Tag: ಜಿಯೋ

  • ನೀವು ನೋಕಿಯಾ 3310 ಖರೀದಿ ಮಾಡ್ತೀರಾ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ

    ನೀವು ನೋಕಿಯಾ 3310 ಖರೀದಿ ಮಾಡ್ತೀರಾ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ

    ನವದೆಹಲಿ: ನೋಕಿಯಾ 3310 ಫೀಚರ್ ಫೋನ್ ಮತ್ತೊಮ್ಮೆ ಬಿಡುಗಡೆಯಾಗಿದೆ. ಆದರೆ ಈ ಫೋನ್ ಎಲ್ಲ ದೇಶಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

    ಹೌದು. ಇವತ್ತು ಕಂಪೆನಿಯೊಂದು ತಯಾರಿಸಿದ ಫೋನ್ ವಿಶ್ವದೆಲ್ಲೆಡೆ ಕಾರ್ಯನಿರ್ವಹಿಸಬೇಕಾದರೆ ಅದು ಕನಿಷ್ಠ 850MHZ, 900MHz, 1800MHz ಮತ್ತು 1900MHz ಬ್ಯಾಂಡ್‍ಗೆ ಬೆಂಬಲ ನೀಡಬೇಕಾಗುತ್ತದೆ. ಆದರೆ ನೋಕಿಯಾ 3310 ಫೋನ್  900 MHz ಮತ್ತು 1800 MHz ಬ್ಯಾಂಡ್‍ಗಳಿಗೆ ಮಾತ್ರ ಸಪೋರ್ಟ್ ಮಾಡುತ್ತದೆ. ಈ ಜಿಎಸ್ಎಂ ಸೆಲ್ಯೂಲರ್ ಫ್ರಿಕ್ವೆನ್ಸಿ ಹಲವು ದೇಶಗಳಲ್ಲಿ ಇಲ್ಲವೇ ಇಲ್ಲ.

    ವಿಶೇಷವಾಗಿ ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಲ್ಲಿ ಈ ಬ್ಯಾಂಡ್ ಇಲ್ಲದ ಕಾರಣ 3310 ಕಾರ್ಯನಿರ್ವಹಿಸುವುದಿಲ್ಲ. ಸಿಂಗಾಪುರದಲ್ಲಿ ಟೆಲಿಕಾಂ ಕಂಪೆನಿ ಸ್ಟಾರ್‍ಹಬ್, 2ಜಿ ಮಾತ್ರ ಹೊಂದಿರುವ ಫೋನ್‍ಗಳು ಕರೆ, ಎಸ್‍ಎಂಎಸ್ ಮತ್ತು ಡೇಟಾ ಸೇವೆವನ್ನು 2017ರ ಏಪ್ರಿಲ್ ನಂತರ ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ಇಲ್ಲೂ ಈ ಫೋನನ್ನು ಬಳಸಲು ಸಾಧ್ಯವಿಲ್ಲ.

    ಎರಡನೇ ತ್ರೈಮಾಸಿಕದಲ್ಲಿ  ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಮಧ್ಯಪ್ರಾಚ್ಯ, ಏಷ್ಯಾ ಪೆಸಿಫಿಕ್, ಯುರೋಪ್, ಆಫ್ರಿಕಾ ದೇಶಗಳನ್ನು ಗುರಿಯಾಗಿಸಿಕೊಂಡು ನೋಕಿಯಾ ಈ ಫೋನ್ ತಯಾರಿಸಿದೆ.

    ಭಾರತದಲ್ಲಿ ರಿಲಯನ್ಸ್ ಜಿಯೋ ಸಿಮ್‍ಗೆ ನೋಕಿಯಾ 3310 ಸಪೋರ್ಟ್ ಮಾಡುವುದಿಲ್ಲ. ಎಲ್‍ಟಿಇ ಫೋನ್‍ಗಳಿಗೆ ಮಾತ್ರ ಜಿಯೋ ಸಿಮ್ ಸಪೋರ್ಟ್ ಮಾಡುತ್ತದೆ.

    ಇದನ್ನೂ ಓದಿ: 17 ವರ್ಷಗಳ ಬಳಿಕ ಮತ್ತೆ ನೋಕಿಯಾ 3310 ಫೀಚರ್ ಫೋನ್ ರಿಲೀಸ್: ಬೆಲೆ ಎಷ್ಟು? ವಿಶೇಷತೆ ಏನು?

