೇಳಿದ್ದರು.

    ಈಗ ದೇಶದ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ 12 ಸಾವಿರ ರೂ. ಒಳಗಡೆ ಇರುವ ಫೋನ್‌ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

    5ಜಿ ಫೋನ್‌ ದರದ ಬಗ್ಗೆ ರಿಲಯನ್ಸ್‌ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ. ಸದ್ಯಕ್ಕೆ 12 ಸಾವಿರ ರೂ. ಒಳಗಡೆ ಯಾವುದೇ 5ಜಿ ಫೋನ್‌ ಲಭ್ಯವಿಲ್ಲ. ಈ ಕಾರಣಕ್ಕೆ 12 ಸಾವಿರ ರೂ. ಒಳಗಡೆ ಫೋನನ್ನು ಜಿಯೋ ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಸ್ಯಾಮ್‌ಸಂಗ್‌ 5ಜಿ ಫೋನ್‌ ಬಿಡುಗಡೆ ಮಾಡಿತ್ತು. ಎಂ 13 ಹೆಸರಿನ ಫೋನಿಗೆ 13,990 ರೂ. ದರ ನಿಗದಿಯಾಗಿತ್ತು.

    ಜಿಯೋಫೋನ್‌ ನೆಕ್ಷ್ಟ್‌ ಖರೀದಿಗೆ ನೀಡಿದಂತೆ ಈ ಫೋನ್‌ 2,500 ರೂ. ಡಿಸ್ಕೌಂಟ್‌ ದರದಲ್ಲಿ ಸಿಗುವ ಸಾಧ್ಯತೆಯಿದೆ. ಇದರ ಜೊತೆ ಆಫರ್‌ ದರದಲ್ಲಿ ಜಿಯೋ ಡೇಟಾ ಪ್ಯಾಕ್‌ ನೀಡಲಿದೆ ಎನ್ನಲಾಗುತ್ತಿದೆ.

    ಗುಣವೈಶಿಷ್ಟ್ಯ ಏನಿರಲಿದೆ?
    6.5 ಇಂಚಿನ ಎಚ್‌ಡಿ+ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇ(1600×720 ಪಿಕ್ಸೆಲ್‌), ಕ್ವಾಲಕಂ ಸ್ನಾಪ್‌ಡ್ರಾಗನ್‌ 480 5G (SM4350) ಅಕ್ಟಾ ಕೋರ್‌, 13 ಎಂಪಿ ಹಿಂದುಗಡೆ ಕ್ಯಾಮೆರಾ, 2 ಎಂಪಿ ಮ್ಯಾಕ್ರೋ ಸೆನ್ಸರ್‌, ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ಇರಲಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    2GB/4GB RAM ಮತ್ತು 32GB/64GB ಆಂತರಿಕ ಮೆಮೊರಿ ಇರಲಿದೆ. ಕ್ವಾಲಕಂ ಸ್ನಾಪ್‌ಡ್ರಾಗನ್‌ 480 5G ಪ್ರೊಸೆಸರ್‌ 2021ರ ಜನವರಿಯಲ್ಲಿ ಬಿಡುಗಡೆಯಾಗಿದ್ದು, ಎಂಟ್ರಿ ಲೆವೆಲ್‌ ಆಂಡ್ರಾಯ್ಡ್‌ ಫೋನ್‌, ಟ್ಯಾಬ್ಲೆಟ್‌ಗೆ ಬಳಕೆಯಾಗುತ್ತಿದೆ.

    ಈ ಫೋನ್‌ನಲ್ಲಿ ಜಿಯೋಫೋನ್‌ ನೆಕ್ಷ್ಟ್‌ಗೆ ನೀಡಿದಂತೆ ʼಪ್ರಗತಿʼ ಆಪರೇಟಿಂಗ್‌ ಸಿಸ್ಟಂ ಇರಲಿದೆ. ಗೂಗಲ್‌ ಮತ್ತು ಜಿಯೋ ಕಂಪನಿಗಳು ಈ ಕಸ್ಟಮೈಸ್ಡ್‌ ಆಂಡ್ರಾಯ್ಡ್‌ ಓಎಸ್‌ ತಯಾರಿಸಿವೆ.