     

    https://www.youtube.com/watch?v=r5hVdeTSm0Y

  • ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಮುಂಬೈ: ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋಗೆ ಸೇರ್ಪಡೆಯಾಗುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇತ್ತ ಏರ್‍ಟೆಲ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿದೆ.

    ಎಷ್ಟು ಮೊತ್ತಕ್ಕೆ ಈ ಖರೀದಿ ಒಪ್ಪಂದ ನಡೆದಿದೆ ಎನ್ನುವ ಮಾಹಿತಿ ಪ್ರಕಟಗೊಂಡಿಲ್ಲ. ಟೆಲಿನಾರ್ ಕಂಪೆನಿ ಈಗ ಗುಜರಾತ್, ಬಿಹಾರ್, ಮಹಾರಾಷ್ಟ್ರ, ಪೂರ್ವ ಉತ್ತರಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಅಸ್ಸಾಂ, ಆಂಧ್ರಪ್ರದೇಶದಲ್ಲಿ ಸರ್ಕಲ್ ಹೊಂದಿದೆ.

    ಇದನ್ನೂ ಓದಿ: ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!

    2016ರ ಡಿಸೆಂಬರ್‍ನಲ್ಲಿ ದೇಶದಲ್ಲಿ ಒಟ್ಟು  3.8 ಕೋಟಿ ಟೆಲಿನಾರ್ ಗ್ರಾಹಕರಿದ್ದರು. ಈ ಗ್ರಾಹಕರೆಲ್ಲರು ಇನ್ನು ಮುಂದೆ ಏರ್‍ಟೆಲ್ ಗ್ರಾಹಕರಾಗಲಿದ್ದಾರೆ.

    ಭಾರತದಲ್ಲಿ ಹೂಡಿದ್ದ ಬಂಡವಾಳಕ್ಕೆ ತಕ್ಕಷ್ಟು ಆದಾಯಗಳಿಸದ ಹಿನ್ನೆಲೆಯಲ್ಲಿ ಕಂಪೆನಿಯನ್ನು ಏರ್‍ಟೆಲ್ ಜೊತೆ ವಿಲೀನಗೊಳಿಸುತ್ತಿದ್ದೇವೆ ಎಂದು ಟೆಲಿನಾರ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿಗ್ವೆ ಬ್ರೆಕ್ಕಿ ಹೇಳಿದ್ದಾರೆ.

    ಟೆಲಿನಾರ್ ಏರ್‍ಟೆಲ್ ಖರೀದಿ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಮುಂಬೈ ಷೇರು ಪೇಟೆಯಲ್ಲಿ ಏರ್‍ಟೆಲ್ ಭಾರತಿ ಷೇರುಗಳಲ್ಲಿ ಶೇ. 11 ರಷ್ಟು ಏರಿಕೆ ಕಂಡುಬಂದಿತ್ತು.

    ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

  • ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!

    ಏರ್‍ಟೆಲ್‍ನಿಂದ 100 ರೂಪಾಯಿಗೆ 10 ಜಿಬಿ ಡೇಟಾ!

    ನವದೆಹಲಿ: ಜಿಯೋ 303 ರೂಪಾಯಿಗೆ 30 ದಿನಗಳಿಗೆ 30 ಜಿಬಿ ಡೇಟಾ ನೀಡುವುದಾಗಿ ಘೋಷಿಸಿದ್ದೆ ತಡ ಈಗ ಏರ್ ಟೆಲ್ 100 ರೂ. 10 ಜಿಬಿ ಡೇಟಾ ನೀಡಲು ಮುಂದಾಗಿದೆ.

    ಆದರೆ ಇದು ಎಲ್ಲ ಗ್ರಾಹಕರಿಗೆ ಸಿಗುವುದಿಲ್ಲ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ 28 ದಿನಗಳ ವ್ಯಾಲಿಡಿಟಿ ಇರುವ ಈ ಆಫರ್ ಸಿಗಲಿದೆ.

    ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಈ ಆಫರ್ ಹೀಗೆ ಸಿಗುತ್ತೆ:  ಈಗ 500 ರೂ. ಪ್ಲಾನ್‍ನಲ್ಲಿ ನಿಮಗೆ 3ಜಿಬಿ ಡೇಟಾ ಸಿಗುತ್ತದೆ. ಇದಾದ ಬಳಿಕ ನೀವು 100 ಖರ್ಚು ಮಾಡಿದರೆ ಒಟ್ಟು 600 ರೂ.ಗೆ 13 ಜಿಬಿ ಡೇಟಾ ಸಿಗಲಿದೆ. ‘ಮೈ ಏರ್‍ಟೆಲ್ ಆಪ್’ ಮೂಲಕ ಗ್ರಾಹಕರು ಈ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದು.

    ಕಡಿಮೆ ಬೆಲೆಯ ಏರ್‍ಟೆಲ್ ಡೇಟಾ ನೀಡುವುದು ಇದೇ ಮೊದಲೆನಲ್ಲ. ಕಳೆದ ವರ್ಷ 259 ರೂ. 10 ಜಿಬಿ ಡೇಟಾ ನೀಡುವ ಪ್ಲಾನ್ ಬಿಡುಗಡೆ ಮಾಡಿತ್ತು.

    ಇದನ್ನೂ ಓದಿ: ಜಿಯೋದಲ್ಲಿ 303 ರೂ.ಗೆ ಫ್ರೀ ಕಾಲ್ 30 ಜಿಬಿ ಡೇಟಾ: ಬೇರೆ ಕಂಪೆನಿಗಳಲ್ಲಿ 10 ಜಿಬಿ ಡೇಟಾಗೆ ಎಷ್ಟು ರೂ. ರಿಚಾರ್ಜ್ ಮಾಡಬೇಕು?

     

  • ಜಿಯೋದಲ್ಲಿ 303 ರೂ.ಗೆ ಫ್ರೀ ಕಾಲ್ 30 ಜಿಬಿ ಡೇಟಾ: ಬೇರೆ ಕಂಪೆನಿಗಳಲ್ಲಿ 10 ಜಿಬಿ ಡೇಟಾಗೆ ಎಷ್ಟು ರೂ. ರಿಚಾರ್ಜ್ ಮಾಡಬೇಕು?

    ಜಿಯೋದಲ್ಲಿ 303 ರೂ.ಗೆ ಫ್ರೀ ಕಾಲ್ 30 ಜಿಬಿ ಡೇಟಾ: ಬೇರೆ ಕಂಪೆನಿಗಳಲ್ಲಿ 10 ಜಿಬಿ ಡೇಟಾಗೆ ಎಷ್ಟು ರೂ. ರಿಚಾರ್ಜ್ ಮಾಡಬೇಕು?

    ನವದೆಹಲಿ: ಮಂಗಳವಾರದಂದು ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. 99 ರೂ. ರೀಚಾರ್ಜ್ ಮಾಡಿ ಜಿಯೋ ಪ್ರೈಮ್ ಸದಸ್ಯರಾಗಿ ನಂತರ ತಿಂಗಳಿಗೆ 303 ರೂ. ರಿಚಾರ್ಜ್ ಮಾಡೋ ಮೂಲಕ ಗ್ರಾಹಕರು 30 ಜಿಬಿ ಡೇಟಾ ಮತ್ತು ಉಚಿತ ಕರೆಯನ್ನು ಪಡೆಯುವ ಹೊಸ ಸೇವೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಬೇರೆ ಕಂಪೆನಿಗಳು ಈ ದರಕ್ಕೆ ಏನು ಆಫರ್ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.

    ಏರ್‍ಟೆಲ್ ಗ್ರಾಹಕರು 345 ರೂ. ರಿಚಾರ್ಜ್ ಮಾಡಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‍ಲಿಮಿಟೆಡ್ ಕಾಲಿಂಗ್ ಹಾಗೂ 1 ಜಿಬಿ 4ಜಿ ಡೇಟಾ ಪಡೆಯಬಹುದು. ಹಾಗೆ 30 ಜಿಬಿ ಡೇಟಾ ಬೇಕಾದ್ರೆ 1495 ರೂ. ರೀಚಾರ್ಜ್ ಮಾಡಬೇಕು. ಇದಕ್ಕೆ 90 ದಿನಗಳ ವ್ಯಾಲಿಡಿಟಿ ಇರುತ್ತದೆ.

    ವೋಡಫೋನ್ ಗ್ರಾಹಕರು 349 ರೂ. ರೀಚಾರ್ಜ್ ಮಾಡಿ ಅನ್‍ಲಿಮಿಟೆಡ್ ಕಾಲಿಂಗ್‍ನೊಂದಿಗೆ 4ಜಿ ಹ್ಯಾಂಡ್‍ಸೆಟ್‍ಗಳಿಗೆ 1ಜಿಬಿ 4ಜಿ ಡೇಟಾ ಪಡೆಯಬಹುದು. ಇನ್ನು 1500 ರೂ. ರೀಚಾರ್ಜ್ ಮಾಡಿದ್ರೆ 35 ಜಿಬಿ ಡೇಟಾ ಪಡೆಯಬಹುದು. ಇದಕ್ಕೆ 30 ದಿನಗಳ ವ್ಯಾಲಿಡಿಟಿ ಇರುತ್ತದೆ.