    ಬಿಡುಗಡೆ ಯಾವಾಗ?
    ಜಿಯೋ ಈ ತಿಂಗಳಿನಲ್ಲೇ 5ಜಿ ಸೇವೆ ನೀಡುವುದಾಗಿ ಹೇಳಿದೆ. ಆರಂಭದಲ್ಲಿ ಮಹಾನಗರಗಳಲ್ಲಿ ಈ ಸೇವೆ ನೀಡಿದರೆ ಮುಂದೆ ಟಯರ್‌ 2, ಟಯರ್‌ 3 ನಗರಗಳಲ್ಲಿ ಸೇವೆ ಸಿಗಲಿದೆ. ಜಿಯೋ 5ಜಿ ಫೋನ್‌ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಜಿಯೋಫೋನ್‌ ನೆಕ್ಷ್ಟ್‌ ದೀಪಾವಳಿಯಂದು ಬಿಡುಗಡೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • 5G ನೆಟ್‌ವರ್ಕ್ ರೋಲ್‌ಔಟ್ ಸ್ಪರ್ಧೆಯಲ್ಲಿ ಟೆಲಿಕಾಂ ದೈತ್ಯಗಳು

    5G ನೆಟ್‌ವರ್ಕ್ ರೋಲ್‌ಔಟ್ ಸ್ಪರ್ಧೆಯಲ್ಲಿ ಟೆಲಿಕಾಂ ದೈತ್ಯಗಳು

    ನವದೆಹಲಿ: 5ಜಿ ನೆಟ್‌ವರ್ಕ್ ಹರಾಜು ಪ್ರಕ್ರಿಯೆ ಮುಗಿದು ಇದೀಗ ಟೆಲಿಕಾಂ ಕಂಪನಿಗಳು ರೋಲ್‌ಔಟ್ ಸ್ಪರ್ಧೆಗೆ ಇಳಿದಿವೆ. ಈಗಾಗಲೇ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ಈ ತಿಂಗಳ ಒಳಗಾಗಿಯೇ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದಾಗಿ ತಿಳಿಸಿವೆ.

    ಆಗಸ್ಟ್ 15ರಂದು ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳಲಿದ್ದು, ಜಿಯೋ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಿಹಿ ಗಳಿಗೆಯಲ್ಲೇ 5ಜಿ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಇದರ ನಡುವೆಯೇ ಭಾರ್ತಿ ಏರ್‌ಟೆಲ್ ಕೂಡಾ ಆಗಸ್ಟ್ ಅಂತ್ಯದ ವೇಳೆಗೆ ಭಾರತದಲ್ಲಿ 5ಜಿ ನೆಟ್‌ವರ್ಕ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಆಗಸ್ಟ್ ತಿಂಗಳಿನಲ್ಲಿಯೇ 5ಜಿ ಯೋಜನೆಯನ್ನು ಪ್ರಾರಂಭಿಸಲು ಎರಿಕ್ಸನ್, ನೋಕಿಯಾ ಹಾಗೂ ಸ್ಯಾಮ್‌ಸಂಗ್ ಕಂಪನಿಗಳೊಂದಿಗೆ 5ಜಿ ನೆಟ್‌ವರ್ಕ್ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಏರ್‌ಟೆಲ್ ಘೋಷಿಸಿದೆ.

    ಕಳೆದ ವಾರ ಟೆಲಿಕಾಂ ಇಲಾಖೆ ನಡೆಸಿದ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವಿಐ(ವೊಡಾಫೋನ್ ಐಡಿಯಾ), ಹಾಗೂ ಅದಾನಿ ಎಂಟರ್‌ಪ್ರೈಸಸ್‌ಗಳು ಭಾಗವಹಿಸಿದ್ದವು. ಜುಲೈ 26ರಂದು ಪ್ರಾರಂಭವಾಗಿದ್ದ ಹರಾಜು ಪ್ರಕ್ರಿಯೆ ಆಗಸ್ಟ್ 1 ರಂದು ಮುಕ್ತಾಯಗೊಂಡು, ಒಟ್ಟು ಬಿಡ್ ಮೊತ್ತ 1.5 ಲಕ್ಷ ಕೋಟಿ ರೂ. ತಲುಪಿತ್ತು. ಇದನ್ನೂ ಓದಿ: 5ಜಿ ಹರಾಜು – ಸ್ಪೀಡ್ ಎಷ್ಟಿರುತ್ತೆ ಗೊತ್ತಾ?