    ಐಡಿಯಾ ಗ್ರಾಹಕರು 348 ರೂ. ರೀಚಾರ್ಜ್ ಮಾಡಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‍ಲಿಮಿಟೆಡ್ ಕಾಲಿಂಗ್ ಹಾಗೂ 4ಜಿ ಹ್ಯಾಂಡ್‍ಸೆಟ್ ಇರುವವರು 1ಜಿಬಿ 4ಜಿ/3ಜಿ ಡೇಟಾ ಪಡೆಯಬಹುದು. 4ಜಿ ಹ್ಯಾಂಡ್‍ಸೆಟ್‍ಗೆ ಅಪ್‍ಗ್ರೇಡ್ ಆಗುತ್ತಿರುವವವರು ಅನ್‍ಲಿಮಿಟೆಡ್ ಕಾಲಿಂಗ್ ಜೊತೆಗೆ 4 ಜಿಬಿ 3ಜಿ/4ಜಿ ಡೇಟಾ ಪಡೆಯಬಹುದು. ಇನ್ನೂ 298 ರೂ. ರಿಚಾರ್ಜ್ ಮಾಡಿದ್ರೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 1.2 ಜಿಬಿ ಡೇಟಾ ಸಿಗುತ್ತದೆ. ಈ ಮ್ಯಾಜಿಕ್ ರಿಚಾರ್ಜ್ ಆಫರ್‍ನಲ್ಲಿ ಗ್ರಾಹಕರಿಗೆ ಅದೃಷ್ಟ ಇದ್ದರೆ 1.2 ಜಿಬಿ ಯಿಂದ 10 ಜಿಬಿವರೆಗೆ ಡೇಟಾ ಉಚಿತವಾಗಿ ಸಿಗುತ್ತದೆ. ಇನ್ನು 1349 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 10 ಜಿಬಿ 4ಜಿ ಡೇಟಾ ಸಿಗುತ್ತದೆ.

    ಡೊಕೊಮೋದಲ್ಲಿ 350 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 3ಜಿಬಿ ಡೇಟಾ ಮತ್ತು 150 ರೂ. ಟಾಕ್ ಟೈಮ್ ಸಿಗುತ್ತದೆ. 995 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 10 ಜಿಬಿ ಡೇಟಾ ಸಿಗುತ್ತದೆ.

    ಇನ್ನು ಬಿಎಸ್‍ಎನ್‍ಎಲ್ ಕೂಡ ಇಂಟರ್ನೆಟ್ ದರವನ್ನು ಪರಿಷ್ಕರಿಸಿದ್ದು 292 ರೂ. ರೀಚಾರ್ಜ್‍ಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ 8 ಜಿಬಿ ಡೇಟಾ ಆಫರ್ ನೀಡಿದೆ. 3099 ರೂ. ರೀಚಾರ್ಜ್ ಮಾಡಿದ್ರೆ 60 ದಿನಗಳವರೆಗೆ 20 ಜಿಬಿ ಡೇಟಾ ಜೊತೆಗೆ ಅನ್‍ಲಿಮಿಟೆಡ್ ಲೋಕಲ್ ಹಾಗೂ ಎಸ್‍ಟಿಡಿ ಕಾಲಿಂಗ್ ಜೊತೆಗೆ 3000 ಉಚಿತ ಎಸ್‍ಎಮ್‍ಎಸ್ ಪಡೆಯಬಹುದಾಗಿದೆ.

    ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಇದನ್ನೂ ಓದಿ: ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

  • ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಮುಂಬೈ: ಇಲ್ಲಿಯವರೆಗೆ ಪ್ರತಿ ದಿನ 1 ಜಿಬಿ ಉಚಿತ ಡೇಟಾವನ್ನು ಪಡೆಯುತ್ತಿದ್ದ ಜಿಯೋ ಗ್ರಾಹಕರು ಏಪ್ರಿಲ್ 1ರಿಂದ ದುಡ್ಡನ್ನು ಪಾವತಿಸಿ ಡೇಟಾವನ್ನು ಪಡೆದುಕೊಳ್ಳಬೇಕು.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮುಂಬೈಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಹೊಸ ಜಿಯೋ ಪ್ರೈಮ್ ಯೋಜನೆಯನ್ನು ಪ್ರಕಟಿಸಿದರು. ಜಿಯೋ ಪ್ರೈಮ್‍ಗೆ ನೋಂದಣಿಯಾದ ಗ್ರಾಹಕರು 2018ರ ಮಾರ್ಚ್ 31ರ ತನಕ ಈಗ ಇರುವ ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ಸಿಗುವ ಎಲ್ಲ ಸೇವೆಗಳನ್ನು ಉಚಿತವಾಗಿ ಬಳಸಬಹುದು. ಆದರೆ ಈ ಸೇವೆ ಬಳಸಬೇಕಾದರೆ ಡೇಟಾಗೆ ಮಾತ್ರ ದುಡ್ಡನ್ನು ನೀಡಬೇಕಾಗುತ್ತದೆ.

    ದುಡ್ಡನ್ನು ನೀವು ಪಾವತಿಸಿದರೂ ಉಳಿದ ಟೆಲಿಕಾಂ ಕಂಪೆನಿಗಳಿಗೆ ಹೋಲಿಸಿದರೆ ನೀವು ಪಾವತಿಸುವ ದುಡ್ಡಿಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ಪಡೆದುಕೊಳ್ಳುವಿರಿ. ಇದರ ಜೊತೆ ಮುಂದಿನ ದಿನದಲ್ಲಿ ಹೆಚ್ಚಿನ ವೇಗದಲ್ಲಿ ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಇಲ್ಲಿ ಜಿಯೋ ಪ್ರೈಮ್‍ಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ನೀಡಲಾಗಿದೆ.

    ಏನಿದು ಜಿಯೋ ಪ್ರೈಮ್?
    ಜಿಯೋದ ಹೊಸ ಯೋಜನೆ ಇದಾಗಿದ್ದು, ಮಾರ್ಚ್ 31ರ ನಂತರ ಗ್ರಾಹಕರಿಗೆ ಲಭ್ಯವಾಗಲಿದೆ.

    ಪ್ರೈಮ್ ಯೋಜನೆ ತಂದಿದ್ದು ಯಾಕೆ? ಬೆಲೆ ಎಷ್ಟು?
    ಬಹುತೇಕ ಗ್ರಾಹಕರು ಜಿಯೋ ಸಿಮನ್ನು ಎರಡನೇ ಸಿಮ್ ಆಗಿ ಬಳಸುತ್ತಿದ್ದು ಜಿಯೋ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಗ್ರಾಹಕರು ಮಾರ್ಚ್ 31ರ ನಂತರ ಜಿಯೋ ಸೇವೆಯಿಂದ ಹೊರ ಹೋಗದೇ ಇರಲು  ಈ ಆಫರನ್ನು ತರಲಾಗಿದೆ. ಮಾರ್ಚ್ 31ರ ನಂತರ ಈ ಸೇವೆ ಆರಂಭವಾಗಲಿದ್ದು, ಪ್ರೈಮ್ ಆಫರ್ ಅನ್ನು ನೀವು ಪಡೆಯಬೇಕಾದರೆ ನೀವು 12 ತಿಂಗಳಿಗೆ 99 ರೂ. ನೀಡಿ ನೋಂದಣಿಯಾಗಬೇಕು.

    ಇದನ್ನೂ ಓದಿ:ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ನೋಂದಣಿ ಮಾಡಿಸಿಕೊಂಡರೆ ಏನು ಲಾಭ?
    ಇಲ್ಲಿಯವರೆಗೆ ನೀವು ಹ್ಯಾಪಿ ನ್ಯೂ ಇಯರ್ ಪ್ಲಾನ್‍ನಲ್ಲಿ ನೀವು ಒಂದು ದಿನ 1 ಜಿಬಿ ಉಚಿತ ಡೇಟಾ ಪೂರ್ಣವಾಗಿ ಬಳಕೆ ಮಾಡಿದ ಬಳಿಕ ಸ್ಪೀಡ್ 128 ಕೆಬಿಪಿಎಸ್‍ಗೆ ಇಳಿಯುತ್ತದೆ. ಆದರೆ ಜಿಯೋ ಪ್ರೈಮ್‍ನಲ್ಲಿ ಉಚಿತ ಡೇಟಾ ಸಿಗುವುದಿಲ್ಲ. ನೀವು ಪ್ರತಿ ತಿಂಗಳು 303 ರೂ. ಹಣವನ್ನು(ದಿನವೊಂದಕ್ಕೆ 10 ರೂ.) ಪಾವತಿಸಿದರೆ 30 ಜಿಬಿ ಡೇಟಾವನ್ನು ಪಡೆಯಬಹುದು.