    ಹರಾಜಿನಲ್ಲಿ ರಿಲಯನ್ಸ್ ಜಿಯೋ 700 MHz, 800 MHz, 1800 MHz, 3300 MHz ಮತ್ತು 26 GHz ಬ್ಯಾಂಡ್‌ಗಳಲ್ಲಿ 5ಜಿ ಸ್ಪೆಕ್ಟ್ರಂ ಖರೀದಿಸಿದೆ. ಏರ್‌ಟೆಲ್, 900 MHz, 1800 MHz, 2100 MHz, 3300 MHz ಮತ್ತು 26 GHz ಸ್ಪೆಕ್ಟ್ರಂನಲ್ಲಿ 19867.8 MHz ಸ್ಪೆಕ್ಟ್ರಂ ಅನ್ನು ಬಿಡ್ ಮಾಡಿ ಖರೀದಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ಟೋಬರ್‌ ವೇಳೆ ದೇಶದ ಮಹಾನಗರಗಳಲ್ಲಿ 5ಜಿ ಸೇವೆ ಲಭ್ಯ

    ಅಕ್ಟೋಬರ್‌ ವೇಳೆ ದೇಶದ ಮಹಾನಗರಗಳಲ್ಲಿ 5ಜಿ ಸೇವೆ ಲಭ್ಯ

    ಮುಂಬೈ: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್‌ ವೇಳೆಗೆ 5ಜಿ ಸೇವೆ ಲಭ್ಯವಾಗುವ ಸಾಧ್ಯತೆಯಿದೆ.

    ಆಗಸ್ಟ್‌ ಮಧ್ಯಭಾಗದಲ್ಲಿ ಸರ್ಕಾರ ಏರ್‌ವೇವ್ಸ್‌ ಹಂಚಿಕೆ ಮಾಡಲಿದೆ. ಈ ಕಾರಣದಿಂದ ಈಗಾಗಲೇ ಪರೀಕ್ಷೆ ಮಾಡಲಾಗಿರುವ ನಗರಗಳಲ್ಲಿ ಅಕ್ಟೋಬರ್‌ನಿಂದ 5ಜಿ ಸೇವೆ ಶುರುವಾಗುವ ಸಾಧ್ಯತೆಯಿದೆ.

    ಜಿಯೋ ಈಗಾಗಲೇ ಬೆಂಗಳೂರು, ಮುಂಬೈ, ದೆಹಲಿ, ಜಾಮ್‌ನಗರ, ಚೆನ್ನೈ ಪರೀಕ್ಷೆ ನಡೆಸಿದೆ.

    ಜಿಯೋ ಮುಖ್ಯಸ್ಥ ಅಕಾಶ್‌ ಅಂಬಾನಿ, ಅಜಾದಿ ಕಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ಯಾನ್‌ ಇಂಡಿಯಾಗೆ 5ಜಿ ಸೇವೆಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    2022 ಅಂತ್ಯಕ್ಕೆ ದೇಶದ ಬಹುತೇಕ ನಗರಗಳಲ್ಲಿ 5ಜಿ ಸೇವೆ ಲಭ್ಯವಾಗುವ ಸಾಧ್ಯತೆಯಿದೆ.

    5ಜಿ ಸೇವೆ ಎಲ್ಲಿ ಸಿಗುತ್ತೆ?
    ಆರಂಭದಲ್ಲಿ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ 5ಜಿ ಸೇವೆ ಲಭ್ಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • 5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    5G ಹರಾಜು ಮುಕ್ತಾಯ – 1.5 ಲಕ್ಷ ಕೋಟಿ ತಲುಪಿದ ಒಟ್ಟು ಬಿಡ್ ಮೊತ್ತ

    ನವದೆಹಲಿ: ಜುಲೈ 26ರಂದು ಪ್ರಾರಂಭವಾಗಿದ್ದ ಭಾರತದ 5ಜಿ ಸ್ಪೆಕ್ಟ್ರಂ ಹರಾಜು ಸೋಮವಾರ ಮುಕ್ತಾಯಗೊಂಡಿದೆ. 1.50 ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಂ ಮಾರಾಟವಾಗಿದ್ದು, ಮುಖೇಶ್ ಅಂಬಾನಿಯವರ ಜಿಯೋ ಅಗ್ರ ಬಿಡ್ಡರ್ ಆಗಿ ಹೊರಹೊಮ್ಮಿದೆ ಎಂದು ವರದಿಗಳು ತಿಳಿಸಿವೆ.

    ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಪ್ರತಿಸ್ಪರ್ಧಿಗಳಾಗಿ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಹಾಗೂ ಗೌತಮ್ ಅದಾನಿಯವರ ಅದಾನಿ ಎಂಟರ್‌ಪ್ರೈಸಸ್ 5ಜಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಇದನ್ನೂ ಓದಿ: 4Gಗಿಂತ 5G ಎಷ್ಟು ಭಿನ್ನ, ಪರಿಣಾಮಕಾರಿ? ಇಲ್ಲಿದೆ ಮಾಹಿತಿ..

    ಕಳೆದ ಬಾರಿ 4ಜಿ ನೆಟ್‌ವರ್ಕ್ 77 ಸಾವಿರ ಕೋಟಿ ರೂ.ಗೆ ಹಾಗೂ 3ಜಿ ನೆಟ್‌ವರ್ಕ್ 50 ಕೋಟಿ ರೂ.ಗೆ ಹರಾಜಾಗಿತ್ತು. ಹೊಸ 5ಜಿ ನೆಟ್‌ವರ್ಕ್ 4ಜಿ ಗಿಂತಲೂ ದ್ವಿಗುಣ ಅಲ್ಟ್ರಾ ಹೈ ಸ್ಪೀಡ್ ಮೊಬೈಲ್ ಇಂಟರ್‌ನೆಟ್ ಸಂಪರ್ಕವನ್ನು ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹಿಟ್ಲರ್‌ ವಾಚ್‌ ಹರಾಜು – ಮೊತ್ತ ಎಷ್ಟು ಗೊತ್ತಾ?

    ಈ ವರ್ಷದ ಅಂತ್ಯದ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಗಳನ್ನು ನಾವು ನಿರೀಕ್ಷಿಸಬಹುದು ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ಕೇದಾರನಾಥ ರಸ್ತೆ ಮಾರ್ಗದಲ್ಲೂ ಮೊಬೈಲ್, ಇಂಟರ್‌ನೆಟ್ ಸೇವೆ ಲಭ್ಯ

    ಇನ್ಮುಂದೆ ಕೇದಾರನಾಥ ರಸ್ತೆ ಮಾರ್ಗದಲ್ಲೂ ಮೊಬೈಲ್, ಇಂಟರ್‌ನೆಟ್ ಸೇವೆ ಲಭ್ಯ

    ಡೆಹ್ರಾಡೂನ್: ಕೇದಾರನಾಥ ಯಾತ್ರಾರ್ಥಿಗಳಿಗೆ ರಿಲಯನ್ಸ್ ಜಿಯೋ ಗುಡ್ ನ್ಯೂಸ್ ನೀಡಿದೆ. ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಹಾಗೂ ಡೇಟಾ ಸೇವೆಗಳನ್ನು ಒದಗಿಸಲು ರಿಲಯನ್ಸ್ ಜಿಯೋ ಮುಂದಾಗಿದೆ.

    ರಿಲಯನ್ಸ್ ಜಿಯೋ ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತಿರುವ ಮೊದಲ ಟೆಲಿಕಾಂ ಆಪರೇಟರ್ ಆಗಿದೆ ಎಂದು ಕಂಪನಿಯು ತಿಳಿಸಿದೆ. ಇದನ್ನೂ ಓದಿ: ವೇದಿಕೆ ಮೇಲೆ ಹಾಡು ಹೇಳುತ್ತಾ ಪ್ರಾಣಬಿಟ್ಟ ಮಲಯಾಳಂ ಗಾಯಕ

    ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಎರಡು ವರ್ಷಗಳ ಬಳಿಕ ಪುನರಾರಂಭಗೊಂಡಿದೆ. ಈ ವರ್ಷ ಹಿಮಾಲಯದ ಪುಣ್ಯಕ್ಷೇತ್ರಗಳಿಗೆ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

    ಗೌರಿಕುಂಡ ಮತ್ತು ಕೇದಾರನಾಥ ನಡುವೆ ಐದು ಟವರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಅನುಗುಣವಾಗಿ ಸೋನ್‍ಪ್ರಯಾಗದಲ್ಲಿ ದೊಡ್ಡ ಟವರ್ ಸ್ಥಾಪಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿದೆ. ಇದನ್ನೂ ಓದಿ: ನಾವು ಬೇರೆ ಭಾಷೆಯನ್ನು ಇಂಪ್ರೆಸ್ ಮಾಡೋದು ಬೇಕಿಲ್ಲ: ಸುದೀಪ್

    ಛೋಟಿ ಲಿಂಚೋಲಿ, ಲಿಂಚೋಲಿ ಮತ್ತು ರುದ್ರಪಾಯಿಂಟ್‍ನಲ್ಲಿ ಮೂರು ಟವರ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಮತ್ತು ಉಳಿದ ಎರಡನ್ನು ಶೀಘ್ರದಲ್ಲೇ ನಿರ್ಮಿಸಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ತಡೆರಹಿತ ಸಂಪರ್ಕಕ್ಕಾಗಿ ಮೊಬೈಲ್ ನೆಟ್‍ವರ್ಕ್‍ಗೆ ಫೈಬರ್ ಲಿಂಕ್ ನೀಡಲಾಗಿದೆ ಎಂದು ತಿಳಿಸಿದೆ.

  • ಮುಂಬೈನಲ್ಲಿ ತಲೆ ಎತ್ತಲಿದೆ ಭಾರತದ ಅತಿದೊಡ್ಡ ಕನ್ವೆನ್ಶನ್ ಸೆಂಟರ್‌ – ವಿಶೇಷತೆ ಏನು?

    ಮುಂಬೈನಲ್ಲಿ ತಲೆ ಎತ್ತಲಿದೆ ಭಾರತದ ಅತಿದೊಡ್ಡ ಕನ್ವೆನ್ಶನ್ ಸೆಂಟರ್‌ – ವಿಶೇಷತೆ ಏನು?

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದೇಶದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಬಹುಮುಖಿ ತಾಣವಾದ ಜಿಯೋ ವರ್ಲ್ಡ್ ಸೆಂಟರ್ ಅನ್ನು ತೆರೆಯುವುದಾಗಿ ಘೋಷಿಸಿದೆ.

    ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ 18.5 ಎಕರೆಗಳಷ್ಟು ವಿಸ್ತಾರವಾದ ಪ್ರದೇಶವನ್ನು ಹೊಂದಿದ್ದು, ಭಾರತದ ನಾಗರಿಕರಿಗೆ ವ್ಯಾಪಾರ, ವಾಣಿಜ್ಯ ಮತ್ತು ಸಂಸ್ಕೃತಿಯ ಅನುಭವ ನೀಡುವ ತಾಣವಾಗುವ ಮೂಲಕ ವಿಶ್ವದರ್ಜೆಯ ಗುಣಮಟ್ಟವನ್ನು ಒದಗಿಸಲು ಸಿದ್ಧವಾಗಿದೆ.

    ಸಾಂಸ್ಕೃತಿಕ ಕೇಂದ್ರ, ಸಂಗೀತ ಕಾರಂಜಿ, ಉನ್ನತ ಮಟ್ಟದ ರಿಟೇಲ್ ಅನುಭವ, ಕೆಫೆಗಳು ಮತ್ತು ಉತ್ತಮ ಭೋಜನದ ರೆಸ್ಟೋರೆಂಟ್‌ಗಳು, ಸರ್ವಿಸ್ಡ್ ಅಪಾರ್ಟ್ಮೆಂಟ್‌ಗಳು ಮತ್ತು ಕಛೇರಿಗಳು, ಸ್ಟೇಟ್-ಆಫ್ ದಿ- ಆರ್ಟ್ ಸೌಲಭ್ಯಗಳನ್ನು ಒಳಗೊಂಡಿರುವ ಭಾರತದ ಮೊದಲ ತಾಣ ಜಿಯೋ ವರ್ಲ್ಡ್ ಸೆಂಟರ್ ಆಗಿರಲಿದೆ.