    ಸಬ್ ಸ್ಕ್ರೈಬ್ ಮಾಡುವುದು ಹೇಗೆ?
    ಮಾರ್ಚ್ 1ರಿಂದ ಮಾರ್ಚ್ 31ರವರೆಗೆ ಜಿಯೋ ಗ್ರಾಹಕರು ಮೈ ಜಿಯೋ ಆಪ್‍ನಿಂದ ಸಬ್ ಸ್ಕ್ರೈಬ್ ಮಾಡಿಕೊಳ್ಳಬಹುದು. ಆಥವಾ ಹತ್ತಿರದಲ್ಲಿ ಇರುವ ಜಿಯೋ ಟೆಲಿಕಾಂ ಶಾಪ್/ ಜಿಯೋ ಸ್ಟೋರ್‍ಗೆ ಹೋಗಿ ಸಬ್‍ಸ್ಕ್ರೆಬ್ ಮಾಡಿಕೊಳ್ಳಬಹುದು.

    ಡೇಟಾಗೆ ಮಾತ್ರ ದುಡ್ಡು:
    ಏಪ್ರಿಲ್ ಒಂದರಿಂದ ಉಚಿತವಾಗಿ ಡೇಟಾ ನೀಡಲು ಸಾಧ್ಯವಿಲ್ಲ. ಆದರೆ ಯಾವುದೇ ಟೆಲಿಕಾಂ ನೆಟ್‍ವರ್ಕಿಗೆ ಹೋಗುವ ಎಲ್ಲ ಕರೆಗಳು ಉಚಿತ ಮತ್ತು ಯಾವುದೇ ರೋಮಿಂಗ್ ಚಾರ್ಜ್ ಇರುವುದಿಲ್ಲ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಉಚಿತ ಏನು?
    ಮೈ ಜಿಯೋ ಅಪ್ಲಿಕೇಶನ್‍ನಲ್ಲಿರುವ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್ ಸೇರಿದಂತೆ 10 ಸಾವಿರ ರೂ. ಮೌಲ್ಯದ ಮೀಡಿಯಾ ಸೇವೆಗಳನ್ನು ಜಿಯೋ ಪ್ರೈಮ್ ಗ್ರಾಹಕರು 2018ರ ಮಾರ್ಚ್ 31ರವರೆಗೆ ಬಳಸಬಹುದು.

     

     

     

  • ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಮುಂಬೈ: ರಿಲಯನ್ಸ್ ಜಿಯೋ ಮತ್ತೊಂದು ಮೈಲಿಗಲ್ಲನ್ನು ಬರೆದಿದೆ. ಬಿಡುಗಡೆಯಾದ 170 ದಿನದಲ್ಲಿ 10 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದಿಸಿದ ಮೊದಲ ಟೆಲಿಕಾಂ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾಧ್ಯಮಗಳ ಜೊತೆ ನಡೆಸಿ ಈ ಸಾಧನೆಗೆ ಕಾರಣರಾದ ಎಲ್ಲ ಗ್ರಾಹಕರಿಗೆ ಧನ್ಯವಾದ ಹೇಳಿದರು.

    ಜಿಯೋ ಸೇವೆ ಅಧಿಕೃತವಾಗಿ ಲೋಕಾರ್ಪಣೆಯಾದ ಒಂದು ತಿಂಗಳಿನಲ್ಲೇ 1.60 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿತ್ತು. ಇದಾದ ಬಳಿಕ 83 ದಿನದಲ್ಲಿ 5 ಕೋಟಿ ಗ್ರಾಹಕರನ್ನು ಜಿಯೋ ಸಂಪಾದಿಸಿತ್ತು.

  • ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: “ಪ್ರಿಯ ಗ್ರಾಹಕರೇ ನಿಮ್ಮ ಜಿಯೋ ಇಂಟರ್‍ನೆಟ್ ಮತ್ತು ಕಾಲ್ ಸೇವೆಯನ್ನು ರಾತ್ರಿ 12 ಗಂಟೆಯ ಒಳಗಡೆ ಅಪ್‍ಗ್ರೇಡ್ ಮಾಡಿಕೊಳ್ಳಿ, ಒಂದು ವೇಳೆ ನೀವು ಅಪ್‍ಗ್ರೇಡ್ ಮಾಡದೇ ಇದಲ್ಲಿ ನಿಮ್ಮ ಜಿಯೋ ಸೇವೆ ಡಿ ಆಕ್ವಿವೇಟ್ ಆಗುತ್ತದೆ”

    ಈ ರೀತಿ ಇರುವ ವಾಟ್ಸಪ್ ಸಂದೇಶವನ್ನು ದಯವಿಟ್ಟು ಯಾರೂ ಶೇರ್ ಮಾಡಬೇಡಿ. ಜಿಯೋ ಯಾವುದೇ ಈ ರೀತಿಯ ಆಫರ್ ಬಿಡುಗಡೆ ಮಾಡಿಲ್ಲ. ನಿಮ್ಮನೆ ನಿಮ್ಮನ್ನು ವಂಚಿಸಲು ಯಾರೋ ಈ ಸಂದೇಶವನ್ನು ಬರೆದು ಮೆಸೆಂಜಿಗ್ ಅಪ್ಲಿಕೇಶನ್‍ನಲ್ಲಿ ಹರಿಯಬಿಟ್ಟಿದ್ದಾರೆ.

    ಈಗ ನೀವು ಡೌನ್‍ಲೋಡ್ ಮಾಡುತ್ತಿರುವ ಜಿಯೋ ಹೆಸರಿನ ಆಂಡ್ರಾಯ್ಡ್ ಆಪ್ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಇಲ್ಲ. ಹೀಗಾಗಿ ಈ ಆಪನ್ನು ಡೌನ್‍ಲೋಡ್ ಮಾಡಬೇಡಿ. ಯಾರಾದರೂ ನಿಮಗೆ ಈ ಸಂದೇಶವನ್ನು ಕಳುಹಿಸಿದ್ದರೆ ಅವರಿಗೆ, ಇದು ನಮ್ಮನ್ನು ವಂಚಿಸಲು ಹರಿಯಬಿಟ್ಟಿರುವ ಮೆಸೇಜ್ ಎಂಬುದನ್ನು ತಿಳಿಸಿ ಬಿಡಿ.

    ಜಿಯೋ ಬಿಡುಗಡೆ ಮಾಡಿರುವ ಹ್ಯಾಪಿ ನ್ಯೂ ಇಯರ್ ಸೇವೆ ಮಾರ್ಚ್ 31 ರವರೆಗೆ ಇರಲಿದ್ದು, ಪ್ರತಿನಿತ್ಯ ಗ್ರಾಹಕರು 1 ಜಿಬಿ ಡೇಟಾವನ್ನು ಉಚಿತವಾಗಿ ಬಳಕೆ ಮಾಡಬಹುದು. ಮಾರ್ಚ್ 31ರ ನಂತರ ಡೇಟಾ ಉಚಿತವಾಗಿ ನೀಡುತ್ತದೋ ಇಲ್ಲವೋ ಎನ್ನುವುದನ್ನು ಇದೂವರೆಗೂ ಜಿಯೋ ಅಧಿಕೃತವಾಗಿ ಎಲ್ಲಿಯೂ ಪ್ರಕಟಿಸಿಲ್ಲ. ಕೆಲ ಮಾಧ್ಯಮಗಳು ಈ ಸೇವೆ ಜೂನ್ ವರೆಗೂ ಮುಂದುವರೆಯುವ ಸಾಧ್ಯತೆಯಿದೆ ಎಂದು ವರದಿ ಮಾಡಿವೆ.

    ನಿಮಗಿದು ತಿಳಿದಿರಲಿ:
    ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಹೇಗೆ ವ್ಯಕ್ತಿ/ ಕಂಪೆನಿಗೆ ಸಂಬಂಧಿಸಿದಂತೆ ಅಧಿಕೃತ ಖಾತೆಗಳನ್ನು ಜನರಿಗೆ ಗುರುತಿಸಲು ಒಂದು ಪ್ರತ್ಯೇಕ ‘ಟಿಕ್ ಮಾರ್ಕ್’ ಇರುತ್ತದೆ. ಅದೇ ರೀತಿಗಾಗಿ ಆಂಡ್ರಾಯ್ಡ್ ಪ್ಲೇ ಸ್ಟೋರ್‍ನಲ್ಲಿ ಟಿಕ್ ಮಾರ್ಕ್ ಇದೆ. ಈ ಟಿಕ್ ಮಾರ್ಕ್ ಇದ್ದಲ್ಲಿ ಮಾತ್ರ ಅದು ಕಂಪೆನಿಯ ಅಧಿಕೃತ ಆಪ್ ಆಗಿರುತ್ತದೆ. ಆಪ್ ಡೌನ್ ಲೋಡ್ ಮಾಡುವ ಮುನ್ನ ಆ ಆಪ್ ಎಷ್ಟು ಡೌನ್ ಲೋಡ್ ಆಗಿದೆ ಎನ್ನುವುದನ್ನು ಗಮನಿಸಿ. ಲಕ್ಷಕ್ಕೂ/ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಆಪ್‍ಗಳು ಡೌನ್‍ಲೋಡ್ ಆಗಿದ್ದಲ್ಲಿ ಈ ಆಪ್ ಅಧಿಕೃತ ಕಂಪೆನಿಯ ಆಪ್ ಎನ್ನುವ ನಿರ್ಧಾರಕ್ಕೆ ನೀವು ಬರಬಹುದು.