    ಒಬೆರಾಯ್ 360 ಸೇರಿದಂತೆ ಹಲವು ಹೊಸ ಹಾಗೂ ನವೀನ ಜಾಗತಿಕ ಪಾಕಶಾಲೆಯ ಪರಿಕಲ್ಪನೆಯನ್ನು ಕನ್ವೆನ್ಶನ್ ಸೆಂಟರ್‌ ಒಳಗೊಂಡಿರಲಿದೆ. ಇಂಡಿಯಾ ಆಕ್ಸೆಂಟ್ ನಂಥ ವಿಶ್ವ ದರ್ಜೆಯ ಶಾಪಿಂಗ್ ಅನುಭವ ಮತ್ತು ಐಷಾರಾಮಿ ಬ್ರಾಂಡ್‌ಗಳು ಇಲ್ಲಿ ಲಭ್ಯವಿರಲಿವೆ. ಸಾಂಸ್ಕೃತಿಕವಾಗಿ ಮನಸೂರೆಗಳ್ಳುವ ಅನುಭವಗಳ ಸಾಂಸ್ಕೃತಿಕ ಕೇಂದ್ರಬಿಂದುವಾಗಿ, ಕಲಾತ್ಮಕ ಸಮುದಾಯದ ಭಾಗವಾಗಿ ಇದು 2023ರಲ್ಲಿ ಆರಂಭವಾಗಲಿದೆ. ಇದನ್ನೂ ಓದಿ: ಅಶ್ವಿನ್ ನೂತನ ಮೈಲಿಗಲ್ಲು – ಸಂಕಷ್ಟದಲ್ಲಿ ಲಂಕಾ

    ಈ ಕೇಂದ್ರದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ನೀತಾ ಅಂಬಾನಿ, “ಜಿಯೋ ವರ್ಲ್ಡ್ ಸೆಂಟರ್ ನಮ್ಮ ಭವ್ಯ ರಾಷ್ಟ್ರದ ಗೌರವ ಮತ್ತು ನವ ಭಾರತದ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಅತಿದೊಡ್ಡ ಸಮಾವೇಶಗಳನ್ನು ನಡೆಸಲು ಅನುಕೂಲ ಕಲ್ಪಿಸುವುದರಿಂದ ಹಿಡಿದು ಸಾಂಸ್ಕೃತಿಕ ಅನುಭವಗಳವರೆಗೆ ಚಿಲ್ಲರೆ ವ್ಯಾಪಾರ ಮತ್ತು ಊಟದ ಸೌಲಭ್ಯಗಳವರೆಗೆ, ಜಿಯೋ ವರ್ಲ್ಡ್ ಸೆಂಟರ್ ಮುಂಬೈನ ಹೊಸ ಹೆಗ್ಗುರುತಾಗಲಿದೆ. ಭಾರತದ ಬೆಳವಣಿಗೆಯ ಕಥೆಯ ಮುಂದಿನ ಅಧ್ಯಾಯವನ್ನು ಬರೆಯಲು ನಾವು ಒಟ್ಟಿಗೆ ಸೇರಲಿದ್ದೇವೆ’ ಎಂದು ಹೇಳಿದ್ದಾರೆ.  ಇದನ್ನೂ ಓದಿ: ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ

    ಧೀರೂಭಾಯಿ ಅಂಬಾನಿ ಚೌಕ
    ಧೀರೂಭಾಯಿ ಅಂಬಾನಿ ಚೌಕವು ಫೌಂಟೇನ್ ಆಫ್ ಜಾಯ್ ಸುತ್ತಲೂ ನಿರ್ಮಾಣವಾಗಲಿದೆ. ಇದು ನೀರು, ದೀಪಗಳು ಮತ್ತು ಸಂಗೀತದ ಅದ್ಭುತ ಕಾರಂಜಿ ಪ್ರದರ್ಶನಗಳ ಸರಣಿಯಾಗಿರಲಿದೆ. ಕಾರಂಜಿ ಭಾರತ ಹಾಗೂ ಅದರ ಹಲವು ಬಣ್ಣಗಳನ್ನು ಸಂಕೇತಿಸಲಿದೆ. ಎಂಟು ಫೈರ್ ಶೂಟರ್‌ಗಳು, 392 ವಾಟರ್ ಜೆಟ್‌ಗಳು ಮತ್ತು 600 ಕ್ಕೂ ಹೆಚ್ಚು ಎಲ್ಇಡಿ ದೀಪಗಳು ಸಂಗೀತದ ಮಾಧುರ್ಯಕ್ಕೆ ನೃತ್ಯ ಮಾಡುವ ಹೂವಿನ ದಳಗಳಾಗಿ ಬದಲಾಗಲಿದೆ. ಚೌಕವು ಪ್ರತಿದಿನ ಸಂಜೆಯ ಪ್ರದರ್ಶನಗಳೊಂದಿಗೆ ಆರಂಭಗೊಳ್ಳುತ್ತದೆ. ಉಚಿತ ಪ್ರವೇಶ ಪಾಸ್‌ಗಳನ್ನು www.dhirubhaiambanisquare.com ನಲ್ಲಿ ಬುಕ್ ಮಾಡಬಹುದು.

    ಕನ್ವೆನ್ಷನ್ ಸೆಂಟರ್‌ನಲ್ಲಿ ಏನಿದೆ?
    ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್, ಭಾರತದ ಅತ್ಯುತ್ತಮ, ಬೃಹತ್ ಸಮಾವೇಶ ಮತ್ತು ಪ್ರದರ್ಶನ ಸೌಲಭ್ಯಗಳನ್ನು ನೀಡುತ್ತದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಸಮಾವೇಶ ಮತ್ತು ಪ್ರದರ್ಶನಗಳ ಪರಿಸರ ವ್ಯವಸ್ಥೆಯಲ್ಲಿ ಭಾರತವನ್ನು ದೃಢವಾಗಿ ಇರಿಸುವ ಗುರಿಯನ್ನು ಹೊಂದಿದೆ. ಇದು ಭಾರತ ಮತ್ತು ಮುಂಬೈ ನಗರಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ.

    ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಗ್ರಾಹಕರ ಪ್ರದರ್ಶನಗಳು, ಸಮ್ಮೇಳನಗಳು, ಎಕ್ಸಿಬಿಷನ್, ಮೆಗಾ ಕನ್ಸರ್ಟ್ಗಳು, ಗಾಲಾ ಔತಣಕೂಟಗಳು ಮತ್ತು ವಿವಾಹಗಳು ಸೇರಿದಂತೆ ವಿಶಿಷ್ಟ ವ್ಯಾಪಾರ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು.

    1,61,460 ಚದರ ಅಡಿ ವಿಸ್ತೀರ್ಣದ 3 ಪ್ರದರ್ಶನ ಸಭಾಂಗಣಗಳು, 16,500 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. 1,07,640 ಚದರ ಅಡಿಗಳ ಒಟ್ಟು 2 ಕನ್ವೆನ್ಶನ್ ಸಭಾಂಗಣದಲ್ಲಿ 10,640 ಅತಿಥಿಗಳು ಕುಳಿತುಕೊಳ್ಳಬಹುದು.

    ಭವ್ಯವಾದ 32,290 ಚದರ ಅಡಿ ಬಾಲ್ ರೂಂ, 3200 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಒಟ್ಟು 29,062 ಚದರ ಅಡಿ ವಿಸ್ತೀರ್ಣದೊಂದಿಗೆ 25 ಸಭಾ ಕೊಠಡಿಗಳು,
    ಹೈಬ್ರಿಡ್ ಮತ್ತು ಡಿಜಿಟಲ್ ಅನುಭವಗಳಿಗಾಗಿ 5G ನೆಟ್ವರ್ಕ್, ದಿನಕ್ಕೆ 18,000 ಕ್ಕೂ ಹೆಚ್ಚು ಊಟವನ್ನು ಪೂರೈಸುವ ಸಾಮರ್ಥ್ಯ ಹೊಂದಿರುವ ದೊಡ್ಡ ಅಡುಗೆ ಮನೆ ಇರುವುದು ವಿಶೇಷ.