  • ಜಿಯೋಗೆ ಸೆಡ್ಡು: 36 ರೂ.ಗೆ 1 ಜಿಬಿ ಬಿಎಸ್‍ಎನ್‍ಎಲ್ ಡೇಟಾ

    ಜಿಯೋಗೆ ಸೆಡ್ಡು: 36 ರೂ.ಗೆ 1 ಜಿಬಿ ಬಿಎಸ್‍ಎನ್‍ಎಲ್ ಡೇಟಾ

    ನವದೆಹಲಿ: ರಿಲಯನ್ಸ್ ಜಿಯೋಗೆ ಫೈಟ್ ನೀಡಲು ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಲ್ 36 ರೂ. ಗೆ 1 ಜಿಬಿ ಡೇಟಾ ನಿಡಲು ಮುಂದಾಗಿದೆ.

    ಪ್ರಿಪೇಯ್ಡ್ ಗ್ರಾಹಕರು 28 ದಿನ ವ್ಯಾಲಿಡಿಟಿ ಹೊಂದಿರುವ ವಿಶೇಷ ಟ್ಯಾರಿಫ್ ವೋಚರ್(ಎಸ್‍ಟಿವಿ) 291 ರೂ. ರಿಚಾರ್ಜ್ ಮಾಡಿದ್ದರೆ ಇಲ್ಲಿಯವರೆಗೆ 4 ಜಿಬಿ ಡೇಟಾ ಸಿಗುತಿತ್ತು. ಆದರೆ ಇನ್ನು ಮುಂದೆ ನೀವು 8 ಜಿಬಿ ಡೇಟಾವನ್ನು ಪಡೆಯಬಹುದು.

    ಇದರ ಜೊತೆಯಲ್ಲೇ 78 ರೂ. ಎಸ್‍ಟಿವಿ ರಿಚಾರ್ಜ್ ಮಾಡಿದರೆ 4 ಜಿಬಿ ಡೇಟಾವನ್ನು ಪಡೆಯಬಹುದು. ಈ ಹಿಂದೆ ಈ ಆಫರ್‍ನಲ್ಲಿ ರಿಚಾರ್ಜ್ ಮಾಡಿದ್ದರೆ 2 ಜಿಬಿ ಡೇಟಾ ಸಿಗುತಿತ್ತು.

    36ರೂಪಾಯಿಗೆ 1 ಜಿಬಿ ನೀಡುವುದು ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತೀ ಕಡಿಮೆ ಬೆಲೆ ಆಫರ್ ಎಂದು ಬಿಎಸ್‍ಎನ್‍ಎಲ್ ಹೇಳಿದೆ. ಬಿಎಸ್‍ಎನ್‍ಎಲ್ ನಿರ್ದೇಶಕ ಆರ್‍ಕೆ ಮಿತ್ತಲ್ ಹೇಳಿಕೆಯನ್ನು ಬಿಡುಗಡೆಗೊಳಿಸಿ ಈ ಹೊಸ ಆಫರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದಿನಿಂದ(ಫೆ.6ರಿಂದ) ಈ ಆಫರ್ ಲಭ್ಯವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಹ್ಯಾಪಿ ನ್ಯೂ ಈಯರ್ ಪ್ಲಾನ್ ನಲ್ಲಿರುವ ಗ್ರಾಹಕರಿಗೆ ರಿಲಯನ್ಸ್ ಜಿಯೋ ಜನವರಿ 1ರಿಂದ ಮಾರ್ಚ್ 31ರವರೆಗೆ ಪ್ರತಿ ದಿನ 1ಜಿಬಿ 4 ಜಿ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. 1ಜಿಬಿ ಡೇಟಾ ಮುಗಿದ ಮೇಲೆ 128 ಕೆಬಿಪಿಎಸ್ ವೇಗದಲ್ಲಿ ಡೇಟಾ ಸಿಗುತ್ತಿದೆ.