    5,000 ಕಾರುಗಳ ನಿಲುಗಡೆಗೆ ಸಾಮರ್ಥ್ಯವಿರುವ ಕನ್ವೆನ್ಶನ್ ಸೆಂಟರ್ ಭಾರತದ ಅತಿದೊಡ್ಡ ಆನ್-ಸೈಟ್ ಪಾರ್ಕಿಂಗ್ ಆಗಲಿದೆ.

  • ಮಸ್ಕ್‌ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್‌ನೆಟ್

    ಮಸ್ಕ್‌ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್‌ನೆಟ್

    ಮುಂಬೈ: ರಿಲಯನ್ಸ್ ಜಿಯೋ ಲಕ್ಸೆಂಬರ್ಗ್ ಮೂಲದ ದೂರಸಂಪರ್ಕ ಕಂಪನಿ ಎಸ್‌ಇಎಸ್ ನೊಂದಿಗೆ ಜಂಟಿಯಾಗಿ ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್ ಎಂಬ ಉದ್ಯಮ ಪ್ರಾರಂಭಿಸಲಿದೆ. ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ 100 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ವೇಗದಲ್ಲಿ ಇಂಟರ್‌ನೆಟ್ ನೀಡಲಿದೆ ಎಂದು ತಿಳಿಸಿದೆ.

    ಜಿಯೋನ ಬ್ರಾಡ್‌ಬ್ಯಾಂಡ್ ಸೇವೆ ಎಂಟರ್‌ಪ್ರೈಸಸ್, ಮೊಬೈಲ್ ಬ್ಯಾಕ್‌ಹಾಲ್, ಹಾಗೂ ಚಿಲ್ಲರೆ ಗ್ರಾಹಕರಿಗೆ 100 ಜಿಬಿಪಿಎಸ್ ವರೆಗಿನ ಗರಿಷ್ಠ ವೇಗದಲ್ಲಿ ಇಂಟರ್‌ನೆಟ್ ಒದಗಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಇಸ್ರೋ ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ

    ಜಿಯೋನ ಈ ಹೊಸ ಯೋಜನೆ ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಸೆಡ್ಡು ಹೊಡೆಯಲಿದೆ. ಸ್ಟಾರ್ ಲಿಂಕ್ ಕಳೆದ ವರ್ಷ ಅಗ್ಗದ ಇಂಟರ್‌ನೆಟ್ ನೀಡುವ ಯೋಜನೆ ಮಾಡಿತ್ತು. ಆದರೆ ಇದಕ್ಕೆ ಭಾರತ ಸರ್ಕಾರ ಪರವಾನಗಿ ನೀಡಲು ನಿರಾಕರಿಸಿತ್ತು. ಭಾರತ ಸರ್ಕಾರದಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರಿ ಬುಕ್ಕಿಂಗ್ ರದ್ದಾಗಿತ್ತು. ಇದನ್ನೂ ಓದಿ: ಭೂಕಾಂತೀಯ ಬಿರುಗಾಳಿಗೆ ಸ್ಟಾರ್‌ಲಿಂಕ್ನ 40 ಉಪಗ್ರಹಗಳು ನಾಶ

    ಸ್ಟಾರ್‌ಲಿಂಕ್ ಭಾರತದಲ್ಲಿ ತಮ್ಮ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿಲ್ಲದಿದ್ದರೂ ಜಿಯೋ ಈಗಾಗಲೇ ಪೈಪೋಟಿ ನೀಡುವಷ್ಟು ವೇಗದಲ್ಲಿ ಹೊಸ ಯೋಜನೆ ನಿರೂಪಿಸಿದೆ. ಈ ಹಿಂದೆ ಏರ್‌ಟೆಲ್ ಕೂಡಾ ಹ್ಯೂಸ್ ಕಮ್ಯುನಿಕೇಷನ್ಸ್ ಇಂಡಿಯಾದೊಂದಿಗೆ ಜಂಟಿಯಾಗಿ ಉಪಗ್ರಹ ಆಧಾರಿತ ಇಂಟರ್‌ನೆಟ್ ಸೇವೆಯನ್ನು ಒದಗಿಸುವುದಾಗಿ ಘೋಷಿಸಿತ್ತು.